ವಿದೇಶವಾಸಿ
dhyapaa@gmail.com
2003ರ ಅಂತ್ಯದಲ್ಲಿ ಅರ್ನಾಲ್ಡ್ ಕ್ಯಾಲಿಫೋರ್ನಿಯಾದ ಗವರ್ನರ್ ಆಗಿ ಆಯ್ಕೆಯಾದರು. ಅಮೆರಿಕದ ಕಾನೂನು ಒಪ್ಪಿದ್ದರೆ ಅವರು ಅಧ್ಯಕ್ಷರೂ ಆಗುತ್ತಿದ್ದರೋ ಏನೋ, ಆದರೆ ತಾನು ರಾಜಕಾರಣಿಯಾಗಿ ಏರಬಹುದಾದ ಸ್ಥಾನಕ್ಕೆ ಅವರು ಏರಿ ಆಗಿತ್ತು. ಅರ್ನಾಲ್ಡ ಒಂದು ಬಾರಿಯಲ್ಲ, ಎರಡು ಬಾರಿ ಕ್ಯಾಲಿಫೋರ್ನಿಯಾದ ಗವರ್ನರ್ ಆಗಿದ್ದರು.
‘ಒಬ್ಬ ವ್ಯಕ್ತಿ ಯಶಸ್ವಿಯಾಗಬೇಕೆಂದರೆ, ಎಲ್ಲಕ್ಕಿಂತ ಮೊದಲು ಒಂದು ಗುರಿ ಇರಬೇಕು. ಏನು ಸಾಽಸಬೇಕು, ತಾನು ಯಾವ ತಾಣ ತಲುಪಬೇಕು ಎಂಬ ಧ್ಯೇಯವೇ ಇಲ್ಲದಿದ್ದರೆ ನಾವು ಎಲ್ಲಾ ಅಲೆಯುತ್ತಿರುತ್ತೇವೆ. ಒಮ್ಮೆ ನಮ್ಮ ಗುರಿ ಗೊತ್ತಾದರೆ ಬಹಳಷ್ಟು ಕಾರ್ಯ ಸುಲಭವಾಗುತ್ತದೆ. ನೂರಕ್ಕೆ ಎಪ್ಪತ್ತೈದರಷ್ಟು ಜನ ತಾವು ಏನು ಸಾಧಿಸಬೇಕು ಎಂಬ ಗುರಿಯೇ ಇಲ್ಲದೆ ಸೊರಗುತ್ತಾರೆ, ಸೋಲುತ್ತಾರೆ’ .
‘ಅದು ಸಾಧ್ಯವಿಲ್ಲ ಎನ್ನುವವರ ಮಾತು ಕೇಳಬೇಡಿ. ಅಂಥವರನ್ನು ದೂರ ಇಡಿ. ಅದು ಅವರಿಂದ ಸಾಧ್ಯವಿಲ್ಲದೇ ಇರಬಹುದು, ನಿಮ್ಮಿಂದ ಸಾಧ್ಯವಿಲ್ಲ ಎಂದು ಹೇಳಲು ಅವರು ಯಾರು? ನಿಮ್ಮ ಮೇಲೆ, ನಿಮ್ಮ ವಿಶ್ವಾಸದ ಮೇಲೆ ನಿಮಗೆ ಭರವಸೆ ಇರಲಿ.’ ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಹೆಸರು ಕೇಳದವರು ವಿರಳ. ಒಬ್ಬ ದೇಹದಾರ್ಢ್ಯ ಪಟುವಾಗಿ, ಹಾಲಿವುಡ್ ನಟನಾಗಿ, ಅಮೆರಿಕ ದಂತಹ ದೇಶದಲ್ಲಿ ರಾಜಕಾರಣಿಯಾಗಿ, ತಮ್ಮ ಕ್ಷೇತ್ರವನ್ನು ಆಳಿದ ವ್ಯಕ್ತಿ ಅರ್ನಾಲ್ಡ್. ಈ ಮೇಲೆ ಹೇಳಿದ ಮಾತುಗಳು ಅವರ ಬಾಯಿಂದಲೇ ಬಂದದ್ದು.
ಸುಮ್ಮನೇ ಎಲ್ಲಿಯೋ ಓದಿದ, ವೇದಾಂತ ಹೇಳುವ ಮಾತುಗಳಲ್ಲ. ಎಲ್ಲವೂ ಅವರ ಅನುಭವದ ಮಾತುಗಳು. ಬೇರೆಯವರಿಗೆ
ಉಪದೇಶ ಮಾಡುವುದಕ್ಕಿಂತ ಮೊದಲು ತಾನು ಸಾಧಿಸಿ ತೋರಿಸಬೇಕು ಎನ್ನುವ ಮಾತಿಗೆ ಉದಾಹರಣೆ ಅರ್ನಾಲ್ಡ್.
