ರಾವ್-ಭಾಜಿ
ಪಿ.ಎಂ.ವಿಜಯೇಂದ್ರ ರಾವ್
journocate@gmail.com
ರೈತ ಸಂಘದವರು ರಂಗಾಯಣದ ನಿರ್ದೇಶಕರ ವಿರುದ್ಧ ದನಿ ಎತ್ತಿದ್ದಾರೆ. ಅವರ ಆರ್‌ಎಸ್‌ಎಸ್ ಮೂಲ ಹಾಗೂ ಸೂಲಿಬೆಲೆ ಕರೆಸಿರೆಂಬ ಕಾಣಕ್ಕೆನಡೆದದ್ದಿದು. ಇಬ್ಬರೂ ಗೋರಕ್ಷಕರೆಂಬ ಕಾರಣಕ್ಕಾದರೂ ರೈತ ಸಂಘ ಪ್ರತಿಭಟನೆಯಿಂದ ದೂರ ಉಳಿಯಬೇಕಿತ್ತು.
ನಾವು ಭಾರತೀಯರು ಮೋಜುಪ್ರಿಯರು. 47ರಲ್ಲಿ ಬಂದ ಸ್ವಾತಂತ್ರ್ಯ(!) ಮೋಜಿಗೊಂದು ನೆಪ ತಂದುಕೊಟ್ಟಿತು. ಅಂದಿನಿಂದ ಇಂದಿನವರೆಗೂ ಪಾರ್ಟಿ ಮಾಡುತ್ತಲೇ ಇದ್ದೇವೆ. ಮೋಜು ಮಸ್ತಿಯ ಮತ್ತಿನಲ್ಲಿ ತೇಲಾಡುತ್ತಲೇ ಇದ್ದೇವೆ. ಅಮಲು ಮೈ ಮರೆಸುತ್ತದೆ. ನಶೆಯಲ್ಲಿರುವವರಿಗೆ ವಾಸ್ತವದ ಪರಿವೆ ಇರುವುದಿಲ್ಲ. ಹರ್ನಾಜ್ ಸಂಧು ಎಂಬ ಪಂಜಾ ಬಿ ಮಿಸ್ ಯೂನಿ ವರ್ಸ್ ಆಗಿ ಆಯ್ಕೆಯಾಗಿzಳೆ. ಪಾರ್ಟಿ ಮಾಡಲು ಮತ್ತೊಂದು ನೆಪ. ಹೊಸವರ್ಷಕ್ಕೆ ಮತ್ತೊಂದು ಮೆರುಗು.
ನಾನು ಒಡನಾಟವಿರಿಸಿಕೊಂಡಿದ್ದ ಪ್ರೊ. ನಂಜುಂಡಸ್ವಾಮಿ ಅವರ ಬಗ್ಗೆ ಏನೇ ಅಸಮಾಧಾನವಿದ್ದರೂ ಅವರ ಬುದ್ಧಿವಂತಿಕೆ ಬಗ್ಗೆ ನನ್ನ ಮೆಚ್ಚುಗೆ ಇತ್ತು. ಸೌಂದರ್ಯ ಸ್ಪರ್ಧೆಗಳ ಹಿಂದಿನ ಪಿತೂರಿ ಅವರಿಗೆ ತಿಳಿದಿತ್ತು. ವಿಶಾಲವಾದ ನಮ್ಮ ದೇಶಿ ಮಾರುಕಟ್ಟೆ ಮೇಲೆ ಕಣ್ಣಿಟ್ಟ ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಉತ್ಪನ್ನಗಳಿಗೆ ಬೇಡಿಕೆ ಸೃಷ್ಟಿಸಲು ಕಂಡುಕೊಂಡ ಮಾರ್ಗವೇ ಸೌಂದರ್ಯ ಸ್ಪರ್ಧೆ. ಇದ್ದ ಕ್ಕಿದ್ದಂತೆ ನಮ್ಮ ಯುವತಿಯರು ಕಂಗೊಳಿಸತೊಡಗಿ ಸ್ಪರ್ಧೆ ಗಳನ್ನು ಗೆಲ್ಲುತ್ತಿರುವ ಹಿಂದಿನ ಕೃತ್ರಿಮ ಅವರಿಗೆ ಅರ್ಥವಾಗಿತ್ತು.
