ಬಹಳಷ್ಟು ಮಹಿಳೆಯರಲ್ಲಿ ಅಂಡರ್‌ವೈಯರ್ ಬ್ರಾ ಧರಿಸುವ ಬಗ್ಗೆ ಸಾಕಷ್ಟು ಗೊಂದಲ ಹಾಗೂ ಅನುಮಾನಗಳು ಇದ್ದೇ ಇವೆ. ಅಂಡರ್‌ವೈಯರ್ ಬ್ರಾ ಧರಿಸುವುದರಿಂದ ಬ್ರೆಸ್ಟ್ ಕ್ಯಾನ್ಸರ್, ಪಕ್ಕೆಲುಗಳ ಸೆಳೆತ, ಮೂಳೆ ಸವೆತ, ಬೆನ್ನು ನೋವು ಸೇರಿದಂತೆ ಇತರೆ ಆರೋಗ್ಯ ಸಮಸ್ಯೆ ಬರಬಹುದು ಎಂಬ ಭಯದಲ್ಲಿಯೇ ಇಂಥ ಬ್ರಾಗಳನ್ನು ಖರೀದಿ ಮಾಡಲು ಮಹಿಳೆಯರು ಹಿಂದೇಟು ಹಾಕುತ್ತಾರೆ.
ಸಾಕಷ್ಟು ಮಹಿಳೆಯರು ಬಾಯಿಂದ ಬಾಯಿಗೆ ಹರಡಿದ ಊಹಾಪೋಹಗಳನ್ನೇ ನಿಜವೆಂದು ನಂಬಿ ಇಂಥ ಬ್ರಾಗಳ ಖರೀದಿಗೂ ಮುಂದಾಗುವುದಿಲ್ಲ. ಹಾಗಿದ್ದರೆ ಅಂಡರ್‌ವೈಯರ್ ಬ್ರಾ ಧರಿಸುವುದರಿಂದ ಇಷ್ಟೆಲ್ಲಾ ಆರೋಗ್ಯ ಸಮಸ್ಯೆ ಬರಲಿದೆಯೇ?. ಇದಕ್ಕೆ ಫೋರ್ಟಿಸ್ ಆಸ್ಪತ್ರೆ ಸರ್ಜಿಕಲ್ ಆಂಕೋಲಜಿ ನಿರ್ದೇಶಕರಾದ ಡಾ.ಸಂದೀಪ್ ನಾಯಕ್ ಸೂಕ್ತ ಉತ್ತರ ನೀಡಿದ್ದಾರೆ.
* ಅಂಡರ್‌ವೈಯರ್ ಬ್ರಾ ಧರಿಸುವುದರಿಂದ ಸ್ತನ ಕ್ಯಾನ್ಸರ್ ಬರಲಿದೆಯೇ?:* ಖಂಡಿತ ಇಲ್ಲ. ಅಂಡರ್ ವೈಯರ್ ಬ್ರಾ ಹಾಗೂ ಕ್ಯಾನ್ಸರ್‌ಗೂ ಯಾವುದೇ ಸಂಬಂಧವಿಲ್ಲ. ಕ್ಯಾನ್ಸರ್ ಎನ್ನುವುದು ನಮ್ಮ ಜೀವನ ಶೈಲಿಯಲ್ಲಿನ ಬದಲಾವಣೆ ಹಾಗೂ ಡಿಎನ್‌ಎ ಬದಲಾವಣೆಯಿಂದ ಕ್ಯಾನ್ಸರ್ ಬರಲಿದೆ. ಅಂಡರ್‌ವೈಯರ್ ಬ್ರಾ ಧರಿಸುವು ದರಿಂದ ಆ ಭಾಗದಲ್ಲಿ ರಕ್ತ ಕಟ್ಟುವುದರಿಂದದ ಕ್ಯಾನ್ಸರ್ ಬರಬಹುದು ಎನ್ನುವುದು ಊಹಾಪೋಹ ಗಳಷ್ಟೆ. ಹೀಗಾಗಿ ಯಾವುದೇ ಸಂಕೋಚವಿಲ್ಲದೇ ಅಂಡರ್‌ವೈಯರ್ ಬ್ರಾಗಳನ್ನು ನಿಮ್ಮ ಇಚ್ಚೆಗನುಗುಣವಾಗಿ ಹಾಗೂ ದೇಹಕ್ಕನುಗುಣವಾಗಿ ಧರಿಸಬಹುದು.
