Wednesday, 11th December 2024

ಭಾರತದಲ್ಲಿ ಸದ್ದಿಲ್ಲದ ಆಗುತ್ತಿರುವ ಬದಲಾವಣೆಗಳು

railway job news

ಅಭಿಪ್ರಾಯ

ಗಣೇಶ್ ಭಟ್, ವಾರಣಾಸಿ

ಕಳೆದೆರಡು ವರ್ಷಗಳಿಂದ ಭಾರತದಲ್ಲಿ ಯಾವೊಬ್ಬ ರೈಲು ಪ್ರಯಾಣಿಕನೂ ರೈಲು ಅಪಘಾತದಿಂದಾಗಿ ಜೀವ ಕಳೆದುಕೊಂಡಿಲ್ಲ!
ಕೆಲವು ವರ್ಷಗಳ ಹಿಂದೆ ರೈಲು ಹಳಿ ತಪ್ಪಿ ಹಲವು ಸಾವು, ಎರಡು ರೈಲುಗಳು ಎದುರು ಬದುರಾಗಿ ಡಿಕ್ಕಿ ಹೊಡೆದು ಸಾವು, ಲೆವೆಲ್ ಕ್ರಾಸಿಂಗ್‌ನಲ್ಲಿ ದಾಟುತ್ತಿದ್ದ ಬಸ್ಸಿಗೆ ಬಡಿದ ರೈಲು ಇಂತಹ ಸುದ್ದಿಗಳು ಭಾರತದಲ್ಲಿ ದಿನ ನಿತ್ಯ ಸರ್ವೇ ಸಾಮಾನ್ಯ ವಾಗಿದ್ದವು.

ತನ್ನ ಅವಧಿಯಲ್ಲಿ ರೈಲು ಅಪಘಾತವಾದಾಗ ರೈಲ್ವೆ ಮಂತ್ರಿ ಪದವಿಗೆ ಲಾಲ್ ಬಹಾ ದ್ದೂರ್ ಶಾಸ್ತ್ರಿಯವರು ರಾಜೀನಾಮೆ ಯನ್ನು ಕೊಟ್ಟ ಘಟನೆಯೂ ನಮ್ಮ ಚರಿತ್ರೆಯಲ್ಲಿದೆ. ಆದರೆ ಸತತವಾಗಿ ಕಳೆದ ಎರಡು ವರ್ಷಗಳಿಂದ ಭಾರತೀಯ ರೈಲ್ವೆ ಅಪಘಾತವಾದ ಒಂದೇ ಒಂದು ಸಮಾಚಾರವನ್ನು ನಾವು ಓದಿಲ್ಲ. ಇದು ಆಕಸ್ಮಿಕವಲ್ಲ. ಸರಕಾರದ, ರೈಲ್ವೆ ಇಲಾಖೆಯ ಯಶಸ್ವಿ ಕ್ರಮಗಳಿಂದ ಭಾರತದ ರೈಲ್ವೆ ಇಂದು ಹಿಂದೆಂದಿಗಿಂತಲೂ ಸುರಕ್ಷಿತ ವಾಗಿದೆ. 3479 ಕಾವಲುಗಾರರಿಲ್ಲದ ರೈಲ್ವೆ ಲೆವೆಲ್ ಕ್ರಾಸಿಂಗ್‌ಗಳಿಗೆ ಕಾವಲು ಸಹಿತ ಗೇಟುಗಳನ್ನು ಅಳವಡಿಸಲಾಯಿತು

