Friday, 13th December 2024

ಆಸಿಡ್‌ಗಳ ಬಗ್ಗೆ ಇರೋ ಸಾಮಾನ್ಯ ಜ್ಞಾನ- ಬೇಸಿಕ್ ಸೆನ್ಸ್

ತುಂಟರಗಾಳಿ

ಸಿನಿಗನ್ನಡ

ನಟ ದರ್ಶನ್ ಅವರ ಕ್ರಾಂತಿ ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಆದರೆ ಅದರ ನಿರ್ಮಾಪಕರಾದ ಬಿ. ಸುರೇಶ್ ಮತ್ತು
ಶೈಲಜಾನಾಗ್ ಅವರಿಗೆ ಪ್ರಚಾರದ ವಿಷಯದಲ್ಲಿ ಒಂದಷ್ಟು ತಲೆನೋವುಗಳು ಆಗ್ತಾ ಇರೋದು ನಿಜ. ಅದಕ್ಕೆ ಕಾರಣ ಸ್ವತಃ ನಟ ದರ್ಶನ್ ಅನ್ನೋದು ಎಲ್ಲರಿಗೂ ಗೊತ್ತು. ಅವರ ಮತ್ತು ಮೀಡಿಯಾಗಳ ಮಧ್ಯೆ ನಡೆಯುತ್ತಿರುವ ‘ಕಿರಿಕ್ ಕ್ರಾಂತಿ’
ವಿಷಯ ಹೊಸದೇನೂ ಅಲ್ಲ.

ಆದರೆ ಇತ್ತೀಚಿಗೆ ಟಿವಿ ಮಾಧ್ಯಮಗಳು ದರ್ಶನ್ ಅವರ ಬಗ್ಗೆ ಅವರ ಸಿನಿಮಾಗಳ ಬಗ್ಗೆ ಯಾವ ಸುದ್ದಿನೂ ಮಾಡಲ್ಲ ಅಂತ ಅನಽಕೃತ ವಾಗಿ ನಿರ್ಧಾರ ತೆಗೆದುಕೊಂಡಿವೆ. ಹಾಗಾಗಿ ಪ್ರತಿಷ್ಠಿತ ಟಿವಿ ಚಾನೆಲ್‌ಗಳಲ್ಲಿ ದರ್ಶನ್ ಅವರ ಯಾವುದೇ ಸುದ್ದಿ ಬರ್ತಾ ಇಲ್ಲ. ದರ್ಶನ್ ಕೂಡಾ ನನಗೆ ಮಾಧ್ಯಮಗಳು ಬೇಕಿಲ್ಲ, ಮಾಧ್ಯಮಗಳಿಗೆ ನಾನು ಬೇಕು ಅಷ್ಟೇ ಅನ್ನೋ ಮಾತುಗಳನ್ನು ಆಡುತ್ತಲೇ ಇzರೆ. ಆದರೆ ಪಾಪ ಸಿನಿಮಾದ ಪ್ರಚಾರ ಆಗಬೇಕಲ್ಲ. ಅದಕ್ಕೆ ದರ್ಶನ್ ಅವರು ನಂಬಿಕೊಂಡಿರೋದು ತಮ್ಮ ಅಭಿಮಾನಿಗಳನ್ನು ಮತ್ತು ಸಾಮಾಜಿಕ ಜಾಲತಾಣಗಳು ಮತ್ತು ಯೂಟ್ಯೂಬರ್‌ಗಳನ್ನ. ಹಾಗಾಗಿ ಕ್ರಾಂತಿ ಸಿನಿಮಾದ ಪ್ರಚಾರಕ್ಕಾಗಿ ಯೂಟ್ಯೂಬರ್‌ಗಳನ್ನೇ ಕರೆದು ಪತ್ರಿಕಾಗೋಷ್ಟಿ ಮಾಡಿದ್ದಾರೆ.

