Roopa Gururaj Column: ಶಿವರಾತ್ರಿಯ ಅಪರೂಪದ ಕಥೆ
ನಂಜಿನಂತ ವಿಷ ಸೇವಿಸಿದ್ದರಿಂದ ನಂಜುಂಡೇಶ್ವರ ನಾದನು. ಹಾಲಾಹಲವನ್ನ ಶ್ರೀ ಎಂದು ಕರೆಯುತ್ತಾರೆ. ಆದ್ದರಿಂದ ಶ್ರೀಕಂಠನಾದನು. ಆದರೆ ವಿಷವನ್ನು ಕುಡಿದ ಶಿವನ ಬಗ್ಗೆ ದೇವತೆ ಗಳು ಆತಂಕಗೊಂಡರು. ಪಾರ್ವತಿ ಗಂಟ ಲನ್ನು ಒತ್ತಿ ಹಿಡಿದಿದ್ದರೂ ಒಂದು ಹನಿ ವಿಷ ಶಿವನ ಹೊಟ್ಟೆ ಸೇರಿರಬಹುದು. ಇದರಿಂದ ಶಿವನ ಜೀವಕ್ಕೆ ಅಪಾಯವಿದೆ


ಒಂದೊಳ್ಳೆ ಮಾತು
ಶಿವರಾತ್ರಿ ಹಬ್ಬದ ಕುರಿತಾಗಿ ಹಲವು ಕಥೆಗಳಿವೆ. ಪ್ರತಿ ತಿಂಗಳು ಮಾಸ ಶಿವ ರಾತ್ರಿ ಬರುತ್ತದೆ. ಹಾಗೆ ಪ್ರತಿ ವರ್ಷ ಮಾಘ ಮಾಸದಲ್ಲಿ ಬರುವ ಮಾಸ ಶಿವ ರಾತ್ರಿ ಯಾಮ ಪೂಜೆ ಜಾಗರಣೆ ಮಾಡಲು ಇದಕ್ಕೊಂದು ಹಿನ್ನೆಲೆ ಇದೆ. ಕೃತಯುಗದಲ್ಲಿ ಕಶ್ಯಪ ಮುನಿಗಳಿಗೆ ದಿತಿ- ಅದಿತಿ ಇಬ್ಬರು ಪತ್ನಿಯರು. ಇವರು ಗರ್ಭಿಣಿ ಯರಾಗಿ ಅದಿತಿ ದೇವಪುತ್ರರಿಗೆ, ದಿತಿಯು ರಾಕ್ಷಸರಿಗೆ ಜನ್ಮ ನೀಡಿದರು. ಆ ಸಮಯದಲ್ಲಿ ಹುಟ್ಟು- ಸಾವು ವಿಚಾರವಾಗಿ ಚರ್ಚೆ ಮಾಡುತ್ತಾ, ಏನು ಪರಿಹಾರ ಎಂದು ಚಿಂತೆ ಮಾಡು ತ್ತಿದ್ದರು. ಈ ವಿಷಯ ಶ್ರೀಮನ್ನಾರಾಯಣನಿಗೆ ತಿಳಿಯಿತು. ಮಹಾವಿಷ್ಣು ಅದಿತಿಯ ದೇವಪುತ್ರರನ್ನು, ದಿತಿಯ ದಾನವ ಪುತ್ರರನ್ನು ಕರೆಸಿ ದನು. ಇದಕ್ಕೆ ಪರಿಹಾರವಾಗಿ ಹೇಳಿದನು. ಭೂಮಿಯಲ್ಲಿರುವ ಅತಿ ಎತ್ತರವಾದ ಮಂದರ ಪರ್ವತ ವನ್ನು ಕಿತ್ತು ಏಳು ಸಮುದ್ರಗಳಾಚೆ ಕೆಂಪು ಕಡಲಲ್ಲಿ ಮುಳುಗಿಸಿ ಕಡೆದರೆ ಅಮೃತ ಸಿಗುತ್ತದೆ.