ಹಾಗೂ ಅಂಡರ್ ಪಾಸ್‌ಗಳನ್ನು ನಿರ್ಮಿಸಲಾಯಿತು, ನಕ್ಸಲ್ ಪೀಡಿತ ಪ್ರದೇಶಗಳ ರೈಲ್ವೆ ಹಳಿಯ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಯಿತು, ರೈಲ್ವೆ ಸೂಚನಾ ವ್ಯವಸ್ಥೆಯನ್ನು ಆಧುನಿಕಗೊ ಳಿಸಲಾಯಿತು, ಅಪಘಾತ ತಡೆಯುವ ಸೆನ್ಸರ್‌ಗಳನ್ನು ಅಳವಡಿಸ ಲಾಯಿತು, ರೈಲ್ವೆ ಸುರಕ್ಷತಾ ಸಿಬ್ಬಂದಿಗಳನ್ನು ಹೆಚ್ಚು ಸಕ್ಷಮಗೊಳಿಸಲಾಯಿತು ಇವುಗಳೆಲ್ಲದರ ಪರಿಣಾಮವಾಗಿ 2019 ರ ನಂತರ ಯಾವೊಬ್ಬ ಪ್ರಯಾಣಿಕನೂ ರೈಲ್ವೆ ಅಪಘಾತದಿಂದಾಗಿ ಜೀವ ಕಳೆದು ಕೊಂಡಿಲ್ಲ.

ಬದಲಾವಣೆಯನ್ನು ತರಬೇಕೆಂಬ ಬದ್ಧತೆಯಿದ್ದರೆ ಬದಲಾವಣೆ ತರಲು ಸಾಧ್ಯ ಎನ್ನುವುದಕ್ಕೆ ಭಾರತೀಯ ರೈಲ್ವೆಯೇ ಸಾಕ್ಷಿ. 1897 ರ ಭಾರತದಲ್ಲಿ ವಿದ್ಯುತ್ ಉತ್ಪಾದನೆ ಆರಂಭವಾಗಿದ್ದರೂ, 1905ರ ಏಷ್ಯಾದ ಮೊದಲ ವಿದ್ಯುತ್ ಬೀದಿ ದೀಪ ಬೆಂಗಳೂರಿ ನಲ್ಲಿ ಉರಿದರೂ ದೇಶದ 100% ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ಒದಗಿಸಲು ಸರಕಾರಗಳಿಗೆ ಸಾಧ್ಯವಾ ಗಿರಲಿಲ್ಲ. 2015 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯಲ್ಲಿ ಮಾಡಿದ ಭಾಷಣದಂತೆ ನಂತರದ 1000 ದಿವಸಗಳಲ್ಲಿ ಪ್ರಧಾನ ಮಂತ್ರಿ ಗ್ರಾಮೀಣ ವಿದ್ಯುದೀಕರಣ ಯೋಜನೆಯಲ್ಲಿ ವಿದ್ಯುತ್ ಸಂಪರ್ಕವಿಲ್ಲದ 18452 ಗ್ರಾಮಗಳನ್ನು ಗುರುತಿಸಿ ಅವುಗಳಿಗೆ ವಿದ್ಯುತ್ ಸಂಪರ್ಕವನ್ನು ಮಾಡಲಾಯಿತು.

ಪರ್ವತ, ಬೆಟ್ಟ, ಕಣಿವೆ, ದೂರ ದೂರದ ಕಾಡು ಪ್ರದೇಶಗಳಲ್ಲಿರುವ ಕುಗ್ರಾಮ ಗಳಿಗೂ ವಿದ್ಯುತ್ ತಂತಿಗಳನ್ನು ಎಳೆಯಲಾಯಿತು. ವಿದ್ಯುತ್ ಕಂಬಗಳನ್ನು  ವಾಹನದಲ್ಲಿ ಕೊಂಡು ಹೋಗಲು ಸಾಧ್ಯವಾಗದಂತಹ ಪ್ರದೇಶಗಳಿಗೆ ಹೆಲಿಕಾಪ್ಟರ್ ಮೂಲಕ ಹಾಗೂ
ತಲೆಹೊರೆಯಲ್ಲೂ ಕಂಬಗಳನ್ನು ಒಯ್ದು, ನೆಟ್ಟು  ತಂತಿಯನ್ನು ಎಳೆಯ ಲಾಯಿತು. ಮಾರ್ಚ್2018 ರ ಒಳಗಡೆ ದೇಶದ ೧೦೦% ಹಳ್ಳಿಗಳು ವಿದ್ಯುತ್ ಸಂಪರ್ಕವನ್ನು ಪಡೆದವು. 2016ರಲ್ಲಿ ದೇಶದ ೮೪.೫೩% ಮನೆಗಳಿಗೆ ಮಾತ್ರ ವಿದ್ಯುತ್ ಸಂಪರ್ಕವಿತ್ತು.

