Wednesday, 11th December 2024

ಅಧ್ಯಾತ್ಮ ಪುನರುತ್ಥಾನಕ್ಕೆ ಸಂಘರ್ಷ ನಾಂದಿಯಾಗಲಿ

ಸ್ವಾಸ್ಥ್ಯ ಸಂಪದ

ಡಾ.ಎಸ್.ಪಿ.ಯೋಗಣ್ಣ

yoganna55@gmail.com

ಧರ್ಮಗಳು ಮಾನವ ನಿರ್ಮಿತ. ಅಧ್ಯಾತ್ಮಿಕ ಸ್ಥಿತಿಯನ್ನು ತಲುಪಲು ಮಾನವ ಕಂಡುಕೊಂಡ ಭಿನ್ನ ಹಾದಿಗಳಿವು. ದುರದೃಷ್ಟವ ಶಾತ್ ಧರ್ಮಗಳಲ್ಲಿ ಅವೈಜ್ಞಾನಿಕ ಆಚರಣೆಗಳು, ಮೇಲು-ಕೀಳೆಂಬ ಭಾವನೆಗಳು, ಗುಂಪುಗಾರಿಕೆ, ಉಡುಗೆ ತೊಡುಗೆಗಳು, ಲಾಂಛನಗಳು, ಆಹಾರ ನಿಯಮಗಳು, ಹೀಗೆ ಭಿನ್ನ ಸಾಮಾಜಿಕ ಕಟ್ಟುಪಾಡುಗಳನ್ನು ಒಳಗೊಂಡಿದ್ದು, ಮಾನವ ಕುಲವನ್ನು ಛಿದ್ರವಾಗಿಸಿ ದ್ವೇಷದ ವಿಷಬೀಜವನ್ನು ಬಿತ್ತಿ, ಅಶಾಂತಿಗೆ ನಾಂದಿಯಾಗಿವೆ.

ವಿಶ್ವದ ಮಾನವ ಕುಲ ಇಂದು ಧರ್ಮಗಳು, ಜಾತಿಗಳು, ದೇವರುಗಳ ಅಡಿಯಲ್ಲಿ ವರ್ಗೀ ಕರಣವಾಗಿ, ಆಯಾಯ ಗುಂಪಿನ ಸಮುದಾಯಗಳ ಉಡುಪುಗಳೂ ಭಿನ್ನವಾಗಿ ಬಾಹ್ಯ ವಾಗಿಯೇ ಮಾನವ ಕುಲದಲ್ಲಿ ಛಿದ್ರತೆಯನ್ನು ಗುರುತಿಸಬಹುದಾಗಿದೆ. ಇಷ್ಟಕ್ಕೆ ಸಾಲ ದೆಂಬಂತೆ ಅವು ತಾ ಮೇಲು ನಾ ಮೇಲು ಎಂದು ಘರ್ಷಣೆಗಿಳಿದು ಮನಸ್ಸುಗಳೂ ಒಡೆದು ಹೋಗಿ ಸಮಾಜದಲ್ಲಿ ಅಶಾಂತಿ ನೆಲೆಸಿ. ಪ್ರಪಂಚಾದ್ಯಂತ ಮಾನವಕುಲ ಇಂದು ರೋಗಗ್ರಸ್ತವಾಗಿದೆ. ಪ್ರಸ್ತುತ ಈ ವಿಷಮ ಸ್ಥಿತಿಯ ಉಗಮ, ಬೆಳವಣಿಗೆ, ಪರಿಣಾಮಗಳು ಮತ್ತು ಚಿಕಿತ್ಸಾ ಮಾರ್ಗಗಳ ಬಗ್ಗೆ ಬೆಳಕು ಚೆಲ್ಲುವ ಅಂಕಣವಿದು.

ಧರ್ಮಗಳ ಉಗಮ: ಸುಮಾರು 14 ಬಿಲಿಯನ್ ವರ್ಷಗಳ ಹಿಂದೆ ರೂಪು ತಾಳಿದ ಸೃಷ್ಟಿಯಲ್ಲಿ ಸುಮಾರು 5-7 ಮಿಲಿಯನ್ ವರ್ಷಗಳ ಹಿಂದೆ ಪ್ರಾರಂಭವಾದ ಮಾನವ ಕುಲ ಹಂತಹಂತವಾಗಿ ದೈಹಿಕವಾಗಿ ಮತ್ತು ಮಾನಸಿಕವಾಗಿ ವಿಕಾಸಗೊಂಡು ಪ್ರಸ್ತುತ ಆಧುನಿಕ ಹಂತ 2ಲಕ್ಷ ವರ್ಷಗಳ ಹಿಂದೆ ಉಗಮಿಸಿ ಈ ಹಂತ ತಲುಪಿದೆ ಎಂದು ಅಂದಾಜಿಸಲಾಗಿದೆ. ಮೊಟ್ಟ ಮೊದಲು ಆಫ್ರಿಕಾದಲ್ಲಿ ಜನ್ಮ ತಾಳಿದ ಮಾನವ ಸಂತತಿ ಕ್ರಮೇಣ ಎಲ್ಲೆಡೆ ಹರಡಿದೆ. ಆದಿ ಮಾನವ ಪ್ರಕೃತಿಗೆ ಹತ್ತಿರವಾಗಿದ್ದು, ಪ್ರಕೃತಿಯ ಸಹಜ ಧರ್ಮಕ್ಕನು ಗುಣವಾಗಿ ಬದುಕನ್ನು ರೂಪಿಸಿಕೊಂಡು ಪಂಚೇಂದ್ರಿಯಗಳಾಧರಿತ ಅವಶ್ಯಕ, ಸಹಜ ಆಸೆಗಳನ್ನು ಮಾತ್ರ ರೂಢಿಸಿಕೊಂಡು, ಸಂತೋಷವಾಗಿ ಬದುಕಿ ಸಂತಾನೋತ್ಪತ್ತಿಯನ್ನು ಮುಂದುವರಿಸಿ ಅಂತ್ಯವಾಗುತ್ತಿದ್ದ.

ಅವನಲ್ಲಿ ಯಾವ ಜಾತಿ, ಧರ್ಮ ಮತ್ತು ಭೇದಗಳೂ ಇರಲಿಲ್ಲ. ಪ್ರಕೃತಿ ಧರ್ಮವೇ ಅವನ ಜೀವನಶೈಲಿಯಾಗಿತ್ತು. ಇಂದು ಸಹ
ಬುಡಕಟ್ಟು ಜನಾಂಗಗಳಲ್ಲಿ ಇದನ್ನು ಗುರುತಿಸಬಹುದು. ಮನುಷ್ಯನ ಮನಸ್ಸು ವಿಕಾಸಗೊಂಡಂತೆ ಸೃಷ್ಟಿಯ ರಚನೆಯನ್ನು ಅರ್ಥಮಾಡಿಕೊಳ್ಳತೊಡಗಿದ. ಸೃಷ್ಟಿಯಲ್ಲಿರುವವುಗಳನ್ನು ಮತ್ತಷ್ಟು ಚೆನ್ನಾಗಿ ಉಪಯೋಗಿಸಿಕೊಂಡು ಬದುಕನ್ನು ಮತ್ತಷ್ಟು ಹಸನು ಮಾಡಿಕೊಳ್ಳುತ್ತ ಹಲವಾರು ಬಗೆಯ ನಾಗರಿಕತೆಗಳ ಉಗಮಕ್ಕೆ ನಾಂದಿಯಾಯಿತು.

ಸನಾತನ ಧರ್ಮದ ಉದಯ: ಮಾನವ ಸಂತತಿಯಲ್ಲಿ ಇಂದಿನ ಪಾಶ್ಚಿಮಾತ್ಯ ಏಷ್ಯದಲ್ಲಿ ಕ್ರಿ.ಪೂ. 3300-750ರಲ್ಲಿ ಪ್ರಾರಂಭ ವಾದ ಮೆಸಪೂಟೋಮಿಯ ನಾಗರಿಕತೆ ಅತ್ಯಂತ ಪ್ರಾಚೀನ ನಾಗರಿಕತೆಯಾಗಿದ್ದು, ಅಂದಿನ ಭಾರತದ ಇಂದಿನ ಪಾಕಿಸ್ತಾನ ದಲ್ಲಿರುವ ಇಂಡಸ್(ಸಿಂಧೂ) ನದಿ ದಡದಲ್ಲಿ ಕ್ರಿ.ಪೂ.2500-750ರಲ್ಲಿ ಪ್ರಾರಂಭವಾದ ಇಂಡಸ್ ಕಣಿವೆ ನಾಗರಿಕತೆ ಭಾರತದ ಅತ್ಯಂತದ ಪ್ರಾಚೀನ ನಾಗರಿಕತೆ. ತದ ನಂತರ ಅದು ಕ್ರಮೇಣ ಹಿಂದೂ ಧರ್ಮವಾಗಿ ಮಾರ್ಪಾಡಾಯಿತು.

ಪ್ರಾಚೀನದ ಬಹುಪಾಲು ನಾಗರಿಕತೆಗಳು ಸೃಷ್ಟಿ ಧರ್ಮಕ್ಕೆ ಅನುಗುಣವಾಗಿದ್ದು, ಮಾನವ ಕುಲ ಪ್ರೀತಿ- ವಾತ್ಸಲ್ಯಗಳಿಂದ ಸೃಷ್ಟಿಯೊಡನೆ ಅನಾಭಾವವಾಗಿ ಜೋಡಿಸಿಕೊಂಡಿದ್ದನ್ನು ಪ್ರತಿಯೊಂದು ಪ್ರಾಚೀನ ನಾಗರಿಕತೆಯಲ್ಲಿಯೂ ಗುರುತಿಸಬಹು ದಾಗಿದೆ. ಇವೆಲ್ಲವೂ ಮಾನವ ಕುಲದ ನೆಮ್ಮದಿಗೆ, ಉಳಿವಿಗೆ ಮತ್ತು ಸೃಷ್ಟಿಯ ಪುರೋಭಿವೃದ್ಧಿಗೆ ಪೂರಕವಾಗಿದ್ದವು.
ಉಡುಗೆ-ತೊಡುಗೆಗಳು ಸಹ ಆಯಾಯ ಭೌಗೋಳಿಕ ಪ್ರದೇಶದ ತಾಪಮಾನ ಮತ್ತು ವೃತ್ತಿಗೆ ಆಧಾರವಾಗಿ ಅನುಕರಣೆಯಾಗು ತ್ತಿದ್ದವು. ಸುಮಾರು ಕ್ರಿ.ಪೂ.1500ರವರೆಗೆ ಮಾನವ ಕುಲ ಒಗ್ಗಟ್ಟಾಗಿದ್ದು, ಜಾತಿ, ಧರ್ಮಗಳ ಭೇದವಿಲ್ಲದೆ, ಸೃಷ್ಟಿಧರ್ಮದ ಪಾಲನೆ ಮಾಡುತ್ತಿದ್ದನ್ನು ಇತಿಹಾಸದಲ್ಲಿ ಗುರುತಿಸಬಹುದು.

