Friday, 13th December 2024

ಹೀಗೊಬ್ಬ ಕನ್ನಡದ ಪರಿಚಾರಕ

ವಿದೇಶವಾಸಿ

ಕಿರಣ್ ಉಪಾಧ್ಯಾಯ ಬಹ್ರೈನ್

ಎಂದಿನಂತೆ ನವೆಂಬರ್ ತಿಂಗಳು. ಕೆಲವರಿಗೆ ಒಂದು ತಿಂಗಳ ಹಬ್ಬವಾದರೆ ಕೆಲವರಿಗೆ ಒಂದು ದಿನದ ಸಮಾರಂಭ. ಕೆಲವರಿಗೆ ಭಾಷಾ ಪ್ರೇಮ ತೋರಿಸಲು ವೇದಿಕೆಯಾದರೆ ಇನ್ನು ಕೆಲವರಿಗೆ ಕಾರ್ಯಸಾಧನೆಗೆ ಅವಕಾಶ. ನವೆಂಬರ್ ಒಂದರಂದು ಅಥವಾ ನವೆಂಬರ್ ಒಂದು ತಿಂಗಳು ಮಾತ್ರ ಕನ್ನಡದ ಬಗ್ಗೆ ಭಾಷಣ ಬಿಗಿದು ವರ್ಷದ ಉಳಿದ ದಿನಗಳಲ್ಲಿ ಗೂಡು ಸೇರುವ ಜನ ನಮ್ಮಲ್ಲಿ ಎಷ್ಟಿಲ್ಲ? ಕನ್ನಡದ ಕಾರ್ಯ ಎಂದರೆ ಒಂದು ದಿನಕ್ಕೋ, ಒಂದು ತಿಂಗಳಿಗೋ ಮುರುಟಿ, ಸುರುಟಿ ಹೋಗುವಂತದ್ದಲ್ಲ.

ಅದು ತುಂಬಿ ಹರಿಯುವ ನದಿಯ ನೀರಿನಂತೆ ನಿರಂತರ. ಅದೆಷ್ಟೋ ಜನರಿಗೆ ರಾಜ್ಯೋತ್ಸವ ಭಾಷಣಕ್ಕಷ್ಟೇ ಮೀಸಲು, ಬಾವುಟ ಕ್ಕಷ್ಟೇ ಸೀಮಿತ. ಕನ್ನಡದ ಕೆಲಸವೂ ಅಷ್ಟೇ, ಮಾತಿನಲ್ಲಿಯೇ ಇರುತ್ತದೆ ವಿನಃ ಕೃತಿಗೆ ಇಳಿಯುವುದೇ ಇಲ್ಲ. ಮತ್ತೆ ಕನ್ನಡತನ ಜಾಗ್ರತವಾಗುವುದು ಮುಂದಿನ ನವೆಂರ್ಬ ತಿಂಗಳಿಗೇ. ಆದರೆ ಇಬ್ಬ ಕನ್ನಡದ ಪರಿಚಾರಕರ ಬಗ್ಗೆ ತಿಳಿಸಲು ಇದು ಸುಸಮಯ. ಕಳೆದ ನಾಲ್ಕು ದಶಕ ಗಳಿಂದ ಪ್ರತಿ ನಿತ್ಯ, ಪ್ರತಿ ಕ್ಷಣ ಕನ್ನಡದ ಬಗ್ಗೆ ಅದರಲ್ಲೂ ಪುಸ್ತಕ ಪರಿಚಾರಿಕೆಯಲ್ಲಿ ತಮ್ಮನ್ನು ತೊಡಗಿಸಿ ಕೊಂಡ ಕನ್ನಡದ ಕುವರ ಕೆ.ರಾಜಕುಮಾರ್. ಇವರಿಗೆ ಪುಸ್ತಕ ಪರಿಚಾರಿಕೆ ಎಂದರೆ ಕೇವಲ ಸಾಹಿತ್ಯ ಸೃಜಿಸುವುದಲ್ಲ.

ಪುಸ್ತಕ ರಚನೆ, ವಿತರಣೆ, ಪ್ರದರ್ಶನ, ಮಾರಾಟ ಎಲ್ಲವನ್ನೂ ಒಳಗೊಂಡ ಪರಿಪೂರ್ಣ ಯಜ್ಞ. ಪುಸ್ತಕ ಮನಸ್ಕತೆಯನ್ನು ಜನರಲ್ಲಿ ಮೂಡಿಸುವುದೂ ಅವರ ಪರಿಚಾರಿಕೆಯ ಒಂದು ಭಾಗ. ಅವರ ಪ್ರಕಾರ ಪರಿಚಾರಿಕೆ ಎನ್ನುವುದು ಒಂದು ನೂಲು. ರಚನೆ, ಪ್ರಕಾಶನ, ವಿತರಣೆ, ಪ್ರದರ್ಶನ, ಮಾರಾಟ ಇವೆಲ್ಲ ಆ ನೂಲಿನ ಒಂದೊಂದು ಎಳೆಗಳು. ಮೂಲತಃ ಗಡಿ ಜಿ ಕೋಲಾರದ ರಾಜಕುಮಾರ್ ಕನ್ನಡದಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ ಕನ್ನಡ ನುಡಿಜಾಣ. ಕೇವಲ ಕನ್ನಡದ ಸಮಸ್ಯೆಗಳನ್ನು ಹೇಳದೇ,
ಸಮಸ್ಯೆಗೆ ಕಾರ್ಯಸಾಧುವಾದ ಪರಿಹಾರವನ್ನೂ ಸೂಚಿಸಬಲ್ಲ ಚಿಂತಕ.

ಕನ್ನಡದ ಸಮಸ್ಯೆಯಾಗಲೀ, ಸಾಧನೆಯಾಗಲೀ, ಅಂಕಿ ಅಂಶಗಳ ಸಮೇತ ಮಂಡಿಸಬಲ್ಲ ಅಭಿಜ್ಞ. ಕನ್ನಡವನ್ನೇ ಕೈ ಹಿಡಿದು ಕನ್ನಡದ ಕೆಲಸವನ್ನು ವ್ರತದಂತೆ ಪಾಲಿಸಿ, ಕನ್ನಡ ಪರ ಕಾಯಕವನ್ನೇ ಬದುಕಾಗಿಸಿಕೊಂಡ ಸೇವಕ.

ಶಾಲಾ ಶಿಕ್ಷಣದಲ್ಲಿ ಕನ್ನಡ ಕಡ್ಡಾಯಕ್ಕಾಗಿ ನಡೆದ ಗೋಕಾಕ್ ಚಳವಳಿ, ಕರ್ನಾಟಕಕ್ಕೆ ಸ್ವತಂತ್ರ ದೂರದರ್ಶನ ಕೇಂದ್ರಕ್ಕೆ ಒತ್ತಾ ಯಿಸಿ ನಡೆದ ಹೋರಾಟ, ರಾಜ್ಯ ಸರಕಾರದ ಮೂರು ಮತ್ತು ನಾಲ್ಕನೆಯ ದರ್ಜೆಯ ನೌಕರರಿಗೆ ನೇಮಕಾತಿಗಿಂತ ಮೊದಲೇ ಕನ್ನಡ ಭಾಷಾಜ್ಞಾನ ಕಡ್ಡಾಯಗೊಳಿಸಲು ನಡೆದ ಆಂದೋಲನ, ಹಿಂದಿ ಸಾಮ್ರಾಜ್ಯಶಾಹಿ ವಿರೋಧಿ ಚಳವಳಿ, ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ಕನ್ನಡ ಪತ್ರಿಕೆ ಕಡ್ಡಾಯಕ್ಕಾಗಿ ನಡೆದ ಚಳವಳಿ, ರೈಲ್ವೆಯಲ್ಲಿ ಕನ್ನಡಿಗರಿಗೆ ಉದ್ಯೋಗಕ್ಕಾಗಿ ಒತ್ತಾ ಯಿಸಿ ನಡೆದ ಚಳವಳಿ, ಸಮಾನ ಶಿಕ್ಷಣ ನೀತಿ ಜಾರಿಗೆ ಆಗ್ರಹಿಸಿ ನಡೆದ ಚಳವಳಿ, ಇತ್ಯಾದಿ ನಾಡಿನಲ್ಲಿ ನಡೆದ ಎಲ್ಲ ಕನ್ನಡಪರ ಚಳವಳಿ – ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಹೋರಾಟಗಾರ.

ಮಹಿಷಿ ಸಮಿತಿಯ ನೇಮಕ, ಕನ್ನಡ ಅಭಿವೃದ್ಧಿ ಪ್ರಾಽಕಾರ, ಕನ್ನಡ ಪುಸ್ತಕ ಪ್ರಾಧಿಕಾರದ ರಚನೆ, ಶಾಲಾ ಶಿಕ್ಷಣದಲ್ಲಿ ಕನ್ನಡ ಪತ್ರಿಕೆಯೊಂದರ ಕಡ್ಡಾಯ ಮುಂತಾದವುಗಳಲ್ಲಿ ಪಾತ್ರವಹಿಸಿ, ಆಂದೋಲನದಷ್ಟೇ ಅನುಚರಣವೂ ಮುಖ್ಯ ಎಂಬುದನ್ನು ಸ್ವತಃ ಆಚರಿಸಿ ತೋರಿಸಿದ ಛಲಗಾರ. ಕನ್ನಡ ಪುಸ್ತಕ ಪ್ರಕಾಶನಗಳ ಕಮ್ಮಟಗಳನ್ನು ಯಶಸ್ವಿಯಾಗಿ ಪರಿಕಲ್ಪಿಸಿ, ನಿರ್ದೇಶಿಸಿ, ನಡೆಸಿಕೊಡುವ ಪ್ರಕಾಶನ ಮಾರ್ಗದರ್ಶಿ. ಕರ್ನಾಟಕವೇ ಕೇಂದ್ರವಾಗಿದ್ದ ‘ಕ್ವಿಜ್ ಕರ್ನಾಟಕ’ ರಸಪ್ರಶ್ನೆ ಕಾರ್ಯಕ್ರಮವನ್ನು ರಾಜ್ಯದಲ್ಲಿ ಮೊದಲ ಬಾರಿ ಪರಿಕಲ್ಪಿಸಿ, ನಡೆಸಿಕೊಡುತ್ತಿರುವ, ಕ್ವಿಜ್ ಕರ್ನಾಟಕ ಮತ್ತು ಜನರಲ್ ನಾಲೆಡ್ಜ್ ಕರ್ನಾಟಕ ಕೃತಿ ಗಳನ್ನು ರಚಿಸಿದ ಕ್ವಿಜ್ ಮಾಸ್ಟರ್.

