ಅಭಿಪ್ರಾಯ
ಸಿಂಚನಾ ಎಂ.ಕೆ
21ನ ಶತಮಾನದಲ್ಲಿ ಅತೀವ ಕ್ರಿಯಾಶೀಲತೆಯಿಂದ ಕೂಡಿರುವ ಮಾನವ ಹಕ್ಕುಗಳ ಹೋರಾಟಗಾರರು, ಶಾಂತಿಪ್ರಿಯರು, ಬುದ್ಧಿಜೀವಿಗಳು, ಸೆಕ್ಯುಲರಿಸಂನ
ಚಾಂಪಿಯ ಉಪಸ್ಥಿತಿಯ ನಡುವೆಯೂ ಆಫ್ಘಾನಿಸ್ತಾನದಲ್ಲಿ ಮಾನವೀಯತೆಯ ಹತ್ಯೆ ನಡೆದಿದೆ ಎಂದರೆ ನೀವೆ ನಂಬಲೇಬೇಕು. ಒಂದಾನೊಂದು ಕಾಲದಲ್ಲಿ ಜಯಪಾಲ, ಆನಂದಪಾಲರಂತಹ ಪ್ರಜಾನುರಾಗಿ ಸಾಮ್ರಾಟರನ್ನು ಕಂಡಿದ್ದ ಆಫ್ಘಾನಿಸ್ತಾನ ರಾಷ್ಟ್ರ ಇಂದು ಭಯೋತ್ಪಾದಕರ ಕಪಿಮುಷ್ಟಿಯಲ್ಲಿ ಸಿಲುಕಿ ರೌರವ ನರಕವಾಗಿದೆ.
ಆಫ್ಘಾನಿಸ್ತಾನ ಇನ್ನುಮುಂದೆ ‘ಇಸ್ಲಾಮಿಕ್ ಎಮಿರೇಟ್ ಆಫ್ ಆಫ್ಘಾನಿಸ್ತಾನ್’ ಎಂದು ಕರೆಯಲ್ಪಡುವ ಮೂಲಕ ಭಯೋತ್ಪಾದಕರ ವಿಕ್ಟರಿಯಾಗಿ ಪ್ರಪಂಚಕ್ಕೆಲ್ಲಾ ಅತ್ಯುತ್ತಮ ಉಗ್ರರನ್ನು ರಫ್ತು ಮಾಡಲಿದೆ. 1996-2001ರ ಅವಧಿಯ ಮೊದಲ ಇನ್ನಿಂಗ್ಸ್ನ ಆಡಳಿತದಲ್ಲಿ ಪ್ರದರ್ಶಿಸಿರುವ ಕ್ರೌರ್ಯತೆಯ ಹಂತವನ್ನು ಮೀರಿ, ಅದರ ಪರಾಕಾಷ್ಠೆಯನ್ನು ತಲುಪಬಹುದಾದ ಎಲ್ಲಾ ಲಕ್ಷಣಗಳನ್ನು ಈಗಾಗಲೇ ತಮ್ಮ ಎರಡನ ಇನ್ನಿಂಗ್ಸ್ನ ಆರಂಭದಲ್ಲಿ ಸಾಬೀತುಪಡಿಸಿದ್ದಾರೆ ತಾಲಿಬಾನಿಗಳು. ಕಂಡ-ಕಂಡಲ್ಲಿ ಗುಂಡು ಹಾರಿಸುವ, ಸ್ತ್ರೀಯರನ್ನು ಬಲವಂತವಾಗಿ ವಿವಾಹ ಮಾಡಿಕೊಳ್ಳುವ ಹಾಗೂ ಲೈಂಗಿಕ ಗುಲಾಮರನ್ನಾಗಿ ಮಾಡಿಕೊಳ್ಳುವ, ಇಸ್ಲಾಂನ ನಿಯಮಗಳ ವಿರುದ್ಧವಾಗಿ ನಡೆದುಕೊಳ್ಳುವವರ ಘೋರ ಅಂತ್ಯವನ್ನು ಖಚಿತ ಪಡಿಸುವ ತಮ್ಮ ಆಡಳಿತ ವೈಖರಿಯಿಂದ ಇಡೀ ಜಗತ್ತನ್ನು ಬೆಚ್ಚಿಬೀಳಿಸಿದ್ದ ಶರಿಯಾ ಕಾನೂನನ್ನು ಮತ್ತೊಮ್ಮೆ ಜಾರಿಗೊಳಿಸಿದ್ದಾರೆ.
