Friday, 13th December 2024

ಬಾಳೆಯ ಹಾಗೇ, ಮೋಕ್ಷದ ನಂತರ ದೇಹವೇ ಇಲ್ಲ !

ಚಿಂತನೆ

ಪ್ರವೀಣ ವಿವೇಕ

praveenKumbar567@gmail.com

ಅನೇಕರು ಜಗತ್ತಲ್ಲಿ ದೇವರಿzನಾ? ಇರುವುದಾದರೆ ಹೇಗಿzನೆ? ಇತ್ಯಾದಿ ಪ್ರಶ್ನೆಗಳನ್ನು ಕೇಳುತ್ತಾರೆ. ಮನುಷ್ಯ ಜನ್ಮ ೮೪ ಯೋನಿಗಳನ್ನು ದಾಟಿ ಬಂದಿದೆ, ಈ ೮೪ ಯೋನಿಗಳಲ್ಲಿ ಕೊನೆಯ ೭ ಜನ್ಮಗಳು ಮಾತ್ರ ಮನುಷ್ಯನದ್ದು ಎಂಬುದನ್ನು ಅಧ್ಯಾತ್ಮ ಹೇಳುವ ಸತ್ಯ. ಪ್ರತಿಯೊಂದು ಆತ್ಮಕ್ಕೂ ತನ್ನದೇ ಆದ ಹಸಿವು ಇರುತ್ತದೆ, ಆ ಹಸಿವು ತನ್ನ ಮೂಲವನ್ನು ಸೇರುವುದಾಗಿದೆ.

ಭಾರತದ ವೈಶಿಷ್ಟ್ಯವೇ ಅದಲ್ಲವೇ? ಉತ್ತರದ ಜಮ್ಮುವಿನಿಂದ ಹಿಡಿದು ದಕ್ಷಿಣದ ಕನ್ಯಾಕುಮಾರಿವರೆಗೆ, ಪಶ್ಚಿಮದ ಕಚ್‌ನಿಂದ, ಪೂರ್ವದ ಅರುಣಾಚಲ ಪ್ರದೇಶದವರೆಗೂ ವಿಭಿನ್ನ ಸಂಸ್ಕೃತಿ, ಆಚರಣೆ, ಸಂಪ್ರದಾಯವನ್ನು ಒಳಗೊಂಡಿದೆ. ಹಿಂದೂ ಧರ್ಮ ಅನಂತ ಶಾಖೆಗಳುಳ್ಳ ಮಹಾವೃಕ್ಷದಂತೆ ಬೆಳೆದು ನಿಂತಿದೆ. ಹಿಂದೂ ಧರ್ಮಕ್ಕೆ ಆಯಾ ಕಾಲಘಟ್ಟದಲ್ಲಿ ಉದಯಿಸಿದ ಋಷಿ ಮುನಿಗಳು, ಸಾಧು ಸಂತರು, ಮಹಾತ್ಮರು, ವಚನಕಾರರು ಧರ್ಮದಲ್ಲಿ ಅಡಗಿದ ಅಶುದ್ಧತೆಯನ್ನು ತಮ್ಮ ವಿಚಾರಧಾರೆಗಳ ಮೂಲಕ ತಗೆದು ಹಾಕಿ ಧರ್ಮವನ್ನು ಶ್ರೇಷ್ಠತೆಯೆ ಕಡೆಗೆ ತಗೆದುಕೊಂಡು ಹೋಗುವ ಪ್ರಯತ್ನ ಮಾಡಿದ್ದಾರೆ.