ಒಟ್ಟಾರೆ ಕನ್ನಡಕ್ಕೆ ಸಂಬಂಧಿಸಿದಂತೆ ಅಪರಿಮಿತ ಸಂಪನ್ಮೂಲ ವ್ಯಕ್ತಿ. ಬೆಂಗಳೂರಿನ ಸಾಹಿತಿಗಳ ಕಲಾವಿದರ ಬಳಗದ
ಸಂಸ್ಥಾಪಕ ಸಂಚಾಲಕರಾದ ಇವರ ಕಾರ್ಯದ ಬಗ್ಗೆ ಹೇಳಲೇಬೇಕು. ಈ ಬಳಗವು 1982ರ ಗೋಕಾಕ್ ಚಳವಳಿಯ ಮುಂಚೂಣಿಯಲ್ಲಿತ್ತು. ಆ ದಿನಗಳಲ್ಲಿ ಕಾರ್ಯಕಾರಿ ಸಮಿತಿಯವರು, ಸದಸ್ಯರು, ಕಾರ್ಯಕರ್ತರು ಹಣ ವಿನಿಯೋಗಿಸಿ
ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ಕನ್ನಡದ ಕಾರ್ಯಕ್ಕೆಂದು ಕಾರ್ಯಕರ್ತರು ಹಣವನ್ನು ಕೇಳಲೂಬಾರದು, ಕನ್ನಡದ ಕೆಲಸ ಕಾರ್ಯಕರ್ತರ ಕಿಸೆಗೆ ಭಾರವೂ ಆಗಬಾರದೆಂದು ನಿರ್ಧರಿಸಿದ ರಾಜಕುಮಾರ್, ಪುಸ್ತಕ ಮಾರಾಟಮಾಡಿ ಅದರಿಂದ ಬಂದ ಹಣದಿಂದ ಕಾರ್ಯಕ್ರಮಗಳನ್ನು ನಡೆಸುವುದಾಗಿ ನಿರ್ಣಯಿಸಿದರು.

ಚಿದಾನಂದ ಮೂರ್ತಿಯವರ ‘ಕನ್ನಡ ಸಂಸ್ಕೃತಿ ನಮ್ಮ ಹೆಮ್ಮೆ’ ಪುಸ್ತಕವನ್ನು ಮಾರಿದ್ದು ಮಾತ್ರ ದಾಖಲೆಯೇ ಸರಿ. ಅದು 32 ಪುಟಗಳ ಸಣ್ಣ ಪುಸ್ತಕ. ಮೂರು ರುಪಾಯಿ ಬೆಲೆಯ ಪುಸ್ತಕವನ್ನು ಎರಡು ರುಪಾಯಿಗೆ ಮಾರಾಟಮಾಡಿದರು. ನಾಮಕರಣ ದಲ್ಲಿ, ಗೃಹಪ್ರವೇಶದಲ್ಲಿ, ವೈಕುಂಠ ಸಮಾರಾಧನೆಯಲ್ಲಿ, ಮದುವೆ ಮನೆಗಳಲ್ಲಿ ಪುಸ್ತಕ ತಾಂಬೂಲವಾಗಿ ಕೊಡಿಸಿದರು. ಬಿ. ಇ. ಎಲ.ನಂಥ ಸಂಸ್ಥೆಯವರು ಕಾರ್ಯಕ್ರಮ ನಡೆಸುವಾಗ ಬಿಡುವಿನ ಒಂದೆರಡು ಗಂಟೆಗಳಲ್ಲಿ ಏಳೆಂಟು ನೂರು ಪುಸ್ತಕಗಳನ್ನು
ಮಾರುತ್ತಿದ್ದರು. ಬೆನ್ನಿಗೆ, ಬಗಲಿಗೆ ಪುಸ್ತಕದ ಚೀಲ ಏರಿಸಿಕೋಡು ಶಾಲೆಗಳಿಗೆ, ಗ್ರಂಥಾಲಯಗಳಿಗೆ, ಜಿ ಪಂಚಾಯತ್ ಕಚೇರಿಗಳಿಗೆ ಅಲೆದು ಪುಸ್ತಕ ಮಾರಿದರು. ಇಂಗ್ಲಿಷ್, ಹಿಂದಿ, ತೆಲಗು, ತಮಿಳು, ಮರಾಠಿ, ಉರ್ದು, ಮಲಯಾಳಂ ಭಾಷೆಗಳಿಗೆ ಅಯಾ ಭಾಷೆಯ ತಜ್ಞ, ಹೆಸರಾಂತ ಲೇಖಕರಿಂದ ಉಚಿತವಾಗಿ ಅನುವಾದ ಮಾಡಿಸಿದರು.

ಪುಸ್ತಕ ಮಾರಿ ಬಂದ ಹಣವನ್ನು ಚಟುವಟಿಕೆಗಳಿಗೆ ಬಳಸಿಕೊಂಡರು. ಮುದ್ರಣಾಲಯದ ಸಾಲವನ್ನೂ ತೀರಿಸಿದರು. ಉಳಿದ
ಹಣದಿಂದ ಲಾಲ್‌ಭಾಗ್‌ನ ಪಶ್ಚಿಮ ದ್ವಾರದ ಎದುರಿನಲ್ಲಿ ರಾಷ್ಟ್ರಕವಿ ಕುವೆಂಪು ಮತ್ತು ನ್ಯಾಷನಲ್ ಕಾಲೇಜು ವೃತ್ತದಲ್ಲಿ
ಬಿ.ಎಮ. ಶ್ರೀಕಂಠಯ್ಯನವರ ಪುತ್ಥಳಿಗಳನ್ನು ಹಾಕಿಸಿದರು. ಈ ಎರಡೂ ಪ್ರತಿಮೆಗಳು ಬೆಂಗಳೂರಿನಲ್ಲಿ ಅನಾವರಣಗೊಂಡ ಸಾಹಿತಿಗಳ ಮೊದಲ ಪ್ರತಿಮೆಗಳೆಂಬ ಕೀರ್ತಿಗೆ ಪಾತ್ರವಾದವು.

ಅಂದ ಹಾಗೆ ಅವರು ಮಾರಿದ ‘ಕನ್ನಡ ಸಂಸ್ಕೃತಿ ನಮ್ಮ ಹೆಮ್ಮೆ’ ಪ್ರತಿಗಳ ಸಂಖ್ಯೆ ಎಷ್ಟು ಗೊತ್ತಾ? 52000! ರಾಜಕುಮಾರ್ 80ರ ದಶಕ ಆದಿಯಲ್ಲಿ ಕೋಲಾರದಲ್ಲಿ ಕನ್ನಡ ಪರ ಚಟುವಟಿಕೆ ನಡೆಸಲು ತಮ್ಮ ಗೆಳೆಯರ ಜೊತೆ ಸೇರಿ ತರಕಾರಿ ಮಾರುವ ಗಾಡಿಗಳಲ್ಲಿ ಪುಸ್ತಕವನ್ನು ಇಟ್ಟುಕೊಂಡು ಮನೆ ಮನೆ, ಬೀದಿ ಬೀದಿಗಳನ್ನು ಸುತ್ತಿ ಪುಸ್ತಕ ಮಾರಾಟ ಮಾಡಿದ್ದಾರೆ. ಯಾರನ್ನೂ ಒತ್ತಾಯಿಸದೇ, ಆಸಕ್ತಿ ಇದ್ದವರು ಕೊಳ್ಳಿ ಎಂದು ಅಭಿಯಾನ ನಡೆಸಿದ್ದಾರೆ. ಬಹುಶಃ ಕರ್ನಾಟಕದಲ್ಲಿ ತರಕಾರಿ ಗಾಡಿಗಳಲ್ಲಿ ಪುಸ್ತಕ ಇಟ್ಟುಕೊಂಡು ಸುತ್ತಿದ ನಿದರ್ಶನ ಆ ಕಾಲಕ್ಕೆ ಇರಲೇ ಇಲ್ಲ. ಇವರಿಂದ ಪ್ರೇರೇಪಿತರಾಗಿ ಕೆಲವು ಸಾಹಿತಿಗಳು ಭಿಡೆ ಬಿಟ್ಟು ದಾರಿ ಬದಿಯಲ್ಲಿ ನಿಂತು ತಮ್ಮ ಪ್ರಕಟಣೆಗಳನ್ನು ಮಾರಾಟ ಮಾಡಿದ್ದಾರೆ.

ಕನ್ನಡದ ಹೆಸರಾಂತ ಲೇಖಕರಾದ ಸಿಂಪಿ ಲಿಂಗಣ್ಣ, ಜಿ.ಪಿ.ರಾಜರತ್ನಂ, ಗಳಗನಾಥರು ತಮ್ಮ ಪುಸ್ತಕಗಳನ್ನು ಜೋಳಿಗೆಯಲ್ಲಿ ಹಾಕಿಕೊಂಡು ಸಂತೆಗೆ ಹೋಗಿ ಮಾರುತ್ತಿದ್ದರಂತೆ. ರಾಜಕುಮಾರ್ ತಮ್ಮ ಪ್ರಕಟಣೆಗಳನ್ನಷ್ಟೇ ಅಲ್ಲದೆ, ಇತರರ ಪುಸ್ತಕಗಳನ್ನೂ
ಕುಗ್ರಾಮಗಳಿಗೆ ಹೋಗಿ ಮಾರಿಎಂ ದಿನಂತೆ ನವೆಂಬರ್ ತಿಂಗಳು. ಕೆಲವರಿಗೆ ಒಂದು ತಿಂಗಳ ಹಬ್ಬವಾದರೆ ಕೆಲವರಿಗೆ ಒಂದು
ದಿನದ ಸಮಾರಂಭ. ಕೆಲವರಿಗೆ ಭಾಷಾ ಪ್ರೇಮ ತೋರಿಸಲು ವೇದಿಕೆಯಾದರೆ ಇನ್ನು ಕೆಲವರಿಗೆ ಕಾರ್ಯಸಾಧನೆಗೆ ಅವಕಾಶ. ನವೆಂಬರ್ ಒಂದರಂದು ಅಥವಾ ನವೆಂಬರ್ ಒಂದು ತಿಂಗಳು ಮಾತ್ರ ಕನ್ನಡದ ಬಗ್ಗೆ ಭಾಷಣ ಬಿಗಿದು ವರ್ಷದ ಉಳಿದ ದಿನ ಗಳಲ್ಲಿ ಗೂಡು ಸೇರುವ ಜನ ನಮ್ಮಲ್ಲಿ ಎಷ್ಟಿಲ್ಲ? ಕನ್ನಡದ ಕಾರ್ಯ ಎಂದರೆ ಒಂದು ದಿನಕ್ಕೋ, ಒಂದು ತಿಂಗಳಿಗೋ ಮುರುಟಿ, ಸುರುಟಿ ಹೋಗುವಂತದ್ದಲ್ಲ.