ಆಫ್ಘಾನಿಸ್ತಾನವನ್ನು ತಾಲಿಬಾನಿಸ್ತಾನವನ್ನಾಗಿ ಪರಿವರ್ತಿಸಿದ ನಂತರ ಪ್ರೆಸ್ ಕಾನರೆ ಮಾಡಿರುವ ಈ ಭಯೋತ್ಪಾದಕರು ತಾವು ಸ್ವಯಂ ಭಗವಂತನೇ ಏನೋ ಎಂಬಂತೆ ಎಲ್ಲರನ್ನೂ ಕ್ಷಮಿಸಿರುವುದಾಗಿ ಹೇಳಿದ್ದಾರೆ. ಸ್ತ್ರೀಯರಿಗೆ ಶರಿಯಾ ಕಾನೂನಿನಲ್ಲಿ ಹೊಂದಿರಬಹುದಾದ ಎಲ್ಲಾ ವಿಧದ ಸ್ವಾತಂತ್ರ್ಯವನ್ನು ನೀಡುವುದಾಗಿ ಹೇಳಿದ್ದಾರೆ. ಆದರೆ, ನಿಜವಾದ ಪ್ರಶ್ನೆಯಿರುವುದು ಶರಿಯಾ ಕಾನೂನಿನಡಿ ಸ್ತ್ರೀಯರಿಗೆ ಎಷ್ಟರಮಟ್ಟಿಗೆ ಸ್ವಾತಂತ್ರ್ಯವಿದೆಯೆಂಬುದು! ತಮ್ಮ ಮೊದಲ ಆಡಳಿತಾ ವಧಿಯಲ್ಲಿ ಶರಿಯಾ ಕಾನೂನಿನಲ್ಲಿ ಸ್ತ್ರೀಯರಿಗೆ ಎಷ್ಟರಮಟ್ಟಿಗೆ ಸ್ವಾತಂತ್ರ್ಯವಿತ್ತು ಎಂಬುದು ಶೇ.30ರಷ್ಟು ಸ್ತ್ರೀ ಸಾಕ್ಷಾರತಾ ಪ್ರಮಾಣವನ್ನು ಸಾಧಿಸಿರುವ ಆ ರಾಷ್ಟ್ರದ ಚಿಂತಾಜನಕ ಸ್ಥಿತಿಯಿಂದಲೇ ಅರಿವಾಗುತ್ತದೆ. ಇದರೊಂದಿಗೆ ಔದ್ಯೋಗಿಕ ಕ್ಷೇತ್ರಗಳಲ್ಲಿ ನಿಷೇಧಾಜ್ಞೆಯನ್ನು ಹೇರಿ ಸ್ತ್ರೀಯರ ಸಬಲೀಕರಣದ ಮಾರ್ಗವನ್ನು ಮುಚ್ಚಿದ್ದರು ಎಂಬುದು ಸ್ವಾತಂತ್ರ್ಯದ ಚಿತ್ರಣವನ್ನು ಸ್ಪಷ್ಟಪಡಿಸುತ್ತದೆ.
ಹಾಗಾದರೆ ಶರಿಯಾ ಕಾನೂನಿನಲ್ಲಿ ಸ್ತ್ರೀಯರಿಗಿರುವ ಸ್ವಾತಂತ್ರ್ಯದ ಹಕ್ಕುಗಳೇನು?
೧. ಬುರ್ಖಾ ಧರಿಸುವ ಹಕ್ಕು
೨. ಉದ್ಯೋಗ ಮಾಡದಿರುವ ಹಕ್ಕು
೩. ಮೇರುಧ್ವನಿಯಲ್ಲಿ ಮಾತನಾಡದಿರುವ ಹಕ್ಕು
೪. ಒಬ್ಬಂಟಿಯಾಗಿ ಹೊರಹೋಗದಿರುವ ಹಕ್ಕು
೫. ತಮ್ಮ ಪತಿಗೆ ಹಲವಾರು ಪತ್ನಿಯರನ್ನು ಹೊಂದಲು ಅವಕಾಶ ಮಾಡಿಕೊಡುವ ಹಕ್ಕು
೬. ಮೇಲಿನ ಹಕ್ಕುಗಳನ್ನು ಪಾಲಿಸದಿದ್ದರೆ ಶಿಕ್ಷೆಗೆ ಗುರಿಯಾಗುವ ಹಕ್ಕು.
