ಸಾಧನೆ
ಕಾರ್ತಿಕ್ ಜೆ.ಎಸ್
ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ‘ಒಲಿಂಪಿಕ್ಸ್’ ಪ್ರದರ್ಶನ ಮತ್ತು ಸಮಾವೇಶ ಕೇಂದ್ರದಲ್ಲಿ, 69 ಕೆ.ಜಿ ವಿಭಾಗದ ಮಹಿಳೆಯರ ವೇಟ್ ಲಿಫ್ಟಿಂಗ್ ಪಂದ್ಯಾವಳಿ ನಡೆಯುತ್ತಿರುತ್ತದೆ.
ತಿಳಿ ನೀಲಿ ಬಣ್ಣದ ಜೆರ್ಸಿ ತೊಟ್ಟ 25ರ ಹರೆಯದ ತರುಣಿ ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಾ ಬಾರ್ಬೆಲ್ ಎದಿರು ಬಂದು ನಿಲ್ಲುತ್ತಾಳೆ. ಸ್ನ್ಯಾಚ್ ಸುತ್ತಿನಲ್ಲಿ 110 ಕೆ.ಜಿ, ಕ್ಲೀನ್ ಹಾಗೂ ಜೆರ್ಕ್ ಸುತ್ತಿನಲ್ಲಿ 130 ಕೆ.ಜಿ ಎತ್ತಿ, ಒಟ್ಟಾರೆಯಾಗಿ 240 ಕೆ.ಜಿ ಎತ್ತುವ ಮೂಲಕ ಮೂರನೇ ಸ್ಥಾನಿಯಾಗಿ, ಕಂಚಿನ ಪದಕ ಗಳಿಸುತ್ತಾಳೆ. ಇತರ ಭಾರತೀಯ ಕ್ರೀಡಾಳುಗಳ ನೀರಸ ಪ್ರದರ್ಶನ ನೋಡಿ ನಿರಾಶೆಯ ಕತ್ತಲಲ್ಲಿ ಮುಳುಗಿದ್ದ ಕ್ರೀಡಾಭಿಮಾನಿಗಳ ಮನದಲ್ಲಿ ಬೆಳಕು ಮೂಡುತ್ತದೆ.
ವಿಷಯ ತಿಳಿದ, ಆಗಿನ ಪ್ರಧಾನಿ ‘ಅಟಲ್ ಬಿಹಾರಿ ವಾಜಪೇಯಿ’ಯವರು ಆಕೆಯನ್ನು ‘ಭಾರತ್ ಕಿ ಬೇಟಿ’ ಎಂದು ಸಂಬೋಧಿಸಿ,
ಅಭಿನಂದಿಸುತ್ತಾರೆ. ಆಕೆ ಮತ್ಯಾರೂ ಅಲ್ಲ, ಒಲಿಂಪಿಕ್ಸ್ನಲ್ಲಿ ಪದಕ ಪಡೆದ ಪ್ರಥಮ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರಳಾದ ‘ಕರ್ಣಂ ಮಶ್ವರಿ’. ಕರ್ಣಂ ಮಲ್ಲೇಶ್ವರಿ, 1575ರ ಜೂನ್ 1 ರಂದು ಆಂಧ್ರಪ್ರದೇಶದ ಶ್ರೀಕಾಕುಳಂ ಜಿಯ ವೂಸವನಿ ಪೇಟ ಗ್ರಾಮದಲ್ಲಿ ಜನಿಸಿದಳು.
