ಪ್ರಸ್ತುತ
ಪ್ರಕಾಶ್ ಶೇಷರಾಘವಾಚಾರ್
ಸ್ವಾತಂತ್ರ್ಯ ಬಂದ ತರುವಾಯ ರಚನೆಯಾದ ನೆಹರು ನೇತೃತ್ವದ ಮೊದಲ ಸಚಿವ ಸಂಪುಟದಲ್ಲಿ ಅಮೃತ ಕೌರ್ ಎಂಬ ಅಪ್ಪಟ ಗಾಂಧಿವಾದಿ ಆರೋಗ್ಯ ಸಚಿವರಾಗುತ್ತಾರೆ. ಅವರು ಕಂಡ ಕನಸೇ ೧೯೫೬ರಲ್ಲಿ ದೇಶದ ಮೊದಲ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS ) ಸ್ಥಾಪನೆಯಾಗಲು ಕಾರಣವಾಯಿತು. ಬಡವರ ಪಾಲಿಗೂ ಕೈಗೆಟಕುವ ಅತ್ಯುತ್ತಮ ಆರೋಗ್ಯ ಸೇವೆ ದೊರೆಯಬೇಕು ಮತ್ತು ಸ್ನಾತ್ತಕೋತ್ತರ ವೈದ್ಯ ಶಿಕ್ಷಣದಲ್ಲಿ ಭಾರತ ಸ್ವಾವಲಂಬನೆ ಸಾಽಸಬೇಕು ಎಂಬ ಅಮೃತ ಕೌರ್ ಅವರ ಮಹಾದಾಸೆಯು AIIMS ಸ್ಥಾಪನೆಗೆ ಅಂಕುರ ವಾಯಿತು.
ಈ ಅಮೃತ ಕೌರ್, ಕಪುರ್ತತಲಾ ರಾಜ ಕುಟುಂಬದಲ್ಲಿ ಜನಿಸಿದ ಅತ್ಯಂತ ಶ್ರೀಮಂದೇತ ಮಹಿಳೆ. ಮಹಾತ್ಮ ಗಾಂಧಿಯವರು ಸ್ವಾತಂತ್ರ್ಯ ಹೋರಾಟ ದಲ್ಲಿ ಮಹಿಳೆಯರು ಧುಮುಕ ಬೇಕು ಎಂದು ಕರೆ ನೀಡಿದಾಗ ಅದರಿಂದ ಪ್ರಭಾವಿತರಾಗಿ ತಮ್ಮ ಐಶಾರಾಮಿ ಜೀವನವನ್ನು ತೊರೆದು ಗಾಂಧಿಯವರ ಸಬರಮತಿ ಆಶ್ರಮವನ್ನು ಸೇರುತ್ತಾರೆ. ಸ್ವಾತಂತ್ರ್ಯ ಬಂದ ತರುವಾಯ ಅಮೃತ ಕೌರ್ ಅವರು ಯುನೈಟೆಡ್ ಪ್ರಾವಿನ್ಸ್ನಿಂದ ಭಾರತೀಯ ಸಂವಿಧಾನ ಸಭೆಗೆ ಆಯ್ಕೆಯಾದವರು. ಭಾರತದ ಸಂವಿಧಾನ ರಚಿಸಲು ನಿಯೋಜನೆ ಮಾಡಿದ್ದ ಮೂಲಭೂತ ಹಕ್ಕುಗಳ ಉಪಸಮಿತಿಯ ಸದಸ್ಯೆಯಾಗಿ ಏಕ ರೂಪ ನಾಗರಿಕ ಸಂಹಿತೆಯ ಪ್ರಸ್ತಾವವನ್ನು ೭೫ ವರ್ಷದ ಕೆಳಗೆ ಬೆಂಬಲಿಸಿದ ಪ್ರಗತಿಪರ ಮಹಿಳೆ. ಆರೋಗ್ಯ ಸಚಿವೆಯಾಗಿ ನಿಯುಕ್ತಿಯಾದ ತರುವಾಯ ಮಲೇರಿಯಾ ಮತ್ತು ಕ್ಷಯ ರೋಗ ನಿರ್ಮೂಲನೆ ಮಾಡುವ ಅಭಿಯಾನ ಆರಂಭಿಸಿದ್ದವರು. ಭಾರತದಲ್ಲಿ ವಿಶ್ವ ದರ್ಜೆ ಆಸ್ಪತ್ರೆ ಸ್ಥಾಪಿಸುವ ಕನಸು ಕಂಡವರು. ಇದಕ್ಕಾಗಿ ಕೋಲ್ಕತಾ ದಲ್ಲಿ ಏಮ್ಸ ಸ್ಥಾಪಿಸಲು ಮುಂದಾದಾಗ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬಿ.ಸಿ. ರಾಯ್ ಅವರು ಅನುಮತಿ ನೀಡುವುದಿಲ್ಲ. ಹೀಗಾಗಿ ದೆಹಲಿಯಲ್ಲಿ ಮೊದಲ ಏಮ್ಸ ಆರಂಭಿಸುವ ನಿರ್ಧಾರವಾಗುತ್ತದೆ.
