Wednesday, 11th December 2024

ಬಂಡವಾಳಶಾಹಿಗಳ ಸಾಲ ಮನ್ನಾ ಮಾಡಲಾಗಿದೆಯಾ ?

ವಿತ್ತ ವಾರ್ತೆ

ಪ್ರಕಾಶ್ ಶೇಷರಾಘವಾಚಾರ್‌

ದೇಶದಿಂದ ವಿಜಯ ಮಲ್ಯ ಮತ್ತು ನೀರವ್ ಮೋದಿ ಪರಾರಿಯಾದ ತರುವಾಯ ಎಚ್ಚೆತ್ತ ಕೇಂದ್ರ ಸರಕಾರ, ಪ್ಯುಜಿಟಿವ್‌ಎಕನಾಮಿಕ್ ಅ-ಂಡರ್ಸ್ ಆಕ್ಟ್ ೨೦೧೮ ಕಾಯಿದೆಯನ್ನು ಜಾರಿಗೆ ತಂದಿತು. ಇದರಿಂದ ಸಾಲ ಪಾವತಿ ಮಾಡದೇ ಬ್ಯಾಂಕ್‌ಗಳಿಗೆ ವಂಚಿಸಿ ದೇಶ ಬಿಟ್ಟು ಓಡಿ ಹೋದವರ ಆಸ್ತಿಯನ್ನು ಮಟ್ಟಗೋಲು ಹಾಕಿ, ಹರಾಜು ಹಾಕಿ ಬ್ಯಾಂಕ್‌ಗಳಿಗೆ ಬಾಕಿ ಹಣ ವಸೂಲು ಮಾಡಲು ಸಾಧ್ಯವಾಗಿದೆ.

ಕೇಂದ್ರ ಹಣಕಾಸು ಇಲಾಖೆ ರಾಜ್ಯ ಸಚಿವ ಭಗವತ್ ಕರಾಡ್ ಲೋಕಸಭೆಯಲ್ಲಿ ಪ್ರಶ್ನೆಗೆ ಉತ್ತರಿಸುತ್ತ ಕಳೆದ ಆರು ವರ್ಷಗಳಲ್ಲಿ ೧೧.೦೭ ಲಕ್ಷ ಕೋಟಿ ರು.ಸಾಲ ವನ್ನು ರೈಟ್ ಆಫ್ ಮಾಡಲಾಗಿದೆ ಎಂದು ಮಾಹಿತಿ ನೀಡುತ್ತಾರೆ. ರೈತರ ಸಾಲ ಮನ್ನಾ ಮಾಡಲು ಹಿಂದೆ ಮುಂದೆ ನೋಡುವ ಸರಕಾರ ಉದ್ಯಮಿಗಳ ಲಕ್ಷಾಂತರ ಕೋಟಿ ಮೊತ್ತದ ಸಾಲ ಇಷ್ಟು ಸುಲಭವಾಗಿ ಮನ್ನಾ ಮಾಡುತ್ತಿದೆ. ಅನ್ನದಾತರ ಬಗ್ಗೆ ಇಲ್ಲದ ಕಾಳಜಿ, ಉದ್ಯಮ ಪತಿಗಳ ಬಗ್ಗೆ ಏಕೆ ವಿಶೇಷ ಔದಾರ್ಯ ಎಂಬ ಪ್ರಶ್ನೆ ಉದ್ಭವಿಸುತ್ತದೆ. ನಿಜಕ್ಕೂ ಉದ್ಯಮಪತಿಗಳ ಸಾಲ ಮನ್ನಾ ಆಗಿದೆಯೇ? ಈ ಆರೋಪದಲ್ಲಿ ಸತ್ಯವೆಷ್ಟು? ಮಿಥ್ಯವೆಷ್ಟು? ಸಾಲ ಪಡೆದವರು ಹಿಂದಿರುಗಿಸಲಾಗದಷ್ಟು ಪರಿಸ್ಥಿತಿಗೆ ತಲುಪುವ ಬಾಕಿ ಮೊತ್ತವನ್ನು ಅನುತ್ಪಾದಿತ ಸ್ವತ್ತು ಎಂದು ವರ್ಗೀಕರಿಸುತ್ತಾರೆ. (Non Performing Asset) ಯುಪಿಎ ಅವಧಿಯಲ್ಲಿ ಸಾಲ ನೀಡಿ ಅನುತ್ಪಾದಿತ ಸ್ವತ್ತಿನ (NPA) ಮೊತ್ತವು ೧೦ ಲಕ್ಷ ಕೋಟಿ ರು.ಗಳನ್ನು ದಾಟಿತ್ತು.

