Friday, 13th December 2024

ಮಕ್ಕಳ ಪ್ರತಿಭೆಯನ್ನು ಹತ್ತಿಕ್ಕುತ್ತಿರುವ ಪ್ರಭಾವ

ಗೊರೂರು ಶಿವೇಶ್, ಹವ್ಯಾಸಿ ಬರಹಗಾರರು

ನೈಜ ಪ್ರತಿಭೆ ಗಟ್ಟಿಿ ಬೀಜದ ರೀತಿ. ಗೊಬ್ಬರ, ನೀರು, ಹವಾಮಾನದ ವೈಪರೀತ್ಯ ಅದರ ಬೆಳವಣಿಗೆಯನ್ನು ಮಟ್ಟಿಿಗೆ ಕುಂಠಿತಗೊಳಿಸಬಹುದೇ ವಿನಃ ಅವುಗಳ ಬೆಳವಣಿಗೆಯನ್ನು ತಡೆಗಟ್ಟಲಾಗದು. ಅಂತೆಯೇ ಹುಸಿ ಬೀಜಗಳಿಗೆ ಎಲ್ಲಾಾ ಅಂಶಗಳು ಪೂರಕವಾಗಿದ್ದರೂ ಅವು ಬೆಳೆಯಲಾರವು.

ಇತ್ತೀಚೆಗೆ ಶಾಲೆಯೊಂದರ ಪೋಷಕರ ಸಭೆಯಲ್ಲಿ ಭಾಗವಹಿಸಿದ್ದೆೆ. ‘ಕೇವಲ ಪಠ್ಯ ವಿಷಯವಷ್ಟೇ ಅಲ್ಲದೆ ಪಠ್ಯೇತರ ಚಟುವಟಿಕೆಗಳ ಕಡೆಗೂ ವಿದ್ಯಾಾರ್ಥಿಗಳು ಗಮನ ನೀಡಬೇಕು. ನಾನಾ ಸಂಘ ಸಂಸ್ಥೆೆಗಳು ಆಯೋಜಿಸುವ ಸ್ಪರ್ಧೆಗಳು, ಸರಕಾರ ನಡೆಸುವ ‘ಪ್ರತಿಭಾ ಕಾರಂಜಿ’ ಮುಂತಾದ ಸ್ಪರ್ಧೆಗಳಿಗೆ ಮಕ್ಕಳನ್ನು ತಯಾರು ಮಾಡಿ ಕರೆದೊಯ್ಯುವ ಗುರುತರವಾದ ಜವಾಬ್ದಾಾರಿ ಶಿಕ್ಷಕರದ್ದಾಾಗಿವೆ,’ ಎಂದು ನನ್ನ ತಿಳಿಸಿದೆ. ಇದಕ್ಕೆೆ ಪ್ರತಿಕ್ರಿಿಯಿಸಿದ ಶಿಕ್ಷಕರು, ‘ಎಲ್ಲಿ ಸಾರ್, ಬರೀ ರಾಜಕೀಯ. ನಾವು ಮಕ್ಕಳನ್ನು ಇಲ್ಲಿಂದ ಕಷ್ಟಪಟ್ಟು ಕರೆದುಕೊಂಡು ಹೋಗೋದು, ಅಷ್ಟೇ. ಅಲ್ಲಿ ತಮಗೆ ಇಷ್ಟ ಬಂದವರಿಗೆ ಬಹುಮಾನ ಕೊಟ್ಟುಕೊಳ್ಳತಾರೆ. ಅದಕ್ಕೆೆ ಅಲ್ಲಿಗೆ ಮಕ್ಕಳನ್ನು ಕರೆದುಕೊಂಡು ಹೋಗುವುದೇ ಬೇಡ ಅಂಥ ಸುಮ್ಮನಾಗಿದ್ದೇವೆ’ ಎಂದರು.