ಅದು ತುಂಬಿ ಹರಿಯುವ ನದಿಯ ನೀರಿನಂತೆ ನಿರಂತರ. ಅದೆಷ್ಟೋ ಜನರಿಗೆ ರಾಜ್ಯೋತ್ಸವ ಭಾಷಣಕ್ಕಷ್ಟೇ ಮೀಸಲು, ಬಾವುಟ ಕ್ಕಷ್ಟೇ ಸೀಮಿತ. ಕನ್ನಡದ ಕೆಲಸವೂ ಅಷ್ಟೇ, ಮಾತಿನಲ್ಲಿಯೇ ಇರುತ್ತದೆ ವಿನಃ ಕೃತಿಗೆ ಇಳಿಯುವುದೇ ಇಲ್ಲ. ಮತ್ತೆ ಕನ್ನಡತನ
ಜಾಗ್ರತವಾಗುವುದು ಮುಂದಿನ ನವೆಂರ್ಬ ತಿಂಗಳಿಗೇ. ಆದರೆ ಇಬ್ಬ ಕನ್ನಡದ ಪರಿಚಾರಕರ ಬಗ್ಗೆ ತಿಳಿಸಲು ಇದು ಸುಸಮಯ.
ಕಳೆದ ನಾಲ್ಕು ದಶಕಗಳಿಂದ ಪ್ರತಿ ನಿತ್ಯ, ಪ್ರತಿ ಕ್ಷಣ ಕನ್ನಡದ ಬಗ್ಗೆ ಅದರಲ್ಲೂ ಪುಸ್ತಕ ಪರಿಚಾರಿಕೆಯಲ್ಲಿ ತಮ್ಮನ್ನು ತೊಡಗಿಸಿ ಕೊಂಡ ಕನ್ನಡದ ಕುವರ ಕೆ.ರಾಜಕುಮಾರ್.

ಇವರಿಗೆ ಪುಸ್ತಕ ಪರಿಚಾರಿಕೆ ಎಂದರೆ ಕೇವಲ ಸಾಹಿತ್ಯ ಸೃಜಿಸುವುದಲ್ಲ. ಪುಸ್ತಕ ರಚನೆ, ವಿತರಣೆ, ಪ್ರದರ್ಶನ, ಮಾರಾಟ ಎಲ್ಲವನ್ನೂ ಒಳಗೊಂಡ ಪರಿಪೂರ್ಣ ಯಜ್ಞ. ಪುಸ್ತಕ ಮನಸ್ಕತೆಯನ್ನು ಜನರಲ್ಲಿ ಮೂಡಿಸುವುದೂ ಅವರ ಪರಿಚಾರಿಕೆಯ ಒಂದು ಭಾಗ. ಅವರ ಪ್ರಕಾರ ಪರಿಚಾರಿಕೆ ಎನ್ನುವುದು ಒಂದು ನೂಲು. ರಚನೆ, ಪ್ರಕಾಶನ, ವಿತರಣೆ, ಪ್ರದರ್ಶನ, ಮಾರಾಟ ಇವೆಲ್ಲ ಆ ನೂಲಿನ ಒಂದೊಂದು ಎಳೆಗಳು.

ಮೂಲತಃ ಗಡಿ ಜಿ ಕೋಲಾರದ ರಾಜಕುಮಾರ್ ಕನ್ನಡದಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ ಕನ್ನಡ ನುಡಿಜಾಣ. ಕೇವಲ ಕನ್ನಡದ ಸಮಸ್ಯೆಗಳನ್ನು ಹೇಳದೇ, ಸಮಸ್ಯೆಗೆ ಕಾರ್ಯಸಾಧುವಾದ ಪರಿಹಾರವನ್ನೂ ಸೂಚಿಸಬಲ್ಲ ಚಿಂತಕ. ಕನ್ನಡದ ಸಮಸ್ಯೆಯಾಗಲೀ, ಸಾಧನೆಯಾಗಲೀ, ಅಂಕಿ ಅಂಶಗಳ ಸಮೇತ ಮಂಡಿಸಬಲ್ಲ ಅಭಿಜ್ಞ. ಕನ್ನಡವನ್ನೇ ಕೈ ಹಿಡಿದು ಕನ್ನಡದ ಕೆಲಸವನ್ನು ವ್ರತದಂತೆ ಪಾಲಿಸಿ, ಕನ್ನಡ ಪರ ಕಾಯಕವನ್ನೇ ಬದುಕಾಗಿಸಿಕೊಂಡ ಸೇವಕ.

ಶಾಲಾ ಶಿಕ್ಷಣದಲ್ಲಿ ಕನ್ನಡ ಕಡ್ಡಾಯಕ್ಕಾಗಿ ನಡೆದ ಗೋಕಾಕ್ ಚಳವಳಿ, ಕರ್ನಾಟಕಕ್ಕೆ ಸ್ವತಂತ್ರ ದೂರದರ್ಶನ ಕೇಂದ್ರಕ್ಕೆ ಒತ್ತಾಯಿಸಿ ನಡೆದ ಹೋರಾಟ, ರಾಜ್ಯ ಸರಕಾರದ ಮೂರು ಮತ್ತು ನಾಲ್ಕನೆಯ ದರ್ಜೆಯ ನೌಕರರಿಗೆ ನೇಮಕಾತಿಗಿಂತ ಮೊದಲೇ ಕನ್ನಡ ಭಾಷಾಜ್ಞಾನ ಕಡ್ಡಾಯಗೊಳಿಸಲು ನಡೆದ ಆಂದೋಲನ, ಹಿಂದಿ ಸಾಮ್ರಾಜ್ಯಶಾಹಿ ವಿರೋಧಿ ಚಳವಳಿ, ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ಕನ್ನಡ ಪತ್ರಿಕೆ ಕಡ್ಡಾಯಕ್ಕಾಗಿ ನಡೆದ ಚಳವಳಿ, ರೈಲ್ವೆಯಲ್ಲಿ ಕನ್ನಡಿಗರಿಗೆ ಉದ್ಯೋಗಕ್ಕಾಗಿ ಒತ್ತಾಯಿಸಿ ನಡೆದ ಚಳವಳಿ, ಸಮಾನ ಶಿಕ್ಷಣ ನೀತಿ ಜಾರಿಗೆ ಆಗ್ರಹಿಸಿ ನಡೆದ ಚಳವಳಿ, ಇತ್ಯಾದಿ ನಾಡಿನಲ್ಲಿ ನಡೆದ ಎಲ್ಲ ಕನ್ನಡಪರ ಚಳವಳಿ – ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಹೋರಾಟಗಾರ.

ಮಹಿಷಿ ಸಮಿತಿಯ ನೇಮಕ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರದ ರಚನೆ, ಶಾಲಾ ಶಿಕ್ಷಣದಲ್ಲಿ ಕನ್ನಡ ಪತ್ರಿಕೆಯೊಂದರ ಕಡ್ಡಾಯ ಮುಂತಾದವುಗಳಲ್ಲಿ ಪಾತ್ರವಹಿಸಿ, ಆಂದೋಲನದಷ್ಟೇ ಅನುಚರಣವೂ ಮುಖ್ಯ ಎಂಬುದನ್ನು ಸ್ವತಃ ಆಚರಿಸಿ ತೋರಿಸಿದ ಛಲಗಾರ. ಕನ್ನಡ ಪುಸ್ತಕ ಪ್ರಕಾಶನಗಳ ಕಮ್ಮಟಗಳನ್ನು ಯಶಸ್ವಿಯಾಗಿ ಪರಿಕಲ್ಪಿಸಿ, ನಿರ್ದೇಶಿಸಿ, ನಡೆಸಿಕೊಡುವ ಪ್ರಕಾಶನ ಮಾರ್ಗದರ್ಶಿ. ಕರ್ನಾಟಕವೇ ಕೇಂದ್ರವಾಗಿದ್ದ ‘ಕ್ವಿಜ್ ಕರ್ನಾಟಕ’ ರಸಪ್ರಶ್ನೆ ಕಾರ್ಯಕ್ರಮವನ್ನು ರಾಜ್ಯದಲ್ಲಿ ಮೊದಲ ಬಾರಿ ಪರಿಕಲ್ಪಿಸಿ, ನಡೆಸಿಕೊಡುತ್ತಿರುವ, ಕ್ವಿಜ್ ಕರ್ನಾಟಕ ಮತ್ತು ಜನರಲ್ ನಾಲೆಡ್ಜ್ ಕರ್ನಾಟಕ ಕೃತಿ ಗಳನ್ನು ರಚಿಸಿದ ಕ್ವಿಜ್ ಮಾಸ್ಟರ್.

ಒಟ್ಟಾರೆ ಕನ್ನಡಕ್ಕೆ ಸಂಬಂಧಿಸಿದಂತೆ ಅಪರಿಮಿತ ಸಂಪನ್ಮೂಲ ವ್ಯಕ್ತಿ. ಬೆಂಗಳೂರಿನ ಸಾಹಿತಿಗಳ ಕಲಾವಿದರ ಬಳಗದ
ಸಂಸ್ಥಾಪಕ ಸಂಚಾಲಕರಾದ ಇವರ ಕಾರ್ಯದ ಬಗ್ಗೆ ಹೇಳಲೇಬೇಕು. ಈ ಬಳಗವು 1982 ಗೋಕಾಕ್ ಚಳವಳಿಯ ಮುಂಚೂಣಿ ಯಲ್ಲಿತ್ತು. ಆ ದಿನಗಳಲ್ಲಿ ಕಾರ್ಯಕಾರಿ ಸಮಿತಿಯವರು, ಸದಸ್ಯರು, ಕಾರ್ಯಕರ್ತರು ಹಣ ವಿನಿಯೋಗಿಸಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ಕನ್ನಡದ ಕಾರ್ಯಕ್ಕೆಂದು ಕಾರ್ಯಕರ್ತರು ಹಣವನ್ನು ಕೇಳಲೂಬಾರದು, ಕನ್ನಡದ ಕೆಲಸ ಕಾರ್ಯ ಕರ್ತರ ಕಿಸೆಗೆ ಭಾರವೂ ಆಗಬಾರದೆಂದು ನಿರ್ಧರಿಸಿದ ರಾಜಕುಮಾರ್, ಪುಸ್ತಕ ಮಾರಾಟಮಾಡಿ ಅದರಿಂದ ಬಂದ ಹಣದಿಂದ ಕಾರ್ಯಕ್ರಮಗಳನ್ನು ನಡೆಸುವುದಾಗಿ ನಿರ್ಣಯಿಸಿದರು.

