Wednesday, 11th December 2024

ನಮ್ಮ ನಡತೆ, ಹಾವಭಾವ, ಮಾತನ್ನು ಗಮನಿಸುವವರು ಇದ್ದಾರೆ !

ಇದೇ ಅಂತರಂಗ ಸುದ್ದಿ

vbhat@me.com

ಅದೊಂದು ರಾತ್ರಿ ಅಮೆರಿಕದ ಫಿಲಿಡೆಲಿಯಾ ನಗರದಲ್ಲಿ ನಡೆದ ಪುಟ್ಟ ಘಟನೆಯಿದು. ಸುಮಾರು ಅರವತ್ತೈದು-ಎಪ್ಪತ್ತು ವರ್ಷದ ವೃದ್ಧ ತನ್ನ ಹೆಂಡತಿಯೊಂದಿಗೆ ಹೋಟೇಲ್‌ಗೆ ಬಂದ. ‘ನಾನು ಈ ರಾತ್ರಿ ಈ ಹೋಟೆಲ್‌ನಲ್ಲಿ ತಂಗಬೇಕೆಂದಿದ್ದೇನೆ, ರೂಮ್ ಇದೆಯಾ?’ ಎಂದು ಕೇಳಿದ.

ರಿಸೆಪ್ಷನ್‌ನಲ್ಲಿ ಇದ್ದವ, ‘ಇಲ್ಲ, ಎಲ್ಲ ರೂಮುಗಳು ಭರ್ತಿಯಾಗಿವೆ. ನಗರದಲ್ಲಿ ಮೂರು ಸಮಾವೇಶಗಳು ನಡೆಯುತ್ತಿವೆ. ಯಾವ ಹೋಟೆಲ್‌ ಗಳಲ್ಲೂ ರೂಮುಗಳಿರುವ ಸಾಧ್ಯತೆಯಿಲ್ಲ’ ಎಂದ. ಅಷ್ಟೊತ್ತಿಗೆ ಮಧ್ಯರಾತ್ರಿ ಹನ್ನೆರಡೂವರೆ. ಆ ವೃದ್ಧ ದಂಪತಿಗೆ ಏನು ಮಾಡಬೇಕೆಂಬು ದೇ ತಿಳಿಯಲಿಲ್ಲ. ಅಲ್ಲಿಗೆ ಬರುವ ಮುನ್ನ ಏಳೆಂಟು ಹೋಟೆಲ್‌ಗಳಿಗೆ ಹೋಗಿಬಂದಿದ್ದರು. ಕೊನೆ ಪ್ರಯತ್ನವಾಗಿ ಆ ಹೋಟೆಲ್‌ಗೆ ಬಂದಿ ದ್ದರು. ಬೇರೆ ದಾರಿ ಕಾಣದೇ ಆ ದಂಪತಿ ಆ ಹೋಟೆಲ್‌ನಿಂದ ಖಿನ್ನಮನಸ್ಕರಾಗಿ ಹೊರಡುವ ಮುನ್ನ, ರಿಸೆಪ್ಷನ್‌ನಲ್ಲಿ ಇದ್ದವ, ‘ಸಾರ್, ನೀವು ತಪ್ಪು ಭಾವಿಸುವುದಿಲ್ಲ ಅಂದ್ರೆ ಒಂದು ಮಾತನ್ನು ಹೇಳ್ತೇನೆ. ಈ ನಡುರಾತ್ರಿಯಲ್ಲಿ ನೀವು ಎಲ್ಲಿಗೆ ಹೋಗುತ್ತೀರಾ? ದಯವಿಟ್ಟು ಹೋಟೆಲ್ ಬೇಸ್‌ಮೆಂಟ್‌ನಲ್ಲಿ ನನ್ನ ಪುಟ್ಟ ರೂಮಿದೆ.

ಅಲ್ಲಿ ನೀವಿಬ್ಬರೂ ಮಲಗಬಹುದು. ಬೇರೆ ದಾರಿಯಿರಲಿಲ್ಲ. ಆ ದಂಪತಿ ಅವನ ಕೋಣೆಯಲ್ಲೇ ಮಲಗಿದರು. ಮರುದಿನ ಆ ಹೋಟೆಲ್‌ ನಿಂದ ಹೊರಡುವ ಮುನ್ನ, ಆ ವೃದ್ಧ ಹೇಳಿದ- ‘ನನ್ನ ಜೀವನದಲ್ಲಿ ನಾನು ಅವೆಷ್ಟೋ ಹೋಟೆಲ್‌ಗಳಿಗೆ ಹೋಗಿದ್ದೇನೆ. ಆದರೆ ಯಾರೂ ನಿನ್ನ ಹಾಗೆ ಅತಿಥಿ ಸತ್ಕಾರ ಮಾಡಿದ್ದನ್ನು ನೋಡಿಲ್ಲ. ನನ್ನ ಹೋಟೆಲ್‌ಗೆ ನಿನ್ನಂಥ ಮ್ಯಾನೇಜರ್‌ನೇ ಬೇಕು.