ಅವರು ಹೇಳುವುದರಲ್ಲಿ ಕೆಲ ವಾಸ್ತವಾಂಶ ಇದೆ ಎಂದೆನಿಸಿದರೂ, ನಾನು ಹೇಳಿದೆ, ‘ಕೆಲವು ಕಡೆ ಹಾಗೇ ಆಗಬಹುದಾದರೂ ಎಲ್ಲಾಾ ಕಡೆ ಅದೇ ರೀತಿ ಆಗುವುದಿಲ್ಲ. ಪ್ರಯತ್ನ ಮಾಡಬೇಕು.’
ಪತ್ರಿಿಕೆಗಳಲ್ಲಿ ಒಂದಲ್ಲಾಾ ಒಂದು ಸ್ಪರ್ಧೆಗಳ ಮಾಹಿತಿ ಇದ್ದೇ ಇರುತ್ತದೆ. ಬಹಳಷ್ಟು ಸ್ಪರ್ಧೆಗಳು ಪೈಪೋಟಿಯಿಂದ ಕೂಡಿರುತ್ತವೆ. ಟಿವಿಗಳಲ್ಲಂತೂ ರಿಯಾಲಿಟಿ ಶೋಗಳು ಪ್ರಾಾರಂಭವಾದ ನಂತರ ಗಾಯನ ಹಾಗೂ ನೃತ್ಯ ಸ್ಪರ್ಧೆಗಳಿಗೆ ಮುಗಿಬೀಳುವವರ ಸಂಖ್ಯೆೆ ಹೆಚ್ಚುತ್ತಿಿದೆ. ಆಯಾ ವಿಭಾಗಗಳಲ್ಲಿ ಹೆಸರು ಮಾಡಿದವರೇ ತೀರ್ಪುಗಾರರಾಗಿ ಭಾಗವಹಿಸಿದ್ದರೂ, ತೀರ್ಪುಗಾರರ ನಿರ್ಣಯಗಳನ್ನು ಪ್ರತಿಭಟಿಸಿ ಹೊರಬರುವವರು ಸಹ ಇದ್ದಾಾರೆ. ಅಂಥ ದೃಶ್ಯಗಳನ್ನು ಪ್ರಸಾರ ಮಾಡಿ ಚಾನೆಲ್‌ಗಳು ತಾವು ಮಹಾ ‘ಸಾಚಾ’ ಎಂದು ತೋರಿಸಿಕೊಳ್ಳುತ್ತಿಿವೆ. ಚಿತ್ರಕಲೆ ಸ್ಪರ್ಧೆಯನ್ನು ಏರ್ಪಡಿಸಿದರಂತೂ ಕಲಾಭವನ, ಆವರಣ ಮಕ್ಕಳಿಂದ ಕಿಕ್ಕಿಿರಿದು ತುಂಬಿರುತ್ತದೆ.

*ಪ್ರತಿಭೆಯನ್ನು ಪ್ರಭಾವದಿಂದ ಹತ್ತಿಿಕ್ಕುತ್ತಿಿರುವ ಮಾತು ಇವತ್ತು ನಿನ್ನೆೆಯದಲ್ಲ. ಈ ಹಿಂದೆ ಸಂದರ್ಶನಾಧಾರಿತ ಉದ್ಯೋೋಗ ಪಡೆಯುವಲ್ಲಿ ಸಮಿತಿಯಲ್ಲಿದ್ದ ಸದಸ್ಯರ ಮೂಲಕ, ಇಲ್ಲವೇ ಆ ಸದಸ್ಯರ ಮೇಲೆ ಪ್ರಭಾವಿ ವ್ಯಕ್ತಿಿ, ರಾಜಕಾರಣಿಗಳಿಂದ ಪ್ರಭಾವ ಬೀರಿ ಮನೆ ಸೇರಿರುವವರ ಸಂಖ್ಯೆೆ ಸಾಕಷ್ಟಿಿದೆ.
ಒಮ್ಮೆೆ ಭಾವಗೀತೆ ಸ್ಪರ್ಧೆಗೆ ತೀರ್ಪುಗಾರನಾಗಿ ಹೋಗಿದ್ದಾಾಗ, ಗ್ರಾಾಮೀಣ ವಿದ್ಯಾಾರ್ಥಿಯೊಬ್ಬರು ಉತ್ತಮವಾಗಿ ಹಾಡಿದ್ದರಿಂದ ಉತ್ತಮ ಅಂಕ ನೀಡಿದೆ. ನನ್ನಂತೆಯೇ ಇನ್ನೊೊಬ್ಬರು ತೀರ್ಪುಗಾರರು ಸಹ ಒಳ್ಳೆೆಯ ಅಂಕಗಳನ್ನು ಆದರೆ, ಮೂರನೇ ತೀರ್ಪುಗಾರರು ತೀರಾ ಕಡಿಮೆ ಅಂಕಗಳನ್ನು ನೀಡಿದ್ದರು. ಪ್ರಶ್ನಿಿಸಿದಾಗ ಹೇಳಿದ್ದು- ‘ರಾಗ ಚೆನ್ನಾಾಗಿದೆ ಅಷ್ಟೇ, ಪದಗಳ ಉಚ್ಚಾಾರಣೆಯಲ್ಲಿ ತುಂಬಾ ತಪ್ಪಿಿತ್ತು ಗೊತ್ತಾಾ’ ಎಂದರು. ಅಭಿಪ್ರಾಾಯ ತೀರ್ಮಾನದ ಸ್ವಾಾತಂತ್ರ್ಯ ಅವರಿಗಿದ್ದುದ್ದರಿಂದ ಸುಮ್ಮನಾದೆ.

