ಶಿಶಿರ ಕಾಲ
shishirh@gmail.com
ಪಾತರಗಿತ್ತಿ, ಹಕ್ಕಿಗಳು- ಇವುಗಳ ವಲಸೆಯ ಬಗ್ಗೆ ಒಂದಿಷ್ಟು ವಿಚಾರಗಳನ್ನು ಹಿಂದಿನ ವಾರದ ‘ಶಿಶಿರಕಾಲ’ದಲ್ಲಿ ಹಂಚಿ ಕೊಂಡಿದ್ದೆ. ಆ ಲೇಖನದಲ್ಲಿ ‘ಅರ್ಕಿಟಿಕ್ ಟರ್ನ್ ಹಕ್ಕಿ ವಾರ್ಷಿಕ ಸುಮಾರು ೮೦ ಸಾವಿರ ಕಿ.ಮೀ. ವಲಸೆ ಹಾರುತ್ತದೆ, ಅದು ಕ್ರಮಿಸುವ ದೂರ ೩ ಬಾರಿ ಭಾರತದಿಂದ ಅಮೆರಿಕಕ್ಕೆ ಹೋಗಿ ಬಂದಷ್ಟು’ ಎಂದು ಪ್ರಸ್ತಾಪಿಸಿದ್ದೆ.
ಲೇಖನ ಬರೆದಾದ ನಂತರ ಅದೇಕೆ ಆ ಲೆಕ್ಕಾಚಾರ ಕೊಟ್ಟದ್ದು ಎಂಬ ಪ್ರಶ್ನೆ ನನ್ನಲ್ಲಿಯೇ ಮೂಡಿತು. ಇಲ್ಲಿ ಆ ಹಕ್ಕಿಯ ವಲಸೆಯ ದೂರವನ್ನು ನಾನು ಹೋಲಿಸಿಕೊಂಡದ್ದು ಯಾವುದರ ಜತೆ? ನನ್ನದೇ ವಲಸೆಯ ದೂರದ ಜತೆ! ಅದು ಬರೆಯುವಾಗ ಗ್ರಹಿಕೆಗೆ ಬಂದಿರಲಿಲ್ಲ. ವಲಸೆಯ ವಿಷಯಕ್ಕೆ ಬಂದರೆ ನಾವು ಮನುಷ್ಯರೇನೂ ಕಡಿಮೆಯಿಲ್ಲ. ನಮ್ಮೆಲ್ಲರದು, ಪ್ರತಿಯೊಬ್ಬರದೂ ವಲಸೆಯ ಬದುಕೇ. ನಮ್ಮದು ಋತುಮಾನಕ್ಕೆ ತಕ್ಕಂತೆ ಹೋಗಿ ಬರುವ ವಲಸೆಯಲ್ಲ. ಕೆಲವೊಮ್ಮೆ ಕೆಲವು ತಲೆಮಾರುಗಳ ಅಂತರದಲ್ಲಿ ನಡೆಯುವ ವಲಸೆ.
ಹಾಗೆ ನೋಡಿದರೆ ಇಂದು ಪೇಟೆಯಲ್ಲಿರುವವರು, ತಮ್ಮ ಊರನ್ನು ಬಿಟ್ಟು ಪರ ಊರು ಸೇರುವವರೆಲ್ಲರೂ ವಲಸಿಗರೇ. ಪಕ್ಕದ ಊರಿನಲ್ಲಿ ಹೊಸ ತೋಟ ಮಾಡಿ ನೆಲೆಸುವವರೂ ವಲಸಿಗರೇ. ಪ್ರತಿಯೊಂದು ಕುಟುಂಬದಲ್ಲಿಯೂ ಗಂಡ ಅಥವಾ ಹೆಂಡತಿ, ಇಬ್ಬರಲ್ಲೊಬ್ಬರು ತಮ್ಮೂರು ಬಿಟ್ಟು ಬಂದ ವಲಸಿಗರು. ಪ್ರದೇಶ, ದೂರ ಚಿಕ್ಕದಿರಬಹುದು, ವಲಸೆ ವಲಸೆಯೇ. ಮನುಷ್ಯನ ಉಗಮ, ಮೂಲ ಮತ್ತು ವಲಸೆಯ ಬಗ್ಗೆ ಕೆಲವೊಂದಿಷ್ಟು ವಾದಗಳಿವೆ. ಅವುಗಳಲ್ಲಿ ಹೆಚ್ಚಿನವರು ಒಪ್ಪುವುದು ಆಫ್ರಿಕಾ ಮೂಲವೆಂಬ ವಾದ. ಮಂಗನಿಂದ ಮನುಷ್ಯನ ಉಗಮವಾಗಿದ್ದು ಆಫ್ರಿಕಾ ಖಂಡದಲ್ಲಿ, ಅಲ್ಲಿಂದಲೇ ಸುಮಾರು ೮೦ ಸಾವಿರ ವರ್ಷದ ಹಿಂದೆ ಎಲ್ಲೆಡೆ, ಉಳಿದ ಖಂಡಗಳಿಗೆ ಮನುಷ್ಯ ವಲಸೆ ಹೋಗಿದ್ದು ಎಂದು.
