ಅವಲೋಕನ
ಎಲ್.ಪಿ.ಕುಲಕರ್ಣಿ
ಭೂಮಿಯ ಮೇಲೆ ವಾತಾವರಣವಿದೆ. ಭೂ ಗುರುತ್ವಕ್ಕೆ ತಕ್ಕನಾಗಿ ನಾವಿಲ್ಲಿ ಹೆಲಿಕಾಪ್ಟರನ್ನು ಹಾರಿಸಬಹುದು. ಆದರೆ, ವಾತಾ ವರಣವೇ ಇಲ್ಲದ ಅನ್ಯ ಗ್ರಹ. ಇಲ್ಲವೇ ಆಕಾಶ ಕಾಯವೊಂದರಲ್ಲಿ ಹೆಲಿಕಾಪ್ಟರ್ ಅನ್ನು ಹಾರಿಸುವುದು ಅಷ್ಟು ಸುಲಭದ ಮಾತಲ್ಲ. ಇದೇ ಏಪ್ರಿಲ್ 19, ಸೋಮವಾರದಂದು ಅಮೆರಿಕದ ನಾಸಾ ವಿeನಿಗಳು ಒಂದು ಮಹಾನ್ ಸಾಧನೆಯನ್ನು ಮಾಡಿ ದರು.
ಅದೇ, ಮಂಗಳ ಗ್ರಹದ ಮೇಲೆ ಮೊಟ್ಟಮೊದಲ ಹೆಲಿಕಾಪ್ಟರ್ ಹಾರಿಸಿದ್ದು! ಮುಂಗಳದಲ್ಲಿರುವ ಜೀವ ಜಗತ್ತಿನ ಹುಡುಕಾಟದಲ್ಲಿ ಮುಂಚೂಣಿಯಲ್ಲಿರುವ ನಾಸಾ, ಕಳೆದ ವರ್ಷ ( 202 ) ಮತ್ತೊಂದು ಮಹಾತ್ವಾಕಾಂಕ್ಷೆಯ ಪ್ರಯತ್ನ ನಡೆಸಿತ್ತು. ಫ್ಲೋರಿಡಾದ ’ಕೇಪ್ ಕ್ಯಾನವರೆಲ್ ಸ್ಟೇಷನ್’ನಿಂದ ಜುಲೈ ತಿಂಗಳ 30 ರಂದು ’ಪರ್ಸೆವೆರೆನ್ಸ್’ (Perseverance) ರೋವರ್ ಹೊತ್ತ ರಾಕೆಟ್
ಉಡಾವಣೆಯಾಗಿತ್ತು.
ಈಗ ಆ ಪರ್ಸೆವೆರೆನ್ಸ್ ರೋವರ್, ಇದೇ 2021 ಫೆಬ್ರವರಿ 18 ರಂದು ಮಂಗಳನ ಅಂಗಳ ತಲುಪಿದೆ. 203 ದಿನಗಳ ಒಟ್ಟು ಪ್ರಯಾಣ ದಲ್ಲಿ ನೌಕೆ 47.20 ಕೋಟಿ ಕಿ.ಮೀ ದೂರವನ್ನು ಗಂಟೆಗೆ ಸುಮಾರು 97000 ಕಿ.ಮೀ ವೇಗದಲ್ಲಿ ಚಲಿಸಿ ಮಂಗಳನ ವಾತಾವರಣ ಭೇದಿಸಿ ಮಂಗಳನ ಅಂಗಳದಲ್ಲಿರುವ ’ ಜೆಝೊರೋ ’ ಎಂಬ ಮಹಾ ಕುಳಿಯಲ್ಲಿ ಇಳಿದುಬಿಟ್ಟಿದೆ. ಈ ಮೇಲಿನ ವಿಷಯ ಎಲ್ಲರಿಗೂ ಗೊತ್ತಿರುವುದೇ ಆಗಿದೆ. ಆದರೆ ಈಗ ಆಗಿದ್ದೇನೆಂದರೆ- ಪರ್ಸಿವರೆ ರೋವರ್ ತಲೆಯಲ್ಲಿ ಅಡಗಿಸಲಾಗಿರುವ 1.8 ಕೆ.ಜಿ ತೂಕ 0.49 ಮೀಟರ್ ಎತ್ತರವಿರುವ ಇಂಜ್ಯುನಿಟಿ ಎಂಬ ಹೆಸರಿನ ಮಾರ್ಸ್ ಹೆಲಿಕ್ಯಾಪ್ಟರ್, ತಾನಿದ್ದ ಕಡೆಯಿಂದ ಎತ್ತರಕ್ಕೆ ಹಾರಿ ಬೇರೆ ಸ್ಥಳದಲ್ಲಿ ಇಳಿಯುವ ಸಾಹಸವನ್ನು ಮಾಡಿದೆ.