ತೀರ್ಪಿನಲ್ಲಿ ಕೆಲವೊಮ್ಮೆೆ ರಾಜಿ ಸೂತ್ರಗಳು ತಲೆ ಹಾಕುತ್ತವೆ. ಮೊದಲೆರಡು ಬಹುಮಾನಗಳು ಒಂದೇ ಶಾಲೆಗೆ ಬಂದರೆ ಮೂರನೇ ಬಹುಮಾನವನ್ನು ಇತರೆ ಶಾಲೆಗೆ ಹಂಚುವ ಉದಾರಿಗಳು, ಸರಕಾರಿ ಖಾಸಗಿ ಶಾಲೆಗಳೆಂದು ವರ್ಗೀಕರಿಸುವವರೂ ಇದ್ದಾಾರೆ. ಬಹುತೇಕ ಖಾಸಗಿ ಶಾಲೆಗಳಲ್ಲಿನ ಮಕ್ಕಳು, ಮಕ್ಕಳು ಅವರಿಗೆ ಪೋಷಕರು, ಶಿಕ್ಷಕರು ಎಲ್ಲಾಾ ಸೌಲಭ್ಯಗಳನ್ನು ಒದಗಿಸಿರುತ್ತಾಾರೆ. ಆದರೆ, ಸರಕಾರಿ ಶಾಲೆಗಳ ಮಕ್ಕಳು ಬಡವರು. ಅವರಲ್ಲಿ ಪ್ರತಿಭೆ ಇದ್ದರೂ, ಸಾಕಷ್ಟು ಅವಕಾಶಗಳು, ಪ್ರೋೋತ್ಸಾಾಹ ದೊರಕುವುದಿಲ್ಲ ಎಂಬುದನ್ನು ಬಹಳಷ್ಟು ಸಂದರ್ಭದಲ್ಲಿ ಗಮನಿಸಿರುತ್ತೇವೆ.

ನೈಜ ಪ್ರತಿಭೆ ಗಟ್ಟಿಿ ಬೀಜದ ರೀತಿ. ಗೊಬ್ಬರ, ನೀರು, ಹವಾಮಾನದ ವೈಪರೀತ್ಯ ಅದರ ಬೆಳವಣಿಗೆಯನ್ನು ಕೊಂಚ ಮಟ್ಟಿಿಗೆ ಕುಂಠಿತಗೊಳಿಸಬಹುದೇ ವಿನಃ ಅವುಗಳ ಬೆಳವಣಿಗೆಯನ್ನು ತಡೆಗಟ್ಟಲಾಗದು. ಅಂತೆಯೇ ಹುಸಿ ಬೀಜಗಳಿಗೆ ಎಲ್ಲಾಾ ಅಂಶಗಳು ಪೂರಕವಾಗಿದ್ದರೂ ಅವು ಬೆಳೆಯಲಾರವು.
ಹಾಗೂ ಕಲಾಕ್ಷೇತ್ರದಲ್ಲಿ ಸಾಧಾರಣ ಪ್ರತಿಭೆಗಳು ಕೊಂಚ ಪ್ರಯತ್ನದಿಂದ ಯಶಸ್ಸನ್ನು ಸಾಧಿಸಿರುವುದುಂಟು. ಹಾಡ್ತಾಾ ಹಾಡ್ತಾಾ ರಾಗ ಎಂಬಂತೆ ರವಿಚಂದ್ರನ್‌ರವರ ಪ್ರಾಾರಂಭದ ಚಿತ್ರಗಳನ್ನು ಗಮನಿಸಿದರೆ, ಇವರು ಚಿತ್ರರಂಗದಲ್ಲಿ ಇಷ್ಟು ದೊಡ್ಡ ಮಟ್ಟಕ್ಕೆೆ ಬೆಳೆದು ಬಂದರೇ ಎನ್ನಿಿಸದೇ ಇರದು. ಚಿತ್ರದಿಂದ ಚಿತ್ರಕ್ಕೆೆ ಅನುಭವ ಗಳಿಸಿಕೊಳ್ಳುತ್ತಾಾ ಜತೆ ಜತೆಗೆ ಅತ್ಯುತ್ತಮ ತಾಂತ್ರಿಿಕತೆ, ಸಂಗೀತ ಮುಂತಾದ ಅಂಶಗಳು ಪೂರಕವಾಗಿ ಚಿತ್ರವನ್ನು ಗೆಲ್ಲಿಸಿದ್ದು ಈಗ ಇತಿಹಾಸ.

