ವಿಜಯ್ ದರಡಾ
ಪ್ರತಿ ವರ್ಷವೂ ಅಸಾಂವಿಧಾನಿಕ ಪದಗಳ ಪಟ್ಟಿ ಪ್ರಕಟವಾಗುತ್ತದೆ ಮತ್ತು ವರ್ಷದಿಂದ ವರ್ಷಕ್ಕೆ ಒಂದಷ್ಟು ಹೊಸ ಸೇರ್ಪಡೆಗಳೂ ಆಗುತ್ತವೆ. ಆದರೆ ಈ ಬಾರಿಯ ಪಟ್ಟಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ತಮ್ಮ ದನಿಯನ್ನು ಹತ್ತಿಕ್ಕಲು ಸರಕಾರ ಯತ್ನಿಸುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ.
ಈ ರೀತಿಯ ನಿರ್ಬಂಧಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇರಕೂಡದು ಎಂಬ ವಾದಗಳೂ ಇವೆ. ನಮ್ಮ ದೈನಂದಿನ ವ್ಯವಹಾರದಲ್ಲಿ ಬಳಸುವ ಪದಗಳು ಅಸಾಂವಿಧಾನಿಕ ಎಂದು ತೀರ್ಮಾ ನಿಸುವುದು ಎಷ್ಟರ ಮಟ್ಟಿಗೆ ಸರಿ? ಇಲ್ಲಿ ಕೆಲವೊಂದು ಪದಗಳನ್ನು ಉದಾಹರಿಸುವುದಾದರೆ, ತಾನಾಶಾಹಿ, ಜುಮ್ಲಾ ಜೀವಿ, ಅಂಟ್ ಶಂಟ್, ಭ್ರಷ್ಟ, ನೌಟಂಕಿ, ಚೋರ್, ಅಹಂಕಾರಿ, ಗೂಂಡಾ ಗಿರಿ, ಹೀಗೆ ನೂರಾರಿವೆ. ಇವನ್ನು ನಾವು ಸಾರ್ವಜನಿಕವಾಗಿ ದಿನವಹಿ ಸಂಭಾಷಣೆಯಲ್ಲಿ ಬಳಸಿದಾಗ ಏನೂ ಆಗುವುದಿಲ್ಲ.
ಆದರೆ ಸಂಸತ್ತಿನಲ್ಲಿ ಉಚ್ಚರಿಸಿದರೆ ಅಸಾಂವಿಧಾನಿಕ ಎಂದು ಪರಿಗಣಿತ ವಾಗಿ ಕಡತದಿಂದ ತೆಗೆದುಹಾಕುವ ಪರಿಪಾಠ ಮೊದಲಿನಿಂದಲೂ ಇದೆ. ದೈನಂದಿನ ಆಡುಮಾತಿನ ಪರಿಭಾಷೆಯಲ್ಲಿ ಬರುವ ಪದಗಳನ್ನು ಅಸಾಂವಿ ಧಾನಿಕ ಎಂದು ಪರಿಗಣಿಸಿ ಉದ್ದೇಶ ಪೂರ್ವಕವಾಗಿ ಸರಕಾರ ಹುನ್ನಾರ ಮಾಡುತ್ತಿದೆ ಎಂದು ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ. ಉದಾಹರಣೆಗೆ ತಾನಾಶಾಹಿ, ದಾದಾಗಿರಿ, ದಂಗೆ ಇಂತಹ ಪದಗಳನ್ನು ಅಸಾಂವಿಧಾನಿಕ ಎಂದು ಪರಿಗಣಿಸಲಾಗಿದೆ.
ಯಾವುದೋ ಪ್ರದೇಶ ದಲ್ಲಿ ಆಗಿರುವ ದಂಗೆಯನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುವಾಗ ಈ ಶಬ್ದಗಳನ್ನು ಬಳಸದೇ ವಿವರಿಸುವು
ದಾದರೂ ಹೇಗೆ? ಹಾಗಾಗಿ ಅಸಾಂವಿಧಾನಿಕ ಎಂದು ಪದಗಳನ್ನು ಪಟ್ಟೀಕರಿಸುವ ವಿಧಾನವೇ ಸರಿಯಲ್ಲ. ನಾನು ಸಾಂವಿಧಾನಿಕ ರಾಜಕೀಯದ ಭಾಗವಾಗ ಹದಿನೆಂಟು ವರ್ಷ ಕಳೆದಿದ್ದೇನೆ. ನಾನೊಬ್ಬ ಪತ್ರಕರ್ತ. ನಾನು ಪ್ರತಿಯೊಂದು ಶಬ್ದದ ಅರ್ಥವನ್ನು ಶ್ರದ್ಧಾಪೂರ್ವಕವಾಗಿ ಕಲಿತುಕೊಂಡಿದ್ದೇನೆ.
