Friday, 13th December 2024

ಬಾಂಗ್ಲಾದೇಶಕ್ಕಾಗಿ ಹೋರಾಡುತ್ತಿದ್ದ ಅವರನ್ನು ಓಲ್ಡ್ ಬಿಚ್ ಅಂದಿದ್ದರು !

ಬುಲೆಟ್ ಪ್ರೂಫ್

ವಿನಯ್ ಖಾನ್

vinaykhan078@gmail.com

ಆದು ೧೯೭೦, ‘ಗರೀಭಿ ಹಟಾವೋ’ ಘೋಷಣೆ ಮತ್ತು ತನ್ನದೇ ಸ್ವಂತ ಜನಪ್ರಿಯತೆಯಿಂದ ಮತ್ತೊಮ್ಮೆ ದೇಶದ  ಪ್ರಧಾನಿಯಾಗಿ ಆಯ್ಕೆಯಾಗಿದ್ದರು. ಇಡೀ
ದೇಶದಲ್ಲಿ ಮತ್ತೊಮ್ಮೆ ತನ್ನ ಸಾಮರ್ಥ್ಯವನ್ನೂ ತೋರಿಸಿದ್ದರು ಇಂದಿರಾ ಗಾಂಧಿ!. ಅವರಿಗೆ ದೇಶವಾಸಿಗರು ಮನಃ ತುಂಬಿ ಹಾರೈಸಿದ್ದರು.

ಅವರು ಎರಡನೇ ಬಾರಿ ದೇಶದ ಪ್ರಧಾನಿಯಾದ ಸಂತೋಷವನ್ನು, ವಿಜಯವಿನ್ನೂ ಹಸಿಯಾಗಿದ್ದಾಗಲೇ. ಅವರ ಹೆಸರು ದೇಶದೆಲ್ಲೆಡೆ ಮಿನುಗುತ್ತಿದ್ದಾಗಲೇ, ಇಡೀ ದೇಶ, ಅಽಕಾರಿ ವರ್ಗ, ರಾಜಕಾರಣಿಗಳಿಗೆಲ್ಲ ಹೊಸ ತಲೆನೋವು ಶುರುವಾಯಿತು. ಆ ತಲೆನೋವು ನಮ್ಮ ದೇಶದ್ದಾಗದಿದ್ದರೂ, ನಮ್ಮ ದೇಶದ ಮೇಲೆ ಅತೀ ಹೆಚ್ಚಿನ ಪ್ರಭಾವ ಬೀರುವುದೇ ಆಗಿತ್ತು, ಅದರಿಂದಂತೂ ತಪ್ಪಿಸಿಕೊಳ್ಳಲು ಸಾಧ್ಯವೂ ಇರಲಿಲ್ಲ. ಆ ತಲೆನೋವು, ಇಂದೂ ಭಾರತಕ್ಕೆ ತಲೆ ನೋವಾಗಿರುವ ಪಾಕಿಸ್ತಾನದ್ದೇ! ಅದು; ಅವಿಭಜಿತ ಪಾಕಿಸ್ತಾನದ ಆರ್ಮಿ, ಪೂರ್ವ ಪಾಕಿಸ್ತಾನ (ಈಗಿನ ಬಾಂಗ್ಲಾದೇಶ)ದ ಮೇಲೆ ನಿರಂತರ ದಾಳಿಯಿಡಲು ಶುರು ಮಾಡಿತು.