ಈ ನಿಟ್ಟಿಿನಲ್ಲಿ ಅನೇಕ ಶಾಲೆಗಳು ಪ್ರವೇಶವನ್ನು ನೀಡುವಾಗ ಹಿಂದಿನ ಶಾಲೆಯಲ್ಲಿ ಅಂಕಗಳನ್ನು ಪರಿಗಣಿಸದೆ ತಾವು ವಿಶೇಷ ಪ್ರವೇಶ ಪರೀಕ್ಷೆಗಳನ್ನು ನಡೆಸಿ ನಂತರ ಅವಕಾಶ ನೀಡುತ್ತವೆ. ಖಾಸಗಿ ಕಂಪನಿಗಳು ನೇಮಕಾತಿ ಮಾಡುವಾಗ ಕ್ಯಾಾಂಪಸ್ ಆಯ್ಕೆೆಯಲ್ಲಿ ಅವರು ಗಳಿಸಿರುವ ಅಂಕಗಳಿಗಿಂತ ಸಂದರ್ಶನದಲ್ಲಿ ಅವರ ಪ್ರತಿಭಾ ಪ್ರದರ್ಶನದ ಮೇಲೆಯೇ ಗಮನ ಇರಿಸುತ್ತವೆ.
ಪ್ರತಿಭೆಯ ಜತೆಗೆ ಅದೃಷ್ಟದ ಪಾತ್ರವೇನೂ ಕಡಿಮೆ ಎನ್ನಿಿಸುವುದಿಲ್ಲ. ‘ಸಾಗರ ಸಂಗಮಂ’ ಚಿತ್ರದ ನಾಯಕ ಬಾಲಕೃಷ್ಣ ಬಡವ ಆದರೆ, ಪ್ರತಿಭಾವಂತ. ಅನೇಕ ಪ್ರಯತ್ನಗಳು ಹಾಗೂ ಪರಿಶ್ರಮ ನಾಯಕಿ ಮಾಧವಿಯ ಬೆಂಬಲದಿಂದಾಗಿ ಅವನ ಪ್ರತಿಭೆಯನ್ನು ಮಟ್ಟದಲ್ಲಿ ಪ್ರಕಾಶಿಸುವ ಸಂದರ್ಭ ದೊರಕುತ್ತದೆ. ಆದರೆ, ಕೊನೆಯ ಗಳಿಗೆಯಲ್ಲಿ ಅದೃಷ್ಟ ಕೈಕೊಟ್ಟು ಆತ ನಿರಾಶನಾಗಿ ಆತನ ಪ್ರತಿಭೆ ಜಗತ್ತಿಿಗೆ ತೋರದೆ ಕಮರಿ ಹೋಗುತ್ತದೆ.