ನಾಲ್ಕು ಮಂದಿ ಸಹೋದರಿಯರಿಂದ ಕೂಡಿದ ತುಂಬು ಕುಟುಂಬ ಆಕೆಯದು. ಅದರಲ್ಲೂ ಆಕೆಯ ಮೂವರು ಸಹೋದರಿ ಯರು ಕ್ರೀಡಾಪಟುಗಳು ಎಂಬುದು ವಿಶೇಷ. ಒಮ್ಮೆ ಕರ್ಣಂ, ತನ್ನ 12ನೇ ವಯಸ್ಸಿನಲ್ಲಿ, ಮನೆ ಸಮೀಪದ ಜಿಮ್ಗೆ ತೆರಳುತ್ತಾಳೆ. ಅಲ್ಲಿನ ಕೋಚ್ ಬಳಿ ವೇಟ್ ಲಿಫ್ಟಿಂಗ್ ಹೇಳಿ ಕೊಡಬೇಕೆಂದು ಕೇಳಿಕೊಳ್ಳುತ್ತಾರೆ. ಆತನು, ‘ತೆಳ್ಳಗಿನ ಶರೀರ ಹೊಂದಿದ ನೀನು ಭಾರ ಹೇಗೆ ಎತ್ತಬ?’ ಎಂಬ ವ್ಯಂಗ್ಯಭರಿತ ಮಾತಿನಿಂದ ಆಕೆಯನ್ನು ಚುಚ್ಚಿ, ತರಬೇತಿ ನೀಡಲು ನಿರಾಕರಿಸುತ್ತಾನೆ.
ಅಪಮಾನಿತಳಾದ ಆಕೆ, ತಾನು ಒಂದಲ್ಲ ಒಂದು ದಿನ ವೇಟ್ ಲಿಫ್ಟಿಂಗ್ ಕಲಿಯಲೇಬೇಕೆಂಬ ದೃಢ ನಿರ್ಧಾರ ಕೈಗೊಳ್ಳುತ್ತಾಳೆ. 1990ರ ಏಷ್ಯನ್ ಗೇಮ್ಸ ಪೂರ್ವಭಾವಿಯಾಗಿ ಬೆಂಗಳೂರಿನಲ್ಲಿ ಜರುಗಿದ ರಾಷ್ಟ್ರೀಯ ತರಬೇತಿ ಶಿಬಿರ, ಆಕೆಯ ಜೀವನಕ್ಕೆ ಬಹು ದೊಡ್ಡ ತಿರುವು ನೀಡುತ್ತದೆ. ಅಲ್ಲಿಗೆ ಆಕೆ, ತನ್ನ ಸಹೋದರಿ ರಾಷ್ಟ್ರೀಯ ಚಾಂಪಿಯನ್ ವೇಟ್ ಲಿಫ್ಟರ್ ಕೃಷ್ಣಕುಮಾರಿ ಯೊಡನೆ ಪ್ರೇಕ್ಷಕಳಾಗಿ ಆಗಮಿಸುತ್ತಾಳೆ. ಅಲ್ಲಿ ನಡೆಯುತ್ತಿದ್ದ ತರಬೇತಿ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾಳೆ. ಆಗ ಅಲ್ಲಿದ್ದ, ಭಾರತೀಯ ವೇಟ್ ಲಿಫ್ಟಿಂಗ್ ತಂಡದ ವಿದೇಶಿ ತರಬೇತುದಾರನಾದ ಮಾಜಿ ವಿಶ್ವ ಚಾಂಪಿಯನ್ ವೇಟ್ ಲಿಫ್ಟರ್ ‘ಲಿಯೋನಿಡ್ ತರನಿಂಕೋ’ ಕಣ್ಣಿಗೆ ಬೀಳುತ್ತಾಳೆ.
ಆಕೆಯ ಕುತೂಹಲ ಗಮನಿಸಿದ ಆತ, ಹತ್ತಿರ ಕರೆದು, ಸಾಮರ್ಥ್ಯ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸುತ್ತಾನೆ ಮತ್ತು ಆಕೆಯ ಆಟದ ಮೇಲಿನ ಶ್ರದ್ಧೆ ಗುರುತಿಸಿ ೧೧ ತಿಂಗಳುಗಳ ಕಾಲ ನಿರಂತರವಾಗಿ ತರಬೇತಿ ನೀಡಿ ಪ್ರೋತ್ಸಾಹಿಸುತ್ತಾನೆ. ವೇಟ್ ಲಿಫ್ಟಿಂಗ್, ಪುರುಷರ ಕ್ರೀಡೆ ಎಂದೇ ಪರಿಗಣಿಸಲ್ಪಟ್ಟಿದ್ದ ಕಾಲವದು. ಆಗಿನ ‘ಪುರುಷ ಕೇಂದ್ರಿತ’ ಸಾಮಾಜಿಕ ಮನಸ್ಥಿತಿ ನಡುವೆಯೂ, ಆಕೆ ತನ್ನ ಗಮನವನ್ನು ಸಂಪೂರ್ಣವಾಗಿ ತರಬೇತಿ ಪಡೆಯಲು ಕೇಂದ್ರೀಕರಿಸುತ್ತಾಳೆ.
