ಪ್ರಚಲಿತ
ದುರ್ಗಾ ಭಟ್, ಕೆದುಕೋಡಿ
ಕರೋನಾ ಭೀತಿಯ ನಡುವೆ ದ್ವಿತೀಯ ಪಿಯುಸಿ ಫಲಿತಾಂಶ ಕೈ ಸೇರಿದೆ. ಶಿಕ್ಷಣ ಕ್ಷೇತ್ರಕ್ಕೆ ಬಹಳಷ್ಟು ಹೊಡೆತ ಬಿದ್ದಿರುವ ಈ ಸಂದರ್ಭದಲ್ಲಿ ಪಿಯುಸಿ ನಂತರ ಮುಂದೇನು ಮಾಡುವುದು, ಯಾವ ರೀತಿಯ ಕೋರ್ಸ್ಗಳನ್ನು ಆಯ್ಕೆ ಮಾಡಬೇಕು, ಭವಿಷ್ಯದಲ್ಲಿ ಶೀಘ್ರವಾಗಿ ಉದ್ಯೋಗ ಪಡೆಯುವ ದಾರಿ ಯಾವುದು?
ಹೀಗೆ ಹಲವಾರು ಪ್ರಶ್ನೆಗಳು ವಿದ್ಯಾರ್ಥಿಗಳ ತಲೆಯಲ್ಲಿ ಕೊರೆಯುತ್ತಿರುತ್ತದೆ.
ಮನೆಯಲ್ಲಿ ಹೆತ್ತವರ ಒತ್ತಾಯಕ್ಕೋ ಅಥವಾ ಇನ್ಯಾರೋ ಹೇಳಿದ ಅನುಭವಗಳನ್ನು ಆಧರಿಸಿ ಸಾಮಾನ್ಯವಾಗಿ ಒಂದು ಕೋರ್ಸ್ ಆಯ್ಕೆ ಮಾಡಲಾಗುತ್ತದೆ. ಈ ಪ್ರಕ್ರಿಯೆ ಕೇವಲ ಪಿಯುಸಿ ನಂತರದ್ದು ಮಾತ್ರವಲ್ಲ ಬಹುಶಃ ಪ್ರತಿಯೊಂದು ಹಂತದಲ್ಲಿ ಎಲ್ಲರೂ ಇಂತಹ ಸಂದರ್ಭಗಳನ್ನು ಎದುರಿಸಿಯೇ ಇರುತ್ತಾರೆ. ಹೀಗಾಗಿ ಕೋರ್ಸ್ ಆಯ್ಕೆಯನ್ನು ಹೇಗೆ ಮಾಡಬಹುದು ಮತ್ತು ಆಯ್ದುಕೊಳ್ಳಲು ಬೇಕಾದ ಪೂರ್ವ ತಯಾರಿ ಬಗ್ಗೆ ಜ್ಞಾನವಿದ್ದರೆ ಉತ್ತಮ.
ನಮ್ಮಲ್ಲಿ ಬಹುತೇಕ ವಿದ್ಯಾರ್ಥಿಗಳು ಸರಿಯಾದ ’ಕೆರಿಯರ್ ಪ್ಲಾನಿಂಗ್’ ಇಲ್ಲದೆ ಕೋರ್ಸ್ ಆಯ್ದುಕೊಳ್ಳುತ್ತಾರೆ. ಆದರೆ ಹಲವರಿಗೆ ಕೆರಿಯರ್ ಅಂದರೇನು
ಎಂಬುದೇ ತಿಳಿದಿಲ್ಲ. ‘ಕೆರಿಯರ್ ಪ್ಲಾನಿಂಗ್’ ಅಂದರೆ ಭವಿಷ್ಯದಲ್ಲಿ ವೃತ್ತಿ ಜೀವನ ಹೇಗಿರಬೇಕು? ಹಾಗೂ ಯಾವ ವಿಷಯ ಆಯ್ದುಕೊಂಡಲ್ಲಿ ನಿರ್ದಿಷ್ಟ ಕ್ಷೇತ್ರದಲ್ಲಿ
ಉದ್ಯೋಗ ಪಡೆಯಬಹುದೆಂಬ ಪ್ಲಾನ್. ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಯಾವುದೇ ತರಬೇತಿ ಮತ್ತು ವಿಶೇಷ ಕಾಳಜಿ ಇರುವುದಿಲ್ಲ. ಬಹುತೇಕ ಕನ್ನಡ
ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗಳೆಂದರೆ ಈ ಕಲಾ ಮಾಧ್ಯಮದವರೇ. ವಾಣಿಜ್ಯ ವಿಭಾಗವನ್ನು ಆಯ್ದುಕೊಳ್ಳುವವರೆಲ್ಲರೂ ಸಿ.ಎ.(ಚಾರ್ಟರ್ಡ್ ಅಕೌಂಟೆನ್ಸಿ)
ಓದುವ ಕನಸನ್ನೇ ಹೊತ್ತು ಈ ವಿಷಯಗಳನ್ನು ಆಲಂಗಿಸಿರುತ್ತಾರೆ. ಕಡೆಯದಾಗಿ ಎಲ್ಲಾ ದಡ ಸೇರುತ್ತಾರೆ.
