Wednesday, 11th December 2024

ಅಮಿತ್ ಶಾ ಕೊಟ್ಟು ಹೋದ ಟಾಸ್ಕ್ ಏನು ?

ಮೂರ್ತಿ ಪೂಜೆ

ಕಳೆದ ವಾರ ಕರ್ನಾಟಕಕ್ಕೆ ಬಂದಿದ್ದ ಬಿಜೆಪಿ ವರಿಷ್ಠ ಅಮಿತ್ ಶಾ ಅವರು ಕರ್ನಾಟಕದ ನಾಯಕರಿಗೆ ಒಂದು ಟಾ ಕೊಟ್ಟು ಹೋಗಿದ್ದಾರೆ. ಅದು ಹಳೆ ಮೈಸೂರು ಭಾಗದ ಜಿಗಳಲ್ಲಿ ಮೂವತ್ತೈದು, ಬೆಂಗಳೂರು ನಗರ ಜಿಲ್ಲೆಯಲ್ಲಿ ಇಪ್ಪತ್ತು ಸ್ಥಾನಗಳನ್ನು ನಾವು ಗೆಲ್ಲಲೇಬೇಕು ಎಂಬುದು ಈ ಟಾಸ್ಕು. ಅಂದ ಹಾಗೆ ಈ ವಿಷಯದ ಬಗ್ಗೆ ಅಮಿತ್ ಶಾ ನಿಖರವಾಗಿ ಬೊಟ್ಟು ಮಾಡಿ ತೋರಿಸಲು ಕಾರಣವೂ ಇದೆ.

ಅದೆಂದರೆ ಬೆಂಗಳೂರು ನಗರ ಜಿಲ್ಲೆಯನ್ನು ಹೊರತುಪಡಿಸಿದರೆ ಹಳೆ ಮೈಸೂರಿನ ಬಾಕಿ ಜಿಲ್ಲೆಗಳಲ್ಲಿ ಬಿಜೆಪಿಯ ಗಳಿಕೆ ಇಪ್ಪತ್ತು ಸೀಟುಗಳ ಗಡಿ ತಲುಪುತ್ತಿಲ್ಲ. ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ಕೊಡಗು, ತುಮಕೂರು, ಚಿಕ್ಕಮಗಳೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಗಳಲ್ಲಿ ಏನೇ ಮಾಡಿದರೂ ಬಿಜೆಪಿಯ ಶಕ್ತಿ ಹೆಚ್ಚುತ್ತಿಲ್ಲ.

ಸಾಲದು ಎಂಬಂತೆ ಬೆಂಗಳೂರು ನಗರ ಜಿಲ್ಲೆಯಲ್ಲಿ ಕಳೆದ ಬಾರಿ ಗೆದ್ದವರ ಪೈಕಿ ನಾಲ್ಕು ಮಂದಿ ಸೋಲುವ ಸಾಧ್ಯತೆ ಜಾಸ್ತಿ ಎಂಬ ರಿಪೋರ್ಟು ಅಮಿತ್ ಶಾರ ಕೈಲಿದೆ. ಅರ್ಥಾತ್, ಬೆಂಗಳೂರು ನಗರ ಜಿಲ್ಲೆ ಮತ್ತು ಹಳೆಮೈಸೂರಿನ ಬಾಕಿ ಜಿಗಳಲ್ಲಿ ಬಿಜೆಪಿ ಈ ಬಾರಿ ಮೂವತ್ತು ಸೀಟು ಗೆಲ್ಲುವುದೂ ಕಷ್ಟ ಎಂಬುದು ಸಧ್ಯದ ಮಾಹಿತಿ. ಬೆಂಗಳೂರಿನಲ್ಲಿ ಕುಳಿತ ಕೆಲವು ತಂಡ ಗಳು, ಸ್ವಯಂಬಲದ ಮೇಲೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಅಂತ ರಿಪೋರ್ಟು ಕೊಡುತ್ತಿದ್ದರೂ ಅವೆಲ್ಲ ಬಿಲೀವಬಲ್ ರಿಪೋರ್ಟು ಗಳಲ್ಲ ಎಂಬುದು ಅಮಿತ್ ಶಾ ಅವರಿಗೆ ಗೊತ್ತಿದೆ.

