ಯಶೋ ಬೆಳಗು
ಯಶೋಮತಿ ಬೆಳಗೆರೆ
yashomathy@gmail.com
ಮನೆಯಲ್ಲಿ ಒಂದು ಮಗುವಿದ್ದರೆ ಅನಿಮೇಟೆಡ್ ರೈಮ್ಸ್‌ಗೆ ಪುಟ್ಟ ಪುಟ್ಟ ಹೆಜ್ಜೆಯಂದಿಗೆ ತನ್ನ ತೊದಲು ನುಡಿಗಳಲ್ಲೇ ಸಂತೊಷ ದಿಂದ ಕೇಕೆ ಹಾಕುವ ಮಕ್ಕಳನ್ನು ನೋಡಿ ನಲಿಯುವ ಕುಟುಂಬದ ಸದಸ್ಯರ ಚಿತ್ರ ಸರ್ವೇ ಸಾಮಾನ್ಯ. ನಮ್ಮ ಮನೆಯಲ್ಲೂ ಮಗ ಹುಟ್ಟಿದ ನಂತರ ಮನೆಯ ರೂಪು ರೇಷೆಗಳು ದಿನದಿಂದ ದಿನಕ್ಕೆ ಅವನ ಬೆಳವಣಿಗೆಯ ಜೊತೆಗೆ ಬದಲಾಗುತ್ತಾ ಸಾಗುತ್ತಿದೆ.
ಸೂರ್ಯನ ಆಗಮನದೊಂದಿಗೆ ತೆರೆದುಕೊಳ್ಳುವ ಜೀವ ಜಗತ್ತಿನ ಚಟುವಟಿಕೆಗಳನ್ನು ಕಣ್ತುಂಬಿಕೊಳ್ಳುವುದೇ ಸೊಗಸು. ಮಲಗಿ ರುವ ಹಸುಗೂಸಿನ ನಿದ್ರೆ ಹಾರಿ ಹೋಗುವಂತೆ ಮೈಕಿನಲ್ಲಿ ಕೂಗುತ್ತಾ ಬರುವ ತರಕಾರಿ-ಹಣ್ಣಿನ ತಳ್ಳುಗಾಡಿಯ ವ್ಯಾಪಾರಿ ಗಳು, ತಲೆಯ ಮೇಲೆ ಸೊಪ್ಪಿನ ಮಂಕರಿಯನ್ನು ಹೊತ್ತು, ದಂಟು-ಚಿಲಕರವೆ- ಚಕ್ಕೋತ- ಪಾಲಾಕ್-ಮೆಂತ್ಯ ಸೊಪ್ಪೂ ಅಂತ ಕೂಗುತ್ತಾ ಬರುವ ಸೊಪ್ಪಮ್ಮ, ಮಲ್ಲಿಗೆ, ಜಾಜಿ, ಕಾಕಡ, ಸೇವಂತಿಗೆ ಹೂಮಾಲೆಗಳನ್ನು ಹೊತ್ತು ಕೂಗುತ್ತಾ ಬರುವ ಹೂವಮ್ಮ, ಗೇಟಿಗೆ ನೇತುಹಾಕಿದ ಬುಟ್ಟಿಯಲ್ಲಿ ಹಾಲು-ಮೊಸರಿನ ಪ್ಯಾಕೆಟ್‌ನ್ನು ಇಟ್ಟು ಸದ್ದಿಲ್ಲದೆ ನಡೆದು ಹೋಗುವ ಹಾಲು ಹಾಕುವ ಹುಡುಗರು, ಪತ್ರಿಕೆಯನ್ನೂ, ಅದರೊಳಗೊಂದು ಪುಟ್ಟ ಮ್ಯಾಗ್‌ಜೀನ್‌ನ್ನು ಇಟ್ಟು ರಾಕೆಟ್‌ನಂತೆ ರೊಯ್ಯನೆ ಗುರಿಯಿಟ್ಟು ಎಸೆದು ಹೋಗುವ ಪೇಪರ್ ಹಾಕುವ ಹುಡುಗರು, ವಿಂಗಡಿಸಿ ಕೂಡಿಟ್ಟ ಕಸವನ್ನೆಲ್ಲ ಆ ಕೊಳೆತ ವಾಸನೆಯ ಸಮೇತ ಹೊತ್ತು ಹೋಗುವ ನಗರ ಪಾಲಿಕೆಯ ಪೌರ ಕಾರ್ಮಿಕರು.