ಅನೇಕ ಬ್ಯಾಂಕ್‌ಗಳು ಇದರ ಭಾರದಿಂದ ಕುಸಿಯುವ ಹಂತ ತಲುಪಿತ್ತು. ಬ್ಯಾಂಕ್‌ಗಳು ದೇಶದ ಆರ್ಥಿಕತೆಯ ನರನಾಡಿ. ಅದು ದುರ್ಬಲವಾದರೆ ದೇಶದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರುವುದು ನಿಶ್ಚಿತ. ೧೯೪೭ರಿಂದ ೨೦೦೮ರವರೆಗೆ ಬ್ಯಾಂಕ್‌ಗಳು ಉದ್ಯಮಗಳಿಗೆ ನೀಡಿದ ಸಾಲದ ಮೊತ್ತ ೧೮ಲಕ್ಷ ಕೋಟಿ ರು.ಗಳು. ೨೦೦೮ರಿಂದ ೨೦೧೪ರ ಅವಧಿಯಲ್ಲಿ ನೀಡಿದ ಸಾಲವು ೩೪ ಲಕ್ಷ ಕೋಟಿ ರು. ಕೇವಲ ಆರು ವರ್ಷದಲ್ಲಿ, ಕಳೆದ ೬೦ ವರ್ಷ ಗಳಲ್ಲಿ ಕಾರ್ಪೊರೇಟ್ ವಲಯಕ್ಕೆ ಕೊಟ್ಟ ಸಾಲದ ದುಪ್ಪಟ್ಟು. ಇಷ್ಟು ಸಾಲವನ್ನು ಕೊಟ್ಟ ತರುವಾಯ ದೇಶದಲ್ಲಿ ಕೈಗಾರಿಕಾ ಕ್ರಾಂತಿಯೇ ಆಗಬೇಕಿತ್ತು. ಆದರೆ ಕೊಟ್ಟ ಸಾಲ ವಸೂಲಾಗದೆ ಬ್ಯಾಂಕ್‌ಗಳು ಮುಚ್ಚುವ ಹಂತ ತಲುಪಿತು.

ಹಣಕಾಸು ವಿಶ್ಲೇಷಕ ಮೋರ್ಗಾನ್ ಸ್ಟ್ಯಾನ್ಲಿ , ಭಾರತವನ್ನು ಆರ್ಥಿಕವಾಗಿ ದುರ್ಬಲ ಐದು ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆ ಮಾಡಿದರು. (Fragile five) ಸಾಲ ಕೊಡುವ ಹೆಸರಲ್ಲಿ ಅಧಿಕಾರಸ್ಥರು ಮತ್ತು ಅವರ ದಳಿಗಳು ತೆರಿಗೆದಾರರ ಹಣವನ್ನು ಲೂಟಿ ಮಾಡಿದ್ದರು. ನರೇಂದ್ರ ಮೋದಿಯವರು ಟೆಲಿ-ನ್ ಬ್ಯಾಂಕಿಂಗ್ ಎಂದು ಆಗಾಗ್ಗೆ ಪ್ರಸ್ತಾಪಿಸಿ ಟೀಕಿಸುತ್ತಿದ್ದಿದು ಈ ಕಾರಣಕ್ಕಾಗಿಯೇ. ಅಂದಿನ ಆರ್ಥಿಕ ಪರಿಸ್ಥಿತಿಯ ಗಂಭೀರತೆ ಮತ್ತು ಕುಸಿತದ ಹಂತಕ್ಕೆ ತಲುಪಿದ್ದ ಬ್ಯಾಂಕ್‌ಗಳ ಚಿಂತಾಜನಕ ಸ್ಥಿತಿಯ ಬಗ್ಗೆ ಉದ್ದೇಶಪೂರ್ವಕ ಮೋದಿ ಸರಕಾರವು ಜನರಿಗೆ ಮಾಹಿತಿಯನ್ನು ನೀಡಲಿಲ್ಲ.