ತಮ್ಮ ಗೆಲುವು ಖಚಿತವೆಂದು ತಿಳಿದುಕೊಂಡ ಮೇಲೆ 15ರಿಂದ 45 ವರ್ಷದೊಳಗಿನ ಆಫ್ಘನ್ ಸ್ತ್ರೀಯರ ಹೆಸರನ್ನು ಪಟ್ಟಿ ಮಾಡಿಕೊಂಡು, ತಮ್ಮ ಮುಂದಿನ ಶೋಷಣಾಕಾರ್ಯದ ಬ್ಲೂಪ್ರಿಂಟ್ ಅನ್ನು ಸಿದ್ಧಪಡಿಸಿಕೊಂಡಿದ್ದರು. ಇನ್ನು ಎಡೆ ವೈರಲ್ ಆಗಿರುವ ಸಾವಿರಾರು ಆಫ್ಘನ್ ಪ್ರಜೆಗಳು ಆತುರಾತುರವಾಗಿ ವಿಮಾನ ವೇರಿ ನಿರ್ಗಮನ ಮಾಡುತ್ತಿರುವ, ಅದರಿಂದ ಇಬ್ಬರು ಕೆಳಗೆ ಬಿದ್ದಿರುವ ಮನಕಲುಕುವ ದೃಶ್ಯದಲ್ಲಿ ಬಹುಪಾಲು ಪುರುಷ ವರ್ಗದವರೇ ಇರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಪಿವ್ ರಿಸರ್ಚ್ ಸೆಂಟರ್‌ನ ಸರ್ವೆಯೊಂದರ ಪ್ರಕಾರ ಶೇ.99ರಷ್ಟು ಆಫ್ಘನ್ ಪ್ರಜೆಗಳು ಶರಿಯಾ ಕಾನೂನಿನ ಪರವಾಗಿದ್ದಾರೆ ಎಂಬ ಸಂಗತಿ ಹೊರಬಿದ್ದಿದೆ.
80000 ಸಂಖ್ಯೆಯಲ್ಲಿದ್ದ ತಾಲಿಬಾನ್ ಸೇನೆಯು 300000 ಸಂಖ್ಯೆಯಲ್ಲಿದ್ದ ಆಫ್ಘನ್ ಸೇನೆಯ ವಿರುದ್ಧ ಇಷ್ಟು ಶೀಘ್ರವಾಗಿ ವಿಜಯ ಸಾಧಿಸಲು ಮುಖ್ಯ ಕಾರಣವೇನೆಂಬುದು ಈ ಸರ್ವೆಯ ಅಂಕಿ-ಅಂಶಗಳ ವ್ಯಕ್ತವಾಗಿದೆ. ಆದರೂ ಈಗ ಏಕೆ ದೇಶವನ್ನು ಬಿಟ್ಟು ಪಲಾಯನ ಮಾಡುತ್ತಿದ್ದಾರೆ? ಹಾಗೆಯೇ ಈ ಸರ್ವೆಯಲ್ಲಿ ಶೇ.೭೪ರಷ್ಟು ಭಾರತೀಯ ಮುಸಲ್ಮಾನರೂ ಸಹ ಶರಿಯಾ ಕಾನೂನಿನ ಪರವಾಗಿದ್ದಾರೆ ಎಂದು ತಿಳಿದು ಬಂದಿರುವ ಹಿನ್ನಲೆಯಲ್ಲಿ ಇಸ್ಲಾಮಿಕ್ ಕಟ್ಟರ್ ಪಂಥೀಯ ವಿಚಾರಧಾರೆಯ ಬೆಳವಣಿಗೆಯಿಂದ ತಾಲಿಬಾನ್ ಮನಸ್ಥಿತಿಗಳ ನಿರ್ಮಾಣವು ತೀವ್ರತರವಾಗಿ ಚಾಲ್ತಿಯಲ್ಲಿರುವುದು ಸ್ಪಷ್ಟವಾಗಿದೆ.