ಈ ಪುಟ್ಟ ಹೆಲಿಕಾಪ್ಟರ್‌ನ ಹಾರಾಟವನ್ನು ನಾಸಾ 21 ನೇ ಶತಮಾನದ ರೈಟ್ ಸೋದರರ ಕ್ಷಣವೆಂದೇ ಹಾಡಿಹೊಗಳಿದೆ. ಈ ಹೆಲಿಕಾಪ್ಟರ್‌ನ ಹಾರಾಟದ ಹಿಂದೆ ಭಾರತೀಯ ವಿಜ್ಞಾನಿಯ ತಲೆ ಕೆಲಸ ಮಾಡಿದೆ ಎಂಬುದೇ ಭಾರತೀಯರಾದ ನಮಗೆ ಹೆಮ್ಮೆಯ ಸಂಗತಿ. ಅವರೇ, ನಾಸಾದಲ್ಲಿ ಎಲೆಯಮರಿಯ ಕಾಯಿಯಂತೆ 20 ವರ್ಷದಿಂದ ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿರುವ ಭಾರತೀಯ ಮೂಲದ ಎಂಜಿನಿಯರ್ ಡಾ.ಜೆ( ಬಾಬ್ ) ಬಲರಾಮ.
1960 ರಲ್ಲಿ ದಕ್ಷಿಣ ಭಾರತದ ಬೆಂಗಳೂರು ಮೂಲದ ಆ ಹುಡುಗನಿಗೆ ರಾಕೆಟ್‌ಗಳು ಹಾಗೂ ವಿಶ್ವವಿಜ್ಞಾನದ ಬಗ್ಗೆ ತಿಳಿದು ಕೊಳ್ಳುವುದೆಂದರೆ ಎಲ್ಲಿಲ್ಲದ ಆಸಕ್ತಿ. ಹೀಗಾಗಿ ಆ ವಿಷಯಗಳನ್ನು ತಿಳಿದುಕೊಳ್ಳಲು ತನ್ನ ಚಿಕ್ಕಪ್ಪನನ್ನು ಕೇಳಿದ. ಅವರು ಅಂತರಿಕ್ಷ ಸಾಧನೆಗಳ ಬಗ್ಗೆ ತಿಳಿದುಕೊಳ್ಳಲು ಅಮೆರಿಕದ ನಾಸಾ ಸಂಸ್ಥೆಯನ್ನೇ ವಿಚಾರಿಸಬೇಕು ಅಂದರು. ನಾಸಾದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಲು ಅವರ ಚಿಕ್ಕಪ್ಪ ಕೂಡಲೇ ಯು.ಎಸ್ ಕಾನ್ಸೊಲೇಟರ್ ಅವರಿಗೆ ಒಂದು ಪತ್ರ ಬರೆಯು ರೆ.
