ಗಂಟಾಘೋಷ
ಗುರುರಾಜ್ ಗಂಟಿಹೊಳೆ
ಅಡಕೆ ಬೆಳೆಗೆ ಒಂದಿಲ್ಲೊಂದು ಸಂಕಷ್ಟಗಳು ಎದುರಾಗುತ್ತಲೇ ಇವೆ. ಅದಕ್ಕೆ ಉದಾಹರಣೆಯೆಂಬಂತೆ ಗುಟ್ಕಾ ಉತ್ಪನ್ನಗಳ ಮೇಲೆ ನಿಷೇಧ ಹೇರಬೇಕೆನ್ನುವ ಕೂಗು ಆಗಾಗ ಏಳುತ್ತಲೇ ಇರುತ್ತದೆ. ಗುಟ್ಕಾಗಳಲ್ಲಿ ಬಳಸುವ ಹಾನಿಕಾರಕ ವಸ್ತುಗಳು ಮಾತ್ರ ಕ್ಯಾನ್ಸರ್ ತರುತ್ತವೆಯೇ ಹೊರತು ಅಡಕೆಯಿಂದ ಕ್ಯಾನ್ಸರ್ ಬರುವುದಿಲ್ಲ ಎನ್ನುವುದು ಅಡಕೆ ಬೆಳೆಗಾರರ ವಾದ.
ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಅಡಕೆ ಕೂಡ ಒಂದು. ಸಾವಿರಾರು ಕುಟುಂಬಗಳು ಈ ಬೆಳೆಯನ್ನೇ ನಂಬಿ ಜೀವನ ನಡೆಸುತ್ತಿವೆ. ಇದೀಗ
ಅಡಕೆ ಬೆಳೆಯ ವ್ಯಾಪ್ತಿ ಕರ್ನಾಟಕದ ೨೦ಕ್ಕೂ ಅಧಿಕ ಜಿಲ್ಲೆಗಳಿಗೆ ತಲುಪಿದೆ. ಕೆಲ ಪ್ರದೇಶಗಳಲ್ಲಂತೂ ಉತ್ತಮ ನೀರಾವರಿ ವ್ಯವಸ್ಥೆ ಇಲ್ಲವಾದರೂ ಬೆಳೆಗಾರರು ಅಡಕೆಯನ್ನು ಬೆಳೆಯಲು ಮುಂದಾಗುತ್ತಿದ್ದಾರೆ. ಕರ್ನಾಟಕದಲ್ಲಿ ೩೫,೦೦೦ ಹೆಕ್ಟೇರ್ ಪ್ರದೇಶದಲ್ಲಿ ಅಡಕೆಯನ್ನು ಬೆಳೆಯುತ್ತಾರೆ.
ಅದರಲ್ಲಿ ೩,೫೦೦ ಹೆಕ್ಟೇರ್ ಪ್ರದೇಶ ರೋಗಕ್ಕೆ ತುತ್ತಾಗಿದೆ ಎಂದು ತೋಟಗಾರಿಕಾ ಇಲಾಖೆ ಮಾಹಿತಿ ನೀಡಿದೆ.
ಆದರೆ ಈ ಬಾರಿಯ ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಎಕರೆಗಟ್ಟಲೆ ಜಾಗದಲ್ಲಿ ಹೊಸ ಸಸಿಗಳನ್ನು ನೆಟ್ಟ ರೈತರ ಪಾಡು ಹೇಳತೀರ ದಂತಾಗಿದೆ. ಕಳೆದ ಬಾರಿ ಉತ್ತಮ ಮಳೆಯಾದ ಕಾರಣ, ಈ ಬಾರಿ ಮಳೆಯನ್ನು ನಂಬಿ ಹೊಸ ಅಡಕೆ ಸಸಿಗಳನ್ನು ನೆಟ್ಟು ರೈತ ಸಂಕಷ್ಟಕ್ಕೀಡಾಗಿದ್ದಾನೆ.