ಸಮವಸ್ತ್ರ ಧರಿಸಿ, ಸ್ಕೂಲ್ ಬ್ಯಾಗನ್ನು ಹೆಗಲಿಗೇರಿಸಿ, ಶೂ ಲೇಸನ್ನು ಕಟ್ಟುತ್ತಾ ಶಾಲೆಗೆ ಓಡುವ ಮಕ್ಕಳು, ಅವರಿಗಾಗೇ ಮನೆಯ ಬಳಿ ಕಾದು ನಿಲ್ಲುವ ಶಾಲಾ ವಾಹನಗಳು, ಪಾರ್ಕಿನಲ್ಲಿ ಜಾಗಿಂಗ್, ವಾಕಿಂಗ್ ಮಾಡುತ್ತಾ ಬೆವರಿಳಿಸುವ ನಡುವಯಸ್ಕರು, ಜೋರಾಗಿ ನಗುವ ವ್ಯಾಯಾಮದೊಡನೆ ಮನಸ್ಸಿನ ದುಗುಡಗಳನ್ನು ಕಳೆದುಕೊಳ್ಳುವ ವಯೋ ವೃದ್ಧರು, ಹೊಸ್ತಿಲು ತೊಳೆದು, ಮನೆಯಂಗಳವನ್ನು ಶುಭ್ರಗೊಳಿಸಿ, ನೀರು ಹಾಕಿ ರಂಗೋಲಿ ಬಿಡಿಸಿ ಸುಖನಿದ್ರೆಯಲ್ಲಿರುವ ಪತಿರಾಯನಿಗೆ ಫ್ರೆಶ್ ಆದ ಬಿಸಿ ಬಿಸಿ ಕಾಫಿ ಮಾಡಿಕೊಡುವ ಗೃಹಿಣಿ…
ಹೀಗೆ ನಗರ ಜೀವನದಲ್ಲಿ ನಮ್ಮ ಸುತ್ತಮುತ್ತಲಲ್ಲಿ ಕಾಣ ಸಿಗುವ ಚಿತ್ರಗಳನ್ನು ಕಣ್ಣಲ್ಲೇ ಸೆರೆಹಿಡಿಯುತ್ತಾ ರಾಕೆಟ್ ನಂತೆ ಎಸೆದ ಪತ್ರಿಕೆ ಸರಿಯಾಗಿ ಅಂಗಳದಲ್ಲಿ ಹಾಕಿದ ನೀರಲ್ಲಿ ಬಿದ್ದು ತೊಯ್ದು ಪತ್ರಿಕೆಯನ್ನು ಗೊಣಗುತ್ತಾ ತಂದು ಫೋನಿನಡಿಯಲ್ಲಿಟ್ಟು ಒಣಗಿಸುತ್ತಾ ಕಾಫಿ ಹೀರುವಾಗ ಪತ್ರಿಕೆಯ ಹೆಡ್ ಲೈನುಗಳನ್ನು ದಾಟಿ ಮೂಲೆ ಯಲ್ಲಿ ಚಿಕ್ಕದಾಗಿ ಪ್ರಿಂಟಾಗಿರುವ ವ್ಯಂಗ್ಯ ಚಿತ್ರ ದಲ್ಲಿ ಇಣುಕುವ ಹಾಸ್ಯ ಬರಹ ಕಂಡಾಗ ಎಂಥವರಿಗೂ ನಗು ತುಳುಕದೇ ಇರದು.