ಅವರ ದೇಶದಲ್ಲಿ ಅಽಕಾರಕ್ಕಾಗಿ ನಡೆಯುತ್ತಿದ್ದ ಜಗಳ, ನಮ್ಮಲ್ಲಿ ಹೊಸ ಪ್ರಕ್ಷುಬ್ಧ ವಾತಾವರಣವನ್ನೂ ತಂದೊಡ್ಡಿತು. ಅದು; ಬಾಂಗ್ಲಾದೇಶದಿಂದ ಎಗ್ಗಿಲ್ಲದೇ
ದೇಶದ ಒಳಗೆ ಬರುತ್ತಿದ್ದ ಜನ. ನಮ್ಮಲ್ಲೇ ಬಡತನ, ಹಸಿವು, ಇನ್ನೂ ಹೆಚ್ಚಿನ ದಟ್ಟ ದಾರಿದ್ರ್ಯಗಳು ತಾಂಡವವಾಡುತ್ತಿದ್ದಾಗ, ಇನ್ನು ಅಲ್ಲಿಂದ ವಲಸೆ ಬರುತ್ತಿರು ವವರನ್ನು ಸಾಕುವವರು ಯಾರು? ಎಂಬ ದೊಡ್ಡ ಪ್ರಶ್ನೆ ಉಳಿಯಿತು. ನಮ್ಮ ದೇಶದವರ ತಟ್ಟೆಗೆ ಸರಿಯಾದ ಊಟ ಬೀಳದ ಸಮಯದಲ್ಲಿ ಮತ್ತಷ್ಟು ಜನರನ್ನು ಸೇರಿಸಿಕೊಂಡರೆ, ಇಲ್ಲಿನವರ ಗತಿಯೇನು ಎಂಬ ಮಾತುಗಳು ಶುರುವಾದವು. ಆ ದಿನ ಸಂಜೆ ವಾರ್ತೆಯನ್ನು ನೋಡಿ ಇಂದಿರಾರ ಮಗ ಸಂಜಯ್ ಗಾಂಧಿ, ಅವರ ತಾಯಿಗೆ ಕೇಳಿದ್ದು: ‘ನೀವಿನ್ನು ಯುದ್ಧ ಘೋಷಿಸುತ್ತೀರಾ?’ ಅದಕ್ಕೆ ಇಂದಿರಾ ಹೇಳಿದ್ದು: ‘ಈ ಸಮಸ್ಯೆಯನ್ನು ಸರಿದೂಗಿಸಲು ಬೇರೆ ಯಾವುದೂ ದಾರಿ ಸಿಗಲಿಲ್ಲವೆಂದರೆ, ನನ್ನ ಹತ್ತಿರ ಬೇರೆ ಆಯ್ಕೆಯಿಲ್ಲ. ಯಾವುದಕ್ಕೂ ನಾಳೆ ಬೆಳಿಗ್ಗೆ ಜನರಲ್ ಮಾಣಿಕ್‌ಶಾ ಜತೆ ಮಾತುಕತೆ ನಡೆಸಲಿದ್ದೇನೆ’.

ಆಗಿನ ಪಾಕಿಸ್ತಾನದ ಅಧ್ಯಕ್ಷ ಯಹ್ಯಾ ಖಾನ್, ತನ್ನದೇ ಜನರನ್ನು ಒದ್ದೊಡಿಸಲು ಅವನ ಹಿಂದೆ ನಿಂತಿದ್ದ ಬಲು ದೊಡ್ಡ ಶಕ್ತಿಯೆಂದರೆ, ಅಮೆರಿಕ ಮತ್ತು ಚೀನಾ. ಆಗಿನ್ನೂ ಭಾರತದ ಸೈನ್ಯ ಅಷ್ಟೊಂದು ಬಲಿಷ್ಠವೂ ಆಗಿರಲಿಲ್ಲ. ಅಮೆರಿಕ ಮತ್ತು ಚೀನಾವನ್ನು ಎದುರಿಸುವ ಚಾಕಚಕ್ಯತೆಯೂ ಭಾರತದಲ್ಲಿ ಇರಲಿಲ್ಲ. ಆದರೂ ಹೇಗಾದರೂ ಮಾಡಿ, ಆ ಯುದ್ಧವನ್ನು ತಡೆಯಲೇಬೇಕಿತ್ತು. ಮರುದಿನ ಬೆಳಗ್ಗೆ ಬಂದ ಮಣಿಕ್‌ಶಾಗೆ ಇಂದಿರಾಗಾಂಧಿ ಹೇಳಿದ್ದು: ‘ಗಡಿ ರಾಜ್ಯಗಳಿಂದ ಟೆಲಿಗ್ರಾಮ್‌ ಗಳ ಸುರಿಮಳೆಯಾಗುತ್ತಿದೆ.