ಟರ್ಮಿನೇಟರ್ ಚಿತ್ರದ ನಟ ಅರ್ನಾಲ್ಡ್ ಸ್ವತಃ ಮಾದರಿಯ ಟರ್ಮಿನಲ. ತಾನು ಮುಟ್ಟಿದ್ದೆಲ್ಲವನ್ನೂ ಚಿನ್ನವಾಗಿಸಿದ ಅರ್ನಾಲ್ಡ್ ಶ್ವಾರ್ಜಿನೆಗ್ಗರ್‌ಗೆ ಯಾವುದೂ ಬಳುವಳಿಯಾಗಿ ಬಂದದ್ದಲ್ಲ. ಸಾಧನೆ ಮಾಡಿದ ಯಾವ ಕ್ಷೇತ್ರವೂ ಪೂರ್ವಜರಿಂದ ರಕ್ತಗತ ವಾಗಿ ಬಂದದ್ದಲ್ಲ. ಕೈ ಹಾಕಿದ ಪ್ರತಿ ಕಸುಬೂ ಹೊಸತು. ಎಲ್ಲರಿಗೂ ಮನೆಯೇ ಮೊದಲ ಪಾಠಶಾಲೆಯಾದರೆ ಅರ್ನಾಲ್ಡ್‌ಗೆ ಮನೆಯೇ ಸದಾ ‘ಶಿಕ್ಷಾ’ ಗೃಹ.
ಅಪ್ಪ-ಅಮ್ಮ ಇಬ್ಬರೂ ಪೊಲೀಸ್ ಇಲಾಖೆಯಲ್ಲಿ ಕೆಲಸಮಾಡುತ್ತಿದ್ದವರು. ಅಪ್ಪನ ಕೈಯ್ಯಲ್ಲಿರುತ್ತಿದ್ದ ಲಾಠಿಗೆ ಮನೆಗೆ ಬಂದರೂ ಪುರುಸೊತ್ತು ಇರುತ್ತಿರಲಿಲ್ಲ. ಅಪ್ಪನ ಬೆತ್ತಕ್ಕೂ, ಅರ್ನಾಲ್ಡ್ ಬೆನ್ನಿಗೂ ಜನ್ಮ ಜನ್ಮದ ಅವಿನಾಭಾವ ಸಂಬಂಧ. ತೀರಾ ಸಣ್ಣ ತಪ್ಪಿಗೂ ಚಿಣ್ಣನಿಗೆ ದೊಣ್ಣೆ ಏಟು ಬೀಳುತ್ತಿತ್ತು. ಅರ್ನಾಲ್ಡ್‌ಗೆ ಒಬ್ಬ ಅಣ್ಣನಿದ್ದ. ತಂದೆಗೆ ಅಣ್ಣನ ಮೇಲೆ ಹೆಚ್ಚು ಪ್ರೀತಿಯಿತ್ತು. ಎಲ್ಲರನ್ನೂ ಸಂಶಯದಿಂದಲೇ ಕಾಣುವ ಇಲಾಖೆಯಲ್ಲಿ ಕೆಲಸ ಮಾಡುವ ಅಪ್ಪನಿಗೆ, ಅರ್ನಾಲ್ಡ್ ತನ್ನ ಮಗನೇ ಹೌದೋ-
ಅಲ್ಲವೋ ಎಂಬ ಸಂಶಯವಿತ್ತು. ಅದಲ್ಲದೇ ಅಣ್ಣ ಓದಿನಲ್ಲಿ ಹುಷಾರಿ.
ಅರ್ನಾಲ್ಡ್ ಹಾಗಲ್ಲ, ಇತ್ತ ಉತ್ತಮ ಶ್ರೇಣಿಯಲ್ಲೂ ಇರದ, ಅತ್ತ ನಪಾಸೂ ಆಗದ ಸಾಧಾರಣ ವಿದ್ಯಾರ್ಥಿ, ತನ್ನಂತೆಯೇ
ಪೊಲೀಸ್ ಇಲಾಖೆಗೆ ಸೇರಿಕೊಳ್ಳಲಿ ಎಂಬ ಅಪ್ಪನ ಇಚ್ಛೆಗೆ ಅಪೂಟು ಒಪ್ಪದ ಮಗನನ್ನು ಕಂಡರೆ ಅಪ್ಪ ನಿಗೆ ಅಷ್ಟಕ್ಕಷ್ಟೇ ಆಗಿತ್ತು. ಆದ್ದರಿಂದ ಅರ್ನಾಲ್ಡ್ ‘ಶಿಶು ದೌರ್ಜನ್ಯ’ ಕ್ಕೆ ಒಳಗಾದ ಬಲಿ-ಬಾಲಕ, ಈಗಾದರೆ ಅದು ಮಕ್ಕಳ ನಿಂದನೆ (ಚೈಲ್ಡ
ಅಬ್ಯೂಸ್) ಎಂಬ ಅಪರಾಧವೇ ಆಗುತ್ತಿತ್ತು.