ಬ್ಯಾಂಕ್‌ಗಳ ಮೇಲಿನ ವಿಶ್ವಾಸಾರ್ಹತೆಯು ಕುಸಿದರೆ ಅಪಾಯ ಎಂದು ಮನಗಂಡು ಸದ್ದಿಲ್ಲದೆ ಚಿಕಿತ್ಸಕ ಕ್ರಮಕ್ಕೆ ಮುಂದಾಯಿತು. ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್ ಆಗಿದ್ದ ರಘುರಾಮ್ ರಾಜನ್‌ರವರು ಸಂಸದೀಯ ಸಮಿತಿಯ ಮುಂದೆ ಎನ್‌ಪಿಎ ಕುರಿತು ವಿವರಣೆ ನೀಡುತ್ತ ೨೦೦೬-೦೮ರ ಅವಧಿ ಯಲ್ಲಿ ಯುಪಿಎ ಸರಕಾರದಲ್ಲಿ ನೀಡಿದ ಸಾಲವೇ ಇಷ್ಟು ದೊಡ್ಡ ಪ್ರಮಾಣದ ಅನುತ್ಪಾದಿತ ಸ್ವತ್ತಿಗೆ (NPA) ಕಾರಣ ಎಂದು ಒಪ್ಪಿಕೊಳ್ಳುತ್ತಾರೆ.
ಕಾಂಗ್ರೆಸ್ ಅವಧಿಯಲ್ಲಿ ನೀಡಿದ ಸಾಲಗಳ ವಿವರವು ದಂಗು ಬಡಿಸುತ್ತದೆ. ಜೇಪಿ ಗ್ರೂಪ್‌ನ ೭೭,೬೩೫ ಕೋಟಿ, ಭೂಷನ್ ಸ್ಟೀಲ್ಸನ ೪೪,೪೭೮ ಕೋಟಿ, ಲ್ಯಾಂಕೊದ ೪೪,೪೩೫ ಕೋಟಿ, ಭೂಷನ್ ಪವರ್‌ನಿಂದ ೩೭,೨೪೮ ಕೋಟಿ, ಅಲೋಕ್ ಇಂಡಸ್ಟ್ರೀಸ್ ೨೨,೦೭೫ ಕೋಟಿ , ಆಮ್ಟಕ್ ಆಟೋಕ್ಕೆ ೧೪,೦೭೫ ಕೋಟಿ, ಮೋನೆಟ್‌ಗೆ ೧೨,೧೧೫ ಕೋಟಿ, ಎಲೆಕ್ಟ್ರೊ ಸ್ಟೀಲಗೆ ೧೦,೨೭೪ ಕೋಟಿ, ಎರಾ ಇನ್-ಗೆ ೧೦,೦೦೬೫ಕೋಟಿ, ಎಬಿಜೆ ಶಿಪ್ಪಿಂಗ್‌ಗೆ ೨೨,೫೦೦ ಕೋಟಿ ಹಾಗೂ ಜ್ಯೋತಿ ಸ್ಟ್ರಕ್ಚರ್ಸ್‌ಗೆ ೫,೧೬೫ ಕೋಟಿ ರು. ಸಾಲ ನೀಡಲಾಗಿತ್ತು. ಈ ಎಲ್ಲ ಸಾಲಗಳು ಈಗ ಘೆPಅ ಪಟ್ಟಿಯಲ್ಲಿದೆ.