ವಿಜ್ಞಾನ ವಿಷಯ ಆಯ್ದುಕೊಂಡವರು ಮೆಡಿಕಲ್ ಫೀಲ್ಡ್, ತಾಂತ್ರಿಕ ಕ್ಷೇತ್ರ ಅಲ್ಲದೇ ಮತ್ತೊಂದಿಷ್ಟು ಸರಕಾರ ಸೃಷ್ಟಿಸಿರುವ ಉದ್ಯೋಗಕ್ಕೆ ಆಕಾಂಕ್ಷಿಗಳಾ ಗಿರುತ್ತಾರೆ. ವಿದ್ಯಾರ್ಥಿಗಳು ಹೆಚ್ಚಾಗಿ ತಮಗೆ ಇಷ್ಟವಿಲ್ಲದಿದ್ದರೂ ಪೋಷಕರ ಒತ್ತಡದಿಂದಲೇ ಕೋರ್ಸ್ಗಳಿಗೆ ನೋಂದಾಯಿಸಿಕೊಳ್ಳುತ್ತಾರೆ ಹಾಗೂ ಅವರು ಅವುಗಳನ್ನು ಪೂರ್ಣಗೊಳಿಸುವುದೂ ಇಲ್ಲ. ಹೀಗಾಗಿ ಪಿಯುಸಿಯ ನಂತರದ ಯಾವುದೇ ಕೋರ್ಸ್ ಅನ್ನು ನಿರ್ಧರಿಸುವ ಮುನ್ನ ಪೋಷಕರು, ವಿದ್ಯಾರ್ಥಿಗಳು ಕೆಲವೊಂದು ಅಂಶಗಳನ್ನು ಗಮನಿಸಬೇಕಾಗುತ್ತದೆ. ಇದ್ದನ್ನು ಚೆನ್ನಾಗಿ ಅರ್ಥೈಸಿಕೊಂಡರೆ ಶಿಕ್ಷಣ ಪಡೆದೂ ನಿರೋದ್ಯೋಗಿಗಳಾಗಿ ಉಳಿಯುವ ಸಮಸ್ಯೆ ಕೊಂಚ ದೂರವಾದೀತು.
ಪೋಷಕರ ಜವಾಬ್ದಾರಿಗಳೇನು?
ವಿದ್ಯಾರ್ಥಿಗಳ ಆಸಕ್ತಿಯನ್ನು ಗಮನಿಸಿ, ನಿಮ್ಮ ಮಕ್ಕಳಿಗೆ ಮುಕ್ತವಾಗಿ, ನಿಖರವಾಗಿ ಚರ್ಚಿಸಲು ಅವಕಾಶ ಕೊಡಿ. ವಿದ್ಯಾರ್ಥಿಗಳು ತೀರ್ಮಾನ ತೆಗೆದುಕೊಳ್ಳಲು
ಅಶಕ್ತರಾಗಿದ್ದಲ್ಲಿ, ಕೇವಲ ಆದಾಯವನ್ನಷ್ಟೇ ಗಮನದಲ್ಲಿರಿಸದೆ ಮಕ್ಕಳ ಅಭಿಲಾಷೆಯನ್ನರಿತು ಮಾರ್ಗದರ್ಶನ ಮಾಡಿ. ವಿದ್ಯಾರ್ಥಿಗಳು ಪೋಷಕರ ಸಹಕಾರದೊಂದಿಗೆ ಸ್ವಾತಂತ್ರ್ಯವಾದ ನಿರ್ಧಾರ ತೆಗೆದುಕೊಳ್ಳುವ ಪ್ರಭುದ್ಧತೆ ಬೆಳೆಸಿಕೊಳ್ಳಬೇಕು. ಯಾವುದೇ ಕ್ಷೇತ್ರದಲ್ಲಿ ನೀವು ದುಡಿಯಬೇಕಾದರೆ ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯ ಬಹಳ ಮುಖ್ಯ. ಭಾಷಾ ಕಲಿಕೆಯಲ್ಲಿ ನಿಮಗೆ ಆಸಕ್ತಿ ಇದ್ದಲ್ಲಿ ಅದನ್ನೇ ಆರಿಸಿಕೊಳ್ಳಿ. ಬಹುತೇಕ ಉದ್ಯಮಗಳಲ್ಲಿ ಸಂವಹನಾ ಕೌಶಲವೇ ಮುಖ್ಯವಾಗತ್ತದೆ. ದೊರೆತಿರುವ ಸಮಯದಲ್ಲಿ ಸಾಮಾನ್ಯ ಜ್ಞಾನ, ಪ್ರಸಕ್ತ ವಿದ್ಯಮಾನದ ಬಗ್ಗೆ ಗಮನ ಹರಿಸಿ.