ದೇಶದ ಪ್ರತಿ ಮನೆಗೆ ವಿದ್ಯುತ್ ಸಂಪರ್ಕ ಒದಗಿಸುವ ಉದ್ದೇಶದ ಯೋಜನೆ ಪ್ರಧಾನ ಮಂತ್ರಿ ಸರಲ್ ಬಿಜಲೀ ಹರ್ ಘರ್ ಯೋಜನಾ (ಸೌಭಾಗ್ಯ) ಎಂಬ ಯೋಜನೆ ಯನ್ನು ರೂಪಿಸಿ 2017ರಲ್ಲಿ ಜಾರಿಗೆ ತರಲಾಯಿತು. ಈ ಯೋಜನೆಗೆ ಸರಕಾರವು 163.25 ಕೋಟಿ ರುಪಾಯಿಗಳನ್ನು ಮೀಸಲಿಟ್ಟು ದೇಶದ ಎಲ್ಲಾ ವಿದ್ಯುತ್ ವಂಚಿತ ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕವನ್ನು ಕೊಡುವ ಮಹತ್ತರ ಕೆಲಸವನ್ನು ಮಾಡಿತು.

ಇದರ ಪರಿಣಾಮವಾಗಿ ಸೌಭಾಗ್ಯ ಯೋಜನೆಯಡಿಯಲ್ಲಿ ಇದುವರೆಗೆ 2.82 ಕೋಟಿ ಬಡವರ ಮನೆಗಳು ಉಚಿತ ವಿದ್ಯುತ್ ಸಂಪರ್ಕವನ್ನು ಪಡೆದು ದೇಶದ 100% ಮನೆಗಳು ವಿದ್ಯುತ್ ಸಂಪರ್ಕವನ್ನು ಪಡೆದಂತಾಯಿತು. ಇತ್ತೀಚೆಗೆ ಭಾರತವು ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ (ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ) 46 ನೇ ಸ್ಥಾನಕ್ಕೆ ಏರಿದೆ. 2015 ರಲ್ಲಿ ಭಾರತವು ಗ್ಲೋಬಲ್ ಇನ್ನೋವೇಶನ್ ಸೂಚ್ಯಂಕದಲ್ಲಿ 81 ನೇ ಸ್ಥಾನದಲ್ಲಿತ್ತು. ಕಳೆದ 6 ವರ್ಷಗಳಲ್ಲಿ ಸೂಚ್ಯಂಕ ದಲ್ಲಿ ತನ್ನ ಸ್ಥಾನವನ್ನು ನಿರಂತರ ವಾಗಿ ವೃದ್ಧಿಸಿಕೊಳ್ಳುತ್ತಾ ಬಂದ ಭಾರತವು 35 ಸ್ಥಾನಗಳಷ್ಟು ಏರಿಕೆ ಕಂಡಿದೆ.

