ಸಂಗತ
ವಿಜಯ್ ದರಡಾ
ಜಿ-23 ನಾಯಕರು ಕಾಂಗ್ರೆಸ್ ತೊರೆಯಲು ನಿರ್ಧರಿಸಲಿಲ್ಲ. ಹಾಗೆ ನೋಡಿದರೆ ತರೂರ್ ಎಲ್ಲ ಒತ್ತಡಗಳ ನಡುವೆ ಪಕ್ಷದ ಉಳಿದು ಪಕ್ಷಾಧ್ಯಕ್ಷರ ಚುನಾವಣೆಯಲ್ಲಿ ಸ್ಪರ್ಧಿಸಿದರು. ಅವರು ಆಯ್ಕೆಯಾಗದಿದ್ದುದಕ್ಕೆ ಹಲವು ಕಾರಣಗಳಿದ್ದವು ಎಂಬುದು ಪಕ್ಷದ ಆಂತರಿಕ ವಲಯದಲ್ಲಿದ್ದವರಿಗೆ ಗೊತ್ತೇ ಇದೆ.
ಇತ್ತೀಚೆಯಷ್ಟೇ ನಡೆದ ಕಾಂಗ್ರೆಸ್ ಪಕ್ಷದ ಅಧ್ಯಕ್ಷೀಯ ಚುನಾವಣೆ ಒಂದು ದೊಡ್ಡ ರಾಜಕೀಯ ಬೆಳವಣಿಗೆ ಎಂಬುದರಲ್ಲಿ ಎರಡು ಮಾತಿಲ್ಲ, ಆದರೆ ಅದರ ಸಂಪೂರ್ಣ ಶ್ರೇಯ ಸಲ್ಲಬೇಕಾಗಿರುವುದು ‘ಜಿ-23’ ನಾಯಕರು ಗಳಿಗೆ. ಅವರು ಈ ವಿಚಾರವನ್ನು ಎತ್ತದೇ ಇದ್ದಿದ್ದರೆ, ಗಟ್ಟಿದನಿಯಲ್ಲಿ ಮಾತನಾಡದೇ ಇದ್ದಿದ್ದರೆ, ತಮ್ಮ ಅಸಂತುಷ್ಟಿಯನ್ನು ಬಹಿರಂಗವಾಗಿ ಹೇಳಿಕೊಳ್ಳದೇ ಇದ್ದಿದ್ದರೆ ಈ ಚುನಾವಣೆ ನಡೆಯುತ್ತಲೇ ಇರಲಿಲ್ಲ.
ಆಂತರಿಕ ಅಸಹನೆ ಕಾಂಗ್ರೆಸ್ನಲ್ಲಿ ಇದ್ದೇ ಇತ್ತು. ಈ ಅಸಂತುಷ್ಟಿ ಮತ್ತು ಅಸಹನೆಯ ಭಾವ ಕಾಲಕಾಲಕ್ಕೂ ಆ ಪಕ್ಷದಲ್ಲಿ ಇದ್ದುದನ್ನು ನಾವೆಲ್ಲ ಕಂಡಿದ್ದೇವೆ. ಬಹುಮುಖ್ಯವಾಗಿ ಆಂತರಿಕ ನಾಯಕತ್ವ ಮತ್ತು ಚುನಾವಣೆ ಗಳ ವಿಚಾರದಲ್ಲಿ ಅಸಮಾ ಧಾನ ಭುಗಿಲೇಳುತ್ತಲೇ ಇತ್ತು. ಪಕ್ಷದೊಳಗೆ ಉಸಿರುಗಟ್ಟಿಸುವ ವಾತಾವರಣವಿದ್ದ ಕಾರಣದಿಂದ ‘ಜಿ-23’ ನಾಯಕರು ಗಟ್ಟಿದನಿಯಲ್ಲಿ ಅಸಮಾಧಾನವನ್ನು ಹೊರಹಾಕಿದರು.