ಗೆರೆಗಳಲ್ಲೇ ಭಾವನೆಗಳನ್ನು ಬಿಂಬಿಸುವ ಕಲೆ ಇಂದಿಗೂ ನಿಲುಕದ ನಕ್ಷತ್ರವೇ. ಕಂಪ್ಯೂಟರಿನಲ್ಲಿ ಕಮ್ಯಾಂಡ್ ಕೊಟ್ಟು, Copy-paste ಮಾಡಿದಷ್ಟು ಸುಲಭವಲ್ಲ ಅದು. ಅದಕ್ಕೆ ಸಾಕಷ್ಟು ಶ್ರದ್ಧೆಯ ಜೊತೆಗೆ ಪ್ರತಿಭೆಯ ಅವಶ್ಯಕತೆಯೂ ಇದೆ. ಹೀಗಾಗಿ ಅದರ ಮಹತ್ವವೇನು ಎಂಬುದು ಅದನ್ನು ಬಲ್ಲವರಿಗೆ ಮಾತ್ರ ತಿಳಿದಿರುತ್ತದೆ. ಕಲೆಯ ಕೌಟುಂಬಿಕ ಹಿನ್ನೆಲೆಯಿಂದ ಬಂದ ನನಗೆ ಅದರ ಹಿಂದಿರುವ ಪರಿಶ್ರಮ, ಹಾಗೂ ನಿರರ್ಥಕತೆ ಎರಡರ ಅರಿವೂ ಸಾಕಷ್ಟಿದೆ.
ಮನೆಯಲ್ಲಿ ಒಂದು ಮಗುವಿದ್ದರೆ ಅನಿಮೇಟೆಡ್ ರೈಮ್ಸ್‌ಗೆ ಪುಟ್ಟ ಪುಟ್ಟ ಹೆಜ್ಜೆಯಂದಿಗೆ ತನ್ನ ತೊದಲು ನುಡಿಗಳಲ್ಲೇ ಸಂತೊಷ ದಿಂದ ಕೇಕೆ ಹಾಕುವ ಮಕ್ಕಳನ್ನು ನೋಡಿ ನಲಿಯುವ ಕುಟುಂಬದ ಸದಸ್ಯರ ಚಿತ್ರ ಸರ್ವೇ ಸಾಮಾನ್ಯ. ನಮ್ಮ ಮನೆಯಲ್ಲೂ ಮಗ
ಹುಟ್ಟಿದ ನಂತರ ಮನೆಯ ರೂಪು ರೇಷೆಗಳು ದಿನದಿಂದ ದಿನಕ್ಕೆ ಅವನ ಬೆಳವಣಿಗೆಯ ಜೊತೆಗೆ ಬದಲಾಗುತ್ತಾ ಸಾಗುತ್ತಿದೆ.
ಅವನಿಗಾಗಿ ಬಂದ ರಾಶಿ ರಾಶಿ ಗಿಫ್ಟ್-ಗಳಲ್ಲಿ ಹೆಚ್ಚಿನವು ಗೊಂಬೆಗಳೇ. ಇಂದಿಗೂ ಅವೆಲ್ಲ ಹಾಗೆಯೇ ಇವೆ. ಆದರೆ ಮಗ ಮಾತ್ರ ಬೆಳೆದುಬಿಟ್ಟ. Old macDonald had a farm ಅನ್ನುವ rhyms ಗೆ ಅವನು ಖುಷಿಯಿಂದ ನಗುತ್ತಾ ಗೆಜ್ಜೆಯ ಹೆಜ್ಜೆಯೊಂದಿಗೆ
ಕುಣಿಯುತ್ತಿದ್ದ ದೃಶ್ಯಗಳು ಇಂದಿಗೂ ನೆನಪಿನ ಮಡಿಲಲ್ಲಿ ಹಸಿಯಾಗಿವೆ.