ಯಾವ ಪದ ಸಾಂವಿಧಾನಿಕ, ಯಾವುದು ಅಸಾಂವಿಧಾನಿಕ ಎಂಬುದನ್ನು ನಾನು ಚೆನ್ನಾಗಿ ಬ. ಬೇರೆ ಬೇರೆ ದೇಶಗಳ
ಸಂಸತ್ತುಗಳಲ್ಲಿ ಕೆಲವೊಂದು ಪದಬಳಕೆ ನಿಷಿದ್ಧ ಎಂಬುದನ್ನೂ ನಾನು ಬ. ನಮ್ಮ ದೇಶದಲ್ಲಿ ಇದು 1954ರಲ್ಲಿ ಪ್ರಾರಂಭ ವಾಯಿತು. ಸಭಾದ್ಯಕ್ಷರು ಕೆಲವೊಂದು ಪದಗಳ ಬಳಕೆ ನಿಷಿದ್ಧ ಎಂದು ಪರಿಗಣಿಸತೊಡಗಿದರು. ತದನಂತರದಲ್ಲಿ ಇದನ್ನು
ರಾಜ್ಯಗಳ ವಿಧಾನಸಭೆಗಳೂ ಅಳವಡಿಸತೊಡಗಿದವು. ಆ ನಂತರದಲ್ಲಿ ಪ್ರತಿ ವರ್ಷ ಹೊಸ ಪಟ್ಟಿಗಳ ಬಿಡುಗಡೆಯಾಗು ತ್ತಲೇ ಬಂತು. ಆ ಬಗ್ಗೆ ದೊಡ್ಡ ಚರ್ಚೆ ಶುರುವಾಗಿದ್ದು ಪ್ರಾಯಶಃ ಈ ವರುಷವೇ ಎಂದೆನಿಸುತ್ತದೆ.
ವ್ಯಕ್ತಿಗತವಾಗಿ ಹೇಳಬೇಕೆಂದರೆ, ನನ್ನ ಪ್ರಕಾರ ಬ್ರಹ್ಮ ಎಂದರೆ ಆತ ಸೃಷ್ಟಿಕರ್ತ. ನಮ್ಮ ದೇಶದ ಸಂಸ್ಕೃತಿ ಮತ್ತು ಸಂಪ್ರ ದಾಯದಲ್ಲಿ ಇದು ಹಾಸುಹೊಕ್ಕಾಗಿದೆ. ಪದಗಳು ನಮ್ಮ ಭಾವನೆಯ ಪ್ರತಿಬಿಂಬ. ಭಾರತೀಯ ಪರಂಪರೆ ಮತ್ತು ಸಂಸ್ಕೃತಿ ಕೂಡ ಅದನ್ನೇ ಪ್ರತಿಪಾದಿಸುತ್ತದೆ. ಪದಗಳು ವ್ಯಕ್ತಿಯ ಭಾವನೆಯನ್ನು ಬಿಂಬಿಸುವ ಅಂಶಗಳು. ನಿಂದನೆಯನ್ನು ಹೊರತು ಪಡಿಸಿದರೆ ಇನ್ನಾವುದೇ ಪದಗಳು ಅಸಾಂವಿಧಾನಿಕವಲ್ಲ.
ಮಾತುಗಳು ಗಡಸಾಗಿರಬಹುದು, ಆದರೆ ಅವುಗಳು ಮಾರಕವಾಗಲಾರವು. ಒಂದು ಸಣ್ಣ ಮಾತು ಸಂಬಂಧಗಳನ್ನು ಕದಡಬಲ್ಲದು. ಬಿಲ್ಲಿನಿಂದ ಹೊರಟ ಬಾಣ ಮತ್ತು ನಾಲಿಗೆಯಿಂದ ಹೊರಟ ಮಾತು ಎಂದಿಗೂ ಹಿಂತಿರುಗಿ ಪಡೆಯಲಾಗದು.
