Friday, 13th December 2024

ಹಿಂದೂಗಳಂಥ ನತದೃಷ್ಟರು ಜಗತ್ತಿನಲ್ಲೇ ಇಲ್ಲ !

ಹಂಪಿ ಎಕ್ಸ್’ಪ್ರೆಸ್

1336hampiexpress1509@gmail.com

ಸಾಲು ಸಾಲು ಹಿಂದೂ ಹೋರಾಟಗಾರರ ಹತ್ಯೆ ಮಾಡುತ್ತಿರುವ ಜಿಹಾದಿ ಧರ್ಮಾಂಧರ ಮನಃಸ್ಥಿತಿಯನ್ನು ಅರ್ಥ ಮಾಡಿ ಕೊಳ್ಳಬೇಕು. ಅವರಲ್ಲಿರುವ ಸ್ವಧರ್ಮದ ಮೇಲಿನ ಕಠೋರ ವ್ಯಾಮೋಹ, ಸಮ್ಮೋಹನ ಅವರನ್ನು ಈ ಮಟ್ಟದ ಹತ್ಯೆಯ ಪ್ರಚೋದನೆಗೆ ತಂದು ನಿಲ್ಲಿಸುತ್ತಿದೆ. ಮೊನ್ನೆ ಬಿಹಾರದಲ್ಲಿ ಸಿಕ್ಕಿಬಿದ್ದ ಭಯೋತ್ಪಾದಕರ ಹೇಳಿಕೆಗಳನ್ನು ಗಮನಿಸಿದಾಗ ಅವರ ‘ಮಿಷನ್ 2047’ ಅನುಷ್ಠಾನಕ್ಕೆ ಭರ್ಜರಿ ಸಿದ್ಧತೆಗಳ ನೀಲನಕ್ಷೆ ಅನಾವರಣಗೊಂಡು ಗಾಭರಿ ಹುಟ್ಟಿಸಿದೆ.

‘ರಾ ಜಕೀಯವಾಗಿ, ಆರ್ಥಿಕವಾಗಿ ಹಾಗೂ ಸೈದ್ಧಾಂತಿಕವಾಗಿ ನಾವಿಂದು ಭಿನ್ನ ಭಿನ್ನರಾಗಿ ದ್ದೇವೆ. ನಮ್ಮಲ್ಲಿ ಹಲವಾರು ಬಣ ಗಳಾಗಿವೆ. ಒಂದರೊಡನೊಂದು ಘರ್ಷಿಸುತ್ತಿವೆ. ನಾನು ಕೂಡ ಒಂದು ಬಣದ ನಾಯಕನೇ. ಆದರೆ ಕಾಲ ಸನ್ನಿಹಿತವಾದಾಗ, ಸಂದರ್ಭ ಒದಗಿ ಬಂದಾಗ ಈ ದೇಶವೆಲ್ಲ ಏಕದೇಹಿಯಾಗಿ ಒಂದಾಗುವುದನ್ನು ತಡೆಯಲು ಜಗತ್ತಿನ ಯಾವ ಶಕ್ತಿಗೂ ಸಾಧ್ಯ ವಾಗಲಾರದೆಂಬುದು ನನ್ನ ದೃಢ ನಂಬಿಕೆ.

ನಮ್ಮಲ್ಲಿ ನೂರಾರು ಜಾತಿ ಪಂಥಗಳಿರಬಹುದು. ಆದರೆ ಯಾವುದಾದರೊಂದು ರೀತಿಯಲ್ಲಿ ನಾವೆಲ್ಲ ಏಕಜನಾಂಗವಾಗುತ್ತೇ ವೆಂಬುದರಲ್ಲಿ ನನಗೆ ಸಂದೇಹವೇ ಇಲ್ಲ…’ ಬಾಬಾ ಸಾಹೇಬ್ ಡಾ. ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಅವರ ಈ ಮಾತು ಇಂದು ಯಾರಿಗೂ ಕೇಳುತ್ತಿಲ್ಲ. ಬಾಲ್ಯದಲ್ಲಿ ಕೆಲ ನೀಚರಿಂದಾದ ಅಸೃಶ್ಯತೆಯ ಅನುಭವ ಅಂಬೇಡ್ಕರ್ ಅವರಲ್ಲಿ ನಿರಾಸೆ ತಂದಿರಬಹುದು.