ಕರ್ನಾಟಕದ ಪಾಲಿಗೆ ೧೨ ನೇ ಶತಮಾನ ಸುವರ್ಣಾಕ್ಷರದಲ್ಲಿ ಬರೆದಿಡುವ ಕಾಲವೇ ಸರಿ! ಈ ಕಾಲಘಟ್ಟದ ಬಸವಣ್ಣ, ಅಲ್ಲಮ ಪ್ರಭು, ಸರ್ವಜ್ಞ , ಆಯ್ದಕ್ಕಿ ಲಕ್ಕಮ್ಮ ಹಾಗೂ ಅಕ್ಕಮಹಾದೇವಿ ಸಮಾಜದಲ್ಲಿದ್ದ ಅಸಮಾ ನತೆ, ಅಸ್ಪ್ರಶ್ಯತೆಯನ್ನು ತೊಡೆದು ಹಾಕುವ ಪ್ರಯತ್ನದ ಜತೆ ಜತೆಗೆ ತಮ್ಮ ಅರಿವನ್ನು ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ವಚನಕಾರರು ಲೌಕಿಕ ಜೀವನದಲ್ಲೇ ಅಲೌಕಿಕವನ್ನು ಕಂಡುಕೊಂಡು ಆತ್ಮವನ್ನು ಪರಮಾತ್ಮನಲ್ಲಿ ಅನುಸಂಧಿಸಲು ನಿರಂತರ ತಪಸ್ಸು ಮಾಡಿದ್ದಾರೆ. ಈ ಎಲ್ಲ ವಚನಕಾರರಲ್ಲಿ ಅಕ್ಕಮಹಾದೇವಿ ಹರನೇ ನನ್ನ ಗಂಡನಾಗಬೇಕೆಂದು ಭಾವಿಸಿ ಅನುಸಂಧಾನ ನಡೆಸಿದ ಒಬ್ಬ ಅಪ್ಪಟ ಪ್ರೇಮಿಯಾದರು.

ಬಾಲ್ಯದಿಂದಲೂ ದೇವರನ್ನು ಸೇರುವ ಅಪೇಕ್ಷೆ ಅಕ್ಕ ಮಹಾದೇವಿಯದಾಗಿತ್ತು, ಆದರೆ ಆ ಅಪೇಕ್ಷೆಗೆ ಕೌಶಿಕ ರಾಜ ಅಡ್ಡನಾದನು. ಅಕ್ಕಮಹಾದೇವಿಗೆ ಅನಿವಾರ್ಯವಾಗಿ ಕೌಶಿಕ ರಾಜನನ್ನು ಮದುವೆಯಾಗುವ ಪ್ರಸಂಗ ಎದುರಾಗಿ ಮದುವೆಯೂ ಆಯಿತು. ಆದರೇನು? ಈ ಮದುವೆ ಅವಳಲ್ಲಿ ಭಗವಂತನಲ್ಲಿ ಅನುಸಂಧಿಸುವ ಹಂಬಲವನ್ನು ಕಡಿಮೆಗೊಳಿಸಲಿಲ್ಲ. ಮಹಾ ಕಾರ್ಯವನ್ನು ಮಾಡಲು ಹೊರಟವರಿಗೆ ಅನೇಕ ಅಡ್ಡಿ ಆತಂಕಗಳು ಎದುರಾಗುವುದು ಸಹಜ. ನದಿ ಸಮುದ್ರವನ್ನು ಸೇರಲು ಹೊರಟಾಗ ಏನೇ ಅಡ್ಡಿಯಾದರೂ ಕೊಚ್ಚಿಕೊಂಡು ಹೋಗುವಂತೆ ಆತ್ಮದ ಹಸಿವನ್ನು ಇಂಗಿಸಿಕೊಳ್ಳಲು ಹೊರಟ ಆತ್ಮಕ್ಕೆ ಯಾವುದು ಗಣನೆಗೆ ಬರುವುದೇ ಇಲ್ಲ.