ಕಾಂಗ್ರೆಸ್ಸನ್ನು ಉಳಿಸಿಕೊಳ್ಳಲು ಈ ಎಲ್ಲ ನಾಯಕರೂ ಇಂಥದೊಂದು ತ್ಯಾಗಕ್ಕೆ ಸಿದ್ಧರಾಗಿದ್ದರು. ‘ಕಾಂಗ್ರೆಸ್ ತನ್ನ ಪಾತ್ರ ವನ್ನು ಸರಿಯಾಗಿ ನಿಭಾಯಿಸುತ್ತಿಲ್ಲ, ಆದ್ದರಿಂದ ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂಬುದು ಜಿ-23 ನಾಯಕರ ಅಭಿಮತವಾಗಿತ್ತು. ಬಿಜೆಪಿಗೆ ಸಮರ್ಥ ಎದುರಾಳಿಯಾಗಲು ಸಾಮರ್ಥ್ಯವಿರುವುದು ಕಾಂಗ್ರೆಸ್ಸಿಗೆ ಮಾತ್ರ. ಇವತ್ತಿನ ಪರಿಸ್ಥಿತಿಯಲ್ಲೂ ಕಾಂಗ್ರೆಸ್ಸಿನ ವೋಟ್ ಬ್ಯಾಂಕ್ ಶೇ.19ರಷ್ಟು ಇದೆ. ಅದನ್ನು ಮುಖ್ಯವಾಹಿನಿಗೆ ತರುವುದು ಇಂದಿನ ತುರ್ತುಅಗತ್ಯ. ಕಾಂಗ್ರೆಸ್ ಪಕ್ಷದೊಳಗೆ ನಾವು ಪ್ರಜಾಪ್ರಭುತ್ವವನ್ನು ಸಾಧಿಸಿ ತೋರಬೇಕು.
ನಮ್ಮ ಪಕ್ಷ ದೇಶವ್ಯಾಪಿಯಾದುದು, ಇಲ್ಲಿ ಆಂತರಿಕ ಚುನಾವಣೆಗಳ ಕಟ್ಟಳೆ ಇರಲೇಬೇಕು. ಗಾಂಧೀಜಿ ಕಾಲದಲ್ಲಿ
ಚುನಾವಣೆಗಳಾಗುತ್ತಿದ್ದವು; ನೆಹರು, ಇಂದಿರಾ ಮತ್ತು ರಾಜೀವ್ ಗಾಂಧಿಯವರೂ ಆದನ್ನು ಅನುಸರಿಸಿಕೊಂಡು
ಬಂದಿದ್ದರು. ಅದನ್ನೇ ಮುಂದುವರಿಸಿ, ಇಂದಿನ ಯುಗದಲ್ಲೂ ಕಾಂಗ್ರೆಸ್ನಲ್ಲಿ ಪ್ರಜಾಪ್ರಭುತ್ವ ವಾದವಿದೆ ಎಂಬುದನ್ನು ನಾವು ಜನರ ಗಮನಕ್ಕೆ ತರಬೇಕು.
ಮಧ್ಯಂತರ ಅವಧಿಯ ಅಧ್ಯಕ್ಷರು ೧-೨-೩ ತಿಂಗಳಿಗೆ ಸೀಮಿತರಾಗಿರಬಹುದು, ಆದರೆ ವರ್ಷಾನುಗಟ್ಟಲೆ ಮುನ್ನಡೆಯುವುದು
ಸಾಧ್ಯವಿಲ್ಲ. ಹಾಗಾಗಿ ಚುನಾವಣೆ ಬಹುಮುಖ್ಯ. ಸ್ಥಾಪಿತ ಹಿತಾಸಕ್ತಿಗಳು ಕಾಂಗ್ರೆಸ್ಸನ್ನು ತೋರುವ ರೀತಿಯಲ್ಲಿ ನಾವಿಲ್ಲ,
ನಮ್ಮದು ಕೂಡ ಪ್ರಜಾಪ್ರಭುತ್ವವಿರುವ ಪಕ್ಷ ಎಂಬುದನ್ನು ಜನತೆಗೆ ನಾವು ತೋರಬೇಕಿದೆ. ನಾವ್ಯಾರೂ ಸೋನಿಯಾ ಗಾಂಧಿ, ರಾಹುಲ್ ಗಾಂದಿ, ಪ್ರಿಯಾಂಕಾ ಗಾಂಧಿಯವರ ವಿರೋಧಿಗಳಲ್ಲ….’.