ಹಾಗಂತ ಅವರೆಂದೂ ಹಿಂದೂ ಧರ್ಮವನ್ನು ದ್ವೇಷದಿಂದ ಕಂಡವರಲ್ಲ. ಹಿಂದೂಗಳ ನಂಬಿಕೆ ಭಾವನೆಗಳನ್ನು ಅವಹೇಳನ ಮಾಡಿದವರಲ್ಲ ಅವಮಾನಿಸಿ ದವರಲ್ಲ. ಅಂಬೇಡ್ಕರ್ ಅವರು ಬದುಕಿದ್ದ ಕಾಲದ ತಮಿಳುನಾಡಿನ ಹಿಂದ್ವುತ್ವ ವಿರೋಧಿ ಪೆರಿಯಾರ್ ಸಿದ್ಧಾಂತವೂ ಬದುಕಿತ್ತು. ಹಿಂದೂ ದೇವತೆಗಳನ್ನು ಹಿಂದುತ್ವದ ಭಾವನೆ ನಂಬಿಕೆಗಳನ್ನು ಕೆಣಕುತ್ತ, ಕಪೋಲ ಕಲ್ಪಿತ ದ್ರಾವಿಡ-ಆರ್ಯ ವಾದ ದಿಂದ ತಮಿಳುನಾಡಿನಲ್ಲಿ ಹೆಸರು ಮಾಡಿದ ಪೆರಿಯಾರ್ ಪ್ರಭಾವ ಅಂಬೇಡ್ಕರ್ ಅವರ ಮೇಲೆ ಕಿಂಚಿತ್ತೂ ಬೀಳಲಿಲ್ಲ. ಕಾರಣ ಅಂಬೇಡ್ಕರ್ ಅವರು ಬಹಳಷ್ಟು ಓದಿಕೊಂಡಿದ್ದರು.

ಭಾರತೀಯ ಪರಂಪರೆಯ ಅನಂತ-ಅಗಾಧತೆಯನ್ನು ಮನಗಂಡಿದ್ದರು. ಅವರು ಸಂಸ್ಕೃತವನ್ನು ರಾಷ್ಟ್ರಭಾಷೆಯನ್ನಾಗಿ ಘೋಷಿಸುವುದರ ಹಿಂದಿನ ಅವರ ಸಹಜ ಚಿಂತನೆಯನ್ನು ಭಾರತೀಯರೆಲ್ಲರೂ ಅರ್ಥಮಾಡಿಕೊಳ್ಳಬೇಕಿತ್ತು. ಆದರೆ ಅಂಥ ‘ನೈಜ’ ಅಂಬೇಡ್ಕರ್ ಅವರ ಚಿಂತನೆ, ಆಶಯಗಳನ್ನು ಅವರ ನಂತರದ ರಾಜಕೀಯದ ಅವಕಾಶವಾದಿಗಳು ಅವರೊಂದಿಗೇ ಮಣ್ಣಾಗಿಸಿದರು.

ದೇಶದೊಳಗೆ ಬ್ರಿಟಿಷರಂತೆ ಕಮ್ಯುನಿಸ್ಟ್ ಸಿದ್ಧಾಂತ ಒಳನುಸುಳಿದ್ದೇ ಭಾರತೀಯ ಸಂಸ್ಕೃತಿಯನ್ನು ನಾಶಮಾಡಲು. ವೈಚಾರಿಕ ಹೀನ ಎಡಗೈ ಸಿದ್ಧಾಂತಕ್ಕೆ ತಲೆಕೊಟ್ಟು ದೇಶಕ್ಕೆ ಅನಿಷ್ಠರಾದ ಇವರ ಸಂತಾನಗಳು ದೇಶದ ಹಲವೆಡೆ ಹುಟ್ಟಿಕೊಂಡು ಇಂದು ಹಿಂದೂಗಳ ರೂಪದ ಪೀಡೆಗಳಾಗಿ ಹಿಂದೂಗಳನ್ನೇ ಕಾಡುತ್ತಿವೆ. ಇಂಥ ‘ಕಮ್ಮಿನಿಷ್ಠೆ’ಯ ಹೊಲಸನ್ನು ತಲೆಗೆ ತುಂಬಿಕೊಂಡ ಎಡಗೈ ನೆಕ್ಕುವ ಬರಗೆಟ್ಟ ಸಾಹಿತಿಗಳು, ಕೆಲ ಕಾವಿಧಾರಿಗಳು, ಬಣ್ಣಹಚ್ಚುವ ಅರೆಹುಚ್ಚ ನಟನಟಿಯರ ಕೂಟ ದೇಶದ ಮಗ್ಗುಲು
ಮುಳ್ಳುಗಳಾಗಿವೆ.

ಇವರ ಅರೆಬೆಂದ ವಿಚಾರ ಧಾರೆಗಳ ‘ಆಳ ಮತ್ತು ಅಗಲ’ವನ್ನು ಓದಿಕೊಂಡವನು ಭಾರತದ ಆಳದ ಇತಿಹಾಸವನ್ನೂ ಒಪ್ಪಿ
ಕೊಳ್ಳದೇ ಅನಂತೆಯ ಅಗಲವನ್ನೂ ಅರ್ಥೈಸಿಕೊಳ್ಳದೇ ದೇಶವನ್ನು ಸದಾ ಅಸಹಿಷ್ಣುತೆಯಿಂದಲೇ ಕಾಣುತ್ತ ಸಮಾಜದಲ್ಲಿ ಡೋಂಗಿತನದ ಸಾಹಿತಿ ಬುದ್ಧಿಜೀವಿ, ಪ್ರಗತಿಪರ, ಬಂಡಾಯಜೀವಿ, ವಿಚಾರವಾದಿ ಎನಿಸಿಕೊಳ್ಳುತ್ತಾನೆ. ನಂತರ ತಲೆಯಲ್ಲಿರುವ ಹೊಲಸನ್ನೆಲ್ಲ ಬಸಿದು ಪುಸ್ತಕ ರೂಪ ಕೊಡುತ್ತಾನೆ. ಅದರಲ್ಲಿ ಶ್ರೀರಾಮ, ಸೀತೆ, ಗಣೇಶ, ಹನುಮ, ರಾಮಾಯಣ, ಭಗವದ್ಗೀತೆ,
ಆಸ್ತಿಕತೆಯನ್ನೆಲ್ಲ ಅವಹೇಳನ ಮಾಡಿ ತನ್ನ ವಿಕೃತ ತೆವಲು ತೀರಿಸಿಕೊಳ್ಳುತ್ತಾನೆ.

ಇಂಥ ಸಮಯಸಾಧಕರಿಗೆ ಅನ್ಯಧರ್ಮಗಳಲ್ಲಿನ ಹುಳುಕುಗಳ ಕುರಿತು ತುಟಿಬಿಚ್ಚುವ ಗಂಡಸುತನ ಸತ್ತಿರುತ್ತದೆ.  ಇವರದ್ದೇ ನಿದ್ದರೂ ಪರಮ ಸಹಿಷ್ಣುಗಳಾಗಿರುವ ಹಿಂದೂಗಳ ಮೇಲಷ್ಟೇ ಸವಾರಿ. ಭಗವದ್ಗೀತೆಗೆ ಬೆಂಕಿಯಿಟ್ಟರೂ ಹಿಂದೂಗಳು ನೋಡಿ ಕೊಂಡು ಸುಮ್ಮನಿರಬೇಕು. ಇಂಥವರ ವಿರುದ್ಧ ನಿಂತರೆ ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯವೆಂದು ಬೊಗಳುತ್ತಾರೆ.