ಬಾಲ್ಯದಲ್ಲಿ ಬೇಸಿಗೆ ರಜೆಗೆಂದು ಹೋಗುತ್ತಿದ್ದ ಚಿಕ್ಕಪ್ಪನ ಮನೆಯಲ್ಲಿ ಅವರದೇ ಆದ ಪುಟ್ಟ ಪುಸ್ತಕದ ಲೈಬ್ರರಿ ಸದಾ ಕಾಡುವ ಆಕರ್ಷಣೆಯಾಗಿತ್ತು. ಅಪರೂಪಕ್ಕೆ ಮಾತಿಗೆ ಸಿಗುತ್ತಿದ್ದ ಚಿಕ್ಕಪ್ಪ ಹೇಳುತ್ತಿದ್ದ ಕತೆಗಳ ಜೊತೆಗೆ ಅವರು suggest ಮಾಡುತ್ತಿದ್ದ ಪುಸ್ತಕಗಳನ್ನು ಓದುವುದೆಂದರೆ ಖುಷಿ. ಅವರು ಪ್ರಜಾವಾಣಿಯ ಜಾಹಿರಾತು ವಿಭಾಗದಲ್ಲಿದ್ದುದರಿಂದ ಮನೆಯಲ್ಲಿ ಪ್ರಜಾವಾಣಿ, ಸುಧಾ, ತುಷಾರಗಳ ಪರಿಚಯ. ನಿತ್ಯವೂ ಪತ್ರಿಕೆಯಲ್ಲಿ ಬರುತ್ತಿದ್ದ ಮೊದ್ದುಮಣಿ ಚಿತ್ರಗಳಿಗೆ ಅವರ ಮಗಳೊಂದಿಗೆ ಚಿತ್ರಕ್ಕೆ
ತಕ್ಕಂತೆ ಡೈಲಾಗ್ ಹೊಂದಿಸುತ್ತಾ ನಕ್ಕು ನಲಿಯುತ್ತಿದ್ದ ದಿನಗಳು ಅದೆಷ್ಟು ಚೆಂದವಿದ್ದವು.
1929ನೇ ಇಸವಿಯಲ್ಲೇ If you dream it you can do it ಎಂಬ ಸಂದೇಶವನ್ನು ನೀಡಿ ಅದಕ್ಕೆ ಕಳಸ ಪ್ರಾಯದಂತೆ ಇಪ್ಪತ್ತೆರಡು ಆಸ್ಕರ್ ಅವಾರ್ಡುಗಳ ಒಡೆಯನಾದ ವಾಲ್ಟ್ ಡಿಸ್ನಿಗೆ ಅದ್ಭುತವಾಗಿ ಕತೆ ಹೇಳುವ ಕಲೆಯಿತ್ತು. ಅವರು ಕತೆ ಹೇಳಲು ಶುರು ವಿಟ್ಟರೆ ತಮ್ಮ ಕಣ್ಣೆದುರು ಆ ಪ್ರಸಂಗಗಳೆಲ್ಲ ನಡೆಯುತ್ತಿವೆಯೇನೋ ಎಂಬಂತೆ ಮಕ್ಕಳೆಲ್ಲ ಕಣ್ಣೆವೆ ಮಿಟುಕಿಸದೆ ಆಲಿಸುತ್ತಾ ಕುಳಿತು ಡುವಷ್ಟು ವರ್ಣನೀಯವಾಗಿರುತ್ತಂತೆ.
ಬಾಲ್ಯದಿಂದಲೂ ಅವರಿಗೆ ಚಿತ್ರಕಲೆ, ಪೇಂಟಿಂಗ್ ಹಾಗೂ ಫೋಟೋಗ್ರಾಫಿಗಳ ಮೇಲೆ ಹೆಚ್ಚಿನ ಆಸಕ್ತಿ ಇದ್ದುದರಿಂದ ಅದರಲ್ಲೇ ಕಲಿಕೆಯನ್ನು ಆರಂಭಿಸಿ ಮುಂದೆ ಪತ್ರಿಕೆಗಳಲ್ಲಿ newspaper artist ಆಗಿ ಕಾರ್ಯನಿರ್ವಹಿಸುತ್ತಾರೆ. ಸಾಮಾನ್ಯಾಗಿ ಕ್ರಿಯಾಶೀಲ ವ್ಯಕ್ತಿಗಳು ಒಂದೇ ಕಡೆ ನೆಲೆ ನಿಲ್ಲುವು ದಿಲ್ಲ ಎಂಬ ಹೇಳಿಕೆಯಂತೆ ವಾಲ್ಟ್ ಡಿಸ್ನಿ ಕೂಡಾ ಸಾಕಷ್ಟು ಕಡೆ ಕೆಲಸ ಗಳನ್ನು ನಿರ್ವಹಿಸಿ ಕೊನೆಗೆ ತನ್ನದೇ ಆದ ಚಿತ್ರನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿದ ಸಾಧಕ. ಅದರ ಮೂಲಕ ಹೊರ ಹೊಮ್ಮಿದ ಅನಿಮೇಟೆಡ್ ಕ್ಯಾರೆಕ್ಟರುಗಳಾದ ಮಿಕಿ, ಮಿನ್ನಿ, ಡೊನಾಲ್ಡ್ ಡಕ್‌ಗಳಿಂದ ಕೂಡಿದ ಮಿಕಿ ಮೌಸ್ ಕ್ಲಬ್ ಹೌಸ್ ಮೊಟ್ಟ ಮೊದಲ ಬಾರಿಗೆ ಕಲರ್, ಮ್ಯೂಸಿಕ್ ಅಂಡ್ ಸೌಂಡ್ ಎಫೆಕ್ಟ್ ಬಳಸಿ ಸಾಕಷ್ಟು ಜನಪ್ರಿಯತೆ ಗಳಿಸಿದ ಕಾರ್ಟೂನ್ ಶೋ. ಅಲ್ಲದೇ ಇವರ ಸಂಸ್ಥೆಯಿಂದ ಪ್ರಸಾರವಾದ ಗೂಫಿ ಅಂಡ್ ಪ್ಲೂಟೋ, ಫ್ಲವರ್ಸ್ ಅಂಡ್ ಟ್ರೀ ಹಾಗೂ snow white and the seven dwarf, ಸಿಂಡ್ರೆಲ್ಲಾ ಕಥಾ ಸರಣಿಗಳೂ ಅಷ್ಟೇ ಪ್ರಸಿದ್ಧಿಯನ್ನು ಗಳಿಸಿದವು.
ಹಾಗೆಯೇ 1940 ನೇ ಇಸವಿಯಲ್ಲಿ ಬಂದ ಮತ್ತೊಂದು ಅಮೇರಿಕನ್ ಮೂಲದ ಕಾಮಿಡಿ ಶಾರ್ಟ್ ಮೂವೀಸ್ ಟಾಮ್ ಅಂಡ್ ಜೆರ್ರಿ! ಕಾಡುವ ಜೆರ್ರಿಯ ತುಂಟಾಟಗಳು, ಕುತಂತ್ರಗಳ ನಡುವೆ ಸಿಕ್ಕಿಬಿದ್ದು ಹೈರಾಣಾಗುವ ಟಾಮ್ ಎನ್ನುವ ಬೆಕ್ಕು… ಎಷ್ಟೆಲ್ಲ
ಕಾರ್ಟೂನ್ ಶೋಗಳು ಬಂದರೂ ಇಂದಿಗೂ ಅದರ ಛಾಪನ್ನು ಹಾಗೇ ಉಳಿಸಿಕೊಂಡಿರುವುದು ಅದಕ್ಕೆ ದಕ್ಕಿದ ಜನಪ್ರಿಯತೆಯೇ ಸಾಕ್ಷಿ.
ಜಪಾನಿನ manga ಅನ್ನುವ ಮ್ಯಾಗಜೀನ್‌ನಲ್ಲಿ ಚಿತ್ರಕಾರರಾಗಿದ್ದ yoshito usui ಅಚಾನಕ್ಕಾಗಿ ಅಪಘಾತಕ್ಕೀಡಾದಾಗ ಅವರ ಚಿತ್ರಗಳಿಗೆಲ್ಲ ಅನಿಮೇಷನ್ ರೂಪು ಕೊಟ್ಟು 1992 ರಲ್ಲಿ ಟಿ.ವಿ. ಯಲ್ಲಿ ಪ್ರಸಾರಗೊಂಡ ನಂತರ ಸಾಕಷ್ಟು ಭಾಷೆಗಳಲ್ಲೂ ಪ್ರಸಾರವಾಗಿ ಮೆಚ್ಚುಗೆ ಯನ್ನು ಗಳಿಸಿಕೊಂಡಿತ್ತು. ನಂತರ ಟೈಮ್ ಟ್ರಾವೆಲ್ ಕಾನ್ಸೆಪ್ಟಿನೊಂದಿಗೆ ಬಂದ ಹಮ್ಟಿ ಡಮ್ಟಿ ಡೊರೆ ಮಾನ್ ಕಾರ್ಟೂನ್ ಶೋ ಮಕ್ಕಳಂತೆ ಕೂತು ನೋಡವಲ್ಲಿ ನಾನೂ ಮೊದಲಿಗಳೇ. ಬಾಲಿವುಡ್ ತಾರೆಯರ ದನಿಯನ್ನು ನಕಲು ಮಾಡಿದ ಆಗಿ ಅಂಡ್ ದ ಕಾಕ್ರೋಚ್, ಚೆಂ ಗಮ್ ಸೆ ಬಚನಾ ನಾ ಮುಷ್ಕಿಲ್ ನಹೀ ನಾ ಮುಮ್ಕಿನ್ ಹೈ ಅನ್ನುವ ಮೋಟೂ ಪತ್ಲೂ, ಚೋಟಾ ಭೀಮ್, ಮಿಸ್ಟರ್ ಬೀನ್, ಪೋಕಿಮಾನ್, ಬೆಂಟೆನ್, ಇತ್ತೀಚೆಗೆ ಬಂದ ಜಂಗಲ್ ರಾಜಾ ಮೋಗಲಿ ಒಂದಕ್ಕಿಂತ ಒಂದು ಸೂಪರ್ ಹಿಟ್‌ಗಳೇ. ಸಾಲದ್ದಕ್ಕೆ ಅದರ ಟೈಟಲ್ ಸಾಂಗ್‌ಗಳೂ ಅಷ್ಟೇ ಚೆಂದವಿರುತ್ತದೆ.
ಸರಯೂ ನದಿಯ ತೀರದಲ್ಲಿ ಮೆಂಪಿ ಬೆಟ್ಟಗಳಿಂದ ಸುತ್ತುವರಿದ ಮಾಲ್ಗುಡಿ ಎಂಬ ಕಾಲ್ಪನಿಕ ಹಳ್ಳಿಯ ಕಥಾನಕವನ್ನು ಮೂಲ ಕಥೆಗೆ ಎಲ್ಲೂ ಭಂಗ ಬರದಂತೆ ಶಿವಮೊಗ್ಗದ ಆಗುಂಬೆಯಂತಹ ಪ್ರಕೃತಿಯ ಬನಸಿರಿಯ ಒಂದು ಸಣ್ಣ ಹಳ್ಳಿಯಲ್ಲಿ ದೃಶ್ಯರೂಪ ಕ್ಕಿಳಿಸಿದ ಶಂಕರ್ ನಾಗ್‌ರ ಸಾಹಸವನ್ನು ಎಂಥವರೂ ಮೆಚ್ಚುವಂಥದ್ದು. ಇಂದಿಗೂ ಅಂತಹ ಮತ್ತೊಂದು ದೃಶ್ಯ ಕಾವ್ಯ ಕಿರುತೆರೆಯ ಮೇಲೆ ಮೂಡಿ ಬರುವು ದು ಸಾಧ್ಯಾಗಲೇ ಇಲ್ಲ. ಇನ್ನು ಅದರ ಟೈಟಲ್ ಸಾಂಗ್ ಇಂದಿಗೂ ಅನೇಕರ ಮೊಬೈಲು ಗಳ ರಿಂಗ್ ಟೋನಾಗಿ ಉಳಿದುಕೊಂಡಿರುವುದು ಅದಕ್ಕೆ ಸಿಕ್ಕ ಜನಪ್ರಿಯತೆಯ ಸಾಕ್ಷಿ. ನೈಜತೆ, ಸರಳತೆ ಹಾಗೂ ಮೃದು ಹಾಸ್ಯಕ್ಕೆ ಹೆಸರಾದ ಪ್ರಸಿದ್ಧ ಕಾದಂಬರಿಕಾರರಾದ ಆರ್.ಕೆ. ನಾರಾಯಣ್ ಮಾಲ್ಗುಡಿ ಡೇಸ್‌ನ ಕರ್ತೃ. ಅವರ ಮೊದಲ ಕಾದಂಬರಿಯಾದ ಸ್ವಾಮಿ ಮತ್ತು ಗೆಳೆಯರು ಕಾದಂಬರಿಯನ್ನು ಪ್ರಕಟಿಸಲು ಯಾವ ಪ್ರಕಾಶಕರೂ ಒಪ್ಪಿರಲಿಲ್ಲ ವಂತೆ. ನಂತರ ಅದರ ಹಸ್ತ ಪ್ರತಿಯನ್ನು ಬ್ರಿಟಿಷ್ ಲೇಖಕ ಗ್ರಹಾಂ ಗ್ರೀನ್ ರವರಿಗೆ ಕಳಿಸಿದಾಗ ಅವರು ಅದನ್ನು ಇಷ್ಟ ಪಟ್ಟು ಅದನ್ನು ಪ್ರಕಟಿಸುವ ಜವಾಬ್ದಾರಿಯನ್ನು ಹೊರುತ್ತಾರೆ.