ಹಿಂದೂಧರ್ಮದ ಉಗಮ: ಕ್ರಿ. ಪೂ 1500ರಲ್ಲಿ ಆರ್ಯರು ಇರಾನ್‌ನಿಂದ ಭಾರತಕ್ಕೆ ಬಂದ ನಂತರ ಅಂದಿಗೇ ಅವರು ಬುದ್ಧಿವಂತರಾಗಿದ್ದರು. ತಮ್ಮ ಸ್ವಾರ್ಥಕ್ಕನುಗುಣವಾಗಿ ವೃತ್ತಿ ಆಧಾರದ ಮೇಲೆ ಮೊದಲು ಮಾನವ ಕುಲವನ್ನು ಒಡೆಯಲಾ ರಂಭಿಸಿದರು. ಕ್ರಮೇಣ ಮೇಲು ಕೀಳೆಂಬ ಸ್ತರಗಳಲ್ಲಿ ಮಾನವ ಕುಲವನ್ನು ವಿಭಜಿಸಿ ಪ್ರೀತಿ ಹಂಚಿಕೆಯೂ ಜಾತಿ ಆಧಾರದ ಮೇಲೆಂಬ ಸಾಮಾಜಿಕ ನಡವಳಿಕೆ ಜಾರಿಗೆ ಬಂದು ಅದು ಕ್ರಮೇಣ ಧರ್ಮಕ್ಕೂ ಹೊಕ್ಕಿತು. ವೇದದ ಆಧಾರದ ಮೇಲಿದ್ದ ಸರ್ವರನ್ನೂ ಪ್ರೀತಿಸುವ ಸನಾತನ ಧರ್ಮ, ಆನಂತರ ಜಾತಿ ಆಧಾರದ ಹಿಂದೂ ಧರ್ಮವಾಯಿತು.

ದೇವರುಗಳ ಸೃಷ್ಟಿ: ವಿಶ್ವವನ್ನು ಸೃಷ್ಟಿಸಿ ನಿಯಂತ್ರಿಸುತ್ತಿರುವ ವೈಜ್ಞಾನಿಕ ಅತೀತ ಶಕ್ತಿಯನ್ನು ದೇವರು ಇತ್ಯಾದಿ ಹೆಸರು ಗಳಿಂದ ಕರೆಯುವ ಪರಿಪಾಠ ಪ್ರಾರಂಭವಾಯಿತು. ಅವರವರಿಗೆ ತಿಳಿದಂತೆ ಹಿಂದೂ ಧರ್ಮದಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರ ಎಂಬ ಮೂಲ ದೇವರುಗಳು, ಇಸ್ಲಾಂನಲ್ಲಿ ಅಲ್ಲ, ಆನಂತರ, ಕ್ರಮೇಣ ಅಸಂಖ್ಯಾತ ನಾಮಾಂಕಿತದ ದೇವರುಗಳನ್ನು ಸೃಷ್ಟಿ ಮಾಡಿಕೊಂಡು, ಅವುಗಳ ಮೂಲಕ ಅತೀತ ಶಕ್ತಿಯನ್ನು ಆರಾಧಿಸುವ ಮತ್ತು ಅದಕ್ಕೆ ಕೃತಜ್ಞತೆ ಸಲ್ಲಿಸುವ ಪರಿಪಾಠ ಪ್ರಾರಂಭ ವಾಯಿತು. ಸೃಷ್ಟಿಯಲ್ಲಿರುವ ಎಲ್ಲವುಗಳೂ ಅತೀತ ಶಕ್ತಿ ದೈವತ್ವದ ಕಣವೆಂದು, ಅವುಗಳಲ್ಲಿ ಕೆಲವುಗಳನ್ನು ಪೂಜಿಸುವ ಪರಿಪಾಠ (ಸೂರ್ಯ, ಚಂದ್ರ, ಪ್ರಾಣಿಗಳು, ನದಿಗಳು, ಮರಗಳು ಇತ್ಯಾದಿ)ಗಳನ್ನು ಹುಟ್ಟು ಹಾಕಲಾಯಿತು. ಈ ಕಾರಣಗಳಿಂದಾಗಿ ಅಸಂಖ್ಯಾತ ದೇವರುಗಳೂ ಹುಟ್ಟಿಕೊಂಡರು.

ಇದಲ್ಲದೆ ಬದುಕುವ ಜೀವನ ಶೈಲಿಯ ನ್ನು ಪ್ರಚಾರ ಮಾಡುವ ಮಾನವರೂ ಹುಟ್ಟಿ ಕೊಂಡು, ಹಲವಾರು ಧರ್ಮಗಳ ಸ್ಥಾಪನೆಗೆ
ಕಾರಣಕರ್ತರಾದರು. ಇವರಲ್ಲಿ ಕೆಲವರು ದೇವರಾದರು, ಅದರ ಪ್ರತಿನಿಽಗಳಾದರು. ಧರ್ಮಗಳು ಮಾನವ ನಿರ್ಮಿತ. ಅವರವರ ಸ್ವಾರ್ಥಕ್ಕನುಗುಣವಾಗಿ ಹಲವಾರು ಅವೈಜ್ಞಾನಿಕ ಅಧ್ಯಾತ್ಮಿಕ ಚಿಂತನೆಗಳಿಲ್ಲದ ಅಂಶಗಳನ್ನು ಧರ್ಮಗಳಿಗೆ ಅಂಟಿಸಿದರು. ಮಾನವಕುಲ ಕ್ರಮೇಣ ಧರ್ಮಗಳು, ದೇವರುಗಳು ಮತ್ತು ಜಾತಿಗಳ ಹೆಸರಿನಲ್ಲಿ ಮೊದಲು ಒಡೆಯಿತು.