ನೋಡೋಣ, ಮುಂದೊಂದು ದಿನ ನಾನೇನಾದರೂ ಪಂಚತಾರಾ ಹೋಟೆಲ್‌ನ್ನು ಕಟ್ಟಿದರೆ, ನಿನ್ನನ್ನೇ ಮ್ಯಾನೇಜರ್‌ನನ್ನಾಗಿ ನೇಮಿಸು ತ್ತೇನೆ’ ರಿಸೆಪ್ಷನ್‌ನಲ್ಲಿದ್ದ ವ್ಯಕ್ತಿ ವೃದ್ಧ ದಂಪತಿಯನ್ನು ಪಾದದಿಂದ ನೆತ್ತಿಯವರೆಗೊಮ್ಮೆ ನೋಡಿ ಸುಮ್ಮನೆ ನಕ್ಕ. ಈ ಘಟನೆ ನಡೆದು ಎರಡು- ಮೂರು ವರ್ಷಗಳಾಗಿರಬಹುದು. ರಿಸೆಪ್ಷನ್‌ನಲ್ಲಿದ್ದ ವ್ಯಕ್ತಿ ಇದನ್ನು ಸಂಪೂರ್ಣ ಮರೆತು ಬಿಟ್ಟಿದ್ದ. ಒಂದು ದಿನ ಅವನಿಗೊಂದು ಪತ್ರ ಬಂತು. ಅದು ಆ ವೃದ್ಧ ಬರೆದುದಾಗಿತ್ತು. ನಡುರಾತ್ರಿ ನಡೆದ ಘಟನೆಯನ್ನು ಪ್ರಸ್ತಾಪಿಸಿದ್ದ.

ಜತೆಯಲ್ಲಿ ನ್ಯೂಯಾರ್ಕ್‌ಗೆ ರೌಂಡ್‌ಟ್ರಿಪ್ ವಿಮಾನ ಟಿಕೆಟ್‌ನ್ನು ಇರಿಸಿದ್ದ. ನ್ಯೂಯಾರ್ಕಿಗೊಮ್ಮೆ ಬರುವಂತೆ ವಿನಂತಿಸಿಕೊಂಡಿದ್ದ.
ವೃದ್ಧನ ಕೋರಿಕೆಯಂತೆ ಈತ ನ್ಯೂಯಾರ್ಕ್‌ಗೆ ಹೋದ. ಅಲ್ಲಿನ 34ನೇ ಸ್ಟ್ರೀಟ್‌ನಲ್ಲಿರುವ ಫಿಫ್ತ್ ಅವೆನ್ಯೂನ ಒಂದು ಮೂಲೆಯಲ್ಲಿ ವಿಸ್ತರಿಸಿಕೊಂಡ ಹೊಸ, ಭವ್ಯ ಪಂಚತಾರಾ ಹೋಟೆಲ್‌ನತ್ತ ಕರೆದುಕೊಂಡ ಹೋದ. ‘ಇದು ನಾನು ಕಟ್ಟಿಸಿರುವ ಹೋಟೆಲ್. ಈ ಹೋಟೆಲ್‌ನ ಮ್ಯಾನೇಜರ್ ನೀನೇ ಆಗ ಬೇಕೆಂಬ ಕಾರಣಕ್ಕೆ ಇದನ್ನು ನಿರ್ಮಿಸಿದ್ದೇನೆ’ ಎಂದ ಆ ವೃದ್ಧ.

ಈತನಿಗೆ ನಂಬಲು ಸಾಧ್ಯವಾಗಲೇ ಇಲ್ಲ. ಅದು ನಿಜವೆಂದು ಅರಿವಾಗುವ ಹೊತ್ತಿಗೆ ಬಹಳ ಸಮಯ ಹಿಡಿದಿತ್ತು. ಆ ಹೋಟೆಲ್‌ನ್ನು ನಿರ್ಮಿಸಿದ ಆ ವೃದ್ಧನ ಹೆಸರು ವಿಲಿಯಮ್ ವಾಲ್ಡಾ- ಎಸ್ಟೋರ್. ಹೋಟೆಲ್ ಹೆಸರು ವಾಲ್ಡಾ-ಎಸ್ಟೋರಿಯ ಹಾಗೂ ಆ ಹೋಟೆಲ್‌ನ ಮ್ಯಾನೇಜರ್ ಹೆಸರು ಜಾರ್ಜ್ ಸಿ. ಬೋಲ್ಟ್. ನಮ್ಮ ನಡತೆ, ಹಾವಭಾವ, ಮಾತುಗಳನ್ನು ಒಬ್ಬರಲ್ಲ ಒಬ್ಬರು ಗಮನಿಸುತ್ತಲೇ ಇರುತ್ತಾ ರೆಂಬುದಕ್ಕೆ ಇದೇ ನಿದರ್ಶನ.