ಬೆನ್ನುನೋವಿಗೆ ಅಂಡರ್‌ವೈಯರ್ ಬ್ರಾ ಕಾರಣವಾಗಬಹುದೇ?: ಕೆಲವೊಮ್ಮೆ ನೀವು ಧರಿಸುವ ಬ್ರಾ ಹೆಚ್ಚು ಬಿಗಿಯಾಗಿದ್ದರೆ, ನಿಮ್ಮ ಸೈಜಿಗೆ ಹೊಂದಿಕೆ ಯಾಗದೇ ಇರುವ ಬ್ರಾಗಳಾದರೆ ಅದರಿಂದ ಬಿಗಿತ ಉಂಟಾಗಿ ಬೆನ್ನು ನೋವಿಗೆ ಕಾರಣವಾಗಬಹುದೇ ಹೊರತು ಅಂಡರ್‌ವೈಯರ್ ಬ್ರಾಗಳಿಂದಲೇ ಬೆನ್ನು ನೀವು ಬರಲಿದೆ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ.
ಅಂಡರ್‌ವೈಯರ್ ಬ್ರಾ ದೀಘ್ರಾವಧಿವರೆಗೆ ಧರಿಸಲು ಒಳ್ಳೆಯದೇ: ಬ್ರಾ ಧರಿಸುವುದು ಅವರವರ ಕಂಪರ್ಟಬಲ್‌ಗೆ ಸಂಬಂಧಿಸಿದ್ದು. ರಾತ್ರಿ ಮಲಗುವ ಹೊತ್ತು, ಮನೆಯಲ್ಲಿ ಇರುವ ಸಂದರ್ಭದಲ್ಲಿ ಬ್ರಾ ಧರಿಸದೇ ಇದ್ದರೆ ರಕ್ತ ಸಂಚಲನ ಸರಾಗವಾಗಿ ಆಗಲು ಸಹಕಾರಿಯಾಗುತ್ತದೆ. ಹೊರಗಡೆ ಹೋಗುವ ಸಂದರ್ಭದಲ್ಲಿ ಯಾವುದೇ ರೀತಿಯ ಬ್ರಾಗಳನ್ನಾದರೂ ಧರಿಸಬಹುದು. ಅಂಡರ್‌ವೈಯರ್ ಬ್ರಾಗಳಿಂದಲೇ ಆರೋಗ್ಯ ಸಮಸ್ಯೆ ಬರಬಹುದು ಎನ್ನುವ ಕಲ್ಪನೆ ತಪ್ಪು.
ಅಂಡರ್‌ವೈಯರ್ ಬ್ರಾ ಧರಿಸುವುದರಿಂದ ಆರೋಗ್ಯ ಸಮಸ್ಯೆ ಬರಬಹುದೇ: ಯಾವುದೇ ರೀತಿಯ ಸಮಸ್ಯೆ ಇಲ್ಲ. ಯಾವ ವಸ್ತು ಅಥವಾ ಉಡುಪಾ ಗಲಿ ಅಗತ್ಯಕ್ಕಿಂತ ಹೆಚ್ಚಾಗಿ ಬಳಸುವುದು ಯೋಗ್ಯವಲ್ಲ. ಆದರೆ ಅಗತ್ಯಕ್ಕೆ ತಕ್ಕಂತೆ ಬಳಸುವುದು ಉತ್ತಮ. ಅಂಡರ್‌ವೈಯರ್ ಬ್ರಾಗಳು ಸ್ತನಗಳು ಸಮ ತಟ್ಟಾಗಿ ಕೂರಲು ಸಹಾಯವಾಗಲಿ ಎಂಬ ಕಾರಕ್ಕಷ್ಟೇ ವೈಯರ್ ಬಳಕೆ ಮಾಡಲಾಗಿದೆ. ಇದರಿಂದ ಸ್ತನಕ್ಕಾಗಲಿ ಅಥವಾ ಇತರೆ ಭಾಗಗಳಿಗೆ ಸಮಸ್ಯೆ ಉಂಟು ಮಾಡುವುದಿಲ್ಲ.