ಏಮ್ಸನಲ್ಲಿ ದೇಶದ ಎಲ್ಲ ರಾಜ್ಯಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಪಡೆಯಲು ಸಮಾನ ಅವಕಾಶದ ಮೇಲೆ ಮತ್ತು ಪ್ರವೇಶ ಪರೀಕ್ಷೆ ನಡೆಸುವ ಪದ್ಧತಿ ಜಾರಿಗೆ ತಂದರು. ಇದೇ ಪದ್ಧತಿಯನ್ನು ಐಐಎಂ ಮತ್ತು ಐಐಟಿಗಳಲ್ಲಿ ಜಾರಿಗೆ ತರಲಾಗಿದೆ. ಇದರ ಶ್ರೇಯಸ್ಸು
ಅಮೃತ ಕೌರ್ಗೆ ಸಲ್ಲುತ್ತದೆ. ಅದೀಗ ತಾನೆ ಸ್ವಾತಂತ್ರ್ಯಗಳಿಸಿದ್ದ ಭಾರತವು ಸಹಜವಾಗಿ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿತ್ತು. ಏಮ್ಸ ಸ್ಥಾಪನೆಗೆ
ಸರಕಾರ ಹಣ ಕೊಡುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಆದರೆ ಆಸ್ಪತ್ರೆಯನ್ನು ಸ್ಥಾಪನೆ ಮಾಡಲು ದೃಢ ನಿಶ್ಚಯ ಮಾಡಿದ್ದ ಅಮೃತ ಕೌರ್ ಸುಮ್ಮನೆ ಕೂರಲಿಲ್ಲ. ಆಸ್ಪತ್ರೆ ನಿರ್ಮಾಣಕ್ಕೆ ನ್ಯೂಜಿಲೆಂಡ್ ಸರಕಾರದ ಅನುದಾನ ಪಡೆಯಲು ಯಶಸ್ವಿ ಯಾದರು.
ಅದಲ್ಲದೆ, ಆಸ್ಟ್ರೇಲಿಯಾ ಜರ್ಮನಿ ಹಾಗೂ ಡಚ್ ದೇಶಗಳ ಆರ್ಥಿಕ ನೆರವು ಪಡೆದು, ೧೯೫೬ರಲ್ಲಿ ದೇಶದ ಮೊಟ್ಟಮೊದಲ ಏಮ್ಸ್ ದೆಹಲಿಯಲ್ಲಿ ಆರಂಭಿಸಿಯೇಬಿಟ್ಟರು. ಮೊಟ್ಟ ಮೊದಲ ಭಾರತೀಯ ವೈದ್ಯ ವಿಜ್ಞಾನ ಸಂಸ್ಥೆಯನ್ನು ಹುಟ್ಟು ಹಾಕಲು ಕೌರ್ ಅವರ ಪಾತ್ರ ಬಹು ಪ್ರಮುಖವಾದ್ದು.