ಏನೇ ಇರಲಿ ಈಗ ತಾಲಿಬಾನ್‌ನ ಆಡಳಿತವನ್ನು ಎದುರಿಸುವುದಕ್ಕಿಂತ ದೊಡ್ಡ ಸಮಸ್ಯೆ ಬೇರೆ ಏನೂ ಇಲ್ಲವೆಂಬಂತೆ ಪಲಾಯನ ಮಾಡುತ್ತಿರುವ, ಆಶ್ರಯವನ್ನು ಬೇಡುತ್ತಿರುವ ಆಫ್ಘನ್ ಪ್ರಜೆಗಳಿಗೆ ಭ್ರಾತೃತ್ವ ಸಂದೇಶವನ್ನು ಸಾರುವ ಇಸ್ಲಾಮಿಕ್ ರಾಷ್ಟ್ರಗಳು ಸಹಾಯ ಹಸ್ತ ಚಾಚುವ ಬದಲು, ಬೇಲಿ-ಗೋಡೆಗಳನ್ನು
ನಿರ್ಮಾಣ ಮಾಡಿಕೊಳ್ಳುತ್ತಿರುವುದು ದುರಾದೃಷ್ಟಕರ. ರತದ ಮೇಲೆ ತಾಲಿ‘ಗನ್’ಗಳ ಸದ್ದು ಎಷ್ಟು ಪ್ರಭಾವ ಬೀರುತ್ತದೆ ಎಂಬುದನ್ನು ವಿಶ್ಲೇಷಿಸೋಣ.
ಮೊಟ್ಟ ಮೊದಲನೆಯದಾಗಿ ಹಿಂದೂಸ್ತಾನವೆಂಬ ಈ ಪುಣ್ಯಭೂಮಿಯಲ್ಲಿ ಜನ್ಮವೆತ್ತಿರುವ ನಾವೇ ನಿಜವಾದ ಭಾಗ್ಯಶಾಲಿಗಳು!
ಭಾರತೀಯರೆಲ್ಲರೂ ಒಟ್ಟಾಗಿ ತಾಲಿಬಾನಿಗಳ ಕೃತ್ಯವನ್ನು ಖಂಡಿಸುತ್ತಿದ್ದರೆ, ಕೆಲವು ತಾಲಿಬಾನ್ ಮನಸ್ಥಿತಿಯ ಬೌದ್ಧಿಕ ರಾಕ್ಷಸರು ಎಂದಿನಂತೆ ತಮ್ಮ ಹಳೆಯ ಶೈಲಿಯಲ್ಲಿ ಮಾನವೀಯತೆ, ಜಾತ್ಯಾತೀತತೆಯ ಮುಖವಾಡ ಹಿಡಿದು ಸತ್ಯವನ್ನೇ ಸುಳ್ಳು ಎಂದು ಸಾಬೀತು ಪಡಿಸುವಲ್ಲಿ ನಿರತರಾಗಿದ್ದಾರೆ. ಈ ರೀತಿ ತಾಲಿಬಾನಿ ಗಳನ್ನು ಸಮರ್ಥಿಸುತ್ತಿರುವ ಅಥವಾ ಉದ್ದೇಶಪೂರ್ವಕವಾಗಿ ಈ ವಿಷಯವನ್ನು ಬೇರೆಡೆ ತಿರುಗಿಸಲು ಪ್ರಯತ್ನಿಸುತ್ತಿರುವ ಭಯೋತ್ಪಾದನೆಯ ಪ್ರೇಮಿಗಳಿಗೆ ಭಾರತ ಸರಕಾರವು ವಿಶೇಷ ಪ್ಯಾಕೇಜ್ ಅನ್ನು ಘೋಷಿಸಿ ತಾಲಿಬಾನ್ ಸ್ವರ್ಗಕ್ಕೆ ಕಳುಹಿಸಬೇಕು.
ಭಾರತದಲ್ಲಿ ಅಸಹಿಷ್ಣುತೆ, ಡರ್ ಕಾ ಮಹೌಲ್ ಹೈ, ಸರ್ವಾಧಿಕಾರಿ ಧೋರಣೆ ಇದೆ ಎಂದು ಭಯ ಪಡುತ್ತಿರುವವರಿಗೆ ಮತ್ತೆ ಇಂತಹ ಸುವರ್ಣಾವಕಾಶ ದೊರೆಯದು. ತಾಲಿಬಾನಿಗಳ ಆಳ್ವಿಕೆಯಲ್ಲಿ ಎಷ್ಟು ಸ್ವಾತಂತ್ರ್ಯದ ಸುಖವಿದೆಯೆಂದರೆ ನೀವು ಕಂಡ-ಕಂಡಲ್ಲಿ ಗುಂಡು ಹಾರಿಸಬಹುದು, ಮಹಿಳೆಯರ ಶೋಷಣೆ ಮಾಡಬಹುದು ಮತ್ತು ಅವರನ್ನು ಬಲವಂತವಾಗಿ ವಿವಾಹವಾಗಬಹುದು, ವಿಮಾನದಲ್ಲೂ ಸಹ ಬಸ್‌ನಂತೆ ದೊಂಬಿಯಾಗಿ ಸಂಚರಿಸಬಹುದು ಇತ್ಯಾದಿ. ಮತ್ತೇಕೆ ತಡ ತೆರಳಿ, ನಿಮ್ಮ ಪ್ರೀತಿಯ ತಾಲಿಬಾನ್ ನಿಮ್ಮ ಆಗಮಿಕೆಗಾಗಿ ಕಾಯುತ್ತಿದೆ.