ಆದರೆ ಅಪ್ಪನ ಬೆಳ್ಳಿನ ಪ್ರತಿಯೊಂದೂ ಏಟು ಬಾಲಕನನ್ನು ಇನ್ನಷ್ಟು ಗಟ್ಟಿಗೊಳಿಸುತ್ತಿತ್ತು.‘ಎಷ್ಟು ದಿನ ಹೊಡೆಯುತ್ತೀರಿ? ನಾನು ಇಲ್ಲಿ ಇರುವವನೇ ಅಲ್ಲ, ಬಹು ಬೇಗ ದೊಡ್ಡ ಸಾಧಕನಾಗಿ ತೋರಿಸುತ್ತೇನೆ’ ಎಂದು ಮನಸ್ಸಿನಲ್ಲಿಯೇ ಅಂದುಕೊಳ್ಳು
ತ್ತಿದ್ದರು ಅರ್ನಾಲ್ಡ್. ಆ ಕೂಪದಿಂದ ಅರ್ನಾಲ್ಡ್ ಮೇಲೆದ್ದು ಬಂದ ದ್ದು ಆತ್ಮವಿಶ್ವಾಸವೆಂಬ ಏಣಿ ಹತ್ತಿ. ಅದೊಂದು ಇಲ್ಲದಿದ್ದರೆ, ಇಂದು ವಿಶ್ವದ ಮೂಲೆ ಮೂಲೆಯವರೆಗೂ ತಲುಪಿದ ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಎಂಬ ಹೆಸರು ಆಸ್ಟ್ರಿಯಾದ ಒಂದು ಊರಿಗೋ, ರಾಜ್ಯಕ್ಕೆ ಸೀಮಿತವಾಗಿ, ಅ ಹೊರಳಾಡಿಕೊಂಡು, ಉರುಳಾಡಿಕೊಂಡು ಬಿದ್ದಿರುತ್ತಿತ್ತು.
ತಾವು ಕಂಡ ಕನಸಿಗೆಲ್ಲ ಏಣಿ ಹಾಕಿ, ವಾಸ್ತವವನ್ನಾಗಿಸಿಕೊಂಡ ಅರ್ನಾಲ್ಡ್ ವೈಯಕ್ತಿಕವಾಗಿ ಸಾಕಷ್ಟು ವೇದನೆ ಅನುಭವಿಸಿ ದವರು, ಇಂದಿಗೂ ಅನುಭವಿಸುತ್ತಿರುವವರು. ಆದರೆ ವೇದನೆ, ಅಡೆತಡೆಗಳನ್ನೆಲ್ಲ ಪಕ್ಕಕ್ಕಿಟ್ಟು, ಇಟ್ಟ ಗುರಿಯಿಂದ ಲಕ್ಷ್ಯವನ್ನು ಬೇರೆಡೆ ಹರಿಸದೇ ದಿಟ್ಟ ಹೆಜ್ಜೆ ಇಟ್ಟು ಮಾದರಿಯಾಗಿ ನಿಂತಿರುವವರು ಅರ್ನಾಲ್ಡ್. ಅರ್ನಾಲ್ಡ ಹುಟ್ಟಿದ್ದು ಯುರೋಪ್ ಖಂಡದ
ಆಸ್ಟ್ರಿಯಾ ದೇಶದ ಥಾಲ್‌ನಲ್ಲಿ. ಆಗಷ್ಟೇ ಎರಡನೆಯ ವಿಶ್ವಮಹಾಯುದ್ಧ ಮುಗಿದಿತ್ತು. ದೇಶ ಸಾಕಷ್ಟು ಹಾನಿಗೊಳಗಾಗಿತ್ತು. ಅರ್ನಾಲ್ಡ್ಗೆ ಬುದ್ಧಿ ಬೆಳೆಯುತ್ತಿದ್ದಂತೆ, ತಾನು ಬೆಳೆಯಬೇಕೆಂದರೆ ದೇಶ ಬಿಡಬೇಕು ಎಂಬ ಬಯಕೆ ಹೆಚ್ಚುತ್ತಿತ್ತು.