ಸಿಕ್ಕ ಸಾಕಷ್ಟು ಪುರಾತತ್ವ ಸಾಕ್ಷ್ಯಗಳು, ಡಿಎನ್‌ಎ ಅಭ್ಯಾಸ ಇದನ್ನು ಪುಷ್ಟೀಕರಿಸುತ್ತದೆ. ಆದರೆ ಈ ವಾದದಲ್ಲಿ ಕೆಲವು ಪ್ರಶ್ನೆಗಳು
ಹುಟ್ಟುತ್ತವೆ. ಆಫ್ರಿಕಾ ಅದೆಷ್ಟೋ ಲಕ್ಷ ವರ್ಷದಿಂದ ಸಂಪದ್ಭರಿತವಾದ ಪ್ರದೇಶ. ಉಳಿದ ದೇಶಗಳು ಶತಮಾನದಿಂದ ಕೊಳ್ಳೆ
ಹೊಡೆದರೂ, ಇಂದಿಗೂ ಅಲ್ಲಿರುವ ಬಹುತೇಕ ಪ್ರಾಣಿಗಳು ಅದೇ ನೆಲದ ಮೂಲದವು. ಸಸ್ಯ ವರ್ಗಗಳದ್ದು ಅದೇ ನೆಲ ದಲ್ಲಿನ ಅದೆಷ್ಟೋ ಲಕ್ಷ ವರ್ಷದ ಇತಿಹಾಸ. ಹೀಗಿರುವಾಗ, ಮನುಷ್ಯನ ಅವಶ್ಯಕತೆಗಳಾದ ಮಾಂಸ, ಸಸ್ಯ, ಹಣ್ಣು, ಆಹಾರ ಇವೆಲ್ಲ ಯಥೇಚ್ಛವಾಗಿ ಅಲ್ಲಿಯೇ ಸಿಗುವಾಗ, ಅಂಥ ಒಳ್ಳೆಯ ಜಾಗವನ್ನು ಬಿಟ್ಟು ಮನುಷ್ಯನಿಗೆ ಬೇರೆಡೆ ಹೋಗುವ ಅವಶ್ಯಕತೆ ಯೇನಿತ್ತು? ಸಂಪನ್ಮೂಲವೇ ವಲಸೆಯ ಕಾರಣ ವಾಗಿದ್ದಲ್ಲಿ ಇಂದು ಆಫ್ರಿಕಾದಲ್ಲಿ ಭಾರತಕ್ಕಿಂತ ನಾಲ್ಕು ಪಟ್ಟು ಜನಸಂಖ್ಯೆ ಇರಬೇಕಿತ್ತಲ್ಲ!
ಹಾಗಾದರೆ ಅಲ್ಲಿನ ಮಿತಿಮೀರಿದ ಪ್ರಾಣಿಗಳ ಉಪಟಳದಿಂದ ತಪ್ಪಿಸಿಕೊಳ್ಳಲಿಕ್ಕೆ ವಲಸೆ ಹೋಗಿದ್ದಾ? ಹಾಗೆ ಯಾರೂ ಹೇಳುವು ದಿಲ್ಲ. ರಷ್ಯಾದ ಸೈಬೀರಿಯಾ ಜಗತ್ತಿನಲ್ಲಿಯೇ ಅತ್ಯಂತ ಶೀತ ಪ್ರದೇಶ. ಅಲ್ಲಿ ಚಳಿಗಾಲದಲ್ಲಿನ ಉಷ್ಣತೆ -೫೦ ಡಿಗ್ರಿಯಿಂದ -೬೦ ಡಿಗ್ರಿ ಸೆಲ್ಸಿಯಸ್ ತನಕ ಇಳಿಯುತ್ತದೆ. ಅಂಥ ಘೋರ ಪ್ರದೇಶದಲ್ಲಿ ಮನುಷ್ಯವಾಸವಿದೆ. ಇದೇನೂ ಈಗೊಂದು ನೂರು ವರ್ಷದ ಈಚೆಗೆ ಯಾರೋ ಹೋಗಿ ನೆಲೆಸಿದ್ದಲ್ಲ. ಸೈಬೀರಿಯಾದಲ್ಲಿ ಮನುಷ್ಯವಾಸ ೩೦ ಸಾವಿರ ವರ್ಷದಿಂದ ಇದೆ. ದೇಹವನ್ನು ಬೆಚ್ಚಗಿಡಲು ಪೆಟ್ರೋಲ್, ವಿದ್ಯುತ್ ಇವೆಲ್ಲ ಇತ್ತೀಚಿನವು. ಅಲ್ಲಿರುವ ಮನುಷ್ಯನಿಗೆ ಕರಡಿಯಂತೆ ಕೂದಲೂ ಇರಲಿಲ್ಲ.