ಗಮನಾರ್ಹಾವೆಂದರೆ ಲ್ಯಾಂಕೊ ಕಂಪನಿಯ ಮಾಲೀಕ ಲಗಾಡಪತಿ ರಾಜಗೋಪಾಲ್ ವಿಜಯವಾಡದ ಕಾಂಗ್ರೆಸ್ ಸಂಸತ್ ಸದಸ್ಯರಾಗಿದ್ದರು. ಅವರ ಕಂಪನಿಯು ಬ್ಯಾಂಕ್‌ಗಳಿಗೆ ಬಡ್ಡಿ ಸೇರಿ ೬೦ಸಾವಿರ ಕೋಟಿ ರು. ಸಾಲ ಪಡೆದು ವಂಚಿಸಿದೆ. ಸಾಲ ವಸೂಲಾಗದೇ ರಾಷ್ಟ್ರೀಕೃತ ಬ್ಯಾಂಕ್‌ಗಳು ಬಾಗಿಲು ಮುಚ್ಚುವ ಹಂತಕ್ಕೆ ಬಂದಿದ್ದವು. ಹೊಸ ಸರಕಾರದ ಮುಂದೆ ಇದ್ದ ಸವಾಲು ಬ್ಯಾಂಕ್‌ಗಳ ಕುಸಿತ ತಡೆಯವುದು. ಬ್ಯಾಂಕ್‌ಗಳನ್ನು ಪುನಃಶ್ಚೇತನಗೊಳಿಸಿ ಬಲ ತುಂಬಬೇಕಿತ್ತು. ಇದಕ್ಕಾಗಿ ಕೇಂದ್ರ ಸರಕಾರವು ಮೂರು ಪ್ರಮುಖ ಸುಧಾರಣಾ ಕ್ರಮ ಕೈಗೊಂಡಿತ್ತು.

ಮೊದಲನೆಯ ಸುಧಾರಣೆಯ ಕ್ರಮವಾಗಿ ೨೦೧೪ರಲ್ಲಿ ?೧೪ ಸಾವಿರ ಕೋಟಿ ರು.ಬಂಡವಾಳ ಬ್ಯಾಂಕ್‌ಗಳಿಗೆ ಒದಗಿಸಿತು. ನಂತರದ ಒಂಬತ್ತು ವರ್ಷ ದಲ್ಲಿ ೩ಲಕ್ಷ ಕೋಟಿ ರು. ಬಂಡವಾಳ ಹೂಡಿದ್ದರಿಂದ ಬ್ಯಾಂಕ್‌ಗಳ ಆರ್ಥಿಕ ಪರಿಸ್ಥಿತಿಯು ಸುಧಾರಿಸಿದೆ. ಎರಡನೆಯ ಸುಧಾರಣೆ, ಬ್ಯಾಂಕ್ ನೀಡಿದ
ಸಾಲವನ್ನು ಸುಸ್ತಿದಾರರಿಂದ ವಸೂಲಿ ಮಾಡಲು ೨೦೧೬ರಲ್ಲಿ ದಿವಾಳಿತನ ಮತ್ತು ದಿವಾಳಿತನ ಕೋಡ್ ಕಾಯಿದೆಯನ್ನು ಜಾರಿಗೆ ತಂದಿದ್ದು. ಇದರನ್ವ ಯ ಒಮ್ಮೆ ಸಾಲ ಪಡೆದವನು ಮರುಪಾವತಿ ಮಾಡದಿದ್ದರೆ ಆ ಕಂಪನಿಯ ಸಮಸ್ತ ಆಸ್ತಿ, ಬ್ಯಾಂಕ್‌ಗಳ ನಿಯಂತ್ರಣಕ್ಕೆ ಬರುತ್ತದೆ. ಕಂಪನಿಯ ನಿರ್ದೇ ಶಕರು ಬೇರಾವ ಕಂಪನಿಯಲ್ಲಿ ಪಾಲುದಾರರಾಗದಂತೆ ನಿರ್ಬಂಧ ಹೇರುತ್ತದೆ. ಈ ಕಾಯಿದೆ ಬರುವ ಮುನ್ನ ಸಾಲ ವಸೂಲಿಗೆ ಸುಸ್ತಿದಾರರ ಮೇಲೆ ಮೊಕದ್ದಮೆ ಹೂಡ ಬೇಕಿತ್ತು.