ದುರಂತವೆಂದರೆ ಇವರ ತಿಪ್ಪೆ ಸಿದ್ಧಾಂತಕ್ಕೆಲ್ಲ ಅಂಬೇಡ್ಕರ್ ಅವರನ್ನೂ ಮಧ್ಯದಲ್ಲಿ ಎಳೆತಂದು ಗುರಾಣಿಯಂತೆ ಬಳಸಿಕೊಂಡು ಬಾಬಾಸಾಹೇಬರ ನೈಜ ವಿಚಾರಧಾರೆಗೆ ಇವರು ತಮ್ಮ ಮುಸುಕನ್ನು ಹಾಕಿ ಕಳಂಕ ಹಚ್ಚುತ್ತಾರೆ. ಇಂಥವರ ಮುಖಕ್ಕೆ ಮಸಿ ಮಾತ್ರವಲ್ಲ ಹೊಲಸು ಬಳಿದರೂ ಒರೆಸಿಕೊಂಡು ತಮ್ಮ ಪಾಪದ ಪಿಂಡ ದಂಥ ಪುಸ್ತಕಗಳನ್ನು ಹೆರುತ್ತಾರೆ. ಇದಕ್ಕಿಂತಲೂ ದೌರ್ಭಾಗ್ಯವೆಂದರೆ ಇಂಥ ಧರ್ಮದ್ರೋಹಿ ಗಳಿಗೂ ನಮ್ಮ ವ್ಯವಸ್ಥೆ ರಕ್ಷಣೆ ನೀಡಿ ಅದಕ್ಕಾಗಿ ಬಹುಸಂಖ್ಯಾತ ಹಿಂದೂಗಳ ತೆರಿಗೆ ಹಣವನ್ನು ಪೋಲು ಮಾಡಲಾಗುತ್ತಿದೆ.

ಮೊನ್ನೆ ಭಗವಾನ್ ಎಂಬಾತ ‘ರಾಮ ಮಂದಿರ ಏಕೆ ಬೇಡ’ ಎಂಬ ಕೃತಿಯನ್ನು ಬರೆದು ಮತ್ತದೇ ಹಿಂದೂಗಳ ಭಾವನೆಯನ್ನು
ಕೆಣಕಿzನೆ. ಇದರಿಂದ ನೊಂದ ಮಹಾಬಲೇಶ್ವರ ಎಂಬುವವರೊಬ್ಬರು ಜಿಹಾದಿಗಳಂತೆ ವರ್ತಿಸದೆ ಸ್ಥಳೀಯ ನ್ಯಾಯಾಲಯದ ಮೊರೆಹೋಗಿದ್ದಾರೆ. ನ್ಯಾಯಾಧೀಶರು ಈ ಭಗವಾನನಿಗೆ ನ್ಯಾಯಲಯಕ್ಕೆ ಹಾಜರಾಗಲು ಸಮನ್ಸ್ ಜಾರಿ ಮಾಡಲು ಆದೇಶ ಹೊರಡಿಸಿದ್ದಾರೆ.

ಇಂಥ ಸಮನ್ಸು ಹಾಜರಾತಿ ಈತನಿಗೆ ಅದೆಷ್ಟೋ?! ಅದೆಷ್ಟು ದೂರುಗಳಲ್ಲಿ ಈತನಿಗೆ ಶಿಕ್ಷೆಯಾಗಿದೆ? ಅದೆಷ್ಟು ಪ್ರಕರಣಗಳಲ್ಲಿ ಹಿಂದೂಗಳ ಭಾವನೆಗೆ ಜಯಸಿಕ್ಕಿದೆ? ಆದರೂ ಈತ ಹಿಂದೂಗಳ ನಂಬಿಕೆ, ಭಾವನೆಗಳನ್ನು ಕೆಣಕುವ ಕೆಲಸ ಮಾತ್ರ  ಮಾಡು ತ್ತಲೇ ವೃದ್ಧನಾರಿ ಪತಿವ್ರತಾ ಎಂಬಂತೆ ಸರಕಾರಿ ಭದ್ರತೆಯಲ್ಲಿ ಬದುಕುತ್ತಿzನೆ. ಇಂಥದಕ್ಕೆಲ್ಲ ಕೊನೆ ಎಂದು? ಹಿಂದೂಗಳು ಇಂಥವರಿಂದಾಗುವ ಅವಹೇಳನ, ಅಪಮಾನವನ್ನೆಲ್ಲ ಸಹಿಸಿಕೊಂಡು ಪರಮ ಸಹಿಷ್ಣುಗಳಾಗಿ  ಕಂಗೊಳಿಸುತ್ತಿರಬೇಕು.

