Wednesday, 11th December 2024

ಪರಮಾಣು ಬಾಂಬ್‌ ಸೃಷ್ಟಿಸುವ ನರಕ

ವೈದ್ಯ ವೈವಿಧ್ಯ

ಡಾ ಎಚ್ ಎಸ್ ಮೋಹನ್

drhsmohan@gmail.com

ಶತ್ರುಗಳು ಎಲ್ಲಾ ಒಂದೇ ಬಾರಿ ಸತ್ತರೆ ಯುದ್ಧದ ಮಜಾ ಬರುವುದಿಲ್ಲವಲ್ಲ. ಹಾಗಾಗಿ ಬಹಳಷ್ಟು ಜನರು ವಿವಿಧ ಊನಗಳಿಗೆ ಒಳಗಾಗು ವುದು ಒಳ್ಳೆಯದಲ್ಲವೇ? ಅಣು ಬಾಂಬ್ ಸ್ಫೋಟಗೊಂಡ ರೀತಿ 15 ಕಿಮೀ ಒರಗಿನ ಮನುಷ್ಯರಲ್ಲಿ ದೇಹದ ಚರ್ಮದ ಹೊರ ಭಾಗವೆಲ್ಲಾ ಸಂಪೂರ್ಣವಾಗಿ ಬೆಂಕಿಯಿಂದ ಬೆಂದು ಹೋಗುತ್ತದೆ.

ಈಗ ರಷ್ಯಾ ಮತ್ತು ಉಕ್ರೇನಿನ ಯುದ್ಧದ ಸಂದರ್ಭದಲ್ಲಿ ಪರ ಮಾಣು ಬಾಂಬನ್ನು ತುಂಬಾ ಅಗತ್ಯ ಬಿದ್ದಾಗ ತಾನು ಉಪಯೋಗಿಸ ಬಹುದು ಎಂದು ರಷ್ಯಾ ತಿಳಿಸಿದೆ. ಈ ಅಭಿಪ್ರಾಯ ವ್ಯಕ್ತವಾದ ಕೂಡಲೇ ಅಮೆರಿಕ ಮತ್ತು ಮಿತ್ರ ದೇಶಗಳು ಸಂಭವಿಸಬಹು ದಾದ ಅವಘಡವನ್ನು ಗಂಭೀರವಾಗಿ ಪರಿಗಣಿಸಿದೆ. ಹಾಗೇನಾದರೂ ರಷ್ಯಾ ದು:ಸ್ಸಾಹಸ ಮಾಡಿ ಉಕ್ರೇನಿನ ಮೇಲೆ ಅಣು ಬಾಂಬ್ ದಾಳಿ ಮಾಡಿದರೆ ಬಹಳ ದೊಡ್ಡ ಅನಾಹುತವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಮನುಷ್ಯ ಹಿಂದಿನ ಇತಿಹಾಸ ಮತ್ತು ಘಟನೆಗಳ ಅನುಭವದಿಂದ ಬುದ್ದಿ ಕಲಿಯಲಿಲ್ಲ ಎಂಬುದು ಸ್ಪಷ್ಟ. ಎರಡನೇ ಜಾಗತಿಕ ಮಹಾ ಯುದ್ಧದಲ್ಲಿ ಅಮೆರಿಕ ದು:ಸ್ಸಾಹಸ ಮಾಡಿ ಜಪಾನಿನ ಹಿರೋಷಿಮಾ, ನಾಗಸಾಕಿಗಳ ಮೇಲೆ ಅಣು ಬಾಂಬ್ ಪ್ರಯೋಗಿಸಿ ದಾಗ ಆದ ಭೀಕರ ಅನಾಹುತವನ್ನು ಮತ್ತೊಮ್ಮೆ ನೆನಪಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಹಾಗೆಯೇ ಅದೇ ತರಹದ ಪರಿಣಾಮ ಬೀರುವ ಅಣು ಸ್ಥಾವರಗಳ ಅವಗಡ ಗಳನ್ನೂ ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು. ಅವುಗಳಲ್ಲಿ ಮುಖ್ಯವಾದವು ಗಳು – 1986 ರಲ್ಲಿ ಆಗಿನ ಯುಎಸ್‌ಎಸ್‌ಆರ್ ನ ಚೆರ್ನೋಬೈಲ್ ನಲ್ಲಿ ಆದ ಪರಮಾಣು ವಿದ್ಯುತ್ ಘಟಕ ಸ್ಫೋ.