ಚಿದಾನಂದ ಮೂರ್ತಿಯವರ ‘ಕನ್ನಡ ಸಂಸ್ಕೃತಿ ನಮ್ಮ ಹೆಮ್ಮೆ’ ಪುಸ್ತಕವನ್ನು ಮಾರಿದ್ದು ಮಾತ್ರ ದಾಖಲೆಯೇ ಸರಿ. ಅದು 32 ಪುಟಗಳ ಸಣ್ಣ ಪುಸ್ತಕ. ಮೂರು ರುಪಾಯಿ ಬೆಲೆಯ ಪುಸ್ತಕವನ್ನು ಎರಡು ರುಪಾಯಿಗೆ ಮಾರಾಟ ಮಾಡಿದರು. ನಾಮಕರಣ ದಲ್ಲಿ,  ಗೃಹಪ್ರವೇಶದಲ್ಲಿ, ವೈಕುಂಠ ಸಮಾರಾಧನೆಯಲ್ಲಿ, ಮದುವೆ ಮನೆಗಳಲ್ಲಿ ಪುಸ್ತಕ ತಾಂಬೂಲವಾಗಿ ಕೊಡಿಸಿದರು. ಬಿ. ಇ. ಎಲ.ನಂಥ ಸಂಸ್ಥೆಯವರು ಕಾರ್ಯಕ್ರಮ ನಡೆಸುವಾಗ ಬಿಡುವಿನ ಒಂದೆರಡು ಗಂಟೆಗಳಲ್ಲಿ ಏಳೆಂಟು ನೂರು ಪುಸ್ತಕಗಳನ್ನು ಮಾರುತ್ತಿದ್ದರು.

ಬೆನ್ನಿಗೆ, ಬಗಲಿಗೆ ಪುಸ್ತಕದ ಚೀಲ ಏರಿಸಿಕೋಡು ಶಾಲೆಗಳಿಗೆ, ಗ್ರಂಥಾಲಯಗಳಿಗೆ, ಜಿ ಪಂಚಾಯತ್ ಕಚೇರಿಗಳಿಗೆ ಅಲೆದು ಪುಸ್ತಕ
ಮಾರಿದರು. ಇಂಗ್ಲಿಷ್, ಹಿಂದಿ, ತೆಲಗು, ತಮಿಳು, ಮರಾಠಿ, ಉರ್ದು, ಮಲಯಾಳಂ ಭಾಷೆಗಳಿಗೆ ಅಯಾ ಭಾಷೆಯ ತಜ್ಞ, ಹೆಸರಾಂತ ಲೇಖಕರಿಂದ ಉಚಿತವಾಗಿ ಅನುವಾದ ಮಾಡಿಸಿದರು. ಪುಸ್ತಕ ಮಾರಿ ಬಂದ ಹಣವನ್ನು ಚಟುವಟಿಕೆಗಳಿಗೆ ಬಳಸಿ ಕೊಂಡರು.

ಮುದ್ರಣಾಲಯದ ಸಾಲವನ್ನೂ ತೀರಿಸಿದರು. ಉಳಿದ ಹಣದಿಂದ ಲಾಲ್‌ಭಾಗ್‌ನ ಪಶ್ಚಿಮ ದ್ವಾರದ ಎದುರಿನಲ್ಲಿ ರಾಷ್ಟ್ರಕವಿ ಕುವೆಂಪು ಮತ್ತು ನ್ಯಾಷನಲ್ ಕಾಲೇಜು ವೃತ್ತದಲ್ಲಿ ಬಿ.ಎಮ. ಶ್ರೀಕಂಠಯ್ಯನವರ ಪುತ್ಥಳಿಗಳನ್ನು ಹಾಕಿಸಿದರು. ಈ ಎರಡೂ ಪ್ರತಿಮೆಗಳು ಬೆಂಗಳೂರಿನಲ್ಲಿ ಅನಾವರಣಗೊಂಡ ಸಾಹಿತಿಗಳ ಮೊದಲ ಪ್ರತಿಮೆಗಳೆಂಬ ಕೀರ್ತಿಗೆ ಪಾತ್ರವಾದವು. ಅಂದ ಹಾಗೆ ಅವರು ಮಾರಿದ ‘ಕನ್ನಡ ಸಂಸ್ಕೃತಿ ನಮ್ಮ ಹೆಮ್ಮೆ’ ಪ್ರತಿಗಳ ಸಂಖ್ಯೆ ಎಷ್ಟು ಗೊತ್ತಾ? 52000!

ರಾಜಕುಮಾರ್ 80ರ ದಶಕ ಆದಿಯಲ್ಲಿ ಕೋಲಾರದಲ್ಲಿ ಕನ್ನಡ ಪರ ಚಟುವಟಿಕೆ ನಡೆಸಲು ತಮ್ಮ ಗೆಳೆಯರ ಜೊತೆ ಸೇರಿ ತರಕಾರಿ ಮಾರುವ ಗಾಡಿಗಳಲ್ಲಿ ಪುಸ್ತಕವನ್ನು ಇಟ್ಟುಕೊಂಡು ಮನೆ ಮನೆ, ಬೀದಿ ಬೀದಿಗಳನ್ನು ಸುತ್ತಿ ಪುಸ್ತಕ ಮಾರಾಟ ಮಾಡಿ ದ್ದಾರೆ. ಯಾರನ್ನೂ ಒತ್ತಾಯಿಸದೇ, ಆಸಕ್ತಿ ಇದ್ದವರು ಕೊಳ್ಳಿ ಎಂದು ಅಭಿಯಾನ ನಡೆಸಿದ್ದಾರೆ. ಬಹುಶಃ ಕರ್ನಾಟಕದಲ್ಲಿ ತರಕಾರಿ ಗಾಡಿಗಳಲ್ಲಿ ಪುಸ್ತಕ ಇಟ್ಟುಕೊಂಡು ಸುತ್ತಿದ ನಿದರ್ಶನ ಆ ಕಾಲಕ್ಕೆ ಇರಲೇ ಇಲ್ಲ. ಇವರಿಂದ ಪ್ರೇರೇಪಿತರಾಗಿ ಕೆಲವು ಸಾಹಿತಿಗಳು ಭಿಡೆ ಬಿಟ್ಟು ದಾರಿ ಬದಿಯಲ್ಲಿ ನಿಂತು ತಮ್ಮ ಪ್ರಕಟಣೆಗಳನ್ನು ಮಾರಾಟ ಮಾಡಿದ್ದಾರೆ.

ಕನ್ನಡದ  ಹೆಸರಾಂತ ಲೇಖಕರಾದ ಸಿಂಪಿ ಲಿಂಗಣ್ಣ, ಜಿ.ಪಿ.ರಾಜರತ್ನಂ, ಗಳಗನಾಥರು ತಮ್ಮ ಪುಸ್ತಕಗಳನ್ನು ಜೋಳಿಗೆಯಲ್ಲಿ ಹಾಕಿಕೊಂಡು ಸಂತೆಗೆ ಹೋಗಿ ಮಾರುತ್ತಿದ್ದರಂತೆ. ರಾಜಕುಮಾರ್ ತಮ್ಮ ಪ್ರಕಟಣೆಗಳನ್ನಷ್ಟೇ ಅಲ್ಲದೆ, ಇತರರ ಪುಸ್ತಕಗಳನ್ನೂ
ಕುಗ್ರಾಮಗಳಿಗೆ ಹೋಗಿ ಮಾರಿದ್ದಾರೆ. ಶಾಲೆಯಿಂದ ಶಾಲೆಗೆ, ಕಾಲೇಜಿನಿಂದ ಕಾಲೇಜಿಗೆ, ಸಭಾಂಗಣದಿಂದ ಸಭಾಂಗಣಕ್ಕೆ ಹೋಗಿ ಪುಸ್ತಕ ಮಾರಿzರೆ, ಹಂಚಿದ್ದಾರೆ. ಅಷ್ಟಕ್ಕೇ ಸೀಮಿತವಾಗಿರದೆ ಕಾರ್ಖಾನೆಯಿಂದ ಕಾರ್ಖಾನೆಗೆ ಅಲೆದು, ಪುಸ್ತಕ ಪ್ರದರ್ಶನ ಮತ್ತು
ಮಾರಾಟ ಏರ್ಪಡಿಸಿ ಕಾರ್ಮಿಕ ವರ್ಗದವರಲ್ಲೂ ಪುಸ್ತಕ ಪ್ರೀತಿ ಮೂಡುವಂತೆ ಶ್ರಮಿಸಿದ್ದಾರೆ.

ಪುಸ್ತಕವನ್ನು ಇವರು ಸಂಸ್ಕೃತಿಯಾಗಿ ಪರಿಭಾವಿಸಿದರೂ, ಅದನ್ನು ಉದ್ಯಮವನ್ನಾಗಿಸಬೇಕೆಂಬ ತುಡಿತವೂ ಇವರಲ್ಲಿದೆ.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಗೊ. ರು. ಚನ್ನಬಸಪ್ಪನವರು ಅಧ್ಯಕ್ಷರಾಗಿದ್ದಾಗ ಇವರು ಮಾಡಿದ ಮೊದಲ ಕಾರ್ಯವೆಂದರೆ ಕಾರ್ಯಕರ್ತರ ಜೊತೆಗೂಡಿ ಸಂಶೋಧನಾ ವಿಭಾಗದಲ್ಲಿದ್ದ ಸುಮಾರು ಹತ್ತು ಸಾವಿರ ಪರಾಮರ್ಶನ ಗ್ರಂಥಗಳ ಧೂಳು
ಒರೆಸಿದ್ದು, ಆ ವಿಭಾಗವನ್ನು ಗುಡಿಸಿ ಶುಚಿಗೊಳಿಸಿದ್ದು!

ಒಂದು ಕಾಲದಲ್ಲಿ ಕರ್ನಾಟಕದ ಎಷ್ಟೋ ಪುಸ್ತಕ ಮಳಿಗೆಗಳಲ್ಲಿ ಕನ್ನಡ ಪುಸ್ತಕಗಳೇ ದೊರೆಯುತ್ತಿರಲಿಲ್ಲ. ಅದಕ್ಕೆ ಉದಾಹರಣೆ ಮಹಾತ್ಮಾ ಗಾಂಧಿ ರಸ್ತೆಯಲ್ಲಿರುವ ಗಂಗಾರಾಂ ಪುಸ್ತಕ ಮಳಿಗೆ ಮತ್ತು ಹಿಗ್ಗಿನ್‌ಬಾಥಮ್ಸ ಮಳಿಗೆಗಳು. ಗಂಗಾರಾಂನಲ್ಲಿ ತಮ್ಮ
ಪ್ರಕಟಣೆಯ ಪುಸ್ತಕಗಳೊಂದಿಗೆ ಇತರರ ಪುಸ್ತಕಗಳನ್ನೂ ನಷ್ಟವಾದರೂ ಸರಿ ಎಂದು ಸಾಲದ ರೂಪದಲ್ಲಿ ನೀಡಿ, ರಿಯಾಯತಿ ಯನ್ನೂ ನೀಡಿ ಅವರ ಮನವೊಲಿಸಿ, ಕನ್ನಡ ಪುಸ್ತಕಗಳು ಲಭ್ಯವಾಗುವಂತೆ ಮಾಡಿದರು.