ಇಂಥ ಧರ್ಮ ಅವಹೇಳನದ ವಿರುದ್ಧ ಸಂವಿಧಾನಬದ್ಧ ನ್ಯಾಯಾಲಯದ ಮೊರೆಹೋದರೆ ಜಿಹಾದಿ ಮತಾಂಧರು ಹಿಂದೂಪರ ನಿಲ್ಲುವವರ ಹೆಣ ಬೀಳಿಸಿ ದಿಢೀರ್ ನ್ಯಾಯ(?) ಪಡೆದು ಜೈಲಿನಲ್ಲಿ ಕೂತು ವಿಡಿಯೋ ಚಾಟಿಂಗ್, ರೀಲ್ಸ್ ಮಜಾಮೋಜು ಮಾಡಿ ಕೊಂಡು ಅಲ್ಲೂ ಸಂಪಾದನೆ ಮಾಡಿಕೊಳ್ಳಬಹುದು. ಇದೇನು ಭಾರತವೋ ಅಥವಾ ಪಾಕಿಸ್ತಾನ, ಬಾಂಗ್ಲದೇಶ, ಅಫ್ಘಾನಿ ಸ್ತಾನವೋ? ಭಾರತದಲ್ಲಿ ಮುಸಲ್ಮಾನರು ಹೆಚ್ಚು ಭದ್ರತೆಯಿಂದ ಸ್ವತಂತ್ರವಾಗಿ ನಿರಾತಂಕವಾಗಿ ಬದುಕುತ್ತಿದ್ದಾರೆ.

ಆದರೆ ಬಹು ಸಂಖ್ಯಾತ ಹಿಂದೂಗಳು ಮಾತ್ರ ಹೆಜ್ಜೆಹೆಜ್ಜೆಗೂ ಆತಂಕ ಕಳವಳದಿಂದ ಬದುಕುವಂತಾಗಿದೆ. ಹಿಂದೂಧರ್ಮದ ದುರದೃಷ್ಟವೇನೆಂದರೆ ಧರ್ಮ ರಕ್ಷಿಸಬೇಕಾದ್ದ ಕಾವಿಧಾರಿಗಳೇ ಹಿಂದೂ ಧರ್ಮವನ್ನು ಅವಹೇಳನ ಮಾಡುತ್ತಾರೆ. ಒಬ್ಬಾತ ಹೇಳುತ್ತಾನೆ ‘ನಿಮ್ಮ ಕಾರಿಗೆ ಮೂರುಲಕ್ಷ ಇನ್ಸೂರೆನ್ಸ್ ಕಟ್ಟುತ್ತೀರಾದರೂ ಕಾರಿಗೆ ನಿಂಬೆಹಣ್ಣು ಮೆಣಸಿನಕಾಯಿ ಏಕೆ ಕಟ್ಟುತ್ತೀರ’ ಎಂದು ಆಸ್ತಿಕರ ನಂಬಿಕೆಯನ್ನು ಅವಹೇಳನ ಮಾಡಿ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾನೆ.

ಈತ ದೇಹದಂಡಿಸಿ ದುಡಿದು ಮೂವತ್ತು ಲಕ್ಷಕೊಟ್ಟು ಕಾರು ಖರೀದಿಸಿ ಅದರೊಳಗೆ ಕೂತು ಅಪಘಾತ ಮಾಡಿಕೊಂಡು ಇನ್ಸುರೆನ್ಸ್ ದಕ್ಕಿಸಿಕೊಂಡು ನೋಡಲಿ ಆಗ ತಿಳಿಯುತ್ತದೆ ಕಾರಿನ ಮಾಲೀಕರಿಗೂ, ಈತನ ಕಳಪೆ ಮಾತುಗಳಿಗೂ ಇರುವ ವ್ಯತ್ಯಾಸ.
ಒಂದು ಜಾತಿಯ ನಾಯಕನಿಗಾಗಿ ಸಿಕ್ಕಸಿಕ್ಕ ಕಾವಿಧಾರಿಗಳೆಲ್ಲ ಬೀದಿಗೆ ಬಂದು ಬೆಂಬಲವಾಗಿ ನಿಲ್ಲುತ್ತಾರೆ. ರಾಜಕಾರಣಿಗಳು ತಮ್ಮ ನಾಯಕಿ ಇಡಿ ಕಚೇರಿಗೆ ಬರಿಯ ವಿಚಾರಣೆಗೆಂದು ಹೊರಟರೆ ದೇಶಾದ್ಯಂತ ಪ್ರತಿಭಟಿಸುತ್ತಾರೆ. ಒಬ್ಬ ಚಾಲಕನಿಗೆ ಅವಮಾನ ವಾದರೆ ಆಟೋ ಚಾಲಕರು ತಮ್ಮ ಒಗ್ಗಟ್ಟು ಪ್ರದರ್ಶಿಸುತ್ತಾರೆ. ಬೀದಿ ನಾಯಿ ಅಪಘಾತಗೊಂಡು ಸತ್ತರೆ ಸಿನಿಮಾ ನಟಿಯರೆಲ್ಲ ಮೇಣದಬತ್ತಿ ಹಚ್ಚಿ ನಿಲ್ಲುತ್ತಾರೆ.