ಆ ಚರ್ನೋ ಬೈಲ್ ಈಗ ಉಕ್ರೇನಿನಲ್ಲಿದೆ ಎಂಬುದು ವಿಪರ್ಯಾಸ ಮತ್ತು ವಾಸ್ತವ. 25 ವರ್ಷಗಳ ನಂತರ 2011 ರಲ್ಲಿ ಜಪಾನಿನ -ಕುಷಿಮಾ ಡಯಾಷಿಯ ಅಣು ವಿದ್ಯುತ್ ಘಟಕದ ಸ್ಫೋ.

ಜಪಾನಿನ ಹಿರೋಷಿಮಾ, ನಾಗಸಾಕಿಗಳ ಮೇಲೆ ಬಾಂಬ್‌ನ ಪರಿಣಾಮಗಳು: ಜಪಾನ್ ಮತ್ತು ಅಮೆರಿಕದ ಹಲವು ಸಂಸ್ಥೆಗಳು ಕೈ ಗೊಂಡ ಸಮೀಕ್ಷೆಗಳ ಪ್ರಕಾರ ಹಿರೋಷಿಮಾದಲ್ಲಿ 90000 ದಿಂದ 160000 ಮತ್ತು ನಾಗಸಾಕಿಯಲ್ಲಿ 60000 ದಿಂದ 80000 ಜನರು ಮಡಿದಿರಬಹುದು ಎಂದು ಒಂದು ಅಂದಾಜು. ಇವು ಬಾಂಬ್ ಸಿಡಿದು ಕೆಲವೇ ಕ್ಷಣಗಳಲ್ಲಿ ಜರುಗಿದ ಮರಣಗಳು. ಬಾಂಬ್‌ನಲ್ಲಿ ರುವ ತೀವ್ರ ಪ್ರಮಾಣದ ಒತ್ತಡ ಹಾಗೂ ಬಾಂಬ್ ಸಿಡಿತದಿಂದ ಉಂಟಾದ ಹಾನಿಕಾರಕ ವಸ್ತುಗಳ ಅಧಿಕ ಉಷ್ಣಾಂಶ ಇವು ಒಂದು ರೀತಿಯ ಕಾರಣ ವಾದರೆ, ಬಾಂಬ್ ಸಿಡಿತದಿಂದ ಹೊರಬಂದ ತೀವ್ರತಮ ವಿಕಿರಣತೆ ಮತ್ತೊಂದು ಕಾರಣ.

ಈಗ 1986 ರ ಚರ್ನೋಬೈಲ್‌ನ ದುರಂತವನ್ನು ಗಮನಿಸೋಣ. 1986 ರ ಏಪ್ರಿಲ್ 26 ರಂದು ಆಗಿನ ಸೋವಿಯತ್ ಒಕ್ಕೂಟದ ಚರ್ನೋಬೈಲ್ ನಲ್ಲಿ ಪರಮಾಣು ವಿದ್ಯುತ್ ಘಟಕ ಸ್ಪೋಟಗೊಂಡಿತು. ಜಗತ್ತಿನಲ್ಲಿಯೇ ಬಹಳ ದೊಡ್ಡ ಅಣು ದುರಂತ ಎಂದು ಪರಿಗಣಿ ಸಲ್ಪಟ್ಟಿದೆ. ಇದನ್ನು ರಷ್ಯಾದ ಅಧಿಕಾರಿಗಳು ಹೊರ ಜಗತ್ತಿನಿಂದ ಸಾಧ್ಯವಾದಷ್ಟು ಮುಚ್ಚಿಡಲು ಪ್ರಯತ್ನಿಸಿದರು. ಆದರೆ ಅದರ ವಿಕಿರಣ ತೆಯ ಪರಿಣಾಮ ಬಹಳ ದೂರದವರೆಗೆ ಹಬ್ಬತೊಡಗಿದಾಗ ಮುಚ್ಚಿಡುವ ಅವರ ಪ್ರಯತ್ನ ವಿಫಲವಾಯಿತು. ಒಂದು ನಿರ್ದಿಷ್ಟ ಪ್ರಯೋಗದ ನಂತರ ನಾಲ್ಕನೇ ನಂಬರಿನ ರಿಯಾಕ್ಟರ್ ಸ್ಪೋಟಗೊಂಡಿತು.

