Saturday, 12th October 2024

ದುರಂತ ಕಥೆ ಬರೆಯಬಹುದೇ ತಾಲಿಬಾನ್ ?

ಪ್ರಚಲಿತ

ಡಾ.ಆರ್‌.ಜಿ.ಹೆಗಡೆ

ramhegde62@gmail.com

ಅಫ್ಘಾನಿಸ್ತಾನದ ಇತ್ತೀಚಿನ ಪರಿಸ್ಥಿತಿಯ ದೃಶ್ಯಗಳನ್ನು ಟಿ.ವಿ.ಪರದೆಗಳು ತೋರಿಸಿವೆ. ತಾಲಿಬಾನ್ ಕಾಬೂಲ್ ಅನ್ನು ಮರು ಆಕ್ರಮಿಸುತ್ತಿದ್ದಂತೆ ಜನ ಎಲ್ಲವನ್ನೂ ಹಿಂದೆ ಬಿಟ್ಟು, ತಮ್ಮ ದೇಶವನ್ನೇ ತೊರೆದು ಓಡಿಹೋಗಲು ಪ್ರಯತ್ನಿಸಿದರು. ಲಕ್ಷ ಲಕ್ಷ ಜನ. ಮಹಿಳೆಯರು, ಮಕ್ಕಳು ಎಲ್ಲರೂ. ಜೀವಭಯದಿಂದ. ‘ಹೋಗುವುದು
ಎಲ್ಲಿಯಾದರೂ ಸರಿಯೇ. ವಿಮಾನ ಹೋಗುವ ಕಡೆ.

ಇಲ್ಲಿ ಇರುವುದು ಸಾಧ್ಯವೇ ಇಲ್ಲ’, ಹೀಗೆ ಯೋಚಿಸಿದ ಜನ ವಿಮಾನಗಳನ್ನೇರಲು ಹರಸಾಹಸ ನಡೆಸಿದರು. ನಾನೂರು ಜನ ಹೋಗಬಹುದಾದ ವಿಮಾನದಲ್ಲಿ
ಎಂಟು ನೂರು ಜನ ಹೋದರು. ಹತಾಶೆಯ ಮಟ್ಟ ಹೇಗಿತ್ತೆಂದರೆ ಕೆಲವರು ವಿಮಾನಗಳ ರೆಕ್ಕೆಗಳನ್ನು ಹಿಡಿದು ಕುಳಿತು ಪಾರಾಗಲು ಪ್ರಯತ್ನಿಸಿ ಆಕಾಶದಿಂದ ಕೆಳಗೆ ಬಿದ್ದು ಸತ್ತರು. ತಾಯಂದಿರು ’ಅವಾದರೂ ಬದುಕಲಿ’ ಎಂದು ಹಸುಳೆಗಳನ್ನು ಅಮೆರಿಕನ್ ಸೈನಿಕರ ಕಡೆ ಎಸೆದರು. ನಿಲ್ದಾಣದ ಹೊರಗೆ ಬಾಂಬ್ ದಾಳಿಯಲ್ಲಿ ಜನ ಸತ್ತರು. ಗುಂಡೇಟುಗಳಿಗೆ ಬಲಿಯಾದರು.

ಸಾವಿರಾರು ಜನ ಪಾಕಿಸ್ತಾನದ ಗಡಿಯ ಮೂಲಕ ಓಡಿ ಹೋಗಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಅಲ್ಲಿ ಸೈನಿಕರಿಂದ ಗುಂಡು ತಿಂದು ಸತ್ತರು. ದಾರುಣ ದುರಂತಗಳು. ಓಡಿಹೋಗುವುದು ಸಾಧ್ಯವಿದ್ದರೆ ಅಫ್ಘಾನಿಸ್ತಾನ ಖಾಲಿಯೇ ಆಗಿಹೋಗುತ್ತಿತ್ತೇನೋ? ತಮ್ಮ ದೇಶವನ್ನೇ ಬಿಟ್ಟು ಓಡಿಹೋಗಲು ಹೀಗೆ ಲಕ್ಷ ಲಕ್ಷ ಜನ ಮುಂದಾ ಗಿದ್ದು ಇತಿಹಾಸದಲ್ಲಿಯೇ ಮೊದಲ ಬಾರಿ. ಹಾಗೆ ನೋಡಿದರೆ ಅಫ್ಘಾನ್ ಜನರಿಗೆ ಯುದ್ಧ, ಹಿಂಸೆ ಹೊಸದೇನೂ ಅಲ್ಲ. ಕಳೆದ ಐವತ್ತು ವರ್ಷಗಳ ಅಫ್ಘಾನ್ ಚರಿತ್ರೆಯಂತೂ ಯುದ್ಧದಿಂದಲೇ ತುಂಬಿಕೊಂಡಿದ್ದು. ಹಾಗಾಗಿ ಸಾಧಾರಣ ವಾಗಿ ಯುದ್ಧಕ್ಕೆ ಹೆದರದ ಜನರೂ ಈಗ ಓಡಿಹೋಗಲು ಪ್ರಯತ್ನಿಸಿದ್ದಕ್ಕೆ ಏನು ಕಾರಣ? ಕಾರಣಗಳಿವೆ.