ಕೆಳ ನ್ಯಾಯಾಲಯದಿಂದ ಸುಪ್ರೀಂ ಕೋರ್ಟ್ ತಲುಪುವ ವೇಳೆಗೆ ೨೦ ವರ್ಷ ಕಳೆದು ಹೋಗುತ್ತಿತ್ತು. ಈ ಕಾಯಿದೆಯಿಂದ ಬಾಕಿದಾರನ ಪ್ರಕರಣಗಳನ್ನು
ಟ್ರೈಬ್ಯುನಲ್‌ಗೆ ಹಸ್ತಾಂತರ ಮಾಡಿ ಸುಸ್ತಿದಾರರ ಕಂಪನಿಯ ನಿಯಂತ್ರಣವನ್ನು ಮಾಲೀಕರಿಂದ ಹಿಂಪಡೆಯಲು ಸಾಧ್ಯ. ಸುಸ್ತಿದಾರರ ಕಂಪನಿಯ ಆಸ್ತಿ  ಹರಾಜು ಹಾಕಿ ಬಾಕಿ ವಸೂಲಿ ಮಾಡಲು ಅವಕಾಶ ನೀಡುತ್ತದೆ. ಈ ಕಾಯಿದೆ ಬಳಸಿಕೊಂಡು ಭೂಷಣ್ ಸ್ಟೀಲ್ಸ ಮತ್ತು ಎರ್ಸ್ಸಾ ಆಯಿಲ್ ಕಂಪನಿ ಗಳನ್ನು ಹರಾಜು ಹಾಕಿ ಒಂದು ಲಕ್ಷ ಕೋಟಿಯ ತನಕ ಬಾಕಿ ವಸೂಲಿ ಮಾಡಲಾಯಿತು. ಹೊಸ ಕಾಯಿದೆಯಿಂದ ವಸೂಲಾಗದ ಎನ್‌ಪಿಎ ಸಾಲದ ಪ್ರಮಾಣ ೨೦೧೮ರಲ್ಲಿ ಇದ್ದ ಶೇ.೧೪.೬ ರಿಂದ ೨೦೨೩ರಲ್ಲಿ ಶೇ.೫.೫೩ಗೆ ಇಳಿದಿದೆ.

ಸರಕಾರದ ಕಠಿಣ ಕ್ರಮಗಳಿಂದ ೨೦೧೮ರಲ್ಲಿ ೩.೧೩ ಲಕ್ಷ ಕೋಟಿ ಎನ್‌ಪಿಎ ಹಣ ವಸೂಲಾಗಿ ಒಟ್ಟು NPA ಬಾಕಿಯು ೫.೬ಲಕ್ಷ ಕೋಟಿಗೆ ಇಳಿಯಿತು. ಅನುತ್ಪಾದಕ ಸ್ವತ್ತಿನ (NPA) ಸಾಲ ವಸೂಲಿ ವೇಗವು ೨೦೧೭-೧೮ರಲ್ಲಿ ಶೇ.೮ರಿಂದ ೨೨-೨೩ರಲ್ಲಿ ಶೇ.೨೧ಕ್ಕೆ ಹೆಚ್ಚಳವಾಗಿದೆ. ಮೂರನೆಯ ಸುಧಾರಣೆ, ದೇಶದಿಂದ ವಿಜಯ ಮಲ್ಯ ಮತ್ತು ನೀರವ್ ಮೋದಿ ಪರಾರಿಯಾದ ತರುವಾಯ ಎಚ್ಚೆತ್ತ ಕೇಂದ್ರ ಸರಕಾರ, ಪ್ಯುಜಿಟಿವ್‌ಎಕನಾಮಿಕ್ ಅ-ಂಡರ್ಸ್ ಆಕ್ಟ್ ೨೦೧೮ ಕಾಯಿದೆಯನ್ನು ಜಾರಿಗೆ ತಂದಿತು. ಇದರಿಂದ ಸಾಲ ಪಾವತಿ ಮಾಡದೇ ಬ್ಯಾಂಕ್ ಗಳಿಗೆ ವಂಚಿಸಿ ದೇಶ ಬಿಟ್ಟು ಓಡಿ ಹೋದವರ ಆಸ್ತಿಯನ್ನು
ಮಟ್ಟಗೋಲು ಹಾಕಿಕೊಂಡು ಅವರ ಆಸ್ತಿಯನ್ನು ಹರಾಜು ಹಾಕಿ ಬ್ಯಾಂಕ್‌ಗಳಿಗೆ ಬಾಕಿ ಹಣ ವಸೂಲು ಮಾಡಲು ಸಾಧ್ಯವಾಗಿದೆ.