‘ಬಾವಿ ನೀರು ಸೇದಿಯೇ ಫಿಟ್ ಆದ ನಮ್ಮ ಹಳ್ಳಿ ಹೆಂಗಸರ ಅಂಗಸೌಷ್ಠವ ಯಾವ ಮಾಡೆಲ್‌ಗಿಂತ ಕಮ್ಮಿ?’ ಎಂದು ಕೇಳಿದ್ದರು. ವರ್ತಕರಾಗಿ ಬಂದವರು, ನಯ ನಾಜೂಕಿಲ್ಲದೆ ದಾಳಿಕೋರರಾಗಿ ಬಂದವರಿಬ್ಬರ ಮೂಲಕವೂ ನಡೆದ ಹಾಗೂ ನಡೆಯುತ್ತಿರುವ ದೌರ್ಜನ್ಯ, ಆಕ್ರಮಣಗಳ ಬಗ್ಗೆ ಹೇಳಿದಷ್ಟೂ ಮತ್ತಷ್ಟು ಹೇಳು ವಷ್ಟಿದೆ. ಅದರ ವಿರಾಟ್ ಸ್ವರೂಪ ಸೋ-ಕಾಲ್ಡ್ ಎಜುಕೇಟೆಡ್ ಹಿಂದೂಗಳ ಗ್ರಹಿಕೆಗೆ ಬಾರದಷ್ಟಿದೆ. ಸ್ವಾತಂತ್ರ್ಯ ತಂದುಕೊಟ್ಟ ಸ್ವೇಚ್ಛೆ ಮತ್ತು ಸಂಭ್ರಮದ ಮತ್ತಿ ನಿಂದ ಗ್ರಹಿಕಾ ಸಾಮರ್ಥ್ಯ ಪರಭಾರೆಯಾಗಿದೆ.
ದೋಚುವಿಕೆಗೆ ಪರಕೀಯರು ಕಂಡುಕೊಂಡ ಹಲವಾರು ಗೋಚರ-ಅಗೋಚರ ಹುನ್ನಾರಗಳ ಪೈಕಿ ಸಾಂಸ್ಕೃತಿಕ ದಾಳಿಯೂ ಒಂದು. ಸಾಂಸ್ಕೃತಿಕ ದಾಳಿಗೆ ಮತ್ತೊಂದು ಹೆಸರು ಮತಾಂತರ. ಅದಕ್ಕೆ ಅನಾಗರಿಕ ಸ್ವರೂಪವೂ ಉಂಟು, ನಯವಂಚನೆಯ ಮುಖವೂ ಉಂಟು. ಪ್ರಬಲ ಮತಗಳಾಗಿದ್ದೂ ಅಲ್ಪಸಂಖ್ಯಾತ ಹಣೆಪಟ್ಟಿ ಪಡೆದ ಇಸ್ಲಾಂ ಮತ್ತು ಕ್ರಿಶ್ಚಿಯಾನಿಟಿಗಳೆರಡೂ ಎರಡೂ ಮಾರ್ಗಗಳನ್ನೂ ಅನುಸರಿಸಿಕೊಂಡೇ ಬಂದಿವೆ. ಅತಿ ಹೆಚ್ಚು ಪ್ರಜೆಗಳಿಗೆ ಅತಿ ಹೆಚ್ಚಿನ ಹಿತ ವುಂಟು ಮಾಡುವುದು ಪ್ರಜಾಸತ್ತೆಯ ಘನೋದ್ದೇಶ. ಅತಿ ಹೆಚ್ಚು ಜನಸಂಖ್ಯೆಯ ಹಿಂದೂಗಳ ಮೂಗಿಗೆ ಆ ಆಶಯದ ತುಪ್ಪವನ್ನು ಸವರಿ ಕಪಿಗಳನ್ನಾಗಿ ಮಾಡ ಲಾಗಿದೆ.