ಇವೆಲ್ಲವುಗಳ ಆಧಾರದ ಮೇಲೆ ಸುಮಾರು 35000 ವರ್ಷಗಳ ಹಿಂದೆ ಗುಂಪು ಗುಂಪುಗಳಾಗಲು ಪ್ರಾರಂಭವಾದ ಮಾನವಕುಲ
ಇಂದು ಛಿದ್ರ ಛಿದ್ರವಾಗಿ ಹೋಗಿ ತಾ ಮೇಲು ನಾ ಮೇಲು ಎಂದು ಒಬ್ಬರನ್ನೊಬ್ಬರು ದ್ವೇಷಿಸುವ ಮಟ್ಟಿಗೆ ಪರಿಸ್ಥಿತಿ ನಿರ್ಮಾಣ ವಾಗಿರುವುದು ದುರದೃಷ್ಟಕರ. ಹಿಂದೂ ಧರ್ಮಕ್ಕಂಟಿಕೊಂಡಿದ್ದ ಮೇಲು ಕೀಳಿನ ಜಾತಿ ವ್ಯವಸ್ಥೆ, ಅವೈಜ್ಞಾನಿಕ ಶೋಷಣಾತ್ಮಕ ಧರ್ಮಾಚರಣೆಗಳ ವಿರುದ್ಧ ಕ್ರಿ.ಪೂ. 4ನೇ ಶತಮಾನದಲ್ಲಿ ಪ್ರಪ್ರಥಮಬಾರಿಗೆ ದೇವರು, ದೇವಸ್ಥಾನ, ಧರ್ಮಾಚರಣೆಗಳ ಸಿಡಿದೆದ್ದ ಬುದ್ಧ, ಬೌದ್ಧ ಧರ್ಮದ ಉಗಮಕ್ಕೆ ಕಾರಣಕರ್ತನಾದ. ಮಾನವೀಯತೆಯೇ ಬೌದ್ಧಧರ್ಮದ ಮೂಲತತ್ವ.

ಅದೇ ಕಾಲದಲ್ಲಿ ಮಹಾವೀರ ಸಿಡಿದೆದ್ದು, ಅಂಹಿಸಾತತ್ವದ ಜೈನ ಧರ್ಮದ ಉಗಮಕ್ಕೆ ನಾಂದಿಹಾಡಿದ. ಇವೆರಡು ಧರ್ಮಗಳೂ
ಭಾರತದ ಸನಾತನ ಧರ್ಮದ ಕವಲುಗಳೇ. ವೇದ-ಉಪನಿಷತ್‌ಗಳಲ್ಲಿದ್ದ ಅಧ್ಯಾತ್ಮಿಕ ಆರೋಗ್ಯವನ್ನು ಗಳಿಸಲು ಪ್ರಮುಖ ಜೀವನಶೈಲಿ ಮಾರ್ಗಗಳನ್ನೊಳಗೊಂಡ ಯೋಗ ಸಹ ಸನಾತನ ಧರ್ಮದ ಅವಿಭಾಜ್ಯ ಅಂಗವಾಯಿತು. ದುರ ದೃಷ್ಟವಶಾತ್ ಪ್ರಾಚೀನ ಕಾಲದಲ್ಲಿ ಇದು ಅಧ್ಯಾತ್ಮಿಕ ಸಾಧನೆಗೈಯ್ಯುವ ಋಷಿ ಮುನಿಗಳ ಹಂತದಲ್ಲಿಯೇ ಉಳಿದುಕೊಂಡಿತೇ ವನಾ ಜನ ಸಾಮಾನ್ಯರನ್ನು ಅಂದು ತಲುಪಿ ಜನಪ್ರಿಯವಾಗಲು ಸಾಧ್ಯವಾಗಲಿಲ್ಲವಾದುದು ವಿಷಾದನೀಯ.

ಅದೃಷ್ಟವಶಾತ್ ಇಂದು ಯೋಗ ಪ್ರಪಂಚಾದ್ಯಂತ ಅಧ್ಯಾತ್ಮಿಕ ಆರೋಗ್ಯ ಸಾಧನೆಗೆ ವೈಜ್ಞಾನಿಕ ಮಾರ್ಗವೆಂಬುದು ಅನುಕರಣೀಯವಾಗುತ್ತಿರುವುದು ಸಂತೋಷದ ಸಂಗತಿ. ಅಧ್ಯಾತ್ಮಿಕ ಸಾಧನೆಗೆ ಯೋಗ ಏಕೈಕ ವೈಜ್ಞಾನಿಕ ಮಾರ್ಗವಾಗಿ
ಮುಂದೆ ಹೊರಹೊಮ್ಮಲಿದೆ. ಭಾರತೀಯ ಸನಾತನ ಧರ್ಮಕ್ಕೆ ಸಂಸ್ಥಾಪಕನಿಲ್ಲ, ಏಕ ಧರ್ಮಗ್ರಂಥಲ್ಲ, ಏಕ ದೇವರಿಲ್ಲ, ವೇದಗಳಾಧಾರಿತವಾದ ಆಧ್ಯಾತ್ಮವದು. ಹಿಂದೂಧರ್ಮ ತನ್ನ ಅನಿಷ್ಟಗಳನ್ನು ಕಳಚಿಕೊಂಡು ಸನಾತನ ಧರ್ಮವಾಗಿ ಪುನರುತ್ಥಾನವಾಗಬೇಕಿದೆ.

