Friday, 13th December 2024

ಎಲ್ಲ ಜೀವರಾಶಿಗಳು ಅಂಡದಿಂದಲೇ ಹುಟ್ಟುತ್ತವೆ !

ಹಿಂದಿರುಗಿ ನೋಡಿದಾಗ

ನಮ್ಮ ಪೂರ್ವಜರಿಗೆ ಜೀವಜಗತ್ತಿನಲ್ಲಿ ಸಂತಾನ ವರ್ಧನೆ ಹೇಗೆ ನಡೆಯುತ್ತದೆ ಎನ್ನುವು ದು ತಿಳಿದಿರಲಿಲ್ಲ.  ವೀರ್ಯಾಣು ವಿನಲ್ಲಿರುವ ೨೩ ಕ್ರೋಮೋ ಸೋಮುಗಳು, ಅಂಡಾಣುವಿನಲ್ಲಿರುವ ೨೩ ಕ್ರೋಮೋ ಸೋಮುಗಳ ಜತೆಗೆ ಸೇರಿ, ಹೊಸ ಜೀವಿ ಯನ್ನು ಸೃಜಿಸುತ್ತವೆ ಎನ್ನುವ ಬಗ್ಗೆ ಅವರಿಗೆ ಲವಲೇಶ ಮಾಹಿತಿಯಿರಲಿ, ಕಲ್ಪನೆಯೂ ಇರಲಿಲ್ಲ.

ಒಂದು ಕಾಲಘಟ್ಟದಲ್ಲಿ ಪೂರ್ವರೂಪಣ ಸಿದ್ಧಾಂತವು (ಪ್ರಿ-ರ್ಮೇಶನ್) ಜನಪ್ರಿಯ ವಾಯಿತು. ಅಂದರೆ ಮನುಷ್ಯನನ್ನು ಸರ್ವರೀತಿಯಿಂದಲೂ ಹೋಲುವ ಸೂಕ್ಷ್ಮಾತಿ ಸೂಕ್ಷ್ಮ ಮನುಷ್ಯನಿರುತ್ತಾನೆ. ಇವನ ಹೆಸರು ಕುಬ್ಜ ಮಾನವ (ಹೋಮಂಕ್ಯುಲಸ್). ಇವನೇ ತಾಯಿಯ ಗರ್ಭದಲ್ಲಿ ಪೂರ್ಣಪ್ರಮಾಣದಲ್ಲಿ ಬೆಳೆದು ಪ್ರಸವದ ಮೂಲಕ ಹೊರಬರುತ್ತಾನೆ ಎನ್ನುವುದು ಈ ಸಿದ್ಧಾಂತದ ತಿರುಳು.