ಇದರ ಬೆಂಕಿ 9 ದಿನಗಳ ಕಾಲ ಅವಿರತವಾಗಿ ಉರಿಯಿತು. ದಟ್ಟವಾದ ಕರಿಯಾದ ಮೋಡಗಳು ವಾತಾವರಣದಲ್ಲಿ ವ್ಯಾಪಿಸಿ ಯುರೋ
ಪಿನ ಹಲವು ಭಾಗಗಳಲ್ಲಿ ವಿಕಿರಣ ಪಸರಿಸಿತು. ಹಿರೋಷಿಮಾ, ನಾಗಸಾಕಿಯ ಬಾಂಬ್‌ನಲ್ಲಿ ಉಂಟಾದ ಮಟ್ಟಕ್ಕಿಂತ 100 ಪಟ್ಟು ಜಾಸ್ತಿ ವಿಕಿರಣತೆ ಹರಡಿತು ಎನ್ನಲಾಗಿದೆ. ಇದರಲ್ಲಿ 10 ಲಕ್ಷ ಜನರು ಹಾಗೂ 5 ಲಕ್ಷ ಮಕ್ಕಳು ಮಡಿದಿರಬಹುದು ಎಂದು ವಿವಿಧ ತಜ್ಞರ ಅಂದಾಜು.

ಜಪಾನಿನ -ಕುಷಿಮಾ ಡಯಾಷಿಯ ಅಣು ವಿದ್ಯುತ್ ಘಟಕ ಸ್ಪೋಟ: ಜಪಾನಿನಲ್ಲಿ 2011 ರಲ್ಲಿ ಭೂಕಂಪ, ಸುನಾಮಿ ಸಂಭವಿಸಿದಾಗ ದೀರ್ಘಕಾಲದ ವಿದ್ಯುತ್ ನಿಲುಗಡೆಯಿಂದ ಹಲವು ಪರಮಾಣು ರಿಯಾಕ್ಟರುಗಳು ತಾಪಮಾನ ಕಡಿಮೆ ಮಾಡುವ ತಮ್ಮ ಸಾಮರ್ಥ್ಯ ಕಳೆದುಕೊಂಡವು.

ಪರಿಣಾಮ ಎಂದರೆ ವಿಕಿರಣತೆ ವಾತಾವರಣದಲ್ಲಿ ಹರಡಿ ಜನರಲ್ಲಿ ಗಾಬರಿ ಮೂಡಿಸಿದವು. ಬಾಂಬ್ ನಿಂದ ಉಂಟಾಗುವ ಮತ್ತು ಅಣು ಸ್ಥಾವರಗಳ ಸ್ಫೋದಿಂದ ಉಂಟಾಗುವ ವಿಕಿರಣತೆಯ ಪರಿಣಾಮಗಳು ಬಹಳವಾಗಿ ಒಂದೇ ರೀತಿಯವು. ಅಣುಬಾಂಬ್ ಒಂದು ಪ್ರದೇಶದ ಮೇಲೆ ಬಿದ್ದರೆ ಆಗುವ ಪರಿಣಾಮಗಳೇನು? ಬಾಂಬ್ ಸ್ಫೋಗೊಳ್ಳುವ ಸ್ಥಳಕ್ಕೆ ಎಪಿಸೆಂಟರ್ ಎನ್ನುತ್ತಾರೆ. 10 ಮೆಗಾಟನ್ ಅಂದರೆ 10 ಲಕ್ಷ ಟನ್‌ಗಳ ಟ್ರೈನೈಟ್ರೋಟಾನೀಲ್ ಗಳಷ್ಟು ದೊಡ್ಡ ಬಾಂಬ್ ಸ್ಫೋಟಿಸಿದರೆ, ಸ್ಪೋಟದ ತುದಿ 2.5 ಕಿ.ಮೀ ದೂರದಲ್ಲಿರು ತ್ತದೆ.