ಸಾಮಾಜಿಕವಾಗಲೀ, ಸಾಂಸದಿಕವಾಗಲೀ ಪದಗಳನ್ನು ಸಾಕಷ್ಟು ಚಿಂತನೆಯೊಂದಿಗೆ ಬಳಸಬೇಕು. ರಾಮಾಯಣ, ಮಹಾಭಾರತದ ಕಾಲದಲ್ಲೂ ಅಷ್ಟೆ ಮಾತು ಸಾಕಷ್ಟು ಸಂಕಷ್ಟವನ್ನು ತಂದೊಡ್ಡಿದೆ.
ನನ್ನ ವ್ಯಕ್ತಿಗತ ಅನುಭವದ ಪ್ರಕಾರ ಹೇಳುವುದಾದರೆ, ನೀವು ಇನ್ನೊಬ್ಬರನ್ನು ತೊಂದರೆಗೀಡು ಮಾಡುವ ಯಾವುದೇ ಮಾತುಗಳನ್ನೂ ಬಳಸ ಬೇಕಿಲ್ಲ. ಪ್ರಾಯಶಃ ನಾನು ಇದನ್ನು ಇಲ್ಲಿ ಉಖಿಸಿz ಎಂದೆನಿಸುತ್ತದೆ. ಹೇಮ್ ಬರೂವಾ ಒಮ್ಮೆ
ನೆಹರೂಜಿಯವರನ್ನು ನಿಂದಿಸಿದ್ದರು. ಇದಕ್ಕೆ ಹೊರತಾಗಿಯೂ ನೆಹರೂ ಅವರು ಬರೂವಾ ಅವರನ್ನು ಚಹಾಕೂಟಕ್ಕೆ ಆಮಂತ್ರಿಸಿದ್ದರು. ‘ನೀವು ಬಹಳ ಚೆನ್ನಾಗಿ ಮಾತನಾಡುತ್ತೀರಿ, ಆದರೆ ಬೇಗ ಸಿಟ್ಟಾಗುತ್ತೀರಿ’ ಎಂದಿದ್ದರು.
ಫಿರೋಜ್ ಗಾಂಽ ಕೂಡ ಅವರ ಆಪ್ತ ವಲಯದಲ್ಲಿದ್ದರು, ಆದರೆ ಅವರು ಸಂತುಲಿತವಾದ ನಡವಳಿಕೆಯನ್ನು ತೋರುತ್ತಿದ್ದರು. ಅವರ ನಡುವಣ ಮಾತುಕತೆಗಳಲ್ಲಿ ಒಂದು ಸುಮಧುರ ಬಾಂಧವ್ಯವಿತ್ತು. ಆದರೆ ಇಂದು ಸಂಬಂಧಗಳು ಹಳಸುತ್ತಿವೆ.
ಬಿಜೆಪಿ, ಕಾಂಗ್ರೆಸ್, ಲಾಲೂಜಿ, ಮಮತಾ ದೀದಿ, ಜಯಲಲಿತಾ, ಕರುಣಾನಿಧಿ ಇವರುಗಳ ನಡುವೆ ಹಲವು ವೈರುಧ್ಯಗಳಿವೆ. ವಿರೋಧ ಪಕ್ಷಗಳ ನಾಯಕರ ಹೆಸರು ಹೇಳುತ್ತಿದ್ದಂತೆ ಇಂದು ಎಲ್ಲರೂ ಮುಗಿಬೀಳುತ್ತಾರೆ.