ಹೆಂಡತಿ ಹೊತ್ತೊಯ್ಯುವ ಸ್ಪರ್ಧೆ
ಎಸ್ತೋನಿಯಾ ದೇಶದಲ್ಲಿ ‘ಹೆಂಡತಿಯನ್ನು ಹೆಗಲ ಮೇಲೆ ಹೊತ್ತೊಯ್ಯುವ ಸ್ಪರ್ಧೆ’ ಅತ್ಯಂತ ಜನಪ್ರಿಯವಾದುದು. ಈ ಬಗ್ಗೆ ಹಿಂದೊಮ್ಮೆ ಬರೆದಿದ್ದೆ. ಒಂದು ವೇಳೆ ಈ ಸ್ಪರ್ಧೆ ನಮ್ಮಲ್ಲಿಯೂ ಇಂಥದ್ದೇ ಸ್ಪರ್ಧೆ ಇದ್ದಿದ್ದರೆ ಏನಾಗುತ್ತಿತ್ತು?
ಇಲ್ಲಿದೆ ಒಂದಷ್ಟು ಸಾಧ್ಯತೆಗಳು:
೧. ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಗಂಡಂದಿರು ಕಡ್ಡಾಯವಾಗಿ ತಮ್ಮ ಹೆಂಡತಿ ಸದಾ ಸ್ಲಿಮ್ ಆಗಿರುವಂತೆ ಎಚ್ಚರವಹಿಸುತ್ತಿದ್ದರು.
೨. ಹೆಂಡತಿಯನ್ನು ತಾವೇ ಹೋಗಿ ಜಿಮ್, ಯೋಗಾಕ್ಲಾಸಿಗೆ ಸೇರಿಸಿ ಬರುತ್ತಿದ್ದರು.
೩. ತಮ್ಮ ಹೆಂಡತಿಗಿಂತ ಭಾರವಾದವರನ್ನು ಹೊತ್ತು ಪ್ರ್ಯಾಕ್ಟೀಸ್ ಮಾಡುತ್ತಿದ್ದರು. ಅದಕ್ಕೆ ಹೆಂಡತಿಯೇ ಸಮ್ಮತಿಸುತ್ತಿದ್ದಳು.
೪. ಎಲ್ಲ ಗಂಡ-ಹೆಂಡತಿಯರು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯ ಮಾಡಿದರೆ, ದಢೂತಿ ಹೆಂಗಸರೇ ಇರುತ್ತಿರಲಿಲ್ಲ.
೫. ಗರ್ಲ್-ಂಡ್‌ಗಳನ್ನು ಹೆಗಲ ಮೇಲೆ ಹೊತ್ತರೆ, ಯಾರೂ ತಪ್ಪು ಭಾವಿಸುತ್ತಿರಲಿಲ್ಲ.
೬. ಈ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ತರಲಿ ಎಂದು ಕೆಲವು ಹೆಂಡತಿಯರು ತಮಗಿಂತ ತೆಳ್ಳಗಿರುವ ಹೆಂಗಸರನ್ನು ತಮ್ಮ ಗಂಡನ ಜತೆ ತಾವೇ ಹೋಗಿ ಬಿಟ್ಟುಬರುತ್ತಿದ್ದರು.
೭. ತಮ್ಮ ಹೆಂಡತಿಯ ನಿಜವಾದ ತೂಕ, ವಜನು ಎಷ್ಟೆಂಬುದು ಗಂಡಂದಿರಿಗೆ ಗೊತ್ತಾಗುತ್ತಿತ್ತು.
೮. ಬೇರೆ ಹೆಂಗಸರನ್ನು ಗಂಡಸರು ಎತ್ತಿ ಮುದ್ದಾಡಿದರೆ, ಸೂಕ್ತ ಸಮಜಾಯಿಶಿ ಕೊಡಲು ಅನುವಾಗುತ್ತಿತ್ತು. ಯಾರೂ ಅಪಾರ್ಥ ಭಾವಿಸುತ್ತಿರಲಿಲ್ಲ.
೯. ಹೆಂಡತಿಯರನ್ನು ಬದಲಿಸಿಕೊಳ್ಳುವುದು (Wife Swapping) ಸಾಮಾನ್ಯವಾಗುತ್ತಿತ್ತು.
೧೦. ಪ್ರೀತಿಗೂ, ಶರೀರದ ಭಾರಕ್ಕೂ ಸಂಬಂಧ ಇಲ್ಲ ಎಂದು ಪ್ರೀತಿಗೆ ಹೊಸ ವ್ಯಾಖ್ಯೆ ಬರೆಯುತ್ತಿದ್ದರು.
೧೧. ನಿರ್ದೇಶಕ ಪ್ರೇಮ್ ‘ಪ್ರೀತಿಯೇಕೆ ಹೆಗಲ ಮೇಲಿದೆ?’ ಎಂಬ ಹೊಸ ಸಿನಿಮಾ ಮಾಡುತ್ತಿದ್ದರು.
೧೨.‘ನನಗೆ ನಡೆಯಲಾಗುವುದಿಲ್ಲ ಹೆಗಲ ಮೇಲೆ ಹೊತ್ತು ಕೊಂಡು ಹೋಗಿ’ ಎಂದು ಹೆಂಡತಿಯರು ಹೊಸ ಡಿಮಾಂಡ್ ಇಡುತ್ತಿ ದ್ದರು. ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಪ್ರ್ಯಾಕ್ಟೀಸ್ ಮಾಡುತ್ತಿದ್ದಿರಬಹುದು ಎಂದು ಯಾರೂ ತಪ್ಪು ಭಾವಿಸುತ್ತಿರಲಿಲ್ಲ.
೧೩. ಸ್ಪರ್ಧೆಯಲ್ಲಿ ಗೆದ್ದು ಹೇರಳ ಹಣ ಬಾಚಲು, ಹೆಂಗಸರು ಭಾರ ಹೊರುವ ಹಮಾಲಿಗಳನ್ನು(ತಾತ್ಕಾಲಿಕ) ಗಂಡನನ್ನಾಗಿ
ಇಟ್ಟುಕೊಳ್ಳುತ್ತಿದ್ದರು.
೧೪. ‘ಹೆಂಡತಿಯನ್ನು ಹೊರುವ ಸುಖ ಗೊತ್ತೇ ಇರಲಿಲ್ಲ’ ಎಂದು ಹಂಸಲೇಖ ಹೊಸ ಹಾಡು ಬರೆಯುತ್ತಿದ್ದರು.
೧೫.ಎಲ್ಲ ಹೆಂಗಸರೂ ಬೇರೆಯವರನ್ನು ನೋಡಿ, ‘ನೋಡ್ರಿ, ಅವರು ಎಷ್ಟು ಚೆನ್ನಾಗಿ ತಮ್ಮ ಹೆಂಡತಿಯನ್ನು ಎತ್ತಿಕೊಂಡಿದ್ದಾರೆ,
ನೀವೂ ಇದೀರಿ’ ಎಂದು ತಮ್ಮ ಗಂಡಂದಿರನ್ನು ಛೇಡಿಸುತ್ತಿದ್ದರು.
೧೬. ಮದುವೆ ಮಂಟಪದಲ್ಲಿ ನಿಂತವರನ್ನು ನೋಡಿ ‘ಮತ್ತೊಬ್ಬ ಹೊಂಡಕ್ಕೆ ಬಿದ್ದ’ ಎಂದು ಛೇಡಿಸುವ ಬದಲು, ‘ಬೆನ್ನಿಗೆ ಬಿತ್ತು ಬೇತಾಳ’ ಎಂದು ಹೇಳುತ್ತಿದ್ದರು.
೧೭.ಅರವತ್ತು ವರ್ಷಕ್ಕೇ ಗಂಡಸರೆಲ್ಲ ಗೂನು ಬೆನ್ನಿನವರಾಗುತ್ತಿದ್ದರು.
೧೮.‘ಸಂಸಾರದ ಭಾರ’ ಎಂಬ ಪದಕ್ಕೆ ‘ಪದಬ್ರಹ್ಮ’ ಜಿ.ವೆಂಕಟಸುಬ್ಬಯ್ಯ ಬೇರೆ ಅರ್ಥ ಬರೆದಿರುತ್ತಿದ್ದರು.
೧೯. ಹೆಂಡತಿ ಹೊತ್ತೊಯ್ಯುವ ಸ್ಪರ್ಧೆ ವಿರೋಧಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ ಮಾಡುತ್ತಿದ್ದರು.
೨೦.ದಢೂತಿ ಹೆಂಡತಿ ಹೊತ್ತೊಯ್ಯುವ ಗಂಡನ ಸ್ಥಿತಿ ನೋಡಲಾಗದೇ, ಪ್ರಾಣಿದಯಾ ಸಂಘದವರು ಕೋರ್ಟಿಗೆ ಹೋಗುತ್ತಿದ್ದರು.
೨೧. ಈ ಸ್ಪರ್ಧೆಯಲ್ಲಿ ಭಾಗವಹಿಸುವ ಹೆಂಡತಿಯರು, ಮತ್ತಷ್ಟು ಸ್ಲಿಮ್ ಆಗಿ ಕಾಣಲು ಮೇಕಪ್ ಮಾಡುತ್ತಿರಲಿಲ್ಲ, ಒಡವೆಗಳನ್ನೂ ಧರಿಸುತ್ತಿರಲಿಲ್ಲ.
೨೨. ವೇಟ್ ಲಿಫ್ಟರ್‌ಗಳಿಗೆ ‘ಹೆಂಡತಿ ಎತ್ತಿದಂತಲ್ಲ’ ಎಂದು ಕಿವಿ ಮಾತು ಹೇಳುತ್ತಿದ್ದರು.
೨೩. ಈ ಸ್ಪರ್ಧೆಯಲ್ಲಿ ಭಾಗವಹಿಸಿ ಸೋತ ಗಂಡನಿಗೆ ಹೆಂಡತಿ ಸದಾ ‘ಹೆಂಡತಿಯನ್ನು ಹೊತ್ತುಕೊಳ್ಳಲು ಬಾರದ ಗಂಡಸು’
ಎಂದು ಹಿಡಿಶಾಪ ಹಾಕುತ್ತಿದ್ದಳು.
೨೪.ಎಲ್ಲ ಗಂಡಸರು ಪ್ರೀತಿಯನ್ನು ಕೆಜಿಯಲ್ಲಿ ಲೆಕ್ಕ ಹಾಕುತ್ತಿದ್ದರು.
೨೫.ಭಾರವಾದ ಹೆಂಡತಿಯನ್ನು ಹೆಗಲ ಮೇಲೆ ಹೊತ್ತು ಸ್ಪರ್ಧೆಯಲ್ಲಿ ಗೆದ್ದವರಿಗೆ ‘ಧರತಿ ಎತ್ತಿದ ಭೂಪತಿ!’ ಎಂದು ‘ವಿಶ್ವವಾಣಿ’ಯಲ್ಲಿ ಶೀರ್ಷಿಕೆ ಪ್ರಕಟವಾಗುತ್ತಿತ್ತು.