ಯಾಕೆಂದರೆ, ರಾಜ್ಯ ಬಿಜೆಪಿ ಮತ್ತು ಸಂಘಪರಿವಾರದ ನಾಯಕರು ಮಾಡಿಸುತ್ತಿರುವ ಸರ್ವೆಗಳ ಕತೆ ಒಂದು ಕಡೆಯಾದರೆ, ಅಮಿತ್ ಶಾರ ಸಿಗ್ನಲ್ಲಿನ ಅನುಸಾರ ಆರು ನೂರು ಜನರ ಟಫ್ ತಂಡವೊಂದು ರಾಜ್ಯಾದ್ಯಂತ ಸರ್ವೆ ನಡೆಸಿ ರಿಪೋರ್ಟು ಕೊಡುತ್ತಿದೆ. ಈ ತಂಡ ಕೊಡುತ್ತಿರುವ ಸರ್ವೆ ರಿಪೋರ್ಟಿಗೂ, ಬಿಜೆಪಿ ಹೆಂಗೆಂಗೆ ನೂರಾ ಹದಿನಾಲ್ಕು ಸೀಟು ಗೆಲ್ಲುತ್ತದೆ ಅಂತ
ಲೋಕಲ್ -ಕ್ಟರಿಗಳಲ್ಲಿ ತಯಾರಾಗುತ್ತಿರುವ ಸರ್ವೆ ರಿಪೋರ್ಟುಗಳಿಗೂ ಹೋಲಿಕೆಯೇ ಆಗುತ್ತಿಲ್ಲ ಹೀಗಾಗಿ ತಲೆಕೆಡಿಸಿ ಕೊಂಡಿರುವ ಅಮಿತ್ ಶಾ ಕರ್ನಾಟಕಕ್ಕೆ ಬಂದಾಗ ಓಲ್ಡ್ ಮೈಸೂರ್ ಥರ್ಟಿ ಫೈವ್, ಬೆಂಗಳೂರ್ ಅರ್ಬನ್ ಡಿಸ್ಟ್ರಿಕ್ಟ್ ಟ್ವೆಂಟಿ ಅಂತ ಗುರಿ ನಿಗದಿ ಮಾಡಿ, ಈ ಭಾಗದಲ್ಲಿ ಹೆಚ್ಚು ಸೀಟು ಗೆಲ್ಲಲು ಒಕ್ಕಲಿಗರ ಗಮನ ಸೆಳೆಯಬೇಕು ಅಂತ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳಿದ್ದ ವೇದಿಕೆಯ ಮೂಲಕ ಜನರತ್ತ ಕೈ ಬೀಸಿದ್ದಾರೆ.

ಮರು ದಿನದ ಸಮಾವೇಶದಲ್ಲಿ ಕಾಂಗ್ರೆಸ್ಸನ್ನು ಟೀಕಿಸಿದಂತೆ ಜೆಡಿಎಸ್ಸನ್ನೂ ಟೀಕಿಸಿ ಒಂದು ಶಾಸ್ತ್ರ ಮುಗಿಸಿ ಹೋಗಿದ್ದಾರೆ.
ಅಂದ ಹಾಗೆ ಹಳೆ ಮೈಸೂರು ಭಾಗದ ಜಿಲ್ಲೆಳಲ್ಲಿ ದೇವೇಗೌಡ-ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಶಕ್ತಿಯನ್ನು ಕಡಿಮೆ ಮಾಡುವುದು ಕಷ್ಟ. ಆದರೆ ಜೆಡಿಎಸ್ ವಿರುದ್ಧವಾಗಿ ಕಾಂಗ್ರೆಸ್ ಕಡೆ ವಾಲುತ್ತಿದ್ದ ಒಕ್ಕಲಿಗರ ಮತಗಳನ್ನಾದರೂ ಸೆಳೆಯಬೇಕು ಎಂಬ ಲೆಕ್ಕಾಚಾರ ಅಮಿತ್ ಶಾ ಅವರಲ್ಲಿದೆ. ಕರ್ನಾಟಕಕ್ಕೆ ಬರುವ ಮುನ್ನ ಮಾಜಿ ಮುಖ್ಯಮಂತ್ರಿಯೊಬ್ಬರ ಬಳಿ ಚರ್ಚಿಸಿದ್ದ ಅಮಿತ್ ಶಾ, ಹಳೆ ಮೈಸೂರಿನಲ್ಲಿ ನಮ್ಮ ಪಕ್ಷದ ಬೆಳವಣಿಗೆಗೆ ಇರುವ ಅಡ್ಡಿಯೇನು? ಅಂತ ಕೇಳಿದ್ದರಂತೆ.