ನಿಮಗೆಲ್ಲ ಸರ್ವಾಧಿಕಾರಿ ನರೇಂದ್ರ ಮೋದಿಯವರ ಆಡಳಿತದಲ್ಲಿ ಭಾರತದಲ್ಲಿರಲು ಭಯವಾಗುತ್ತಿದೆಯಲ್ಲವೆ? ಹಾಗಾದರೆ ಶಾಂತಿಪ್ರಿಯ ತಾಲಿಬಾನಿಗಳ ಸುವ್ಯವಸ್ಥಿತ ಆಡಳಿತದಲ್ಲಿ ನೀವು ಆಫ್ಘಾನಿಸ್ತಾನದಲ್ಲಿ ಸುರಕ್ಷಿತವಾಗಿರಬಹುದು. ಆದರೆ ನೀವು ಎಂದಿಗೂ ಭಾರತವನ್ನು ಬಿಟ್ಟು ಹೋಗುವುದಿಲ್ಲ ಎಂಬುದು ಸತ್ಯಖಚಿತ ಮಾತು. ಏಕೆಂದರೆ ನಮಗಿಂತ ನಿಮಗೇ ಚೆನ್ನಾಗಿ ತಿಳಿದಿದೆ ಭಾರತವೇ ಈ ವಿಶ್ವದಲ್ಲಿರುವ ಸ್ವರ್ಗ. ಭಾರತವೇ ಸರ್ವ ಜನರಿಗೂ ಸುರಕ್ಷತೆಯನ್ನು
ಒದಗಿಸುವ ರಾಷ್ಟ್ರ. ಭಾರತವೇ ಅನಾದಿಕಾಲದಿಂದಲೂ ನಿರಾಶ್ರಿತರಿಗೆ ಆಶ್ರಯವನ್ನು ನೀಡುತ್ತಿರುವ ಮಾನವೀಯತೆಯ ಪರಾಕಾಷ್ಠತೆ ತಲುಪಿರುವ ರಾಷ್ಟ್ರ.
ಭಾರತ ಮಾತ್ರವೇ ನಿಮ್ಮ ಅತೀವ ಸ್ವಾತಂತ್ರ್ಯದ ದುರ್ಬಳಕೆ, ವಿಕೃತ ಮಾನಸಿಕತೆ, ದೇಶ ವಿರೋಧಿ ಕಾರ್ಯ ಚಟುವಟಿಕೆಗಳಿಗೆ ದಂಡನೆ ನೀಡದೆ ತನ್ನ
ಅತೀವ ಸಜ್ಜನಿಕೆಯ, ಅತೀವ ಪ್ರಜಾಪ್ರಭುತ್ವದಿಂದ ತನಗೆ ತಾನೇ ದಂಡನೆ ಕೊಟ್ಟಿಕೊಳ್ಳುತ್ತಿರುವುದು. ಇಂತಹ ರಾಷ್ಟ್ರಕ್ಕೆ ಆಪ್ಯಾಯಮಾನವಾಗಿ ಅಪಮಾನ ವನ್ನು ಮಾಡುತ್ತಿದ್ದೀರಲ್ಲ, ನಿಮ್ಮ ಆತ್ಮವು ಈ ಮಹಾಪಾಪದ ಭಾರವನ್ನು ಹೊರಲು ಸಾಧ್ಯವೆ? ತಾಲಿಬಾನಿಗಳ ಅಟ್ಟಹಾಸ ಶುರುವಾದಾಗಿನಿಂದಲೂ
ತಾಲಿಬಾನಿಗಳ ಮೇಲೆ ಒಂದೇ ಒಂದು ಆಕ್ರೋಶದ, ನಿಂದನಾತ್ಮಕ ಹೇಳಿಕೆಯನ್ನು ಕೊಡದ ಇವರು ಎಂದಿನಂತೆ ಇಸ್ಲಾಂ ಕಟ್ಟರ್ ಪಂಥೀಯ ವಿಚಾರವನ್ನು
ವೈಟ್ ವಾಶ್ ಮಾಡುವ ಕಾರ್ಯದಲ್ಲಿ ವ್ಯಸ್ತವಾಗಿದ್ದಾರೆ.