ಸರ್ವೋಚ್ಚ ನ್ಯಾಯಾಲಯದಲ್ಲೂ ಹಲವಾರು ಬಾರಿ ಮಾತುಕತೆಗಳು ನಡೆದಿವೆ, ಆದರೆ ಅಲ್ಲಿ ಯಾವತ್ತೂ ಅಸಾಂವಿಧಾನಿಕ ಪದಬಳಕೆ ಆಗಿಲ್ಲ. ಅಲ್ಲ ಉತ್ತಮ ನಡವಳಿಕೆ ಮತ್ತು ಶಿಷ್ಟಾಚಾರದ ಕುರಿತೇ ಮಾತುಕತೆಯಾಗುತ್ತಿತ್ತು. ಆಡಳಿತ ಪಕ್ಷ
ಪ್ರತಿಪಕ್ಷದೊಂದಿಗೆ ಸೌಹಾರ್ದಯುತ ಸಂಬಂಧ ಇರಿಸಿಕೊಳ್ಳಬೇಕೆಂಬುದು ನಾವೆಲ್ಲರೂ ಬಯಸುವ ಸಂಗತಿ. ಅಂತೆಯೇ ಪ್ರತಿಪಕ್ಷಗಳು ಕೂಡ ಸಾಂವಿಧಾನಿಕ ನಡವಳಿಕೆಯಲ್ಲಿ ಸಾಕಷ್ಟು ಗಮನವಿಡಬೇಕು ಎಂಬುದನ್ನು ನಾವೆಲ್ಲರೂ ಬಯಸುತ್ತೇವೆ.
ಇಂದಿನ ಯುವಜನಾಂಗ ಸಂಸದರ ಮತ್ತು ಶಾಸಕರ ನಡವಳಿಕೆಗಳನ್ನು ಗಮನಿಸುತ್ತಲೇ ಇರುತ್ತದೆ. ಹಾಗಾಗಿ ಸಂಸದರ ನಡವಳಿಕೆಗಳು ತತ್ವಬದ್ಧವಾಗಿರಬೇಕು. ಅವರ ನಡವಳಿಕೆ ಕ್ರಮಬದ್ಧವಾಗಿದ್ದರೆ ಯಾವುದೇ ಅಸಾಂವಿಧಾನಿಕ ನಡವಳಿಕೆ ತಲೆ ದೋರುವುದಿಲ್ಲ.
ಮುಗಿಸುವ ಮುನ್ನ ಒಂದು ಮಾತು ಸಂಸತ್ತಿನ ಕುರಿತಾದ ಒಂದು ಉಪಾಖ್ಯಾನ ಹೀಗೆ ಹೇಳುತ್ತದೆ. 1956ರಲ್ಲಿ ಗೋಡ್ಸೆ ಎಂಬ ಪದವನ್ನು ಅಸಾಂವಿಧಾನಿಕ ಎಂದು ಪರಿಗಣಿಸಲಾಗಿತ್ತು. 2015ರಲ್ಲಿ ರಾಜ್ಯಸಭೆಯ ಉಪಸಭಾಪತಿ ಪಿ.ಜೆ. ಕುರಿಯನ್, ಗೋಡ್ಸೆ ಎಂಬ ಪದವನ್ನು ಬಳಸುವುದನ್ನು ನಿಷೇಽಸಿದರು. ಅದೇ ವಿಷಯವನ್ನು ಪ್ರಮುಖವಾಗಿಟ್ಟುಕೊಂಡು ಶಿವಸೇನೆಯ ರಾಜ್ಯಸಭಾ ಸದಸ್ಯ ಹೇಮಂತ ತುಕಾರಾಮ ಗೋಡ್ಸೆ, ಲೋಕಸಭೆಯ ಅಧ್ಯಕ್ಷರಾಗಿದ್ದ ಸುಮಿತ್ರಾ ಮಹಾಜನರಿಗೆ ಪತ್ರ ವೊಂದನ್ನು ಬರೆದು, ನನ್ನ ಉಪನಾಮ ಗೋಡ್ಸೆ ಆಗಿದೆ, ಇದನ್ನು ನೀವು ಕಡತದಿಂದ ತೆಗೆದು ಹಾಕುವಿರಾ? ಎಂದು ಪ್ರಶ್ನಿಸಿ ದ್ದರು.
ನಂತರ ದಲ್ಲಿ ಸಭಾಧ್ಯಕ್ಷರು ಗೋಡ್ಸೆ ಪದವನ್ನು ಅಸಾಂಸದಿಕ ಪಟ್ಟಿಯಿಂದ ತೆಗೆದುಹಾಕಿದರು. ಅಷ್ಟೇ ಅಲ್ಲದೇ ನಾಥೂರಾಂ ಗೋಡ್ಸೆ ಎಂಬ ಹೆಸರನ್ನು ಪೂರ್ಣವಾಗಿ ನಿಷೇಽಸಿದರು.