ಈ ಕಾಯಿದೆಯನ್ನು ಬಳಸಿಕೊಂಡು ಮಲ್ಯ ಮತ್ತು ನೀರವ್ ಮೋದಿಯವರ ಬಹುತೇಕ ಆಸ್ತಿಯನ್ನು ಹರಾಜು ಹಾಕಲಾಗಿದೆ.೧೯ ಸಾವಿರ ಕೋಟಿ ಸಾಲ ಬಾಕಿಯಲ್ಲಿ ?೧೫,೧೧೩ ಕೋಟಿ ಬ್ಯಾಂಕ್ ಗಳಿಗೆ ವಸೂಲಿಯಾಗಿದೆ. ಸಾಲ ವಸೂಲಿಯಾಗುತ್ತಿದ್ದರೂ ಎನ್‌ಪಿಎ ಹತ್ತು ಲಕ್ಷ ಕೋಟಿ ರೂಪಾಯಿ ಯಾವ ಕಾರಣಕ್ಕೆ ರೈಟ್‌ ಆಫ್ ಮಾಡಿದರು ಎಂಬ ಸಹಜವಾದ ಪ್ರಶ್ನೆಯೆದ್ದೇಳುತ್ತದೆ. ಸರಕಾರಕ್ಕೆ ಒಂದೇ ಒಂದು ಪೈಸೆ ಸಾಲ ಮನ್ನಾ ಮಾಡಲೂ ಅಧಿಕಾರ ವಿಲ್ಲ.

ಸಾಲ ಮನ್ನಾ ಮಾಡಬೇಕಾದರೆ ಅಷ್ಟು ಹಣವನ್ನು ಸರಕಾರ ಬ್ಯಾಂಕ್‌ಗಳಿಗೆ ಪಾವತಿ ಮಾಡಬೇಕು. ರೈತರ ಸಾಲ ಮನ್ನಾ ಮಾಡಿದಾಗಲೂ ಸರಕಾರ ಬ್ಯಾಂಕ್ ಗಳಿಗೆ ಹಣ ಕೊಟ್ಟ ನಂತರವಷ್ಟೆ ಅದು ಮನ್ನಾ ಆಗುತ್ತಿರುವುದು. ಬ್ಯಾಂಕ್‌ಗಳು ಸಾಲವನ್ನು ರೈಟ್ ಆಫ್ ಮಾಡುವುದು ತಮ್ಮ ಬ್ಯಾಲೆನ್ಸ್‌ಶೀಟ್ ಸ್ವಚ್ಛ ಮಾಡಿಕೊಂಡು ತೆರಿಗೆಯ ಲಾಭವನ್ನು ಪಡೆಯಲು ಈ ವಿಧಾನವನ್ನು ಅನುಸರಿಸುತ್ತಾರೆ. ಬಾಕಿ ಇರುವ ಸುಸ್ತಿದಾರರಿಂದ ಸಾಲ ವಸೂಲಿ ಮಾಡಲು ಎಲ್ಲ ರೀತಿಯ ಕ್ರಮಗಳು ಮುಂಚಿನ ಹಾಗೆಯೇ ಮುಂದುವರಿಯುತ್ತದೆ. ಈಗಾಗಲೇ ಈ ರೀತಿ ರೈಟ್ ಆಫ್ ಮಾಡಿದ್ದ ೧.೩೨ ಲಕ್ಷ ಕೋಟಿ ರು. ಸಾಲದ ಹಣವನ್ನು ವಸೂಲಿ ಮಾಡಲಾಗಿದೆ.