ಅದು ತನ್ನ ವ್ಯಾಪ್ತಿಗೆ ಇದು ತಾಣವಲ್ಲ ಎಂಬ ಭಾವವೇ ಹೊರತು ದೇಶದ ಬಗ್ಗೆ ಅಗೌರವವಾಗಿರಲಿಲ್ಲ. ಹಾಗೇನಾದರೂ ಆಗಿದ್ದರೆ ಅವರು ಇಂದಿಗೂ ತನ್ನ ದೇಶದ ಪೌರತ್ವ ಉಳಿಸಿಕೊಳ್ಳುತ್ತಿರಲಿಲ್ಲ. ಯಾವುದೋ ಸಂಸ್ಥೆಯಲ್ಲಿ ಒಬ್ಬ ಸಾಮಾನ್ಯ ನೌಕರನಾಗಿಯೋ ಅಥವಾ ತಂದೆಯ ಬಯಕೆಯಂತೆ ಪೊಲೀಸ್ ಇಲಾಖೆಯ ಹತ್ತರಲ್ಲಿ ಹನ್ನೊಂದನೆಯ ಸಿಬ್ಬಂದಿಯಾಗಿಯೋ ಇರಲು ಅವರ ಮನಸ್ಸು ಒಪ್ಪಲಿಲ್ಲ ಅಷ್ಟೇ.
ತಾನು ಪೊಲೀಸ್ ಇಲಾಖೆ ಸೇರಬೇಕೆಂಬುದು ತಂದೆಯ ಕನಸೇ ಹೊರತು ತನ್ನ ಕನಸಲ್ಲ ಎಂದು ಅವರು ತಿಳಿದಿದ್ದರು. ನಾನು
ಇವರನ್ನೆಲ್ಲ ಮೀರಿಸಿ ನಿಲ್ಲಬೇಕು, ಜಗತ್ತು ನನ್ನೆಡೆಗೆ ನೋಡುವಂತೆ ಮಾಡಬೇಕು ಎನ್ನುವ ತುಡಿತ ಅವರಲ್ಲಿ ಬಲವಾಗಿತ್ತು. ಆಗ ಅವರನ್ನು ಸೆಳೆದದ್ದು ಅಮೆರಿಕ ಎಂಬ ಮಹಾನಗರ, ಅರ್ನಾಲ್ಡ್ ಹನ್ನೊಂದು ವರ್ಷದವರಾಗಿzಗ ಶಾಲೆಯಲ್ಲಿ ಅಮೆರಿಕದ ಕುರಿತು ಸಾಕ್ಷ್ಯಚಿತ್ರ ತೋರಿಸಿದ್ದರು. ಅಲ್ಲಿಯ ವಿಶಾಲವಾದ ರಸ್ತೆಗಳು, ದೊಡ್ಡ ಸೇತುವೆಗಳು, ಮುಗಿಲೆತ್ತರಕ್ಕೆ ತಲೆ ಎತ್ತಿ ನಿಂತ ಕಟ್ಟಡಗಳು, ಅಮೆರಿಕದ ತಂತ್ರಜ್ಞಾನ, ಎಲ್ಲವೂ ಅವರನ್ನು ಆಕರ್ಷಿಸುತ್ತಿತ್ತು.
ತನ್ನ ತಾಣ ಅಮೆರಿಕ, ತಾನು ಆ ದೇಶವನ್ನು ಸೇರಬೇಕು ಎಂದು ನಿರ್ಧರಿಸಿದರು. ಆದರೆ ಹೇಗೆ, ಯಾವ ಅರ್ಹತೆ ಎಂದು ತಿಳಿದಿರಲಿಲ್ಲ. ಆಗ ಅವರಿಗೆ ಸೂರ್ತಿಯ ಕಿರಣವಾಗಿ ಕಂಡದ್ದು, ಅಮೆರಿಕದ ಉದ್ಯಮಿ, ಚಿತ್ರನಟ, ಬಾಡಿ ಬಿಲ್ಡರ್ ರಿಜ್ ಪಾರ್ಕ್.
ರಿಜ್ ಪಾರ್ಕ್ ಆಗಲೇ ಮೂರು ಬಾರಿ ಮಿಸ್ಟರ್ ಯುನಿವರ್ಸ್ ಆಗಿದ್ದರಲ್ಲದೆ, ಜನಪ್ರಿಯ ‘ಹರ್ಕುಲಿಸ್’ ಚಲನಚಿತ್ರದಲ್ಲಿ ನಟಿಸಿದ್ದರು. ತಾನೂ ರಿಜ್ ಪಾರ್ಕ್‌ನಂತೆಯೇ ದೇಹವನ್ನು ಹದಗೊಳಿಸಬೇಕು.
ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಬೇಕು, ರಿಜ್ ಪಾರ್ಕ್‌ನಂತೆಯೇ ಚಿತ್ರನಟನಾಗಬೇಕು, ಹಣ ಸಂಪಾದಿಸಬೇಕು, ಹೆಸರು ಮಾಡಬೇಕು ಎಂಬ ನಿರ್ಣಯಕ್ಕೆ ಬಂದಿದ್ದರು ಅರ್ನಾಲ್ಡ್. ಅರ್ನಾಲ್ಡ್ ಮನೆಯ ಆಸುಪಾಸಿನಲ್ಲಿ ಯಾವುದೇ ವ್ಯಾಯಾಮಶಾಲೆಯಿರಲಿಲ್ಲ. ಜಿಮ್ ಹೋಗಲು ಅರ್ನಾಲ್ಡ್ ಸಾಕಷ್ಟು ಸೈಕಲ್ ತುಳಿಯುತ್ತಿದ್ದರು. ಊರಿನವರು, ಸ್ನೇಹಿತರರೆಲ್ಲ
ಬಾಡಿ ಬಿಲ್ಡಿಂಗ್‌ನಿಂದ ಯಾವ ಪ್ರಯೋಜನವೂ ಇಲ್ಲವೆಂದು ಹೇಳುತ್ತಿದ್ದರು. ಅಥ್ಲೀಟ್ ಆಗಿದ್ದ ಅಪ್ಪನೂ ಅದಕ್ಕೆ ಹೊರತಾಗಿ ರಲಿಲ್ಲ.
ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಂತೆ ಹೇಳುತ್ತಿದ್ದ ಅಪ್ಪನ ಮಾತು ಕೇಳಿ ಅರ್ನಾಲ್ಡ್ ಫುಟ್ಬಾಲ್ ಆಡಲು ಆರಂಭಿಸಿದನಾದರೂ ವ್ಯಾಯಾಮದ ಕಡೆಗೇ ಹೆಚ್ಚು ಒಲವಿತ್ತು. ಹೇಗೋ ವಾರದಲ್ಲಿ ಮೂರು ದಿನ ಮಾತ್ರ ಜಿಮ್‌ಗೆ ಹೋಗಲು ಅಪ್ಪನ ಒಪ್ಪಿಗೆ ಸಿಕ್ಕಿತು. ಉಳಿದ ಮೂರುದಿನ ಮನೆಯಲ್ಲಿಯೇ ವ್ಯಾಯಾಮ ಮಾಡುತ್ತಿದ್ದರು. ರಜಾ ದಿನವಾದ ಭಾನುವಾರ ಕಾಡಿ ಬೇಡಿ, ಜಿಮ್ ಬಾಗಿಲು ತೆಗೆಸಿ ವ್ಯಾಯಾಮ ಮಾಡಿ ಬರುತ್ತಿದ್ದರು.
ಪ್ರತಿ ನಿತ್ಯ ಐದರಿಂದ ಆರು ತಾಸು ವ್ಯಾಯಾಮ ಮಾಡಿದರೂ ಅವರಿಗೆ ದಣಿವೂ ಆಗುತ್ತಿರಲಿಲ್ಲ, ಸಮಾಧಾನವೂ ಆಗುತ್ತಿರ ಲಿಲ್ಲ. ತನ್ನ ಗುರಿ ತಲುಪುವುದೊಂದೇ ಅವರ ಲಕ್ಷ್ಯವಾಗಿತ್ತು. ಅದು ಫಲವನ್ನೂ ನೀಡಿತ್ತು. ತಮ್ಮ ಇಪ್ಪತ್ತನೆಯ ವರ್ಷದಲ್ಲಿಯೇ ಅರ್ನಾಲ್ಡ್ ಇಂಗ್ಲೆಂಡಿನಲ್ಲಿ ನಡೆದ ಮಿಸ್ಟರ್ ಯುನಿವರ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದಷ್ಟೇ ಅಲ್ಲ, ಅತ್ಯಂತ ಕಿರಿಯ ವಯಸ್ಸಿನಲ್ಲಿ ಸ್ಪರ್ಧೆ ಗೆದ್ದ ಕೀರ್ತಿಗೂ ಭಾಜನರಾದರು.