ಅಡಕೆ ಬೆಳೆಗಾರರಿಗೆ ಅನೇಕ ಸಮಸ್ಯೆಗಳು ಎದುರಾಗುತ್ತಿದ್ದು, ಅವುಗಳಲ್ಲಿ ಎಲೆಚುಕ್ಕಿ ರೋಗ ಕೂಡ ಒಂದು. ಎಲೆಚುಕ್ಕಿ ರೋಗಕ್ಕೆ ತುತ್ತಾದ ಅಡಕೆ ಮರಗಳ ಸೋಗೆಗಳ ಮೇಲ್ಭಾಗದಲ್ಲಿ ಹಳದಿ ಮತ್ತು ಕಪ್ಪುಚುಕ್ಕಿ ಕಾಣಿಸಿಕೊಳ್ಳುತ್ತವೆ. ಈ ಚಿಕ್ಕ ಚಿಕ್ಕ ಚುಕ್ಕಿಗಳು ಒಂದಕ್ಕೊಂದು ಕೂಡಿಕೊಳ್ಳುತ್ತಾ ಇಡೀ ಅಡಕೆ ಮರದ ಸೋಗೆಗಳಿಗೆ ಹರಡಿಕೊಳ್ಳುತ್ತವೆ.
ಮುಂದೆ ಇದರ ಪ್ರಮಾಣ ಜಾಸ್ತಿಯಾದಂತೆ ಅಡಕೆ ಸೋಗೆಗಳು ಸೊರಗಿ, ಒಣಗಿ, ಅಡಕೆ ಮರ ಬಲಹೀನಗೊಳ್ಳುತ್ತಾ ಹೋಗುತ್ತದೆ. ಅಡಕೆ ಇಳುವರಿ
ಕೂಡ ಕಡಿಮೆಯಾಗುತ್ತದೆ. ಒಂದರ್ಥದಲ್ಲಿ ಅಡಕೆ ಮರಕ್ಕೆ ಉಂಟಾಗುವ ಬಹುದೊಡ್ಡ ರೋಗ ಇದಾಗಿದ್ದು, ಮನುಷ್ಯನಿಗೆ ಕ್ಯಾನ್ಸರ್ ಎಷ್ಟು ಅಪಾಯಕಾರಿಯೋ ಅಡಕೆಗೆ ಎಲೆಚುಕ್ಕಿ ರೋಗ ಅಷ್ಟೇ ಅಪಾಯಕಾರಿಯಾಗಿದೆ. ಕೊಲ್ಲೇಟೋಟ್ರೈಕಮ್ ಗ್ಲಿಯೋಸ್ಪೊರೈಡ್ಸ್ ಹಾಗೂ ಫಿಲೋಸ್ಟಿಕಾ ಅರೇಕಾ ಎಂಬ ಶಿಲೀಂಧ್ರಗಳು ಅಡಕೆಯ ಗರಿಗಳ ಮೇಲೆ ಬೆಳೆಯುವ ಕಾರಣಕ್ಕೆ ಈ ರೋಗ ಉಂಟಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ.
ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ತೋಟಗಳಲ್ಲಿ ಈ ರೋಗವು ಅಧಿಕವಾಗಿ ಕಾಣಿಸಿಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹೊನ್ನಾವರ, ಭಟ್ಕಳ ಭಾಗಗಳಲ್ಲಿ ಈ ಸಮಸ್ಯೆ ಹೆಚ್ಚಾಗಿರದಿದ್ದರೂ ಕೆಲ ಕಡೆಗಳಲ್ಲಿ ಅಲ್ಪ ಸ್ವಲ್ಪ
ಎಲೆಚುಕ್ಕಿ ರೋಗಗಳು ಕಾಣಸಿಗುತ್ತವೆ. ಈಗಾಗಲೇ ಸಾಕಷ್ಟು ಅಡಕೆ ಬೆಳೆಗಾರರ ಪಾಲಿಗೆ ಕಂಟಕವಾಗಿ ಕಾಡುತ್ತಿರುವ ಎಲೆಚುಕ್ಕಿ ರೋಗವು ಬಡರೈತರ ಜೀವನವನ್ನು ಸಂಕಷ್ಟಕ್ಕೆ ಈಡುಮಾಡಿದೆ.