ನಮ್ಮಂತೆಯೇ ದೇಹ, ರಚನೆ ಎಲ್ಲವೂ ಇರುವವರು, ಮನುಷ್ಯರೇ ಅಲ್ಲಿ ಅಷ್ಟೂ ಕಾಲ ಇದ್ದದ್ದು. ಸಂಪದ್ಭರಿತ, ಅತ್ಯುತ್ತಮ ವಾತಾವರಣವುಳ್ಳ ಆಫ್ರಿಕಾ (ಅಥವಾ ಇನ್ನೊಂದು ಉಗಮದ ಪ್ರದೇಶ) ಬಿಟ್ಟು ಅಲ್ಲಿ ಹೋಗಿ ನೆಲೆಸುವ ಅವಶ್ಯಕತೆ ಏನಿತ್ತು ಎಂದರೆ ಉತ್ತರವಿಲ್ಲ. ಇವರೆಲ್ಲ ಇನ್ನೊಂದೆಡೆ ಜಾಗವಿಲ್ಲವೆಂದು ಹೋದವರಲ್ಲ. ಆಗ ಇದ್ದ ಜನಸಂಖ್ಯೆ ಎಷ್ಟು! ಹಾಗಿರುವಾಗ, ಸಂಪತ್ತು ಮತ್ತು ಒಡೆತನದ ಕಲ್ಪನೆಯೇ ಇಲ್ಲದ ಆ ಕಾಲದಲ್ಲಿ ಬೇರಿನ್ನೊಂದು, ಅದರಲ್ಲಿಯೂ ಸೈಬೀರಿಯಾದಂಥ ಜಾಗಕ್ಕೆ ವಲಸೆ ಹೋಗಿ ನೆಲೆಸುವ ಪ್ರಮೇಯವೇ ಇರಲಿಲ್ಲ. ಸುಮಾರು ೪೦ ಸಾವಿರ ವರ್ಷದ ಹಿಂದೆ ಸಮುದ್ರದ ನೀರಿನ ಮಟ್ಟ ತಗ್ಗಿತ್ತು, ಹಾಗಾಗಿ ಸೈಬೀರಿಯಾದಿಂದ ಪೂರ್ವಕ್ಕಿರುವ ಅಮೆರಿಕದ ಅಲಾಸ್ಕಾ, ನಂತರ ಉತ್ತರ ಅಮೆರಿಕಕ್ಕೆ ಮನುಷ್ಯ ವಲಸೆ ಹೋಗಿದ್ದು
ಎಂಬುದಕ್ಕೆ ಡಿಎನ್‌ಎ ಸಾಕ್ಷ್ಯವಾಗಿ ಪರಿಗಣಿಸಲ್ಪಡುತ್ತದೆ.
ನೀರಿನ ಪ್ರಮಾಣ ತಗ್ಗಿದ್ದರಿಂದ ಆಛ್ಟಿಜ್ಞಿಜ ಔZb ಆಜಿbಜಛಿ ರಷ್ಯಾ ಮತ್ತು ಉತ್ತರ ಅಮೆರಿಕದ ನಡುವೆ ನಿರ್ಮಾಣವಾಯಿತು, ಅದರಿಂದ ವಲಸೆ ಸಾಧ್ಯವಾಯಿತು ಎಂಬ ವಿವರಣೆ. ಅದೆಲ್ಲ ಸರಿ, ಆದರೆ ಅಲ್ಲಿಗೆಲ್ಲ ಮನುಷ್ಯ ವಲಸೆ ಹೋಗಿದ್ದೇಕೆ? ಬದುಕಲು ಅಸಾಧ್ಯವಾದಲ್ಲಿ ಹೋಗಲಿಕ್ಕೆ ಅವರಿಗೇನು ಮರುಳೇ? ಈಗಿನಂತೆ ಆರ್ಥಿಕತೆ, ವ್ಯಾಪಾರ, ವ್ಯವಹಾರವಿದ್ದ ಕಾಲ ವಾಗಿರಲಿಲ್ಲವಲ್ಲ. ಇದೆಲ್ಲದಕ್ಕೆ oeಜ್ಛಿಠಿಜ್ಞಿಜ ಡಿಛಿZಠಿeಛ್ಟಿ ಕಾಲ ಕಳೆದಂತೆ ಬದಲಾಗುವ ವಾತಾವರಣ ಕಾರಣ ಎನ್ನಲಾ
ಗುತ್ತದೆ. ಅಂದರೆ ಮೊದಲೊಂದು ಕಾಲದಲ್ಲಿ ಸೈಬೀರಿಯಾ ಮೊದಲಾದ ಉತ್ತರದ ಪ್ರದೇಶಗಳಲ್ಲಿ ಒಳ್ಳೆಯ ವಾತಾವರಣವಿತ್ತು ಎಂದು. ವಾತಾವರಣ ಬದಲಾಯಿತು, ಅದಕ್ಕನುಗುಣ ವಾಗಿ ಮನುಷ್ಯ ವಲಸೆ ಎಂಬ ವಾದ.