ದೇಶದ ಜ್ಞಾನ ಬಂಡವಾಳ, ನವೋದ್ಯಮಗಳಿಗೆ ಪೂರಕವಾದ ವಾತಾವರಣ, ಸಂಶೋಧನೆಗೆ ಅವಕಾಶ ಮೊದಲಾದ ವಿಚಾರಗಳು ಆವಿಷ್ಕಾರ ಸೂಚ್ಯಂಕದ ಸ್ಥಾನವನ್ನು ನಿರ್ಧರಿಸುತ್ತವೆ. ದೇಶದಲ್ಲಿಂದು ಸುಮಾರು 53000 ನವೋದ್ಯಮಗಳಿವೆ. ಇವುಗಳಲ್ಲಿ 65 ಸ್ಟಾರ್ಟ್ ಅಪ್ ಗಳು ತಮ್ಮ ಮೌಲ್ಯವನ್ನು ಒಂದು ಬಿಲಿ ಯನ್ ಡಾಲರ್ (ಶತಕೋಟಿ ಡಾಲರ್) ಗಳಿಗೆ ಏರಿಸಿ ಕೊಂಡು  ಯುನಿ ಕಾರ್ನ್ ಸ್ಟಾರ್ಟ್ ಅಪ್ ಗಳೆಂಬ ಹಿರಿಮೆಗೆ ಪಾತ್ರವಾಗಿವೆ. ಭಾರತದ ನವೋದ್ಯಮಗಳು 90 ಶತಕೋಟಿ ಡಾಲರ್ (661900 ಕೋಟಿ ರುಪಾಯಿ) ಗಳಷ್ಟು ವಿದೇಶಿ ಹೂಡಿಕೆಯನ್ನು ಗಳಿಸಿವೆ ಹಾಗೂ 300 ಶತಕೋಟಿ ಡಾಲರ್ (2200000 ಕೋಟಿ ರುಪಾಯಿ) ಗಳಷ್ಟು ಮಾರುಕಟ್ಟೆ ಬಂಡವಾಳ ಮೌಲ್ಯವನ್ನು ಹೊಂದಿವೆ.

ಭಾರತವಿಂದು ವಿದೇಶಿ ಹೂಡಿಕೆದಾರರ ಆಕರ್ಷಣೆಯ ಕೇಂದ್ರವಾಗಿ ಬೆಳೆಯುತ್ತಿದೆ. ಇಲ್ಲಿ ಸುಧಾರಿಸಿದ ವಿದ್ಯುತ್, ರಸ್ತೆ, ನೀರಾವರಿ ಮೊದಲಾದ ಮೂಲಭೂತ ಸೌಕರ್ಯಗಳು ಹಾಗೂ ಇಳಿಕೆಯಾದ ಭ್ರಷ್ಟಾಚಾರ ಮೊದಲಾದವುಗಳು ವಿದೇಶಿ ಹೂಡಿಕೆ ಸಂಸ್ಥೆ ಗಳನ್ನು ಆಕರ್ಷಿಸುತ್ತಿವೆ. ಭಾರತದಲ್ಲಿ ಸುಧಾರಿಸುತ್ತಿರುವ ವ್ಯವಸ್ಥೆಯ ಸೂಚಕವಾಗಿ ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ (ಉದ್ಯಮ ಸ್ನೇಹೀ ದೇಶಗಳು) ಪಟ್ಟಿಯಲ್ಲಿ ಭಾರತವು ಗಮನೀಯ ಸುಧಾರಣೆಯನ್ನು ಕಂಡಿದೆ. 2014 ರಲ್ಲಿ ಉದ್ಯಮ ಸ್ನೇಹೀ ದೇಶಗಳ ಪಟ್ಟಿಯಲ್ಲಿ 142 ನೇ ಸ್ಥಾನದಲ್ಲಿದ್ದ ಭಾರತವು 2020 ರಲ್ಲಿ 79 ಸ್ಥಾನಗಳ ಏರಿಕೆಯನ್ನು ಕಂಡು 63 ನೇ ಸ್ಥಾನಕ್ಕೆ ಏರಿದೆ. ಇವುಗಳ ಪರಿಣಾಮವಾಗಿ ಭಾರತದಗುತ್ತಿರುವ ನೇರ ವಿದೇಶೀ ಹೂಡಿಕೆಯಲ್ಲಿ ಗಮನಾರ್ಹ ಹೆಚ್ಚಳವಾಗುತ್ತಿದೆ.

