Thursday, 7th December 2023

ಹಿರಿಯರ ಮನಸ್ಸು ಗೆಲ್ತಾರಾ ವಿಜಯೇಂದ್ರ ?

ಪ್ರಚಲಿತ

ಮಣಿಕಂಠ ಹಿರೇಮಠ

ಕೊನೆಗೂ ಕರ್ನಾಟಕದ ಬಿಜೆಪಿ ಕಾರ್ಯಕರ್ತರಿಗೆ ವರಿಷ್ಠರು ದೀಪಾವಳಿಯ ಉಡುಗೊರೆಯೊಂದನ್ನು ಶುಭಸೂಚಕವಾಗಿ ವಿಜಯೇಂದ್ರ ಯಡಿಯೂರಪ್ಪನವರ ರೂಪದಲ್ಲಿ ನೀಡಿದ್ದಾರೆ. ರಾಜ್ಯ ರಾಜಕೀಯದ ಪಡಸಾಲೆಯಲ್ಲಿ ಬಹುಚರ್ಚಿತ ವಿಷಯವಾಗಿದ್ದ ರಾಜ್ಯಾಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕನ ಹುದ್ದೆಗೆ ಅಂತಿಮವಾಗಿ ಹೈಕಮಾಂಡ್ ಎಲ್ಲ ದೃಷ್ಟಿಕೋನಗಳಿಂದ ಪರಾಮರ್ಶೆ ನಡೆಸಿ ಶಿಕಾರಿಪುರ ಶಾಸಕ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಅವರಿಗೆ ಮುಂಬಡ್ತಿ
ನೀಡಿ ಅಧ್ಯಕ್ಷರನ್ನಾಗಿಸಿದೆ.

ರಾಜ್ಯ ಘಟಕದ ಅಧ್ಯಕ್ಷರ ಕುರ್ಚಿಗೆ ಸುಮಾರು ಅರ್ಧ ಡಜನ್‌ಗೂ ಅಧಿಕ ನಾಯಕರು ಟವಲ್ ಹಾಕಿದ್ದರೂ ಯಾವ ಯಾವ ಕಡೆಗಳಿಂದ ತಮ್ಮ ಪರವಾಗಿ ಹೈ ಕಮಾಂಡ್ ಮಟ್ಟದಲ್ಲಿ ಸುದ್ದಿ ತಲುಪಿಸುವ ಕಾರ್ಯ ಮಾಡಬೇಕು ಮಾಡಿದ್ದರು. ಆದರೆ ಕೊನೆಗೆ ಅಳೆದು ತೂಗಿ ಯಡಿಯೂರಪ್ಪನವರ ಕೃಪಾಕಟಾಕ್ಷವಿಲ್ಲದೆ ಕರ್ನಾಟಕವನ್ನು ಗೆಲ್ಲಲಾಗದು ಎಂದು ವರಿಷ್ಠರಿಗೆ ಮನವರಿಕೆಯಾದ ನಂತರ ಬಿಎಸ್‌ವೈಗೇ ಜೈ ಅಂದಿದ್ದಾರೆ.

೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಿ ಅಧಿಕಾರ ಹಿಡಿದಿದ್ದರೆ ರಾಜ್ಯ ಅಧ್ಯಕ್ಷ ಆಯ್ಕೆ ಕಗ್ಗಂಟಾಗುತ್ತಿರಲಿಲ್ಲ. ಹಿಂದಿನ ಅಧ್ಯಕ್ಷರ ಅವಧಿಯಲ್ಲೇ ಗೆಲುವು ಆಗಿದ್ದರಿಂದ ಅವರನ್ನೇ ಮುಂದುವರಿಸುವ ಸಾಧ್ಯತೆ ಗಳಿದ್ದವು. ಚುನಾವಣೆಯಲ್ಲಿ ಹಿನ್ನಡೆಯಾದ ನಂತರ ಬಿಜೆಪಿ ಅಕ್ಷರಶಃ ಹಿರಿಯನಿಲ್ಲದ ಮನೆಯಾಗಿತ್ತು. ಹೇಳುವವರು ಕೇಳುವವರು ಇರಲೇ ಇಲ್ಲ. ಅನೇಕ ಮಾಜಿ ಹಾಲಿ ಶಾಸಕರು ಸಂಸದರುಗಳು ಸಾಮೂಹಿಕ ಪಕ್ಷಾಂತರ ಪರೇಡ್ ನಡೆಸಲು
ಅಣಿಯಾಗಿದ್ದರು. ಅಂತಹವರನ್ನೆಲ್ಲ ಮಾತನಾಡಿಸಿ ಸಮಸ್ಯೆ ಬಗೆಹರಿಸುವಂತಹ ಕಾರ್ಯವನ್ನು ಮಾಡುವವರು ಯಾರು ಇರಲಿಲ್ಲ. ಈಗ ಅಧಿಕೃತವಾಗಿ ನಾಯಕರೊಬ್ಬರು ಸಿಕ್ಕಂತಾಗಿದೆ.

ವಿಜಯೇಂದ್ರರ ಆಯ್ಕೆಗೆ ಕಾರಣ: ರಾಜ್ಯ ಬಿಜೆಪಿ ಸಾರಥಿ ಯಾಗಿ ಬಿ.ವೈ.ವಿಜಯೇಂದ್ರ ಆಯ್ಕೆಯಾಗಲು ಹೈಕಮಾಂಡ್ ಮಟ್ಟದಲ್ಲಿ ಯಡಿಯೂರಪ್ಪನವರ ಪ್ರಭಾವ ತುಂಬಾ ಕೆಲಸ ಮಾಡಿದೆ ಎನ್ನುವುದನ್ನು ಎಲ್ಲರೂ ಬಲ್ಲರು. ನಾಲ್ಕು ದಶಕಗಳ ಕಾಲ ತಮ್ಮೊಂದಿಗೆ ಪಕ್ಷಕ್ಕೂ ಅಡ್ರೆಸ್ ಕೊಟ್ಟಂತಹ ಪ್ರಶ್ನಾತೀತ ನಾಯಕ ಯಡಿಯೂರಪ್ಪ. ಅಂತಹ ನಾಯಕನಿಗೆ ಅಗೌರವದ ವಿದಾಯ ಯಾರು ನಿರೀಕ್ಷಿಸಿರ ಲಿಲ್ಲ. ಪ್ರವಾಹ ಮತ್ತು ಕೋವಿಡ್ ಒದಗಿಬಂದ ಸಂದರ್ಭದಲ್ಲಿ Age Just A Number ಎಂದು ಯುವಕರೇ ನಾಚುವಂತೆ ಕಾರ್ಯನಿರ್ವಹಿಸಿದ್ದ ಅವರನ್ನು ಕೇವಲ ವಯಸ್ಸಿನ ಕಾರಣ ನೀಡಿ ಅಽಕಾರದಿಂದ ಕೆಳಗಿಳಿಸಿದಾಗ ಆ ಹಿರಿಯ ಜೀವಕ್ಕೆ ಎಷ್ಟು ನೋವಾಗಿರಬೇಡ.