ಆಸ್ಟ್ರಿಯನ್ ಕಾನೂನಿನ ಪುಕಾರ ಒಂದು ವರ್ಷ ಕಡ್ಡಾಯವಾಗಿ ಸೇನೆಯಲ್ಲಿ ಸೇವೆ ಸಲ್ಲಿಸಬೇಕಾಗಿತ್ತು. ತಮ್ಮ ಹದಿನೆಂಟನೆಯ ವರ್ಷದಲ್ಲಿ ಸೇವೆ ಸಲ್ಲಿಸಲು ಸೇನೆ ಸೇರಿದ ಅರ್ನಾಲ್ಡ್ ‘ಜೂನಿಯರ್ ಮಿಸ್ಟರ್ ಯೂರೋಪ್’ ಶೀರ್ಷಿಕೆ ಗೆದ್ದರು. ಆದರಿಂದಾಗಿ ಅರ್ನಾಲ್ಡ್ ಒಂದು ವಾರ ಜೈಲು ಶಿಕ್ಷೆ ಅನುಭವಿಸಬೇಕಾಯಿತು! ನಿಜ, ಸೇನೆಯಲ್ಲಿ ಸೇವೆ ಸಲ್ಲಿಸುವಾಗ ಆ ರೀತಿಯ ಸ್ಪರ್ಧೆ ಗಳಲ್ಲಿ ಭಾಗವಹಿಸುವುದಕ್ಕೆ ಅವಕಾಶವಿರಲಿಲ್ಲ. ಶಿಕ್ಷೆ ಕಳೆದ ನಂತರ, ಅವರಲ್ಲಿರುವ ತುಡಿತ ಕಂಡು ಸೇನೆಯೇ ಅರ್ನಾಲ್ಡ್ ದೈಹಿಕ ಕಸರತ್ತಿಗೆ ಅನುಕೂಲ ಒದಗಿಸಿಕೊಟ್ಟಿತು.
ನಂತರ ನಡೆದದ್ದು ಈಗ ಇತಿಹಾಸ. ಮಿಸ್ಟರ್ ಯೂರೋಪ್, ಮಿಸ್ಟರ್ ವರ್ಲ್ಡ್, ಮಿಸ್ಟರ್ ಯೂನಿವಸ್, ಮಿಸ್ಟರ್ ಇಂಟರ್ನ್ಯಾ ಷನಲ್ ಸೇರಿದಂತೆ ಸತತ ಆರು ವರ್ಷ (ಒಟ್ಟೂ ಏಳು ಸಲ) ಮಿಸ್ಟರ್ ಓಲಿಂಪಿಯಾಡ್ ಶೀರ್ಷಿಕೆ ವಿಜೇತರಾದರು. ಅಲ್ಲಿಗೆ ಅವರ ಒಂದು ಗುರಿ ತಲುಪಿದಂತಾಗಿತ್ತು. ಅವರ ಎರಡನೆಯ ಗುರಿಯಾದ ಚಿತ್ರರಂಗದ ಬಾಗಿಲಲ್ಲಿ ನಿಂತಿದ್ದರು ಅರ್ನಾಲ್ಡ್.
ಅರ್ನಾಲ್ಡ್ ಚಲನಚಿತ್ರಗಳ ಕುರಿತು ಹೆಚ್ಚೇನೂ ಹೇಳಬೇಕಾಗಿಲ್ಲ. ‘ದಿ ಹಲ’, ‘ಟರ್ಮಿನೇಟರ್’ ಚಿತ್ರ ನೆನಪಾದರೆ ಸಾಕು, ಅರ್ನಾಲ್ಡ್ ನೆನಪಾಗುತ್ತಾರೆ. ಆದರೆ, ಚಿತ್ರರಂಗವೂ ಅವರಿಗೆ ಸುಲಭದ ತುತ್ತಾಗಿರಲಿಲ್ಲ. ಆಗೊಂದು ಈಗೊಂದು ಬಿಟ್ಟರೆ
ಅವರ ಮೊದಲ ಚಿತ್ರದ ನಂತರ ಅವರಿಗೆ ಹೆಚ್ಚು ಅವಕಾಶ ಸಿಗಲಿಲ್ಲ. ಅವರು ಪ್ರೀತಿಯಿಂದ ಬೆಳೆಸಿದ ದೇಹವೇ ಅವರಿಗೆ ಶಾಪವಾಯಿತು. ದೇಹವೇ ಪ್ರಧಾನವಲ್ಲ ಎಂದು ಕೆಲವರು ತಿರಸ್ಕರಿಸಿದರೆ, ಆರಡಿ ಎರಡು ಇಂಚು ಎತ್ತರದ, ಸುಮಾರು ನೂರ
ಹತ್ತು ಕಿಲೋ ತೂಗುವ, ಐವತ್ತೇಳು ಇಂಚಿನ ಎದೆ, ಮೂವತ್ತೂರು ಇಂಚಿನ ಸೊಂಟ ಹೊಂದಿರುವ ವ್ಯಕ್ತಿ ತಮ್ಮ ಚಿತ್ರದ ಪಾತ್ರಕ್ಕೆ ಸಮಂಜಸವಲ್ಲ ಎಂದು ಕೆಲವರು ನಿರಾಕರಿಸಿದರು.