ಮನುಷ್ಯರೂಪವು ಹುಟ್ಟುವ ಮೊದಲೇ ಸಂಪೂರ್ಣವಾಗಿ ರೂಪುಗೊಂಡಿರುತ್ತದೆ, ಈ ಪರಿಕಲ್ಪನೆಯನ್ನು ಅಂದಿನ ವೈದ್ಯರು ಒಪ್ಪಿದ್ದರು. ಪೂರ್ವರೂಪಿತ ಕುಬ್ಜಮಾನವನ ಸಿದ್ಧಾಂತವನ್ನು ಗ್ರೀಕ್ ಸಂಸ್ಕೃತಿಯ ಪೈಥಾಗೊರಾಸ್ (ಕ್ರಿ.ಪೂ.೫೭೦-ಕ್ರಿ.ಪೂ.೪೯೫) ಮೊದಲ ಬಾರಿಗೆ ಮಂಡಿಸಿದ. ಇವನು ಪೂರ್ವರೂಪಿತ ಕುಬ್ಜ ಮಾನವ ರೂಪವು ವೀರ್ಯದಲ್ಲಿರುತ್ತದೆ ಎಂದು ಹೇಳಿದ. ಇದು ವೀರ್ಯ ರೂಪಣ (ಸ್ಪರ್ಮಿಸಂ) ಎಂದು ಪ್ರಸಿದ್ಧಿಗೆ ಬಂದಿತು. ಇದೇ ಗ್ರೀಕ್ ಸಂಸ್ಕೃತಿಗೆ ಸೇರಿದ ದೈತ್ಯಪ್ರತಿಭೆ
ಯಾಗಿದ್ದ ಅರಿಸ್ಟಾಟಲ್ ಭಿನ್ನವಾಗಿ ವಾದಿಸಿದ. ತಾಯಿಯ ಗರ್ಭದಲ್ಲಿರುವ ಆಕಾರರಹಿತ ವಸ್ತುವು ಕ್ರಮೇಣ ಅಭಿವರ್ಧನೆಯಾಗಿ, ಶಿಶುವಿನ ಎಲ್ಲ ಅಂಗಾಂಗಗಳು ರೂಪುಗೊಳ್ಳುತ್ತವೆ; ಆನಂತರವೇ ಪ್ರಸವದ ಮೂಲಕ ಹೊರಬರುತ್ತದೆ ಎಂದು ವಾದಿಸಿದ. ಇದು ನವರೂಪವಾದ (ನಿಯೋ -ರ್ಮಿಸಂ/ಎಪಿಜೆನೆಟಿಕ್ಸ್) ಎಂದು ಪ್ರಸಿದ್ಧಿಗೆ ಬಂದಿತು.

ಪಾಶ್ಚಾತ್ಯ ಜಗತ್ತಿನಲ್ಲಿ ಸುಮಾರು ೧೫೦೦ ವರ್ಷಗಳವರೆಗೆ ಪೈಥಾಗೊರಾಸ್, ಹಿಪ್ಪೋಕ್ರೇಟ್ಸ್ ಮತ್ತು ಅರಿಸ್ಟಾಟಲ್‌ರವರ
ಸಿದ್ಧಾಂತ ಗಳೇ ಜನಪ್ರಿಯವಾಗಿದ್ದವು. ಇಸ್ಲಾಂ ವೈದ್ಯ ಪದ್ಧತಿ ಸಹ ಇವರ ವಾದವನ್ನೇ ಎತ್ತಿ ಹಿಡಿಯಿತು. ಈ ಅವಧಿಯಲ್ಲಿ ಯೂರೋಪಿನಲ್ಲಿ ಪುನರುತ್ಥಾನ ಅಥವ ರಿನೇಸಾನ್ಸ್ ಆರಂಭವಾಯಿತು. ಎಲ್ಲ ಜ್ಞಾನ ಕ್ಷೇತ್ರಗಳಲ್ಲಿ ಹೊಸ ಹೊಸ ವಿಚಾರಗಳು ರಾರಾಜಿಸಲಾರಂಭಿಸಿದವು.

ಗೇಬ್ರಿಯಲ್ -ಲೋಪಿಯೊ (೧೫೨೩-೧೫೬೨) ಎನ್ನುವ ಅಂಗರಚನ ವಿಜ್ಞಾನಿಯು ಗ್ಯಾಲನ್ ಮತ್ತು ವೆಸಾಲಿಯಸ್ ಹೇಳಿದ ಪ್ರತಿಯೊಂದು ವಿಚಾರವನ್ನು ಸ್ವಯಂ ಅಧ್ಯಯನ ಮಾಡಿ ತಪ್ಪು-ಒಪ್ಪುಗಳಿಗೆ ಪುರಾವೆಯನ್ನು ಹುಡುಕುತ್ತಿದ್ದ. ಮೊದಲ ಬಾರಿಗೆ ಮಹಿಳೆಯರಲ್ಲಿ ಭಗಾಂಕುರವೆಂಬ (ಕ್ಲೈಟೋರಿಸ್) ಅಂಗವಿರುತ್ತದೆ ಎನ್ನುವುದನ್ನು ಗಮನಿಸಿದ.