ಇದು ಜಿ-೨೩ ನಾಯಕರ ಸಂದೇಶವಾಗಿತ್ತು. ಪಕ್ಷದ ಹಿರಿಯರೆಂದು ಪರಿಗಣಿಸಲ್ಪಟ್ಟವರೂ ಸೋನಿಯಾ ಗಾಂಧಿಯವರನ್ನು ಭೇಟಿಮಾಡಲಾಗದ ಸ್ಥಿತಿ ಪಕ್ಷದಲ್ಲಿತ್ತು, ಇದನ್ನು ಜಿ-೨೩ ನಾಯಕರು ಮನವರಿಕೆ ಮಾಡಿಕೊಟ್ಟಿದ್ದಾರೆ. ಅವರು ರಾಹುಲ್ ಗಾಂಽಯವರ ಭೇಟಿಗೂ ದಿನಗಟ್ಟಲೆ ಕಾಯಬೇಕಿತ್ತು. ಒಂದೊಮ್ಮೆ ಗುಲಾಮ್ ನಬಿ ಕರೆಮಾಡಿದರೆ, ಆ ಕಡೆಯಿಂದ ಕರೆ ಸ್ವೀಕರಿಸಿದವರು ‘ನೀವ್ಯಾರು?’ ಎಂದು ಪ್ರಶ್ನಿಸುತ್ತಿದ್ದರು.
ನಾವು ಪ್ರತಿ ಚುನಾವಣೆಯಲ್ಲೂ ಸೋಲನ್ನು ಅನುಭವಿಸುತ್ತಲೇ ಬಂದಿದ್ದೇವೆ ಎಂಬ ನೋವನ್ನು ಜಿ-೨೩ ನಾಯಕರು ವ್ಯಕ್ತಪಡಿಸಿದ್ದಾರೆ. ಆದರೆ ಆ ವಿಚಾರ ಪಕ್ಷದ ವರಿಷ್ಠ ವಲಯದಲ್ಲಿ ಚರ್ಚೆಯಾಗಲೇ ಇಲ್ಲ. ಗೋವಾ, ಮಧ್ಯಪ್ರದೇಶ, ಪಂಜಾಬಿನಲ್ಲಿ ಏನಾಯಿತು? ಅದ್ಯಾಕೆ ಹಾಗಾಯಿತು? ನಾವ್ಯಾಕೆ ನಮ್ಮ ಭದ್ರನೆಲೆಯನ್ನು ಕಳಕೊಂಡೆವು? ನಮ್ಮ ಹಿರಿಯ ನಾಯಕರು ಏನು ಮಾಡುತ್ತಿದ್ದಾರೆ? ಇವೆಲ್ಲ ವಿಚಾರಗಳು ಕುರಿತು ‘ಚಿಂತನ-ಮಂಥನ’ ನಡೆಯಬೇಕೆಂದು ಸೋನಿಯಾ
ಗಾಂಧಿ ಬಯಸಿದ್ದರು. ಆದರೆ ಅದಾವುದೂ ಆಗಲೇ ಇಲ್ಲ.
ಇತ್ತೀಚೆಗೆ ಜೈಪುರದಲ್ಲಿ ನಡೆದ ಚಿಂತನ ಶಿಬಿರದಲ್ಲೂ ಅದನ್ನು ಚರ್ಚೆಗೆ ಎತ್ತಿಕೊಳ್ಳದೆ, ಭಾರತ ಜೋಡೋ ಯಾತ್ರೆಯನ್ನೇ
ಪ್ರಮುಖ ವಿಷಯವಾಗಿ ತೆಗೆದುಕೊಳ್ಳಲಾಯಿತು. ಚಿಂತನ-ಮಂಥನ ಶಿಬಿರದಲ್ಲಿ ಮುಖ್ಯ ವಿಷಯವನ್ನೇ ಬದಿಗೊತ್ತಲಾಯಿತು. ರಾಹುಲರು ಹೊಣೆಗಾರಿಕೆ ಹೊರಲು ಸಿದ್ಧರಿಲ್ಲ ಎಂಬುದೇ ಜಿ-೨೩ ನಾಯಕರಿಗೆ ಇಷ್ಟವಾಗದ ಸಂಗತಿಯಾಗಿತ್ತು. ಅನಾಯಾಸ ವಾಗಿ ಅವಕಾಶ ಸಿಕ್ಕಾಗ ಅವರು ಪ್ರಧಾನಮಂತ್ರಿ ಹುದ್ದೆಯನ್ನೂ ಬಯಸಲಿಲ್ಲ, ಪ್ರತಿಪಕ್ಷದ ನಾಯಕನೂ ಆಗಲಿಲ್ಲ, ಪಕ್ಷಾಧ್ಯಕ್ಷನೂ ಆಗಬಯಸಲಿಲ್ಲ.