ಪತ್ರದಲ್ಲಿ ತನ್ನ ಮಗನ ಆಸಕ್ತಿಯ ಬಗ್ಗೆಯೂ ಬರೆದಿರುತ್ತಾರೆ. ಇವರ ಪತ್ರಕ್ಕೆ ನಾಸಾ ಮಾರುತ್ತರದೊಂದಿಗೆ ಸ್ಪೇಸ್ ತಂತ್ರಜ್ಞಾನಕ್ಕೆ
ಸಂಬಂಧಿಸಿದ ಚೆಂದವಾದ ಚಿತ್ರಗಳನ್ನೊಳಗೊಂಡ ಒಂದು ಬುಕ್‌ಲೆಟ್ ಅನ್ನೂ ಕಳುಹಿಸಿಕೊಡುತ್ತದೆ. ಆ ಬುಕ್‌ಲೆಟ್ ಅನ್ನು ತದೇಕ ಚಿತ್ತದಿಂದ ನೋಡಿದ ಆ ಹುಡುಗ ’ ಮುಂದೆ ನಾನೇನಾದರೂ ಆಗುವುದಿದ್ದರೆ, ಈ ನಾಸಾದಲ್ಲಿ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸಬೇಕು ’ ಎಂದು ನಿರ್ಧರಿಸುತ್ತಾನೆ.
ಆ ಹುಡುಗನೇ ಡಾ.ಜೆ( ಬಾಬ್ ) ಬಲರಾಮ. 12 ನೇ ಏಪ್ರಿಲ್ 1961 ರಲ್ಲಿ ಪ್ರಥಮ ವ್ಯೂಮಯಾನ ಮಾಡಿಬಂದ ಯೂರಿ ಗಗಾರಿನ್, ನಂತರ 16 ಜುಲೈ 1969 ರ ಮುಂಜಾನೆಯ 9:32 ಗಂ.ಗೆ ಸರಿಯಾಗಿ 111 ಮೀಟರ್ ಉದ್ದದ ಅಂತರಿಕ್ಷ ನೌಕೆ ಅಪೋಲೋ-12 ರಲ್ಲಿ ಗಗನಯಾನಿಗಳಾದ ನೀಲ್ ಆರ್ಮ್ ಸ್ಟ್ರಾಂಗ್ ಮತ್ತು ಆಲ್ಡ್ರೀನ್ ಇಬ್ಬರೂ ಸುರಕ್ಷಿತವಾಗಿ ಚಂದ್ರನ ಮೇಲೆ ಇಳಿದು ಮಹಾನ್ ಸಾಧನೆ ಮಾಡಿದ ಈ ಎಲ್ಲ ಘಟನೆಗಳನ್ನು ರೇಡಿಯೋದಲ್ಲಿ ಆಸಕ್ತಿಯಿಂದ ಕೇಳಿ ತಿಳಿದುಕೊಂಡ ತರುಣ, ಬಲರಾಮನ ಮನದಲ್ಲಿ ನೂರಾರು ಕನಸುಗಳು ಗರಿಗೆದರಿದವು.