ಅದೃಷ್ಟದ ಪಾತ್ರಕ್ಕೆೆ ರಸಪ್ರಶ್ನೆೆ ಸ್ಪರ್ಧೆ ಮತ್ತೊೊಂದು ಉದಾಹರಣೆ. ಇದರಲ್ಲಿ ಸ್ಪರ್ಧಿಗಳು ಕುಳಿತುಕೊಳ್ಳುವ ಸ್ಥಾಾನಗಳು ಬಹಳಷ್ಟು ಸಂದರ್ಭದಲ್ಲಿ ಯಶಸ್ಸನ್ನು ನಿರ್ದೇಶಿಸುತ್ತವೆ. ಸಾಧಾರಣ ವಿದ್ಯಾಾರ್ಥಿಗಳ ಪಕ್ಕದಲ್ಲಿನ ವಿದ್ಯಾಾರ್ಥಿಗೆ ಪ್ರಶ್ನೆೆಗಳು ಪಾಸ್ ಆಗುವುದರಿಂದ ಬೋನಸ್ ಅಂಕಗಳು ಸಾಕಷ್ಟು ಲಭಿಸುತ್ತವೆ. ಗವಾಸ್ಕರ್‌ರವರು ಕ್ರಿಿಕೆಟ್ ಪ್ರವೇಶದ ಟೆಸ್‌ಟ್‌ ಮ್ಯಾಾಚ್‌ನ ಪ್ರಾಾರಂಭದಲ್ಲಿ ನೀಡಿದ ಕ್ಯಾಾಚನ್ನು ಎದುರಾಳಿ ತಂಡಗಳು ಕೈ ಚೆಲ್ಲಿದ ಲಾಭ ಪಡೆದು, ಕ್ರಿಿಕೆಟ್ ಸಾಮ್ರಾಾಜ್ಯವನ್ನು ಬಹಳಷ್ಟು ವರ್ಷ ಆಳಿದ್ದನ್ನು ನೋಡಿದ್ದೇವೆ. ಅಷ್ಟೇ ಪ್ರತಿಭೆಯಿದ್ದ ವಿನೋದ್ ಕಾಂಬ್ಳಿಿ ಒಂದು ದಿನದ ಕ್ರಿಿಕೆಟ್‌ಗೆ ಮರು ಪ್ರವೇಶ ಪಡೆದ ಸಂದರ್ಭದಲ್ಲಿಯೇ ಬಿದ್ದು ಗಾಯಗೊಂಡು ನಂತರ ಮತ್ತೆೆ ಭಾರತ ತಂಡದಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗಲೇ ಇಲ್ಲ. ಇನ್ನೂ ಚಿತ್ರರಂಗದಲ್ಲಿಯಂತೂ ಯಾರದೋ ಅವಕಾಶ ಮತ್ತಾಾರಿಗೋ ಸೇರಿ ಅವರಲ್ಲಿ ಕೆಲವರು ಸೂಪರ್ ಸ್ಟಾಾರ್‌ಗಳಾದ ಅನೇಕ ಉದಾಹರಣೆಗಳು ಇವೆ.

ಪಕ್ಷಪಾತ ಘಟನೆಗಳು, ಪ್ರತಿಭೆಯನ್ನು ಮುಚ್ಚಲು ಸಾಧ್ಯವಿಲ್ಲ. ಜತೆಗೆ ಇಂಥಹ ಸಂದರ್ಭಗಳು ಅವರಲ್ಲಿ ಹೆಚ್ಚು ಹೆಚ್ಚು ಸಾಧನೆಯ ಕಡೆ ಮುಖ ಮಾಡಿಸುತ್ತವೆ. ಡಿವಿಜಿಯವರ ಕಗ್ಗದ ಸಾಲುಗಳು ಇದನ್ನೇ ಹೇಳುತ್ತವೆ.
ಜಟ್ಟಿಿ ಕಾಳಗದಿ ಗೆಲ್ಲದೊಡೆ ಗರಡಿತ ಸಾಮು
ಪಟ್ಟು ವರಸೆಗಳೆಲ್ಲಾಾ ವಿಫಲವೆನ್ನುವೆಯೇಂ?
ಮುಟ್ಟಿಿ ನೋಡುವನ ಮೈ ಕಟ್ಟು ಕಬ್ಬಿಿಣ ಗಟ್ಟಿಿ
ಗಟ್ಟಿಿತನ ತರಡಿ ಫಲ-ಮಂಕುತಿಮ್ಮ.