ತಾಲಿಬಾನ್ ಕುರಿತು ಸಮರ್ಥನೆಯ ಮಾತುಗಳನ್ನಾಡಿರುವ ಕವಿ, ಹಿಂದಿ ಗೀತ ರಚನೆಗಾರ ಜಾವೇದ್ ಅಖ್ತರ್‌ಗೆ, ಹೈದರಾಬಾದಿನ ಎಂ.ಪಿ ಒವೈಸಿಗೆ ತಿಳಿದಿರಲಿಕ್ಕಿಲ್ಲ. ಆದರೆ ಅಲ್ಲಿನ ಜನರಿಗೆ ತಾಲಿಬಾನ್ ಏನೆಂದು ಗೊತ್ತು. ಅದು ಒಂದು ದೇಶಪ್ರೇಮ ಹೊಂದಿರುವ, ರಾಷ್ಟ್ರೀಯತೆಯ ಭಾವನೆ ಯನ್ನು ಜಾಗೃತಗೊಳಿಸುವ ಸಂಘಟನೆಯಲ್ಲ.

‘ಸಾಂಸ್ಕೃತಿಕ ರಾಜಕೀಯ’ದಲ್ಲಿ ತೊಡಗಿಕೊಂಡಿರುವ ವೇದಿಕೆ ಅಲ್ಲ. ಅವರ ಹೋರಾಟ ವಿದೇಶಿ ಶಕ್ತಿಗಳನ್ನು ಓಡಿಸಿ ತಮ್ಮ ದೇಶವನ್ನು ಮುಕ್ತಗೊಳಿಸುವ
ಸ್ವಾತಂತ್ರ್ಯ ಹೋರಾಟವಲ್ಲ. ತಾಲಿಬಾನ್ ಒಂದು ರಾಜಕೀಯ ಪಕ್ಷವಲ್ಲ.ಅದಕ್ಕೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ರಾಜಕೀಯ ನೀತಿಗಳು ಇಲ್ಲ. ಅಥವಾ ಅದರ ಉದ್ದೇಶ ಅಮೆರಿಕ ಅಥವಾ ಪಾಶ್ಚಿಮಾತ್ಯ ಸಂಸ್ಕೃತಿಗೆ ಮುಖಾಮುಖಿಯಾಗಿ ಒಂದು ಸ್ವದೇಶಿ ಸಂಸ್ಕೃತಿಯನ್ನು ಕಟ್ಟುವುದೂ ಅಲ್ಲ. ತಾಲಿಬಾನ್‌ಗೆ ಆಡಳಿತ ನಡೆಸಲು ಜನಾದೇಶವಿಲ್ಲ. ಬೇಕಿಲ್ಲ ಕೂಡ. ಜನರಿಗೆ ಗೊತ್ತಿರುವ ವಿಷಯವೆಂದರೆ ಅದು ಒಂದು ಪಕ್ಕಾ ಉಗ್ರಗಾಮಿ ಸಂಘಟನೆ. ಅದು ನಂಬಿಕೆ ಇರಿಸಿರುವುದು ಹಿಂಸೆಯಲ್ಲಿ. ಅದರ ಗುರಿ ಒಂದೇ.