ಅಷ್ಟೇ ಅಲ್ಲದೆ, ಇಂಗ್ಲೀಷ್ ಮಾತನಾಡುವ ಶೈಲಿ, ಉಚ್ಚಾರಣೆ ಸರಿಯಾಗಿಲ್ಲ ಎಂದೂ ಕೆಲವರು ಅವರನ್ನು ದೂರ ತಳ್ಳಿದರು. ಇನ್ನು ಕೆಲವರಂತೂ ‘ಅರ್ನಾಲ್ಡ್ ಶ್ವಾರ್ಜಿನೆಗ್ಗರ್’ ಹೆಸರು ಉದ್ದವಾಯಿತು, ಚಿತ್ರರಂಗಕ್ಕೆ ಹೊಂದುವುದಿಲ್ಲ ಎಂದೂ ಹೇಳಿದರು. ‘ಸೋ ಹಂಗಿ’ ಚಿತ್ರಕ್ಕೆ ‘ಗೋಲ್ಡನ್ ಗ್ಲೋಬ್ ಅವಾರ್ಡ್ ಫಾರ್ ನ್ಯೂ ಸ್ಟಾರ್ ಆಫ್ ದಿ ಇಯರ್’ ಪ್ರಶಸ್ತಿ ಪಡೆದಮೇಲೂ ಈ
ಪರಿಸ್ಥಿತಿಯಿತ್ತು ಎಂದರೆ ಊಹಿಸಿ. ಅರ್ನಾಲ್ಡ ಆ ಒಂದು ವರ್ತುಲದಿಂದ ಹೊರಗೆ ಬರಲು ಸುಮಾರು ಐದು ವರ್ಷವೇ ಹಿಡಿ ಯಿತು.
ಎಂಬತ್ತರ ದಶಕದಲ್ಲಿ ಆಕ್ಷನ್ ಚಿತ್ರಗಳ ಭರಾಟೆ ಜೋರಾಯಿತು. ಅದಕ್ಕೆ ಅರ್ನಾಲ್ಡ್ ಶ್ವಾರ್ಜಿನೆಗ್ಗರ್, ಸಿಸ್ಟರ್ ಸೈಲಾನ್, ಬ್ರೂಸ್ ಲೀ ಯಂತವರು ಕಾರಣವೋ ಅಥವಾ ಅಂತಹ ಸಿನಿಮಾಗಳಿಂದ ಅವರೆಲ್ಲ ಹೆಸರು ಮಾಡಿದರೋ ಗೊತ್ತಿಲ್ಲ, ಒಟ್ಟಿನಲ್ಲಿ
ಹೊಡೆದಾಟದ ಚಿತ್ರಗಳನ್ನು ಜನ ಇಷ್ಟಪಡಲಾರಂಭಿಸಿದ್ದರು. ಚಿತ್ರದ ನಾಯಕನಿಗೆ ಸದೃಢವಾದ ಮೈಕಟ್ಟಿರಬೇಕು ಎಂದು ಜನ ಬಯಸುತ್ತಿದ್ದರು.
ಅರ್ನಾಲ್ಡ್ ನಟಿಸಿದ ‘ಕಾನನ್ ದಿ ಬಾರ್ಬೇರಿಯನ್’, ‘ಕಾನನ್ ದಿ ಡಿಸ್ಟ್ರಾಯರ್’ ಚಿತ್ರಗಳು ಗ ಪೆಟ್ಟಿಗೆಯಲ್ಲಿ ಗೆದ್ದವು. ನಂತರದ ‘ಟರ್ಮಿನೇಟರ್’ (ಸರಣಿ), ಕಮಾಂಡೋ, ರಾ ಡೀಲ, ದಿ ರನ್ನಿಂಗ್ ಮ್ಯಾನ್, ಪ್ರಿಡೇಟರ್, ರೆಡ್ ಹೀಟ್‌ನಂತಹ ಸಾಹಸ ಚಿತ್ರಗಳು ಅವರಿಗೆ ‘ಆಕ್ಷನ್ ಸುಪರ್ ಸ್ಟಾರ್’ ಎಂಬ ಕೀರ್ತಿ ತಂದುಕೊಟ್ಟವು. ತೊಂಬತ್ತರ ದಶಕದಲ್ಲಿ ಅರ್ನಾಲ್ಡ್ ‘ದಶಕದ ಅಂತಾರಾಷ್ಟ್ರೀಯ ತಾರೆ’ ಎಂಬ ಕೀರ್ತಿಗೂ ಭಾಜನರಾದರು.