ಟಿಬೆಟ್ ಪ್ಲೇಟೋ- ಜಗತ್ತಿನ ಮೇಲ್ಚಾವಣಿ ಎಂದು ಕರೆಯುತ್ತಾರೆ. ಅಲ್ಲಿನ ಆಮ್ಲಜನಕದ ಪ್ರಮಾಣ ಶೇ.೬೦ರಷ್ಟು ಮಾತ್ರ. ಸಮುದ್ರ ಮಟ್ಟದಲ್ಲಿ ಇರುವುದಕ್ಕಿಂತ ಶೇ.೪೦ರಷ್ಟು ಕಡಿಮೆ. ಅಷ್ಟು ಎತ್ತರದ ಪ್ರದೇಶ. ಅಲ್ಲಿ ಜನವಸತಿಯಿದೆ. ನಾವು ನೀವು ಯಾರೇ ಹೋದರೂ ಅಲ್ಲಿ ಒಂದೆರಡು ತಾಸು ಬದುಕುವುದು ಕಷ್ಟ. ಆಮ್ಲಜನಕ ಎಷ್ಟು ಕಡಿಮೆ ಎಂದರೆ ನಿಮಿಷಗಳಲ್ಲಿ ತಲೆಸುತ್ತಿ ಬೀಳುತ್ತೇವೆ ಇಲ್ಲವೆ eZಜ್ಞಿZಠಿಜಿಟ್ಞ- ಭ್ರಮೆ ಶುರುವಾಗುತ್ತದೆ. ಆ ಪ್ರದೇಶಕ್ಕೆ ಹೋಗುವಾಗ ಆಮ್ಲಜನಕದ ಸಿಲಿಂಡರ್ ಇಟ್ಟುಕೊಂಡೇ ಹೋಗಬೇಕು.
ಅಂಥ ಜಾಗದಲ್ಲಿ ಮನುಷ್ಯ ವಸತಿ ಎಷ್ಟು ವರ್ಷದಿಂದ ಇದೆ ಗೊತ್ತೇ? ಪುರಾತತ್ವ ಸಾಕ್ಷ್ಯಗಳ ಪ್ರಕಾರ ೧,೬೦,೦೦೦ ವರ್ಷದಿಂದ!! ಈಗ ಹೇಳಿ, ಮನುಷ್ಯ ಒಳ್ಳೆಯ ವಾತಾವರಣವನ್ನೇ ಅರಸಿ ಹೋಗುವುದು ಎಂಬ ವಾದದಲ್ಲಿ ಈ ಟಿಬೆಟ್ ಉಪ್ಪರಿಗೆಯ ವಾಸವನ್ನು ಹೇಗೆ ಸಮರ್ಥಿಸುವುದು? ಆ ಪ್ರದೇಶ ತಗ್ಗಿನಲ್ಲಿತ್ತು, ಈಗ ಅಷ್ಟು ಮೇಲಕ್ಕೆ ಹೋಗಿದೆ ಎಂದೇನೂ ಇಲ್ಲ. ಅಷ್ಟು ವರ್ಷಗಳ ಹಿಂದೆ ಟಿಬೆಟ್‌ನ ಅಷ್ಟು ಎತ್ತರಕ್ಕೆ ವಲಸೆ ಹೋಗಿ ನೆಲೆಸುವ ಕಾರಣ? ಅದಕ್ಕೇನು ವಿವರಣೆ? ಬೇಟೆಯ ಪ್ರಾಣಿಗಳು ವಲಸೆ ಹೋದಂತೆ ಅವುಗಳ ಬೆನ್ನು ಹತ್ತಿ ಮನುಷ್ಯ ವಲಸೆ ಹೋಗತೊಡಗಿದ ಎಂಬುದೊಂದು ವಿವರಣೆ.
ಆದರೆ ಮನುಷ್ಯ ಮೂಲದಲ್ಲಿ ಮಾಂಸಾಹಾರಿಯೇ ಅಲ್ಲ. ಆತನ ಜೀವನ ಪ್ರಾಣಿಗಳ ಮೇಲೆ ಎಂದೂ ಸಂಪೂರ್ಣ ಅವಲಂಬಿಸಿರಲಿಲ್ಲ. ಬದಲಿಗೆ ಸಸ್ಯವರ್ಗ, ನೀರು ಆತನ ಆದ್ಯತೆಯಾಗಿದ್ದದ್ದು. ಹಾಗಾಗಿ ಈ ವಾದವೂ ಅಷ್ಟಕ್ಕಷ್ಟೆ. ಪ್ರಾಣಿಗಳ ಬೆನ್ನುಹತ್ತಿ ವಲಸೆ ಹೋಗುವ ಖಯಾಲಿ ಹೊಸತು. ಫ್ರೆಂಚರು ಪ್ರಾಣಿ ಉತ್ಪನ್ನ, ಉಣ್ಣೆ ಮೊದಲಾದ ಕಾರಣಕ್ಕೆ ಕೆನಡಾ ದೇಶಕ್ಕೆ ವಲಸೆ ಹೋಗಿದ್ದು ಇವೆಲ್ಲ ಇತ್ತೀಚಿನದು.
ಇನ್ನು ಕೆಲವು ತಾತ್ಕಾಲಿಕ ವಲಸೆಗಳಾಗಿವೆ. ಉದಾಹರಣೆಗೆ ಬ್ರಿಟಿಷರು ಭಾರತ ಮೊದಲಾದ ಅನ್ಯ ನೆಲದಲ್ಲಿ ಲೂಟಿಗೆಂದು
ನೆಲೆಸಿದ್ದು. ಬ್ರಿಟಿಷರು ಇಲ್ಲಿಯೇ ಅಷ್ಟು ಕಾಲ ಇದ್ದರೂ, ಒಂದೆರಡು ಪೀಳಿಗೆ ಇಲ್ಲಿಯೇ ಹುಟ್ಟಿದರೂ ಸ್ವಾತಂತ್ರ್ಯದ ನಂತರ ಅವರ‍್ಯಾರೂ ಉಳಿಯಲಿಲ್ಲ. ಹಾಗಾಗಿ ಅದೆಲ್ಲ ಅಲ್ಪಕಾಲದ ವಲಸೆಗಳು. ಇನ್ನು ಫಿಜಿ, ಸುರಮೀಸ್ ಮೊದಲಾದ ದೇಶಗಳಿಗೆ ಭಾರತದ ಜೀತದಾಳುಗಳು ಹೋಗಿ ಅಲ್ಲಿಯವರೇ ಆದದ್ದು- ಇವೆಲ್ಲ ಕೂಡ ಸಾಮೂಹಿಕ ವಲಸೆ. ಒಟ್ಟಾರೆ ಜಗತ್ತಿನ ಇತಿಹಾಸ ಮೂಲದಲ್ಲಿ ಮನುಷ್ಯನ ವಲಸೆಯದೇ ಕಥೆ.