ಈ ಹಿಂದೆ ಕೇಂದ್ರ ಸರಕಾರ ಎಲೆಚುಕ್ಕಿ ಮತ್ತು ಹಳದಿ ಎಲೆ ರೋಗಗಳನ್ನು ತಡೆಯಲು ಎನ್ಎಸ್ಸಿ ಸ್ಥಾಪಿಸಿತ್ತು. ಕರ್ನಾಟಕದ ಅಡಕೆ ಉತ್ಪಾದಕತೆಯನ್ನು ಹೆಚ್ಚಿಸುವ ಸಲುವಾಗಿ ತೀರ್ಥಹಳ್ಳಿಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರಕ್ಕೆ ೧೦ ಕೋಟಿ ರೂ. ಮಂಜೂರು
ಮಾಡಿತ್ತು. ೨೦೧೨ರಲ್ಲಿ ಅಡಕೆಗೆ IಐP ೭೫ ರುಪಾಯಿ ಇತ್ತು. ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದಾಗ ಅದು ೧೬೧ ರುಪಾಯಿ ಆಯಿತು.
ಈಗ ಅಡಕೆಯ IಐP ೨೫೧ ರು. ಇದೆ, ಇದು ಬಿಜೆಪಿ ಸರಕಾರದ ಸಾಧನೆ. ಇದಕ್ಕೆಲ್ಲಾ ಪ್ರಧಾನಿ ನರೇಂದ್ರ ಮೋದಿ ಕಾರಣ. ಮುಂದೆ ಅಡಕೆಯ IಐP ೩೫೦ ರುಪಾಯಿ ಆಗಲಿದೆ. ಇಂದು ಅಡಕೆ ದರ ಹೆಚ್ಚಾಗುತ್ತಿರುವುದು ಬಿಜೆಪಿ ಸರಕಾರದಿಂದಲೇ ಹೊರತು ಕಾಂಗ್ರೆಸ್ನಿಂದಲ್ಲ. ಪ್ರತಿಬಾರಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗ ರಾಜ್ಯದ ಜನರು ಅದರಲ್ಲೂ ರೈತಾಪಿ ವರ್ಗದವರು ನೋವನ್ನು ಅನುಭವಿಸಿದ್ದಾರೆ. ಈ ಹಿಂದೆ
ರಾಜ್ಯದಲ್ಲಿ ಅಽಕಾರದಲ್ಲಿದ್ದ ಬಿಜೆಪಿ ಸರಕಾರ ಮುಂಜಾಗ್ರತಾ ಕ್ರಮವಾಗಿ ಔಷಧ ಸಿಂಪಡಣೆಗೆ ೧೦ ಕೋಟಿ ರು. ಅನುದಾನ ಬಿಡುಗಡೆ ಮಾಡಿತ್ತು. ಎಲೆಚುಕ್ಕಿ ರೋಗದ ಮೂಲಕಾರಣ ಹಾಗೂ ಔಷಧಿಯ ಬಗ್ಗೆ ವಿಜ್ಞಾನಿಗಳು ಅಧ್ಯಯನ ನಡೆಸಿ, ಚಿಕಿತ್ಸಾ ಮಾರ್ಗ ಕಂಡುಹಿಡಿದರೆ ಅದರಂತೆ ಸರಕಾರ
ಕಾರ್ಯನಿರ್ವಹಿಸಲು ಮುಂದಾಗಿತ್ತು.