ಅಂತಹ ಅಮೃತ ಕುಡಿದರೆ ಹುಟ್ಟು ಸಾವುಗಳ ಸಮಸ್ಯೆಗಳಿಲ್ಲದೆ ನೆಮ್ಮದಿಯಿಂದ ಬಾಳ ಬಹುದು ಎಂದು ಸಲಹೆ ಕೊಟ್ಟನು. ಇದನ್ನು ಕೇಳಿ ಹರ್ಷಗೊಂಡ ದಿತಿಯ ದೇವ ಮಕ್ಕಳು, ಅದಿತಿಯ ದಾನವ ಮಕ್ಕಳು, ಮಂದರ ಪರ್ವತವನ್ನು (ಕಡಗೋಲಿಗೆ) ಸಮುದ್ರ ದಲ್ಲಿ ಮುಳುಗಿಸಿ ದೈತ್ಯಾಕಾರದ ಸರ್ಪ ವಾಸುಕಿಯನ್ನು ಹಗ್ಗವನ್ನಾಗಿಸಿ ಹಾಲುಗಡಲನ್ನು ಕಡೆದರು.
ಇದನ್ನೂ ಓದಿ: Roopa Gururaj Column: ಸೀತಾಮಾತೆಯ ಸಹೋದರ ಯಾರು ಗೊತ್ತೇ ?
ಹೀಗೆ ಕಡೆದಾಗ ಮೊದಲು ಬಂದಿದ್ದು ಹಾಲಾಹಲ ವಿಷ. ಈ ವಿಷ ಸೇವಿಸಿ ಬೇರೆ ಯಾರು ಸಾಯಬಾರದೆಂದು, ದಯಾಮಯನಾದ ಪರಮೇಶ್ವರನೇ ವಿಷವನ್ನು ಆಪೋಷನ ತೆಗೆದು ಕೊಂಡನು. ಕುಡಿದ ವಿಷ ಗಂಟಲೊಳಗೆ ಇಳಿಯದಂತೆ ಪಾರ್ವತಿ ಶಿವನ ಕುತ್ತಿಗೆಯನ್ನು ಒತ್ತಿ ಹಿಡಿದಳು. ವಿಷ ಶಿವನ ಕುತ್ತಿಗೆಯಲ್ಲಿ ನಿಂತು ನೀಲಿಯಾಯಿತು.
ಆದ್ದರಿಂದ ಶಿವನು ನೀಲಕಂಠನಾದನು. ನಂಜಿನಂತ ವಿಷ ಸೇವಿಸಿದ್ದರಿಂದ ನಂಜುಂಡೇ ಶ್ವರ ನಾದನು. ಹಾಲಾಹಲವನ್ನ ಶ್ರೀ ಎಂದು ಕರೆಯುತ್ತಾರೆ. ಆದ್ದರಿಂದ ಶ್ರೀಕಂಠ ನಾದನು. ಆದರೆ ವಿಷವನ್ನು ಕುಡಿದ ಶಿವನ ಬಗ್ಗೆ ದೇವತೆಗಳು ಆತಂಕಗೊಂಡರು. ಪಾರ್ವತಿ ಗಂಟ ಲನ್ನು ಒತ್ತಿ ಹಿಡಿದಿದ್ದರೂ ಒಂದು ಹನಿ ವಿಷ ಶಿವನ ಹೊಟ್ಟೆ ಸೇರಿರಬಹುದು. ಇದರಿಂದ ಶಿವನ ಜೀವಕ್ಕೆ ಅಪಾಯವಿದೆ.