ಹೆಲಿಕಾಪ್ಟರ್ ಪೇರೆಂಟ್
ಇತ್ತೀಚಿನ ದಿನಗಳಲ್ಲಿ ‘ಹೆಲಿಕಾಪ್ಟರ್ ಪೇರೆಂಟ್’ ಎಂಬ ಪದ ಹೆಚ್ಚಾಗಿ ಬಳಕೆಯಾಗುತ್ತಿರುವುದನ್ನು ಗಮನಿಸಿರಬಹುದು. ಇದಕ್ಕೆ ಕಾರಣ ಹೆಲಿಕಾಪ್ಟರ್ ಪೇರೆಂಟ್‌ಗಳು ಗಣನೀಯವಾಗಿ ಹೆಚ್ಚಾಗುತ್ತಿರುವುದು. ಅಷ್ಟಕ್ಕೂ ಹೆಲಿಕಾಪ್ಟರ್ ಪೇರೆಂಟ್ ಅಂದರೆ ಯಾರು ? ತಂದೆ
– ತಾಯಂದಿರು ಸದಾ ತಮ್ಮ ಮಕ್ಕಳ ತಲೆ ಮೇಲೆ ಸದಾ ಸುತ್ತುತ್ತಾ ಇರುತ್ತಾರಲ್ಲ, ಅವರೇ ಹೆಲಿಕಾಪ್ಟರ್ ಪೇರೆಂಟ್.