ಬೆಂಕಿಯ ಉಂಡೆ ಮತ್ತು ಹೊಗೆಯ ವಾತಾವರಣ 3.5 ಕಿ ಮೀ ದೂರದವರೆಗೆ ಹರಡಿರುತ್ತದೆ. ಈ ದೃಶ್ಯ ನೋಡಲು ಮನೋಹರ ವಾಗಿರುತ್ತದೆ ಎಂಬುದು ನಿಜ. ಆದರೆ ಬಾಂಬ್ ಬಿದ್ದ ಪ್ರದೇಶದ 4.5 ಕಿ ಮೀ ವರೆಗೆ ಹೆಚ್ಚಿನ ಎಲ್ಲರೂ ಮರಣ ಹೊಂದುತ್ತಾರೆ. ಒಂದು ದೊಡ್ಡ ನಗರದ ಮೇಲೆ ಬಾಂಬ್ ಬಿದ್ದರೆ 40-50 ಲಕ್ಷ ಜನರು ಸಾವನ್ನಪ್ಪುತ್ತಾರೆ. ಯುದ್ಧ ಎಂದ ಮೇಲೆ ನಾಶ ಇರಲೇಬೇಕಲ್ಲ. ಬಾಂಬ್ ಬಿದ್ದ ಪ್ರದೇಶದಿಂದ 7 ಕಿಮೀ ವರೆಗೆ ಕಟ್ಟಡಗಳು ಎಲ್ಲಾ ಕಾಂಕ್ರೀಟ್ ಕಟ್ಟಡಗಳು, ಮನೆಗಳು ಎಲ್ಲವೂ ಇಸ್ಪೀಟೆಲೆಗಳು ಬೀಳುವ ಹಾಗೆ ಉದುರಿ ನಾಶವಾಗುತ್ತವೆ.

ಅತೀ ಗಟ್ಟಿಯಾದ ಸೇತುವೆಗಳೂ ಸಹಿತ ಉಳಿಯುವ ಹಾಗಿಲ್ಲ, ಬಿದ್ದು ಹಾಳಾಗುತ್ತವೆ. ಸಾಮಾನ್ಯ 14-15 ಕಿಮೀ ವರೆಗೆ ಕಟ್ಟಡಗಳು ವಿವಿಧ ರೀತಿಯ ನಾಶ ಹೊಂದಿ ಅಧಂಬರ್ಧ ಬಿದ್ದು ಇಡೀ ಪ್ರದೇಶವನ್ನು ಸ್ಮಶಾನದ ರೀತಿ ಮಾಡುತ್ತದೆ. ಶತ್ರುಗಳು ಎಲ್ಲಾ ಒಂದೇ ಬಾರಿ ಸತ್ತರೆ ಯುದ್ಧದ ಜಾ ಬರುವುದಿಲ್ಲವಲ್ಲ. ಹಾಗಾಗಿ ಬಹಳಷ್ಟು ಜನರು ವಿವಿಧ ಊನಗಳಿಗೆ ಒಳಗಾಗುವುದು ಒಳ್ಳೆಯದಲ್ಲವೇ? ಅಣು ಬಾಂಬ್ ಸ್ಫೋಗೊಂಡ ರೀತಿ 15 ಕಿಮೀ ಒರಗಿನ ಮನುಷ್ಯರಲ್ಲಿ ದೇಹದ ಚರ್ಮ ದ ಹೊರಭಾಗವೆಲ್ಲಾ ಸಂಪೂರ್ಣವಾಗಿ ಬೆಂಕಿಯಿಂದ ಬೆಂದು ಹೋಗುತ್ತದೆ. 50 ಕಿಮೀ ವ್ಯಾಸದವರೆಗೆ ಸ್ಪೋಟಗೊಂಡ ಸ್ವಲ್ಪ ಹೊತ್ತಿನಲ್ಲಿಯೇ ವಿವಿಧ ರೀತಿಯ ಬೆಂಕಿ ಆವರಿಸುತ್ತದೆ. ರಸ್ತೆ ಬದಿಯ ಕಾರುಗಳು, ವಿವಿಧ ವಾಹನಗಳು ನೋಡುನೋಡುತ್ತಿರುವಂತೆಯೇ ನಾಶವಾಗಿ ಬೂದಿಯಾಗುತ್ತವೆ.