ಅಕ್ಕಮಹಾದೇವಿ ಕೌಶಿಕ ರಾಜನಿಗೆ ಮೂರು ಷರತ್ತುಗಳನ್ನು ವಿಧಿಸಿದ್ದಳು. ಒಂದು ದಿನ ಅಂತಃಪುರದಲ್ಲಿ ರಾಜನ ಬಳಿ ಅಕ್ಕಮಹಾದೇವಿ ಹೋದಾಗ ಕೌಶಿಕ ರಾಜ, ಅಕ್ಕ ವಿಧಿಸಿದ್ದ ಷರತ್ತುಗಳನ್ನು ಮೀರಿ ನಡೆದ! ಅದೇ ಸಮಯಕ್ಕೆ ಅಂತಃಪುರದ ಬಳಿ ಜಂಗಮನೊಬ್ಬ ಭಿಕ್ಷೆ ಬೇಡಲು ಬಂದಿದ್ದ. ಹೀಗಾಗಿ ಜಂಗಮನಿಗೆ ಭಿಕ್ಷೆ ನೀಡುವ ಧಾವಂತಕ್ಕೆ ಬಟ್ಟೆಯೇ ಇಲ್ಲದ ಅವಸ್ಥೆಯೊಳಗೆ ಅಕ್ಕ ಹೊರಗೆ ನಡೆದು ಬಂದು ಬಿಟ್ಟಳು. ಹಾಗೆ ಹೊರಗೆ ಬಂದ ಅಕ್ಕ ನಿರ್ವಾಣವೆಂಬ ಬಯಲನ್ನು ತೊಟ್ಟವಳಿಗೆ ಅರಿವೆಯ ಹಂಗ್ಯಾಕೆ? ಚೆನ್ನಮಲ್ಲಿಕಾರ್ಜುನನಿಗೆ ಅರ್ಪಿಸಿಕೊಂಡ ಮೇಲೆ ಮೈಮೇಲಿನ ಬಟ್ಟೆ ಯಾಕೆ? ಎಂದು ಹೇಳಿ ಶ್ರೀಶೈಲವನ್ನು ತಲಪುತ್ತಾಳೆ.

ಅಕ್ಕಮಹಾದೇವಿಗೆ ಅಧ್ಯಾತ್ಮಿಕವಾಗಿ ಗುರುವಿರಲಿಲ್ಲದಿದ್ದರೂ ಆತ್ಮವನ್ನು ಪರಮಾತ್ಮನಲ್ಲಿ ಅನುಸಂಧಾನಿಸುವುದನ್ನು ಅಕ್ಕ ಹೇಗೆ ಕಲಿತಳು ಎಂಬುದು ಕುತೂಹಲಕಾರಿ ಪ್ರಶ್ನೆ. ಅಧ್ಯಾತ್ಮಿಕ ಸಾಧನೆಯಲ್ಲಿ ನಾವು ಎರಡು ಸಾಧ್ಯತೆಗಳನ್ನು ಕಾಣಬಹುದು. ಒಂದು ಪ್ರತ್ಯಕ್ಷ ಇನ್ನೊಂದು ಪರೋಕ್ಷ ಅನುಗ್ರಹ. ಪ್ರತ್ಯಕ್ಷ ಅನುಗ್ರಹವೆಂದರೆ ಗುರುವಿನ ಮೂಲಕ ಆಗುವ ಅನುಗ್ರಹ, ಪರೋಕ್ಷ ಅನುಗ್ರಹವೆಂದರೆ ದೈವಸಾಕ್ಷಾತ್ಕಾರವಾಗಿ ಸಾಂಕೇತಿಕ ಸೂಚನೆ ಘಟನೆ ಗಳಿಂದ ತಿಳಿಯುವುದು. ಪರೋಕ್ಷ ಅನುಗ್ರಹವೇ ಅಕ್ಕನನ್ನು ಚೆನ್ನಮಲ್ಲಿಕಾರ್ಜುನನ ಪತ್ನಿಯಾಗಿಸಲು ಕಾರಣವಾಯಿತು! ಇದಕ್ಕೆ ಅಕ್ಕ ತನ್ನ ವಚನದಲ್ಲಿ ಬಸವಣ್ಣ, ಅಲ್ಲಮ, ಅಜಗಣ್ಣ ಹಾಗೂ ಚೆನ್ನಬಸವಣ್ಣ ನನಗೆ ಅನುಗ್ರಹಿಸಿದ್ದಾರೆ ಎಂದು ಹೇಳುತ್ತಾಳೆ.