ಆದರೆ ಇಡೀ ಜಗತ್ತಿಗೆ ವಸುದೈವ ಕುಟುಂಬಕಂ ಎಂಬ ಸೌಹಾರ್ದ, ಸೋದರತೆಯ ಶಾಂತಿಯ ಮಂತ್ರ ಬೋಧಿಸಿದ ಭಾರತೀಯರಿಗೆ ಒಂದು ಅಸ್ತಿತ್ವ, ಅಸ್ಮಿತೆಯನ್ನು ನೀಡಿರುವ ಹಿಂದುತ್ವವನ್ನು- ಹಿಂದೂಗಳನ್ನು ಅವಹೇಳನ ಹತ್ಯೆ ಮಾಡಿದರೆ ಮಾತ್ರ ಎಲ್ಲರೂ ಮೂರನ್ನೂ (ಕಣ್ಣು ಕಿವಿ ಬಾಯಿ) ಮುಚ್ಚಿಕೊಂಡಿರಬೇಕು! ಎಲ್ಲಿಗೆ ಬಂತು ನೋಡಿ ನತದೃಷ್ಟ ಹಿಂದೂಗಳ ಸ್ಥಿತಿ. ಸಾಲುಸಾಲು ಹಿಂದೂ ಹೋರಾಟಗಾರರ ಹತ್ಯೆ ಮಾಡುತ್ತಿರುವ ಜಿಹಾದಿ ಧರ್ಮಾಂಧರ ಮನಃಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು.

ಅವರಲ್ಲಿರುವ ಸ್ವಧರ್ಮದ ಮೇಲಿನ ಕಠೋರ ವ್ಯಾಮೋಹ, ಸಮ್ಮೋಹನ ಅವರನ್ನು ಈ ಮಟ್ಟದ ಹತ್ಯೆಯ ಪ್ರಚೋದನೆಗೆ ತಂದು ನಿಲ್ಲಿಸುತ್ತಿದೆ. ಮೊನ್ನೆ ಬಿಹಾರದಲ್ಲಿ ಸಿಕ್ಕಿಬಿದ್ದ ಭಯೋತ್ಪಾದಕರ ಹೇಳಿಕೆಗಳನ್ನು ಗಮನಿಸಿದಾಗ ಅವರ ‘ಮಿಷನ್ 2047’ ಅನುಷ್ಠಾನಕ್ಕೆ ಭರ್ಜರಿ ಸಿದ್ಧತೆಗಳ ನೀಲ ನಕ್ಷೆ ಅನಾವರಣಗೊಂಡು ಗಾಭರಿ ಹುಟ್ಟಿಸಿದೆ. ಆತಂಕಕಾರಿಯೆಂದರೆ ಕೆಲ ಜಿಹಾದಿಗಳು ದಲಿತರನ್ನು ‘ನಮ್ಮ ದಲಿತರು’ ‘ನಾವು ಮತ್ತು ನಮ್ಮ ದಲಿತರು’ ಎಂದು ಸಂಬೋಽಸುತ್ತಿರುವುದು ಭವಿಷ್ಯದ ಇವರ ಪ್ಲಾನ್ ಏನೆಂಬುದು ಸುಲಭವಾಗಿ ಅರ್ಥವಾಗುತ್ತದೆ. ಒಂದೆಡೆ ಜಿಹಾದಿಗಳ ಕಾಟ, ಇನ್ನೊಂದೆಡೆ ಈ ಭಗವಾನ್‌ನಂಥವರ ಆಳ ಮತ್ತು ಅಗಲಗಳ ಕಾಟ.