ಕಾರ್ಯಕಾರಿಣಿಯಲ್ಲಿ ವಿಷಯಗಳು ಚರ್ಚೆಗೆ ಬಂದಾಗ ಚುನಾವಣೆ ಸೋತಿದ್ದಕ್ಕೆ ತಾನು ಹೊಣೆಯಲ್ಲ ಎಂದು ರಾಹುಲ್ ನುಣುಚಿಕೊಂಡಿದ್ದರು. ದೇಶವ್ಯಾಪಿಯಾಗಿ ಪಕ್ಷದ ಸೋಲಿಗೆ ಎಲ್ಲ ನಾಯಕರೂ ಕಾರಣರು. ಪ್ರಧಾನಮಂತ್ರಿಯ ಕುರಿತಾದ ಚರ್ಚೆ ಮುನ್ನೆಲೆಗೆ ಬಂದಾಗಲೂ ಇವರು ತೆಗೆದುಕೊಂಡ ನಿರ್ಣಯಗಳು ಸರಿಯಿರಲಿಲ್ಲ. ಜಿ-೨೩ ನಾಯಕರು ಸುಖಾಸುಮ್ಮನೆ ಪಕ್ಷ ತೊರೆಯುವ ನಿರ್ಧಾರಕ್ಕೆ ಬರಲಿಲ್ಲ. ಹಾಗೆ ನೋಡಿದರೆ ಶಶಿ ತರೂರ್ ಎಲ್ಲ ಒತ್ತಡಗಳ ನಡುವೆ ಪಕ್ಷದ ಉಳಿದರು. ಚುನಾವಣೆ ನಡೆದಾಗ ಅವರು ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಅವರು ಆಯ್ಕೆಯಾಗದೆ ಇರುವುದಕ್ಕೆ ಹಲವು ಕಾರಣಗಳಿದ್ದವು
ಎಂಬುದು ಪಕ್ಷದ ಆಂತರಿಕ ವಲಯದಲ್ಲಿದ್ದ ಎಲ್ಲರಿಗೂ ಗೊತ್ತೇ ಇದೆ.
ಒಂದೊಮ್ಮೆ ಅವರು ಪಕ್ಷಾಧ್ಯಕ್ಷರಾಗಿದ್ದರೆ ಅವರ ಮನದಲ್ಲಿದ್ದ ಕಾರ್ಯಕ್ರಮಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದರು. ಹೊಸ ಹುರುಪು ಮತ್ತು ಭರವಸೆಯೊಂದಿಗೆ ಕಾಂಗ್ರೆಸ್ಸನು ಮುಂದೊಯ್ಯುವುದು ಕೂಡ ಅವರಿಗೆ ಸಾಧ್ಯವಿತ್ತು. ತಾವೊಬ್ಬ ಸಮರ್ಥ ಅಧ್ಯಕ್ಷ ಎಂಬುದನ್ನು ಅವರು ಸಾಬೀತುಪಡಿಸಬಹುದಾಗಿತ್ತು. ಅಚ್ಚರಿಯೆಂಬಂತೆ ಜಿ-೨೩ ನಾಯಕರು ಕೂಡ ಶಶಿ ತರೂರರನ್ನು ಬೆಂಬಲಿಸಲಿಲ್ಲ. ಮೊದಲಿಗೆ ರಾಜಾಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಥ್ ಹೆಸರು ಪಕ್ಷಾಧ್ಯಕ್ಷರ ಹುದ್ದೆಯ ರೇಸಿನಲ್ಲಿ ಮುನ್ನೆಲೆಗೆ ಬಂದಿತ್ತು. ಆದರೆ ಸಚಿನ್ ಪೈಲಟ್ರನ್ನು ಮುಖ್ಯಮಂತ್ರಿ ಮಾಡುವ ಪ್ರಸ್ತಾವ ಅಜಯ ಮಾಕನ್ ಕಡೆಯಿಂದ ಬಂದಾಗ ಶಾಸಕರು ಸಿಟ್ಟಿಗೆದ್ದರು.