ತೀವ್ರತಮ ವಿಕಿರಣತೆಯ ವ್ಯಾಽ (ಅಕ್ಯೂಟ್ ರೇಡಿಯೇಷನ್ ಸಿಕ್ನೆಸ್): ಪರಮಾಣು ಬಾಂಬ್ ಸ್ಪೋಟದಿಂದ ಉಳಿದವರು 30 ರಿಂದ ೬೦ ಕಿಮೀ ದೂರದವರೆಗೆ ತೀವ್ರತಮ ವಿಕಿರಣತೆಯ ವ್ಯಾಽ ಯಿಂದ ನರಳುತ್ತಾರೆ. ಆ ಮನುಷ್ಯ ಎಷ್ಟು ವಿಕಿರಣತೆಗೆ ಒಳಗಾಗಿದ್ದಾನೆ ಎಂಬು ದರ ಮೇಲೆ ಪರಿಣಾಮ ಎಷ್ಟು ತೀವ್ರವಾಗಿರುತ್ತದೆ ಎಂಬುದು ಅವಲಂಬಿಸುತ್ತದೆ.

ಹೊರಭಾಗದ ಚರ್ಮದಲ್ಲಿ ವಿವಿಧ ರೀತಿಯ ಹುಣ್ಣು ಆಗುತ್ತದೆ. ಕ್ರಮೇಣ ಆ ಹುಣ್ಣುಗಳು ದೊಡ್ಡದಾಗಿ ಇಡೀ ಚರ್ಮವನ್ನು, ಪದರವನ್ನು
ವ್ಯಾಪಿಸಿದರೆ ಅವು ಕಿತ್ತು ಬರುತ್ತವೆ. ಹೆಚ್ಚಿನವರಿಗೆ ಒಂದು ರೀತಿಯ ಉಬ್ಬಳಿಕೆ, ವಾಂತಿ ಆರಂಭವಾಗುತ್ತವೆ. ನಂತರ ಬೇಽ, ತಲೆ ನೋವು, ಜ್ವರ ಆರಂಭವಾಗುತ್ತದೆ. ಇಂತಹವರು ವಿಕಿರಣತೆಯ ವಿವಿಧ ಪರಿಣಾಮಗಳಿಗೆ ಒಳಗಾಗಿ ನಿಧಾನವಾಗಿ ಸಾವನ್ನಪ್ಪುತ್ತಾರೆ.