ಅವರೆಲ್ಲರೂ ಹೇಳುತ್ತಿರುವುದಿಷ್ಟೇ, ಅಲ್ಲಿನ ನಿರಾಶ್ರಿತರು ಬರುತ್ತಲೇ ಇದ್ದಾರೆ. ಸ್ಯಾಮ್, ಆ ಜನರ ಪ್ರವಾಹವನ್ನು ನಾವು ಹೇಗಾದರೂ ಮಾಡಿ ನಿಲ್ಲಿಸಲೇ
ಬೇಕು. ನಮ್ಮ ಹತ್ತಿರ ಇಷ್ಟೊಂದು ಜನಕ್ಕಾಗುವಷ್ಟು ಸಂಪನ್ಮೂಲವೂ ಇಲ್ಲ. ಏನಾದರೂ ಪೂರ್ವ ಪಾಕಿಸ್ತಾನದೊಳಕ್ಕೆ ಹೋಗಬೇಕಾಗಿ ಬಂದರೆ ಹೋಗಿ.
ಆದರೆ, ಯಾವುದಾದರೂ ಒಂದು ದಾರಿಯಲ್ಲಿ ಈ ಯುದ್ಧವನ್ನು ನಿಲ್ಲಿಸಬೇಕು’. ಆಗ ಸ್ಯಾಮ್ ಮಣಿಕ್ ಶಾ: ‘ಅಂದರೆ ನೀವು ಹೇಳುತ್ತಿರುವುದು ಯುದ್ಧ ತಾನೇ?’, ಅದಕ್ಕೆ ಇಂದಿರಾ: ‘ಯುದ್ಧ ನಡೆದರೂ ನಾನು ಹೆದರುವುದಿಲ್ಲ’ ಎಂದು ಹೇಳುತ್ತಾರೆ.

ಆದರೆ, ಭಾರತದ ಅ ಸಮಯ ಇಂದಿರಾ ಅಂದು ಕೊಂಡಿದ್ದಕ್ಕಿಂತ ಇನ್ನೂ ಬಿಗಿಯಾಗಿಯೇ ಇತ್ತು. ಏಕೆಂದರೆ, ಆಗಿನ್ನೂ ಮಳೆಗಾಲ, ಸೈನಿಕರ ಪಡೆಯನ್ನು
ರೋಡಿನ ಮುಖಾಂತರ ತೆಗೆದುಕೊಂಡು ಹೋಗಬೇಕಿತ್ತು. ಹಲವಷ್ಟು ಕಡೆ ಪ್ರವಾಹದ ಸಮಸ್ಯೆಯೂ ಉದ್ಭವಿಸಿತ್ತು. ಆ ಸ್ಥಿತಿಯಲ್ಲಿ ಏರ್ ಫೋರ್ಸ್ ಕೂಡ
ಕೆಲಸ ಮಾಡಲಸಾಧ್ಯವಾಗಿತ್ತು. ಹಾಗೇ, ಪಂಜಾಬ್ ಮತ್ತು ಹರಿಯಾಣದಲ್ಲಿ ಕೊಯ್ಲು ಶುರುವಾಗಿತ್ತು. ಆ ಸಮಯದಲ್ಲಿ ದೇಶವೇನಾದರೂ ಯುದ್ಧಕ್ಕೆ ಹೋದರೆ, ಆಹಾರ ವಸ್ತುವಿನ ವಿತರಣೆಯಲ್ಲಿ ಅತಿ ದೊಡ್ಡ ಅಡಚಣೆಯುಂಟಾಗಿ ಬರಗಾಲವೂ ಆಗ ಬಹುದಾಗಿತ್ತು. ಹಾಗೇ ಭಾರತದ್ದೂ ಚೀನಾದ ಜತೆ ಇನ್ನೂ ಸಮಸ್ಯೆ ಇದೆ.

ಈಗೇನಾದರೂ ಸೈನ್ಯ ಎಲ್ಲವೂ ಪೂರ್ವ ಪಾಕಿಸ್ತಾನದೊಳಕ್ಕೆ ತೆಗೆದುಕೊಂಡು ಹೋದರೆ, ಚೀನಾ ಮತ್ತೊಮ್ಮೆ ದೇಶದೊಳಕ್ಕೆ ಬಂದು ಹಿಮಾಲಯ ಸಾಲನ್ನು ಆಕ್ರಮಿಸಿಕೊಳ್ಳಬಹುದಾಗಿತ್ತು. ಇದನ್ನೆಲ್ಲ ಅವಲೋಕಿಸಿದ ಮೇಲೆ ಇಂದಿರಾ ಗಾಂಧಿ ಹೇಗಾದರೂ ಈ ಯುದ್ಧವನ್ನು ತಡೆಯಬೇಕಾಗಿತ್ತು ಅಥವಾ ಮುಂದೂಡ ಬೇಕಿತ್ತು. ಅದಕ್ಕಾಗಿ ಅವರು ಅಂತಾರಾಷ್ಟ್ರೀಯ ಸಮುದಾಯದ ಸಹಾಯವನ್ನು ಪಡೆಯಲು ಯೋಚಿಸುತ್ತಾರೆ. ಆಗ ಯುನೈಟೆಡ್ ಸ್ಟೇಟ್ಸ್ ಹಾಗೂ ಯೂರೋಪಿನ ಪ್ರವಾಸ ಕೈಗೊಳ್ಳುತ್ತಾರೆ. ಆದರೆ, ಆ ಪ್ರವಾಸದ ಮೊದಲ ಭಾಗವೇ ವೈಫಲ್ಯವಾಗುತ್ತದೆ. ಅಂದು ಇಂದಿರಾಗಾಂಧಿ ಮತ್ತು ಅಮೆರಿಕದ ಅಧ್ಯಕ್ಷ ರಿಚಾರ್ಡ್ ನಿಕ್ಸಾನ್ ಇಬ್ಬರೂ ವೈಟ್ ಹೌಸಿನಲ್ಲಿದ್ದ ಓವಲ್ ಆಫೀಸಿನಲ್ಲಿ ಸಭೆ ಸೇರುತ್ತಾರೆ.