ಆನಂತರ ಗ್ರಹಾಂ ಗ್ರೀನ್ ಹಾಗೂ ಆರ್.ಕೆ. ನಾರಾಯಣ್ ಜೀವನಪಯಂತ ಆಪ್ತಮಿತ್ರರಾಗಿ ಉಳಿಯುತ್ತಾರೆ. ಇಂತಹ ಆರ್.ಕೆ.
ನಾರಾಯಣ್‌ರ ಸಹೋದರ ಆರ್.ಕೆ. ಲಕ್ಷ್ಮಣ್ ಪ್ರಖ್ಯಾತ ವ್ಯಂಗ್ಯ ಚಿತ್ರಕಾರರಾಗಿದ್ದರು ಎನ್ನುವುದು ವಿಶೇಷವಾದ ಸಂಗತಿ. ೧೯೫೧ ರಲ್ಲಿ ಟೈಮ್ಸ್ ಆಫ್ ಇಂಡಿಯಾದಲ್ಲಿ, ಚೌಕಳಿ ಅಂಗಿ, ಪೊದೆ ಹುಬ್ಬು, ಚಪ್ಪಟೆ ಮೂಗು, ಪೊರಕೆ ಮೀಸೆ, ಹಳೆ ಕನ್ನಡಕ, ಚಪ್ಪಲಿ, ಆಗಾಗ ಕಾಲಮಾನಕ್ಕೆ ತಕ್ಕಂತೆ ಛತ್ರಿ ಇತ್ಯಾದಿಗಳನ್ನು ಬಳಸಿಕೊಳ್ಳುತ್ತಾ, ಬೆರಗು ಕಣ್ಣುಗಳನ್ನು ಅರಳಿಸಿ, ಅಂದಿನ ವಿದ್ಯಮಾನ ಗಳನ್ನು ದಿಟ್ಟಿಸಿ ನೋಡಿ, ಎಲ್ಲಾ ಅರ್ಥವಾದರೂ ತುಟಿ-ಪಿಟಿಕ್ಕೆನ್ನದೆ ಮುಖದ ಪ್ರತಿಕ್ರಿಯೆಯಿಂದಲೇ ಸಾವಿರಾರು ಸಾಲುಗಳನ್ನು ಹೇಳಿ ನಗಿಸಲು ಅನುವು ಮಾಡಿಕೊಡುತ್ತಿದ್ದ ಅವರ ಕಾಮನ್ ಮ್ಯಾನ್ ಎನ್ನುವ ವ್ಯಂಗ್ಯಚಿತ್ರ ಸಾಕಷ್ಟು ಪ್ರಸಿದ್ದಿ ಪಡೆದಿತ್ತು.
ಪ್ರತಿಭಾವಂತ ಆರ್.ಕೆ. ಸಹೋದರರು ನಮ್ಮ ಪಕ್ಕದ ಮೈಸೂರಿನವರು ಅನ್ನುವ ಹೆಮ್ಮೆ ನಮ್ಮದು. ಅದೆಲ್ಲ ಸರಿ, ಆದರೆ ಕಾರ್ಟೂನ್ ನೋಡುವಾಗ ಮಕ್ಕಳಿಗೇಕೆ ಅಷ್ಟೊಂದು ಖುಷಿಯೆಂದರೆ they can imagine themselves in that character which is not possible in the real life ಅನ್ನೋದು ತಡವಾಗಿ ಹೊಳೆದ ಸತ್ಯ.