ನಾವು ಎಡೆ ಮೋಸಹೋಗುತ್ತಿದ್ದೇವೆ. ತಿನ್ನುವ ತುಪ್ಪದ ವಿಷಯದಲ್ಲೂ. ನಾವು ತಿನ್ನುತ್ತಿದ್ದುದು ತುಪ್ಪವೇ ಅಲ್ಲವಂತೆ. ಅದು ಡಾಲ್ಡಾ. ಯಾವುದೇ ಜನಪ್ರಿಯ ಬ್ರ್ಯಾಂಡನ್ನು ನಕಲುಗೊಳಿಸಿ ಅಲ್ಪ ಖರ್ಚಿನಲ್ಲಿ ಹಣ ಗೋರಿಕೊಳ್ಳುವುದು ಹಳೆಯ ದಂಧೆ. ಅದಕ್ಕೆ ಅತ್ಯುತ್ತಮ ಉದಾಹರಣೆ ಕಿರಿಸ್ತಾನರ ವಿವಿಧ ವೇಷಗಳು. ಬಹುಸಂಖ್ಯಾತ ಹಿಂದೂಧರ್ಮವನ್ನೇ ಹೋಲುವ ಆಚರಣೆಗಳು, ಕೀರ್ತನೆಗಳು, ಸ್ತೋತ್ರಗಳು, ವೇಷಭೂಷಣಗಳು, ಆಚಾರವಿಚಾರಗಳು. ಹೆಸರು ಮಾತ್ರ ಯೇಸುವಿನದು. ನಂದಿನಿ ತುಪ್ಪವನ್ನು ಕದ್ದುಮುಚ್ಚಿ ನಕಲು ಮಾಡುತ್ತಿದ್ದವರೇನೊ ಸಿಕ್ಕಿಬಿದ್ದರು (ಅದು ಅಚ್ಚರಿಯೇ!) ಆದರೆ ಒಂದಿಡೀ ದೇಶವನ್ನೇ ತಮ್ಮ ಖೋಟಾ ವ್ಯವಹಾರದಿಂದ ಹಾಡುಹಗಲೇ ಗೂಬೆ ಮಾಡುತ್ತಿರುವ ಈ ಧರ್ಮ ದ್ರೋಹಿಗಳನ್ನು ಹತ್ತಿಕ್ಕಲು ಯಾರಿಗೂ ಸಾಧ್ಯವಾಗಿಲ್ಲ. ಅಂದು, ಬುದ್ಧಿವಂತ ನಂಜುಂಡಸ್ವಾಮಿ ಅವರೂ ತಾವೇ ದೂರಿದ ಸಮಸ್ಯೆಯೊಂದನ್ನು ಅದರ ಸಾಂಸ್ಕೃತಿಕ ನೆಲೆಗಟ್ಟಿ ನಲ್ಲಿ ವಿಶ್ಲೇಷಿಸಿದರೇ ಹೊರತು ಅಷ್ಟೇ ಮುಖ್ಯವಾದ ಧಾರ್ಮಿಕ ಮಸೂರದಿಂದ ನೋಡಲಿಲ್ಲ. ಹಿಂದೂ ಧರ್ಮಕ್ಕಿರುವ ಗಟ್ಟಿತನವೇ ವರ್ಣ – ಕುಲ ಕಸುಬಾಧಾರಿತ ವರ್ಗೀಕರಣ. ಕಾಯಕದ ಪರಿಪೂರ್ಣತೆಯನ್ನು(ಕೈಲಾಸವನ್ನು) ಕಾಣಲು ಸಾಧ್ಯ ವಾಗಿಸುವ ವ್ಯವಸ್ಥೆ.