ಅದು ಪುರುಷನ ಶಿಶ್ನಕ್ಕೆ ಸರಿ ಸಮಾನವಾದ ಅಂಗವೆಂದ. ಯೋನಿಗೆ ವೆಜೈನ ಎಂದು ನಾಮಕರಣ ಮಾಡಿದ. ಯೋನಿಪೊರೆ ಯನ್ನು (ಹೈಮೆನ್) ವರ್ಣಿಸಿದ. ಅಂಡಾಶಯ ಮತ್ತು ಗರ್ಭನಾಳಗಳ ರಚನೆಯನ್ನು ವಿಸ್ತೃತ ಮಾಹಿತಿಯನ್ನು ನೀಡಿದ. ಅದಕ್ಕಾಗಿಯೇ ಆತನ ಹೆಸರಿನಲ್ಲಿ ಗರ್ಭ ನಾಳವನ್ನು ಫೆಲೋಪಿಯನ್ ನಾಳ ಎಂದು ಕರೆಯುತ್ತೇವೆ. ಮಾಸು ಎನ್ನುವ ರಚನೆ ಗುರುತಿಸಿ, ಅದಕ್ಕೆ ಪ್ಲಾಸೆಂಟ ಎಂದು ನಾಮಕರಣ ಮಾಡಿದ. ಮನುಷ್ಯನು ಸಂಭೋಗ ನಡೆಸುವಾಗ, ಶಿಶ್ನವು ಗರ್ಭಕೊರಳ ಮೂಲಕ ಗರ್ಭಾಶಯದೊಳಗೆ ಪ್ರವೇಶಿಸಿ, ಅಲ್ಲಿ ವೀರ್ಯವನ್ನು ಸ್ಖಲಿಸುತ್ತದೆ ಎಂದು ಅಂದಿನ ದಿನಗಳ ವೈದ್ಯರ ನಂಬಿಕೆ.

ಆದರೆ ಫೆಲೋಪಿಯೊ, ಶಿಶ್ನವು ಗರ್ಭಕೊರಳ ಪ್ರವೇಶದವರೆಗೆ ಮಾತ್ರ ತಲುಪುತ್ತದೆ ಎನ್ನುವುದನ್ನು ತೋರಿ, ಆಧುನಿಕ ಭ್ರೂಣ ವಿಜ್ಞಾನಕ್ಕೆ (ಎಂಬ್ರಯಾಲಜಿ) ಶ್ರೀಕಾರವನ್ನು ಹಾಕಿದ. ಇವನ ತುಲನಾತ್ಮಕ ಅಧ್ಯಯನ ವಿಧಾನವು ಹೈರೋನಿಮಸ್ -ಬ್ರೀ
ಶಿಯಸ್ ಅಬ್ ಅಕ್ವಾಪೆಂಡೆಂಟ್ (೧೫೩೩-೧೬೧೯) ಎಂಬ ವಿದ್ಯಾರ್ಥಿಯ ಮೇಲೆ ಅತೀವ ಪರಿಣಾಮವನ್ನು ಬೀರಿತು.
ಅವನು -ಲೋಪಿಯೋ ಹಾಕಿಕೊಟ್ಟ ಮಾರ್ಗದಲ್ಲಿಯೇ ನಡೆದ. ಮಾನವ ಭ್ರೂಣ ಅಭಿವರ್ಧನೆಯ ಬಗ್ಗೆ ವಿಸ್ತೃತ ಅಧ್ಯಯನ ವನ್ನು ನಡೆಸಿದ.