ಬಿಎಸ್‌ವೈ ಕೆಳಗಿಳಿದ ದಿನದಿಂದಲೇ ರಾಜ್ಯ ಬಿಜೆಪಿಯ ಅವನತಿ ಆರಂಭ ವಾಗಿತ್ತು. ಲಿಂಗಾಯಿತ ಸಮುದಾಯದ ಸ್ವಾಮೀಜಿಗಳ ಆದಿಯಾಗಿ ಅವರ ಬೆಂಬಲಿಗರು ನಿರ್ಧಾರವನ್ನು ಬದಲಿಸುವಂತೆ ಹೈಕಮಾಂಡ್‌ಗೆ ಮನವಿ ಮಾಡಿದರೂ ಪ್ರಯೋಜನ ವಾಗಲಿಲ್ಲ. ಇದನ್ನೆಲ್ಲ ಪರಿಗಣಿಸಿದ ವರಿಷ್ಠರು ತೆರವಾಗಿರುವ ಸ್ಥಾನಕ್ಕೆ ಇನ್ನೊಂದು ಸಮುದಾಯದವರನ್ನು ನೇಮಿಸುವ ಬದಲು ಲಿಂಗಾಯತರನ್ನೇ ಮುಖ್ಯಮಂತ್ರಿ ಮಾಡಿದರೆ ಎಲ್ಲ ತಣ್ಣಗಾಗುತ್ತದೆ ಎಂದು ಭಾವಿಸಿ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಗಾದಿಗೇರಿಸಿದ್ದರು. ಆದರೆ ಯಡಿಯೂರಪ್ಪನವರ ಬೆಂಬಲಿಗರು ಬೇರೆಯವರಲ್ಲಿ ತಮ್ಮ ನಾಯಕನನ್ನು ನೋಡಲು ಸಿದ್ಧರಿರಲಿಲ್ಲ. ಬೊಮ್ಮಾಯಿ ಅವರ ಸಂಪುಟ ರಚನೆ ಸಂದರ್ಭದಲ್ಲಿ ವಿಜಯೇಂದ್ರರನ್ನಾದರು ಮಂತ್ರಿ ಮಾಡುತ್ತಾರೆ ಅಂದುಕೊಂಡಿದ್ದರು. ಆದರೆ
ಅವರಿಗಾಗದವರು ವರಿಷ್ಠರ ಕಿವಿ ಚುಚ್ಚಿದ್ದರಿಂದ ಇವರನ್ನು ಮಂತ್ರಿ ಮಾಡಬಾರದೆಂದು ಸಂಪುಟ ವಿಸ್ತರಣೆಯನ್ನೂ ಮಾಡದೆ ನಾಲ್ಕೈದು ಸ್ಥಾನವನ್ನು ಖಾಲಿ ಇಡಬೇಕಾಯಿತು.

ಅಂತಿಮವಾಗಿ ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದ ರಾಜ್ಯದ ಜನತೆ ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಪ್ರತ್ಯುತ್ತರ ನೀಡಿದ್ದು ಈಗ ಇತಿಹಾಸ.
ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿದ್ದು ಆಡಳಿತರೂಢ ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿದೆ. ಆರು ತಿಂಗಳಿನಿಂದ ವಿಪಕ್ಷ ನಾಯಕರಿಲ್ಲ. ರಾಜ್ಯಾಧ್ಯಕ್ಷರಿಲ್ಲ ಎಂಬ ಹೇಳಿಕೆ ನೀಡುತ್ತಾ ಜನರ ಗಮನವನ್ನು ತಮ್ಮತ್ತ ಸೆಳೆಯುವ ತಂತ್ರ ವನ್ನು ಅನುಸರಿಸಿತ್ತು ಕಾಂಗ್ರೆಸ್. ಅಷ್ಟೇ ಅಲ್ಲದೆ ಬಿಜೆಪಿ ಯಡಿಯೂರಪ್ಪನವರನ್ನು ನಿರ್ಲಕ್ಷ್ಯ ಮಾಡುವ ಮೂಲಕ ಲಿಂಗಾಯತರಿಗೆ ಅನ್ಯಾಯ ಮಾಡಿದೆ ಎಂಬ Sಛ್ಞಿb ಸೃಷ್ಟಿಸಿತ್ತು ಈಗ ಅದಕ್ಕೆಲ್ಲ ಫುಲ್ ಸ್ಟಾಪ್ ಬಿದ್ದಿದೆ.