ಅನೇಕರು ಜಗತ್ತಲ್ಲಿ ದೇವರಿದ್ದಾನಾ? ಅವನು ಇರುವುದಾದರೆ ಹೇಗಿದ್ದಾನೆ? ಅವನು ದೇವಸ್ಥಾನಗಳಲ್ಲಿ ಇದ್ದಾನೆಯೇ? ಎಂಬ ಪ್ರಶ್ನೆಗಳನ್ನು ಕೇಳುತ್ತಾರೆ. ಮನುಷ್ಯ ಜನ್ಮ ೮೪ ಯೋನಿಗಳನ್ನು ದಾಟಿ ಬಂದಿದೆ, ಈ ೮೪ ಯೋನಿಗಳಲ್ಲಿ ಕೊನೆಯ ೭ ಜನ್ಮಗಳು ಮಾತ್ರ ಮನುಷ್ಯನದ್ದು ಎಂಬುದನ್ನು ಅಧ್ಯಾತ್ಮ ಹೇಳುವ ಸತ್ಯ. ಪ್ರತಿಯೊಂದು ಆತ್ಮಕ್ಕೂ ತನ್ನದೇ ಆದ ಹಸಿವು ಇರುತ್ತದೆ, ಆ ಹಸಿವು ತನ್ನ ಮೂಲವನ್ನು ಸೇರುವುದು. ಅದು ೭ ಜನ್ಮದಲ್ಲಿ ಯಾವ ಜನ್ಮದದರೂ ಬರಬಹುದು! ಹೀಗಾಗಿ ಯಾರಿಗೆ ದೇವರು ಇಲ್ಲವೆಂಬ ದುಗುಡ ಇದೆಯೋ, ನಾಸ್ತಿಕ ಭಾವವನ್ನು ಒಳಗೊಂಡಿzರೋ ಅವರಿಗೆ ತಮ್ಮ
ಮೂಲವನ್ನು ಸೇರುವ ಬಯಕೆ ಈ ಜನ್ಮದಲ್ಲಿ ಬಂದಿಲ್ಲ ಎಂಬುದು ಅಕ್ಕನ ವಾದ.

ಅದಕ್ಕಾಗಿಯೇ ಅಕ್ಕ ‘ಹರನೇ ನನಗೆ ಗಂಡನಾಗಬೇಕೆಂದು ಅನಂತಕಾಲ ತಪಿಸಿದ್ದೇ ನೋಡಾ’ ಎಂದು ಹೇಳುತ್ತಾಳೆ. ಇಲ್ಲಿ ಅನಂತಕಾಲವೆಂದರೆ
ಒಂದೆರಡು ದಿನಗಳಲ್ಲ, ವರುಷಗಳು ಅಲ್ಲ! ಬದಲಾಗಿ ಅದೆಷ್ಟೋ ಈ ಹಿಂದಿನ ಜನ್ಮಗಳಿಂದಲೂ ಮಾಡಿಕೊಂಡು ಬಂದಿರುವ ತಪಸ್ಸು. ಒಂದು ಪುಟ್ಟ ಮಗು ತೊಟ್ಟಿಲಲ್ಲಿ ಮಲಗಿದೆ, ಆ ಮಗುವಿನ ತಾಯಿ ಅಡುಗೆ ಮಾಡುತ್ತಿದ್ದಾಳೆ. ಅಡುಗೆ ಮಾಡುತ್ತಿರುವ ಅಮ್ಮನ ಕಿವಿ ಮಗುವಿನ ಕಡೆಗೆ ಇದೆ. ಆಗ
ಮಲಗಿದ್ದ ಮಗು ಕುಸು ಕುಸು ಕೂಗುತ್ತದೆ, ಆಗ ತಾಯಿ ಮಗು ಸಂಪೂರ್ಣವಾಗಿ ಎಚ್ಚರವಾಗಿಲ್ಲ ಎಂದುಕೊಂಡು ಮಗುವಿನ ಹತ್ತಿರ ಬರುವುದಿಲ್ಲ.