ಮಧ್ಯಯುಗದ ಮೈಂಡ್ ಸೆಟ್ ಹೊಂದಿರುವ ಮೌಲ್ವಿಗಳು ಮತ್ತು ಮುಲ್ಲಾಗಳು ಗ್ರಹಿಸಿರುವ ರೀತಿಯ ಇಸ್ಲಾಂಮಿಕ್ ಆದರ್ಶಗಳ ಪರಿಕಲ್ಪನೆಯನ್ನು ಆಧರಿಸಿ
ಅಂತಹ ‘ಎಮಿರಾತ್’ ಅನ್ನು ಜಾರಿಗೆ ತರುವುದು. ಅಂದರೆ ಜನರನ್ನು ’ಶರಿಯಾ’ ಕಾನೂನಿನ ಅಡಿಯಲ್ಲಿ ತರುವದು. ಅಂತಹ ಕಟ್ಟಳೆಯೊಳಗೆ ಬರಲೊಪ್ಪದ
ವರನ್ನು ಕೊಂದು ಹಾಕುವುದು ಅಥವಾ ’ಶರಿಯಾದ’ ತಮ್ಮ ಅರ್ಥೈಸುವಿಕೆಗೆ ಅನುಗುಣವಾಗಿ ಶಿಕ್ಷೆ ನೀಡುವುದು: ಕೈಗಳನ್ನು ಕತ್ತರಿಸುವುದು. ಕಣ್ಣುಗಳನ್ನು
ಕೀಳುವುದು. ಚಾಟಿಯೇಟು ಹೊಡೆಯುವುದು. ಕಲ್ಲುಗಳನ್ನು ಹೊಡೆದು ಸಾಯಿಸುವುದು. ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ನೇಣುಗಂಭಕ್ಕೇರಿಸುವುದು.
ತನ್ಮೂಲಕ ’ಆದರ್ಶ’ ಸಮಾಜವೊಂದರ ರಚನೆ.

ಅಂದರೆ ತಾಲಿಬಾನ್ ಒಂದು ವಿಕ್ರತ ಧಾರ್ಮಿಕ, ಸಾಮಾಜಿಕ ಅಜೆಂಡಾ ಹೊಂದಿದ ಗುಂಪು. ಭಯೋತ್ಪಾದಕ ಗುಂಪುಗಳಾದ ಹಕ್ಕಾನಿ ನೆಟ್ ವರ್ಕ್ ಮತ್ತು ಐ.ಎಸ್.ಐ.ಎಸ್‌ಗಳು. ತಾಲಿಬಾನ್ ಒಂದು ’ರಾಜಕೀಯ’ ಸಂಘಟನೆ ಅಲ್ಲವೇ ಅಲ್ಲ. ಗುರಿ ಆಧುನಿಕ ವೆಲ್ ಫೇರ್ ಸ್ಟೇಟ್ ಒಂದರ ನಿರ್ಮಾಣ ಅಲ್ಲ. ಗುರಿ ಆರ್ಥಿಕ, ಸಾಮಾಜಿಕ ಸುಧಾರಣೆ ಅಥವಾ ಸಾಮಾಜಿಕ ನ್ಯಾಯ ಅಲ್ಲ. ‘ಧರ್ಮರಕ್ಷಣೆಗಾಗಿಯೇ’ ’ಅವತಾರವೆತ್ತಿ’ ಬಂದಿದ್ದು ತಾಲಿ ಬಾನ್. ಧರ್ಮರಕ್ಷಣೆಗಾಗಿ ಅದು ಬಳಸುವ ನ್ಯಾಯಾಂಗ ವ್ಯವಸ್ಥೆ ‘ಹಮ್ಮುರಾಬಿ ಯುಗಕ್ಕೆ’ ಸೇರಿದ್ದು. ಅಂದರೆ ಕೈಗೆ ಕೈ,ಕಾಲಿಗೆ ಕಾಲು ಕತ್ತರಿಸುವುದು.

ಹೀಗಾಗಿ ಅಫ್ಘನ್ ಜನರಿಗೆ ಗೊತ್ತಿದೆ. ಏನೆಂದರೆ ಈ ಪ್ರಭುತ್ವ ಶಾಂತಿ, ಸುವ್ಯವಸ್ಥೆ,ಅಭಿವೃದ್ದಿ  ಸಾಽಸಲು ಪ್ರಯತ್ನಿಸುವುದಿಲ್ಲ. ಅಷ್ಟೇ ಅಲ್ಲ. ರಾಜಕೀಯದಿಂದ ದೂರ ಉಳಿದವರನ್ನೂ ಅದು ಬಿಡುವುದಿಲ್ಲ. ವೈಯಕ್ತಿಕ ಬದುಕಿನಲ್ಲಿ ನಿರಂತರ ಇಣುಕಿ ಹಾಕುತ್ತ ಯಾರು ಧರ್ಮವನ್ನು ತಪ್ಪಿದರು ಎಂದು ನೋಡುತ್ತ ಅವರಿಗೆ ಶಿಕ್ಷೆ ನೀಡುತ್ತ ಇರುವುದು ತಾಲಿಬಾನ್ ಆಡಳಿತ. ತಾಲಿಬಾನ್ ಹೇಳುವ ರೀತಿ ಬದುಕುವುದೆಂದರೆ ಸತ್ತ ಹಾಗೆಯೇ.