ಕ್ರೈಸ್ತ ಧರ್ಮ: ಆನಂತರ ಜೀಸಸ್ ಕ್ರಿಸ್ತನ ಸಾವಿನ ನಂತರ ಕ್ರಿ.ಪೂ. 1ನೇ ಶತಮಾನದಲ್ಲಿ ಅಂದರೆ ಸುಮಾರು 2 ಸಾವಿರ ವರ್ಷಗಳ ಹಿಂದೆ ಅವನಿಂದ ಸ್ಥಾಪಿತವಾದ ಕ್ರೈಸ್ತಧರ್ಮ ಜ್ಯುಡಿಸ್‌ನಲ್ಲಿ ಪ್ರಾರಂಭವಾಗಿ ರೋಮನ್ ಗೆ ಹರಡಿ ಪ್ರಪಂಚಾದ್ಯಂತ ಅನುಕರಣೆಗೆ ಬಂದು ಮಾನವ ಕುಲ ಮತ್ತೊಮ್ಮೆ ಒಡೆಯಿತು. ಇವರಲ್ಲೂ ಪ್ರೋಟೆಸ್ಟೆಂಟ್ ಮತ್ತು ಕ್ಯಾಥೊಲಿಕ್ ಎಂದು 2 ಗುಂಪು ಗಳಾದವು. ಮಾನವನಾದ ಕ್ರಿಸ್ತನೇ ದೇವರೆಂದು ಆರಾಧಿಸಲಾರಂಭಿಸಿದರು. ಇಂದು ಪ್ರಪಂಚಾದ್ಯಂತ ಕ್ರೈಸ್ತ ಧರ್ಮದ ಅನುಯಾಯಿಗಳು ಇನ್ನಿತರ ಧರ್ಮಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದರ ಧರ್ಮಗ್ರಂಥವಾದ ಬೈಬಲ್ ಕ್ರಿಸ್ತನೊಬ್ಬನೇ ದೇವರ ಪ್ರತಿನಿಧಿಯೆಂದು, ಅವನು ಹೇಳಿದವುಗಳೇ ಸತ್ಯವೆಂದು, ಅವುಗಳನ್ನು ಪರಿಪಾಲನೆ ಮಾಡುವುದರಿಂದ ಮಾತ್ರ ಒಳ್ಳೆಯಾಗುತ್ತದೆಂಬುದು ಈ ಧರ್ಮದ ಪ್ರಮುಖ ಸಾರವಾಗಿದೆ.

ದೇವರಲ್ಲಾಗಲಿ, ಪುನರ್ಜನ್ಮದಲ್ಲಾಗಲಿ, ಆತ್ಮದಲ್ಲಾಗಲಿ ಈ ಧರ್ಮದಲ್ಲಿ ನಂಬಿಕೆ ಇಲ್ಲ. ಕ್ರಿಸ್ತನನ್ನು ನಂಬಿ ಮಾನವೀಯತೆ, ಪ್ರೀತಿ, ಉದಾರತೆಗಳನ್ನು ಅನುಸರಿಸಿದರೆ ಸಂತೋಷವಾಗಿರಬಹುದೆಂಬುದು ಕ್ರೈಸ್ತಧರ್ಮದ ಮತ್ತೊಂದು ಮೂಲ ಧ್ಯೇಯ. ಕ್ರಿಸ್ತ ಹುಟ್ಟುವ ಮೊದಲೇ ಮಾನವಕುಲ ಹುಟ್ಟಿತ್ತು, ಸೃಷ್ಟಿಯಿತ್ತು. ಹಾಗಾಗಿ ಕ್ರಿಸ್ತನೇ ಮೊದಲು ಹೇಗಾಗುತ್ತಾನೆ? ಅವನಿಗೊಬ್ಬ ಸೃಷ್ಟಿ ಕರ್ತ ಇರಲೇಬೇಕಲ್ಲವೇ? ಅವನೇ ದೇವರಾಗಿದ್ದರೆ ಶಿಲುಬೆಯಂತಹ ಕಠಿಣಶಿಕ್ಷೆಯಿಂದ ಬದುಕುಳಿಯಬೇಕಿತ್ತಲ್ಲವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಇಸ್ಲಾಂ ಧರ್ಮ: ಇಸ್ಲಾಂ ಕ್ರಿ.ಶ. ಸುಮಾರು 7ನೇ ಶತಮಾನದಲ್ಲಿ ಅಂದರೆ 1300 ವರ್ಷಗಳ ಹಿಂದೆ ಇಂದಿನ ಸೌದಿ ಅರೆಬಿಯಾದ ಮೆಕ್ಕಾದಲ್ಲಿ ಮಹಮದ್ ಪೈಗಂಬರ್ ನಿಂದ ಸ್ಥಾಪಿತವಾದ ಧರ್ಮವಾಗಿದ್ದು, ಮಹಮದ್ ಪೈಗಂಬರ್ ಒಬ್ಬನೇ ದೇವರಾದ ಅಲ್ಲಾನ ಪ್ರತಿನಿಧಿಯೆಂದು, ಪ್ರತಿನಿತ್ಯ ಧ್ಯಾನ, ಪ್ರಾರ್ಥನೆ ಅವಶ್ಯಕವಿರುವವರಿಗೆ ಸಹಾಯ, ಉಪವಾಸ, ಹಜ್ ಯಾತ್ರೆ, ಆತ್ಮವಿಶ್ವಾಸ ಇವು ಧರ್ಮಗ್ರಂಥ ಕುರಾನಿನ ಪ್ರಮುಖ ತಿರುಳು. ಇಂದು ಇಸ್ಲಾಂ ಪ್ರಪಂಚದಲ್ಲಿ ಪಾಲಿಸುತ್ತಿರುವ 2ನೇ ಅತಿ ಹೆಚ್ಚಿನ ವ್ಯಾಪಕತೆಯ ಧರ್ಮವಾಗಿದೆ. ಈ ಧರ್ಮಕ್ಕೂ ಉಡುಪು, ಆಹಾರ ಇತ್ಯಾದಿ ಶಿಷ್ಟಾಚಾರದ ಕೆಲವು ಅವೈಜ್ಞಾನಿಕ ಧರ್ಮಾ ಚರಣೆಗಳು ಅಂಟಿಕೊಂಡವು. ಇಂದು ಇಸ್ಲಾಂ ಧರ್ಮಕ್ಕೆ ಉಗ್ರಗಾಮಿತನವನ್ನು ಸೇರಿಸುವ ಪ್ರಯತ್ನ ಸಾಗುತ್ತಿದೆ.