ಎರಡನೇ ಸಾರಿ ಮಗು ಕೈ ಕಾಲು ಜಾಡಿಸಿಕೊಂಡು ಮೈ ಮುರಿದು ಕೂಗುತ್ತದೆ, ಆಗ ಅಮ್ಮ ಮಗು ನನ್ನ ಒಗ್ಗರಣೆ ಮುಗಿಯುವ ತನಕ ಸುಮ್ಮನಿರುತ್ತಾನೆ ಎಂದುಕೊಂಡು ಅಡುಗೆಯನ್ನು ಮುಂದುವರಿಸುತ್ತಾಳೆ. ಆಗ ಮಗು ಮೂರನೇ ಹಂತದಲ್ಲಿ ಜೋರಾಗಿ ಅಳುತ್ತದೆ, ಆಗ ಅಮ್ಮ ಬಲು ಬೇಗನೆ ಬಂದು
ಮಗುವನ್ನು ತಗೆದುಕೊಳ್ಳುತ್ತಾಳೆ. ಹಾಗೆಯೇ ಭಗವಂತ ನಮ್ಮ ಕೂಗನ್ನು ಕೇಳಿಸಿಕೊಳ್ಳುತ್ತಲೇ ಇದ್ದಾನೆ, ಆದರೆ ಅವನ ಮಕ್ಕಳಾದ ನಾವು ಅವನನ್ನು ಜೋರಾಗಿ ಕೂಗುತ್ತಿಲ್ಲ ಅಷ್ಟೆ. ಭಗವಂತನನ್ನು ಕೂಗಿ ಕರೆಯುವುದನ್ನು ಅಕ್ಕನ ಜೀವನದಿಂದ ಕಲಿಯಬೇಕಾದ ಪಾಠ.

ಹಸಿವಾದೊಡೆ ಭಿಕ್ಷಾನ್ನಗಳುಂಟು ತೃಷೆಯಾದೊಡೆ ಕೆರೆ ಬಾವಿ ಹಳ್ಳಗಳುಂಟು ಶಯನಕೆ ಹಾಳು ದೇಗುಲಗಳುಂಟು ಆತ್ಮ ಸಂಗಾತಕೆ ನೀನೆನಗುಂಟು ಚೆನ್ನಮಲ್ಲಿಕಾರ್ಜುನ. ಅದೆಂತಹ ಅದ್ಭುತ ಕಲ್ಪನೆಯನ್ನು ಅಕ್ಕ ನೀಡಿದ್ದಾಳೆ. ಹೊಟ್ಟೆಗೆ ಹಸಿವಾದಾಗ ಭಿಕ್ಷೆಯಲ್ಲಿ ಬಂದಿರುವ ಅನ್ನವಿದೆ, ಬಾಯಾರಿಕೆ ಯಾದಾಗ ನೀರು ಕುಡಿಯಲು ಕೆರೆ, ಕಟ್ಟೆ, ಬಾವಿಗಳಿವೆ, ಮಲಗಲು ಸಾಕಷ್ಟು ದೇವಾಲಯಗಳಿವೆ. ನನ್ನ ಆತ್ಮ ಸಂಗಾತಕ್ಕೆ ಚೆನ್ನಮಲ್ಲಿಕಾರ್ಜುನನ್ನು ಹೊರತು ಪಡಿಸಿ ಬೇರೆ ಯಾರು ಇಲ್ಲ ಎಂದು ಅಕ್ಕ ಹೇಳುತ್ತಾಳೆ. ಹೇ ಭಗವಂತ ನಿನ್ನ ಹೊರತು ನನಗಾರು ಗತಿಯಿಲ್ಲ ಎಂದು ಹೇಳುವುದೇ ಆಧ್ಯಾತ್ಮದಲ್ಲಿ ನಿಜವಾದ ಸಮರ್ಪಣಾ ಭಾವ. ಮತ್ತೊಂದು ವಚನದಲ್ಲಿ ಸಾಕ್ಷಾತ್ ನೀನೇ ನೆಲೆಸಿರುವ ದೇಹವನ್ನು ನಿನಗೆ ಸಮರ್ಪಣೆ ಮಾಡಿದ್ದೇನೆ. ನನಗೆ ಬೇರೆ ದಾರಿ ಯಾವುದು ಗೊತ್ತಿಲ್ಲ, ನನ್ನ ಬುದ್ಧಿಯೂ ನೀವೇ ಆಗಿದ್ದಿರಿ. ನನ್ನ ಪ್ರಾಣವನ್ನು ನಿಮಗೆ ಅರ್ಪಿಸಿದ್ದೇನೆ, ನಾನು ನಿಮ್ಮನ್ನು ಬಿಟ್ಟು ಬೇರೆ ಯಾವುದನ್ನು
ನೆನೆಯುದಿಲ್ಲ, ಒಂದು ವೇಳೆ ಬೇರೆಯೊಂದನ್ನು ನೆನೆದರೆ ನಿಮ್ಮ ಮೇಲೆ ಆಣೆ ಎಂಬ ಭರವಸೆಯನ್ನು ಒಂದು ವಚನದಲ್ಲಿ ನೀಡಿದ್ದಾಳೆ.