ಆದರೆ, ಅಲ್ಲಿಯವರೆಗೂ ದರ್ಶನ್ ಬಗ್ಗೆ ಬರೆಯಲ್ಲ ಅಂತಿದ್ದ ಕೆಲವು ಮಾಧ್ಯಮಗಳು ಅಲ್ಲಿಗೆ ಹಿತ್ತಲ ಬಾಗಿಲಲ್ಲಿ ಹೋಗಿ ಬಂದಿದ್ದೂ ಉಂಟು. ಮುಂದೇನಾಗುತ್ತೋ ಗೊತ್ತಿಲ್ಲ. ಈ ದರ್ಶನ್ ಮತ್ತು ಮೀಡಿಯಾ ವಾರ್ ಯಾವಾಗ ಮುಗಿಯುತ್ತೋ ಗೊತ್ತಿಲ್ಲ. ಜನವರಿಯಲ್ಲಿ ಸಿನಿಮಾ ರಿಲೀಸ್ ಇದೆ. ಆದರೆ ಸದ್ಯಕ್ಕೆ ಚಿತ್ರದ ನಿರ್ಮಾಪಕರಿಗೆ ಪ್ರಚಾರದ ವರಿ ಮಾತ್ರ ಖಂಡಿತಾ ಇದೆ.

ಲೂಸ್ ಟಾಕ್
ನರೇಂದ್ರ ಮೋದಿ (ಕಾಲ್ಪನಿಕ ಸಂದರ್ಶನ)
ಏನ್ ಸಾರ್, ನೀವ್ ಬಂದ್ರೆ ಬೆಂಗ್ಳೂರ್ ರಸ್ತೆಗಳೆ ರಿಪೇರಿ ಆಗಿಬಿಡ್ತಾವಲ್ಲ?
-ಮತ್ತೆ, ಆನೆ ನಡೆದಿದ್ದೇ ಹಾದಿ ಅಂತ ನನ್ನ ನೋಡಿನೇ ಹೇಳಿದ್ದು ಗೊತ್ತಾ?

ಅದ್ಸರಿ ನೀವ್ ಬಂದಿರೋ ಸಮಾರಂಭಕ್ಕೆ ಬಂದಿದ್ದ ಜನರಿಗೆ ಊಟ ಕೊಡೋಕೆ ಒಂದ್ ಪೇಪರ್ ಪ್ಲೇಟೂ ಸಿಗಲಿಲ್ವಾ, ಕಾರ್ಡ್
ಬೋರ್ಡ್ ಮೇಲೆ ಊಟ ಕೊಡ್ತಾರಾ ಯಾರಾದ್ರೂ?  
-ಹೊಟ್ಟೆ ತುಂಬೋದು ಮುಖ್ಯನಾ, ಇಲ್ಲ ತಟ್ಟೆ ಮುಖ್ಯನಾ? ಸುಮ್ನೆ ಹೊಟ್ಟೆ ಉರಿಗೆ ವಿರೋಧಿಗಳು ಏನೇನೋ ಮಾತಾಡ್ತಾರೆ ಬಿಡಿ.

ಅದ್ಸರಿ, ನೀವು ಚುನಾವಣೆಗಳು ಹತ್ರ ಇದ್ದಾಗ ಮಾತ್ರ ಕರ್ನಾಟಕಕ್ಕೆ ಬರ್ತೀರಾ ಅಂತ ಹೇಳ್ತಾರಲ್ಲ?
-ಊರಿಗೆ ಉಪಕಾರಿ ಆಗೋಣ ಅಂತ ಬಂದ್ರೆ ಕೆಲವರಿಗೆ ಅವರ ಊರಿಗೆ ಬಂದ್ರೆ ಉರಿ. ಏನ್ ಮಾಡೋಕಾಗುತ್ತೆ?