ಆ ಸಂದರ್ಭದಲ್ಲಿ ಈ ಮಾಜಿ ಮುಖ್ಯಮಂತ್ರಿಗಳು: ನಾವು ಕಾಗದದ ಮೇಲೆ ಬಲಿಷ್ಟರಾಗುತ್ತಿದ್ದೇವೆಯೇ ಹೊರತು ಹಳೆ
ಮೈಸೂರು ಭಾಗದ ಜಿಗಳಲ್ಲಿ ಕೇಪಬಲ್ ಕ್ಯಾಂಡಿಡೇಟುಗಳನ್ನು ತಯಾರು ಮಾಡುತ್ತಿಲ್ಲ. ಇದು ಹೇಗಿದೆ ಎಂದರೆ ನಾವು ಈ ಭಾಗದಲ್ಲಿ ವಿದ್ಯುತ್ ಉತ್ಪಾದಿಸುತ್ತಿದ್ದೇವೆ. ಆದರೆ ವಿದ್ಯುತ್ ಅನ್ನು ಭರಿಸುವ ಟ್ರಾನ್ಸ್ ಫಾರ್ಮರ್‌ಗಳನ್ನು (ಅಭ್ಯರ್ಥಿಗಳು) ತಯಾರಿಸುತ್ತಿಲ್ಲ ಎಂದವರು ಹೇಳಿದಾಗ ಅಮಿತ್ ಶಾ ಚಿಂತಾಕ್ರಾಂತರಾದರಂತೆ.

ಹೀಗಾಗಿ ಕಳೆದ ವಾರ ಕರ್ನಾಟಕಕ್ಕೆ ಬಂದ ಅವರು ಶುಕ್ರವಾರ ರಾತ್ರಿ ವೆಸ್ಟೆಂಡ್ ಹೋಟೆಲಿನಲ್ಲಿ ಮೈಸೂರು ವಿಭಾಗದ ನಾಯಕರ ಜತೆ ಸಭೆ ನಡೆಸಿದರು. ಮುಂದೇನು ಮಾಡಬಹುದು? ಅನ್ನುವ ಬಗ್ಗೆ ಅಲ್ಲಿದ್ದ ನಲವತ್ತು ಪ್ರಮುಖರಿಂದ ಫೀಡ್ ಬ್ಯಾಕು ಪಡೆದ ಅಮಿತ್ ಶಾ ಅವರಿಗೆ ಪರಿಸ್ಥಿತಿ ತಾವಂದುಕೊಂಡಷ್ಟು ಸರಳವಾಗಿಲ್ಲ ಅನ್ನಿಸಿದೆಯಂತೆ.