ಮಾನವ ಭ್ರೂಣವಿಜ್ಞಾನದ ಪಿತಾಮಹ ಎಂಬ ಅಭಿದಾನಕ್ಕೆ ಪಾತ್ರನಾದ. ಕ್ರಿ.ಶ.೧೬೦೦ರಲ್ಲಿ ಡೀ -ರ್ಮಟೊ ಫೀಟು ಎಂಬ ಗ್ರಂಥವನ್ನು ಪ್ರಕಟಿಸಿದ. ವಿಲಿಯಂ ಹಾರ್ವೆ (೧೫೭೮-೧೬೫೭) ಮಾನವ ರಕ್ತಪರಿ ಚಲನೆಯನ್ನು ಕಂಡುಹಿಡಿದ ವಿಚಾರವು ಎಲ್ಲರಿಗೂ ತಿಳಿದಿರು ವಂತಹದ್ದು. ಈತನು ಗೇಬ್ರಿಯಲ್ -ಲೋಪಿಯೋವಿನ ವಿದ್ಯಾರ್ಥಿಯಾಗಿದ್ದ. ಇವನು ಭ್ರೂಣ ವಿಜ್ಞಾನಕ್ಕೆ ಸಂಬಂಧಿಸಿ, ೧೬೫೧ರಲ್ಲಿ ಎಕ್ಸರ್ಸೈಟೇಶನಸ್ ಡಿ ಜೆನೆರೇಶನೆ ಆನಿಮಾಲಿಯಂ (ಆನ್ ದಿ ಜೆನೆರೇಶನ್ ಆಫ್ ಅನಿಮಲ್ಸ್, ಪ್ರಾಣಿ ಗಳ ಪೀಳಿಗೆಗೆ ಸಂಬಂಧಿಸಿದಂತೆ) ಎಂಬ ಗ್ರಂಥವನ್ನು ಪ್ರಕಟಿಸಿದ. ಈ ಪುಸ್ತಕದಲ್ಲಿ ಹಾರ್ವೆ ಮನುಷ್ಯರನ್ನೂ ಒಳಗೊಂಡಂತೆ ಎಲ್ಲ ರೀತಿಯ ಜೀವಿಗಳು ಅಂಡದಿಂದಲೇ (ಎಗ್) ಹುಟ್ಟುತ್ತವೆ (ಎಕ್ಸ್ ಓವೋ ಆಮ್ನಿಯ) ಎಂದು ಸಾರಿದ.

ಅಂಡ-ಎಗ್-ಎಂದರೆ ಏನು ಎನ್ನುವುದನ್ನು ಹಾರ್ವೆ ವಿವರಿಸಲಿಲ್ಲ. ಪೈಥಾಗೊರಾಸ್ ವೀರ್ಯ ರೂಪಣ ಸಿದ್ಧಾಂತವನ್ನು ಮಂಡಿಸಿದ ಹಾಗೆ, ಹಾರ್ವೆಯ ಅಧ್ಯಯನ ಗಳು ಅಂಡ ರೂಪಣ ಸಿದ್ಧಾಂತವನ್ನು (ಓವಿಸಂ) ಮಂಡಿಸಿತು. ಈ ಸಿದ್ಧಾಂತದ ಅನ್ವಯ, ಪೂರ್ವ ನಿರ್ಮಿತ ಕುಬ್ಜ ಮಾನವ ರೂಪವೊಂದು ಅಂಡದಲ್ಲಿರುತ್ತದೆ ಎನ್ನುವ ಪರಿಕಲ್ಪನೆಯು ಬೆಳೆಯಿತು. ಹೀಗೆ ಯೂರೋಪ್ ಖಂಡದಲ್ಲಿ ಸೃಷ್ಟಿಗೆ ಸಂಬಂಧಿಸಿದಂತೆ ಸ್ಪರ್ಮಿಸಂ ಮತ್ತು ಓವಿಸಂ ಪರಿಕಲ್ಪನೆಗಳು ತಮ್ಮದೇ ಆದ ಅನುಯಾಯಿ ಗಳನ್ನು ಬೆಳೆಸಿಕೊಂಡು ತಿಕ್ಕಾಟಕ್ಕೆ ಕಾರಣವಾದವು.