ಮಾತು ಆರಂಭವಾಗುತ್ತದೆ. ಆಗ ನಿಕ್ಸಾನ್ ಪೂರ್ವ ಪಾಕಿಸ್ತಾನ ದಲ್ಲಿ ನಡೆಯುತ್ತಿರುವ ನರಮೇಧ ಮತ್ತದರ ಪರಿಮಾಣವನ್ನೂ ಕೇಳಲು ಇಚ್ಚಿಸುವುದಿಲ್ಲ. ಹಾಗೇ ಇಂದಿರಾರ ಸಲಹೆ ಪ್ರಕಾರ ಪಾಕಿಸ್ತಾನದ ಜನರಲ್ ಯಹ್ಯ ಖಾನ್‌ಗೆ ಬುದ್ಧಿ ಹೇಳಿ, ಜೈಲಲ್ಲಿರುವ ಪೂರ್ವ ಪಾಕಿಸ್ತಾನದ ನಾಯಕ ಶೇಖ್ ಮುಜಿಬರ್ ರಹಮಾನ್ ಅನ್ನು ಬಿಡುಗಡೆ ಮಾಡಲು ಒತ್ತಡ ಹೇರಿ. ಅವರಿಬ್ಬರ ನಡುವೆ ಸಂಧಾನ ಮಾಡಿಸುವ ಯೋಚನೆಯನ್ನೂ ಒಪ್ಪಲಿಲ್ಲ. ಅವರ ಸಭೆ ಮುಗಿದ ನಂತರ ಹೊರಬಂದ ನೆಕ್ಸಾನ್‌ನ ಸಲಹೆಗಾರ ಹೆನ್ರಿ ಕಸ್ಸಿಂಗರ್: ‘ಅದು ಎರಡು ಕಿವುಡರ ನಡುವೆ ನಡೆದ ಸಂಭಾಷಣೆ’ ಎಂದು ಘೋಷಿಸಿಬಿಟ್ಟ.

ಅವತ್ತು ನಡೆದ ಸಂಭಾಷಣೆಯಲ್ಲಿ ಮಾತಷ್ಟೇ ಇತ್ತು, ಅರ್ಥಗಳೇ ಹೋಗಿದ್ದವು! ಕೆಲ ವರ್ಷಗಳ ನಂತರ ೧೯೭೧ರ ಸಂಘರ್ಷದ ಕಡತಗಳು ಹೊರಬಂದಾಗ, ನಿಕ್ಸಾನ್ ತನ್ನ ಮತ್ತು ಯಹ್ಯಾ ಖಾನ್‌ನ ನಡುವೆ ಇದ್ದ ‘ಸ್ನೇಹ’ಕ್ಕಾಗಿ ಅವನನ್ನು ಬಿಟ್ಟು ಕೊಡಲಿಲ್ಲ. ಹಾಗೇ ಅಮೆರಿಕಕ್ಕೆ ಯಹ್ಯಾ ಖಾನ್ ತೋರಿಸುತ್ತಿದ್ದ ನಿಷ್ಠೆ
ಮತ್ತು ಸ್ವಾಮಿ ಕಾರ್ಯಕ್ಕೆ ಬಹುಮಾನವಾಗಿ, ಪೂರ್ವ ಪಾಕಿಸ್ತಾನದ ಬಂಡಾಯವನ್ನು ಹತ್ತಿಕ್ಕಲು ನಿರ್ಧರಿಸಿದ್ದ. ಭಾರತ ದೆಡೆಗೆ ಮೊದಲಿಂದಲೂ ತಿರಸ್ಕಾರವನ್ನು ಹೊಂದಿದ್ದ ನಿಕ್ಸಾನ್ ಭಾರತೀಯರನ್ನು ‘ಬಸ್ಟರ್ಡ್ಸ್’ ಎಂದು ಕರೆದಿದ್ದ. ಅವನಿದ್ದ ಸ್ಥಾನದ ಮಹತ್ವವೂ ಅವನಲ್ಲಿರ ಲಿಲ್ಲ!