ಅವರ ಛಲದ -ಫ ಗಿ ಎಲ್ಲ ಅಡ್ಡಿ-ಆತಂಕಗಳನ್ನು ನಿವಾರಿಸಿ ತಮ್ಮ ಗುರಿ ಧಿಸಿದರು. ಅಂದು ಪ್ರಧಾನಿಯಾಗಿ ನೆಹರು ಇದ್ದರಾದರೂ ಏಮ್ಸ ಸ್ಥಾಪನೆಯ ಹೆಚ್ಚಿನ ಶ್ರೇಯಸ್ಸು ಅಮೃತ ಕೌರ್ ಅವರಿಗೆ ಸಲ್ಲುತ್ತದೆ. ಅಮೃತ ಕೌರ್ ಅವರು ಸಿಮ್ಲಾದಲ್ಲಿ ಇದ್ದ ತಮ್ಮ ಬಂಗಲೆಯನ್ನು ಏಮ್ಸ ಉಪಯೋಗಕ್ಕಾಗಿ ನಸ್ ಗಳಿಗೆ ವಿಶ್ರಾಂತಿ ಪಡೆಯುಲು ಬಳಸಲು ದಾನ ಮಾಡಿದರು.
ಅಂದು ಅವರ ಪರಿಶ್ರಮ ಮತ್ತು ದೃಢ ನಿಶ್ಚಯದ ಫಲವಾಗಿ ದೇಶದಲ್ಲಿ ಏಮ್ಸ್ ಸ್ಥಾಪನೆಯಾಗಿ ಬಡವರಿಗೆ ಕೈಗೆಟಕುವ ದರದಲ್ಲಿ ಅತ್ಯುತ್ತಮ ಆರೋಗ್ಯ ಸೇವೆ ದೊರೆಯುವಂತಾಗಿದೆ. ೧೯೫೬ರಲ್ಲಿ ಮೊದಲ ಏಮ್ಸ ಆಸ್ಪತ್ರೆ ಆರಂಭವಾದ ತರುವಾಯ ೪೭ ವರ್ಷಗಳ ಸುದೀರ್ಘ ಸಮಯದ ನಂತರ ೨೦೦೩ ರಲ್ಲಿ ವಾಜಪೇಯಿಯವರು ತಮ್ಮ ಕೆಂಪುಕೋಟೆಯ ಭಾಷಣ ಲ್ಲಿ ನಾನಾ ರಾಜ್ಯಗಳಲ್ಲಿ ಆರೋಗ್ಯ ಸೇವೆಯ ಅಸಮತೋಲನ ನಿವಾರಣೆಗಾಗಿ ಪ್ರಧಾನ ಮಂತ್ರಿ ಆರೋಗ್ಯ ಸುರಕ್ಷಾ ಯೋಜನೆಯಡಿಯಲ್ಲಿ ಆರು ದೆಹಲಿ ಮಾದರಿಯಲ್ಲಿ ಭೂಪಾಲ್, ಭುವನೇಶ್ವರ್, ಪಟನಾ, ರಾಯಪುರ, ಹೃಷಿಕೇಶ್ ಮತ್ತು ಜೋಧ್ಪುರದಲ್ಲಿ ೬ ಏಮ್ಸ ಸ್ಥಾಪಿಸುವ ಘೋಷಣೆ ಮಾಡುತ್ತಾರೆ.
೨೦೦೪ರಲ್ಲಿ ಎನ್ಡಿಎ ಸರಕಾರವು ಅಽಕಾರ ಕಳೆದುಕೊಂಡ ಕಾರಣ ವಾಜಪೇಯಿ ಕಾಲದ ಈ ಆರು ಏಮ್ಸ್ ನಿರ್ಮಾಣ ಯೋಜನೆಯು ಯುಪಿಎ ಕಾಲದಲ್ಲಿ ಮುಂದುವರಿಯುತ್ತದೆ. ಈ ಆರು ಸಂಸ್ಥೆಗಳು ಸಿದ್ಧವಾಗಲು ಎಂ ವರ್ಷವಾಗಿ ಅಂತಿಮವಾಗಿ ೨೦೧೨ ರಲ್ಲಿ ಎಲ್ಲಾ ಆಸ್ಪತ್ರೆಗಳು ಕಾರ್ಯಾರಂಭ ಮಾಡುತ್ತದೆ. ವಿಪರ್ಯಾಸವೆಂದರೆ, ಕಾಂಗ್ರೆಸ್ ಸರಕಾರ ದೇಶದಲ್ಲಿ ಒಂದೇ ಒಂದು ಏಮ್ಸ್ ಸ್ಥಾಪನೆ ಮಾಡಿರುವುದಾದರು ಪದೇ
ಪದೇ ಅದನ್ನು ತನ್ನ ಕೊಡುಗೆಯೆಂದು ಎದೆ ತಟ್ಟಿಕೊಳ್ಳುತ್ತಾರೆ.