ತಮ್ಮ ಮಕ್ಕಳ ಮೇಲೆ ಯಾವತ್ತೂ ನಿಗಾ ಇಟ್ಟಿರುವವರು, ಅವರ ತಲೆ ತಿನ್ನುವವರು, ತಮ್ಮ ಮಕ್ಕಳ ಬಗ್ಗೆ ವಿಪರೀತ ಕಾಳಜಿ ವಹಿಸುವ ವರನ್ನು ಹೆಲಿಕಾಪ್ಟರ್ ಪೇರೆಂಟ್ ಎಂದು ಕರೆಯುತ್ತಾರೆ. ಒಂದೇ ಮಗ ಅಥವಾ ಮಗಳು ಇರುವ ತಂದೆ-ತಾಯಂದಿರು ಹೆಲಿಕಾಪ್ಟರ್ ಪೇರೆಂಟ್ ಆಗಿರುತ್ತಾರೆ.

ಹಾಗೆ ನೋಡಿದರೆ, ಇದು ಹೊಸ ಪದವೇನೂ ಅಲ್ಲ. ಸುಮಾರು ಐವತ್ತು ವರ್ಷಗಳ ಹಿಂದೆಯೇ ವೈದ್ಯ ಸಾಹಿತಿಯೊಬ್ಬ Mother hovers over me like a helicopter… ಎಂದು ಬರೆದಿದ್ದ. ಆಗ ಈ ಪದ ಅಷ್ಟಾಗಿ ಎಲ್ಲರ ಗಮನ ಸೆಳೆದಿರಲಿಲ್ಲ. ಆದರೆ 2000 ನಂತರ ಈ ಪದಬಳಕೆಗೆ ಬಂದಿತು. ಆ ದರಲ್ಲೂ ಕಳೆದ ಹತ್ತು ವರ್ಷಗಳಲ್ಲಿ ಪತ್ರಿಕೆಗಳ ಶೀರ್ಷಿಕೆಗಳಲ್ಲಿ ಇದು ವ್ಯಾಪಕವಾಗಿ ಬಳಕೆಯಾಗಲಾ ರಂಭಿಸಿತು.

ಯಾವುದೇ ಪದವಾಗಲಿ ಅದು ಏಕಾಏಕಿ ಚಾಲ್ತಿಗೆ ಬರುವುದಿಲ್ಲ. ಸಾಮಾಜಿಕ ಒತ್ತಾಸೆ ಇಲ್ಲದೇ ಯಾವ ಪದವೂ ಬಳಕೆಗೆ ಬರುವುದಿಲ್ಲ. ಎಲ್ಲರೂ ಆ ಕ್ರಿಯೆಯಲ್ಲಿ ತೊಡಗಿದ್ದರಿಂದ ‘ಸಾಮಾಜಿಕ ಅಂತರ’ ಅಥವಾ Social Distancing ಪದ ಬಹುಬೇಗ ಜಗತ್ತಿನೆಡೆ ಚಲಾವಣೆಗೆ ಬರಲು ಕಾರಣವಾಯಿತು. ಒತ್ತಾಸೆಯಿಲ್ಲದೇ ಯಾವ ಪದವೂ ಬಳಕೆಗೆ ಬರುವುದಿಲ್ಲ.