ಹಾಗೇ ಅವನಲ್ಲಿ ಭಾರತ ಮತ್ತು ಪಾಕಿಸ್ತಾನ ಯುದ್ಧ ಮಾಡುವುದಿಲ್ಲ, ಮಾಡಿದರೂ ಅವರಿಂದ ನಿಭಾಯಿಸಲೂ ಸಾಧ್ಯವಿಲ್ಲವೆಂದು ತಾನೇ ಅಂದು ಕೊಂಡು
ಸುಮ್ಮನಾಗಿದ್ದ.  ಮತ್ತೆ ಮರುದಿನದ ಭೇಟಿಗಾಗಿ ಇಂದಿರಾ ಗಾಂಧಿ ಶ್ವೇತ ಭವನಕ್ಕೆ ಬಂದಾಗ, ಅವರನ್ನು ೪೫ ನಿಷಕ್ಕೂ ಹೆಚ್ಚಿನ ಕಾಲ ಕಾಯಿಸಿದ್ದರು. ಅದರಿಂದ ಮೊದಲೇ ಕ್ರೋಧಿತರಾಗಿದ್ದ ಗಾಂಽಗೆ, ಇಲ್ಲಿ ಕುಳಿತುಕೊಳ್ಳುವುದರಿಂದ ಯಾವುದೇ ಲಾಭವಿಲ್ಲ. ಆದರೆ, ಒಂದು ಪ್ರಜಾಪ್ರಭುತ್ವ ಹಾಗೂ ಅತೀ ಹಳೆಯ ರಾಷ್ಟ್ರದ
ನಾಯಕಿ ಬಂದಾಗ, ಅವರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬ ಸಣ್ಣ ವಿಚಾರವನ್ನೂ ತಿಳಿಯದ ಅಮೆರಿಕದ ಸಣ್ಣ ಬುದ್ಧಿಯ ಮೇಲೆ ತಿರಸ್ಕಾರವೂ ಹುಟ್ಟಿ ಕೊಂಡಿತ್ತು.

ಹಾಗೇ ಅಮೆರಿಕ ಹೇಗಿದ್ದರೂ ಪಾಕಿಸ್ತಾನದ ಮಿತ್ರ, ನಾನೆಷ್ಟು ಗೋಗರೆದರೂ ಅವರು ನನ್ನ ಮಾತನ್ನಂತೂ ಕೇಳುವುದಿಲ್ಲ. ಯಾರು ಸತ್ತರೆಷ್ಟು, ಸತ್ತವರ ಧ್ವನಿ ಇಲ್ಲೇನೂ ಮಾಡಲೂ ಸಾಧ್ಯವಿಲ್ಲ, ಎಂದು ತಮ್ಮ ಮನ ಪರಿವರ್ತನೆ ಮಾಡಿದ್ದರು. ಆ ಭೇಟಿಯ ಸಮಯದಲ್ಲಿ, ಇಂದಿರಾ ಗಾಂಧಿ ಪಾಕಿಸ್ತಾನದ ಬಗ್ಗೆ ಒಂದು ಮಾತೂ ಆಡದೆ, ವಿಯೇಟ್ನಾಮ್ ಹಾಗೂ ಅಮೆರಿಕದ ವಿದೇಶಿ ನೀತಿಗಳ ಬಗ್ಗೆ ಕೇಳಿದ್ದಕ್ಕೆ ನಿಕ್ಸಾನ್ ಕ್ರೋಧಗೊಂಡಿದ್ದ. ಆ ಮಾತನ್ನೇ ಅವಮಾನವಾಗಿ ತೆಗೆದು ಕೊಂಡು, ಇಂದಿರಾ ಗಾಂಧಿಗೆ “That old bitch’ ಎಂದೂ ಹೇಳಿದ್ದ.