ಅಲ್ಲಿಗೆ ಅವರ ಎರಡನೆಯ ಗುರಿಯೂ ತಲುಪಿ, ಮೂರನೆಯ ಗುರಿಯ ಹೊಸ್ತಿಲಲ್ಲಿದ್ದರು. ೨೦೦೩ರ ಅಂತ್ಯದಲ್ಲಿ ಅರ್ನಾಲ್ಡ್ ಕ್ಯಾಲಿಫೋರ್ನಿಯಾದ ಗವರ್ನರ್ ಆಗಿ ಆಯ್ಕೆಯಾದರು. ಅಮೆರಿಕದ ಕಾನೂನು ಒಪ್ಪಿದ್ದರೆ ಅವರು ಅಧ್ಯಕ್ಷರೂ ಆಗುತ್ತಿದ್ದರೋ ಏನೋ, ಆದರೆ ತಾನು ರಾಜಕಾರಣಿಯಾಗಿ ಏರಬಹುದಾದ ಸ್ಥಾನಕ್ಕೆ ಅವರು ಏರಿ ಆಗಿತ್ತು. ಅರ್ನಾಲ್ಡ್ ಒಂದು ಬಾರಿಯಲ್ಲ, ಎರಡು ಬಾರಿ ಕ್ಯಾಲಿಫೋರ್ನಿಯಾದ ಗವರ್ನರ್ ಆಗಿದ್ದರು. ತಾವು ಚಿತ್ರರಂಗದಲ್ಲಿ ಅಭಿನಯಿಸಿ ಮತ್ತು ವ್ಯಾಪಾರದಲ್ಲಿ ಗಳಿಸಿದ ಹಣ ಸಾಕಷ್ಟಿದೆ ಎಂಬ ಕಾರಣಕ್ಕೆ ಅವರು ಸರಕಾರ ನೀಡುವ ವಾರ್ಷಿಕ ಸುಮಾರು ಒಂದೂಮುಕ್ಕಾಲು ಲಕ್ಷ ಡಾಲರ್ ಸಂಬಳ ಪಡೆಯಲಿಲ್ಲ.
ಈ ನಡುವೆ ಅವರಿಗೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ಇರುವುದು ತಿಳಿಯಿತು. ಒಟ್ಟೂ ಮೂರು ಬಾರಿ ಶಸ್ತ್ರ ಚಿಕಿತ್ಸೆಗೆ ಒಳಗಾದರು. ಒಮ್ಮೆಯಂತೂ ಶಸ್ತ್ರಚಿಕಿತ್ಸೆ ವಿಫಲವಾಗಿ ಕೆಲವೇ ಗಂಟೆಗಳ ಒಳಗೆ ಪುನಃ ಶಸ್ತ್ರಚಿಕಿತ್ಸೆ ಮಾಡಲಾಯಿತು. ಅದೊಂದು ರೋಚಕ ಘಟನೆಯೇ ಸರಿ. ಆ ವಿಷಯ ಹೇಳಲು ಹೊರಟರೆ ಇನ್ನೊಂದು ಅಂಕಣ ಬೇಕಾದೀತು. ಇರಲಿ, ಅಂತಹ ಸಂದರ್ಭದಲ್ಲೂ ಧೃತಿಗೆಡದೆ, ಚಿಕಿತ್ಸೆಗೆ ದೇಹವೊಡ್ಡಿ, ಜಯಿಸಿ ಬಂದವರು ಆರ್ನಾಲ್ಡ. ಅವರ ಮೇಲೆ ಹಗಳೂ ಆದವು.
ಅರ್ನಾಲ್ಡ್ ಇತ್ತೀಚೆಗೆ ಭೀಕರ ವಾಹನ ಅಪಘಾತಕ್ಕೊಳಗಾದರೂ ಪಾರಾಗಿ ಬಂದಿದ್ದಾರೆ. ಅವರು ನಿಜಕ್ಕೂ ಆಕ್ಷನ್ ಹೀರೋ, ಹೋರಾಟಗಾರ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಅದಕ್ಕಿಂತಲೂ ಮಿಗಿಲಾಗಿ ಇಂದಿಗೂ ಅವರಲ್ಲಿ ಕಾಣುವುದು
ಅವರಲ್ಲಿ ತುಳುಕುವ ಆತ್ಮವಿಶ್ವಾಸ. ಅತ್ಮವಿಶ್ವಾಸ ಅಗಾಧವಾಗಿರುತ್ತದೆಯೋ ಮಹಾಮಂತ್ರವೂ ಹೌದು, ಮಹಾಮದ್ದೂ ಹೌದು. ಯಾರಲ್ಲಿ ಆತ್ಮವಿಶ್ವಾಸ ಅವರು ಅರ್ಧ ಯುದ್ಧ ಗೆದ್ದಂತೆಯೇ.