ಗಾಲಿ ಉರುಳುತ್ತಿದೆ
ಈ ಮಧ್ಯೆ ಏಕಾಏಕಿಯಾಗಿ ಮೇಲೆದ್ದು ನಿಂತಿರುವ ಅಂದ ಕಾಲತ್ತಿದ ಬಿಜೆಪಿ ನಾಯಕ ಗಾಲಿ ಜನಾರ್ದನ ರೆಡ್ಡಿ ವಿಪರೀತ
ಆಕ್ಟೀವ್ ಆಗಿzರಂತೆ. ಈ ಹಿಂದೆ ಆಕ್ರಮ ಗಣಿಗಾರಿಕೆಯ ಆರೋಪದ ಹಿನ್ನೆಲೆಯಲ್ಲಿ ಜೈಲು ಸೇರಿದ್ದ ರೆಡ್ಡಿಗಾರು ನಂತರದ ದಿನಗಳಲ್ಲಿ ತೆರೆಯ ಹಿಂದೆ ಸರಿದಿದ್ದರು. ಆದರೆ ಈಗವರು ಏಕಾಏಕಿ ಮೇಲೆದ್ದು ನಿಂತಿರುವುದು ಹಲವು ವ್ಯಾಖ್ಯಾನಗಳಿಗೆ ಕಾರಣವಾಗಿದೆ. ಅದೇನೇ ಇದ್ದರೂ ಜನಾರ್ಧನ ರೆಡ್ಡಿಯವರು ಘೋಷಿಸಿರುವ ಕರ್ನಾಟಕ ಕಲ್ಯಾಣ ಪ್ರಗತಿ ಪಕ್ಷದಿಂದ ಯಾರಿಗೆ ಲಾಭ? ಅನ್ನುವುದು ಮುಖ್ಯ.

ಅಂದ ಹಾಗೆ ಇವತ್ತಿನ ಸ್ಥಿತಿಯಲ್ಲಿ ಮೋದಿ-ಅಮಿತ್ ಶಾ ಅವರನ್ನು ಎದುರು ಹಾಕಿಕೊಂಡು ಜನಾರ್ದನ ರೆಡ್ಡಿ ಮೇಲೇಳಲು ಯತ್ನಿಸುತ್ತಿzರೆ ಎಂಬುದು ಅನುಮಾನ. ಆದರೂ ಅವರು ಮೇಲೇಳಲು ಯತ್ನಿಸುತ್ತಿದ್ದಾರೆ ಎಂದರೆ ಈ ಬೆಳವಣಿಗೆಯಿಂದ ಬಿಜೆಪಿ ಲಾಭ ನಿರೀಕ್ಷಿಸಿದೆ ಎಂದೇ ಅರ್ಥ. ಒಂದು ಮೂಲದ ಪ್ರಕಾರ, ಜನಾರ್ದನ ರೆಡ್ಡಿ ಅವರ ಈ ಸಾಹಸಕ್ಕೆ ಆಂಧ್ರದ ಮುಖ್ಯಮಂತ್ರಿ ಜಗನ್ ಅವರ ಬೆಂಬಲವಿದೆಯಂತೆ. ಗಮನಿಸಬೇಕಾದ ಸಂಗತಿ ಎಂದರೆ ಜಗನ್ ಅವರು ಮೋದಿ-ಅಮಿತ್ ಶಾ ಅವರಿಗೆ ಆಪ್ತರು. ಈ ಮಧ್ಯೆ ಮೋದಿ, ಅಮಿತ್ ಶಾ ಮತ್ತು ಜಗನ್ ಅವರಿಗೆ ತೆಲಂಗಾಣದ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರರಾವ್ ಸಮಾನ ವೈರಿ.

ಈ ವೈರಿ ಕರ್ನಾಟಕದ ನೆಲೆಯಲ್ಲಿ ಜೆಡಿಎಸ್ ಜತೆ ಸೇರಿರುವಾಗ, ತಾವೂ ಏಕೆ ಕರ್ನಾಟಕದ ರಾಜಕೀಯದಲ್ಲಿ ಬಂಡವಾಳ ಹೂಡಬಾರದು ಎಂಬುದು ಜಗನ್ ಯೋಚನೆಯಂತೆ. ಕುತೂಹಲದ ಸಂಗತಿ ಎಂದರೆ ತಮ್ಮ ವೈರಿ ಕೆಸಿಆರ್ ಅವರು ಜೆಡಿಎಸ್ ಬೆಂಬಲಕ್ಕೆ ನಿಂತಿದ್ದರೂ ಮೋದಿ-ಅಮಿತ್ ಶಾ ಸಿಟ್ಟಿಗೆದ್ದಿಲ್ಲ. ಕಾರಣ? ಜೆಡಿಎಸ್ ಬಲಿಷ್ಟವಾದಷ್ಟೂ ಕಾಂಗ್ರೆಸ್ಸಿಗೆ ಡ್ಯಾಮೇಜು. ಹೀಗಾಗಿ ಕೆಸಿಆರ್-ಜೆಡಿಎಸ್ ಮೈತ್ರಿಗೆ ತಾವೇಕೆ ಕಲ್ಲು ಹಾಕಬೇಕು? ಎಂಬುದು ಮೋದಿ-ಅಮಿತ್ ಶಾ ಲೆಕ್ಕಾಚಾರ.