ದೇಶಕ್ಕೆ ಉನ್ನತ ದರ್ಜೆಯ ಆಸ್ಪತ್ರೆಯು ಬೇಕೆಂದು ಏಮ್ಸ್ ಸ್ಥಾಪಿಸಿ ಆರೋಗ್ಯ ಸೇವೆಗೆ ಉತ್ತಮ ಅಡಿಪಾಯ ಹಾಕಿದ ನೈಜ ಗಾಂಧಿವಾದಿ ಅಮೃತ್ಕೌರ್ಗೆ ಅದರ ಶ್ರೇಯಸ್ಸು ನೀಡುವುದು ದೂರದ ಮಾತು, ಆಕೆಯನ್ನು ನೆನೆಯುವ ಕಷ್ಟವನ್ನು ಕಾಂಗ್ರೆಸಿಗರು ತೆಗೆದುಕೊಳ್ಳುತ್ತಿಲ್ಲ. ಏಮ್ಸ್ ರಚನೆಗೆ ೧೯೫೬ರಲ್ಲಿ ಕಾಯಿದೆಯ ಬಲ ನೀಡಲು ಅಮೃತ ಕೌರ್ ಪಾತ್ರ ಬಹು ದೊಡ್ಡದಿತ್ತು. ಕಾಯಿದೆಯ ಕಾರಣ ಏಮ್ಸ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುವ ಸ್ವಾತಂತ್ರ್ಯವನ್ನು ಪಡೆಯಿತಲ್ಲದೆ ವೈದ್ಯಕೀಯ ವಿeನದಲ್ಲಿ ಸ್ನಾತಕೋತ್ತರ ಪದವಿ ನೀಡಲು ಮತ್ತು ಸಂಶೋಧನೆ ಮಾಡಲು ಅವಕಾಶವಾಯಿತು.
೧೦ ವರ್ಷಗಳ ಕಾಲಾವಽಯಲ್ಲಿ ಯುಪಿಎ ಸರಕಾರವು ರಾಯಬರೇಲಿಯಲ್ಲಿ ಒಂದೇ ಒಂದು ಏಮ್ಸ ಸ್ಥಾಪಿಸುವ ಘೋಷಣೆಯನ್ನು ಮಾಡುತ್ತದೆ. ಆದರೆ ಅದರ ನಿರ್ಮಾಣ ಆರಂಭವಾಗಿದ್ದು ೨೦೧೪ರ ನಂತರ ಮತ್ತು ೨೦೧೮ರಲ್ಲಿ ಆಸ್ಪತ್ರೆಯು ಸಿದ್ಧವಾಗಿ ಲೋಕಾರ್ಪಣೆಯಾಯಿತು. ಆರೋಗ್ಯ
ಕ್ಷೇತ್ರದ ನಕ್ಷೆ ಕಳೆದ ಎಂಟು ವರ್ಷದಲ್ಲಿ ಮಹತ್ತರ ಬದಲಾವಣೆಗಳನ್ನು ಕಾಣುತ್ತಿದೆ. ವಿಶೇಷವಾಗಿ ಪ್ರಧಾನಿ ಮೋದಿಯವರು ಜನಸಾಮಾನ್ಯರಿಗೂ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ ರೆಯುವಂತೆ ಮಾಡಲು ಹಲವಾರು ಬಡವರ ಪರ ಯೋಜನೆಗಳ ಜಾರಿ ಮಾಡಿರುವುದರಿಂದ ಗುಣಮಟ್ಟದ
ಆರೋಗ್ಯ ಸೇವೆಯು ಇಲ್ಲದವರಿಗೂ ದೊರೆಯುವಂತಾಗಿದೆ.