ಅದೇ ಕಥೆಯ ಮುಂದುವರಿದ ಭಾಗ ಅಮೆರಿಕ. ಮನುಷ್ಯ ವಲಸೆ ಹೋಗಿಯೇ ಖಾಲಿ ನೆಲದಲ್ಲಿ ಕಟ್ಟಿ ನಿಲ್ಲಿಸಿದ ದೇಶ
ಇದು. ಈ ದೇಶದಲ್ಲಿ ಜಗತ್ತಿನ ಎಲ್ಲ ದೇಶಗಳಿಂದ ವಲಸೆಗೆ ಬರುತ್ತಾರೆ, ಅಲ್ಲಿಯೇ ನೆಲೆಸಿ ಅಲ್ಲಿಯವರಾಗುತ್ತಾರೆ. ಈ ವಲಸಿಗರ ದೇಶವೇ ಇಂದು ಜಗತ್ತಿನಲ್ಲಿ ಬಲಿಷ್ಠ. ಹೌದು, ಅಮೆರಿಕದ ಮೂಲನಿವಾಸಿಗಳು ಇಂದಿರುವುದು ಶೇ.೨.೬ ರಷ್ಟು ಮಾತ್ರ. ಆಫ್ರಿಕನ್ ಮೂಲದ ವಾದವನ್ನು ಒಪ್ಪುವುದಾದರೆ ಅವರು ಲಕ್ಷ ವರ್ಷದ ಹಿಂದೆ ಸೈಬೀರಿಯಾದಿಂದ ಕೆಳಕ್ಕಿಳಿದು ವಲಸೆ ಬಂದವರು. ಇಲ್ಲಿ ಮನುಷ್ಯ ಉಗಮದ ಸಾಧ್ಯತೆ ಇಲ್ಲದಿರುವುದರಿಂದ ಅವರೂ ಯಾವುದೊ ಒಂದು ಕಾಲದ ವಲಸಿಗರು. ಉಳಿದ ಶೇ.೯೭.೪ರಷ್ಟು ಮಂದಿ ಜಗತ್ತಿನ ಬೇರೆ ನೆಲದಿಂದ ತೀರಾ ೪ ಶತಮಾನದಿಂದೀಚೆಗೆ ಬಂದವರು.
ಅಮೆರಿಕವನ್ನು ಈಗ ೩ ಶತಮಾನದಿಂದ ಔZb ಟ್ಛ ಟmmಟ್ಟಠ್ಠ್ಞಿಜಿಠಿqs ಎಂದೇ ಕರೆಯಲಾಗುತ್ತಿದೆ. ಈ ದೇಶ ಅಂದಿನಿಂದ ಇಂದಿನವರೆಗೂ ಮನುಷ್ಯ ವಲಸಿಗನ ಮೊದಲ ಆದ್ಯತೆ. ಇಂದು ಉದ್ಯೋಗಾವಕಾಶ ಮತ್ತು ಉತ್ತಮ ಬದುಕಿಗಾಗಿ ಈ ದೇಶಕ್ಕೆ ವಲಸೆ ಬಂದರೆ, ಹಿಂದೆ ಯುರೋಪಿಯನ್ನರನ್ನು ಆಕರ್ಷಿಸಿದ್ದು ಇಲ್ಲಿನ ಶ್ರೀಮಂತ ಸ್ವಾಭಾವಿಕ ಸಂಪನ್ಮೂಲ. ಹೀಗೆ ನಾಲ್ಕೇ ಶತಮಾನದಲ್ಲಿ (ಏಳೆಂಟು ತಲೆಮಾರಿನಲ್ಲಿ) ಈ ನೆಲಕ್ಕೆ ಬಂದ ವಲಸಿಗರೆಲ್ಲ ಊರು, ಕೇರಿಯನ್ನಲ್ಲ, ಬಲಿಷ್ಠ ರಾಷ್ಟ್ರವನ್ನೇ ನಿರ್ಮಿಸಿದ್ದಾರೆ. ಅಮೆರಿಕವು ಮನುಷ್ಯ ಸಂತತಿಯ ಮಿಸಾಳ್‌ಭಾಜಿ. ಈ ದೇಶದಲ್ಲಿ ಮೊದಲು ಬಂದದ್ದು ಯುರೋಪಿಯನ್ನರು,
ಅವರ ಜತೆ ಜೀತದಾಳುಗಳಾಗಿ ಆಫ್ರಿಕನ್ನರು.