ಮತಾಂತರದಿಂದ ನಾಶವಾಗುತ್ತಿರುವ/ಶಿಥಿಲಗೊಳ್ಳುತ್ತಿರುವ ಭಾರತದ ಧಾರ್ಮಿಕ- ಆರ್ಥಿಕ- ಸಾಮಾಜಿಕ ವ್ಯವಸ್ಥೆ ರೈತರನ್ನೂ ಒಳಗೊಂಡಂತೆ ಸಾಮಾನ್ಯರ ಜೀವನವನ್ನು ಕೋವಿಡ್ ಮಹಾಮಾರಿಗೆ ಮುಂಚೆಯೇ ಬರ್ಬಾದು ಮಾಡಿತ್ತು. ಸಿದ್ದರಾಮಯ್ಯ ಆಳ್ವಿಕೆಯ ದಿನಗಳು. ಇಬ್ಬರು ಹಿರಿಯ ಪತ್ರಕರ್ತರೊಟ್ಟಿಗೆ ಕುಕ್ಕರ ಹಳ್ಳಿ ಕೆರೆ ದಂಡೆ ಮೇಲೆ ನಡೆಯುತ್ತಿದ್ದೆ. ಅವರಿಬ್ಬರೂ ಮೂಲತಃ ಕೃಷಿಕರು. ಮೇಲಾಗಿ ಎಡ ಪಂಥೀಯರೆಂದು ಗುರುತಿಸಿಕೊಂಡಿದ್ದರು. ರೈತರ ಸಮಸ್ಯೆಗಳ ಬಗ್ಗೆ ಮಾತುಕತೆ ನಡೆದಿತ್ತು. ಬಡಗಿ ತನ್ನ ಕುಲಕಸುಬಿನಿಂದ ದೂರವಾದ ಕಾರಣಕ್ಕೆ ನೇಗಿಲು ತಯಾರಿಸುವವರೇ ಇಲ್ಲವಾಗಿದ್ದಾರೆ ಎಂದು ಒಬ್ಬರ ಅಳಲು. (ಅವರು ಲಂಕೇಶ್ ಪಾಳಯದವರು) ಸಿದ್ಧರಾಮಯ್ಯನವರ ಅನ್ನಭಾಗ್ಯ ಯೋಜನೆಯಿಂದ (ಜಮೀನಿನಲ್ಲಿ) ಕೆಲಸ ಮಾಡಲು ಆಳುಗಳೇ ಸಿಗುತ್ತಿಲ್ಲ ಎಂಬುದು ಮತ್ತೊಬ್ಬರ ದೂರು. (ಅವರು ಸಿದ್ಧರಾಮಯ್ಯನವರಿಗೆ ಆಪ್ತರಾಗಿದ್ದರು.) ಗ್ರಾಮೀಣ ಆರ್ಥಿಕ ವ್ಯವಸ್ಥೆಯ ಪಲ್ಲಟದ ಬಗ್ಗೆ ಪ್ರೊ.ನಂಜುಂಡಸ್ವಾಮಿಯೂ ಒಮ್ಮೆ ಮಾತನಾಡುತ್ತ ಗುಂಡ್ಲುಪೇಟೆ ಮಾರ್ಗವಾಗಿ ನಮ್ಮಿಂದ ಕೇರಳದ ಕಸಾಯಿಖಾನೆಗಳಿಗೆ (ಬಹುತೇಕ ಅಕ್ರಮವಾಗಿ ಮತ್ತು ಅಮಾನವೀಯವಾಗಿ) ಸಾಗಿಸಲ್ಪಡುವ ದನಕರುಗಳ ಬಗ್ಗೆ ಕರುಬಿದ್ದರು.
ತತ್ಕಾರಣದಿಂದ ಉಳುಮೆಗೆ ಬೇಕಾದ ರಾಸುಗಳ ಸಂಖ್ಯೆ ಇಳಿಮುಖವಾಗುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ದೇಶದ (ಜಗತ್ತಿನ) ಬೆನ್ನೆಲುಬಾದ ಕೃಷಿ ಆಧಾರಿತ ಆರ್ಥಿಕ ವ್ಯವಸ್ಥೆಯನ್ನು ಪೋಷಿಸುವ ಹಿಂದೂ ಧರ್ಮದ ಪರವಾಗಿ ದನಿ ಎತ್ತಿದ್ದರೆ ರೈತಾಪಿ ವರ್ಗವೂ ಅವರಿಗೆ ಋಣಿಯಾಗಿರುತ್ತಿತ್ತು. ಇನ್ನು, ನಂಜುಂಡ ಸ್ವಾಮಿಯವರ ಸ್ಟೈಲನ್ನು ಅನುಕರಿಸುವ ಮಟ್ಟಿಗಷ್ಟೇ ತಮ್ಮ ಬೌದ್ಧಿಕ ಬೆಳವಣಿಗೆಯನ್ನು ಸೀಮಿತಗೊಳಿಸಿಕೊಂಡ ಕೆ.ಎಸ್.ಪುಟ್ಟಣ್ಣಯ್ಯನವರೂ ಇಲ್ಲ.