ಆದರೆ ಪ್ರಸ್ತುತ ಕಾಂಗ್ರೆಸ್ ಸರಕಾರಕ್ಕೆ ಅಡಕೆ ಬೆಳೆಗಾರರ ಕೂಗು ಕೇಳಿಸುವ ಲಕ್ಷಣಗಳಿಲ್ಲ. ಅಡಕೆ ಬೆಳೆಗಾರರು ಎಲೆಚುಕ್ಕಿ ರೋಗದಿಂದ ಕಂಗೆಟ್ಟು ಭವಿಷ್ಯದ ಕುರಿತು ಚಿಂತಿತರಾಗಿರುವ ಸಂದರ್ಭದಲ್ಲಿ ಸರಕಾರ ನಿರ್ಲಕ್ಷ್ಯ ಧೋರಣೆ ತಾಳಿರುವುದು ವಿಪರ್ಯಾಸ. ದಶಕಗಳ ಹಿಂದಿನಿಂದಲೂ ಅಡಕೆ ಬೆಳೆಗೆ ಒಂದಿಲ್ಲೊಂದು ಸಂಕಷ್ಟಗಳು ಎದುರಾಗುತ್ತಲೇ ಇವೆ. ಅದಕ್ಕೆ ಉದಾಹರಣೆಯೆಂಬಂತೆ ಗುಟ್ಕಾ ಉತ್ಪನ್ನಗಳ ಮೇಲೆ ನಿಷೇಧ ಹೇರಬೇಕೆನ್ನುವ ಕೂಗು ಆಗಾಗ ಏಳುತ್ತಲೇ ಇರುತ್ತದೆ.
ಗುಟ್ಕಾಗಳಲ್ಲಿ ಬಳಸುವ ಹಾನಿಕಾರಕ ವಸ್ತುಗಳು ಮಾತ್ರ ಕ್ಯಾನ್ಸರ್ ಕಾಯಿಲೆ ತರುತ್ತವೆಯೇ ಹೊರತು ಅಡಕೆಯಿಂದ ಕ್ಯಾನ್ಸರ್ ಬರುವುದಿಲ್ಲ ಎನ್ನುವುದು ಅಡಕೆ ಬೆಳೆಗಾರರ ವಾದವಾಗಿದ್ದು, ಅಧಿಕೃತ ಮಾಹಿತಿಗಳ ಕೊರತೆ ಇರುವ ಕಾರಣದಿಂದ ಈ ವಾದಗಳಲ್ಲಿ ಅಡಕೆ ಬೆಳೆಗಾರರಿಗೆ
ಹಿನ್ನಡೆಯಾಗುತ್ತಿದೆ. ಇತ್ತ ಕೆಲ ಅಂತಾರಾಷ್ಟ್ರೀಯ ಲೇಖನಗಳು ಕೂಡ ಅಡಕೆ ಕ್ಯಾನ್ಸರ್ಕಾರಕ ಎನ್ನುವ ವರದಿಗಳನ್ನು ನೀಡುತ್ತಿದ್ದು ಇದು ಕೂಡ ಅಡಕೆ ನಿಷೇಧ ಮಾಡಲು ಪುಷ್ಟಿಕೊಟ್ಟಂತಿದೆ. ಆಗಾಗ ಭುಗಿಲೇಳುವ ಇಂಥ ಹುರುಳಿಲ್ಲದ ವಾದಗಳು ಅಡಕೆ ಬೆಳೆಗಾರರು ಜೀವ ಕೈಯಲ್ಲಿ ಹಿಡಿದು ಬದುಕುವಂಥ ಪರಿಸ್ಥಿತಿಯನ್ನು ನಿರ್ಮಾಣ ಮಾಡುತ್ತಿವೆ. ೩ ವರ್ಷಗಳ ಹಿಂದೆ ಸರಕಾರ ಅಡಕೆ ಕಾರ್ಯಪಡೆಯನ್ನು ರಚಿಸಿ, ಇದರ ಮೂಲಕ ಅನೇಕ ಅಡಕೆ ಬೆಳೆಗಾರರ ಸಮಸ್ಯೆಗೆ ಪರಿಹಾರ ಹುಡುಕುವ ಪ್ರಯತ್ನವನ್ನು ಆರಂಭಿಸಿದೆ. ಈ ಮೂಲಕ ಎಂ.ಎಸ್. ರಾಮಯ್ಯ ಸಂಸ್ಥೆಯ ವಿಜ್ಞಾನಿಗಳಿಂದ ಅಡಕೆ ಬೆಳೆಯ ಗುಣಲಕ್ಷಣಗಳು ಮತ್ತು ಅದರ ಉಪಯೋಗಗಳ ಬಗೆಗಿನ ಸಂಶೋಧನೆ ನಡೆಸಿ ಸರ್ವೋಚ್ಚ ನ್ಯಾಯಾಲಯಕ್ಕೆ ವರದಿ ಸಲ್ಲಿಸುವ ಕಾರ್ಯವೂ ಪ್ರಗತಿಯಲ್ಲಿದೆ.