ಯಡಿಯೂರಪ್ಪನವರ ಮಗ ಎಂಬ ಕಾರಣಕ್ಕೆ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ ಎಂದು ಕಾಂಗ್ರೆಸ್ಸಿಗರು ಟೀಕೆ ಮಾಡುತಿದ್ದಾರೆ. ಆದರೆ ವಿದ್ಯಾರ್ಥಿ ದೆಸೆಯಿಂದಲೇ ಎಬಿವಿಪಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಮುಂದೆ ರಾಜ್ಯ ಯುವ ಮೋರ್ಚಾ ಅಧ್ಯಕ್ಷರಾಗಿ, ರಾಜ್ಯ ಘಟಕದ ಉಪಾಧ್ಯಕ್ಷ ಕಾರ್ಯನಿರ್ವಹಿಸಿದ್ದಲ್ಲದೆ ಪಕ್ಷ ಗೆಲ್ಲಲು ಸಾಧ್ಯವೇ ಇಲ್ಲ ಎಂದುಕೊಂಡಿದ್ದ ಕೆ.ಆರ್.ಪೇಟೆ ಮತ್ತು ಶಿರಾ ಉಪಚುನಾವಣೆ ನೇತೃತ್ವ ವಹಿಸಿಕೊಂಡು ಅಭ್ಯರ್ಥಿ
ಗಳನ್ನು ಗೆಲ್ಲಿಸಿಕೊಂಡು ಬಂದು ತಮ್ಮ ಸಾಮರ್ಥ್ಯ ನಿರೂಪಿಸಿದ್ದಾರೆ.

ಬೀದರ್‌ನಿಂದ ಚಾಮರಾಜನಗರದವರೆಗೆ ವಿಜಯೇಂದ್ರರ ಬಗ್ಗೆ ಯುವ ಸಮುದಾಯದಲ್ಲಿ ಒಂದು ಸೆಳೆತವಿದೆ. ಹಿರಿಯ ಕಾರ್ಯಕರ್ತರು ಇವರಲ್ಲಿ ಯಡಿಯೂರಪ್ಪ
ನವರನ್ನು ನೋಡುತ್ತಾರೆ. ಕ್ರೀಡಾಪಟುವಿನ ಮಗ ತನ್ನದ ಆಟದ ಮೂಲಕ ಕ್ರೀಡಾಪಟುವಾಗುತ್ತಾನೆ, ಕಲಾವಿದನ ಮಗ ತನ್ನ ಅಭಿನಯದ ಮೂಲಕ ಕಲಾವಿದನಾಗುತ್ತಾನೆ. ತಮ್ಮ ಸಂಘಟನಾ ಚಾತುರ್ಯದ ಮೂಲಕ ವಿಜಯೇಂದ್ರ ರಾಜ್ಯಧ್ಯಕ್ಷರಾದರೆ ತಪ್ಪೇನು?

ಜೆಡಿಎಸ್ ಬಿಜೆಪಿ ಮೈತ್ರಿ: ರಾಜ್ಯಧ್ಯಕ್ಷರ ಹುzಗೆ ಒಕ್ಕಲಿಗ ನಾಯಕರುಗಳಾದ ಶೋಭಾ ಕರಂದ್ಲಾಜೆ ಮತ್ತು ಸಿಟಿ ರವಿ ಹೆಸರು ಬಲವಾಗಿ ಕೇಳಿಬಂದಿತ್ತು. ಹೈಕಮಾಂಡ್ ಮಟ್ಟದಲ್ಲಿಯೂ ಈ ಹೆಸರುಗಳಿಗೆ ಒಪ್ಪಿಗೆ ಇತ್ತು. ಆದರೆ ಚುನಾವಣೆಯಲ್ಲಿ ನೀಡಿದ ಹೇಳಿಕೆಗಳು ಸಿ.ಟಿ.ರವಿ ಅವರಿಗೆ ದುಬಾರಿಯಾದರೆ ಶೋಭಾ ಕರಂದ್ಲಾಜೆ ಅವರು ಸ್ವತಃ ಆಸಕ್ತಿ ತೋರದ ಕಾರಣ ಮತ್ತು ಮಹಿಳೆಯೊಬ್ಬರು ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ರಾಜ್ಯವನ್ನೆಲ್ಲ ಸುತ್ತಿ ಪಕ್ಷ ಸಂಘಟಿಸುವುದು ಕಷ್ಟವಾಗುವುದೆಂದು ಪರಿಗಣಿಸಿ ಈ ಆಯ್ಕೆ ಮಾಡಲಾಯಿತು. ಜೆಡಿಎಸ್ ಕೂಡ ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವುದರಿಂದ ಒಕ್ಕಲಿಗ ಮತಗಳ ವಿಷಯವಾಗಿ ಬಿಜೆಪಿ ಸ್ವಲ್ಪ ನಿಟ್ಟುಸಿರು ಬಿಡಬಹುದು.