ಕೋರ್ಸ್ಗಳ ಆಯ್ಕೆ ಮಾಡುವ ಕುಟುಂಬದ ಆರ್ಥಿಕ ಶಕ್ತಿಯ ಕುರಿತು ಗಮನವಿರಬೇಕು. ಆರ್ಥಿಕ ಬೆಂಬಲದ ದಾರಿಗಳು ಸರಿಯಾಗಿದ್ದಲ್ಲಿ ನಿಮ್ಮಿಷ್ಟದ ಕೋರ್ಸ್ ಖಂಡಿತಾ ಕಲಿಯಲು ಸಾಧ್ಯ. ಕೆಲವು ಕೋರ್ಸ್ಗಳಿಗೆ ಸಹನೆ, ಸೇವಾಭಾವನೆ ಮತ್ತು ಸಂವಹನ ಮುಖ್ಯವಾದರೆ ಮತ್ತೆ ಕೆಲವಕ್ಕೆ ಚುರುಕುತನ, ಸೃಜನಶೀಲತೆ ಪ್ರಮುಖವೆನಿಸುತ್ತದೆ. ರಕ್ಷಣಾ ವಿಭಾಗದಲ್ಲಿ ನಿಮ್ಮ ಆಸಕ್ತಿ ಇದ್ದಲ್ಲಿ ಧೈರ್ಯ ಎಲ್ಲಕ್ಕಿಂತಲೂ ಮುಖ್ಯವಾಗುತ್ತದೆ. ಆಯ್ದುಕೊಂಡ ಕ್ಷೇತ್ರವನ್ನು ಛಲಬಿಡದೆ ಪಟ್ಟು ಹಿಡಿದು ಪೂರ್ಣಗೊಳಿಸಿ.
ಯಾವೆ ಅವಕಾಶಗಳು ಇವೆ? ಮೆಡಿಕಲ್ ಅಥವಾ ಡೆಂಟಲ್ನಲ್ಲಿ ಅವಕಾಶ ಸಿಗದವರು ಅಪ್ಲೈಡ್ ಹೆಲ್ತ ಸೈ ಕೋರ್ಸ್ ಮಾಡಿ ಉದ್ಯೋಗ ಭವಿಷ್ಯ ಕಟ್ಟಿಕೊಳ್ಳ ಬಹುದು. ಬಿಎಸ್ಸಿ ಇನ್ ಹಿಯರಿಂಗ್ ಆಂಡ್ ಲ್ಯಾಂಗ್ವೆಜ್, ಸ್ಪಿಚ್, ಪ್ಯಾಥೋಲಜಿ, ಆಡಿಯೋಲಜಿ ಆಂಡ್ ಥೆರಪಿ ಕೋರ್ಸ್ ಕೂಡ ಮಾಡಬಹುದು. ಇದಲ್ಲದೆ
ಬ್ಯಾಚುಲರ್ ಆಫ್ ಆಯುರ್ವೇದಿಕ್ ಹೋಮಿಯೋಪಥಿ ಮೆಡಿಕಲ್ ಮಾಡಿದರೆ ಅಲೋಪತಿಗೆ ಪರ್ಯಾಯವಾಗಿ ಬೆಳೆಯುತ್ತಿರುವ ಈ ಕ್ಷೇತ್ರದಲ್ಲಿ ಉತ್ತಮ ಉದ್ಯೋಗ ಪಡೆಯಬಹುದು.