ಸುದೀರ್ಘ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್‌ಗೆ, ಸಾಲ ರೈಟ್‌ಆ-ಗೂ ಸಾಲ ಮನ್ನಾಗೂ ವ್ಯತ್ಯಾಸ ತಿಳಿಯದಿಲ್ಲ. ಬಂಡವಾಳಶಾಹಿಗಳಿಗೆ ಸಹಾಯ ಮಾಡಲು ಇದನ್ನು ಮೋದಿ ಸರಕಾರ ಮಾಡಿದೆ ಎಂದು ಆರೋಪಿಸಿ ಜನರಿಗೆ ತಪ್ಪು ಮಾಹಿತಿ ನೀಡುತ್ತಿzರೆ. ಸರಕಾರ ಕೈಗೊಂಡ ಬ್ಯಾಂಕಿಂಗ್ ಸುಧಾರಣೆ ಗಳಿಂದ ಬ್ಯಾಂಕ್‌ಗಳ ಆರ್ಥಿಕ ಸ್ಥಿತಿ ಗಟ್ಟಿಯಾಗಿದೆ. ಆರ್ಥಿಕ ದೈತ್ಯ ಅಮೆರಿಕದಲ್ಲಿ ಕಳೆದ ಒಂದು ವರ್ಷದಲ್ಲಿ ಮೂರು ಪ್ರಮುಖ ಬ್ಯಾಂಕ್‌ಗಳು
ಬಾಗಿಲು ಮುಚ್ಚಿ ಅವರ ಆರ್ಥಿಕ ಕ್ಷೇತ್ರ ಅಡಿ ಹೋಗಿದೆ. ಭಾರತದ ಬ್ಯಾಂಕ್‌ಗಳು ಕರೊನಾದಂತಹ ಕಠಿಣ ಸಮಯವನ್ನು ಎದುರಿಸಿ ಪುಟಿದೇಳುವಂತೆ
ಬ್ಯಾಂಕಿಂಗ್ ಸುಧಾರಣೆ ಹಾಗೂ ಆರ್ಥಿಕ ನಿರ್ವಹಣೆಯ ಫಲವಾಗಿ ೨೨-೨೩ರಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳು ಒಂದು ಲಕ್ಷ ಕೋಟಿಗೂ ಹೆಚ್ಚು ಲಾಭ ಗಳಿಸಿದೆ.

ಲಂಡನ್ ಎಕಾನಮಿಸ್ಟ್ ಪತ್ರಿಕೆಯು ಭಾರತದ ಬ್ಯಾಕಿಂಗ್ ಕ್ಷೇತ್ರ ಲಾಭದತ್ತ ಮುಖ ಮಾಡಿದೆ, ಮೋದಿ ಸರ್ಕಾರವು ತಂದಿರುವ ಸುಧಾರಣೆ ಮತ್ತು ೨೭ ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ವಿಲೀನದ ಮೂಲಕ ೧೨ಕ್ಕೆ ಇಳಿಸಿರುವುದು ಇದಕ್ಕೆ ಕಾರಣ ಎಂದು ಪ್ರಶಂಸಿದೆ. ಇಂದು ಬ್ಯಾಂಕ್‌ನಲ್ಲಿ ಸಾಲ ಪಡೆದು ವಾಪಸ್ ಕೊಡದೆ ನಿಶ್ಚಿಂತೆಯಿಂದ ಇದ್ದ ವರು ಜೈಲು ಪಾಲಾಗುತ್ತಿzರೆ. ಅವರ ಆಸ್ತಿಗಳು ಹರಾಜಾಗಿ ಸಾಲ ವಸೂಲಾಗುತ್ತಿದೆ. ಸುಸ್ತಿದಾರರು ಸರಕಾರದ
ಕ್ರಮಗಳಿಗೆ ಭಯ ಬೀಳುವಂತಾಗಿ ಸಾಲ ಮರುಪಾವತಿ ಹೆಚ್ಚಾಗಿದೆ. ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆಯು ನಿರೀಕ್ಷಿತ ಫಲ ನೀಡಿ ತೆರಿಗೆದಾರರ ಹಿತವನ್ನು ಕಾಪಾಡಿದೆ.