ರೈತ ಸಂಘದ ಇಂದಿನ ನಾಯಕರು ರಂಗಾಯಣದ ನಿರ್ದೇಶಕರ ವಿರುದ್ಧ ದನಿ ಎತ್ತಿದ್ದಾರೆ. ಅಡ್ಡಂಡ ಕಾರಿಯಪ್ಪ ಆರ್ಎಸ್‌ಎಸ್ ಮೂಲದವರು ಎನ್ನುವುದು ಒಂದು ಕಾರಣವಾದರೆ, ಅವರು ಯುವ ಬ್ರಿಗೇಡ್ ಮುಖಂಡ ಚಕ್ರವರ್ತಿ ಸೂಲಿಬೆಲೆರನ್ನು ರಂಗಾಯಣಕ್ಕೆ ಕರೆಸಿದರು ಎಂಬುದು ಮತ್ತೊಂದು ಕಾರಣ. ಕಾರಿಯಪ್ಪ ಅಥವಾ ಚಕ್ರವರ್ತಿ ಗೋರಕ್ಷಕರೆಂಬ ಪ್ರಾಕ್ಟಿಕಲ್ ಕಾರಣಕ್ಕಾದರೂ (ಗೋ ಸಂರಕ್ಷಣೆ ಗ್ರಾಮೀಣ ಬದುಕನ್ನು ಹಸನಾಗಿಸಬಲ್ಲದೆಂಬ ಆಲೋಚನೆಯಿಂದಾದರೂ) ರೈತ ಸಂಘ ಪ್ರತಿಭಟನೆಯಿಂದ ದೂರ ಉಳಿಯಬೇಕಿತ್ತು. ಬಹುರೂಪಿತ್ವ ಒದಗಿಸುವ ಆರ್ಥಿಕ ದೃಢತೆಯನ್ನು ಮರೆತರೆ ನಮ್ಮ ರೈತರು? ಬುದ್ಧಿಜೀವಿ ಪಟ್ಟ ಗಳಿಸಿ ಕೊಂಡಿದ್ದ ಗಿರೀಶ್ ಕಾರ್ನಾಡರೇ ಜನಸಾಮಾನ್ಯರ ಪ್ರಗತಿಗೆ ಕಾರಣವಾದ ಹಾಗೂ ನಾಗರಿಕತೆಯ ಪ್ರತೀಕವಾದ ಗೋವನ್ನು ತಿರಸ್ಕರಿಸಿ ದನ ಮಾಂಸದ ಬ್ರ್ಯಾಂಡ್ ಅಂಬಾಸಿಡರ್ ಆದ ಮೇಲೆ ಮುಗ್ಧ ರೈತರನ್ನು ದೂರಿ ಪ್ರಯೋಜನವಿಲ್ಲ.
ಗೋಭಕ್ಷಣೆಗೆ ಪರವಾನಗಿ ನೀಡುವ ಮತಗಳ ಪ್ರಾಬಲ್ಯ ಮತಾಂತರದ ಮೂಲಕ ಹೆಚ್ಚುಗೊಳ್ಳುತ್ತಿರುವುದಕ್ಕೆ ಪಡಬೇಕಾದ ಆತಂಕಕ್ಕೆ ಧಾರ್ಮಿಕ ಕಾರಣಗಳಷ್ಟೆ ಮುಖ್ಯ ಆರ್ಥಿಕ ಕಾರಣಗಳು. ಪಾಕಿಸ್ತಾನ ಸೃಷ್ಟಿಸಿ ಭಾರತದಲ್ಲಿ ಚಲಾವಣೆಗೆ ತರುವ ಖೋಟಾ ನೋಟ್ ಜಾಲಕ್ಕೆ ನಮ್ಮ ಆರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡಬಲ್ಲ ಸಾಮರ್ಥ್ಯ ಎಷ್ಟಿದೆಯೋ ಅದಕ್ಕಿಂತ ಹೆಚ್ಚಿನ ವಿಧ್ವಂಸಕ ಶಕ್ತಿ ಗೋವಾಧಾರಿತ ಆರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿರುವ ಸ್ವದೇಶೀ ಕೆಡುಕ ರಿಗಿದೆ.