ಯಾವ ಹಿಂದುತ್ವವಾದಿ ಸಂಘಟನೆ ಗಳು ತಾಲಿಬಾನ್ ನಂತಹ ಭಯೋತ್ಪಾದಕ ಸಂಘಟನೆ ಗಳಂತೆ ಮೆಷಿನ್ ಗನ್, ರೈಫಲ್ಸ್ ಗಳಂತಹ ಅಪಾಯಕಾರಿ ಶಸ್ತ್ರಗಳನ್ನು ಹಿಡಿದು ಜಗತ್ತನ್ನು ಕಾಡುತ್ತಿವೆ? ಹೇಡಿಗಳ ಹಾಗೆ ಬಾಂಬ್ ದಾಳಿಯನ್ನು ಮಾಡಿ ನಿರ್ದೋಷಿಗಳ ಹತ್ಯೆ ಮಾಡಿವೆ? ಸ್ತ್ರೀಯರ ಮೇಲೆ ಶೋಷಣೆ ಮಾಡಿವೆ, ಅತ್ಯಾಚಾರ ನಡೆಸಿವೆ? ಮಾನವೀಯತೆಗೆ ಧಕ್ಕೆ ತರುವಂತಹ ಪ್ರಜಾಪ್ರಭುತ್ವ ವಿರೋಧಿ ಕಾರ್ಯಗಳಲ್ಲಿ ತೊಡಗಿವೆ? ಹಿಂದೂಗಳ ಅತಿಯಾದ ಔದಾರ್ಯವಂತಿಕೆಯ ಕಾರಣದಿಂದಾಗಿ ಇವರ ಈ ರೀತಿಯ ಅಸತ್ಯದ, ಅವಮಾನಕರ ಮಾತುಗಳಿಗೆ ಇದುವ ರೆವಿಗೂ ದಂಡನೆಯಾಗಿಲ್ಲ. ಇಂತಹ ತಾಲಿಬಾನ್ ಮನಸ್ಥಿತಿಯವರನ್ನು ಹೀಗೇ ಮುಂದುವರಿಯಲು ಬಿಟ್ಟರೆ ಭಾರತದಂದು ತಾಲಿಬಾನ್ ಸಂಘಟನೆ ನಿರ್ಮಾಣವಾಗುವ ಸಮಯ ದೂರವೇನಿಲ್ಲ.
ಭಯೋತ್ಪಾದನೆ, ಜಿಹಾದ್ ಎಂಬ ವೈರಸ್‌ನಿಂದ ಪ್ರಪಂಚವನ್ನು ಸಂರಕ್ಷಿಸಲು ಹಿಂದುತ್ವವೇ ವ್ಯಾಕ್ಸಿನ್. ಭಾರತ ಆಫ್ಘಾನಿಸ್ತಾನ ಆಗುವುದನ್ನು ತಡೆಯಬಲ್ಲ ಏಕೈಕ ಶಕ್ತಿ ’ಹಿಂದುತ್ವ’. ಭಾರತವೆಂಬ ರಾಷ್ಟ್ರ ಯಾವ ರಾಷ್ಟ್ರಗಳಲ್ಲೂ ಆಶ್ರಯ ಸಿಗದೆ ನೊಂದ ನಿರಾಶ್ರಿತರಿಗೂ ಆಶ್ರಯ ನೀಡಿದೆ. ಆದರೆ ಬಹುಸಂಖ್ಯೆಯಲ್ಲಿರುವ ಇಸ್ಲಾಮಿಕ್ ರಾಷ್ಟ್ರಗಳು ಈ ಕರ್ತವ್ಯವನ್ನು ನಿರ್ವಹಿಸಬೇಕಿದೆ. ಆದರೆ ಆ ರಾಷ್ಟ್ರಗಳೇ ವಿರೋಧವಾಗಿ ಆತಂಕದಲ್ಲಿರುವಾಗ ನಾವು ಹೇಗೆ ಅವರಿಗೆ ಆಶ್ರಯವನ್ನು
ನೀಡುವುದು? ಭಾರತ ಸರಕಾರವು ಇ-ವೀಸಾದ ಅವಕಾಶವನ್ನು ನೀಡಿ 6 ತಿಂಗಳವರೆಗೆ ಆಶ್ರಯ ನೀಡುವ ಸಹಾಯಕ್ಕೆ ಮುಂದಾಗಿದೆ.