ಸಂವಿಧಾನವು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕೊಟ್ಟಿದೆ. ಹಾಗಂತ ಅದನ್ನೆಲ್ಲ ಬರಿಯ ಹಿಂದೂಧರ್ಮದ ಮೇಲೆಯೇ ಪ್ರಯೋಗಿಸು ವಂತಾಗಿ ಬಹುಸಂಖ್ಯಾತ ಹಿಂದೂಗಳ ಭಾವನೆಗಳನ್ನು ಕೆಣಕುತ್ತಿದ್ದರೆ ಇನ್ನೆಷ್ಟು ದಿನ ಸಹಿಸಿಕೊಂಡಿರಬೇಕು? ಇಂಥದ್ದನೆ ನಮ್ಮ ಸಂವಿಧಾನವು ಒಪ್ಪುವುದಿಲ್ಲ. ಅಲ್ಲಿರುವುದು ಪವಿತ್ರವಾದ ಸಮಾನತೆಯ ಜಾತ್ಯಾ ತೀತ ಮತ್ತು ಸಮಾಜವನ್ನು ತಿದ್ದುವ ನೈತಿಕ ಮತ್ತು ಆರೋಗ್ಯಕರ ವಾಕ್ಸ್ವಾತಂತ್ರ್ಯವೇ ಹೊರತು ಅಯೋಗ್ಯರ ತೀಟೆ ಸ್ವಾತಂತ್ರ್ಯವಲ್ಲ. ಅಭಿವ್ಯಕ್ತಿ ಸ್ವಾಂತಂತ್ರ್ಯವೆಂಬುದು ಧಾರ್ಮಿಕ ಅವಹೇಳನಕ್ಕೆ ಆಸ್ಪದ ನೀಡಿ, ದುರಪಯೋಗವಾಗಿ ಸಮಾಜದ  ಸೌಹಾರ್ದ ವನ್ನು ಹಾಳುಮಾಡುತ್ತಿದೆ.

ಇದನ್ನೇ ಬಳಸಿಕೊಳ್ಳುವ ರಾಜಕಾರಣಿಗಳಿಂದಲೂ ದೇಶದಲ್ಲಿ ನಾಗರಿಕರ ನಡುವೆ ಪರಸ್ಪರ ಅಸಹನೆ, ಆತಂಕವಾದಕ್ಕೆ ಎಡೆ ಮಾಡಿಕೊಡುತ್ತಿದೆ. ಇಂಥದನ್ನೆ ನಿಗ್ರಹಿಸಬೇಕೆಂದರೆ ದೇಶದಲ್ಲಿ ಕಠಿಣ ಕಾಯಿದೆ ಕಾನೂನುಗಳನ್ನು ತರಬೇಕಿದೆ. ಅದ್ಯಾವನೇ ಆಗಿರಲಿ, ಅದ್ಯಾವುದೇ ಧರ್ಮವಾಗಿರಲಿ ಒಂದು ಧರ್ಮದ, ಒಂದು ಸಮುದಾಯದ, ಒಂದು ಜಾತಿಯ ನಂಬಿಕೆ-ಭಾವನೆಗಳನ್ನು ಅವಮಾನಿಸುವ ಅವಹೇಳನ ಮಾಡುವಂಥ ಮತ್ತು ಅದರ ಕುರಿತು ವ್ಯಂಗ್ಯ, ಕುಚೋದ್ಯದ ಪುಸ್ತಕ ಬರೆಯುವುದಾಗಲಿ, ಭಾಷಣ ಮಾಡುವುದಾಗ, ಕೃತಿ-ಚಲನಚಿತ್ರ-ನಾಟಕ-ಮನರಂಜನೆಗೆ ಬಳಸಿಕೊಳ್ಳುವುದಾಗಲಿ ಮಾಡಿದರೆ ಅದನ್ನು ಕಾನೂನಿನ ವ್ಯಾಪ್ತಿಗೆ ತಂದು ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡು ಕೂಡಲೇ ಶಿಕ್ಷೆಯಾಗುವಂಥ ಕಾಯಿದೆಯನ್ನು ರೂಪಿಸಿ ಕಾನೂನನ್ನು ಜಾರಿಗೆ ತರಬೇಕಿದೆ.