ಹಿಗ್ಗಿನ್ ಬಾಥಮ್ಸ ಅವರ ಮಳಿಗೆಗೆಳಲ್ಲಿ ಕನ್ನಡ ಪುಸ್ತಕ ಇಡಬೇಕಾದರೆ ಚೆನ್ನೆ ನಲ್ಲಿರುವ ಮುಖ್ಯ ಕಚೇರಿಯಿಂದ ಲಿಖಿತ ರೂಪ ದಲ್ಲಿ ಅನುಮತಿಬೇಕೆಂದು ಹೇಳಿದಾಗ ಚೆನ್ನೆ ಗೆ ಹೋಗಿ, ಲಿಖಿತ ಆದೇಶವನ್ನು ತಂದು ಕನ್ನಡ ಪುಸ್ತಕಗಳ ಮಾರಾಟಕ್ಕೆ ಅವಕಾಶ ಒದಗಿಸಿಕೊಟ್ಟರು. ಎಚ್.ಎ.ಎಲ. ವಿಮಾನ ನಿಲ್ದಾಣದಲ್ಲಿ, ಅಶೋಕ ಹೋಟೆಲ, ವುಡ್‌ಲ್ಯಾಂಡ್ಸ್ ಹೋಟೆಲ್ ಇತ್ಯಾದಿ ಪಂಚತಾರಾ ಹೋಟೆಲ್‌ಗಳಲ್ಲಿರುವ ಪುಸ್ತಕದ ಮಳಿಗೆಗಳಲ್ಲಿ ಕನ್ನಡದ ಪುಸ್ತಕಗಳೂ ಮಾರಾಟವಾಗುವ ಹಾಗೆ ಮಾಡಿದ್ದು ಕಮ್ಮಿ ಸಾಧನೆಯೇನಲ್ಲ. ಬೇರೆ ರಾಜ್ಯಗಳಿಂದ ಅಲ್ಲಿನ ಪುಸ್ತಕ ಮಾರಾಟಗಾರರು ನಮ್ಮ ರಾಜ್ಯಕ್ಕೆ ಬಂದು ಇಂಗ್ಲಿಷ್ ಮತ್ತು ಇತರ ಭಾಷೆಯ ಪುಸ್ತಕಗಳನ್ನು ಮಾರುತ್ತಿದ್ದಾಗ ಅವರ ಮಳಿಗೆಗಳಲ್ಲಿ ಕನ್ನಡ ಪುಸ್ತಕಗಳನ್ನೂ ಮಾರುವಂತೆ ಮನವೊಲಿಸಿ, ಅವರಿಗೆ ಕನ್ನಡದ ಕೃತಿಗಳನ್ನು ಒದಗಿಸಿಕೊಡುತ್ತಿದ್ದರು.

ಡಾ.ಶಿವರಾಮ ಕಾರಂತರ ನಾಲ್ಕು ನೂರಕ್ಕೂ ಹೆಚ್ಚು ಕೃತಿಗಳ ಮರುಮುದ್ರಣ ಮತ್ತು ಮಾರಾಟದ ಹಕ್ಕನ್ನು ಸ್ವಪ್ನ ಬುಕ್‌ಹೌಸ್ ಕೊಡಿಸುವಲ್ಲಿ ಇವರು ಪ್ರಮುಖ ಪಾತ್ರವಹಿಸಿದ್ದರು ಎನ್ನುವುದು ಉಲ್ಲೇಖನೀಯ. 62 ವರ್ಷ ವಯಸ್ಸಿನ ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡ ಬಲ್ಲ ಸರಕಾರಿ ಅಧಿಕಾರಿ ಮತ್ತು ಸಿಬ್ಬಂದಿಗೆ ಆಡಳಿತದಲ್ಲಿ ಕನ್ನಡ ಬಳಸುವ ಕೌಶಲ ಹೆಚ್ಚಿಸಲು ನಡೆಸುವ ಒಂದು ವಾರದ ಅವಧಿಯ ‘ಆಡಳಿತ ಕನ್ನಡ ಕಾರ್ಯಶಿಬಿರ’ಗಳ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದವರು. ಕಳೆದ ಮೂರು ದಶಕಗಳಲ್ಲಿ 120 ಶಿಬಿರಗಳನ್ನು, ಒಂದು ದಿನದ ಹತ್ತಕ್ಕೂ

ಹೆಚ್ಚು ಆಡಳಿತ ಕನ್ನಡ ಕಮ್ಮಟಗಳನ್ನೂ, ಕನ್ನಡ ಬಾರದವರಿಗೆ ಕನ್ನಡ ಬೋಧನೆ ತರಗತಿಗಳನ್ನು ಯಶಸ್ವಿಯಾಗಿ ಆಯೋಜಿಸಿ ದ್ದಾರೆ. ಸಾರ್ವಜನಿಕ ಗ್ರಂಥಾಲಯ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಪುಸ್ತಕ ಪ್ರಾಧಿಕಾರಗಳನ್ನೊಳಗೊಂಡು ಇತರ
ಸಂಘ ಸಂಸ್ಥೆಗಳ ಆಶ್ರಯದಲ್ಲಿ ಲೇಖಕ – ಪ್ರಕಾಶಕರಿಗಾಗಿ ಪ್ರಕಟಣೆ, ವಿತರಣೆ ಮತ್ತು ಮಾರಾಟದ ವಿವಿಧ ಆಯಾಮಗಳನ್ನು ಪರಿಚಯಿಸುವ, ಉಪಯುಕ್ತ ಕನ್ನಡ ಕಮ್ಮಟಗಳನ್ನು ವಿವಿಧೆಡೆಗಳಲ್ಲಿ ನಡೆಸಿಕೊಟ್ಟಿದ್ದಾರೆ.

ಪುಸ್ತಕ ಪ್ರಕಟಣೆಯ ಮಾಹಿತಿಯನ್ನು ಬಯಸಿದ ಲೇಖಕರಿಗೆ ಕರಡು ತಿದ್ದುವುದರಿಂದ ಹಿಡಿದು, ಮುದ್ರಣಕ್ಕೆ ಕಾಗದದ ಆಯ್ಕೆ, ತಾಂತ್ರಿಕ ವಿಚಾರಗಳು, ಬೆಲೆ ನಿಗದಿಪಡಿಸುವುದು ಇತ್ಯಾದಿ ಎಲ್ಲಾ ಮಾಹಿತಿಯನ್ನೂ ಉಚಿತವಾಗಿ ತಿಳಿಸಿಕೊಡುತ್ತಿದ್ದಾರೆ.
ಲೇಖಕ – ಪ್ರಕಾಶಕರಿಗೆ ರಾಜಕುಮಾರ್ ಅವರ ‘ಪುಸ್ತಕ ಸಲಹಾ ಕೇಂದ್ರ’ ದಿನದ 24 ಗಂಟೆ, ವರ್ಷದ 365 ದಿನವೂ ತೆರೆದಿ ರುತ್ತದೆ. ಉದಯೋನ್ಮುಖ ಬರಹಗಾರರಿಗಾಗಿ ಲೇಖನ ಶಿಬಿರಗಳನ್ನು ಆಯೋಜಿಸಿ, ಲೇಖನವನ್ನು ಹೇಗೆಬರೆಯಬೇಕು ಎಂದು ತಿಳಿಸಿ ಕೊಡುತ್ತಾರೆ, ಸರಿ ತಪ್ಪುಗಳನ್ನು ವಿವರಿಸಿ, ಶೈಕ್ಷಣಿಕ ಚೌಕಟ್ಟಿಗೆ ಒಳಪಡಿಸಿ ಉಣಬಡಿಸುತ್ತಾರೆ.

ಕನ್ನಡದಲ್ಲಿ ವಿರಳವಾದ ಕರಡು ತಿದ್ದುವ ಕಾರ್ಯಾಗಾರವನ್ನೂ  ಆಯೋಜಿಸಿ, ಉಪನ್ಯಾಸ, ಕಮ್ಮಟ, ಪ್ರಾತ್ಯಕ್ಷಿಕೆಗಳ ಮೂಲಕ ಭಾಷಿಕವಾದ, ತಾಂತ್ರಿಕವಾದ ವಿಷಯಗಳನ್ನು ತಿಳಿಸಿಕೊಟ್ಟು ಜನಪ್ರಿಯರಾಗಿzರೆ. ತಮ್ಮ ಸಂಸ್ಥೆಯ ಒಂದೆರಡು ಪ್ರಕಟಣೆಗಳನ್ನು ಮಾರಿದಾಗ ಬಂದ ಲಾಭದ ಒಂದು ಭಾಗವನ್ನು ಅವರು ಕನ್ನಡಪರ ಕಾರ್ಯಗಳಿಗೆ ನೀಡಿದ್ದಾರೆ. ಒಂದು ಸಾವಿರ ಕನ್ನಡ ರತ್ನಕೋಶ, ಕಾವೇರಿ ಜಲ ವಿವಾದದ 650 ಪ್ರತಿಗಳನ್ನು ಅವರು ಸ್ವತಃ ಕೊಂಡು ಜನರಿಗೆ ಉಚಿತವಾಗಿ ಹಂಚಿ ದ್ದಾರೆ.

ಹೊರ ರಾಜ್ಯಗಳಿಗೆ ಹೋಗಿ ಅಲ್ಲಿಯ ಪುಸ್ತಕ ಪ್ರಕಟಣೆಗಳನ್ನು ಅಧ್ಯಯನ ಮಾಡಿ ತಮ್ಮ ಅನುಭವವನ್ನು ಕರ್ನಾಟಕದ ಪ್ರಕಾಶಕರು ಮತ್ತು ಮುದ್ರಕರಿಗೆ ತಿಳಿಸಿಕೊಟ್ಟಿದ್ದಾರೆ. ಪ್ರೌಢಶಾಲೆಯಲ್ಲಿ ಓದುವಾಗ ಗುರು ವೈ.ನಾರಾಯಣ ಶರ್ಮರ ಬೋಧನೆ ಯ ಪ್ರಭಾವಕ್ಕೆ ಒಳಗಾಗಿ ಕನ್ನಡದಲ್ಲಿ ಹೆಚ್ಚಿನ ಆಸಕ್ತಿ ತಳೆದ ರಾಜಕುಮಾರ್ ಉನ್ನತ ವ್ಯಾಸಂಗಕ್ಕೆಂದು ಬೆಂಗಳೂರಿಗೆ ಬಂದರು.