ಪ್ರತಿಯೊಂದು ಧರ್ಮಗಳಲ್ಲಿರುವ ಧರ್ಮಾಚರಣೆಯ ಕಟ್ಟುಪಾಡುಗಳನ್ನು ವೈಜ್ಞಾನಿಕ ಅವಶ್ಯಕತೆಯ ಹಿನ್ನೆಲೆಯಲ್ಲಿ ವೈಜ್ಞಾ ನಿಕವಾಗಿ ಪರಾಮರ್ಶಿಸುವುದು ಅತ್ಯವಶ್ಯಕ. ಧಾರ್ಮಿಕ ನಂಬಿಕೆಗಳು ಅನಾರೋಗ್ಯಕ್ಕೆ ನಾಂದಿಯಾಗಬಾರದು, ಮಾನವಕುಲ ವನ್ನು ಛಿದ್ರಮಾಡಬಾರದು. ಪ್ರೀತಿ ಹಂಚಿಕೆಗೆ ಧಕ್ಕೆ ತರಬಾರದು. ಹಾಲಿ ಧರ್ಮಗಳ ಪ್ರತಿಯೊಂದು ಕಟ್ಟುಪಾಡು ಗಳು ಮಾನವ ನಿರ್ಮಿತ ಎಂಬುದನ್ನು ಮನಗಾಣಬೇಕು.

ಆಯಾಯ ಧರ್ಮದ ಸಂಸ್ಥಾಪಕರು ಅಂದು ಅವರಿಗಿದ್ದ ತಿಳಿವಳಿಕೆಯ ಇತಿಮತಿಯಲ್ಲಿ ವಿಧಿಸಿದ ಷರತ್ತುಗಳು ವೈಜ್ಞಾನಿಕ ವಾಗಿಲ್ಲ ದಿರಬಹುದು. ಕಾಲಾನುಕಾಲಕ್ಕೆ ಅವುಗಳ ಪರಾಮರ್ಶೆ ಅತ್ಯವಶ್ಯಕ. ಇಂದಿನ ಹಿಂದೂ ಧರ್ಮದ ಜಾತಿಗಳು, ಮೇಲು-ಕೀಳುಗಳು, ವ್ರತಗಳು, ಶೋಷಣೆಯ ಪೂಜೆ ಪುನಸ್ಕಾರಗಳು, ಹೋಮ ಹವನಗಳಿಂದ ದೇವರನ್ನು ಒಲಿಸಿಕೊಳ್ಳಲಾಗುವುದಿಲ್ಲ.
ಇವುಗಳಿಗೆ ಒಲಿದರೆ ಅವನು ದೇವರೇ ಅಲ್ಲ. ಅವು ಇಂದು ಶೋಷಣೆಯ ಮಾರ್ಗಗಳಾಗಿವೆ.

ಪ್ರಸ್ತುತ ಮಾನವ ಕುಲವನ್ನು ಒಡೆಯುತ್ತಿರುವ ಹಿಜಾಬ್, ಬುರ್ಖಾ, ಕೇಸರಿ ಶಾಲುಗಳಿಂದ ದೇವರನ್ನು ಒಲಿಸಲು ಸಾಧ್ಯಲ್ಲ. ಅವುಗಳಿಂದ ಅವನು ಒಲಿದಲ್ಲಿ ಅವನು ದೇವರೇ ಅಲ್ಲ. ಉಡುಪುಗಳು ದೇಹ ರಕ್ಷಣೆಗೇ ವಿನಾ ದೇವರನ್ನು ಕಾಣಲು ಅಲ್ಲ. ಉಡುಪಿನಿಂದ ದೇವರನ್ನು ಕಂಡವರು ಯಾರೂ ಇಲ್ಲ. ಧಾರ್ಮಿಕ ಹಿನ್ನೆಲೆಯ ಉಡುಪುಗಳು ದೈಹಿಕವಾಗಿಯೇ ಮಾನವ ಕುಲವನ್ನು ದೃಷ್ಟಿ ಮಾತ್ರದಿಂದಲೇ ವಿಂಗಡಿಸಿಬಿಡುತ್ತವೆ. ವೈಜ್ಞಾನಿಕವಾಗಿ ಆಲೋಚಿಸಿದರೆ ಬುರ್ಖಾ ಮತ್ತು ಹಿಜಾಬ್‌ಗಳು
ಸೂರ್ಯನ ಕಿರಣ ಮೈ ಮೇಲೆ ಬೀಳುವುದನ್ನು ತಡೆಗಟ್ಟಿ ವಿಟಮಿನ್ ಡಿ ಕೊರತೆಯನ್ನು ಉಂಟುಮಾಡಿ ಆರೋಗ್ಯಕ್ಕೆ ಹಾನಿ ಕಾರಕವಾಗಬಹುದು.

ಮಳೆಯರಿಗೆ ಮಾತ್ರ ಇವುಗಳನ್ನು ಧರಿಸಬೇಕೆಂಬ ಷರತ್ತು ಮಳೆಯರ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಂತಾಗುತ್ತದೆ. ಮನುಷ್ಯನಿಗೆ
ಆತ್ಮಶ್ವಾಸ ಹುಟ್ಟುವುದು ಮುಕ್ತ ಮುಖದಿಂದ ಪರಿಸರವನ್ನು ವೀಕ್ಷಿಸಿ ಇನ್ನಿತರರೊಡನೆ ಸಂಭಾಷಿಸುವುದರಿಂದ. ಹಿಜಾಬ್ ಮತ್ತು ಬುರ್ಖಾ ಸೀಯ ಮಾನಸಿಕ ಬೆಳವಣಿಗೆಗೆ ಕಂಟಕವನ್ನುಂಟುಮಾಡುತ್ತವೆ. ಈ ಕಾರಣಗಳಿಂದಾಗಿ ಹಿಜಾಬ್ ಮತ್ತು ಬುರ್ಖಾ ಗಳನ್ನು ಧರಿಸುವುದು ಆರೋಗ್ಯ ದೃಷ್ಟಿಯಿಂದ ಹಾಗೂ ವ್ಯಕ್ತಿತ್ವ ವಿಕಾಸದ ದೃಷ್ಟಿಯಿಂದ ಅವೈಜ್ಞಾನಿಕ.