ವೇಟ್ ಲಿಫ್ಟಿಂಗ್ನಲ್ಲಿ ದೇಹ ತೂಕಕ್ಕೆ ಪ್ರಾಧಾನ್ಯತೆ ನೀಡುವುದು ಬಹಳ ಮುಖ್ಯ. ಅದಕ್ಕಾಗಿ, ಹೊರಗಿನ ಆಹಾರ ಸೇವನೆ
ಮಾಡದಿ ಲೆಂದು, ಹೋದ ಗ್ಯಾಸ್ಸ್ಟವ್ ತೆಗೆದುಕೊಂಡು ಹೋಗಿ, ಅಡಿಗೆ ಮಾಡಿಕೊಟ್ಟು, ನಿರಂತರವಾಗಿ ಪ್ರೋತ್ಸಾಹಿಸುತ್ತಿದ್ದ ಆಕೆಯ ತಾಯಿಯ ತ್ಯಾಗವೂ ಅಸಾಧಾರಣವಾದದ್ದು. 1990ರಲ್ಲಿ, ಕರ್ಣಂಗೆ ರಾಷ್ಟ್ರೀಯ ಜೂನಿಯರ್ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ನಲ್ಲಿ ಸ್ಪರ್ಧಿಸುವ ಅವಕಾಶ ದೊರಕುತ್ತದೆ.
ಅದರಲ್ಲಿ ರಾಷ್ಟ್ರೀಯ ದಾಖಲೆಯೊಂದಿಗೆ ಚಾಂಪಿಯನ್ ಶಿಪ್ ಪಟ್ಟ ತನ್ನದಾಗಿಸಿಕೊಳ್ಳುತ್ತಾಳೆ. ಆಗ ಆಕೆಯ ವಯಸ್ಸು ಕೇವಲ 15!. ನಂತರ ಕರ್ಣಂ ತಿರುಗಿ ನೋಡಿದ್ದೇ ಇಲ್ಲ. ದೇಶದ ಮಹಿಳೆಯರು ಒಲಂಪಿಕ್ಸ್ನಲ್ಲಿ ಸ್ಪರ್ಧಿಸುವುದೇ ದೊಡ್ಡ ವಿಷಯ ವಾಗಿತ್ತು. ‘ತುಂಬ ನಿರೀಕ್ಷೆ ಇಟ್ಟುಕೊಂಡರೆ ನಿರಾಶೆಯಾಗಬಹುದು’ ಎಂದು ಆಕೆಯ ಗಂಡ ಹೇಳಿದರೂ, ಛಲ ಬಿಡದೆ, 2000ರ ಸಿಡ್ನಿ ಒಲಿಂಪಿಕ್ಸ್ನಲ್ಲಿ ಭಾಗವಹಿಸಿ ಕಂಚಿನ ಪದಕ ಮುಡಿಗೇರಿಸಿಕೊಳ್ಳುತ್ತಾಳೆ. ‘ಕರ್ಣಂ’ ಪದಕ್ಕೆ ಸಂಸ್ಕೃತ ಭಾಷೆಯಲ್ಲಿ ‘ಘನತೆ’ ಎಂಬ ಅರ್ಥವೂ ಇದೆ. ಅಂತೆಯೇ, ತನ್ನ ಹೆಸರಿಗೆ ತಕ್ಕಂತೆ ಪದಕ ಗೆದ್ದು, ದೇಶವೇ ಸಂಭ್ರಮ ಪಡುವಂತೆ ಮಾಡಿದ ಹಿರಿಮೆ ಆಕೆಯದ್ದು.