ಯಡಿಯೂರಪ್ಪ ನವರನ್ನು ದೂರವಿಟ್ಟು ಈ ಮೈತ್ರಿ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಅವರಿಗೂ ಮನವರಿಕೆಯಾಗಿರುವುದರಿಂದ ಬಿಜೆಪಿಯ ನೂತನ ರಾಜ್ಯಧ್ಯಕ್ಷರ ಆಯ್ಕೆಯ ಬಗ್ಗೆ ಅವರಿಗೂ ಸಂತಸವಿದೆ.

ಮುಂದಿರುವ ಸವಾಲುಗಳು: ರಾಜ್ಯದಲ್ಲಿ ಪಕ್ಷದ ಚುಕ್ಕಾಣಿ ಯನ್ನೇನೋ ವಿಜಯೇಂದ್ರ ಹಿಡಿದಿದ್ದಾರೆ. ಆದರೆ ಸ್ವಾಗತಕ್ಕೆ ಹೂವಿನ ಬದಲು ಮುಳ್ಳುಗಳೇ ಸಿದ್ಧವಾಗಿವೆ. ಅಧ್ಯಕ್ಷ ಹುದ್ದೆಯ ಆಕಾಂಕ್ಷಿಗಳಾಗಿದ್ದ ಅನೇಕರು ಅಸಮಾಧಾನದ ಮಾತುಗಳನಾಡುತ್ತಿದ್ದಾರೆ. ಹಿರಿಯರನ್ನೆಲ್ಲ ದೂರವಿಟ್ಟು ಯುವಕನನ್ನು ಆಯ್ಕೆ ಮಾಡಿರುವುದರಿಂದ ಇವರ ಕೈ ಕೆಳಗೆ ಕೆಲಸ ಮಾಡುವುದು ಹೇಗೆ ಎನ್ನುವ ಭಾವನೆ ಸಹಜ. ಆದರೆ ಎರಡನೇ ಹಂತದ ನಾಯಕತ್ವ ರೂಪಿಸುವ ನಿಟ್ಟಿನಲ್ಲಿ ಇದು
ಪಕ್ಷಕ್ಕೂ ಅನಿವಾರ್ಯ. ಹೀಗಾಗಿ ಅಂಥವರನ್ನೆಲ್ಲ ವಿಶ್ವಾಸಕ್ಕೆ ತೆಗೆದುಕೊಂಡು ಮಾರ್ಗದರ್ಶನ ಪಡೆದುಕೊಳ್ಳಬೇಕಿದೆ. ಇನ್ನು ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಎದುರಾಗುವುದರಿಂದ ಪಕ್ಷ ಬಿಡಲು ತುದಿಗಾಲ ಮೇಲೆ ನಿಂತಿರುವವರನ್ನು ಸಮಾಧಾನಪಡಿ ಸುವ ಕಾರ್ಯ ತುರ್ತಾಗಿ ಆಗ ಬೇಕಿದೆ.