ಅಕ್ಕಮಹಾದೇವಿ ತನ್ನ ಆತ್ಮ ದರ್ಶನದ ಕಟ್ಟಕೆಡೆಯ ಸ್ಥಿತಿಯನ್ನು ಕದಳೀ ವನದಲ್ಲಿ ಪಡೆದುಕೊಂಡಳು ಎಂದು ಹೇಳಲಾಗುತ್ತದೆ. ಈ ಕದಳೀ ಎಂಬುವುದನ್ನು ಅನೇಕರು ಬಾಳೆಯ ತೋಟ ಎಂದು ಭಾವಿಸಿದ್ದಾರೆ. ಆದರೆ ಅದು ಹಾಗೆ ಅಲ್ಲ, ಬಾಳೆಯ ತೋಟ ಕೇವಲ ಸಾಂಕೇತಿಕ ಮಾತ್ರ! ನಿಸರ್ಗದಲ್ಲಿರುವ ಹಲವು ಮರಗಳು ಒಮ್ಮೆ ಫಲ ನೀಡಿದ ಬಳಿಕವೂ ಮುಂದಿನ ವರುಷದ ಫಲ ಕೊಡಲು ಸಿದ್ಧವಾಗುತ್ತವೆ. ಆದರೆ ಬಾಳೆ ಮಾತ್ರ ಒಮ್ಮೆ ಫಲ ಕೊಟ್ಟು ನಂತರ ಇಲ್ಲವಾಗಿ ಬಿಡುತ್ತದೆ. ಮೋಕ್ಷವು ಪ್ರತಿಯೊಬ್ಬ ಮನುಷ್ಯನಲ್ಲಿ ಕಾಣಬೇಕಾದ ಫಲ, ಒಮ್ಮೆ ಮೊಕ್ಷವೆಂಬ ಫಲ ಸಿಕ್ಕ ನಂತರ ದೇಹ ಇಲ್ಲವಾಗಿ ಬಿಡುತ್ತದೆ.