೨೦೧೩-೧೪ ರಲ್ಲಿ ಭಾರತದಗಿದ್ದ ಒಟ್ಟು ವಾರ್ಷಿಕ ನೇರ ವಿದೇಶಿ ಹೂಡಿಕೆ ೨೪.೨೯ ಶತಕೋಟಿ ಡಾಲರ್‌ಗಳಾಗಿದ್ದರೆ, ಜಾಗತಿಕ ಕರೋನಾ ಬಿಕ್ಕಟ್ಟಿನ ಎಡೆಯಲ್ಲೂ ೨೦೨೦-೨೧ ರಲ್ಲಿ ಭಾರತದದ ನೇರ ವಿದೇಶಿ ಹೂಡಿಕೆ ೮೧.೭೨ ಶತಕೋಟಿ ಡಾಲರ್‌ಗಳು.
೧೯೪೭ ರಿಂದ ೨೦೧೩ ರ ವರೆಗಿನ ೬೩ ವರ್ಷಗಳಲ್ಲಿ ಭಾರತದದ ಒಟ್ಟು ನೇರ ವಿದೇಶಿ ಹೂಡಿಕೆ ೨೯೨ ಶತಕೋಟಿ ಡಾಲರ್‌ ಗಳಾಗಿದ್ದರೆ, ೨೦೧೪-೧೫ ರಿಂದ ೨೦೨೦-೨೧ ರ ವರೆಗಿನ ಒಟ್ಟು ೭ ವರ್ಷಗಳ ಅವಧಿಯಲ್ಲಿ ಭಾರತದದ ನೇರ ವಿದೇಶಿ ಹೂಡಿಕೆ
೪೪೦ ಶತಕೋಟಿ ಡಾಲರ್ ಗಳು!

ಆಯುಷ್ಮಾನ್ ಭಾರತ್ ಯೋಜನೆ ದೇಶದ ೫೦ ಕೋಟಿಗೂ ಹೆಚ್ಚಿನ ಜನರಿಗೆ ವಾರ್ಷಿಕವಾಗಿ ೫ ಲಕ್ಷ ರುಪಾಯಿ ಮೊತ್ತದ ಉಚಿತ ಚಿಕಿತ್ಸಾ ಸೌಲಭ್ಯವನ್ನು ಕೊಡುತ್ತಿರುವುದು ಸತ್ಯವಾದರೂ ಅದಕ್ಕಿಂತಲೂ ಮಿಗಿಲಾಗಿ ಪ್ರಧಾನ ಮಂತ್ರಿ ಜನೌಷಧಿ ಪರಿಯೋಜ ನಾದ ಮೆಡಿಕಲ್ ಶಾಪ್‌ಗಳು ಜನರಿಗೆ ದೊಡ್ಡ ಮಟ್ಟಿನಲ್ಲಿ ಸಹಾಯವಾಗುತ್ತಿದೆ. ಈಗಾಗಲೇ ದೇಶಾದ್ಯಂತ ೮೦೨೦ ಜನೌಷಧ ಕೇಂದ್ರಗಳನ್ನು ತೆರೆಯಲಾಗಿದೆ. ಮಾರುಕಟ್ಟೆಯ ಬ್ರ್ಯಾಂಡೆಡ್ ಔಷಧದ ಬೆಲೆಯ ಶೇ.೨೫ ರಿಂದ ೩೦ ಕಡಿಮೆ ಬೆಲೆಯಲ್ಲಿ ಜನೌಷಧ ಕೇಂದ್ರದಲ್ಲಿ ಔಷಧಿಯು ಸಿಗುತ್ತದೆ.