ಏನೋ ಅಪ್ಪಿತಪ್ಪಿ ಈ ಪರಿಣಾಮಗಳಿಂದ ಅಳಿದುಳಿದರೂ, ವಿಕಿರಣತೆ ಮನುಷ್ಯನನ್ನು ಬಿಡುವುದಿಲ್ಲ. ಬಾಂಬ್ ಹೊರಸೂಸುವ ಗ್ಯಾಮಾ ಕಿರಣಗಳು ದೇಹದ ಬೆಳವಣಿಗೆಯ ಹೆಚ್ಚಿನ ಎಲ್ಲಾ ಜೀವಕೋಶಗಳನ್ನು ಹಾಳುಗೆಡವುತ್ತವೆ. ವಿಕಿರಣತೆ ದೇಹದ ಜೀವಕೋಶಗಳಲ್ಲಿರುವ ಡಿಎನ್‌ಎಗೆ ಹಾನಿ ಉಂಟುಮಾಡುತ್ತದೆ. ಜೀವಕೋಶಗಳು ವೃದ್ಧಿಗೊಂಡು ಸೇರಿಕೊಳ್ಳುವ ಹಂತದಲ್ಲಿ ವಿಕಿರಣತೆಯ ಈ ಹಾನಿ ತೀವ್ರ ವಾಗುವುದರಿಂದ ಪರಿಣಾಮ ಭೀಕರ.

ಹೊಟ್ಟೆಯ ಕರುಳಿನ ಒಳಭಾಗ ಮತ್ತು ಅಸ್ಥಿಮಜ್ಜೆ (ಬೋನ್ ಮ್ಯಾರೋ) – ಈ ಭಾಗದ ಜೀವಕೋಶಗಳು ಬಹಳಷ್ಟು ಹಾನಿಗೊಳ ಗಾಗುತ್ತವೆ. ಅಂತಹ ತೀವ್ರತರವಾದ ವಿಕಿರಣತೆಗೆ ಆತ ಒಳಗಾದಾಗ ಹೆಚ್ಚಿನ ಸಂದರ್ಭಗಳಲ್ಲಿ ಆತ ಮರಣ ಹೊಂದುತ್ತಾನೆ. ಕರುಳಿನ ಭಾಗದ ಹಾನಿಯಿಂದ ದೇಹದ ದ್ರವದ ಸಮತೋಲನ ವ್ಯವಸ್ಥೆ ಅಸ್ತವ್ಯಸ್ತಗೊಳ್ಳುತ್ತದೆ. ಪರಿಣಾಮವಾಗಿ ರಕ್ತದ ಸೋಂಕು ಉಂಟಾಗುತ್ತದೆ.
ಅಸ್ಥಿಮಜ್ಜೆ ಹಾನಿಗೊಳಗಾಗುವುದರಿಂದ, ರಕ್ತ ಹೆಪ್ಪುಗಟ್ಟಿಸುವ ಮತ್ತು ಸೋಂಕಿನ ವಿರುದ್ಧ ಹೋರಾಡುವ ಜೀವಕೋಶಗಳ ಉತ್ಪತ್ತಿ ಕುಂಠಿತಗೊಳ್ಳುತ್ತದೆ.

ಹಾಗೆಯೇ ವಿಕಿರಣಕ್ಕೆ ಒಳಗಾದ ವ್ಯಕ್ತಿಗೆ ಏಪ್ಲಾಸ್ಟಿಕ್ ಅನೀಮಿಯಾ ಎಂಬ ತೀವ್ರ ತರದ ವ್ಯಾಽ ಆರಂಭ ವಾಗುತ್ತದೆ. ಆತನಿಗೆ 2-3 ವಾರಗಳಲ್ಲಿ ಸಾವು ಬರಬಹುದು. ಕೆಲವೊಮ್ಮೆ ಏಪ್ಲಾಸ್ಟಿಕ್ ಅನೀಮಿಯಾವು ಲ್ಯುಕಿಮಿಯಾ ಕ್ಕೆ (ರಕ್ತದ ಕ್ಯಾನ್ಸರ್) ತಿರುಗುವ ಸಂಭವವೂ ಇದೆ. ಪರಿಣಾಮ ತುಂಬಾ ಜಾಸ್ತಿ ಇದ್ದರೆ ವಿಕಿರಣತೆ ಆತನನ್ನು ಷಂಡನನ್ನಾಗಿ ಮಾಡುತ್ತದೆ. ಇದರ ರಿಣಾಮ ಮೆದುಳು ಮತ್ತು ಬೆನ್ನುಹುರಿಗಳ ಮೇಲೆ ಕಾಣಿಸಿಕೊಂಡು ಹಲವಾರು ಮಾಂಸಖಂಡಗಳನ್ನು ನಿಷ್ಕ್ರಿಯಗೊಳಿಸುತ್ತದೆ. ವಿಕಿರಣತೆ ಹೃದಯದ ಮೇಲೂ ಪರಿಣಾಮ ಬೀರಿ ವ್ಯಕ್ತಿಯ ಮರಣ ಸಂಭವಿಸಬಹುದು.