ಯುರೋಪಿಯನ್ನರೆಂದರೆ -ಂಚರು, ಡಚ್ಚರು, ಇಂಗ್ಲಿಷರು, ಜರ್ಮನ್ನರು ಇತ್ಯಾದಿ. ಆಫ್ರಿಕನ್ನರೆಂದರೆ ನೈಜೀರಿಯಾದವರು, ಮಧ್ಯ
ಆಫ್ರಿಕಾ, ದಕ್ಷಿಣ ಆಫ್ರಿಕಾ, ಕೀನ್ಯಾ, ಉಗಾಂಡಾ ಹೀಗೆ ಅಲ್ಲಿನ ಹತ್ತಿಪ್ಪತ್ತು ದೇಶ ಪ್ರದೇಶದವರು. ಅವರೆಲ್ಲ ಪರಸ್ಪರ ಮಕ್ಕಳನ್ನು ಪಡೆಯಲು ಶುರುಮಾಡಿದ ನಂತರ ಕಪ್ಪು ಮತ್ತು ಬಿಳಿಯ ವರ್ಣಮಿಶ್ರಿತ ಅಮೆರಿಕನ್ನರ ಹೊಸ ಮನುಷ್ಯ ತಳಿ ಶುರುವಾಯಿತು. ಇದೆಲ್ಲದರ ಜತೆ ಕಳೆದೊಂದು ಶತಮಾನದಲ್ಲಿ ಜಗತ್ತಿನ ಬಹುತೇಕ ದೇಶಗಳಿಂದ ಜನರು ಇಲ್ಲಿಗೆ ವಲಸೆ ಬಂದರು. ಈಗ ಇಲ್ಲಿರುವ, ವಲಸೆ ಬಂದ ಮೊದಲ ತಲೆಮಾರನ್ನು ಹೊರತುಪಡಿಸಿ ಉಳಿದವರು ಯಾರೂ ಒಂದೇ ರೇಸ್ ಅಥವಾ ಮೂಲಕ್ಕೆ ಸೇರಿದವರಲ್ಲ. ಇದು ಇಂದು ಜಗತ್ತಿನ ಅತ್ಯಂತ ಮಿಶ್ರ ಮಾನವ ತಳಿಯಿರುವ ದೇಶ. ಇದನ್ನು ಮನುಷ್ಯ ವಲಸೆಯ ಪರಿಣಾಮ, ಸೃಷ್ಟಿ ಎಂದು
ಗ್ರಹಿಸಬಹುದು.
ನಿಮ್ಮ ರೇಸ್ ಏನು ಎಂದು ಕೇಳಿದರೆ ಇಲ್ಲಿನವರು ನಾನು ಶೇ.೫೦ರಷ್ಟು ಬ್ರಿಟಿಷ್ ಐರಿಷ್, ಶೇ.೨೦ ಆಫ್ರಿಕನ್, ಶೇ.೩೦ ಮೆಕ್ಸಿಕನ್ ಎಂದೆಲ್ಲ ತಮ್ಮ ವಂಶವಾಹಿಯ ಪ್ರತಿಶತಗಳಲ್ಲಿ ಹೇಳುತ್ತಾರೆ. ಇಲ್ಲಿ ಡಿಎನ್‌ಎ ಪಡೆದು ವಿಶ್ಲೇಷಿಸಿ, ನಿಮ್ಮ ಆನುವಂಶಿಕತೆಯಲ್ಲಿ ಯಾವ ಪ್ರದೇಶದ ಪ್ರತಿಶತ ಎಷ್ಟಿದೆ ಎಂದು ಹೇಳುವ ಹಲವಾರು ಕಂಪನಿಗಳಿವೆ. Zಛಿoಠ್ಟಿqs. ಟಞ ಮೊದಲಾದ ಕಂಪನಿ ವೆಬ್‌ಸೈಟ್‌ಗಳಿಗೆ ಹೋಗಿ ಹಣ ಪಾವತಿಸಿದರೆ ಅವರೊಂದು ಕಿಟ್ ಅನ್ನು ಮನೆಗೆ ಕಳುಹಿಸಿ ಕೊಡುತ್ತಾರೆ. ಕೋವಿಡ್ ಪರೀಕ್ಷೆ ಮಾಡಿದಂತೆ ಮೂಗನ್ನು ಸ್ವಾಬ್ ಮಾಡಿ, ಸೀಲ್ ಮಾಡಿ ಅವರಿಗೆ ಕಳುಹಿಸಿಕೊಟ್ಟರಾಯ್ತು.
ಅವರು ನಿಮ್ಮ ಡಿಎನ್‌ಎಯನ್ನು ವಿವರವಾಗಿ ಅಭ್ಯಸಿಸಿ, ನೀವು ಇಷ್ಟು ಪ್ರತಿಶತ ಇಲ್ಲಿನವರು, ಇಷ್ಟು ಅಲ್ಲಿನ ಮೂಲದವರು ಎಂಬ ವಿವರಣೆ ಕೊಡುತ್ತಾರೆ. ಅಷ್ಟೇ ಅಲ್ಲ, ಬಯಸಿದಲ್ಲಿ ಇಂಥ ಪರೀಕ್ಷೆ ಮಾಡಿಸಿಕೊಂಡ ಉಳಿದವರ ಜತೆ ಹೋಲಿಸಿ, ನಾಲ್ಕಾರು ಹಿಂದಿನ ತಲೆಮಾರಿನ ಸಂಬಂಧವನ್ನು ಕೂಡ ಇವರು ಹೇಳುತ್ತಾರೆ. ಸಂಬಂಧಿಗಳನ್ನು ಹುಡುಕಿ ಕೊಡುತ್ತಾರೆ.