ಇಲ್ಲದಿದ್ದರೆ ದೇಶದಲ್ಲಿ ಕೋಮು ಸಂಘರ್ಷ, ಕೋಮು ಗಲಭೆ, ಜಾತಿಗಳ ಮಧ್ಯೆ ದ್ವೇಷವೆಂಬುದು ಸದಾ ಜಾರಿಯಲ್ಲಿದ್ದು ಸಮಾಜದಲ್ಲಿ ಆತಂಕವಾದ ನಿರಂತರವಾಗಿರುತ್ತದೆ. ಇದರ ಪರಿಣಾಮವಾಗಿ ಪ್ರತಿಕಾರದ ಕೊಲೆ, ಭಯೋತ್ಪಾದನೆಯಂಥ
ಸಮಾಜವಿರೋಽ ಪ್ರಕರಣಗಳು ಹೆಚ್ಚುತ್ತಲೇ ಹೋಗುತ್ತದೆ. ಹಾಗಂತ ಹಿಂದೂಗಳು ಎಂದಿಗೂ ಮತಾಂಧರಾಗುವವರಲ್ಲ. ಏಕೆಂದರೆ ಹಿಂದುತ್ವಕ್ಕೆ ಆದಿ ಅಂತ್ಯವೇ ಇಲ್ಲ. ಹಿಂದುತ್ವದಲ್ಲಿರುವಂಥ ಮಾನವೀಯ ಮೌಲ್ಯಗಳನ್ನು, ಸಾಮಾಜಿಕ ಸಹಿಷ್ಣುತೆ
ಯನ್ನು ಮೀರಿಸುವ ಮತ್ತೊಂದು ಧರ್ಮ ಜಗತ್ತಿನಲ್ಲಿಲ್ಲ.

ಇದನ್ನೇ ದೂರದ ಚಿಕಾಗೊ ನೆಲದಲ್ಲಿ ನಿಂತು ವಿಶ್ವಕ್ಕೆ ಸಾರಿದ ಸ್ವಾಮಿ ವಿವೇಕಾನಂದರಲ್ಲಿದ್ದಂಥ ಅಭಿಮಾನ ಬಿಗುಮಾನ ದಲ್ಲಿನ ಒಂದು ಪೈಸೆಯಷ್ಟಾದರೂ ಇಂದಿನ ಪೀಳಿಗೆಯವರ ಮನದೊಳಗೆ ಅರಳಿದರೂ ಸಾಕು, ದೇಶ ತಲೆಯೆತ್ತಿ ಬಲಿಷ್ಠವಾಗಿ ನಿಲ್ಲುತ್ತದೆ. ಕೊನೆಯದಾಗಿ, ಉದಾಹರಣೆಗೆ; ನೂರು ಮಂದಿಗೆ ಹಸಿವಾದರೆ ಭಿಕ್ಷೆಬೇಡಿಯಾದರೂ ಅಡುಗೆ ಮಾಡಿಕೊಂಡು ಉಣ್ಣುತ್ತಾರೆ.

ಅದನ್ನು ತಡೆಯಲು ಅವಿವೇಕಿಯೊಬ್ಬ ‘ಅಡುಗೆ ಏಕೆ ಬೇಡ’ ಎಂದು ಪುಸಕ್ತ ಬರೆಯಲು ಕುಂತರೆ ಕಾನೂನು ಮತ್ತು ನ್ಯಾಯಾಲಯ ಆತನ್ನು ಒದ್ದು ಬುದ್ಧಿ ಕಲಿಸುವಂತಾಗಲಿ. ತನ್ನಿ ಅಂಥ ಕಾನೂನು!.