ಮದುವೆ, ಗೃಹಪ್ರವೇಶ, ಉಪನಯನ ಅಥವಾ ಇನ್ನಿತರ ಸಮಾರಂಭಗಳ ಆಹ್ವಾನ ಪತ್ರಿಕೆಗಳಲ್ಲಿ ಕನ್ನಡ ಭಾಷೆ ಇಲ್ಲದಿದ್ದರೆ ಅಂತಹ ಕಾರ್ಯಕ್ರಮಗಳಿಗೆ ಹೋಗಬಾರದೆಂದು ನಿರ್ಧರಿಸಿದ್ದಷ್ಟೇ ಅಲ್ಲ, ಅದರಂತೆ ನಡೆದರು ಕೂಡ. ಇವರು ಕನ್ನಡದ ಕೆಲಸದ ಬದುಕಿನ ಸಾರ್ಥಕತೆಯನ್ನು ಕಂಡುಕೊಂಡವರು, ಈಗಲೂ ಕನ್ನಡಪರ ಕಾರ್ಯದ ಸಫಲತೆ ಕಂಡುಕೊಳ್ಳುತ್ತಿದ್ದಾರೆ. ಪುಸ್ತಕ ಹಿಡಿದು ಬದುಕಲು ಕಲಿತ ಇವರು ಕನ್ನಡದ ಸಾಂಗತ್ಯದ ಬದುಕನ್ನು ದೂಡಿದವರೂ ಹೌದು. ಆದರೆ ಅವರ ಈ ತ್ಯಾಗ ವನ್ನು ತಾವಾಗೇ ಎಂದೂ ಎಲ್ಲಿಯೂ ಹೇಳಿಕೊಂಡವರೂ ಅಲ್ಲ, ನಗದೀಕರಿಸಿಕೊಂಡವರೂ ಅಲ್ಲ. ಒಟ್ಟಾರೆ ಪುಸ್ತಕ ಎನ್ನುವುದು ಸುಸ್ಥಿರವಾಗಲು ತಮ್ಮ ಕೈಲಾದ ಎಲ್ಲ ಪ್ರಯತ್ನಗಳನ್ನೂ ಮಾಡಿದ್ದಾರೆ, ಮಾಡುತ್ತಿದ್ದಾರೆ.

ಸೂರ್ಯನಡಿಯ ಎಲ್ಲಾ ವಿಚಾರಗಳಬಗ್ಗೆಯೂ ಇವರಿಗೆ ಒಂದಷ್ಟು ಅರಿವಿದೆ, ಆಸಕ್ತಿಯಿದೆ. ಆದರೆ ಪುಸ್ತಕ ನಮ್ಮನ್ನು ಬೆಳಕಿ ನೆಡೆಗೆ ಕರೆದು ಒಯ್ಯುತ್ತದೆ ಎಂಬ ಕಾರಣಕ್ಕಾಗಿ ಬೇರೆಯ ವಿಚಾರಗಳಿಗಿಂತ ಪುಸ್ತಕದ ಬಗ್ಗೆ ಒಂದು ಹಿಡಿ ಆಸಕ್ತಿ, ಪ್ರೀತಿ ಹೆಚ್ಚು. ಇವರಿಗೆ ಪುಸ್ತಕ ಎನ್ನುವುದು ಅರಿವಿನ ಪರಿಧಿಯನ್ನು ವಿಸ್ತರಿಸಿಕೊಳ್ಲುವ, ಸೃಜನಶೀಲತೆಯನ್ನು ಎತ್ತರಿಸಿಕೊಳ್ಳುವ ಒಂದು
ಮಾರ್ಗ. ಉತ್ತಮ ವಾಗ್ಮಿಯೂ, ಲೇಖಕರೂ ಆದ ಇವರು ಪರಿಚಾರಿಕೆಯನ್ನೇ ವ್ರತವನ್ನಾಗಿಸಿಕೊಂಡಿದ್ದರಿಂದ ಬರವಣಿಗೆಯನ್ನು ಪಕ್ಕಕ್ಕೆ ಇಟ್ಟು ಪುಸ್ತಕ ಮನಸ್ಕತೆಯನ್ನು ಸಾಂಕ್ರಾಮಿಕವಾಗಿಸುವುದಕ್ಕೆ ಬದುಕನ್ನೇ ಮುಡಿಪಾಗಿಟ್ಟವರು.

ಕನ್ನಡ ಪದಗಳ ಕಾಲಿಗೆ ಗೆಜ್ಜೆ ಕಟ್ಟಿ ಕುಣಿಸುವ ಕಲೆ ಇವರಲ್ಲಿದೆ. ಇವರ ಭಾಷಾ ಜ್ಞಾನ, ಪಾಂಡಿತ್ಯ ಅನನ್ಯವಾದದ್ದು. ಇವರ
ಭಾಷೆಯ ಮೇಲಿನ ಹಿಡಿತ, ವ್ಯಾಕರಣದ ಬಳಕೆ ಅಸಾಮಾನ್ಯವಾದದ್ದು. ಇವರ ಭಾಷಣ ಕೇಳಿ ಲೇಖಕ ಆನಂದ ಬನವಾಸಿ ಯವರು ಮುನ್ನೂರು ಪುಟಗಳ ಒಂದು ಪುಸ್ತಕವನ್ನೇ ಬರೆದರೆ, ಹಿರಿಯ ಕವಯಿತ್ರಿ ಕೆ.ಶರೀಫ್ ಒಂದು ಪದ್ಯವನ್ನುವನ್ನು ಬರೆದಿದ್ದಾರೆ. ಇವರ ಭಾಷಣದ ಧಾಟಿಯನ್ನು ಗಮನಿಸಿ ಲೇಖಕ ಸ.ರಘುನಾಥ ತಮ್ಮ ಕಥೆಯೊಂದರಲ್ಲಿ ಒಂದು ಪಾತ್ರವನ್ನು
ಸೃಜಿಸಿದ್ದಾರೆ.

ಪುಸ್ತಕಗಳ ವಿಷಯದಲ್ಲಿ ಇವರಿಗಿರುವ ಪ್ರೀತಿ, ಬದ್ಧತೆಯನ್ನು ಅರಿತು 2011ರಲ್ಲಿ ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಬಿಡುಗಡೆಯಾಗಬೇಕಾಗಿದ್ದ 101 ಪುಸ್ತಕಗಳ ಮುದ್ರಣದ ಪರಿಶೀಲನೆಯ ಕಾರ್ಯವನ್ನು ಸರಕಾರ ಇವರ ಹೆಗಲಿಗೇರಿಸಿತ್ತು. ತಮಗೆ ಸಿಕ್ಕ ಅತಿ ಕಮ್ಮಿ ಸಮಯದ ಆ ಪುಸ್ತಕಗಳು ಬಿಡುಗಡೆಯಾಗುವ ಹಾಗೆ ನೋಡಿಕೊಂಡ ಶ್ರೇಯ ಇವರದ್ದು. ಇವರ ಪುಸ್ತಕ ಪರಿಚಾರಿಕೆಯನ್ನು ಗುರುತಿಸಿ ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಕರ್ನಾಟಕ ಪ್ರಕಾಶಕರ ಸಂಘ ಕಳೆದ
ವರ್ಷ ವಿಶ್ವ ಪುಸ್ತಕ ದಿನಾಚರಣೆಯಂದು ಇವರನ್ನು ಸನ್ಮಾನಿಸಿದೆ. ಇದು ಅವರ ಪರಿಚಾರಿಕೆಗೆ ಸಂದ ದೊಡ್ಡ ಗೌರವ. ಪುಸ್ತಕ ಪ್ರಾಧಿಕಾರವನ್ನೂ ಒಳಗೊಂಡಂತೆ ಕೆಲವು ಸಂಸ್ಥೆಗಳು ಪುಸ್ತಕ ಪರಿಚಾರಿಕೆಗೆ ಪ್ರಶಸ್ತಿಗಳನ್ನು ನೀಡುತ್ತವೆ. ಆ ಪ್ರಶಸ್ತಿ ಪಡೆಯು ವವರಲ್ಲಿ ಬಹುತೇಕ ಜನರು ಸಾಹಿತಿಗಳೇ ಆಗಿದ್ದಾರೆ. ಪರಿಚಾರಿಕೆ ಎಂದರೆ ಬರೀ ಸಾಹಿತ್ಯ ರಚನೆ ಮಾತ್ರ ಅಲ್ಲವಲ್ಲ!

ಪುಸ್ತಕ ಪರಿಚಾರಿಕೆಗೆ ಮೀಸಲಾದ ಪ್ರಶಸ್ತಿ ಪರಿಚಾರಕ, ಪರಿಚಾರಿಕೆಯರಿಗೇ ಸಿಗಬೇಕೇ ವಿನಃ ಸಾಹಿತಿಗಳಿಗಲ್ಲ. ಕೆ. ರಾಜ್ ಕುಮಾರ್ ಅವರ ನಾಲ್ಕು ದಶಕದ ಸೇವೆಯನ್ನು ಮನಗಂಡು ಕನ್ನಡ ಪುಸ್ತಕ ಪ್ರಾಧಿಕಾರ ಈ ವರ್ಷದ ಡಾ. ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿಯನ್ನು ನೀಡಿದೆ. ರಾಜ್‌ಕುಮಾರ್ ಅವರಿಗೆ ಇನ್ನಷ್ಟು ಶ್ರೇಯ ಲಭಿಸಲಿ. ಕನ್ನಡದ ಯುವ ಪೀಳಿಗೆಗೆ ರಾಜ್ ಕುಮಾರ್ ಅವರ ಕಾರ್ಯ ಮಾದರಿಯಾಗಲಿದ್ದಾರೆ.

ಶಾಲೆಯಿಂದ ಶಾಲೆಗೆ, ಕಾಲೇಜಿನಿಂದ ಕಾಲೇಜಿಗೆ, ಸಭಾಂಗಣದಿಂದ ಸಭಾಂಗಣಕ್ಕೆ ಹೋಗಿ ಪುಸ್ತಕ ಮಾರಿದ್ದಾರೆ, ಹಂಚಿದ್ದಾರೆ. ಅಷ್ಟಕ್ಕೇ ಸೀಮಿತವಾಗಿರದೆ ಕಾರ್ಖಾನೆಯಿಂದ ಕಾರ್ಖಾನೆಗೆ ಅಲೆದು, ಪುಸ್ತಕ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಿ ಕಾರ್ಮಿಕ ವರ್ಗದವರಲ್ಲೂ ಪುಸ್ತಕ ಪ್ರೀತಿ ಮೂಡುವಂತೆ ಶ್ರಮಿಸಿದ್ದಾರೆ. ಪುಸ್ತಕವನ್ನು ಇವರು ಸಂಸ್ಕೃತಿಯಾಗಿ ಪರಿಭಾವಿಸಿದರೂ, ಅದನ್ನು ಉದ್ಯಮವನ್ನಾಗಿಸಬೇಕೆಂಬ ತುಡಿತವೂ ಇವರಲ್ಲಿದೆ.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಗೊ. ರು. ಚನ್ನಬಸಪ್ಪನವರು ಅಧ್ಯಕ್ಷರಾಗಿದ್ದಾಗ ಇವರು ಮಾಡಿದ ಮೊದಲ ಕಾರ್ಯವೆಂದರೆ ಕಾರ್ಯಕರ್ತರ ಜೊತೆಗೂಡಿ ಸಂಶೋಧನಾ ವಿಭಾಗದಲ್ಲಿದ್ದ ಸುಮಾರು ಹತ್ತು ಸಾವಿರ ಪರಾಮರ್ಶನ ಗ್ರಂಥಗಳ ಧೂಳು
ಒರೆಸಿದ್ದು, ಆ ವಿಭಾಗವನ್ನು ಗುಡಿಸಿ ಶುಚಿಗೊಳಿಸಿದ್ದು!