ಭಾರತದ ಪ್ರಸಿದ್ಧ ತತ್ವಶಾಸ್ತ್ರಜ್ಞ ಜಿಡ್ಡು ಕೃಷ್ಣಮೂರ್ತಿಯವರು ಸ್ಥಾಪಿಸಿದ ’ ಋಷಿ ವ್ಯಾಲಿ ಸ್ಕೂಲ್ ’ ನಲ್ಲಿ ತಮ್ಮ ಆರಂಭಿಕ ಶಿಕ್ಷಣ ಪಡೆದ ಬಲರಾಮ್ ಅವರು ದೇಶದ ಪ್ರತಿಷ್ಠಿತ ಐಐಟಿ ಮದ್ರಾಸ್‌ನ ಹಳೆಯ ವಿದ್ಯಾರ್ಥಿಯೂ ಹೌದು. 1975-80ನೇ ಸಾಲಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಬಿಟೆಕ್ ಪದವಿ ಪಡೆದಿದ್ದಾರೆ. ನಂತರ, ರೆನ್ಸಿಲರ್ ಪಾಲಿಟೆಕ್ನಿಕ್ ಇನ್ಸ್‌ಟಿ ಟ್ಯೂಟ್ ನಲ್ಲಿ ಕಂಪ್ಯೂಟರ್ ಮತ್ತು ಸಿಸ್ಟಂ ಎಂಜಿನಿಯರಿಂಗ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಇದಾದ ಬಳಿಕ ಅದೇ ವಿಷಯದಲ್ಲಿ ಪಿ.ಎಚ್.ಡಿ ಪದವಿಯನ್ನೂ ಸಹ ಪಡೆದರು. ಈ ರೀತಿ ಉನ್ನತ ವ್ಯಾಸಂಗ ಮಾಡಿದ, ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಯನ್ನು ’ ನಾಸಾ ’ ಬಿಟ್ಟೀತೆ? ಇಲ್ಲವೇ ಇಲ್ಲ, ಬಲರಾಮ್ ಅವರು ನಾಸಾಕ್ಕೆ ಬಂದರೆ ನಮಗೆ
ಬಲರಾಮನಷ್ಟೇ ಬಲ ಬರುತ್ತದೆ ಎಂದು ಗೊತ್ತಾಗಿ ಅವರನ್ನು ಅಲ್ಲಿಯೇ ಎಂಜಿನಿಯರ್‌ನ್ನಾಗಿ ನೇಮಿಸಿಕೊಂಡಿತು. ಸದ್ಯ, ಬಲರಾಮ್ ಅವರು ನಾಸಾದ ಜೆಟ್ ಪ್ರೊಪಲ್ಶನ್ ಲ್ಯಾಬೊರೇಟರಿಯಲ್ಲಿ (ಜೆಪಿಎಲ) ಮಾರ್ಸ್ ಹೆಲಿಕಾಪ್ಟರ್ ಸ್ಕೌಟ್ ಪ್ರಾಜೆಕ್ಟ ನ
ಮುಖ್ಯ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಅವರು ಮಂಗಳ ಗ್ರಹದ ಮೇಲೆ ನಿಖರವಾಗಿ ಲ್ಯಾಂಡಿಂಗ್
ನಡೆಸುವ ವಿಧಾನಗಳ ಕುರಿತು ಸಂಶೋಧನೆ ನಡೆಸಿದ್ದರು.
ಮಂಗಳನ ಮೇಲೆ ಪ್ರವೇಶ, ಇಳಿಯುವಿಕೆ ( Planetary Entry, Descent and Landing & EDL ) ಸುಧಾರಿತ ತಂತ್ರಜ್ಞಾನಗಳ ಕುರಿತು ಉನ್ನತ ಮಟ್ಟದ ಅಧ್ಯಯನ ಕೈಗೊಂಡಿದ್ದಾರೆ. ದಟ್ಟ ಕಾರ್ಬನ್ ಡೈ ಆಕ್ಸೈಡ್ ವಾತಾವರಣ ಹೊಂದಿ ರುವ ಮಂಗಳ ಗ್ರಹದಲ್ಲಿ ಗಾಳಿಯ ಸಂಚಾರ ಭಾರಿ ಕಡಿಮೆ. ಕ್ಯೂಬಿಕ್ ಮೀಟರ್ ಗಾಳಿಯನ್ನು ಭೂಮಿಯ ಮೇಲೆ 1 ಕಿಲೋಗೆ ಹೋಲಿಸಿದರೆ, ಅಲ್ಲಿ ಈ ಪ್ರಮಾಣದ ಗಾಳಿ ಕೆಲವೇ ಗ್ರಾಂಗಳಲ್ಲಿ ತೂಗುತ್ತದೆ.