ಕುತೂಹಲದ ಸಂಗತಿ ಎಂದರೆ ಗಾಲಿ ಜನಾರ್ದನ ರೆಡ್ಡಿ ಅವರು ಪಕ್ಷ ಸ್ಥಾಪಿಸಿದ ಕೆಲವೇ ದಿನಗಳಲ್ಲಿ ಕಾಂಗ್ರೆಸ್ಸಿನ ಹಲವರನ್ನು ಸಂಪರ್ಕಿಸಿzರಂತೆ. ಜೆಡಿಎಸ್ ಪಾಳೆಯಕ್ಕೆ ಕಣ್ಣು ಹಾಕಲು ಯತ್ನಿಸಿದರೂ, ಅಲ್ಲಿ ಅವರ ಅಗತ್ಯ ಪೂರೈಸುವವರ ಸಂಖ್ಯೆ ಕಡಿಮೆ. ಹೀಗಾಗಿ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಸಿಗದೆ ಬಂಡಾಯವೇಳುವವರು ಯಾರು ಅಂತ ಗುರುತಿಸಿ ರೆಡ್ಡಿಗಾರು ಆಟ ಶುರು ಮಾಡಿದ್ದಾರೆ.

ನೀವು ನಮ್ಮ ಪಕ್ಷಕ್ಕೆ ಬಂದು ಬಿಡ್ರಮ್ಮ. ನಿಮಗೆ ಒಳ್ಳೆ ಫ್ರೆಂಡು ಸಿಗತ್ತೆ. ಎಲ್ಲಿಂದ? ಹೇಗೆ? ಅಂತ ನಾನು ಹೇಳಲ್ಲ. ಆದರೆ
ನಿಮ್ಮ ಶಕ್ತಿ ಮತ್ತು ಫ್ರೆಂಡು ಸೇರಿದರೆ ನೀವು ಗೆಲ್ಲುವುದು ಗ್ಯಾರಂಟಿ. ಅಂದ ಹಾಗೆ ಯಾರೇನೇ ಹೇಳಿದರೂ ಈ ಸಲ ಹಂಗ್ ಅಸೆಂಬ್ಲಿ ಗ್ಯಾರಂಟಿ ಕಣಮ್ಮ ಮತ್ತು ಆ ದೇವರ ದಯೆಯಿಂದ ನೀವು ಮಂತ್ರಿಯಾಗೋದೂ ಗ್ಯಾರಂಟಿ ಕಣಮ್ಮ ಅಂತ ರೆಡ್ಡಿಗಾರು ಪುಸಲಾಯಿಸುತ್ತಿರುವ ರೀತಿಗೆ ಹಲವರು ಮಾರು ಹೋಗಿದ್ದಾರಂತೆ.

ತಮ್ಮ ಈ ಪ್ರಯತ್ನದಲ್ಲಿ ಜನಾರ್ಧನ ರೆಡ್ಡಿ ಎಷ್ಟು ಸಫಲರಾಗುತ್ತಾರೋ ಗೊತ್ತಿಲ್ಲ. ಆದರೆ ಅವರ ಪಕ್ಷ ಎಷ್ಟು ಮತ
ಪಡೆಯುತ್ತದೋ ಅಷ್ಟರ ಮಟ್ಟಿಗೆ ಅದು ಕಾಂಗ್ರೆಸ್ಸಿಗೆ ನಷ್ಟ. ಬಿಜೆಪಿಗೆ ಲಾಭ. ಇದು ಅರ್ಥವಾದರೆ ರೆಡ್ಡಿಗಾರು ಅವರ ಪಕ್ಷ
ಸ್ಥಾಪನೆಯ ಹಿಂದಿನ ಕಾರಣಗಳು ಸ್ಪಷ್ಟವಾಗುತ್ತವೆ.