ಮಹಿಳೆಯರಿಗಂತೂ ಘೋರ ನರಕ ಅದು. ಮತ್ತೆ ರಷ್ಯಾ, ಅಮೆರಿಕ ಎಲ್ಲ ಹೊರಟು ಹೋದ ಮೇಲೆ ಯಾವ ಅಂತಾರಾಷ್ಟ್ರೀಯ ಶಕ್ತಿಯೂ ಅಫ್ಘಾನಿಸ್ತಾನವನ್ನು ಬದಲಾಯಿಸಲು ಆಸಕ್ತಿ ತೋರುವ ಸಂಭವ ಕಡಿಮೆ. ಇದನ್ನೆಲ್ಲ ಅರಿತೇ ಕೊನೆಯ ಅಸ್ತ್ರವಾಗಿ ಅಫ್ಘನ್ ಜನ ಎಲ್ಲವನ್ನೂ ಬಿಟ್ಟು ಓಡಿಹೋಗುವಂತಹ ನಿರ್ಣಯ ತೆಗೆದುಕೊಂಡಿದ್ದು. ಮಾನವ ಇತಿಹಾಸದಲ್ಲಿಯೇ ಇಂತಹ ‘ಪ್ರಭುತ್ವ’ವೊಂದು ಅಧಿಕಾರಕ್ಕೆ ಬಂದಿರುವುದು ಇದೇ ಮೊದಲ ಬಾರಿ. ಅಲ್ಲಿ ಎಷ್ಟು ಹೊತ್ತಿಗೆ ಏನು ಬೇಕಾದರೂ ಆಗಿಹೋಗಬಹುದು: ಬಾಂಬ್ ಸಿಡಿಯಬಹುದು.

ಉಗ್ರರು ಮನೆಯೊಳಗೆ ನುಗ್ಗಿ ಹೆಣ್ಣುಮಕ್ಕಳನ್ನು ಕಣ್ಣ ಮುಂದೆಯೇ ಕದ್ದುಕೊಂಡು ಹೋಗಬಹುದು. ಅಂಗಾಂಗಗಳನ್ನು ಕತ್ತರಿಸಿಕೊಳ್ಳಬೇಕಾಗಬಹುದು. ಎಸಿಡ್ ದಾಳಿಯಲ್ಲಿ ಮುಖ ಸುಟ್ಟುಹೋಗಬಹುದು. ಯಾರದು ಬೇಕಾದರೂ. ಅಲ್ಲಿ ಇರುವುದು ಸಾಧ್ಯವಿಲ್ಲ. ಓಡಿಹೋಗುವುದೂ ಸುಲಭವಲ್ಲ. ಹೀಗೆ ತೀವ್ರ ತರಹದ
ಮತಾಂಧತೆ ಸೃಷ್ಟಿಸಿರುವ ದುರಂತ ಅಫ್ಘಾನಿಸ್ತಾನದ್ದು. ಇಂದಿನ ಅಫ್ಘಾನಿಸ್ತಾನದಲ್ಲಿ ಮನುಷ್ಯರು ಬದುಕಲೇ ಅಸಾಧ್ಯವಾಗಿರುವ ಒಂದು ನರಕ. ಸುಮಾರು
ನಲವತ್ತು ಮಿಲಿಯನ್ ಜನರಿಗೆ.

ಮತಾಂಧತೆಯ ರಾಜಕೀಯ ಅಫ್ಘಾನಿಸ್ತಾನದಲ್ಲಿ ಹುಟ್ಟಿ ಬೆಳೆದ ಇತಿಹಾಸವನ್ನು ಚಿಕ್ಕದಾಗಿ ಗಮನಿಸಿ ಮುಂದೆ ಹೋಗಬೇಕು. ಕಥೆ ಆರಂಭವಾಗಿದ್ದು 1978
ರಲ್ಲಿ. ಅಫ್ಘಾನಿಸ್ತಾನವನ್ನು ಆಕ್ರಮಿಸಿದ್ದ ರಷ್ಯಾವನ್ನು ಓಡಿಸಲು ಅಲ್ಲಿಯ ಮತ್ತು ಬೇರೆ ದೇಶಗಳಿಂದ ಬಂದ (ವಿಶೇಷವಾಗಿ ಪಾಕಿಸ್ತಾನದಿಂದ) ಬಾಡಿಗೆ ಯೋಧ ರಿಗೆ, ಉಗ್ರಗಾಮಿ ಸಂಘಟನೆಗಳಿಗೆ ಶಸಾಸಗಳನ್ನು ಅಮೆರಿಕ ಪೂರೈಸಿತು. ಪಾಕಿಸ್ತಾನದ ಸೈನ್ಯ ಅಂತಹ ಮುಜಾಹಿದೀನ್‌ಗಳಿಗೆ ತರಬೇತಿ ನೀಡಿತು. ಹತ್ತು ವರ್ಷಗಳಿಗೂ ಮೀರಿದ ಯುದ್ಧದಲ್ಲಿ ದೇಶ ರಣರಂಗವಾಗಿ ಹೋಯಿತು. ಈ ಹೋರಾಟಗಳಿಗೆ ’ಜಿಹಾದಿ’ ಅಂದರೆ ಧರ್ಮಯುಧ್ದದ ಬಣ್ಣ ನೀಡಿದ್ದು ಪಾಕಿಸ್ತಾನ. ಮತಾಂಧತೆಯ ದರ್ಬಾರು ನಿಜಕ್ಕೂ ಆರಂಭವಾಗಿದ್ದು ಎಂಬತ್ತರ ದಶಕದಲ್ಲಿ. ರಷ್ಯಾ ಅಫ್ಘಾನಿಸ್ತಾನವನ್ನು ಬಿಟ್ಟುಹೋಯಿತು.