ಬಿಜೆಪಿ ಜತೆ ಕೈಜೋಡಿಸಲು ಮುಂದಾಗಿದ್ದ ವ್ಯಕ್ತಿಯನ್ನು ನಾವು ಮುಖ್ಯಮಂತ್ರಿ ಎಂದು ಒಪ್ಪುವುದಾದರೂ ಹೇಗೆ ಎಂಬುದು ಶಾಸಕರ ಸಿಟ್ಟಿಗೆ ಕಾರಣವಾಗಿತ್ತು. ದಿಗ್ವಿಜಯ ಸಿಂಗರ ಹೆಸರು ಪ್ರಸ್ತಾಪವಾದರೂ ಅದಕ್ಕೆ ಪುಷ್ಟಿ ಸಿಗಲಿಲ್ಲ. ಕೊನೆಗೆ ಖರ್ಗೆ ಸಾಹೇಬರು ಚುನಾವಣೆಯಲ್ಲಿ ಗೆದ್ದರು. ಗಮನಿಸಬೇಕಾದ ಇನ್ನೊಂದು ಸಂಗತಿಯೆಂದರೆ ಕಾಂಗ್ರೆಸ್ ಅಧ್ಯಕ್ಷ ಪದಕ್ಕೆ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ದೇಶದಲ್ಲಿ ಕಾಂಗ್ರೆಸ್ ಕುರಿತಾಗಿ ಒಂದು ಉತ್ತಮ ಅಭಿಪ್ರಾಯವನ್ನು ಮೂಡಿಸ ಲಾಗಿತ್ತು.
ಭಾರತ ಜೋಡೋ ಯಾತ್ರೆ ದೇಶದಲ್ಲಿ ಕಾಂಗ್ರೆಸ್ಸಿನ ಮೌಲ್ಯವರ್ಧನೆಗೆ ಪೂರಕವಾಗಿತ್ತು. ಈ ಯಾತ್ರೆಯ ಹಾದಿಯನ್ನು
ಗೂಗಲ್ ಮೊರೆಹೋಗಿ ರೂಪಿಸಲಾಗಿತ್ತು, ಪರಿಣಿತರ ಸಲಹೆ ಮೇರೆಗೆ ಆಯೋಜನೆ ಮಾಡಿದ್ದರೆ ಯಾತ್ರೆ ಖಂಡಿತವಾಗಿ ಇನ್ನಷ್ಟು ಪರಿಣಾಮಕಾರಿಯಾಗುತ್ತಿತ್ತು. ಖರ್ಗೆ ಸಾಹೇಬರು ನಿಜವಾಗಿಯೂ ಅಪ್ಪಟ ಕಾಂಗ್ರೆಸ್ಸಿಗ. ಅವರಿಗೆ ಕಾಂಗ್ರೆಸ್ ತತ್ತ್ವ-ಸಿದ್ಧಾಂತಗಳ ಅರಿವಿದೆ. ಅವರು ಹಿಂದುಳಿದ ಜಾತಿಯಿಂದ ಬಂದವರೂ ಹೌದು. ಎಲ್ಲರಿಗೂ ಅವರದೇ ಆದ ಕಾಲ ಇದ್ದೇ ಇರುತ್ತದೆ. ಅವರಿಗೀಗ ವಯಸ್ಸು ೮೦ ಮೀರಿರುವುದರಿಂದ ದೇಶವ್ಯಾಪಿ ಓಡಾಡುವುದು ಕೊಂಚ ಕಷ್ಟವಾಗಬಹುದು.
ಪಕ್ಷಕ್ಕೆ ಹೆಚ್ಚಿನ ಪ್ರಾಣವಾಯು ತುಂಬುವಲ್ಲಿ ಖರ್ಗೆ ಸಾಹೇಬರು ಎಷ್ಟರಮಟ್ಟಿಗೆ ಯಶಸ್ವಿಯಾಗಬಲ್ಲರು ಎಂಬುದು ಈಗ ಎಲ್ಲರ
ಮುಂದಿರುವ ಪ್ರಶ್ನೆ. ಇದಕ್ಕೆ ಕಾಲವೇ ಉತ್ತರಿಸಬೇಕು. ಹಿಂದೆ ಪಿ.ವಿ. ನರಸಿಂಹರಾವ್ ಮತ್ತು ಸೀತಾರಾಮ ಕೇಸರಿಯವರು
ಪಕ್ಷಾಧ್ಯಕ್ಷರಾಗಿzಗ ಅವರು ಯಶಸ್ವಿಯಾಗಲು ಯಾರೂ ಅವಕಾಶ ಕೊಡಲೇ ಇಲ್ಲ. 2024ರ ಚುನಾವಣೆಯಲ್ಲಿ ಪಕ್ಷದ
ಬಲವರ್ಧನೆ ಮಾಡುವಲ್ಲಿ ಖರ್ಗೆ ಸಾಹೇಬರಿಗೆ ಅವಕಾಶ ಸಿಗುವಂತಾಗಲಿ ಎಂದು ನಾವೆಲ್ಲರೂ ಹಾರೈಸೋಣ.