ಭಾರತ ಸರಕಾರವು ಆಫ್ಘಾನಿಸ್ತಾನ್‌ನಲ್ಲಿ ನೆಲೆಸಿದ್ದ 120 ಭಾರತೀಯ ರಾಜತಾಂತ್ರಿಕರನ್ನು ಏರ್ ಲಿಫ್ಟ್ ಮಾಡಿದೆ. ಅಲ್ಪಸಂಖ್ಯಾತರಾಗಿರುವ ಅಲ್ಲಿನ ಹಿಂದೂ
ಹಾಗೂ ಸಿಖ್‌ಗಳಿಗೆ ಆದ್ಯತೆ ನೀಡಿ, ಅವರ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಪ್ರಪಂಚದ ಕ್ಯಾಮರಾಗಳಿಂದ ಮರೆಯಾಗಿರುವ ಪಾಕಿಸ್ತಾನ, ಆಫ್ಘಾನಿಸ್ತಾನ, ಬಾಂಗ್ಲಾದೇಶದಲ್ಲಿ ಶೋಷಿತರಾಗಿರುವ ಹಿಂದೂ, ಸಿಖ್, ಬೌದ್ಧರಿಗೆ ಪೌರತ್ವ ನೀಡುವ ಸದುದ್ದೇಶದಿಂದ ಜಾರಿಗೆ ತಂದ ಸಿಎಎ ಕಾನೂನನ್ನು ವಿರೋಧಿಸಿದ ಇವರು ಈಗ ಆಫ್ಘಾನ್ ವಿಚಾರದಲ್ಲಿ ಹೀಗೆ ಮಾತನಾಡುತ್ತಿರುವುದು ಅವರ ಆಯ್ಕೆಯ ಪ್ರತಿನಿಧ್ಯತೆಯನ್ನು ಎತ್ತಿಹಿಡಿಯುತ್ತದೆ.
ನಿರಂತರವಾಗಿ ಪ್ರತಿ ವಿಚಾರದಲ್ಲೂ ಹಿಂದುತ್ವವಾದಿ, ರಾಷ್ಟ್ರೀಯವಾದಿ ಸಂಘಟನೆಗಳ ಮೇಲೆ ಇವರು ಆಕ್ರಮಣ ಮಾಡುತ್ತಲೇ ಇದ್ದಾರೆಂದರೆ ಆ ಸಂಘಟನೆಗಳು ಪಾಲಿಸುವ ದೇಶಸೇವೆ, ಧರ್ಮ ರಕ್ಷಣೆಯ ವಿರುದ್ಧ ಒಟ್ಟಾರೆ ಈ ನೆಲದ ಸಂಸ್ಕೃತಿಯ ಅಸ್ತಿತ್ವದ ವಿರುದ್ಧವೇ ಹೋರಾಟ ಮಾಡುತ್ತಿದ್ದಾರೆಂಬುದು ಪ್ರಮಾಣಿತ ವಾಗಿದೆ. ಯಾವ ಶರಿಯಾ ಕಾನೂನಿನ ಅನ್ವಯ ಕಲೆ, ಸಾಹಿತ್ಯ, ನೃತ್ಯವೆಲ್ಲದಕ್ಕೂ ನಿಷೇಧವಿದೆಯೊ, ಯಾವ ಕಾನೂನು ಮಹಿಳೆಯರನ್ನು ಗುಲಾಮರನ್ನಾಗಿ ಮಾಡಿಕೊಳ್ಳಲು ಲೈಸೆನ್ಸ್‌ನಂತೆ ಸಹಾಯಕವಾಗುವುದೋ, ಯಾವ ಕಾನೂನು ಪ್ರಜಾಪ್ರಭುತ್ವ ವ್ಯವಸ್ಥೆಗೆ ಸವಾಲಾಗಿದೆಯೋ ಆ ಕಾನೂನಿಗೆ ತಮ್ಮ ಬೆಂಬಲ ವನ್ನು ಸೂಚಿಸುತ್ತಾರಾ? ನಮ್ಮ ದೇಶದ ಉತ್ತರಪ್ರದೇಶದ ಬಳಿ ಇರುವ ದಿಯೋಬಂದಿ ಮದರಸದ ವಿಚಾರ ಧಾರೆಯು ಪಾಕಿಸ್ತಾನ, ಆಫ್ಘಾನಿಸ್ತಾನದೆಡೆ ಹೆಚ್ಚು
ಹೆಚ್ಚು ಪ್ರಸಾರವಾಗಿವೆ ಹಾಗೂ ಪ್ರೇರಣೆ ನೀಡಿವೆ.