ದೂರದ ಪರಿಮಾಣಗಳು: ಬಾಂಬ್ ಸ್ಪೋಟದ ಸ್ಥಳದಿಂದ, ಇನ್ನೂ ದೂರದವರೆಗೂ ವಿಕಿರಣತೆ ತನ್ನ ಪ್ರಭಾವ ತೋರಿಸುತ್ತದೆ. ಅದು ಗಾಳಿ ಮತ್ತು ನೀರಿನಿಂದ ಪ್ರಸಾರಗೊಳ್ಳುತ್ತದೆ. ಸಣ್ಣ ಪ್ರಮಾಣದ ವಿಕಿರಣತೆ ಮನುಷ್ಯನನ್ನು ನಿಧಾನವಾಗಿ ಕೊಲ್ಲಬಲ್ಲದು. ಇಂತಹವರಲ್ಲಿ ಹಲವು ರೀತಿಯ ಕ್ಯಾನ್ಸರ್ ಅದರಲ್ಲೂ ರಕ್ತದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ಯಾವುದೇ ಕಾರಣದಿಂದ ಆದ ಗಾಯಗಳು ಬೇಗ ವಾಸಿಯಾಗುವುದಿಲ್ಲ. ಪರಿಣಾಮ ಎಂದರೆ ವಿವಿಧ ರೀತಿಯ ಸೋಂಕು ರೋಗಕ್ಕೆ ಆತ ತುತ್ತಾಗುತ್ತಾನೆ.

ಆರೋಗ್ಯವಂತ ಮನುಷ್ಯನಿಗೆ ಏನೂ ಪರಿಣಾಮ ಮಾಡದ ಸಣ್ಣ ಸೋಂಕು, ವಿಕಿರಣದ ಪ್ರಭಾವಕ್ಕೆ ಒಳಗಾದ ಈತನ ಜೀವಕ್ಕೇ ಮಾರಕ ವಾಗಬಲ್ಲದು. ಇನ್ನೂ ಕಡಿಮೆ ಪ್ರಮಾಣದ ವಿಕಿರಣತೆ ವಂಶವಾಹಿ ಅಥವಾ ಜೀನ್‌ಗಳ ಸ್ತರದಲ್ಲಿ ಪರಿಣಾಮ ಬೀರುತ್ತದೆ. ಪರಿಣಾಮ ಎಂದರೆ ಮುಂದಿನ ಪೀಳಿಗೆಯ ಪ್ರಜೆಗಳು ವಿವಿಧ ಊನಗಳಿಂದ ಹುಟ್ಟುತ್ತಾರೆ.

ಕೆಲವೊಮ್ಮೆ ಮುಂದಿನ ಪೀಳಿಗೆಯವರಲ್ಲಿ ಹುಟ್ಟಿದಾಗ ಏನೂ ಕಾಣಿಸಿಕೊ ಳ್ಳದಿದ್ದರೂ, ಕೆಲವು ವರ್ಷಗಳ ನಂತರ ವಿಕಿರಣತೆಯ ಪರಿಣಾಮ ಕಾಣಿಸಬಹುದು. ಇದು ಮುಂದೆ ಎಷ್ಟೋ ಪೀಳಿಗೆಯವರೆಗೆ ತನ್ನ ಕಬಂಧ ಬಾಹುವನ್ನು ಚಾಚಿ ಗಂಭೀರ ಪರಿಣಾಮಗಳನ್ನು ಉಂಟುಮಾಡಬಲ್ಲದು.