ಅದೇ ರೀತಿ ಹೆಲಿಕಾಪ್ಟರ್ ಪೇರೆಂಟ್. ಇತ್ತೀಚಿನ ದಿನಗಳಲ್ಲಿ ಒಂದೇ ಮಗುವಿನ ಪಾಲಕರ ಸಂಖ್ಯೆ ಹೆಚ್ಚುತ್ತಿರುವುದರಿಂದ, ಅವರು ತಮ್ಮ ಮಗುವನ್ನು ಅತಿಯಾಗಿ ಪ್ರೀತಿಸುವುದರಿಂದ ಅಥವಾ ಅವರ ಬಗ್ಗೆ ಕಾಳಜಿವಹಿಸುವುದರಿಂದ ಈ ಪದ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಚೀನಾದಂಥ ದೇಶದಲ್ಲಿ ಒಂದೇ ಮಗು ಕಾನೂನು ಬಂದ ನಂತರ, ಈ ಪದ ಬಳಕೆ ಸಾಮಾನ್ಯವಾಯಿತು.

ಕಳೆದ ಹತ್ತು ವರ್ಷಗಳಲ್ಲಿ ತಂದೆ – ತಾಯಿ ಆದವರೆಲ್ಲ ಹೆಲಿಕಾಪ್ಟರ್ ಪೇರೆಂಟ್‌ಗಳೇ. ಆದರೆ ಅವರಿಗೆ ಇದು ಗೊತ್ತಿಲ್ಲ. ‘ಸಾಮಾಜಿಕ ಅಂತರ’ ಪದ ರಾತ್ರೋ ರಾತ್ರಿ ಜಗತ್ತಿನೆಡೆ ಪರಿಚಿತವಾಗಿ, ಬಳಕೆಯಾದರೆ, ಹೆಲಿಕಾಪ್ಟರ್ ಪೇರೆಂಟ್ ಪದ ಬಳಕೆಗೆ ಬರಲು ಐವತ್ತು ವರ್ಷಗಳುಬೇಕಾದವು. ಕೆಲವು ಪದಗಳು ಚಾಲ್ತಿಗೆ ಬರದೇ, ಯಾಕೆ ಪದಕೋಶದಲ್ಲಿಯೇ ಶಾಶ್ವತವಾಗಿ ಉಳಿದುಬಿಡುತ್ತವೆ ಎಂಬುದು ಗೊತ್ತಾಯಿತಲ್ಲ?!

ಹೆಂಡತಿಯ ಡ್ರೈವಿಂಗ್
ಹೆಂಡತಿ: ರೀ, ಇಷ್ಟು ದಿನವಾಯಿತು, ಒಂದು ದಿನವಾದರೂ ನೀವು ನನ್ನ ಡ್ರೈವಿಂಗ್ ಬಗ್ಗೆ ಹೊಗಳಿದ್ದೀರಾ ?

ಗಂಡ: ಇಲ್ಲ, ಈಗ ಏನಾಯ್ತು ?
ಹೆಂಡತಿ: ನೋಡಿ, ನನ್ನ ಡ್ರೈವಿಂಗ್ ಬಗ್ಗೆ ಟ್ರಾಫಿಕ್ ಪೊಲೀಸ್ ಪ್ರಶಂಸೆ ವ್ಯಕ್ತಪಡಿಸಿದ್ದಾನೆ.. ಏನಂತ ಬರೆದಿದ್ದಾನೆ.. ಸ್ವಲ್ಪ ನೋಡಿ..
ವಿಂಡೋ ಗಾಜಿನ ಮೇಲೆ ಅಂಟಿಸಿದ ಚೀಟಿಯನ್ನು ಹೆಂಡತಿ ಗಂಡನಿಗೆ ತೋರಿಸಿದಳು. ಅದರ ಮೇಲೆ ಬರೆದಿತ್ತು – ‘ಪಾರ್ಕಿಂಗ್ ಫೈನ್’
ರಾಹುಲ್ ದ್ರಾವಿಡ್ ಮತ್ತು ಸೋಲು !

ರೀಡರ್ಸ್ ಡೈಜೆ ಪತ್ರಿಕೆ ಆರು ಮಂದಿ ಗಣ್ಯ ಸಾಧಕರಿಗೆ ಒಂದು ಪ್ರಶ್ನೆಯನ್ನು ಕೇಳಿತ್ತು – ‘ಮೊದಲ ಪ್ರಯತ್ನದಲ್ಲಿ ನೀವು ಯಶಸ್ಸನ್ನು ಗಳಿಸಲಿಲ್ಲ. ಆಗ ನಿಮಗೆ ಏನನಿಸಿತು ?’ ಆ ಆರು ಮಂದಿ ಪೈಕಿ ನಮ್ಮವರೇ ಆದ ಕ್ರಿಕೆಟರ್ ರಾಹುಲ್ ದ್ರಾವಿಡ್ ಅವರಿಗೂ ಈ ಪ್ರಶ್ನೆ ಕೇಳಲಾಗಿತ್ತು.