೧೬೬೫. ಮಲ್ಕಿಸೆಡೆಕ್ ತೆವೆನಾಟ್ (೧೬೨೦-೧೬೯೨) ಫ್ರಾನ್ಸ್ ದೇಶದ ರಾಯಭಾರಿ. ವಿಜ್ಞಾನದ ಬಗ್ಗೆ ಆಸಕ್ತನಾಗಿದ್ದು, ವಿಜ್ಞಾನದ ಮಹಾ ಪೋಷಕನಾಗಿದ್ದ. ಅವನು ಅವನು ತನ್ನ ಗೆಳೆಯ ಡಚ್ ಗಣಿತವಿಜ್ಞಾನಿ ಮತ್ತು ಖಗೋಳ ವಿಜ್ಞಾನಿ ಕ್ರಿಶ್ಚಿಯಾನ್ ಹ್ಯೂಜೆನ್ಸ್ (೧೬೨೯-೧೬೯೫) ನಿಗೆ ಮೊದಲ ಪತ್ರವನ್ನು ಬರೆದ. ‘ಈ ಚಳಿಗಾಲದ ಶೈತ್ಯವನ್ನು ತಡೆಯಲಾಗದೆ, ನಾವು ಪ್ರಾಣಿಗಳ ಪೀಳಿಗೆಯನ್ನು ಅಧ್ಯಯನ ಮಾಡಲು ವಿಚ್ಛೇದನ ಪ್ರಯೋಗಗಳನ್ನು ಕೈಗೊಂಡಿದ್ದೇವೆ’ ಎಂಬುದು ಆ ಪತ್ರದ ಸಾರಾಂಶ. ಇಲ್ಲಿ ‘ನಾವು’ ಎಂದರೆ ಡಚ್ ವಿಜ್ಞಾನಿ ಯಾನ್ ಸ್ವಾಮರ್ಡ್ಯಾಮ್ (೧೬೩೭-೧೬೮೦) ಮತ್ತು ಡೇನ್ ನೀಲ್ಸ್ ಸ್ಟೆನ್ಸನ್ ಸ್ಟೆನೊ (೧೬೩೮- ೧೬೮೬). ಇವರು ಎಲ್ಲ ಜೀವರಾಶಿಗಳು ಅಂಡದಿಂದಲೇ ಹುಟ್ಟುತ್ತವೆ ಎಂಬ ತೀರ್ಮಾನಕ್ಕೆ ಬಂದರು. ೧೬೬೭ರಲ್ಲಿ ಸ್ಟೆನೊ ಎಲಿ ಮೆಂಟೋರಮ್ ಮಯೋಲಾಜಿಯೆ ಸ್ಪೆಸಿಮೆನ್ ಎಂಬ ಪುಸ್ತಕವನ್ನು ಬರೆದ.

ಪ್ರಾಣಿಗಳ ಸ್ನಾಯುಗಳು ಹೇಗೆ ಕೆಲಸ ಮಾಡುತ್ತವೆ ಎನ್ನುವುದಕ್ಕೆ ಅಗತ್ಯ ಪುರಾವೆ ಹಾಗೂ ಗಣಿತೀಯ ವಿವರಣೆಯನ್ನು ನೀಡಿದ. ತನ್ನ ಅಧ್ಯಯನಕ್ಕೆ ಜೀವಂತ ಮರಿಗಳಿಗೆ ಜನ್ಮ ನೀಡುವ ಡಾಗ್ ಫಿಶ್ ಎಂಬ ಶಾರ್ಕ್ ಮೀನನ್ನು ಆಯ್ಕೆ ಮಾಡಿಕೊಂಡಿದ್ದ. ಇವನು ಡಾಗ್ ಫಿಶ್‌ನಲ್ಲಿರುವ ಅಂಡಾಶಯವನ್ನು ಸ್ತ್ರೀ ವೃಷಣಗಳಿಗೆ ಹೋಲಿಸಿದ. ಸ್ವಾಮರ್ಡ್ಯಾಮ್ ಕೀಟಗಳ ಬಗ್ಗೆ ಅಧ್ಯಯನ
ವನ್ನು ಮಾಡಿ ೧೬೬೯ರಲ್ಲಿ ಹಿಸ್ಟೋರಿಯ ಜೆನೆರಾಲಿಸ್ ಇನ್ ಸೆಕ್ಟೋರಮ್ ಎಂಬ ಪುಸ್ತಕವನ್ನು ಪ್ರಕಟಿಸಿದ.