ಅದಷ್ಟೇ ಅಲ್ಲದೇ, ‘ಆ ಹಳೇ ಮಾಟಗಾರ್ತಿ (old witch) ಹೇಳುವ ಮಾತಿಗೆಲ್ಲ ಕಣ್ಣೀರು ಸುರಿಸಿದರೆ, ಅದು ನಮ್ಮ ತಪ್ಪು’ ಎಂದು ಖಾಸಗಿಯಾಗಿ ಹೇಳಿ
ಕೊಂಡಿದ್ದರು. ಯುದ್ಧವನ್ನು ತಪ್ಪಿಸಲು ತನ್ನ ಕೈಯಿಂದ ಆದ ಎಲ್ಲ ಮಾರ್ಗಗಳನ್ನು ಹುಡುಕಿ, ಸಲ-ರಾಗಿದೇ ಇದ್ದ ಇಂದಿರಾ ಗಾಂಧಿ ಪಾಕಿಸ್ತಾನದ ಮೇಲೆ ಯುದ್ಧ
ಸಾರುವ ಸ್ಥಿತಿಯಲ್ಲಿದ್ದಾಗ, ಪಾಕಿಸ್ತಾನಿ ವಿಮಾನಗಳು ನಮ್ಮ ದೇಶದ ವಾಯವ್ಯ, ಉತ್ತರ ಮತ್ತು ಪಶ್ಚಿಮದ ಏರ್ ಬೇಸ್ ಮೇಲೆ ಬಾಂಬ್ ದಾಳಿ ಮಾಡಿ
ಉಡಾಯಿಸಲು ಶುರು ಮಾಡಿದ್ದವು. ಅದರ ಬಗ್ಗೆ ಗೊತ್ತಾದ ಇಂದಿರಾ ಗಾಂಧಿ, ಅವರೇ ಮೊದಲು ದಾಳಿ ಮಾಡಿದ್ದು ತುಂಬಾ ಒಳ್ಳೆಯದಾಯಿತು ಎಂದು
ಕೊಂಡು. ಪಾಕಿಸ್ತಾನದ ಮೇಲೆ ಯುದ್ಧವನ್ನು ಸಾರಿಯೇ ಬಿಟ್ಟರು.

ಯುದ್ಧ ಸಾರಿದ ಕೆಲ ದಿನಗಳಲ್ಲೇ ಭಾರತದ ಸೈನ್ಯ ಬಾಂಗ್ಲಾದೊಳಗೆ ಹೋಗಿ, ತನ್ನ ಬಲ ಪ್ರದರ್ಶನವನ್ನು ಮಾಡಿತ್ತು. ಆ ವಿಷಯವನ್ನು ಇಂದಿರಾ ಸಂಸತ್ ಅಽವೇಶನದಲ್ಲಿ ಹೇಳಿದಾಗ, ಇಡೀ ಸಂಸತ್ತಿಗೆ ಸಂಸತ್ತೇ ಇಂದಿರಾ ಗಾಂಧಿ ಅಮೆರಿಕ ಪಾಕಿಸ್ತಾನಕ್ಕೆ ಸಶಸ್ತ್ರಗಳನ್ನು ಕಳುಹಿಸಿ ಕೊಡಲು ನಿರ್ಧಾರ ಮಾಡಿ,
ಸಮುದ್ರ ದಾರಿಯ ಮೂಲಕ, ಶಸ್ತ್ರಾಸ್ತ್ರಗಳನ್ನೂ ಕಳಿಸುತ್ತಿತ್ತು. ಆದರೆ, ಅದಿನ್ನು ಬಂದು ಸೇರಲು ಕೆಲದಿನಗಳು ಇದ್ದಾಗಲೇ, ಅಂದರೆ ಡಿಸೆಂಬರ್ ೧೩
ರಂದು, ಭಾರತದ ಸೈನ್ಯ ಢಾಕಾದ ಬಾಗಿಲಲ್ಲಿ ನಿಂತು ಪಾಕಿಸ್ತಾನಕ್ಕೆ, ಆ ಸ್ಥಳವನ್ನು ಬಿಟ್ಟು ಹೋಗಲು ೩ ದಿನಗಳ ಸಮಯಾವಕಾಶವನ್ನೂ ಕೊಟ್ಟಿತ್ತು.