ಈಗ ’ಇಸ್ಲಾಮ್’ ರಕ್ಷಣೆಯ ಮುಖವಾಡ ಹೊತ್ತ ತಾಲಿಬಾನ್ ಅಽಕಾರಕ್ಕೆ ಬಂತು. ಈಗಾಗಲೇ ಹೇಳಿದ ಹಾಗೆ ತಾಲಿಬಾನ್, ಮಧ್ಯಯುಗದ ಶಿಲಾಯುಗದ
ಮೈಂಡ್ ಸೆಟ್ ಹೊಂದಿದ ಮೌಲ್ವಿಗಳು, ಮುಲ್ಲಾಗಳು ಮತ್ತು ಬಂದೂಕು ಪ್ರಿಯರಾದವರ ದುಷ್ಟರ ಕೂಟ. ಎಪ್ಪ ತ್ತರ ದಶಕದಲ್ಲಿ ಅಂದರೆ ಝಹೀರ್ ಶಾ ಆಡಳಿತ ದಲ್ಲಿ ಹಾಗೂ ರಷ್ಯಾ ಅಡಿಯಲ್ಲಿ ಕೂಡ ಅಫ್ಘಾನಿಸ್ತಾನ ಒಂದು ಆಧುನಿಕ, ಎಲ್ಲ ಧರ್ಮಗಳವರೂ ಕೂಡಿ ಬದುಕಿದ ಪ್ರಗತಿಪರ ಸಮಾಜವಾಗಿತ್ತು. ಆದರೆ ತಾಲಿ ಬಾನ್ ’ಶರಿಯಾ’ ವ್ಯವಸ್ಥೆಯನ್ನು ತಮ್ಮ ಅರ್ಥೈಸುವಿಕೆಯೊಂದಿಗೆ ತಂದಿಟ್ಟಿತು.

’ಶರಿಯಾ’ದ ವಿವಿಧ ರೀತಿಯ ಅರ್ಥೈಸುವಿಕೆಗಳಿವೆ. ಅಲ್ಲಿ ಮಹತ್ವವಾದದ್ದು ಅರ್ಥೈಸುವಿಕೆ. ಪ್ರಗತಿಪರ ಅರ್ಥೈಸುವಿಕೆಗಳೂ ಇವೆ. ಶರಿಯಾವನ್ನು ಸಾರಾ ಸಗಟಾಗಿಯೇ ತೆಗೆದುಹಾಕಲಾಗುವುದಿಲ್ಲ. ಅವಮಾನಿಸಲಾಗುವುದಿಲ್ಲ. ಈ ಬರಹಕ್ಕೆ ಅಂತಹ ಉದ್ದೇಶವಿಲ್ಲ. ತಕರಾರು ಇರುವುದು ತಾಲಿಬಾನ್‌ನ ಅರ್ಥೈಸು ವಿಕೆಯ ಕುರಿತು. ಅದಿರಲಿ. ಈಗ ನಾಯ ದುರಂತ ಕಥೆ ಬರೆಯಬಹುದೇ ತಾಲಿಬಾನ್? ಕನಾದ, ಮುಲ್ಲಾ ಒಮರ್ ’ಶರಿಯಾದ’ ಕಟ್ಟರ್ ಪಂಥೀಯ ಅರ್ಥೈಸು ವಿಕೆಯನ್ನು ಆಡಳಿತದಲ್ಲಿ ಜಾರಿಗೆ ತಂದ ಮತ್ತು ದೇಶವನ್ನು ಕೇವಲ ಧರ್ಮವನ್ನು ಕಾಯುವ, ಅಚರಣೆಗಳಲ್ಲಿ ತಪ್ಪಿದವರನ್ನು ಶಿಕ್ಷಿಸುವ ವ್ಯವಸ್ಥೆಯನ್ನಾಗಿ ನೋಡಿದ.