ಅರಿಸ್ಟಾಟಲ್, ಕೀಟಗಳು ಸ್ವಯಂಜನಿಸುತ್ತವೆ (ಸ್ಪಾಂಟೇನಿಯಸ್ ಜೆನೆರೇಶನ್) ಎಂದು ಹೇಳಿದ್ದ. ಸ್ವಾಮರ್ಡ್ಯಾಮ್ ಮತ್ತು ಇಟಾಲಿಯನ್ ಜೀವಶಾಸಜ್ಞ ಫ್ರಾನ್ಸೆಸ್ಕೋ ರೆಡಿ (೧೬೨೬-೧೬೯೭) ಅವರ ಪ್ರಯೋಗಗಳು ಅರಿಸ್ಟಾಟಲನ ಅನಿಸಿಕೆ ಸುಳ್ಳು ಎನ್ನುವುದನ್ನು ಸಾಬೀತುಪಡಿಸಿದವು. ಮಾತ್ರವಲ್ಲ, ನೊಣಗಳು ಉತ್ಪಾದನೆಯಾಗಲು ನೊಣಗಳು ಬೇಕು ಎನ್ನುವ ಸಿದ್ದಾಂತ ವನ್ನು ಸಮರ್ಥಿಸಿದವು. ಸ್ವಾಮರ್ಡ್ಯಾಮ್ ಹೆಣ್ಣು ನೊಣವು ಇಟ್ಟ ಮೊಟ್ಟೆಗಳಿಂದಲೇ ಹೊಸ ನೊಣಗಳು ಹುಟ್ಟಿದವು ಎನ್ನುವು ದಕ್ಕೆ ಅಗತ್ಯ ಎಲ್ಲ ಪುರಾವೆಗಳನ್ನು ಒದಗಿಸಿದ.

ಜತೆಗೆ ಪ್ರತಿಯೊಂದು ಜೀವರಾಶಿಯಲ್ಲಿ, ಹೆಣ್ಣು ಇಡುವ ಅಂಡದಿಂದಲೇ ಪೀಳಿಗೆಯು ಮುಂದುವರೆಯುತ್ತದೆ ಎಂಬ ದಿಟ್ಟ ಹೇಳಿಕೆಯನ್ನು ನೀಡಿದ. ವಿಲಿಯಂ ಹಾರ್ವೆಯ ಪುಸ್ತಕವು ಪ್ರಕಟವಾಗಿ ೨೫ ವರ್ಷ ಗಳಾಗಿದ್ದವು. ಯೂರೋಪಿನಲ್ಲಿ ಅಂಡ ರೂಪಣವು ಪ್ರಸಿದ್ಧವಾಗಿತ್ತು. ಸ್ವಾಮರ್ಡ್ಯಾಮ್ ಅಂಡವನ್ನು ಪತ್ತೆ ಹಚ್ಚುವ ದಿಶೆಯಲ್ಲಿ ಮಗ್ನನಾಗಿದ್ದಾಗ, ಅವನ ವಿದ್ಯಾರ್ಥಿ ಯಾಗಿದ್ದ ರೆನೀರ್ ಡಿ ಗ್ರಾಫ (೧೬೪೧-೧೬೭೩) ಸಹ ಅಂಡಗಳ ಬಗ್ಗೆ ಅಧಯನವನ್ನು ನಡೆಸುತ್ತಿದ್ದ.