ಓವೈಸಿ ಬರಲು ತಯಾರಂತೆ
ಕರ್ನಾಟಕದ ವಿಧಾನಸಭಾ ಚುನಾವಣೆಯ ಕಣದಲ್ಲಿ ಈ ಸಲ ಮುಸ್ಲಿಂ ನಾಯಕ ಅಸಾದುದ್ದೀನ್ ಓವೈಸಿ ರಾರಾಜಿಸಲಿ
zರೆ. ತಮ್ಮ ನೇತೃತ್ವದ ಎಂ.ಐ.ಎಂ ಪಕ್ಷ ಕರ್ನಾಟಕದ ನೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಅಂತ ಓವೈಸಿ ರಣೋತ್ಸಾಹ
ತೋರಿzರಂತೆ. ಆದರೆ ನೂರು ಕ್ಷೇತ್ರಗಳಲ್ಲಿ ಅವರ ಪಕ್ಷ ಸ್ಪರ್ಧಿಸುವುದು ಅನುಮಾನ. ಬದಲಿಗೆ ಕಾಂಗ್ರೆಸ್ ಪಕ್ಷ ಎಲ್ಲಿ ಮುಸ್ಲಿಮರ ಮತಗಳನ್ನು ನೆಚ್ಚಿಕೊಳ್ಳುವ ಸ್ಥಿತಿ ಇದೆಯೋ? ಅಂತಲ್ಲಿ ಓವೈಸಿಯವರ ಪಕ್ಷ ಸ್ಪರ್ಧಿಸಲಿದೆ.

ಅಂದ ಹಾಗೆ ಓವೈಸಿ ಎಪಿಸೋಡಿನಲ್ಲೂ ಕೆಲವು ವಿಚಿತ್ರ ಅಂಶಗಳಿವೆ. ಮೇಲ್ನೋಟಕ್ಕೆ ಅಸಾದುದ್ದೀನ್ ಓವೈಸಿ ಟೆರರ್
ಮುಸ್ಲಿಂ ಲೀಡರು. ಹಾಗಂತ ಹಿಂದುತ್ವದ ಅಜೆಂಡಾ ಹಿಡಿದಿರುವ ಮೋದಿ-ಅಮಿತ್ ಶಾ ಜೋಡಿಯ ಆಕ್ರೋಶಕ್ಕೆ ಅವರು ಗುರಿಯಾಗಿಲ್ಲ. ಈ ಮಧ್ಯೆ ತೆಲಂಗಾಣದ ರಾಜಧಾನಿ ಹೈದ್ರಾಬಾದ್ ಅನ್ನು ತನ್ನ ಪ್ರಬಲ ನೆಲೆಯಾಗಿ ರೂಪಿಸಿಕೊಂಡಿರುವ ಓವೈಸಿ ಅಲ್ಲಿನ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರರಾವ್ ಅವರಿಗೆ ಆಪ್ತರು.

ಆದರೆ ಈ ಅಂಶ ಕೂಡಾ ಮೋದಿ-ಅಮಿತ್ ಶಾ ಅವರಿಗೆ ಕಿರಿಕಿರಿ ಮಾಡಿಲ್ಲ. ಬದಲಿಗೆ ಓವೈಸಿಯವರ ಪಕ್ಷ ಎಲ್ಲಿ ಕಾಂಗ್ರೆಸ್ ವಿರುದ್ಧ ಖಡ್ಗ ಝಳಪಿಸುತ್ತದೋ? ಅಷ್ಟರ ಮಟ್ಟಿಗೆ ಅದು ಬಿಜೆಪಿಗೇ ಅನುಕೂಲ. ಸದ್ಯದ ಲೆಕ್ಕಾಚಾರದ ಪ್ರಕಾರ, ಜೆಡಿಎಸ್, ಎಂಐಎಂ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷಗಳೆಲ್ಲ ಸೇರಿ ಒಂದೊಂದು ಕ್ಷೇತ್ರದಲ್ಲಿ ತಲಾ ಎರಡು, ಮೂರು ಸಾವಿರ ಮುಸ್ಲಿಂ ಮತಗಳನ್ನು ಸೆಳೆಯಲಿ ಎಂಬುದು ಬಿಜೆಪಿ ನಿರೀಕ್ಷೆ. ಅದು ಮಾಡಿರುವ ಪಟ್ಟಿಯ ಪ್ರಕಾರ, ಈ ಎಲ್ಲ ಪಕ್ಷಗಳು ಸೇರಿ ಸೆಳೆಯುವ ಮುಸ್ಲಿಂ ಮತಗಳು ಕಾಂಗ್ರೆಸ್ ಪಕ್ಷವನ್ನು ಮೂವತ್ತು ಕ್ಷೇತ್ರಗಳಲ್ಲಿ ಮಲಗಿಸಲಿವೆ.