ತಾಲಿಬಾನ್‌ನ ಕಲ್ಪನೆಯ ಇಸ್ಲಾಂ ಅನ್ನು ಕಠಿಣವಾಗಿ ಪಾಲಿ ಸದವರನ್ನು ಆತ ಮನಬಂದಂತೆ ದಂಡಿಸಿದ. ತಾಲಿಬಾನ್ ಅಕ್ಷರಶಃ ನಡೆಸಿದ್ದು ಮಾರಣಹೋಮ. ಹಿಂದಿನ ಅಧ್ಯಕ್ಷ ನಜಿಬುಲ್ಲಾರ ಅಂಗಾಂಗಗಳನ್ನು ಕತ್ತರಿಸಿ ಜೀವಂತವಾಗಿ ಸಾರ್ವಜನಿಕ ಸ್ಥಳದಲ್ಲಿ ನೇಣುಹಾಕಲಾಯಿತು. ಮಹಿಳೆ ಯರ ಹಕ್ಕುಗಳನ್ನು ಕಸಿದು ಕೊಂಡಿತು. ಅವರ ಶಿಕ್ಷಣವನ್ನು ನಿಲ್ಲಿಸಿತು. ಮತ್ತೆ ಅವರ ಮೇಲೆ ಯಾವ ರೀತಿಯ ಕ್ರೌರ್ಯದಲ್ಲಿ ತೊಡಗಿಕೊಂಡಿತೆಂದರೆ ಅದು ನೇಲ್‌ಪಾಲಿಶ್ ಹಚ್ಚಿಕೊಂಡಿದ್ದ ಮಹಿಳೆಯರ ಉಗುರುಗಳನ್ನು ಕಿತ್ತುಹಾಕಿತು. ಲಿಪ್‌ಸ್ಟಿಕ್ ಧರಿಸಿದ್ದ, ಹಿಜಾಬ್ ಧರಿಸಿರದ ಮಹಿಳೆಯರ ಮುಖಕ್ಕೆ ಎಸಿಡ್ ಹಾಕಿತು. ‘ಸಂಶಯಿತ’ ಮಹಿಳೆಯರನ್ನು ಸಾರ್ವಜನಿಕ ಸ್ಥಳಗಳಲ್ಲಿ ಕಲ್ಲು ಹೊಡೆದು ಸಾಯಿಸಿತು. ಮಹಿಳೆ ಒಬ್ಬಳೇ ಸಂಚರಿಸುವುದನ್ನು ಬ್ಯಾನ್ ಮಾಡಲಾಯಿತು.

‘ಇಸ್ಲಾಂಮಿಕ್ ’ತತ್ವಗಳಡಿಯಲ್ಲಿ’ ಬರುವುದಿಲ್ಲ ಎನ್ನುವ ಕಾರಣ ನೀಡಿ ಕೋಟ್ಯಂತರ ಟೆಲಿವಿಷನ್‌ಗಳನ್ನು ಸುಟ್ಟು ಹಾಕಿತು. ಸಂಗೀತ ಕೇಳುವುದನ್ನು ಅಪರಾಧ ವನ್ನಾಗಿ ಪರಿಗಣಿಸಿತು. ಇಸ್ಲಾಂನ ಇಂತಹುದೇ ಪರಿಕಲ್ಪನೆ ಹೊಂದಿದ್ದ ಬೇರೆ ಕೆಲವು ಉಗ್ರಗಾಮಿ ಸಂಸ್ಥೆಗಳೂ ಅಫ್ಘಾನಿಸ್ತಾನವನ್ನು ತಮ್ಮದೇ ಮನೆಯನ್ನಾಗಿ
ಮಾಡಿಕೊಂಡವು. ಅಲ್‌ಖೈದಾ ಹುಟ್ಟಿದ್ದು, ಬೆಳೆದಿದ್ದು ಇಂಥ ನೆಲೆಯಿಂದ.ಅವೂ ಕೂಡ ತಮ್ಮದೇ ಆದ ರೀತಿಗಳಲ್ಲಿ ಇಸ್ಲಾಂ ವಿರೋಧಿಗಳ ಮೇಲೆ ದಾಳಿ ನಡೆಸಲು ಆರಂಭಿಸಿದವು.