ನರೇಂದ್ರ ಮೋದಿಯವರು ದೇಶದ ಹಲವೆಡೆ ಏಮ್ಸ್ ವಿಸ್ತರಿಸುವ ಅಗತ್ಯವನ್ನು ಮನಗಂಡಿದ್ದರು. ಅದರ ಫಲವಾಗಿ ೧೬ಏಮ್ಸ್ ಗಳನ್ನು ಸ್ಥಾಪಿಸಿರುವುದು. ದೆಹಲಿಗೆ ಸೀಮಿತವಾಗಿದ್ದ ಉತ್ಕೃಷ್ಟ ಗುಣಮಟ್ಟದ ಆರೋಗ್ಯ ಸೇವೆಯು ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿರುವ ರಾಜ್ಯಗಳಲ್ಲಿಯೂ ಆರಂಭ ವಾಗಿ ಅಲ್ಲಿನ ಜನರಿಗೆ ಉತ್ತಮ ಗುಣಮಟ್ಟದ ಆರೋಗ್ಯಸೇವೆಯು ದೊರೆಯುವಂತಾಗಿದೆ.
ನಾನಾ ರಾಜ್ಯಗಳಲ್ಲಿ ಸ್ಥಾಪನೆ ಮಾಡುತ್ತಿರುವ ಏಮ್ಸ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ದೇಶೀಯವಾಗಿಯೇ ವೈದ್ಯಕೀಯ ಸ್ನಾತ್ತಕೋತ್ತರ ಪದವಿಯನ್ನು ತಮಗಿಚ್ಛೆಯ ವಿಶೇಷತೆಯಲ್ಲಿ ನುರಿತ ವೈದ್ಯರಾಗಿ ಹೊರಹೊಮ್ಮಲು ಸಹಕಾರಿಯಾಗಿದೆ. ವಿದೇಶದ ಕಡೆ ಮುಖ ಮಾಡುತ್ತಿದ್ದವರು ಈಗ ಏಮ್ಸನಲ್ಲಿ ಸ್ನಾತ್ತಕೋತ್ತರ ಪದವಿ ಪಡೆಯಲು ಹೆಚ್ಚಿನ ಅವಕಾಶ ಈಗ ದೊರೆಯುತ್ತಿದೆ. ಮೊದಲು ಏಮ್ಸ ಸ್ಥಾಪನೆಯ ಘೋಷಣೆಯಾಗಿ ಎಂಟರಿಂದ ಹತ್ತು ವರ್ಷವು ಆಸ್ಪತ್ರೆಯ ಆರಂಭಕ್ಕೆ ಸಮಯವಾಗುತ್ತಿತ್ತು.
ಈಗ ವಿಳಂಬಕ್ಕೆ ಆಸ್ಪದವಿಲ್ಲ ಪ್ರಧಾನಿ ಮೋದಿಯವರು ಹೇಳಿದಂತೆ ಈಗ ಶಂಕುಸ್ಥಾಪನೆಯು ನಾವೇ ಮಾಡುವುದು ಉದ್ಘಾಟನೆಯನ್ನು ನಾವೇ ಮಾಡುವುದು ಪ್ರತಿ ಯೋಜ ನೆಯ ಅನುಷ್ಠಾನದಲ್ಲಿ ಈ ಸರಕಾರವು ತೋರುತ್ತಿರುವ ಬದ್ಧತೆಗೆ ಇದು ಸಾಕ್ಷಿಯಾಗಿದೆ. ಸದ್ಯ ದೆಹಲಿಯ ಏಮ್ಸ ನಿರ್ದೇಶಕ ಶ್ರೀನಿವಾಸ್ ಕರ್ನಾಟಕದವರು ಮತ್ತು ವಿಶೇಷವೆಂದರೆ ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಹೆಮ್ಮೆ ಇವರದು.
ಪ್ರಧಾನಿ ಮೋದಿ ಇವರ ಪ್ರತಿಭೆ ಗುರುತಿಸಿ ಏಮ್ಸನ ಉನ್ನತ ಹುದ್ದೆಗೆ ನೇಮಕ ಮಾಡಿದ್ದಾರೆ. ಉತ್ತರ ಕರ್ನಾಟಕದ ಜಿ ಯೊಂದರಲ್ಲಿ ಏಮ್ಸ್ ಸ್ಥಾಪನೆಯ ಪ್ರಸ್ತಾವ ಸರಕಾರದ ಮುಂದೆ ಇರುವುದು. ಈ ಪ್ರಸ್ತಾವನೆ ತ್ವರಿತವಾಗಿ ಬೆಳಕು ಕಾಣುವ ಹೊಣೆಗಾರಿಕೆ ರಾಜ್ಯದ ಸಂಸದರ ಮೇಲೆ ಇರುವುದು ಇದಕ್ಕಾಗಿ ರಾಜ್ಯ ಸಂಸದರ ಸಂಘಟಿತ ಪ್ರಯತ್ನದಲ್ಲಿ ತೊಡಗಬೇಕು. ಮೋದಿ ಸರಕಾರದ ಎಂಟು ವರ್ಷದಲ್ಲಿ ೨೨೦ ಸರಕಾರಿ
ವೈದ್ಯಕೀಯ ಕಾಲೇಜುಗಳು ಆರಂಭಿಸಿ ವೈದ್ಯಕೀಯ ಶಿಕ್ಷಣಕ್ಕೆ ಬಹು ದೊಡ್ಡ ಕೊಡುಗೆ ನೀಡಿದ್ದಾರೆ.