ರಾಜಕಾರಣದಲ್ಲಿ ಶತ್ರು, ಮಿತ್ರ ಎಂಬ ವ್ಯಾಖ್ಯಾನಗಳು ಅವರವರು ನಿಂತ ನೆಲೆಯಿಂದ ತೀರ್ಮಾನವಾಗುತ್ತವೆಯೇ ಹೊರತು ಸಿದ್ಧಾಂತಗಳಿಂದಷ್ಟೇ ಅಲ್ಲ.

ಕೇಜ್ರಿವಾಲ್ ನುಗ್ಗಲಿದ್ದಾರೆ

ಈ ಮಧ್ಯೆ ಅಮ್ ಆದ್ಮಿ ಪಕ್ಷದ ಮುಖಂಡ, ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಜನವರಿ ಹದಿನೈದರ ನಂತರ ಕರ್ನಾಟಕಕ್ಕೆ ಕಾಲಿಡಲಿದ್ದಾರೆ. ದೆಹಲಿ, ಪಂಜಾಬ್‌ಗಳನ್ನು ವಶಪಡಿಸಿ ಕೊಂಡ ನಂತರ ಅಮ್ ಆದ್ಮಿಪಕ್ಷ ಗುಜರಾತ್‌ಗೆ ದಂಡೆತ್ತಿ ಹೋಯಿತಾದರೂ ಅದು ನಿರೀಕ್ಷಿಸಿದಷ್ಟು ಫಲ ಕೊಡಲಿಲ್ಲ. ಆದರೆ ಗುಜರಾತ್ ಚುನಾವಣೆಯ ಫಲಿತಾಂಶ ಬಂದ ನಂತರ ಅದರ ಶೇಕಡಾವಾರು ಮತಗಳು ಕೌಂಟ್ ಆಗಿ ಅದೀಗ ರಾಷ್ಟ್ರೀಯ ಪಕ್ಷವಾಗಿ ತಲೆ ಎತ್ತಿದೆ. ಈಗ ಕರ್ನಾಟಕದ ನೆಲೆಯಲ್ಲಿ ಅದು ಎಷ್ಟರ ಮಟ್ಟಿಗೆ ಯಶಸ್ಸು ಪಡೆಯುತ್ತದೆ ಅಂತ ಹೇಳಲಾಗ ದಿದ್ದರೂ ಅದಕ್ಕಂಟಿರುವ ಹಣೆಪಟ್ಟಿಯಂತೂ ಗಮನ ಸೆಳೆಯುತ್ತಿದೆ.

ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಅದ್ದೂರಿ ಗೆಲುವಿಗೆ, ಕಾಂಗ್ರೆಸ್ಸಿನ ಹೀನಾಯ ಸೋಲಿಗೆ ಅಮ್
ಆದ್ಮಿ ಪಕ್ಷ ಕಾರಣವಾಯಿತು ಎಂಬುದೇ ಈ ಹಣೆ ಪಟ್ಟಿ. ಇಂತಹ ಹಣೆಪಟ್ಟಿಯೊಂದಿಗೆ ಕರ್ನಾಟಕಕ್ಕೆ ನುಗ್ಗುತ್ತಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಯಾವ ಜಾದೂ ಮಾಡುತ್ತಾರೋ ಕಾದು ನೋಡಬೇಕು.