ನಾವು ಯಾವುದೋ ಒಂದು ಊರನ್ನು ನಮ್ಮ ಮೂಲ, ಅದೆಷ್ಟೋ ಸಾವಿರ ವರ್ಷದಿಂದ ನಮ್ಮ ಪೂರ್ವಜರೆಲ್ಲ ಅಲ್ಲಿಯೇ ಇದ್ದದ್ದು ಎಂದೆಲ್ಲ ನಂಬಿಕೊಂಡಿರುತ್ತೇವೆ.
ಆದರೆ ಜಾಡನ್ನು ಹಿಡಿದು ಮೂರ್ನಾಲ್ಕು ತಲೆಮಾರಿನಾಚೆ ಮುಟ್ಟಿದರೆ ನಮ್ಮದು ಇನ್ನೆಲ್ಲಿಯೋ ಮೂಲ, ಅಲ್ಲಿನ ನಮ್ಮ ಪೂರ್ವ ಜರು ಇಲ್ಲಿಗೆ ಬಂದದ್ದು ಎಂಬಲ್ಲಿಗೆ ನಮ್ಮ ಮೂಲದ ಕಥೆ ಮುಗಿಯುತ್ತದೆ. ಕರಾವಳಿಯ ಹವ್ಯಕರು ಮೂಲದಲ್ಲಿ ವಾರಾಣಸಿ ಯಿಂದ ಬಂದವರು ಎಂದಿದೆ. ಅದರಂತೆ ನಾಯಕ ಜನಾಂಗದವರು ಮಹಾರಾಷ್ಟ್ರ ಮೂಲದವರು, ಕೊಂಕಣಿ (ಜಿಎಸ್‌ಬಿ) ಮೂಲ ಗೋವಾ ಎಂಬಿತ್ಯಾದಿ. ಪ್ರತಿಯೊಂದು ಜಾತಿ, ವರ್ಗದವರಿಗೂ ತಾವು ಮೂಲದಲ್ಲಿ ಬೇರೆ ಇದ್ದೆವು, ಬೇರೆಲ್ಲಿಂದಲೋ ಬಂದೆವು ಎಂಬ ನಂಬಿಕೆಯಿದೆ. ಇವುಗಳಲ್ಲಿ ಕೆಲವು ಮೂಲದ ಕಥೆಗಳಿಗೆ ತಲೆಬುಡವಿಲ್ಲ.
ಒಂದಂತೂ ನಿಜ, ಭಾರತದಲ್ಲಿ ನಿರಂತರ ಸಾಕಷ್ಟು ಆಂತರಿಕ ವಲಸೆಗಳು ನಡೆದಿವೆ. ಅಮೆರಿಕದಲ್ಲಿರುವ ಡಿಎನ್‌ಎ ವಿಶ್ಲೇಷಣೆ ವ್ಯವಸ್ಥೆ ನಮ್ಮಲ್ಲಿಯೂ ಬಂದಲ್ಲಿ, ನಾವೆಲ್ಲರೂ ಅದರಲ್ಲಿ ಭಾಗವಹಿಸಿ ನಮ್ಮ ಡಿಎನ್‌ಎ ಹೋಲಿಸಿಕೊಂಡಲ್ಲಿ, ನಮ್ಮೆಲ್ಲರ ಮೂಲವೂ ಎಲ್ಲೆಲ್ಲಿಗೋ, ದೇಶಾಂತರ ಹೋಗಿ ತಲುಪಬಹುದು. ಈಗ ಭಾರತದಲ್ಲಿ ಹಿಂದೆಲ್ಲದಕ್ಕಿಂತ ಹೆಚ್ಚಿನ ಆಂತರಿಕ ವಲಸೆ
ನಡೆಯುತ್ತಿದೆ. ನಮ್ಮ ತಕ್ಷಣದ ಮುಂದಿನ ಪೀಳಿಗೆ ಎಲ್ಲಿ ವಲಸೆ ಹೋಗಿ ನೆಲೆಯಾಗಬಹುದು ಎಂದು ಕೇಳಿಕೊಂಡರೆ ಊಹೆಗೂ ಸಿಗುವುದಿಲ್ಲ. ನಮ್ಮ ಮಕ್ಕಳು ಇನ್ನೊಂದು ಊರಿಗೆ, ದೇಶಕ್ಕೆ ಹೋಗಿ ನೆಲೆಸಬಹುದು. ಅವರ ಮಕ್ಕಳು ಅಲ್ಲಿನ ಇನ್ನೊಬ್ಬ ವಲಸಿಗನನ್ನು ಮದುವೆಯಾಗಬಹುದು. ಅವರ ಮಕ್ಕಳು ಇನ್ನೆಲ್ಲಿಯೋ ಹೋಗಿ ನೆಲೆಸಬಹುದು. ಅಲ್ಲಿ ಯುದ್ಧ
ಸಂಭವಿಸ ಬಹುದು, ಬರಗಾಲ ಬರಬಹುದು. ಮತ್ತೆಲ್ಲೋ ವಲಸೆ ಹೋಗಬಹುದು.