ವೈದ್ಯಕೀಯ ಶಿಕ್ಷಣದ ಸೀಟುಗಳು ೨೦೧೪ರ ತರುವಾಯ ದುಪ್ಪಟ್ಟಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡದ ಪ್ರಕಾರ ಸಾವಿರಕ್ಕೆ ಒಬ್ಬ
ವೈದ್ಯರ ಗುರಿಯನ್ನು ಭಾರತವು ತಲುಪಿದೆ. ಅಷ್ಟೆ ಅಲ್ಲ ಅದನ್ನು ಮೀರಿದ ಸಾಧನೆಯನ್ನು ಮಾಡಿರುವುದು. ೧.೫ಲಕ್ಷ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ವಾಸ್ಥ್ಯ ಕೇಂದ್ರಗಳಾಗಿ ಪರಿವರ್ತನೆ ಮಾಡಲಾಗಿದೆ. ಪ್ರಾಥಮಿಕ ಆರೋಗ್ಯ ತಪಾಸಣೆ, ರಕ್ತ ಪರೀಕ್ಷೆ ಮತ್ತು ಎಕ್ಸರೇ ಮುಂತಾದ ಸೌಲಭ್ಯ ದೊರೆ ಯುವ ಹಾಗೆ ಮಾಡಲಾಗಿದೆ. ಆರಂಭಿಕ ಹಂತದಲ್ಲಿಯೇ ರೋಗ ಪತ್ತೆ ಮಾಡುವ ಸೌಕರ್ಯದಿಂದ ತ್ವರಿತವಾಗಿ ಚಿಕಿತ್ಸೆ
ನೀಡಲು ಸಹಕಾರಿಯಾಗಿದೆ.
ಆಯುಷ್ಮಾನ್ ಭಾರತ ಮತ್ತು ಜನೌಷಽ ಕೇಂದ್ರಗಳಿಂದ ದೇಶದ ಜನತೆಗೆ ಕಳೆದ ಕೆಲವು ವರ್ಷಗಳಿಂದ ?೧,೦೦,೦೦೦ ಕೋಟಿ ಹಣದ ಉಳಿತಾಯವಾಗಿದೆ ಎಂಬ ಮಾಹಿತಿಯನ್ನು ಪ್ರಧಾನಿಗಳು ಹಂಚಿಕೊಂಡಿದ್ದಾರೆ. ದುಬಾರಿ ಆರೋಗ್ಯ ಸೇವೆಯ ನಡುವೆ ಕೈಗೆಟಕುವ ಹಾಗೆ ಬದಲಾವಣೆ ತಂದಿರುವ ಈ ಎರಡು ಯೋಜನೆಗಳು ಬಡವರ ಪಾಲಿಗೆ ವರವಾಗಿದೆ. ಮೋದಿ ಸರಕಾರದ ಎಂಟು ವರ್ಷದ ಅವಽಯಲ್ಲಿ ಆರೋಗ್ಯ
ಕ್ಷೇತ್ರದಲ್ಲಿ ಬಡವರಿಗೂ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ದೊರೆಯುವುದು ಸಾಧ್ಯ ಎಂಬುದನ್ನು ಸಾಬೀತು ಪಡಿಸಿ ಲಕ್ಷಾಂತರ ಬಡವರ ಬಾಳಿನಲ್ಲಿ ನೆಮ್ಮದಿಯನ್ನು ಮೂಡಿಸಿದೆ.