ಈಗ ಮತ್ತೆ ತಾಲಿಬಾನ್ ಅಧಿಕಾರಕ್ಕೆ ಬಂದಿದೆ. ಶರಿಯಾ ವನ್ನು ಮತ್ತೆ ಅದು ದೇಶದ ಕಾನೂನು ಎಂದು ಘೋಷಿಸಿದೆ. ಹಿಂದಿನ ಬಾರಿ ತಾಲಿಬಾನ್ ನಡೆಸಿದ
ಅಽಕಾರದ ದುಸ್ವಪ್ನ ವನ್ನು ಅಲ್ಲಿನ ಜನ ಮರೆತಿಲ್ಲ. ಹಾಗಾಗಿಯೇ ಈಗ ತಾಲಿ ಬಾನ್ ಮೆತ್ತಗಿನ ಮಾತುಗಳನ್ನಾಡುತ್ತಿದ್ದರೂ ಜನ ಅದನ್ನು ನಂಬಲು ಸಿದ್ಧರಿಲ್ಲ.
ಲಕ್ಷಾಂತರ ಜನ ಅಫ್ಘಾನಿಸ್ತಾನವನ್ನು ಬಿಟ್ಟು ಓಡಿಹೋಗಲು ಪ್ರಯತ್ನಿಸುತ್ತಿರುವುದು ಇದಕ್ಕೆ. ಏಕೆಂದರೆ ತಾಲಿಬಾನ್‌ನ ಸ್ವರೂಪ ಮತ್ತು ಅದರ ಮೌಲ್ಯಗಳ
ವ್ಯವಸ್ಥೆಯೇ ಮಾನವೀಯತೆಯ ವಿರೋಧಿ ವ್ಯವಸ್ಥೆ. ನಮಗೆ ಗೊತ್ತಿದೆ.’ಮಹಿಳೆಯರನ್ನು ಹೇಗೆ ನೋಡಿಕೊಳ್ಳುತ್ತೀರಿ’ ಎನ್ನುವ ಪ್ರಶ್ನೆಗೆ ತಾಲೀಬಾನ್ ನಾಯಕ ನೊಬ್ಬ ವಿಕ್ರತವಾಗಿ, ವಿಕಟವಾಗಿ ನಕ್ಕುಬಿಟ್ಟ. ಇಂತಹ ಪ್ರತಿಕ್ರಿಯೆ ತಾಲಿಬಾನ್ ಮುಂದೇನು ಮಾಡಲಿದೆ ಎನ್ನುವುದಕ್ಕೆ ಉತ್ತರ. ತಾಲಿಬಾನ್ ಮತ್ತು ಅದರ ಮತಾಂಧತೆ ಅಫ್ಘಾನಿಸ್ತಾನಕ್ಕೆ ತಂದಿಟ್ಟಿರುವ ದುರಂತ ಅಂತಿತಹುದಲ್ಲ.

ಇಲ್ಲಿಯವರೆಗೆ ಅಲ್ಲಿ ಸುಮಾರು ಎರಡು ಮಿಲಿಯನ್ ಜನ ಯುದ್ಧಗಳಲ್ಲಿ ಸತ್ತಿದ್ದಾರೆ. ಜನಸಂಖ್ಯೆಯ ಶೇ.೧೦ ರಷ್ಟು ಜನ. ಮತ್ತೆ ಅಷ್ಟೇ ಸಂಖ್ಯೆಯ ಜನ ಅಂಗಾ
ಗಗಳನ್ನು ಕಳೆದುಕೊಂಡಿದ್ದಾರೆ. ಸುಮಾರು ಎಂಟು ಲಕ್ಷ ಮಹಿಳೆಯರು ಗಂಡನನ್ನು ಕಳೆದು ಕೊಂಡಿದ್ದಾರೆ. ಯುದ್ಧ ಬೇರೆ ರೀತಿಯ ದುರಂತಗಳನ್ನೂ ತಂದಿಟ್ಟಿದೆ.
ನಿರುದ್ಯೋಗ ಶೇ.23ರಷ್ಟಿದೆ. ಸುಮಾರು 50 ಪ್ರತಿಶತ ಮಕ್ಕಳ ಬೆಳವಣಿಗೆ ಕುಂಠಿತವಾಗಿದೆ. ಪ್ರತಿ ಹದಿ ನೆಂಟರಲ್ಲಿ ಒಂದು ಮಗು ಒಂದು ವರ್ಷವಾಗುವ ಮೊದಲೇ ತೀರಿಕೊಳ್ಳುತ್ತದೆ. ಶೇ.50ಕ್ಕಿಂತಲೂ ಅಽಕ ಸಂಖ್ಯೆಯ ಚಿಕ್ಕಮಕ್ಕಳಿಗೆ ಮೂಲ ವ್ಯಾಕ್ಸಿನೇಷನ್‌ಗಳೇ ದೊರೆತಿಲ್ಲ. ಕುಡಿಯುವ ನೀರಿನ ಶೇ.50ರಷ್ಟು ಮೂಲ ಗಳಲ್ಲಿ ಮಲದ ಅಂಶ ಕಂಡುಬಂದಿದೆ. ಹದಿನೈದು ವರ್ಷಗಳಿಗಿಂತ ಕೆಳಗಿನ ಶೇ.೬೦ರಷ್ಟು ಹೆಣ್ಣುಮಕ್ಕಳು ಶಾಲೆಗಳಿಂದ ಹೊರಗಿದ್ದಾರೆ.