ಸರಿ ನಿಮ್ಮ ಅಧಿಕಾರದ ಅವಧಿ ಮುಗೀತಾ ಬಂತು. ಪ್ರೆಸ್ ಮೀಟ್ ಮಾಡೋ ಯೋಚನೆನೇ ಇಲ್ವಾ ನಿಮಗೆ?
-ಪ್ರೆಸ್ ಮೀಟ್ ಮಾಡೋದು, ಪ್ರೆಸ್ಟೀಜ್ ವಿಷ್ಯ ಏನಲ್ಲ ಬಿಡಿ. ಬೇಕಿದ್ರೆ ಮುಂದಿನ ಸಲ ಪ್ರಧಾನಿ ಆಗುವಾಗ ಪತ್ರಕರ್ತರ ಹೆಸರ ಪ್ರಮಾಣವಚನ ತಗೋತೀನಿ ಬಿಡಿ. ಪ್ರಧಾನಿ ಪಾತ್ರದಲ್ಲಿ ತುಂಬಾ ಚೆನ್ನಾಗಿ ಆಕ್ಟ್ ಮಾಡ್ತಾ ಇದ್ದೀರಾ, ಜೊತೆಗೆ ಕ್ಯಾಮೆರಾ ಹುಚ್ಚೂ ಇದೆ.

ನೀವ್ಯಾಕೆ ಸಿನಿಮಾದಲ್ಲಿ ಆಕ್ಟ್ ಮಾಡಬಾರದು? 

-ಖಂಡಿತಾ ಮಾಡ್ತೀನಿ. ದಿನಕ್ಕೆ ೧೮ ಗಂಟೆ ಕಾಲ್ ಶೀಟ್ ಕೊಡ್ತೀನಿ. ಆದ್ರೆ ಪ್ರೆಸ್ ಮೀಟ್‌ಗೆ ಮಾತ್ರ ಕರೆಯಂಗಿಲ್ಲ ಅಷ್ಟೇ..

ನೆಟ್ ಪಿಕ್ಸ್
ಸೋಮು ಒಬ್ಬ ಪ್ರಖ್ಯಾತ ಡಾಕ್ಟರ್ ಆಗಿದ್ದ. ಅವನು ತನ್ನ ರೋಗಿಗಳ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡಿದ್ದ. ಯಾರಿಗೆ ಎಷ್ಟೇ ಹೊತ್ತಿಗೆ ಹುಷಾರಿಲ್ಲದೇ ಇರಲಿ, ಟ್ರೀಟ್ ಮೆಂಟ್ ಕೊಡೋಕೆ ಹಿಂದೆ ಮುಂದೆ ನೋಡ್ತಾ ಇರಲಿಲ್ಲ. ಅದಕ್ಕೇ ತನ್ನ ಮನೆ ಮುಂದೆ,
೨೪ ಗಂಟೆ ರೋಗಿಗಳನ್ನು ನೋಡಲಾಗುತ್ತದೆ ಅಂತ ಬೋರ್ಡ್ ಹಾಕಿಕೊಂಡಿದ್ದ. ಅಂಥ ಡಾಕ್ಟರ್ ಸೋಮು ಮನೆಯಲ್ಲಿ ಒಂದು ದಿನ ಮಧ್ಯರಾತ್ರಿ ಕಾಲಿಂಗ್ ಬೆಲ್ ಸದ್ದಾಯಿತು.