ಜನೌಷಧ ಕೇಂದ್ರದಲ್ಲಿ ಬಿಪಿಎಲ್ ಎಪಿಎಲ್ ಎನ್ನುವ ಬೇಧಭಾವ ಇಲ್ಲದೆ ರಿಯಾಯಿತಿ ದರದಲ್ಲಿ ಔಷಧ ಮಾರಲ್ಪಡು ತ್ತಿರುವುದರಿಂದ ಜನೌಷಧ ಕೇಂದ್ರಗಳು ಎ ಬಡ ಮತ್ತು ಮಧ್ಯಮ ವರ್ಗದ ಜನರ ಪಾಲಿಗೆ ವರದಾನವಾಗಿ ಪರಿಣಮಿ ಸಿವೆ. ನಗರ
ಪ್ರದೇಶದ ೨೫% ಜನರು ಹಾಗೂ ಗ್ರಾಮೀಣ ಪ್ರದೇಶಗಳ ೧೯% ಔಷಽ ಖರೀದಿಯ ವೆಚ್ಚವನ್ನು ಭರಿಸಲು ಸಾಲಕ್ಕೆ ಬಾಧೆಗೆ ಒಳಗಾಗುತ್ತಾರೆ ಎಂದು ಅಂಕಿ ಅಂಶಗಳು ಹೇಳುತ್ತವೆ. ಜನರು ಅಽಕ ರಕ್ತದೊತ್ತಡ, ಮಧುಮೇಹ, ಹೃದ್ರೋಗ ಮೊದಲಾದ ಖಾಯಿಲೆಗಳಿಗೆ ಜೀವಿತಾ ವಧಿಯುದ್ದ ಕ್ಕೂ ಔಷದಿ ಯನ್ನು ಖರೀದಿಸಬೇಕಿದ್ದು ಜನೌಷಧ ಕೇಂದ್ರಗಳಿಂದಾಗಿ ಜನರು ಔಷದಕ್ಕಾಗಿ ಮಾಡಬೇಕಾದ ಖರ್ಚಿನ ಮೊತ್ತವನ್ನು ಗಣನೀಯವಾಗಿ ಇಳಿಸಿದೆ.

ಭಾರತೀಯರ ಆರ್ಥಿಕ ವ್ಯವಹಾರದ ದಿಕ್ಕನ್ನೇ ಬದಲಿಸಿದ್ದು ಡಿಜಿಟಲ್ ಇಂಡಿಯಾ. ತಾನು ಪ್ರಧಾನಿ ಯಾಗಿzಗ ರಾಜೀವ್ ಗಾಂಽಯವರು ಮಾತನಾಡುತ್ತಾ ಸರಕಾರದ ಒಂದು ರುಪಾಯಿಯು ಜನರನ್ನು ತಲುಪುವಾಗ ಅದು ೧೫ ಪೈಸೆಗೆ ಇಳಿಯುತ್ತದೆ ಎಂದು ಹೇಳಿದ್ದರು. ಇದು ನಿಜವೂ ಹೌದು. ಸರಕಾರವು ಜನರ ಕಲ್ಯಾಣಕ್ಕಾಗಿ ಬಿಡುಗಡೆ ಮಾಡುತ್ತಿದ್ದ ಸಹಾಯ ಧನ, ಪ್ರೋತ್ಸಾಹಕಗಳು, ವಿದ್ಯಾರ್ಥಿ ವೇತನಗಳು, ಪೆನ್ಷನ್‌ಗಳು ಜನರ ಬಳಿಗೆ ತಲುಪುವ ಮೊದಲೇ ಭ್ರಷ್ಟ ಅಽಕಾರಶಾಹಿ ವ್ಯವಸ್ಥೆಯಲ್ಲಿ ಅರ್ಧಕ್ಕರ್ಧ ಕರಗಿ ಹೋಗುತ್ತಿದ್ದವು. ಇದೀಗ ಜನಧನ್ ಅಕೌಂಟ್, ಆಧಾರ್ ಹಾಗೂ ಮೊಬೈಲ್ ನಂಬರ್‌ಗಳನ್ನು ಪರಸ್ಪರ
ಬೆಸೆದ ಜೆಎಎಂ (ಜಾಮ) ವ್ಯವಸ್ಥೆಯಿಂದಾಗಿ ಸರಕಾರವು ಜನರಿಗೆ ಕೊಡುತ್ತಿರುವ ಸಹಾಯಧನದಲ್ಲಿ ಶೇ. ೧೦೦ರಷ್ಟು ಮೊತ್ತವು ಜನರನ್ನು ನೇರವಾಗಿ ತಲುಪುತ್ತಿದೆ.