ಭಯೋತ್ಪಾದಕರನ್ನು ಕೊನೆಗೊಳಿಸುವುದರಿಂದ ಭಯೋತ್ಪಾದನೆಯನ್ನು ಕೊನೆಗೊಳಿಸಲಾಗುವುದಿಲ್ಲ. ನಾವು ಅದನ್ನು ತಪ್ಪು ಎಂದು ಖಂಡಿಸುತ್ತೇವೆ, ಆದರೆ
ಭಯೋತ್ಪಾದಕರ ಪಾಲಿಗೆ ಅದೇ ಸರ್ವಸ್ವ. ಅದಕ್ಕಾಗಿ ಪ್ರಾಣ ನೀಡಲೂ ಅವರು ಹಿಂಜರಿಯುವುದಿಲ್ಲ ಎಂದರೆ ನೀವೇ ಅರ್ಥೈಸಿಕೊಳ್ಳಿ. ಅವರು ಪಾಲಿಸುವ
ಇಸ್ಲಾಮಿಕ್ ಕಟ್ಟರ್ ಪಂಥೀಯ ವಿಚಾರಧಾರೆಯು ಸುಧಾರಣೆಯಾಗದಿದ್ದರೆ, ಅದರ ವೈಚಾರಿಕ ಸ್ವಾತಂತ್ರ್ಯಕ್ಕೆ ಅವಕಾಶ ಮಾಡಿಕೊಡದಿದ್ದರೆ ಇಡೀ ವಿಶ್ವವು ಈ ಸಮಸ್ಯೆಯನ್ನು ನಿರಂತರವಾಗಿ ಎದುರಿಸುತ್ತಲೇ ಇರಬೇಕಾಗುತ್ತದೆ.
ಸ್ವಾಮಿ ವಿವೇಕಾನಂದರು ಹೇಳಿದಂತೆ ಭಾರತವು ಆಧ್ಯಾತ್ಮದಿಂದ ಈ ಪ್ರಪಂಚವನ್ನು ಗೆಲ್ಲಬೇಕು, ತನ್ನ ಆಧ್ಯಾತ್ಮಿಕ ಭೋದನೆಯ ಮೂಲಕ ವಿಶ್ವ ಶಾಂತಿ,
ಸಮೃದ್ಧಿಯನ್ನು ಸಾಽಸಬೇಕು. ಇಂತಹ ಆಧ್ಯಾತ್ಮ ಸಂಸ್ಕೃತಿಯ ರಕ್ಷಣೆಗಾಗಿ ಸಂಕಲ್ಪಬದ್ಧವಾಗಿರುವ ಹಿಂದುತ್ವವೆಂಬ ಶ್ರೀರಕ್ಷೆಯ ಆದರ್ಶವನ್ನೂ ಕೆಲವರು
ಸಮಾನತೆಗೆ ಧಕ್ಕೆ ಎಂದು ಅಲ್ಲಗಳೆಯುತ್ತಾರೆ. ಆದರೆ ಅಂತಹ ವ್ಯಕ್ತಿಗಳು ವಿಶ್ವ ಸಮಾನತೆಯು ಮ್ಯಾಜಿಕ್ ನಂತೆ ಸ್ವಾಭಾವಿಕವಾಗಿ ಸೃಷ್ಟಿಯಾಗಬೇಕೆಂದು
ಅಪೇಕ್ಷಿಸುತ್ತಾರೆ. ಆದರೆ ಹಿಂದುತ್ವದ ಆದರ್ಶವನ್ನು ಪಾಲಿಸುವ ವ್ಯಕ್ತಿಗಳು ವಿಶ್ವಶಾಂತಿ, ಸಮಾನತೆಯನ್ನು ಸಾಧಿಸಲು ಕಾರ್ಯಪ್ರವೃತ್ತರಾಗಿದ್ದಾರೆ.