ಆರ್ಥಿಕತೆ ನಾಶವಾಗಿವೆ. ಜಿಡಿಪಿ ಬೆಳವಣಿಗೆ ಶೂನ್ಯ ಅಥವಾ ಒಂದರಷ್ಟು. ಜನರಿಗೆ ಉಳಿದಿರುವ ಒಂದೇ ಉದ್ಯೋಗ ಸಾಯಿಸುವುದು ಅಥವಾ ಸಾಯುವುದು.
ತಾಲಿಬಾನ್ ಅಫ್ಘಾನಿಸ್ತಾನವನ್ನು ನಾಶಮಾಡಿದೆ. ಮತ್ತೆ ಕಳವಳವೆಂದರೆ ಬೇರೆ ಹಲವು ದೇಶಗಳನ್ನು ನಾಶಮಾಡುವ ಸಾಮರ್ಥ್ಯವೂ ಅದಕ್ಕಿದೆ. ಏಕೆಂದರೆ
ಎರಡು ಜಾಗತಿಕ ಶಕ್ತಿಗಳನ್ನು ’ಸೋಲಿಸಿರುವ’ ತಾಲಿಬಾನ್ ಜಗತ್ತಿನ ಕೆಲವು ದೇಶಗಳಿಗೆ ’ಹೀರೋ’ ಆಗಿ ಹೋಗಬಹುದು. ಇಂತಹ ’ಧರ್ಮ ರಕ್ಷಣೆಯ ಚಳುವಳಿ’ ಹಮ್ಮಿಕೊಳ್ಳಲು ಕೆಲವು ಇಸ್ಲಾಮಿಕ್ ದೇಶ ಗಳಿಗೆ ಪ್ರೇರಣೆ ನೀಡಿಬಿಡಬಹುದು. ಪಾಕಿಸ್ತಾನ, ಸಿರಿಯಾ, ಯೆಮೆನ್, ಕತಾರ್ ಅಂತಹ ದೇಶಗಳಿಗೆ. ಇನ್ನೂ ಒಂದು ಆತಂಕವೆಂದರೆ ಒಟ್ಟಾಗಿಯೇ ಅದು ಇಸ್ಲಾಮಿಕ್ ಜಗತ್ತಿನ ಮೇಲೆ ಪರಿಣಾಮ ಬೀರಿ ಕ್ರಮೇಣವಾಗಿ ಅವೆಲ್ಲವನ್ನೂ ಧಾರ್ಮಿಕವಾಗಿ ಹಾಡರ್ ಲೈನ್ ದೇಶಗಳನ್ನಾಗಿ ಪರಿವರ್ತಿಸಿಬಿಡಬಹುದು.

ಇಸ್ಲಾಮಿಕ್ ಜಗತ್ತು ಮತ್ತು ಇನ್ನೊಂದು ಜಗತ್ತಿನ ನಡುವೆ ಒಂದು ನಾಗರಿಕತೆಗಳ ಸಂಘರ್ಷವನ್ನು’ ತಂದಿಟ್ಟು ಜಗತ್ತನ್ನೇ ದೊಡ್ಡ ಸಂಕಟಕ್ಕೆ ಸಿಲುಕಿಸಿ ಹಾಕಿಬಿಡ ಬಹುದು ಕೂಡ. ಅವುಗಳಲ್ಲಿ ಕೆಲವು ಅಣುಬಾಂಬ್ ಹೊಂದಿದ ದೇಶಗಳೂ ಇವೆ.ಹೀಗಾಗಿ ತಾಲಿಬಾನ್ ಇಪ್ಪತ್ತೊಂದನೆಯ ಶತಮಾನದ ದುರಂತ ಕಥೆಯನ್ನು ಬರೆದು ಬಿಡಬಹುದು ಕೂಡ.ಭಾರತಕ್ಕಂತೂ ತುಂಬ ಆತಂಕದ ದಿನಗಳು ಇವು.