ಪಡಿತರ ವಸ್ತುಗಳ ವಿತರಣೆ, ವಿದ್ಯಾರ್ಥಿವೇತನ,  ರಸಗೊಬ್ಬರ ಸಬ್ಸಿಡಿ, ವೃದ್ಧರು ಹಾಗೂ ದಿವ್ಯಾಂಗರ ಪೆನ್ಷನ್, ಮೊದಲಾದವು ಗಳು ಡಿಜಿಟಲ್ ಮಾಧ್ಯಮದ ಸಂದಾಯವಾಗುತ್ತಿದೆ. ಜನಸಾಮಾನ್ಯರು ಭಾರತ್ ಇಂಟರ್ ಫೇಸ್ ಫಾರ್ ಮನಿ( ಭೀಮ) ಮೂಲಕ
ಹಣ ವರ್ಗಾವಣೆ ಹಾಗೂ ವ್ಯವಹಾರ ಮಾಡಿಕೊಳ್ಳುತ್ತಿದ್ದು ಈ ವರ್ಷದ ಸೆಪ್ಟಂಬರ್ ತಿಂಗಳಲ್ಲಿ ೩೬೫ ಕೋಟಿ ಬಾರಿ ಯುಪಿಐ ಮೂಲಕ ಹಣ ವರ್ಗಾವಣೆಗೊಂಡಿದ್ದು ಸುಮಾರು ೬.೫ ಲಕ್ಷ ಕೋಟಿ ರುಪಾಯಿಗಳ ಹಣ ವರ್ಗಾವಣೆ ಗೊಂಡಿದೆ.

೨೦೧೦ನೇ ಇಸವಿಯಲ್ಲಿ ಡಿಜಿಟಲ್ ಮಾಧ್ಯಮದ ಮೂಲಕ ವಹಿವಾಟು ನಡೆಸುವುದರಲ್ಲಿ ಜಾಗತಿಕವಾಗಿ ಹಿಂದಿದ್ದ ಭಾರತ ವಿಂದು ಚೀನಾ ಅಮೆರಿಕಗಳನ್ನು ಹಿಂದಿಕ್ಕಿ ಜಾಗತಿಕವಾಗಿ ಅತೀ ಹೆಚ್ಚು ಡಿಜಿಟಲ್ ಮಾಧ್ಯಮದ ಮೂಲಕ ವಹಿವಾಟನ್ನು ನಡೆಸುವ ದೇಶವಾಗಿ ಹೊರ ಹೊಮ್ಮಿದೆ. ಭಾರತದ ಆಂತರಿಕ ಭದ್ರತೆ ಬಹಳಷ್ಟು ಸುಧಾರಿಸಿದೆ. ದೇಶದ ಬೇಹುಗಾರಿಕಾ ಇಲಾಖೆ
ಹಾಗೂ ರಕ್ಷಣಾ ಇಲಾಖೆಗಳಿಗೆ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಉಪಕರಣಗಳನ್ನು ಒದಗಿಸಲಾಗಿದ್ದು ಈ ಮೂಲಕ  ಯೋತ್ಪಾದನಾ ಸಂಚುಗಳನ್ನು ಸಮರ್ಥವಾಗಿ ಮಟ್ಟಹಾಕಲಾಗುತ್ತಿವೆ.