ನಮ್ಮ ದೀರ್ಘ ಇತಿಹಾಸವನ್ನು ಗ್ರಹಿಕೆಯಲ್ಲಿಟ್ಟು ಇದನ್ನೆಲ್ಲಾ ನೋಡಿದಾಗ, ನಾವು ಬದುಕಿ ಬಂದದ್ದೇ ಹೀಗೆ, ವಲಸಿಗರಾಗಿ ಎಂಬುದು ಸ್ಪಷ್ಟವಾಗುತ್ತದೆ. ಮನುಷ್ಯ ದೇಹ ರಚನೆ ವಲಸೆಗೆ ಪೂರಕವಾದದ್ದಲ್ಲ, ತೀರಾ ನಾಜೂಕು. ನಮಗೆ ಸ್ವಲ್ಪವೇ ವಾತಾವರಣ ಬದಲಾದರೂ ನೆಗಡಿ, ಜ್ವರ ಬರುತ್ತದೆ, ಆರೋಗ್ಯ ಕೆಡುತ್ತದೆ. ಹಕ್ಕಿಗಳಂತೆ ಸಾವಿರ ಮೈಲಿ ಹಾರಲಿಕ್ಕೂ ಸಾಧ್ಯವಿಲ್ಲ, ಸಮುದ್ರವನ್ನು ಈಜಿಕೊಂಡು ದಾಟಲಿಕ್ಕೂ ಶಕ್ಯವಿಲ್ಲ. ಹಾಗಿದ್ದೂ ವಿಮಾನ, ಹಡಗು, ತಂತ್ರಜ್ಞಾನ ಯಾವುದೂ ಇಲ್ಲದ ಕಾಲದಲ್ಲಿಯೇ ಮನುಷ್ಯ ವಲಸೆ ಹೋಗಿ ವಾಸಿಸದ ಜಾಗವಿರಲಿಲ್ಲ. ನಾವು ಅಷ್ಟು ವಲಸಿಗರು.
ಈಗಂತೂ ಪ್ರಯಾಣ ತೀರಾ ಸುಲಭ, ಜಗತ್ತೇ ಚಿಕ್ಕದಾಗಿದೆ. ಜಾಗತಿಕ ಭಾಷೆಗಳು ವಲಸೆಯನ್ನು ಇನ್ನಷ್ಟು ಸುಲಭವಾಗಿಸಿವೆ.
ಆದರೆ ಇತ್ತೀಚಿನ ದಶಕದ ಮನುಷ್ಯ ವಲಸೆಯ ಕಾರಣ ಗಳು ಹೊಸತು. ಹಿಂದಿನ ವರ್ಷ ಜಗತ್ತಿನ ಜನಸಂಖ್ಯೆಯ ಶೇ.೩.೪೭ರಷ್ಟು ಜನರು ವಲಸೆ ಹೋಗಿದ್ದಾರೆ. ಅದು ಒಂದು ಊರಿಂದ ಇನ್ನೊಂದು ಊರಿಗೆ ಹೋದವರ ಸಂಖ್ಯೆಯಲ್ಲ. ಒಂದು ದೇಶದಿಂದ ಮತ್ತೊಂದು ದೇಶಕ್ಕೆ ವಲಸೆ ಹೋದವರ ಅಷ್ಟು, ಇಪ್ಪತ್ತೆಂಟು ಕೋಟಿ. ಇದರಲ್ಲಿ ಉದ್ಯೋಗ ಕಾರಣಕ್ಕೆ ದೇಶ ಬಿಟ್ಟವರು ಶೇ.೦.೩ರಷ್ಟು ಮಾತ್ರ. ಉಳಿದವರೆಲ್ಲ ದೇಶ ಬಿಡಲು ಕಾರಣ ಯುದ್ಧ, ಬದಲಾದ ವಾತಾವರಣ, ರಾಜಕೀಯ, ಆರ್ಥಿಕ ಸ್ಥಿತಿ ಮತ್ತು ನೀರು. ಹೊಸ ಯುದ್ಧ ಗಳಿಂದಾಗಿ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಈ ಸಂಖ್ಯೆ ಮುಂದಿನ ವರ್ಷ ಶೇ.೫ಕ್ಕೆ ತಲುಪಬಹುದೆಂಬ ಅಂದಾಜು. ಶೇ.೮೦ರಷ್ಟು ಮನುಷ್ಯರು ಸರಾಸರಿ ಮೂರರಿಂದ ನಾಲ್ಕು ತಲೆಮಾರಿನೊಳಗೆ ವಲಸೆ ಹೋಗುವುದು ಹಿಂದಿನ ಕಥೆ ಯಾಯಿತು.
ಈಗ ಒಂದೊಂದು ತಲೆಮಾರು ಒಂದೊಂದು ಊರಿನಲ್ಲಿ. ಈಗ ಹೇಳಿ- ನಾವು ಮನುಷ್ಯರು ವಲಸೆಯಲ್ಲಿ ಯಾವ ಪ್ರಾಣಿಗೆ ಕಡಿಮೆ? ಎಲ್ಲರೂ ವಲಸಿಗರೇ!