ಡಿಸೆಂಬರ್ ೧೬ರ ಸಂಜೆ ೫ ಘಂಟೆಗೆ ಜನರಲ್ ಮಾಣಿಕ್‌ಶಾ ಇಂದಿರಾಗೆ ಕರೆ ಮಾಡಿ “Madam, we have beaten them. they’ve just
surrendred. dhaka has fallen’ ಎಂದು ಹೇಳಿದಾಗ ಇಂದಿರಾರ ಕಣ್ಣು ತುಂಬಿ ಬಂದು, ‘ಧನ್ಯವಾದ, ಸ್ಯಾಮ್’ ಎಂದು ಹೇಳಿದರು. ಅಲ್ಲಿಗೆ ಬಾಂಗ್ಲಾದೇಶ
ಪಾಕಿಗಳ ಕೆಟ್ಟ ಕೈಯಿಂದ ಕಳಚಿ, ಸ್ವಚ್ಛಂದವಾಗಿ ಹಾರಲು ಶುರು ಮಾಡಿತು.

ಇಂದಿರಾರ ಧೈರ್ಯಕ್ಕೆ ನಿಕ್ಸಾನ್‌ನಲ್ಲಿ ಮತ್ತಷ್ಟು ಸಿಟ್ಟು ಹೆಚ್ಚಿಸಿತ್ತು. ಮತ್ತೇ ಅವನ ಸಲಹೆಗಾರ ಕಿಸ್ಸಿಂಗರ್ ಮುಂದೆ: ‘ಆ ವಿಷಯದಲ್ಲಿ ತೊಡಗಿಸಿಕೊಳ್ಳಬೇಡ ಅಂತ ನಾವು ಎಚ್ಚರಿಸಿದ ಮೇಲೂ ಆ “ಓಲ್ಡ್ ಬಿಚ್”, ಪಾಕಿಸ್ತಾನಕ್ಕೆ ಹೇಗೆ ಮಾಡಿದ್ದಾಳೆ, ನೋಡು’ ಎಂದು ಹೇಳಿದ್ದ. ಅದಕ್ಕೆ ಆ ಕಿಸ್ಸಿಂಗರ್ ಸಹ: ‘ಭಾರತದವರು ಕೆಟ್ಟ ಪೈಲಟ್‌ಗಳು ಅವರಿಗೆ ಇನ್ನೂ ವಿಮಾನಗಳನ್ನು ಸರಿಯಾಗಿ ಹಾರಿಸುವುದೂ ಗೊತ್ತಿಲ್ಲ’ ಆದರೂ ಇವರು ಹೇಗೆ ಗೆದ್ದರು ಅನ್ನುವುದು ಮಾತ್ರ ತಿಳಿಯುತ್ತಿಲ್ಲ. ಬರೀ ಬಾಂಗ್ಲಾದೇಶಕ್ಕೆ ಸ್ವತಂತ್ರವನ್ನು ತಂದು ಕೊಡುವ ಸಮಯದಲ್ಲೇ ನೋಡಿ, ಏನೇನೋ ವಿದ್ಯಮಾನಗಳಾಗಿ ನಮ್ಮ ದೇಶದ ಪ್ರಧಾನಮಂತ್ರಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದು ಗೊತ್ತಿದ್ದರೂ ಅವರು ಸುಮ್ಮನೆ ಕೂರಲಿಲ್ಲ.

ಭಾರತದಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದುಕೊಂಡಿದ್ದ ಅಂತಾರಾಷ್ಟ್ರೀಯ ಸಮುದಾಯಕ್ಕೆ ಭಾರತದ ಶಕ್ತಿಯನ್ನು ತೋರಿಸಿ, ಪಾಕಿಸ್ತಾನ ಮತ್ತು ಚೀನಾಕ್ಕೆ ಸರಿಯಾದ ಬುದ್ಧಿಯನ್ನು ಕಲಿಸಿ. ಅಮೆರಿಕದ ಸೊಕ್ಕನ್ನು ಅಡಗಿಸಿದ್ದು ಇದೇ ಇಂದಿರಾ ಗಾಂಧಿ. ಮತ್ತೆ ಜನವರಿಯಲ್ಲಿ ಭಾರತಕ್ಕೆ ಬಂದಿದ್ದ ಬಾಂಗ್ಲಾದೇಶದ ನಾಯಕ
ಶೇಕ್ ಮುಜಿಬುರ್ ರಹಮಾನ್ ಇಂದಿರಾ ಗಾಂಧಿ ಬಗ್ಗೆ ಮಾತನಾಡುತ್ತಾ: ‘ಇಂದಿರಾ ಗಾಂಧಿ ಬರೀ ಒಂದು ದೇಶದ ನಾಯಕಿ ಅಷ್ಟೇ ಅಲ್ಲ, ಅವರು ಇಡೀ
ಮಾನವತೆಗೆ ನಾಯಕಿ’ ಎಂದು ಹೇಳಿದ್ದರು.