ಒಂದು ಕಾಲದಲ್ಲಿ ಕರ್ನಾಟಕದ ಎಷ್ಟೋ ಪುಸ್ತಕ ಮಳಿಗೆಗಳಲ್ಲಿ ಕನ್ನಡ ಪುಸ್ತಕಗಳೇ ದೊರೆಯುತ್ತಿರಲಿಲ್ಲ. ಅದಕ್ಕೆ ಉದಾಹರಣೆ ಮಹಾತ್ಮಾ ಗಾಂಧಿ ರಸ್ತೆಯಲ್ಲಿರುವ ಗಂಗಾರಾಂ ಪುಸ್ತಕ ಮಳಿಗೆ ಮತ್ತು ಹಿಗ್ಗಿನ್‌ಬಾಥಮ್ಸ ಮಳಿಗೆಗಳು. ಗಂಗಾರಾಂನಲ್ಲಿ ತಮ್ಮ
ಪ್ರಕಟಣೆಯ ಪುಸ್ತಕಗಳೊಂದಿಗೆ ಇತರರ ಪುಸ್ತಕಗಳನ್ನೂ ನಷ್ಟವಾದರೂ ಸರಿ ಎಂದು ಸಾಲದ ರೂಪದಲ್ಲಿ ನೀಡಿ, ರಿಯಾಯತಿ ಯನ್ನೂ ನೀಡಿ ಅವರ ಮನವೊಲಿಸಿ, ಕನ್ನಡ ಪುಸ್ತಕಗಳು ಲಭ್ಯವಾಗುವಂತೆ ಮಾಡಿದರು.

ಹಿಗ್ಗಿನ್ ಬಾಥಮ್ಸ ಅವರ ಮಳಿಗೆಗೆಳಲ್ಲಿ ಕನ್ನಡ ಪುಸ್ತಕ ಇಡಬೇಕಾದರೆ ಚೆನ್ನೆ ನಲ್ಲಿರುವ ಮುಖ್ಯ ಕಚೇರಿಯಿಂದ ಲಿಖಿತ ರೂಪ ದಲ್ಲಿ ಅನುಮತಿ ಬೇಕೆಂದು ಹೇಳಿದಾಗ ಚೆನ್ನೆ ಗೆ ಹೋಗಿ, ಲಿಖಿತ ಆದೇಶವನ್ನು ತಂದು ಕನ್ನಡ ಪುಸ್ತಕಗಳ ಮಾರಾಟಕ್ಕೆ ಅವಕಾಶ ಒದಗಿಸಿಕೊಟ್ಟರು. ಎಚ್.ಎ.ಎಲ. ವಿಮಾನ ನಿಲ್ದಾಣದಲ್ಲಿ, ಅಶೋಕ ಹೋಟೆಲ, ವುಡ್‌ಲ್ಯಾಂಡ್ಸ್ ಹೋಟೆಲ್ ಇತ್ಯಾದಿ ಪಂಚತಾರಾ ಹೋಟೆಲ್‌ಗಳಲ್ಲಿರುವ ಪುಸ್ತಕದ ಮಳಿಗೆಗಳಲ್ಲಿ ಕನ್ನಡದ ಪುಸ್ತಕಗಳೂ ಮಾರಾಟವಾಗುವ ಹಾಗೆ ಮಾಡಿದ್ದು ಕಮ್ಮಿ ಸಾಧನೆಯೇನಲ್ಲ. ಬೇರೆ ರಾಜ್ಯಗಳಿಂದ ಅಲ್ಲಿನ ಪುಸ್ತಕ ಮಾರಾಟಗಾರರು ನಮ್ಮರಾಜ್ಯಕ್ಕೆ ಬಂದು ಇಂಗ್ಲಿಷ್ ಮತ್ತು ಇತರ ಭಾಷೆಯ ಪುಸ್ತಕಗಳನ್ನು ಮಾರುತ್ತಿzಗ ಅವರ ಮಳಿಗೆಗಳಲ್ಲಿ ಕನ್ನಡ ಪುಸ್ತಕಗಳನ್ನೂ ಮಾರುವಂತೆ ಮನವೊಲಿಸಿ, ಅವರಿಗೆ ಕನ್ನಡದ ಕೃತಿಗಳನ್ನು ಒದಗಿಸಿಕೊಡುತ್ತಿದ್ದರು.

ಡಾ.ಶಿವರಾಮ ಕಾರಂತರ ನಾಲ್ಕು ನೂರಕ್ಕೂ ಹೆಚ್ಚು ಕೃತಿಗಳ ಮರುಮುದ್ರಣ ಮತ್ತು ಮಾರಾಟದ ಹಕ್ಕನ್ನು ಸ್ವಪ್ನ ಬುಕ್‌ಹೌಸ್ ಕೊಡಿಸುವಲ್ಲಿ ಇವರು ಪ್ರಮುಖ ಪಾತ್ರವಹಿಸಿದ್ದರು ಎನ್ನುವುದು ಉಲ್ಲೇಖನೀಯ. 62 ವರ್ಷ ವಯಸ್ಸಿನ ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡ ಬಲ್ಲ ಸರಕಾರಿ ಅಧಿಕಾರಿ ಮತ್ತು ಸಿಬ್ಬಂದಿಗೆ ಆಡಳಿತದಲ್ಲಿ ಕನ್ನಡ ಬಳಸುವ ಕೌಶಲ ಹೆಚ್ಚಿಸಲು ನಡೆಸುವ ಒಂದು ವಾರದ ಅವಧಿಯ ‘ಆಡಳಿತ ಕನ್ನಡ ಕಾರ್ಯಶಿಬಿರ’ಗಳ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದವರು. ಕಳೆದ ಮೂರು ದಶಕಗಳಲ್ಲಿ 120 ಶಿಬಿರಗಳನ್ನು, ಒಂದು ದಿನದ ಹತ್ತಕ್ಕೂ ಹೆಚ್ಚು ಆಡಳಿತ ಕನ್ನಡ ಕಮ್ಮಟಗಳನ್ನೂ, ಕನ್ನಡ
ಬಾರದವರಿಗೆ ಕನ್ನಡ ಬೋಧನೆ ತರಗತಿಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದಾರೆ.

ಸಾರ್ವಜನಿಕ ಗ್ರಂಥಾಲಯ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಪುಸ್ತಕ ಪ್ರಾಧಿಕಾರಗಳನ್ನೊಳಗೊಂಡು ಇತರ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಲೇಖಕ – ಪ್ರಕಾಶಕರಿಗಾಗಿ ಪ್ರಕಟಣೆ, ವಿತರಣೆ ಮತ್ತು ಮಾರಾಟದ ವಿವಿಧ ಆಯಾಮಗಳನ್ನು ಪರಿಚಯಿಸುವ, ಉಪಯುಕ್ತ ಕನ್ನಡ ಕಮ್ಮಟಗಳನ್ನು ವಿವಿಧೆಡೆಗಳಲ್ಲಿ ನಡೆಸಿಕೊಟ್ಟಿದ್ದಾರೆ.

ಪುಸ್ತಕ ಪ್ರಕಟಣೆಯ ಮಾಹಿತಿಯನ್ನು ಬಯಸಿದ ಲೇಖಕರಿಗೆ ಕರಡು ತಿದ್ದುವುದರಿಂದ ಹಿಡಿದು, ಮುದ್ರಣಕ್ಕೆ ಕಾಗದದ ಆಯ್ಕೆ, ತಾಂತ್ರಿಕ ವಿಚಾರಗಳು, ಬೆಲೆ ನಿಗದಿಪಡಿಸುವುದು ಇತ್ಯಾದಿ ಎಲ್ಲಾ ಮಾಹಿತಿಯನ್ನೂ ಉಚಿತವಾಗಿ ತಿಳಿಸಿಕೊಡುತ್ತಿದ್ದಾರೆ. ಲೇಖಕ – ಪ್ರಕಾಶಕರಿಗೆ ರಾಜಕುಮಾರ್ ಅವರ ‘ಪುಸ್ತಕ ಸಲಹಾ ಕೇಂದ್ರ’ ದಿನದ 24 ಗಂಟೆ, ವರ್ಷದ 365 ದಿನವೂ ತೆರೆದಿರುತ್ತದೆ. ಉದಯೋ ನ್ಮುಖ ಬರಹಗಾರರಿಗಾಗಿ ಲೇಖನ ಶಿಬಿರಗಳನ್ನು ಆಯೋಜಿಸಿ, ಲೇಖನವನ್ನು ಹೇಗೆಬರೆಯಬೇಕು ಎಂದು ತಿಳಿಸಿಕೊಡು ತ್ತಾರೆ, ಸರಿ ತಪ್ಪುಗಳನ್ನು ವಿವರಿಸಿ, ಶೈಕ್ಷಣಿಕ ಚೌಕಟ್ಟಿಗೆ ಒಳಪಡಿಸಿ ಉಣಬಡಿಸುತ್ತಾರೆ.

ಕನ್ನಡದಲ್ಲಿ ವಿರಳವಾದ ಕರಡು ತಿದ್ದುವ ಕಾರ್ಯಾಗಾರವನ್ನೂ ಆಯೋಜಿಸಿ, ಉಪನ್ಯಾಸ, ಕಮ್ಮಟ, ಪ್ರಾತ್ಯಕ್ಷಿಕೆಗಳ ಮೂಲಕ ಭಾಷಿಕವಾದ, ತಾಂತ್ರಿಕವಾದ ವಿಷಯಗಳನ್ನು ತಿಳಿಸಿಕೊಟ್ಟು ಜನಪ್ರಿಯರಾಗಿದ್ದಾರೆ. ತಮ್ಮ ಸಂಸ್ಥೆಯ ಒಂದೆರಡು ಪ್ರಕಟಣೆ ಗಳನ್ನು ಮಾರಿದಾಗ ಬಂದ ಲಾಭದ ಒಂದು ಭಾಗವನ್ನು ಅವರು ಕನ್ನಡಪರ ಕಾರ್ಯಗಳಿಗೆ ನೀಡಿದ್ದಾರೆ. ಒಂದು ಸಾವಿರ ಕನ್ನಡ
ರತ್ನಕೋಶ, ಕಾವೇರಿ ಜಲ ವಿವಾದದ 650 ಪ್ರತಿಗಳನ್ನು ಅವರು ಸ್ವತಃ ಕೊಂಡು ಜನರಿಗೆ ಉಚಿತವಾಗಿ ಹಂಚಿದ್ದಾರೆ.