ಹಾಗೆಯೇ ಅಕ್ಕ ಕೂಡಾ ಫಲವನ್ನು ಕಂಡುಕೊಂಡು ಇಲ್ಲವಾಗಿದ್ದಾಳೆ. ಸ್ವತಃ ಅಕ್ಕನೆ ಕದಳಿಯನು ದಾಟಿದೆನಾಗಿ ಚೆನ್ನಮಲ್ಲಿಕಾರ್ಜುನನ್ನು ಅಪ್ಪಿಕೊಂಡನು ಎಂದು ಹೇಳಿದ್ದಾಳೆ. ಅಕ್ಕನ ಹಾಗೆ ಮನಸ್ಸನ್ನು ಆತ್ಮದರ್ಶನ ರೂಪಕ್ಕೆ ತರಲು ಮಾರ್ಗಗಳಿವೆ. ಮೊದಲನೆಯದ್ದು ಪೂಜೆ. ಪ್ರಾರಂಭಿಕ
ಹಂತದಲ್ಲಿ ಪ್ರತಿಯೊಬ್ಬರು ಪೂಜೆಯ ಮೂಲಕ ಭಗವಂತನನ್ನು ಆರಾಧಿಸುತ್ತಾರೆ, ಆದರೆ ಇದುವೇ ಅಂತಿಮವಲ್ಲ, ಹೀಗಾಗಿಯೇ ಅಕ್ಕಮಹಾದೇವಿ ಪೂಜೆಯ ನಂತರ ಜಪದ ಹಂತಕ್ಕೆ ಬರುತ್ತಾಳೆ. ಜಪದಲ್ಲಿ ಎರಡು ಬಗೆಗಳಿವೆ, ಮಂತ್ರವನ್ನು ಗಟ್ಟಿಯಾಗಿ ಜಪಿಸುವುದು, ಮತ್ತೊಂದು ಮನಸ್ಸಿನಲ್ಲಿಯೇ ಜಪಿಸುವುದು, ಇದಕ್ಕೆ ಜಪಧ್ಯಾನ ಎಂದು ಹೆಸರು. ಜಪಧ್ಯಾನದಲ್ಲಿ ಮನಸ್ಸಿನ ಮಾತನಾಡುವಾಗ ಆ ಮಾತುಗಳನ್ನು ಭಗವಂತನಲ್ಲಿ ಅನುಸಂಧಾನಿ ಸುವುದು ಆಧ್ಯಾತ್ಮಿಕ ಉನ್ನತಿಯನ್ನು ಕಂಡುಕೊಳ್ಳಲು ಸಹಾಯವಾಗುತ್ತದೆ.

ಹೀಗಾಗಿ ಅಕ್ಕನ ವಚನಗಳು ಜಪಾಧ್ಯಾನಗಳೆ ಆಗಿರುವುದರಿಂದ ಅಕ್ಕ ನಿರಂತರವಾಗಿ ತನ್ನ ಒಳಮನಸ್ಸನ್ನು ನೋಡಿದ್ದಾರೆ. ಅಕ್ಕನ ವಿಚಾರಗಳು ಆಧುನಿಕ ಸೀ ಹೋರಾಟಗಾರರಿಗೆ ಮಾದರಿ ಆಗಬಹುದು, ಬಸವಣ್ಣನ ವಿಚಾರಗಳು ಇಂದಿನ ಡೋಂಗಿ ಹೋರಾಟಗಾರರ ವಾದಗಳಿಗೆ ದಾರಿ ಆಗಬ ಹುದು. ಆದರೆ ಈ ಹೋರಾಟಗಾರರು ಕಾಲಾನಂತರದಲ್ಲಿ ಅಪ್ರಸ್ತುತರಾಗುತ್ತಾರೆ, ಆದರೆ ಮಹಾತ್ಮರ ಚಿಂತನೆಗಳು ಸರ್ವ ಕಾಲಕ್ಕೂ ಪ್ರಸ್ತುತವಾಗಿರುತ್ತವೆ. ಹೀಗಾಗಿ ನಮ್ಮ ಸಾಧು ಸಂತರನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ನೋಡುವುದು ಬೇಡ, ಬದಲಾಗಿ ಅವರ ವಿಶಾಲ ದೃಷ್ಟಿಯಲ್ಲಿ ಅವುಗಳನ್ನು ಪಾಲಿಸೋಣ.