ಅವರನ್ನು ಬಿಚ್ ಎಂದು ಕರೆದಿದ್ದಕ್ಕೆ ಅಂತಾರಾಷ್ಟ್ರೀಯ ಸಮುದಾಯದದಿಂದ ಸಿಕ್ಕಾಪಟ್ಟೆ ಅವಮಾನವನ್ನು ಅನುಭವಿಸಿದ ಬಳಿಕ, ನಿಕ್ಸಾನ್ ಪರವಾಗಿ ಅವನ ಸಲಹೆಗಾರ ಕಿಸ್ಸಿಂಗರ್ ಒಂದು ಸಂದರ್ಶನದಲ್ಲಿ ವಿಷಾದವನ್ನೂ ಕೇಳಿದ್ದ. ಅದನ್ನೆಲ್ಲ ಬಿಟ್ಟರೂ, ಏನೇನೋ ಆದರೂ ಇಂದಿರಾ ವಿರುದ್ಧ ಹರಿಹಾಯುತ್ತಿದ್ದ ಹಲವರು ಇಂದಿರಾ ತಗೆದು ಕೊಳ್ಳುತ್ತಿದ್ದ ನಿರ್ಧಾರದ ಬಗ್ಗೆ ಕೊಂಡಾಡುತ್ತಿದ್ದರು. ಅವರನ್ನು ಸುಖಾ ಸುಮ್ಮನೇ ‘ಐರನ್ ಲೇಡಿ’ ಎಂದು ಕರೆಯಲಿಲ್ಲ. ಮತ್ತೆ ಎಮರ್ಜನ್ಸಿಯನ್ನು ವಿಧಿಸಿ, ದೇಶದಲ್ಲಿನ ವರ ಕೋಟ್ಯಾಂತರ ವಿರೋಧಿಗಳ ಬಾಯನ್ನು ಮುಚ್ಚಿಸಿದರೂ, ಅವರಿಗೆ ಹಿನ್ನಡೆಯಾಗಿದ್ದು ಒಂದೇ ಚುನಾವಣೆಯಲ್ಲಿ. ಅದಾದ ಮೇಲೆ ಅವರು ಮತ್ತೇ ದೇಶದ ಪ್ರಧಾನ ಮಂತ್ರಿ ಯಾದರಲ್ಲವೇ? ಬಗಲ್ ಮೇ ದುಷ್ಮನ್ ಎನ್ನುವ ರೂಪಕಕ್ಕೆ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಒಳ್ಳೆಯ ಉದಾಹರಣೆಯೇ.

ಪಾಕಿಸ್ತಾನ ಉಗ್ರರನ್ನು ಕೊಟ್ಟು ಉಪಟಳ ಶುರುಮಾಡಿದರೆ, ಬಾಂಗ್ಲಾದೇಶದಿಂದ ಬರುವ ಕೋಟ್ಯಾಂತರ ಅಕ್ರಮ ವಲಸಿಗರಿಂದ, ಆಗಾಗ ಎಷ್ಟೋ ಸಮಸ್ಯೆ ಗಳೂ ತಲೆದೂಗಿವೆ. ಆದರೆ, ಪಾಕಿಸ್ತಾನಕ್ಕೆ ಹೋಲಿಸದರೆ, ಬಾಂಗ್ಲಾದೇಶ ಭಾರತದ ವಿರುದ್ಧ ನಿಂತಿದ್ದು ಕಡಿಮೆಯೇ. ಅದು ಅವರಲ್ಲಿನ ಕಡಿಮೆ ಶಕ್ತಿಯಿಂದನೂ ಇರಬಹುದು. ಆದರೆ, ಬಿಡಿ, ಎರಡೂ ನಮ್ಮ ದೇಶದ್ದೇ ಭಾಗಗಳಾಗಿದ್ದವಲ್ಲವೇ? ಬಾಂಗ್ಲಾದೇಶದ ಉದಯಕ್ಕೆ ಕಾರಣವಾದ ಮಹಾ ಮಹಿಳೆಯನ್ನು, ಬಾಂಗ್ಲಾದೇಶ ವಿಮೋಚನೆ ದಿನದಂದು ನೆನೆಯದೆ ಇರಲು ಆಗುತ್ತದೆಯೇ?!

(ಲೇಖಕರು ಪತ್ರಕರ್ತರು)