ವಿದೇಶಿ ಅಡಕೆಗಳನ್ನು ನಮ್ಮ ದೇಶಕ್ಕೆ ಆಮದು ಮಾಡಿಕೊಳ್ಳುತ್ತಿರುವುದು ಕೂಡ ದೇಶಿ ಅಡಕೆ ಬೇಡಿಕೆಯಲ್ಲಿ ಕುಸಿತಕ್ಕೆ ಕಾರಣವಾಗುತ್ತಿದೆ. ಕಳ್ಳಸಾಗಾಣಿಕೆ ಹಾಗೂ ವಿದೇಶಿ ಅಡಕೆಗಳ ಆಮದು ಪ್ರಕ್ರಿಯೆಗೆ ಕಡಿವಾಣ ಹಾಕುವ ಅನಿವಾರ್ಯ ಎದುರಾಗಿದೆ. ಮಾರುಕಟ್ಟೆಗೆ ಸಂಬಂಧಿಸಿದ ಇಂಥ ಸಮಸ್ಯೆಗಳ ಜತೆಗೆ ಬೆಳೆಗಳಲ್ಲಿ ಕಂಡುಬರುವ ರೋಗಗಳು ರೈತರನ್ನು ಹೈರಾಣಾಗಿಸಿವೆ. ಎಲೆಚುಕ್ಕಿ ರೋಗ ಒಂದೆಡೆ ಆತಂಕ ಮೂಡಿಸಿದ್ದರೆ,
ಇನ್ನೊಂದೆಡೆ ಕೊಳೆರೋಗ ಸಮಸ್ಯೆಯೂ ಅನೇಕ ದಶಕಗಳಿಂದ ಅಡಕೆ ಬೆಳೆಗಾರರನ್ನು ಕಾಡುತ್ತಿದೆ. ಕೋಟ್ಯಂತರ ರುಪಾಯಿಗಳಷ್ಟು ಬೆಳೆಯ ನಷ್ಟಕ್ಕೆ ಈ ರೋಗ ಕಾರಣವಾಗಿದೆ.
ಕೊಳೆ ರೋಗಕ್ಕೆ ಬೇಸತ್ತ ಕೆಲ ಬೆಳೆಗಾರರು ಅಡಕೆ ಬೆಳೆಯುವುದನ್ನೇ ನಿಲ್ಲಿಸಿದ್ದಾರೆ. ಕೊಳೆರೋಗದ ಬಗ್ಗೆ ಅನೇಕ ಸಂಶೋಧನೆಗಳು ನಡೆದಿದ್ದು, ಪರಿಹಾರ ಮಾತ್ರ ಸಿಗದೇ ಇರುವುದು ಅಡಕೆ ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ. ಈ ಬೆಳೆಯ ಅಽಕೃತ ಆದಾಯ ೨೦,೦೦೦ ಕೋಟಿ ರು.