ನಿದ್ದೆ ಮಾಡುತ್ತಿದ್ದ ಸೋಮು ಯಾರಪ್ಪಾ ಇಷ್ಟು ಹೊತ್ತಲ್ಲಿ ಅಂತ ಎದ್ದು ಹೋಗಿ ಬಾಗಿಲು ತೆರೆದ. ಹೊರಗೆ ಖೇಮು ನಿಂತಿದ್ದ. ಏನಾಗಬೇಕಿತ್ತಪ್ಪ ಅಂತ ಕೇಳಿದ್ದಕ್ಕೆ ಖೇಮು ಹೇಳಿದ, ಡಾಕ್ಟ್ರೇ, ನನ್ನ ಹೆಂಡತಿಗೆ ಹುಷಾರಿಲ್ಲ, ಯಾಕೋ ಒಂಥರಾ ಆಡ್ತಾ ಇದ್ದಾಳೆ, ನೀವು ಈಗಲೇ ಅವಳಿಗೆ ಟ್ರೀಟ್ ಮೆಂಟ್ ಕೊಡಬೇಕು ಅಂದ. ಅದಕ್ಕೆ ಸರಿ ನಿನ್ನ ಹೆಂಡ್ತಿ ಎಲ್ಲಿ ಅಂತ ಸೋಮು ಕೇಳಿದ್ದಕ್ಕೆ ಅವಳು ಮನೆಯಲ್ಲಿದ್ದಾಳೆ. ಅವಳನ್ನ ಇಲ್ಲಿಗೆ ಕರ್ಕೊಂಡ್ ಬಂದು ತೋರಿಸಿದ್ರೆ ಎಷ್ಟು ಚಾರ್ಜ್ ಮಾಡ್ತೀರ, ನೀವೇ ನಮ್ಮನೆಗೆ ನಿಮ್ಮ ಕಾರಲ್ಲಿ ಬಂದು ಟ್ರೀಟ್ ಮೆಂಟ್ ಕೊಡೋದಾದ್ರೆ ಎಷ್ಟು ಚಾರ್ಜ್ ಮಾಡ್ತೀರ ಅಂತ ಕೇಳಿದ.

ಅದಕ್ಕೆ ಡಾಕ್ಟರ್ ಸೋಮು, ನೋಡಪ್ಪಾ, ನೀನು ಆಕೆನಾ ಕರ್ಕೊಂಡ್ ಬಂದ್ರೆ, ೩೦೦ ರುಪಾಯಿ, ನನ್ನ ಕಾರಲ್ಲಿ ನಾನೇ ನಿಮ್ಮನೆಗೆ ಬಂದು ನೋಡಬೇಕು ಅಂದ್ರೆ ೫೦೦ ರುಪಾಯಿ ಅಂದ. ಸರಿ, ನಾನು ಹೋಗಿ ಕರ್ಕೊಂಡ್ ಬರೋದ್ ಲೇಟ್ ಆಗುತ್ತೆ, ನೀವೇ ಬಂದುಬಿಡಿ ಅಂತ ಡಾಕ್ಟರ್‌ನ ಕರ್ಕೊಂಡ್ ಹೋದ ಖೇಮು. ಡಾಕ್ಟರ್ ಸೋಮು ಕಾರಲ್ಲಿ ಇಬ್ಬರೂ ಖೇಮು ಮನೆ ತಲುಪೋ ಹೊತ್ತಿಗೆ ತುಂಬಾ ತಡವಾಗಿತ್ತು.

ಕಾರಿನಿಂದ ಇಳಿದವನೇ ಖೇಮು, ಸರಿ ಡಾಕ್ಟರ್ ತಗೊಳ್ಳಿ ನಿಮ್ಮ ೫೦೦ ರೂಪಾಯಿ, ತುಂಬಾ ಥ್ಯಾಂಕ್ಸ್, ಬರ್ತೀನಿ
ಅಂತ ಹೊರಟ. ಡಾಕ್ಟರ್‌ಗೆ ಆಶ್ಟರ್ಯ. ಅಲ್ಲಪ್ಪಾ, ನಿನ್ನ ಹೆಂಡ್ತಿಗೆ ಹುಷಾರಿಲ್ಲ ಅಂದ್ಯಲ್ಲ ಅಂತ ಕೇಳಿದ್ದಕ್ಕೆ ಖೇಮು ಹೇಳಿದ, ಹಂಗೇನಿಲ್ಲ ಡಾಕ್ಟರ್, ಅವಳು ಚೆನ್ನಾಗೇ ಇದ್ದಾಳೆ. ನಾನು ಸ್ವಲ್ಪ ಕೆಲ್ಸ ಇದೆ ಅಂತ ನಿಮ್ ಕಡೆ ಏರಿಯಾಗೆ ಬಂದಿದ್ದೆ. ವಾಪಸ್ ಮನೆಗೆ ಹೊರಡೋದು ತಡ ಆಯ್ತು. ಓಲಾ ಬುಕ್ ಮಾಡೋಣ ಅಂತ ಹೋದ್ರೆ ಅದರಲ್ಲಿ ೮೦೦ ರುಪಾಯಿ ತೋರಿಸಿತು. ಅದಕ್ಕೇ ಅದಕ್ಕಿಂತ ನೀವೇ ವಾಸಿ ಅಂತ ನಿಮ್ಮನ್ನೇ ಕರ್ಕೊಂಡ್ ಬಂದೆ. ತುಂಬಾ ಥ್ಯಾಂಕ್ಸ್.

ಲೈನ್ ಮ್ಯಾನ್

‘ಐಟಿ ಸಿಟಿ’ ಬೆಂಗಳೂರಲ್ಲಿ ಚಳಿ ಯಾಕೆ ಜಾಸ್ತಿ ಇದೆ?

-ಯಾಕಂದ್ರೆ ‘ಕ್ಲೌಡ್ ಸ್ಟೋರೇಜ’ ಜಾಸ್ತಿ ಆಗಿದೆ.
ಗಾದೆ ಮಾತು ಎಲ್ಲಾ ಟೈಮಲ್ಲೂ ನಿಜ ಆಗಲ್ಲ. ಖಾಯಿಲೆ ಬಂದು ಪ್ರೈವೇಟ್ ಆಸ್ಪತ್ರೆಗೆ ಅಡ್ಮಿಟ್ ಆಗೋಕೆ ದುಡ್ಡಿಲ್ಲ ಅಂದಾಗ
-‘ಕಾಸಿಲ್ಲದಿದ್ರೆ ಕೈಲಾಸ’

ಸೈಂಟಿಫಿಕ್ ಪನ್ ‘ಆಸಿಡ್’ಗಳ ಬಗ್ಗೆ ಇರೋ ಸಾಮಾನ್ಯ ಜ್ಞಾನ
-‘ಬೇಸಿಕ್’ ಸೆ

ಪಕ್ಷ ಹಾಳಾಗಿ ಹೋಗಲಿ, ಅಧಿಕಾರ ಸಿಗುತ್ತೆ ಅಂದ್ರೆ ಯಾವ ಪಕ್ಷದ, ಯಾರ ‘ಕಾಲಿಗೆ’ ಬೇಕಾದ್ರೂ ಬೀಳ್ತಿವಿ ಅನ್ನೋರ ಪಾಲಿಸಿ
-ನಿಷ್ಪಕ್ಷ‘ಪಾದ’
ಯಾವಾಗ್ಲೂ ಕಮಲ, ಕಮಲ ಅನ್ನೋ ಬಿಜೆಪಿ ಅಭಿಮಾನಿಗಳಿಗೆ ಗೊತ್ತಿರೋ ಪದ
-ಪದಾರವಿಂದ
ಎಲ್ಲರೂ ಬರೆಯೋ ಪದಗಳು ಸರಿ ಇವೆಯೋ ಇಲ್ಲವೋ ಅಂತ ಚೆಕ್ ಮಾಡುವವನು
-ಪದಾಧಿಕಾರಿ
ಪದಗಳನ್ನೇ ನಂಬಿಕೊಂಡಿರುವ ಬರಹಗಾರನಿಗೆ ಇರುವ ಅಭಯ
-‘ಪದ’ರಕ್ಷೆ
ಅತಿ ಹೆಚ್ಚು ಪದಗಳು ಗೊತ್ತಿರುವ ವ್ಯಕ್ತಿಯ ದಾಖಲೆ
– ‘Word’ record
ಅವನಿಗೆ ಕೊಡುವ ಬಹುಮಾನ
-‘ವರ್ಡ್’ ಕಪ್
ಒಳ್ಳೆಯ ‘ವೊಕ್ಯಾಬ್ಯುಲರಿ’ ಹೊಂದಿರುವ ವ್ಯಕ್ತಿ
-‘ಪದ’ವೀಧರ
ಗಂಡ ಹೆಂಡತಿ ಮನೆ ಕೆಲಸದಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡಿದರೆ, ಅವರು
-‘Maid’ for each other