ಇದರ ಪರಿಣಾಮವಾಗಿ ೨೦೧೪ ರ ನಂತರ ಭಯೋತ್ಪಾದ ಕರಿಗೆ ಕಾಶ್ಮೀರದ ಗಡಿ ಹಾಗೂ ರಕ್ಷಣಾ ಪಡೆಗಳನ್ನು ದಾಟಿ ನಾಗರಿಕರ ಮೇಲೆ ಒಂದೇ ಒಂದು ಭಯೋತ್ಪಾದನಾ ಧಾಳಿಯನ್ನು ಮಾಡಲು ಸಾಧ್ಯವಾಗಿಲ್ಲ. ಮೊದಲು ದೇಶದ ೧೦೦ ಕ್ಕೂ ಹೆಚ್ಚಿನ ಜಿಗಳು ನಕ್ಸಲ್ ವಾದೀ ಉಗ್ರರ ಉಪಟಳವನ್ನು ಎದುರಿಸುತ್ತಿದ್ದು ಈಗ ಆ ಜಿಗಳ ಸಂಖ್ಯೆ ೪೬ ಕ್ಕೆ ಇಳಿದಿದೆ. ಮೇಲೆ ಹೇಳಿದ ಯಾವ ಕಾರ್ಯಕ್ರಮಗಳೂ ಜನಪ್ರಿಯ ಯೋಜನೆಗಳಲ್ಲ, ಹಾಗಾಗಿ ಇವುಗಳು ಸಾಮಾಜಿಕ ಅಥವಾ ಮುಖ್ಯವಾಹಿನಿ ಮಾಧ್ಯಮ
ಗಳಲ್ಲಿ ರಾರಾಜಿಸುವ ವಿಷಯಗಳಲ್ಲ. ಆದರೆ ಈ ಕಾರ್ಯಕ್ರಮಗಳು ದೂರಗಾಮಿ ದೃಷ್ಟಿಯುಳ್ಳ, ಅಭಿವೃದ್ಧಿಪರ ಯೋಜನೆ ಗಳಾಗಿವೆ.

ಜನಪ್ರಿಯ ಯೋಜನೆಗಳು ಜನರ ವೋಟ್‌ಗಳನ್ನು ಗಳಿಸಲು ಸಹಕಾರಿಯಾಗಬಹುದು, ಆದರೆ ಸದ್ದಿಲ್ಲದೆ ದೇಶದ ರಸ್ತೆಗಳ ನಿರ್ಮಾಣದಗುತ್ತಿರುವ ಕ್ರಾಂತಿ, ದೇಶದ ೫.೫ ಕೋಟಿ ರೈತರ ಆರ್ಥಿಕ ಭದ್ರತೆಯನ್ನು ಕಾಯುತ್ತಿರುವ ಬೆಳೆ ವಿಮಾ ಯೋಜನೆ  -ಸಲ್ ಬೀಮಾ ಯೋಜನೆ, ರೈಲ್ವೆಯಗುತ್ತಿರುವ ಆಮೂಲಾಗ್ರ ಬದಲಾವಣೆ, ಈ ಹಿಂದೆ ಜಾಗತಿಕವಾಗಿ ೧೦ ನೇ ಸ್ಥಾನದಲ್ಲಿದ್ದಿದ್ದ ಭಾರತವು ಈಗ ೬ ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದಿರುವುದು, ಜಾಗತಿಕವಾಗಿ ೪ನೇ ಅತಿ ಹೆಚ್ಚು ವಿದೇಶಿ ವಿನಿಮಯ ವನ್ನು ಹೊಂದಿದ ದೇಶವಾಗಿ ಬೆಳೆದುದು, ಕಳೆದ ಏಳು ವರ್ಷಗಳಲ್ಲಿ ಭಾರತದ ಷೇರು ಮಾರುಕಟ್ಟೆಯ ಹೂಡಿಕೆಯ ಮೌಲ್ಯ ದುಪ್ಪಟ್ಟಾಗಿ ರುವುದು ಮೊದಲಾದ ವಿಷಯಗಳು ದೇಶದ ಅಭಿವೃದ್ಧಿಯ ಸೂಚಕಗಳಾಗುವ ಧನಾತ್ಮಕ ಬೆಳವಣಿಗೆಗೆಳು.