ವಿಧಾನಸಭಾ ಚುನಾವಣೆಯಲ್ಲಿ ಮುಗ್ಗರಿಸಿ ರುವ ಬಿಜೆಪಿಗೆ ಚೈತನ್ಯ ತುಂಬಿ ಕಾರ್ಯಕರ್ತರನ್ನು ಸಿದ್ಧಗೊಳಿಸುವುದಿದೆ. ೨೮ ಲೋಕ ಸಭಾ ಕ್ಷೇತ್ರಗಳಲ್ಲಿ ಈಗಾಗಲೇ ೨೫ ಜನ ಬಿಜೆಪಿ ಸಂಸದರಿದ್ದಾರೆ. ಈ ಸಲದ ಚುನಾವಣೆಯಲ್ಲಿ ಕನಿಷ್ಠವೆಂದರು ೨೦ ಸ್ಥಾನವನ್ನಾದರೂ ಗೆದ್ದು ತಮ್ಮ ಮೊದಲ ಪರೀಕ್ಷೆಯಲ್ಲಿ ಯಶಸ್ವಿಯಾಗಿ ತಮ್ಮ ಸಂಘಟನಾ ಶಕ್ತಿಯನ್ನು ರುಜುವಾತು ಮಾಡುವ ಅನಿವಾರ್ಯತೆ ಇದೆ. ಯಡಿ ಯೂರಪ್ಪನವರ ಸಂಪೂರ್ಣ ಬೆಂಬಲ ತಮ್ಮ ಪುತ್ರನಿಗೆ ಸಿಗುವುದರಿಂದ ಹಾಗೂ ಮೋದಿ ನಾಮ ಬಲವಿರುವುದರಿಂದ ಇದೇನು ಕಷ್ಟ ವಾಗದು.

ಇದರಲ್ಲಿ ಯಶಸ್ವಿ ಆದಲ್ಲಿ ದೊಡ್ಡ ನಾಯಕನಾಗಿ ಬೆಳೆಯುವುದು ಅಷ್ಟೇ ಅಲ್ಲದೆ ಅಪ್ಪನಂತೆ ಮಗ ಕೂಡ ಮುಂದಿನ ಹತ್ತು ವರ್ಷಗಳಲ್ಲಿ ಮುಖ್ಯಮಂತ್ರಿ ರೇಸ್‌ನಲ್ಲಿ
ಕಾಣಬಹುದು. ಹಿರಿಯ ನಾಯಕರುಗಳೇ ಹೆಮ್ಮೆ ಪಡುವಂತಹ ಕಾರ್ಯಗಳನ್ನು ವಿಜಯೇಂದ್ರ ಅಧ್ಯಕ್ಷರಾದ ಕ್ಷಣಗಳಿಂದಲೇ ಆರಂಭಿಸಿದ್ದಾರೆ ಬೂತ್ ಅಧ್ಯಕ್ಷರ ಮನೆಗೆ ತೆರಳಿ ಕಾರ್ಯಕರ್ತರ ಪ್ರಾಮುಖ್ಯತೆಯ ಪಾಠ ಮಾಡಿದ್ದ ಅವರು ನಂತರದಲ್ಲಿ ಅಸಮಧಾನಗೊಂಡಿದ್ದರನ್ನೆದ ಸಿ.ಟಿ.ರವಿ ಅವರ ಮನೆಗೆ ಭೇಟಿ ನೀಡಿ ಸಂಘಟನೆಯ ಬಗ್ಗೆ ಯಡಿಯೂರಪ್ಪನವರ ಮಗನಿಗೆ ಏನು ಕಲಿಸೋಕಿಲ್ಲ ಎಂದು ನಿರೂಪಿಸಿದ್ದಾರೆ.

ಅತೃಪ್ತಿ ಏನೇ ಇರಲಿ ಎಲ್ಲರೂ ಸೇರಿ ಪಕ್ಷ ಸಂಘಟಿಸಿದರೆ ಲೋಕಸಭಾ ಚುನಾವಣೆಯಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತದೆ. ಪಕ್ಷಕ್ಕಿಂತ ಸ್ವಹಿತಾಸಕ್ತಿಯೇ ಮುಖ್ಯವಾದರೆ ವಿಧಾನಸಭಾ ಚುನಾವಣೆಯ ಫಲಿತಾಂಶ ಪುನರಾವರ್ತನೆ ನಿಶ್ಚಿತ.

(ಪತ್ರಿಕೋದ್ಯಮ ವಿದ್ಯಾರ್ಥಿ)

Leave a Reply

Your email address will not be published. Required fields are marked *

error: Content is protected !!