ಹೀಗಾಗಿ, 30 ಸೆಕೆಂಡಿನ ಹೆಲಿಕಾಪ್ಟರ್ ಹಾರಾಟ ಭಾರೀ ಸಾಹಸಮಯ ಕಾರ್ಯವಾಗಿತ್ತು. ನ್ಯೂಟನ್ ನಿಯಮ ಆಧರಿಸಿ ಹೇಳುವುದಾದರೆ, 10 ಅಡಿಯ ಇಂಗೆನ್ಯೂಟಿಯ ಹಾರಾಟ, ಭೂಮಿ ಮೇಲೆ 1 ಲಕ್ಷ ಅಡಿ ಎತ್ತರದ ಹಾರಾಟಕ್ಕೆ ಸಮವಾಗಿತ್ತು’ ಎನ್ನುತ್ತಾರೆ, ಡಾ.ಬಾಬ್ ಬಲರಾಮ!
ಮಾರ್ಸ್ ಮಿಷನ್‌ನ ನೌಕಾ ನಿಯಂತ್ರಣ ಹಾಗೂ ಪಥಮಾರ್ಗದರ್ಶನ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ, ಅಮೆರಿಕ ದಲ್ಲಿ ನೆಲೆಸಿರುವ ಕನ್ನಡಿಗ ದಂಪತಿ ಜ್ಯೋತಿ-ಮೋಹನ್ ಅವರ ಪುತ್ರಿ ಡಾ.ಸ್ವಾತಿ ಮೋಹನ್‌ರನ್ನು ಈ ಸಂದರ್ಭದಲ್ಲಿ ನೆನೆಯಲೇ ಬೇಕು. ಅಂತೆಯೇ, ನಾಸಾದಲ್ಲಿ ಜಿಯೊಲಾಜಿ ಆಗಿ ಕಾರ್ಯನಿರ್ವಹಿಸುತ್ತಿರುವ, ಇನ್ನೋರ್ವ ಭಾರತ ಮೂಲದ ವಿಜ್ಞಾನಿ 55 ವರ್ಷದ ಡಾ.ಸಂಜೀವ ಗುಪ್ತಾ.
ಕ್ಯಾಲಿಫೋರ್ನಿಯಾದಲ್ಲಿನ ನಾಸಾ ಜೆಟ್ ಪ್ರಪೊಲ್ಯೂಶನ್ ಲ್ಯಾಬೊರೇಟರಿಗೆ ತೆರಳಬೇಕಿತ್ತು. ಆದರೆ ಅವರಿಗೆ ಅಲ್ಲಿಗೆ ಹೋಗಲಾಗ ಲಿಲ್ಲ. ಕಾರಣ ಅವರೀಗ ಲಂಡನ್‌ನಲ್ಲಿ ಕರೋನಾ ಲಾಕ್ ಡೌನ್ ನಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲೂ ಡಾ.ಸಂಜೀವ್ ಗುಪ್ತಾ ತಮ್ಮ ಮನೆಯ ಇದ್ದುಕೊಂಡು ಲ್ಯಾಪ್ ಟಾಪ್ ಮೂಲಕ ಮಾರ್ಸ್ ಮಿಷನ್‌ನಲ್ಲಿ ನಾಸಾ ತಮಗೆ ವಹಿಸಿಕೊಟ್ಟ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.
ಹೀಗೆ ಜಗತ್ತಿನಲ್ಲಿಂದು ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಏನಾದರೂ ಹೊಸ ಆವಿಷ್ಕಾರಗಳು ನಡೆಯುತ್ತಿವೆ ಎಂದರೆ, ಅದರ ಹಿಂದೆ ಒಬ್ಬರಲ್ಲ ಒಬ್ಬ ಭಾರತೀಯ ವಿಜ್ಞಾನಿಯ ಅವಿರತ ಪರಿಶ್ರಮ ಗ್ಯಾರಂಟಿಯಾಗಿ ಇದ್ದೇ ಇರುತ್ತದೆಂಬುದು ಸರ್ವಕಾಲಿಕ ಸತ್ಯ.