ಗೋಹತ್ಯಾ ಕಾನೂನಿದ್ದೂ ನಿರಂತರ ಗೋ ಹತ್ಯೆಯ ಮೂಲಕ ಗೋ ಸಂತತಿ ಕ್ಷೀಣಿಸುತ್ತಿರುವುದು ಘೋರ ವಾಸ್ತವ. ಇದಕ್ಕೂ, ಉಳುಮೆಗೆ ಅಗತ್ಯವಾದ ರಾಸಿನ ಕೊರತೆಗೂ ಕಾರಣರಾದವರನ್ನು ಆರ್ಥಿಕ ಭಯೋತ್ಪಾದಕರೆಂದು ಪರಿಗಣಿಸದೇ ವಿಧಿಯಿಲ್ಲ. (ಕೆಲವೇ ವರ್ಷದ ಹಿಂದೆ ಮಧ್ಯ ಪ್ರದೇಶದ ಬಡರೈತನೊಬ್ಬ ಎತ್ತನ್ನು ಕೊಳ್ಳಲಾಗದೆ ತನ್ನ ಹೆಣ್ಣುಮಕ್ಕಳ ಭುಜಕ್ಕೆ ನೊಗವಿಕ್ಕಿದ ದಾರುಣ ದೃಶ್ಯ ಇನ್ನೂ ಹಸಿರಾಗಿದೆ.) ಭಾರತದ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿರುವ ದುಷ್ಟ ಶಕ್ತಿಗಳು ದೇಶದ ಹೊರಗೂ ಒಳಗೂ ಇವೆ. ಅದೊಂದು ದೊಡ್ಡ ಕುತಂತ್ರವೇ ಸರಿ. ಅಂತಹ ಕುತಂತ್ರಕ್ಕೆ ಕುಮ್ಮಕ್ಕು ಕೊಡುತ್ತಿರುವುದು ಮುಖ್ಯವಾಗಿ ವಸಾಹತುಶಾ ಹಿಗಳೇ.
ವಸಾಹತುಶಾಹಿತ್ವವನ್ನು ಜೋಡಿ ಹೆಡೆಯ ನಾಗರಕ್ಕೆ ಹೋಲಿಸಬಹುದು. ಒಂದು ಹೆಡೆ ವಸಾಹತುಶಾಹಿಯ ಆರ್ಥಿಕ ಮುಖವನ್ನೂ, ಮತ್ತೊಂದು ಹೆಡೆ ಅದರ ಮತೀಯ ಮುಖವನ್ನೂ ಪ್ರತಿನಿಧಿಸುತ್ತವೆ. ನಾನು ಹಿಂದೊಮ್ಮೆ ಇದೇ ಅಂಕಣದಲ್ಲಿ ರೂಪದರ್ಶಿಯೊಬ್ಬಳು ಮೈಬಿಟ್ಟುಕೊಂಡು ಬರುವಾಗ ಧರಿಸಿದ್ದು ಈಜುಡುಗೆ ಮತ್ತು ಶಿಲುಬೆ ಎಂದು ಬರೆದಿದ್ದೆ. ಇದು ಮತಾಂತರದ ನಯವಂಚಕ ಮುಖ. ಮಾಡೆಲ್ ಪ್ರಚಾರ ಕೊಡುತ್ತಿದ್ದುದು ಬಿಕಿನಿಗೋ? ಕಿರಿಸ್ತಾನ್ ಮತಕ್ಕೋ? ಆ ಸೂಕ್ಷ್ಮ ಜಾಹೀರಾತಿನಲ್ಲಿ ಬಿಕಿನಿ ಮಾರ್ಗವಷ್ಟೆ, ಗುರಿ ಮತಾಂತರ. ಮತಾಂತರಿಗಳ ಎಲ್ಲ ಮಾರ್ಗಗಳೂ ಇಷ್ಟು ನಯವಲ್ಲ.
ಬಲಾತ್ಕಾರವಾಗಿಯೂ, ಪ್ರಲೋಭನೆಗಳ ಮೂಲಕವೂ ಮತಾಂತರ ವ್ಯಾಪಕವಾಗಿ ನಡೆಯುತ್ತಿದೆ. ಮತಾಂತರ ನಿಷೇಧ ಕಾನೂನಿಗೆ ವಿರೋಧ ವ್ಯಕ್ತಪಡಿಸು ತ್ತಿರುವ ಕಿರಿಸ್ತಾನ್ ಮುಖಂಡರು ಹೇಳುತ್ತಿರುವುದು ಸುಳ್ಳು ಎಂದು ಕಿರಿಸ್ತಾನರ ಬಾಯ ಕೇಳಿದ್ದೇನೆ. ಈ ಹಸೀ ಸುಳ್ಳನ್ನು ಹೇಳಿದ್ದಕ್ಕೆ ಪ್ರಾಯಶ್ಚಿತ್ತವಾಗಿ ಭಾನುವಾರ ಚರ್ಚನಲ್ಲಿ ತಪ್ಪೊಪ್ಪಿಕೊಳ್ಳುತ್ತಾರೋ ಹೇಗೆ? ವಸಾಹತುಶಾಹಿಯ ಉದ್ದೇಶ ತಾನೊಪ್ಪದ ದೇಶದ ಮೇಲೆ ಸಾಂಸ್ಕೃತಿಕ ದಾಳಿಯೂ ಸೇರಿದಂತೆ ಇತರೆ ಮಾರ್ಗ ಗಳಿಂದ ಅದನ್ನು ಬಗ್ಗುಬಡಿದು ಅಽನವನ್ನಾಗಿ ಮಾಡಿಕೊಳ್ಳುವುದೇ ಆಗಿದೆ.