ವಿಕಿರಣತೆಯಿಂದ ಉಂಟಾಗುವ ಕಾಯಿಲೆ ಅಥವಾ ಪರಿಣಾಮಗಳ ಜೊತೆಗೆ ಇನ್ನೂ ತೀವ್ರವಾದದ್ದೆಂದರೆ ಆ ಪ್ರದೇಶದ ಸಂಸ್ಕೃತಿಯ ಮೇಲೆ ಘೋರ ರೀತಿಯ ದುಷ್ಪರಿಣಾಮ ಉಂಟಾಗುತ್ತದೆ. ಒಂದು ಭೀಕರ ಅಪಘಾತಕ್ಕಿಂತ ತೀವ್ರವಾದ ಈ ಆಘಾತದಿಂದ ತಮ್ಮ ಹತ್ತಿರದ ಸಂಬಂಽಗಳು, ಅಕ್ಕಪಕ್ಕದವರು ನಾಶವಾಗುವುದನ್ನು ನೋಡುತ್ತಾ ಉಳಿದವರು ತೀವ್ರ ರೀತಿಯ ಏಕಾಂಗಿತನವನ್ನು
ಅನುಭವಿಸುವುದು ತುಂಬಾ ಕ್ರೂರತನ. ಈ ಅವಘಡದಿಂದ ಅಳಿದುಳಿದವರು ದೇಹದ ವಿವಿಧ ಅಂಗಗಳ ಊನವನ್ನು ಅನುಭವಿಸುತ್ತ ಬದುಕುವುದು ಇನ್ನೂ ಹೀನಾಯ. ಈ ಎಲ್ಲಾ ಅನಾಹುತಗಳನ್ನು ನೋಡುತ್ತಿರುವ ಕಣ್ಣು ಇಂಗಿ ಹೋಗುತ್ತದೆ.

ನೀರು ಸುರಿಸಲು ಕಣ್ಣೀರೇ ಇರುವುದಿಲ್ಲ. ಹೆಚ್ಚಿನ ಎಲ್ಲಾ ಕುಟುಂಬಗಳು ವಿನಾಶದ ಕತೆಯನ್ನು ಹೇಳುತ್ತಿರುತ್ತವೆ. ಅಳಿದುಳಿದವರು ತಮ್ಮ ಸಾವಿನ ಸರದಿಯ ನಿರೀಕ್ಷೆಯಲ್ಲಿರುತ್ತಾರೆ. ಎಲ್ಲಾ ಕಡೆ ವಿವಿಧ ರೀತಿಯ ಮರಣಾಂತಿಕ ಕಾಯಿಲೆಗಳಿರಲು, ಸುತ್ತಲಿನ ಮರಗಳು ಚಿಗುರುವು ದಿಲ್ಲ, ಹಕ್ಕಿಗಳು ಹಾಡುವುದಿಲ್ಲ, ಮಕ್ಕಳು ಆಡುವುದಿಲ್ಲ. ಇದು ಯಾವುದೇ ದೇಶದ ಪ್ರಜೆಗೆ, ಕುಟುಂಬಕ್ಕೆ, ಜನಾಂಗಕ್ಕೆ ಅಥವಾ ದೇಶಕ್ಕೆ ಆಗುವ ತೀವ್ರ ರೀತಿಯ ಹಾನಿ. ಅಽಕಾರದಲ್ಲಿರುವ ಕೆಲವರ ಮಹತ್ವಾಕಾಂಕ್ಷೆ ಅಥವಾ ತಪ್ಪು ಅಲ್ಲಿನ ಪ್ರಜೆಗಳು ಈ ರೀತಿಯ ಹಾನಿ ಅನುಭವಿಸುವುದು ಸೂಕ್ತವೇ. ಈಗ ಹೇಳಿ ಅಣು ಬಾಂಬ್ ಬೇಕೇ?