ಈ ಪ್ರಶ್ನೆಗೆ ದ್ರಾವಿಡ್ ಹೇಳಿದ್ದು – ‘ನಾನು ಯಶಸ್ಸು ಕಂಡಿದ್ದಕ್ಕಿಂತ ಸೋತಿದ್ದೇ ಜಾಸ್ತಿ. ನಾನು ವಿಜಯಶಾಲಿಗಿಂತ ಹೆಚ್ಚು ಪರಾಭವಶಾಲಿ. ಹೀಗಾಗಿ ನಾನು ಯಶಸ್ಸಿಗಿಂತ ಸೋಲಿನ ಬಗ್ಗೆ ಮಾತಾಡಲು ಹೆಚ್ಚು ಅರ್ಹ ವ್ಯಕ್ತಿ. ನಾನು ಸೋಲನ್ನು ಚೆನ್ನಾಗಿ ಅರ್ಥ ಮಾಡಿಕೊಂಡು, ಅದರ ಮರ್ಮವನ್ನು  ರಿಯಲು ಪ್ರಯತ್ನಿಸಿದ್ದರಿಂದ ನನಗೆ ಯಶಸ್ಸು ಒಲಿಯುತ್ತಾ ಬಂದಿತು.

ಸೋಲು ಎದುರು ನಿಂತಾಗ ಅದನ್ನು ಒಲಿಸಿಕೊಂಡು, ಅದರ ಜತೆ ಹೆಜ್ಜೆ ಹಾಕುತ್ತಾ ಕ್ರಮೇಣ ಅದರಿಂದ ದೂರ ಹೋಗುವುದು ಹೇಗೆ ಎಂಬುದನ್ನು ತಿಳಿಯಬೇಕು. ಒಂದೇ ಸೋಲಿಗೆ ಧೃತಿಗೆಟ್ಟು ಹತಾಶರಾಗುವುದಲ್ಲ. ಅಂಥವರು ಒಮ್ಮೆ ಯಶಸ್ವಿಯಾದರೂ ನಂತರ ಸೋಲುತ್ತಾರೆ. ಗೆಲುವು ಕಲಿಸುವುದಕ್ಕಿಂತ ಸೋಲು ಕಲಿಸುವ ಪಾಠವೇ ಪರಿಣಾಮಕಾರಿ ಯಾಗಿರುತ್ತದೆ.’

ಕ್ಲೀಷೆಗಳೆಂದರೆ ವೃದ್ಧ ನಟಿಯಿದ್ದಂತೆ !
ನೀವು ಏನು ಹೇಳಲಿದ್ದೀರಿ ಎಂಬುದು ವಾಕ್ಯದ ಆರಂಭದ ಗೊತ್ತಾಗಬಾರದಂತೆ. ಹಾಗಂತ ವಾಕ್ಯ ಮುಗಿದಾಗ ಗೊತ್ತಾಗಲೇಬೇಕಂತೆ. ಕೆಲವರು ಬರೆದರೆ ಅವರ ವಾಕ್ಯ ರಚನೆ ಹೀಗೆ ಆರಂಭವಾಗಿ, ಹೀಗೇ ಕೊನೆಗೊಳ್ಳುತ್ತದೆ ಎಂದು ಗೊತ್ತಾಗುತ್ತದಂತೆ. ಅಂಥವರು ಕ್ಲೀಷೆಗಳನ್ನು ಹೆಚ್ಚು ಬಳಸುತ್ತಾರಂತೆ. ಕ್ಲೀಷೆಗಳೆಂದರೆ (cliche) ಸವಕಲು ಪದಗಳು. ಆರಂಭದಲ್ಲಿ ಕ್ಲೀಷೆಗಳೂ ಸೊಗಸಾಗಿಯೇ ಇದ್ದವು. ಎಲ್ಲರೂ ಬಳಸಿ, ಬಳಸಿ ಅವು ಸವಕಲಾಗಿವೆ. ಇಂಥ ಪದಗಳನ್ನು ವಾಕ್ಯಗಳಲ್ಲಿ ಹೆಚ್ಚು ಬಳಸಿದರೆ ಬರಹ ಸಪ್ಪೆಯೆನಿಸುತ್ತದೆ. ಓದು ನೀರಸವೆನಿಸುತ್ತದೆ.

ಜೇಮ್ಸ್ ರೋಜರ್ಸ್ ಎಂಬಾತ ಇಂಗ್ಲೀಷಿನಲ್ಲಿ The Dictionary Of Cliches ಎಂಬ ಸೊಗಸಾದ ಪುಸ್ತಕವನ್ನು ಬರೆದಿದ್ದಾನೆ. ಸುಮಾರು 370 ಪುಟಗಳ ಈ ಪುಸ್ತಕವನ್ನು ಓದಿದರೆ, ಎಲ್ಲ ಪದಗಳೂ ಕ್ಲೀಷೆಗಳೇನೋ ಎಂಬ ಅನುಮಾನ ಕಾಡತೊಡಗುತ್ತದೆ. ಕ್ಲೀಷೆಗಳೆಂದರೆ ತಿಗಣೆಗಳಿದ್ದಂತೆ, ಅವು ವಾಕ್ಯದ ಸತ್ವವನ್ನೇ ಹೀರಿಬಿಡುತ್ತವೆ ಎಂದು ಆತ ಬರೆಯುತ್ತಾನೆ.