ಹೊರ ರಾಜ್ಯಗಳಿಗೆ ಹೋಗಿ ಅಲ್ಲಿಯ ಪುಸ್ತಕ ಪ್ರಕಟಣೆಗಳನ್ನು ಅಧ್ಯಯನ ಮಾಡಿ ತಮ್ಮ ಅನುಭವವನ್ನು ಕರ್ನಾಟಕದ ಪ್ರಕಾಶಕರು ಮತ್ತು ಮುದ್ರಕರಿಗೆ ತಿಳಿಸಿಕೊಟ್ಟಿದ್ದಾರೆ. ಪ್ರೌಢಶಾಲೆಯಲ್ಲಿ ಓದುವಾಗ ಗುರು ವೈ.ನಾರಾಯಣ ಶರ್ಮರ ಬೋಧನೆಯ ಪ್ರಭಾವಕ್ಕೆ ಒಳಗಾಗಿ ಕನ್ನಡದಲ್ಲಿ ಹೆಚ್ಚಿನ ಆಸಕ್ತಿ ತಳೆದ ರಾಜಕುಮಾರ್ ಉನ್ನತ ವ್ಯಾಸಂಗಕ್ಕೆಂದು ಬೆಂಗಳೂರಿಗೆ
ಬಂದರು. ಮದುವೆ, ಗೃಹಪ್ರವೇಶ, ಉಪನಯನ ಅಥವಾ ಇನ್ನಿತರ ಸಮಾರಂಭಗಳ ಆಹ್ವಾನ ಪತ್ರಿಕೆಗಳಲ್ಲಿ ಕನ್ನಡ ಭಾಷೆ ಇಲ್ಲದಿದ್ದರೆ ಅಂತಹ ಕಾರ್ಯಕ್ರಮಗಳಿಗೆ ಹೋಗಬಾರದೆಂದು ನಿರ್ಧರಿಸಿದ್ದಷ್ಟೇ ಅಲ್ಲ, ಅದರಂತೆ ನಡೆದರು ಕೂಡ.

ಇವರು ಕನ್ನಡದ ಕೆಲಸದ ಬದುಕಿನ ಸಾರ್ಥಕತೆಯನ್ನು ಕಂಡುಕೊಂಡವರು, ಈಗಲೂ ಕನ್ನಡಪರ ಕಾರ್ಯದ ಸಫಲತೆ
ಕಂಡುಕೊಳ್ಳುತ್ತಿದ್ದಾರೆ. ಪುಸ್ತಕ ಹಿಡಿದು ಬದುಕಲು ಕಲಿತ ಇವರು ಕನ್ನಡದ ಸಾಂಗತ್ಯದ ಬದುಕನ್ನು ದೂಡಿದವರೂ ಹೌದು. ಆದರೆ ಅವರ ಈ ತ್ಯಾಗವನ್ನು ತಾವಾಗೇ ಎಂದೂ ಎಲ್ಲಿಯೂ ಹೇಳಿಕೊಂಡವರೂ ಅಲ್ಲ, ನಗದೀಕರಿಸಿಕೊಂಡವರೂ ಅಲ್ಲ. ಒಟ್ಟಾರೆ ಪುಸ್ತಕ ಎನ್ನುವುದು ಸುಸ್ಥಿರವಾಗಲು ತಮ್ಮ ಕೈಲಾದ ಎಲ್ಲ ಪ್ರಯತ್ನಗಳನ್ನೂ ಮಾಡಿದ್ದಾರೆ, ಮಾಡುತ್ತಿದ್ದಾರೆ. ಸೂರ್ಯನಡಿಯ ಎಲ್ಲಾ ವಿಚಾರಗಳಬಗ್ಗೆಯೂ ಇವರಿಗೆ ಒಂದಷ್ಟು ಅರಿವಿದೆ, ಆಸಕ್ತಿಯಿದೆ. ಆದರೆ ಪುಸ್ತಕ ನಮ್ಮನ್ನು ಬೆಳಕಿ ನೆಡೆಗೆ ಕರೆದು ಒಯ್ಯುತ್ತದೆ ಎಂಬ ಕಾರಣಕ್ಕಾಗಿ ಬೇರೆಯ ವಿಚಾರಗಳಿಗಿಂತ ಪುಸ್ತಕದ ಬಗ್ಗೆ ಒಂದು ಹಿಡಿ ಆಸಕ್ತಿ, ಪ್ರೀತಿ ಹೆಚ್ಚು. ಇವರಿಗೆ ಪುಸ್ತಕ ಎನ್ನುವುದು ಅರಿವಿನ ಪರಿಧಿಯನ್ನು ವಿಸ್ತರಿಸಿಕೊಳ್ಲುವ, ಸೃಜನಶೀಲತೆಯನ್ನು ಎತ್ತರಿಸಿಕೊಳ್ಳುವ ಒಂದು ಮಾರ್ಗ.

ಉತ್ತಮ ವಾಗ್ಮಿಯೂ, ಲೇಖಕರೂ ಆದ ಇವರು ಪರಿಚಾರಿಕೆಯನ್ನೇ ವ್ರತವನ್ನಾಗಿಸಿಕೊಂಡಿದ್ದರಿಂದ ಬರವಣಿಗೆಯನ್ನು ಪಕ್ಕಕ್ಕೆ ಇಟ್ಟು ಪುಸ್ತಕ ಮನಸ್ಕತೆಯನ್ನು ಸಾಂಕ್ರಾಮಿಕವಾಗಿಸುವುದಕ್ಕೆ ಬದುಕನ್ನೇ ಮುಡಿಪಾಗಿಟ್ಟವರು. ಕನ್ನಡ ಪದಗಳ ಕಾಲಿಗೆ ಗೆಜ್ಜೆ ಕಟ್ಟಿ ಕುಣಿಸುವ ಕಲೆ ಇವರಲ್ಲಿದೆ. ಇವರ ಭಾಷಾ ಜ್ಞಾನ, ಪಾಂಡಿತ್ಯ ಅನನ್ಯವಾದದ್ದು. ಇವರ ಭಾಷೆಯ ಮೇಲಿನ ಹಿಡಿತ, ವ್ಯಾಕರಣದ ಬಳಕೆ ಅಸಾಮಾನ್ಯವಾದದ್ದು. ಇವರ ಭಾಷಣ ಕೇಳಿ ಲೇಖಕ ಆನಂದ ಬನವಾಸಿಯವರು ಮುನ್ನೂರು ಪುಟಗಳ
ಒಂದು ಪುಸ್ತಕವನ್ನೇ ಬರೆದರೆ, ಹಿರಿಯ ಕವಯಿತ್ರಿ ಕೆ.ಶರೀಫ್ ಒಂದು ಪದ್ಯವನ್ನುವನ್ನು ಬರೆದಿದ್ದಾರೆ. ಇವರ ಭಾಷಣದ ಧಾಟಿ ಯನ್ನು ಗಮನಿಸಿ ಲೇಖಕ ಸ.ರಘುನಾಥ ತಮ್ಮ ಕಥೆಯೊಂದರಲ್ಲಿ ಒಂದು ಪಾತ್ರವನ್ನು ಸೃಜಿಸಿದ್ದಾರೆ.

ಪುಸ್ತಕಗಳ ವಿಷಯದಲ್ಲಿ ಇವರಿಗಿರುವ ಪ್ರೀತಿ, ಬದ್ಧತೆಯನ್ನು ಅರಿತು 2011ರಲ್ಲಿ ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನ ದಲ್ಲಿ ಬಿಡುಗಡೆಯಾಗಬೇಕಾಗಿದ್ದ 101 ಪುಸ್ತಕಗಳ ಮುದ್ರಣದ ಪರಿಶೀಲನೆಯ ಕಾರ್ಯವನ್ನು ಸರಕಾರ ಇವರ ಹೆಗಲಿಗೇರಿಸಿತ್ತು. ತಮಗೆ ಸಿಕ್ಕ ಅತಿ ಕಮ್ಮಿ ಸಮಯದ ಆ ಪುಸ್ತಕಗಳು ಬಿಡುಗಡೆಯಾಗುವ ಹಾಗೆ ನೋಡಿಕೊಂಡ ಶ್ರೇಯ ಇವರದ್ದು. ಇವರ ಪುಸ್ತಕ ಪರಿಚಾರಿಕೆಯನ್ನು ಗುರುತಿಸಿ ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಕರ್ನಾಟಕ ಪ್ರಕಾಶಕರ ಸಂಘ ಕಳೆದ ವರ್ಷ ವಿಶ್ವ ಪುಸ್ತಕ ದಿನಾಚರಣೆಯಂದು ಇವರನ್ನು ಸನ್ಮಾನಿಸಿದೆ.

ಇದು ಅವರ ಪರಿಚಾರಿಕೆಗೆ ಸಂದ ದೊಡ್ಡ ಗೌರವ. ಪುಸ್ತಕ ಪ್ರಾಧಿಕಾರವನ್ನೂ ಒಳಗೊಂಡಂತೆ ಕೆಲವು ಸಂಸ್ಥೆಗಳು ಪುಸ್ತಕ ಪರಿಚಾರಿಕೆಗೆ ಪ್ರಶಸ್ತಿಗಳನ್ನು ನೀಡುತ್ತವೆ. ಆ ಪ್ರಶಸ್ತಿ ಪಡೆಯುವವರಲ್ಲಿ ಬಹುತೇಕ ಜನರು ಸಾಹಿತಿಗಳೇ ಆಗಿದ್ದಾರೆ. ಪರಿಚಾರಿಕೆ ಎಂದರೆ ಬರೀ ಸಾಹಿತ್ಯ ರಚನೆ ಮಾತ್ರ ಅಲ್ಲವಲ್ಲ! ಪುಸ್ತಕ ಪರಿಚಾರಿಕೆಗೆ ಮೀಸಲಾದ ಪ್ರಶಸ್ತಿ ಪರಿಚಾರಕ,ಪರಿಚಾರಿಕೆಯರಿಗೇ ಸಿಗಬೇಕೇ ವಿನಃ ಸಾಹಿತಿಗಳಿಗಲ್ಲ. ಕೆ. ರಾಜ್ ಕುಮಾರ್ ಅವರ ನಾಲ್ಕು ದಶಕದ ಸೇವೆಯನ್ನು ಮನಗಂಡು ಕನ್ನಡ ಪುಸ್ತಕ ಪ್ರಾಧಿ ಕಾರ ಈ ವರ್ಷದ ಡಾ. ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿಯನ್ನು ನೀಡಿದೆ. ರಾಜ್‌ಕುಮಾರ್ ಅವರಿಗೆ ಇನ್ನಷ್ಟು ಶ್ರೇಯ ಲಭಿಸಲಿ. ಕನ್ನಡದ ಯುವ ಪೀಳಿಗೆಗೆ ರಾಜ್ ಕುಮಾರ್ ಅವರ ಕಾರ್ಯ ಮಾದರಿಯಾಗಲಿ