ಇದು ಇಬ್ಬರ ಗಮನಕ್ಕೆ ಬಂದಿತು. ಇಬ್ಬರೂ ಒಂದೇ ಕ್ಷೇತ್ರದಲ್ಲಿ ಅಧ್ಯಯನವನ್ನು ಮಾಡುತ್ತಿರುವುದನ್ನು ಡಿ ಗ್ರಾಫ್ ಗಮನಿಸಿದ ಕೂಡಲೇ ತನ್ನ ಸಂಶೋಧನೆಯನ್ನು ಆತುರಾತುರವಾಗಿ ಪೂರ್ಣಗೊಳಿಸಿ ಪ್ರಕಟಿಸಿದ. ಸ್ತ್ರೀವೃಷಣಗಳಲ್ಲಿ ಅಂಡಗಳಿರುತ್ತವೆ. ಗಂಡು-ಹೆಣ್ಣಿನ ಮಿಲನದ ನಂತರ ಹೊಮ್ಮುವ ವೀರ್ಯದ ಬಾಷ್ಪ/ಆವಿಯು (ವೇಪರ್ಸ್) ಗರ್ಭಾಶಯದಿಂದ, ಗರ್ಭನಾಳಗಳ ಮೂಲಕ ಸೀವೃಷಣಗಳನ್ನು ತಲುಪಿ ಅವನ್ನು ಮಾಗಿಸುತ್ತವೆ ಎಂದ.

ಸ್ವಾಮರ್ಡ್ಯಾಮ್ ಸಹ ಸೀ ಜನನಾಂಗಗಳ ಚಿತ್ರವನ್ನು ಬಿಡಿಸಿ, ಗರ್ಭಾಶಯ, ಗರ್ಭಕೊರಳು ಹಾಗೂ ಅಂಡಾಶಯದ ವಿವ ರಗಳನ್ನು ಬಿಡಿಸಿ, ಅಂಡಗಳು ಸೀವೃಷಣಗಳಲ್ಲಿ ಇದೆಯೆಂದ. ಇಬ್ಬರೂ ತಮ್ಮ ಸಂಶೋಧನೆಯನ್ನು ಲಂಡನ್ನಿನ ರಾಯಲ್
ಸೊಸೈಟಿಗೆ ಸಲ್ಲಿಸಿದರೂ, ಇಬ್ಬರೂ ಸೀವೃಷಣಗಳಲ್ಲಿಅಂಡಗಳಿರುವ ಬಗ್ಗೆ ನೇರ ಪುರಾವೆಯನ್ನು ಒದಗಿಸದ ಕಾರಣ, ರಾಯಲ್ ಸೊಸೈಟಿ ಇಬ್ಬರಿಗೂ ಮಾನ್ಯತೆಯನ್ನು ನೀಡಲಿಲ್ಲ. ಅಂತಿಮವಾಗಿ ಅಂಡಾಶಯಗಳಲ್ಲಿ ಅಂಡಗಳಿರುವ ಸಂಶೋಧನೆಯನ್ನು ನಡೆಸಿದ ಕೀರ್ತಿಯು ಡಿ ಗ್ರಾಫನಿಗೆ ದೊರೆಯಿತು. ಕೊನೆಗೆ ಮೊಲಗಳ ಅಂಡಾಶಯದಲ್ಲಿ ಅವನು ನಿರೀಕ್ಷಿಸಿದ್ದ ಫಲಿತಾಂಶವು ಪ್ರತ್ಯಕ್ಷವಾಗಿತ್ತು.