ಐರೋಪ್ಯರಿಂದಲೂ, ಮೊಘಲರಿಂದಲೂ ಆರಂಭವಾದ ಈ ದಾಳಿ ನಿಂತೇ ಇಲ್ಲ. ಕಂಗನಾ ರಾವತ್ ದೇಶಕ್ಕೆ ನಿಜವಾಗಿ ಸ್ವಾತಂತ್ರ್ಯ ಬಂದದ್ದು ೨೦೧೪ ರಲ್ಲಷ್ಟೇ ಏನದ್ದು ಅಪ್ಪಟ ಸತ್ಯ. ಅದನ್ನು ಸಹಿಸದ ದೇಶದ ಹೊರ-ಒಳ ಶತ್ರುಗಳು ತಮ್ಮ ವಿಭಿನ್ನ ಆಕ್ರಮಣವನ್ನು ಹೆಚ್ಚಿಸಿವೆ. ಮತಾಂತರವನ್ನು ನಿಷೇಧಿಸಲು ಇಂದೊಂದೇ ಕಾರಣ ಸಾಕು. ಮತಾಂತರವನ್ನು ರಾಷ್ಟ್ರ ದ್ರೋಹಿ ಚಟುವಟಿಕೆ ಎಂದು ಘೋಷಿಸಲು ಹಿಂದೂಗಳು ಸರ್ಕಾರದ ಮೇಲೆ ಒತ್ತಾಯ ಹೇರಬೇಕಿದೆ. ಸೆಕ್ಯುಲರ್ ಟೋಪಿಯನ್ನು ನಾವು ತೊಟ್ಟದ್ದು ಸಾಕು. ಸೆಕ್ಯುಲರಿಸಂ ಎನ್ನುವುದೇ ಹಿಂದೂಗಳಿಗೆ ತೊಡಿಸಿದ ಮಕ್ಮಲ್ ಟೋಪಿ.
ಸಂಪ್ರದಾಯಸ್ಥರ ವಿರೋಧದ ನಡುವೆಯೂ ಸ್ವರ್ಗೀಯ ವಿಶ್ವೇಶ ತೀರ್ಥ ಶ್ರೀಗಳು ಕೃಷ್ಣನ ಸನ್ನಿಧಾನದ ಇಫ್ತಾರ್ ಕೂಟವೇರ್ಪಡಿಸಿ ತಮ್ಮ ಔದಾರ್ಯ ಮೆರೆದರು. ಆ ಔದಾರ್ಯಕ್ಕೆ ತಕ್ಕಂತೆ ಅತಿಥಿಗಳು ನಡೆದುಕೊಳ್ಳಲಿಲ್ಲ. ವ್ರತ ಕೆಟ್ಟರೂ, ಸಾಮಾಜಿಕ ಒಳಿತಿನ ಫಲದಿಂದ ವಂಚಿತರಾದ ಶ್ರೀಗಳ ಬಗ್ಗೆ ಮರಣೋತ್ತರವಾಗಿಯೂ ಅಧಮರು ಸಲ್ಲದ ಮಾತುಗಳನ್ನಾಡಿದರು. ಇನ್ನಾವ ಬಗೆಯ ಔದಾರ್ಯವನ್ನು ಸ್ವಂತ ನೆಲದ ಸಂತ್ರಸ್ತರಾದ ಪಾಪದ ಹಿಂದೂಗಳು ಮೆರೆಯಬೇಕು? ಮಂದಿರದಲ್ಲಿ ಇಫ್ತಾರ‍್ ನಡೆಸಿಯಾಯಿತು, ಇನ್ನು ಅಲ್ಲಿ ಕ್ರಿಸ್ಮಸ್ ನಡೆಸುವುದೊಂದು ಬಾಕಿ!