ಈ ಕೃತಿಯಲ್ಲಿ ರೋಜರ್ಸ್ By Word Of Mouth, By Leaps and Bound, Eagle Eye, Days are numbered, Believe it or not ಪದಗಳನ್ನೂ ಕ್ಲೀಷೆ ಎಂದು ಪಟ್ಟಿ ಮಾಡಿದ್ದಾನೆ. ಈ ಎಲ್ಲ ಪದಗಳನ್ನೂ ಬಳಸಲೇ ಬೇಡಿ ಎಂದು ತಾಕೀತು ಮಾಡಿ ದ್ದಾನೆ. You have to avoid cliches like plague ಎಂಬುದು ಸಹ ಕ್ಲೀಷೆಯೇ. ಕ್ಲೀಷೆಗಳೆಂದರೆ ವೃದ್ಧ ನಟಿಯಿದ್ದಂತೆ. ಒಂದು ಕಾಲದಲ್ಲಿ ಅವಳು ಸುಂದರಿಯಾಗಿದ್ದಳು. ಎಲ್ಲರೂ ಅವಳನ್ನೇ ಬಯಸುತ್ತಿದ್ದರು.

ವಯಸ್ಸಾಗುತ್ತಿದ್ದಂತೆ ಅವಳ ವರ್ಚಸ್ಸು ಕುಂದುತ್ತಾ ಅನಾಕರ್ಷಣೀಯವಾದಂತೆ ಈ ಕ್ಲೀಷೆಗಳು. ವೃದ್ಧ ನಟಿಗೆ ನಾಯಕಿ ಪಾತ್ರ ಕೊಡಲು ಸಾಧ್ಯವೇ? ಹಾಗೆ ಈ ಕ್ಲೀಷೆಗಳು! ಕೆಲವು ಪದಗಳಿಗೂ, ವಾಕ್ಯಗಳಿಗೂ expiry dates ಇರುತ್ತವೆ. ಆದರೂ ನಾವು ಅವನ್ನು ಬಳಸುತ್ತಿರು ತ್ತೇವೆ.

ಓಶೋ ಹೇಳಿದ ಪ್ರಸಂಗ
ಪೋಲಿ ಜೋಕು ಹೇಳುವುದರಲ್ಲಿ ಓಶೋ ನಿಷ್ಣಾತರು. ಅವರ ಪ್ರವಚನಗಳಲ್ಲಿ ಅಂಥ ಜೋಕುಗಳಿಗೆ ಕೊರತೆ ಇರಲಿಲ್ಲ. ಅದರಲ್ಲೂ ಓಶೋ ತುಂಬಿದ ಸಭೆಯಲ್ಲಿ ಅವರು ಸೆಕ್ಸ್ ಜೋಕುಗಳನ್ನು ಹೇಳುತ್ತಿದ್ದರು. ಇಂಗ್ಲಿಷಿನ ಫಕ್ ಎಂಬ ಪದವನ್ನು ಬೇರೆ ಬೇರೆ ರೀತಿಯಲ್ಲಿ ಹೇಳಿದಾಗ ಅರ್ಥಗಳು ಹೇಗೆ ಬದಲಾಗುತ್ತಾ ಹೋಗುತ್ತವೆ ಎಂಬುದನ್ನು ಅತ್ಯಂತ ಸ್ವಾರಸ್ಯವಾಗಿ ಹೇಳಿದ್ದರು.

ಓಶೋ ಹೇಳಿದ ಒಂದು ತಮಾಷೆಯ ಪ್ರಸಂಗ. ಆಗ ತಾನೇ ಪರಿಚಿತರಾದವರ ನಡುವಿನ ಸಂಭಾಷಣೆ.

ಒಬ್ಬ – ಅದೆಲ್ಲ ಸರಿ, ನಿನ್ನ ಊರು ಯಾವುದು ?

ಇನ್ನೊಬ್ಬ – ಮೆಕ್ಸಿಕೋ
ಒಬ್ಬ – ಹೌದಾ ? ಮೆಕ್ಸಿಕೊವನ್ನು ಯಾಕೆ ಬಿಟ್ಟೆ?
ಇನ್ನೊಬ್ಬ – ಅದೂ ಒಂದು ದೇಶವಾ? ಬರೀ ಸೂಳೆಯರು ಮತ್ತು ಫುಟ್ಬಾಲ್ ಆಟಗಾರರಿಂದ ತುಂ ಬಿರುವ ದೇಶವದು.

ಒಬ್ಬ – ನನ್ನ ಹೆಂಡತಿಯೂ ಮೆಕ್ಸಿಕೋದವಳೇ !

ಇನ್ನೊಬ್ಬ – ಹಾಗಾದರೆ ಅವಳು ಯಾವ -ಟ್ಬಾಲ್ ತಂಡಕ್ಕೆ ಆಡುತ್ತಾಳೆ ?!