ಸೂಕ್ಷ್ಮದರ್ಶಕ ಗಳ ರಚನೆಯಲ್ಲಿ ಆದ ಸುಧಾರಣೆಗಳು, ಸ್ತ್ರೀವೃಷಣಗಳ ಲ್ಲಿರುವ ಹಾಗೂ ಅಂಡವಾಹಕ ನಳಿಕೆಯಲ್ಲಿದ್ದ ದುಂಡ ನೆಯ ಕಾಯಗಳನ್ನು ಪತ್ತೆ ಹಚ್ಚುವಲ್ಲಿ ನೆರವಾಯಿತು. ಡಿ ಗ್ರಾ- ಹೆಣ್ಣು ಮೊಲದ ಆಂತರಿಕ ಜನನಾಂಗಗಳನ್ನು ಗಮನಿಸಿದ. ಅಲ್ಲಿ ವೀರ್ಯದ ಕುರುಹೇ ಇರಲಿಲ್ಲ. (ಅವನ ಕಾಲಕ್ಕೆ ವೀರ್ಯಾಣು ಪತ್ತೆಯಾಗಿರಲಿಲ್ಲ. ಏಕೆಂದರೆ ವೀರ್ಯಾಣುವನ್ನು ಪತ್ತೆ ಹಚ್ಚು ವಂತಹ ಸೂಕ್ಷ್ಮದರ್ಶಕಗಳು ರೂಪುಗೊಂಡಿರಲಿಲ್ಲ) ಹಾಗಾಗಿ ವೀರ್ಯದಿಂದ ಹೊರ ಬರುವ ಭಾಷ್ಪ ಅಥವ ಆವಿಯೇ ಅಂಡ ಗಳನ್ನು ಫಲಗಟ್ಟಿ ಸುತ್ತವೆ ಎನ್ನುವ ತೀರ್ಮಾನಕ್ಕೆ ಬಂದ. ಈ ಪ್ರಯೋಗ ದೊಡನೆ, ಮೊಲಗಳ ಸ್ತ್ರೀವೃಷಣಗಳಲ್ಲಿ ಅಂಡಗಳಿರು ತ್ತವೆ ಎನ್ನುವ ತನ್ನ ಸಿದ್ಧಾಂತಕ್ಕೆ ಅಗತ್ಯ ಪುರಾವೆಯನ್ನು ಡಿ ಗ್ರಾಫ್ ಒದಗಿಸಿದ.

ನಂತರ ಪ್ರತಿಯೊಂದು ಜೀವಿಯ ಹೆಣ್ಣಿನ ಸ್ತ್ರೀ ವೃಷಣಗಳಲ್ಲಿ ಅಂಡಗಳಿರುತ್ತವೆ ಎನ್ನುವುದನ್ನು ತೋರಿಸಿದ. ಪೀಳಿಗೆಯು ಮುಂದುವರೆಯಲು ಅಂಡಗಳೇ ಕಾರಣ ಎನ್ನುವ ತೀರ್ಮಾನಕ್ಕೆ ಬಂದ. ಸ್ಟಾಮರ್ಡ್ಯಾಮ್ ಮತ್ತು ಡಿ ಗ್ರಾಫ್ ನಡುವೆ ತೀವ್ರ ಸ್ವರೂಪದ ವಾದ-ವಿವಾದಗಳು ಬೆಳೆದವು. ಅದು ಏನೇ ಇರಲಿ. ಡಿ ಗ್ರಾಫ್ ಮೊಲದ ಸ್ತ್ರೀವೃಷಣಗಳಲ್ಲಿದ್ದ ದುಂಡನೆಯ ಕಾಯಗಳನ್ನು ಅಂಡಾಣು (ಓವಮ್) ಎಂದು ಕರೆದ. ಆ ಅಂಡಾಣುವನ್ನು ನಾವು ಗ್ರಾಫಿಯನ್ ಫಾಲಿಕಲ್ ಎಂದು ಕರೆದು, ರೆನೀರ್ ಡಿ ಗ್ರಾಫನಿಗೆ ಗೌರವವನ್ನು ಸೂಚಿಸಿದ್ದೇವೆ.