ಪ್ರಜಾಪ್ರಭುತ್ವ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಮೇಲಂತೂ ಧರ್ಮ, ಜಾತಿಗಳನ್ನು ಅಧಿಕಾರದ ಮೆಟ್ಟಿಲನ್ನಾಗಿಸಿಕೊಂಡು ಮಾನವ ಕುಲವನ್ನು ರಾಜಕೀಯ ನಾಯಕತ್ವ ಮತ್ತಷ್ಟು ಛಿದ್ರಗೊಳಿಸುತ್ತಿದೆ. ಸಮಗ್ರ ದೃಷ್ಟಿಕೋನದ, ಅಧ್ಯಾತ್ಮಿಕ ಚಿಂತನೆಯ ಮಾನವ ಕುಲಕ್ಕೆ ಪ್ರೀತಿಯನ್ನು ಹಂಚಿ ಒಗ್ಗೂಡಿಸುವ ರಾಜಕೀಯ ನಾಯಕತ್ವ ಮರೆಯಾಗಿದೆ. ಸಮಗ್ರ ದೃಷ್ಟಿಕೋನವಿಲ್ಲದವರ ಕೈಗೆ ಅಧಿಕಾರ ಸಿಕ್ಕಿ ಮಾನವ ಕುಲ ತತ್ತರಿಸುತ್ತಿದೆ.

ಅಧ್ಯಾತ್ಮ/ಧರ್ಮ: ಅಧ್ಯಾತ್ಮ ಮತ್ತು ಧರ್ಮ ಭಿನ್ನವಾದವು. ಆಧ್ಯಾತ್ಮ ಸೃಷ್ಟಿಯ ಜ್ಞಾನ. ಸೃಷ್ಟಿಯ ರಚನೆ, ಪೂರ್ವನಿಗದಿತ ಕ್ರಿಯೆಗಳು, ಸೃಷ್ಟಿಯಲ್ಲಿರುವ ಒಂದಕ್ಕೊಂದರ ಸಂಬಂಧ, ಪ್ರತಿಯೊಂದರ ಜವಾಬ್ದಾರಿಗಳು ಇತ್ಯಾದಿ. ಇವುಗಳಿಗೆ ಸಂಬಂಧಿಸಿದ ಇಂದ್ರಿಯ ಮತ್ತು ಇಂದ್ರಿಯಾತೀತ ಅಂತಿಮಸತ್ಯಗಳ ಜ್ಞಾನಗಳನ್ನು ಅಧ್ಯಾತ್ಮ ಒಳಗೊಂಡಿದೆ. ಈ ಜ್ಞಾನಗಳ ಹಿನ್ನೆಲೆಯಲ್ಲಿ ಸೃಷ್ಟಿಯೊಡನೆ ಜೋಡಿಸಿಕೊಂಡು ಸೃಷ್ಟಿಕರ್ತನ (ಅತೀತ ಶಕ್ತಿ) ನಡುವೆ ಪ್ರತಿಯೊಬ್ಬ ಮಾನವನೂ ನೇರ ಅನುಸಂಧಾನ ಮಾಡುವ ಜೀವನಶೈಲಿಯಿದು. ಅಧ್ಯಾತ್ಮವನ್ನು ಸೃಷ್ಟಿಕರ್ತನೇ ಬೋಽಸಿದನೆಂಬ ವಾಡಿಕೆಯಿದೆ.

ವೇದ, ಉಪನಿಷತ್ತುಗಳು ಅಧ್ಯಾತ್ಮಿಕ ಜ್ಞಾನದ ಪ್ರಪ್ರಥಮ ಜ್ಞಾನ ಭಂಡಾರಗಳು ಎಂಬುದು ಸರ್ವಧಿತ. ಅಧ್ಯಾತ್ಮದ ಅರಿವು ಮತ್ತು ಅನುಭವ ಪ್ರತಿಯೊಬ್ಬರನ್ನೂ ಸೃಷ್ಟಿಯ ಎಲ್ಲವುಗಳೊಡನೆ, ಅಂತಿಮವಾಗಿ ಅತೀತಶಕ್ತಿಯೊಡನೆ ವೈಯಕ್ತಿಕವಾಗಿ ಬೆಸೆದು ಸಮಗ್ರತೆಯನ್ನುಂಟುಮಾಡಿ ನಿರಂತರ ಸುಖಾನುಭವವನ್ನುಂಟುಮಾಡುತ್ತದೆ. ಅಧ್ಯಾತ್ಮ ಪೂರ್ಣ ವೈಯಕ್ತಿಕ. ಗುಂಪುಗಾರಿಕೆ, ಜಾತಿ, ಭೇದ, ಧರ್ಮಾಚರಣೆಗಳಿಗೆ ಅಧ್ಯಾತ್ಮದಲ್ಲಿ ಅವಕಾಶವಿಲ್ಲ.