ಆಗ ದೇವತೆಗಳು ಅಮೃತ ಕುಡಿದಿರಲಿಲ್ಲ. ಈಗ ಶಿವನನ್ನು ಉಳಿಸಿಕೊಳ್ಳಬೇಕು ಎಂದರೆ ರಾತ್ರಿ ಇಡೀ ವಿಷ ಏರದಂತೆ ಅವನ ನಿದ್ರೆ ತಡೆಯಬೇಕು ಎಂದು ದೇವತೆಗಳೆಲ್ಲರೂ ಸೇರಿ ಶಿವನು ನಿದ್ರೆ ಹೋಗದಂತೆ ಎಚ್ಚರವಾಗಿರಲೆಂದು ಶಿವನನ್ನು ಪ್ರಶಂಸೆ ಮಾಡುವ ಭಜನೆ, ಸಂಗೀತ, ತಾಳ, ಮೃದಂಗ, ನೃತ್ಯ, ಹರಿಕಥೆ ಪುರಾಣ ಕಥೆ, ಈ ಮೂಲಕ ಅಹೋ ರಾತ್ರಿ ದೇವತೆಗಳೆಲ್ಲ ಜಾಗರಣೆಮಾಡಿ ಶಿವ ನಿದ್ರಿಸದಂತೆ ನೋಡಿಕೊಂಡು ಉಳಿಸಿಕೊಂಡರು.
ಈ ಕಾರಣದಿಂದ ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ರಾತ್ರಿ ಜಾಗರಣೆ ಮಾಡಿ, ಆ ಸಮಯ ದಲ್ಲಿ ಭಜನೆ ಸ್ತೋತ್ರ ಪಠಣ ಪುರಾಣ ಕಥೆ ಮಾಡುವುದು ರೂಡಿಗೆ ಬಂದಿತು. ಒಂದೊಂದು ಯಾಮಕ್ಕೂ ಶಿವನಿಗೆ ತಣ್ಣನೆ ಹಾಲು ನೀರಿನ ಅಭಿಷೇಕ, ಕಬ್ಬಿನ ಹಾಲು, ಎಳನೀರು, ರುದ್ರಾಭಿಷೇಕ ಮಾಡುತ್ತಾರೆ. ನಾನಾ ರೀತಿಯ ಪುಷ್ಪಗಳಿಂದ ಅರ್ಚನೆ ಮಾಡುತ್ತಾರೆ.
ಪುರೋಹಿತರು, ಶಿವಭಕ್ತರು ಎಲ್ಲರೂ ಸೇರಿ ಶ್ರೀಸೂಕ್ತ, ಪುರುಷ ಸೂಕ್ತ, ರುದ್ರ, ಚಮಕ, ರುದ್ರ ತ್ರಿಶತಿ ಮಂತ್ರಗಳು ಎಲ್ಲೆಡೆಯೂ ಕೇಳುವಂತೆ ಘಂಟಾಘೋಷವಾಗಿ ಪಠಿಸುತ್ತಾರೆ. ಶಿವರಾತ್ರಿ ಜಾಗರಣೆ ಮಾಡಲು ಇದೂ ಒಂದು ಪೌರಾಣಿಕ ಹಿನ್ನೆಲೆ ಇದೆ. ಶಿವರಾತ್ರಿಯ ದಿನದಂದು ಚಲಿಸುವ ಚೈತನ್ಯವು ಭೂಮಿಯಿಂದ ಆಕಾಶಕ್ಕೆ ಹರಿಯುತ್ತದೆ. ಅದರಂತೆ ಬೆನ್ನು ನೆಟ್ಟ ಗಿರಿಸಿ ಶಿವಧ್ಯಾನದಲ್ಲಿ ಕುಳಿತ ಭಕ್ತರ ಬೆನ್ನಹುರಿಯಲ್ಲಿ ಈ ಚೈತನ್ಯ ಚಲನೆಯಾಗಿ ಅವರ ಇಡೀ ದೇಹ ಚೈತನ್ಯಪೂರ್ಣವಾಗುತ್ತದೆ. ವಜ್ರಕಾಯರಾಗುತ್ತಾರೆ, ಉಪವಾಸದಿಂದ ಆರೋಗ್ಯ ನೂರ್ಮಡಿಯಾಗಿ ಉತ್ತಮವಾಗುತ್ತದೆ ಎನ್ನುವ ನಂಬಿಕೆಯೂ ಇದೆ. ಇವೆಲ್ಲವೂ ಶಿವರಾತ್ರಿಯ ಆಚರಣೆಯ ನಾವು ತಿಳಿದಿರಬೇಕಾದ ವಿಷಯಗಳು.