ಎಂಜಿನಿಯರಿಂಗ್ ಮಾಡಲು ಬಯಸುವ ವಿದ್ಯಾರ್ಥಿ ಗಳು ಡಿಪ್ಲೊಮಾ ಇನ್ ಎಂಜಿನಿಯರಿಂಗ್ ಮಾಡಬ ಹುದು. ಇದು ಪೂರ್ಣಾವಧಿ ಎಂಜಿನಿಯರಿಂಗ್ ಕೋರ್ಸ್ ಪ್ರವೇಶಕ್ಕಾಗಿ ಇರುವ ಪ್ರವೇಶ ಪರೀಕ್ಷೆಯ ಒತ್ತಡವನ್ನು ಇಲ್ಲವಾಗಿಸುತ್ತದೆ. ವಾಣಿಜ್ಯ ವಿಭಾಗದಲ್ಲಿ ಅಕೌಂಟ್ಸ, ಕಂಪನಿ ಸೆಕ್ರೆಟರಿ, ಬ್ಯಾಂಕಿಂಗ್ ಇನ್ನಿತರ ಕ್ಷೇತ್ರಗಳಲ್ಲಿ ಹೆಚ್ಚಿನ ಅವಕಾಶಗಳು ಇವೆ. ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಡಿಸೈನಿಂಗ್, ಸೆರಮಿP ಡಿಸೈನಿಂಗ್, ಹೋಮ್ ಸೈ ಡಿಪ್ಲೊಮಾ, ಟೂರಿಸಮ, ನ್ಯಾನೋ ಟೆಕ್ನಾಲಜಿ, ಆರ್ಟಿಫಿಷಲ್ ಇಂಟೆಲಿಜೆ, ಡೇಟಾ ಸೈ ಸೇರಿದಂತೆ ಹಲವು ಇತರ ಕೋರ್ಸ್ ಗಳು ಮಾನ್ಯತೆಯಲ್ಲಿದೆ.
ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಸಂಘಗಳ ಒಕ್ಕೂಟವು (ಫಿಕ್ಕಿ) ಕರೋನಾ ವೈರಸ್ಗೆ ಸಂಬಂಧಿಸಿದ ಹಲವು ಕೋರ್ಸ್ಗಳನ್ನು ಆರಂಭಿಸಿದೆ. ಕೋವಿಡ್-೧೯ಗೆ ಸಂಬಂಧಿಸಿದ ಪ್ರಾಥಮಿಕ ಮಾಹಿತಿ, ಸೋಂಕು ತಡೆಯುವಿಕೆ ಮತ್ತು ನಿಯಂತ್ರಣ, ಪಾಸಿಟಿವ್ ಪ್ರಕರಣಗಳ ನಿರ್ವಹಣೆ ವಿಷಯಗಳಿಗೆ ಸಂಬಂಽಸಿದ ಕೋರ್ಸ್ ಇವಾಗಿವೆ. ಆಸ್ಪತ್ರೆಗಳು ಅನುಸರಿಸುತ್ತಿರುವ ಕೋವಿಡ್ ನಿರ್ವಹಣೆಯ ಉತ್ತಮ ನಡಾವಳಿಗಳು, ವಿಶ್ವ ಆರೋಗ್ಯ ಸಂಸ್ಥೆ ಮತ್ತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾರ್ಗಸೂಚಿಗಳನ್ನು ಆಧರಿಸಿ ಈ ಕೋರ್ಸ್ಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಆನ್ಲೈನ್ ಮೂಲಕ ಪ್ರವೇಶ ಪಡೆಯಬಹುದು. ವಿದ್ಯಾರ್ಥಿಗಳು ಆಯ್ಕೆಗೆ ಲಭ್ಯವಿರುವ ಮೂರು ಕ್ಷೇತ್ರಗಳಾದ ಸರಕಾರಿ ಉದ್ಯೋಗ, ಖಾಸಗಿ ಉದ್ಯೋಗ
ಮತ್ತು ಸ್ವ ಉದ್ಯೋಗಗಳ ಪೈಕಿ ಒಂದು ಕ್ಷೇತ್ರವನ್ನು ಆಯ್ಕೆ ಮಾಡಿ, ಅಲ್ಲಿ ಯಾವ ಉದ್ಯೊಗದೊಂದಿಗೆ ನನ್ನ ಕೆರಿಯರ್ ಆರಂಭಿಸಬೇಕು ಎಂಬ ತೀರ್ಮಾನ ಕೈಗೊಳ್ಳುವುದು ಮುಖ್ಯ.