ಧರ್ಮಗಳು ಮಾನವ ನಿರ್ಮಿತ. ಅಧ್ಯಾತ್ಮಿಕ ಸ್ಥಿತಿಯನ್ನು ತಲುಪಲು ಮಾನವ ಕಂಡುಕೊಂಡ ಭಿನ್ನ ಹಾದಿಗಳಿವು. ದುರದೃಷ್ಟವ ಶಾತ್ ಧರ್ಮಗಳಲ್ಲಿ ಅವೈಜ್ಞಾನಿಕ ಆಚರಣೆಗಳು, ಮೇಲು-ಕೀಳೆಂಬ ಭಾವನೆಗಳು, ಗುಂಪುಗಾರಿಕೆ, ಉಡುಗೆ ತೊಡುಗೆಗಳು, ಲಾಂಛನಗಳು, ಆಹಾರ ನಿಯಮಗಳು, ಹೀಗೆ ಭಿನ್ನ ಸಾಮಾಜಿಕ ಕಟ್ಟುಪಾಡುಗಳನ್ನು ಒಳಗೊಂಡಿದ್ದು, ಮಾನವ ಕುಲವನ್ನು ಛಿದ್ರವಾಗಿಸಿ ದ್ವೇಷದ ವಿಷಬೀಜವನ್ನು ಬಿತ್ತಿ, ಅಶಾಂತಿಗೆ ನಾಂದಿಯಾಗಿವೆ. ಅಧ್ಯಾತ್ಮ ಧರ್ಮಗಳಿಂದ ಸಂಪೂರ್ಣವಾಗಿ ಮರೆ ಯಾಗುತ್ತಿದೆ. ಎಲ್ಲ ಧರ್ಮಗಳ ವಿಷಬೀಜಗಳನ್ನು ಕಿತ್ತೆಸೆದು ಅವುಗಳಲ್ಲಿನ ಅಧ್ಯಾತ್ಮ ಮಾತ್ರ ಪ್ರಕಾಶಿಸಬೇಕಿದೆ.

ಧರ್ಮಾಂಧತೆ: ಸಂವಿಧಾನದ ಆಶಯಗಳು ಮತ್ತು ನ್ಯಾಯಾಲಯದ ತೀರ್ಪುಗಳಿಗೂ ಸಡ್ಡುಹೊಡೆದು ಅವೈಜ್ಞಾನಿಕ ಧರ್ಮಾಚರಣೆಗಳನ್ನು ಕೈಗೊಳ್ಳುತ್ತೇವೆಂಬ  ಭಾವನೆಗಳು, ಶಿಕ್ಷಣಕ್ಕಿಂತ ಧರ್ಮಾಚರಣೆಗಳೇ ಮೇಲೆಂಬ ಕೂಗು ಧರ್ಮಾಂಧತೆಯ ಕ್ಯಾನ್ಸರ್ ಎಷ್ಟರಮಟ್ಟಿಗೆ ರಕ್ತಗತವಾಗಿದೆ ಎಂಬುದನ್ನು ಪ್ರತಿಬಿಂಬಿಸುತ್ತಿದೆ. ಈ ಬಗ್ಗೆ ಆಯಾಯ ಧರ್ಮಗುರುಗಳಾಗಲಿ, ರಾಜಕೀಯ ನಾಯಕರಾಗಲಿ, ಚಿಂತಕರಾಗಲಿ ಪ್ರತಿಭಟಿಸಿ, ತಿಳಿಹೇಳದೆ ಮೌನವಾಗಿರುವುದು ಮೌಲ್ಯಗಳ ಅಧಃ ಪತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಅಧ್ಯಾತ್ಮಿಕ ಆರೋಗ್ಯ: ಅಧ್ಯಾತ್ಮ, ಆರೋಗ್ಯದ ಪ್ರಕಾರವಾಗಿದ್ದು, ನಿರಂತರ ಸಂತೋಷದ ಸ್ಥಿತಿಯೇ ಆರೋಗ್ಯ. ಇದನ್ನು ಗಳಿಸಿಕೊಡುವುದೇ ಅಧ್ಯಾತ್ಮಿಕ ಜೀವನಶೈಲಿ. ಎಲ್ಲ ಧರ್ಮಗಳು ಮತ್ತು ಜಾತಿಗಳಲ್ಲಿರುವ ಅಧ್ಯಾತ್ಮಿಕ ಚಿಂತನೆಗಳಿಗೆ ವಿರುದ್ಧವಾದ ಅವೈಜ್ಞಾನಿಕ ಆಚರಣೆಗಳನ್ನು ಪುನರ್ ಪರಿಶೀಲಿಸಿ ಧರ್ಮಗಳನ್ನು ಅಧ್ಯಾತ್ಮೀಕರಿಸುವುದು ಇಂದಿನ ಅತ್ಯವಶ್ಯಕ ಆಂದೋಲನ ವಾಗಬೇಕಿದೆ. ಎಲ್ಲ ಧಾರ್ಮಿಕ ಮುಖಂಡರು ತಮ್ಮ ಸ್ವಪ್ರತಿಷ್ಠೆಯನ್ನು ಬದಿಗೊತ್ತಿ, ಒಂದೆಡೆ ಸೇರಿ ಆಯಾಯ ಧರ್ಮಗಳಲ್ಲಿರುವ ಮನುಕುಲವನ್ನು ಒಡೆಯುವ ಮತ್ತು ಬದುಕಿಗೆ ಕಂಟಕಪ್ರಾಯವಾದ ಅವೈಜ್ಞಾನಿಕ ಆಚರಣೆಗಳಿಂದ ಧರ್ಮಗಳನ್ನು ಮುಕ್ತ ಗೊಳಿಸಿ, ಪ್ರೀತಿ ಹಂಚಿ ಒಗ್ಗೂಡಿಸುವ ಪರಿಶುದ್ಧ ಅಧ್ಯಾತ್ಮವನ್ನು ಮಾತ್ರ ಹೆಕ್ಕಿ ತೆಗೆಯುವುದು ಇಂದಿನ ಅವಶ್ಯಕವಾಗಿದೆ. ಹಿಜಾಬ್ ವಿಷಯದಲ್ಲಿ ಪ್ರಾರಂಭವಾಗಿರುವ ಧಾರ್ಮಿಕ ಸಂಘರ್ಷ ಇದಕ್ಕೆ ನಾಂದಿಯಾಗಲಿ ಎಂದು ಆಶಿಸೋಣ.