ಗಳಾಗಿದ್ದು, ಇದರಲ್ಲಿ ೫೦೦ ಕೋಟಿ ರು. ಜಿಎಸ್ಟಿ ರೂಪದಲ್ಲಿ ಸರಕಾರಿ ಖಜಾನೆಗೆ ಸೇರುತ್ತದೆ. ಇದರ ಹೊರತಾಗಿಯೂ ತೆರಿಗೆ, ಎಪಿಎಂಸಿ, ಆದಾಯ ಕರ ಇನ್ನಿತರ ಮೂಲಗಳಿಂದಲೂ ಸಾಕಷ್ಟು ಆದಾಯ ಸರಕಾರದ ಬೊಕ್ಕಸಕ್ಕೆ ಸೇರುತ್ತಿದೆ. ಅಡಕೆ ಬೆಳೆಗೆ ಪ್ರಸಕ್ತ ವರ್ಷಗಳಲ್ಲಿ ಮಾರುಕಟ್ಟೆಯಲ್ಲಿ ಕೊಂಚ ತೃಪ್ತಿದಾಯಕ ಬೆಲೆ ಸಿಗುತ್ತಿದೆ. ಆದರೆ ಮಧ್ಯವರ್ತಿಗಳು ಕೆಲ ಕಡೆಗಳಲ್ಲಿ ಅನಽಕೃತವಾಗಿ ಮಾರಾಟ ಮಾಡುತ್ತಿರುವುದು
ಬೆಳಕಿಗೆ ಬಂದಿದ್ದು, ಇದರಿಂದಾಗಿ ಅಡಕೆ ಬೆಳೆಗಾರರಿಗೆ ಸೂಕ್ತ ನ್ಯಾಯ ಸಿಗದಂತಾಗಿದೆ.
ಕೆಲ ಸಹಕಾರಿ ಸಂಸ್ಥೆಗಳು ಅಡಕೆ ಬೆಳೆಗಾರರ ಹಿತ ಕಾಪಾಡುವಲ್ಲಿ ಯಶ್ವಸಿಯಾಗಿವೆ. ಇತ್ತೀಚೆಗಷ್ಟೇ ಕರ್ನಾಟಕ ರಾಜ್ಯ ಅಡಕೆ ಸಹಕಾರ ಮಹಾಮಂಡಳಿ, ಶಿವಮೊಗ್ಗ ಒಂದು ವರದಿಯನ್ನು ನೀಡಿ ಇಂಥ ಸಮಸ್ಯೆಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದ್ದು, ರೋಗಗಳ ತಡೆಗಟ್ಟುವಿಕೆಗೆ ವೈಜ್ಞಾನಿಕ ಸಂಶೋಧನೆಯ ಅಗತ್ಯವಿದೆ ಎಂದು ಮನವಿ ಮಾಡಿದೆ. ರಾಜ್ಯ ಸರಕಾರ ಮಾತ್ರ ಈ ವಿಷಯದಲ್ಲಿ ಮೌನಕ್ಕೆ ಜಾರಿರುವುದು ದುರ
ದೃಷ್ಟಕರ. ನಾಡಿನ ಬಹುದೊಡ್ಡ ವಾಣಿಜ್ಯ ಬೆಳೆಗೆ ಇಂಥ ಸಂಕಷ್ಟ ಎದುರಾದರೂ ಸರಕಾರ ಮಾತ್ರ ಪಕ್ಷ ರಾಜಕಾರಣದಲ್ಲಿ ಮೈಮರೆತಿರುವುದು
ದುರದೃಷ್ಟಕರ. ಇನ್ನಾದರೂ ರಾಜ್ಯ ಸರಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ.
ಎಲೆಚುಕ್ಕಿ ರೋಗದ ನಿಯಂತ್ರಣಕ್ಕೆ ರೈತರಿಗೆ ಔಷಧಗಳ ಪೂರೈಕೆ, ಸಬ್ಸಿಡಿ, ಸಾಲ ಸೌಲಭ್ಯಗಳನ್ನು ಹೆಚ್ಚಿಸುವಲ್ಲಿ ಗಮನ ಹರಿಸಿದರೆ ಅಡಕೆ ಬೆಳೆಗಾರರು ನಿಟ್ಟುಸಿರು ಬಿಟ್ಟಾರು. ಹಾಗೆಯೇ ಅಡಕೆ ಬೆಳೆಗಾರರ ಮತ್ತೊಂದು ಸಂಕಷ್ಟವಾದ ಕಳ್ಳಸಾಗಾಟ ಮತ್ತು ಅನಽಕೃತ ಮಾರಾಟಗಳ ಕುರಿತೂ ಹೆಚ್ಚಿನ ಮುತುವರ್ಜಿ ವಹಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ.