Tuesday, 5th November 2024

ಮತಾಂತರ ನಿಲ್ಲದಿದ್ದರೆ ದೇಶ ಜಾತ್ಯತೀತವಾಗಿ ಉಳಿಯದು

ಸಮಕಾಲೀನ

ಸಿದ್ದಾರ್ಥ ವಾಡೆನ್ನವರ

(ಮುಂದುವರೆದಿದೆ….)

ಜನ ಏಕೆ ಮತಾಂತರಗೊಳ್ಳುತ್ತಿದ್ದಾರೆ? ಈ ಪ್ರಶ್ನೆಗೆ ಉತ್ತರ ಧಾರ್ಮಿಕ ಸಂಘರ್ಷ, ಸಂಪ್ರದಾಯವಾದದಲ್ಲಿ ನಂಬಿಕೆ ಕಳೆದುಕೊಂಡಿರುವುದು. ಹಣದ
ಆಮಿಷ, ಧಾರ್ಮಿಕ ಸ್ವಾತಂತ್ರ್ಯ, ಹಣ, ದಾನ ಮುಂತಾದ ಆಮಿಷಗಳು, ಬಹುಪತ್ನಿತ್ವಕ್ಕೆ ಅವಕಾಶ, ಸರಳ ವಿವಾಹ ವಿಚ್ಛೇದನ, ಮೀಸಲಾತಿ ಇತ್ಯಾದಿ ಇವು ಮತಾಂತರಕ್ಕೆ ಪ್ರಚೋದನೆ ನೀಡುತ್ತಿವೆ.

1954ರಲ್ಲಿ ಸಂಸತ್ತಿನಲ್ಲಿ ಮತಾಂತರದ ಬಗ್ಗೆ ಚರ್ಚೆ ನಡೆಯಿತು. ಭಾರತೀಯ ಮತಾಂತರ (ನಿಯಂತ್ರಣ ಹಾಗೂ ನೋಂದಣಿ ಮಸೂದೆ) ಕಾಯಿದೆ ಬಗ್ಗೆ ಚರ್ಚೆ ಆಯಿತು. 1960ರಲ್ಲಿಯೂ ಮತ್ತೊಮ್ಮೆ ಚರ್ಚೆ ಆಯಿತು. ಆದರೆ ಅಲ್ಪಸಂಖ್ಯಾತ ಸಮುದಾಯದ ಸಂಸದರಿಂದ ಭಾರಿ ಪ್ರತಿರೋಧ ಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ಯಾವುದೇ ಮಸೂದೆ ಮಂಡನೆಯಾಗಿ ಕಾನೂನು ರೂಪ ಪಡೆದುಕೊಳ್ಳಲಿಲ್ಲ. ಇಂದು ರಾಜಕೀಯ ವ್ಯವಸ್ಥೆ ಬದಲಾಗಿದೆ.

ಎರಡನೇ ಅವಧಿಗೂ ಪೂರ್ಣ ಪ್ರಮಾಣದ ಬಹುಮತದೊಂದಿಗೆ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ, ಸರಕಾರ ರಚನೆಯಾದ ಕೆಲವೇ ತಿಂಗಳುಗಳಲ್ಲಿ ಕಾನೂನಾತ್ಮಕ ವಿಷಯಗಳಲ್ಲಿ ಹಿಂದೆ ಯಾವ ಸರ್ಕಾರಗಳೂ ಮಾಡಲಾ ಗದ ಸಾಧನೆಯನ್ನು ಈ ಸರ್ಕಾರ ಮಾಡಿದೆ. ತ್ರಿವಳಿ ತಲಾಖ್ ನಿಷೇಧ ಕಾಯ್ದೆ, ಎನ್‌ಐಎ ಕಾನೂನು ಅಮೆಂಡ್‌ ಮೆಂಟ್, ಕಾನೂನು ಬಾರ ಚಟುವಟಿಕೆ ನಿಷೇಧ ಆಕ್ಟ್ (UAPA) ಅಮೆಂಡ್‌ಮೆಂಟ್, ಆರ್ಟಿಕಲ್ 370 ಹಾಗೂ 350 ಅಡಿಯಲ್ಲಿ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು, ಜಮ್ಮು-ಕಾಶ್ಮೀರ ಇಬ್ಭಾಗ, ಜಮ್ಮು-ಕಾಶ್ಮೀರ ಮೀಸಲಾತಿ, ಸುಪ್ರೀಂಕೋರ್ಟ್‌ನಿಂದ ಅಯೋಧ್ಯೆ ವಿವಾದ ಇತ್ಯರ್ಥ ಹೀಗೆ ೩೫ಕ್ಕೂ ಹೆಚ್ಚು ಬಿಲ್‌ಪಾಸ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ.

ಬಹುಸಂಖ್ಯಾತರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದಾರೆ. ಇನ್ನು ರಾಜ್ಯದಲ್ಲಿ ಮಸೂದೆಯ ರೂಪುರೇಷೆ ಹೇಗೆ ಇರಬೇಕು? ಮತಾಂತರದ ಡೆಫಿನೇಷನ್ ಏನಿರಬೇಕು? ಯಾವ ಅಂಶಗಳು ಈ ಮಸೂದೆಯಲ್ಲಿ ಇರಬೇಕು? ಕಾನೂನಾತ್ಮಕ ಅಡಚಣೆಗಳು ಏನಾದರೂ ಬರಬಹುದೇ? ಮತಾಂತರ ಮಾಡಿದರೆ, ಜೈಲು ಶಿಕ್ಷೆ ವಿಧಿಸಬೇಕಾ? ದಂಡ ಹಾಕಬೇಕಾ? ಒಬ್ಬ ವ್ಯಕ್ತಿ ಮನಃ ಪೂರ್ವಕ ಮತಾಂತರ ಹೊಂದಿದರೆ ಅದನ್ನು ಹೇಗೆ ಪರಿಗಣಿಸಬೇಕು? ಇತ್ಯಾದಿ ವಿಷಯಗಳ ಕುರಿತು ಬಿಜೆಪಿ ವಲಯದಲ್ಲಿ ಬಹುಶಃ ಚರ್ಚೆ ನಡೆದಿದೆ!

ಭಾರತ ಸಂಧಾನ ಆರ್ಟಿಕಲ್ 25 ಪ್ರತಿಯೊಬ್ಬರಿಗೂ ತಮ್ಮ ತಮ್ಮ ನಂಬಿಕೆಗೆ ಅನುಸಾರ ಇಷ್ಟವಾದ ಧರ್ಮವನ್ನು ಆಚರಿಸಲು ಅವಕಾಶ ನೀಡಿದೆ. ಆಸೆ-
ಆಮಿಷಗಳನ್ನು ನೀಡಿ ಇಲ್ಲವೇ ಬೆದರಿಸಿ ಅಥವಾ ಹಣ ನೀಡಿ ಮತ್ತಿತರೆ ಒತ್ತಡಗಳನ್ನು ಹೇರಿ ಮತಾಂತರ ಮಾಡಿದರೆ ಅದು ಕಾನೂನು ಬಾಹಿರ. ಜನರು ಒಂದು ವಿಷಯ ನೆನಪಿಡಬೇಕು, ಈಗಿನ ಬಹುತೇಕ ಶಾಸಕರಿಗೆ ಮತ್ತು ಸಂಸದರಿಗೆ ಜನರ ಸಮಸ್ಯೆಗಳ ನೈಜ ಅರಿವಿಲ್ಲ. ಅರಿತುಕೊಳ್ಳುವ ಆಸಕ್ತಿಯೂ ಇಲ್ಲ. ಯಾವುದೇ ಗಂಭೀರ ವಿಚಾರದ ಬಗ್ಗೆ ಪೂರ್ವಾಪರ ತಿಳಿದುಕೊಳ್ಳುವ ಕುತೂಹಲವೂ ಇಲ್ಲ.

ವೈಯಕ್ತಿಕ ವ್ಯವಹಾರಗಳನ್ನು ಬಿಟ್ಟು ದೇಶಕ್ಕಾಗಿ ಅವರು ಸಮಯ ನೀಡುತ್ತಿಲ್ಲ. ಶಾಸನಸಭೆಗಳ ಅಽವೇಶನಗಳು ವ್ಯರ್ಥ ಆಗುತ್ತಿವೆ. ಮತಾಂತರ ಮತ್ತು ಅದರ ಪರಿಣಾಮಗಳ ಕುರಿತು ಚರ್ಚೆ ಆಗಬೇಕು. ಆದರೆ, ಜನಪ್ರತಿನಿದಿಗಳು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಪಕ್ಷಗಳೂ ಮತಾಂತರದ ಮೂಲ ವನ್ನು ತಿಳಿಯುವ, ಆ ಕುರಿತು ಆಲೋಚನೆ ಮಾಡುವ ಪ್ರಯತ್ನವನ್ನೂ ಮಾಡುತ್ತಿಲ್ಲ. ಯಾವುದೇ ತೆರನಾದ ಹಿಂಸೆಯೇ ಇರಲಿ, ಏನೇ ಇರಲಿ ಅದನ್ನು ಪರಿಶುದ್ಧ ಮನಸ್ಸಿನಿಂದ ವಿರೋಧಿಸಬೇಕೆಂಬ ಭಾವನೆ ಬಹುತೇಕರಲ್ಲಿ ಇಲ್ಲ. ಎಲ್ಲವನ್ನು ರಾಜಕೀಯ ಲಾಭದ ದೃಷ್ಟಿಕೋನದಿಂದ ನೋಡುತ್ತಿದ್ದಾರೆ.

ಇತಿಹಾಸದ ಬಗ್ಗೆ ಕನಿಷ್ಠ ಜ್ಞಾನ ಇಲ್ಲ. ಕಾನೂನು, ಸಂವಿಧಾನಗಳ ಆಶಯ ಗೊತ್ತಿಲ್ಲ. ಇಲ್ಲಿನ ಮಣ್ಣಿನ ಗುಣದ ಗಂಧ ಗೊತ್ತಿಲ್ಲ. ಕಣ್ಣು, ಕಿವಿಗಳನ್ನು
ಸಂಪೂರ್ಣವಾಗಿ ಮುಚ್ಚಿಕೊಂಡಿದ್ದಾರೆ. ಅಗತ್ಯವಾಗಿ ಬೇಕಾದ ವಿಷಯಗಳೆಡೆಗೆ ಗಮನ ಹರಿಸುತ್ತಿಲ್ಲ. ಈ ಕಾರಣಕ್ಕಾಗಿ ಜನರೇ ಮುಂಚೂಣಿಗೆ ಬಂದು ಇವರಲ್ಲಿ ಜಾಗೃತಿ ಮೂಡಿಸಬೇಕಿದೆ.

ಒಂದು ವಿಷಯವನ್ನು ನೆನಪಿಸುತ್ತೇನೆ, 1813ರ ಜೂನ್ 22ರಂದು ಬ್ರಿಟನ್ ಪಾರ್ಲಿಮೆಂಟಿನಲ್ಲಿ ಸಂಸದ ವಿಲಿಯಂ ವೆಲ್ಬ್ ಫೋರ್ಸ್ ಮಾಡಿದ ಭಾಷಣ,
ಅವರು ಹೀಗೆ ಹೇಳುತ್ತಾರೆ- ಭಾರತದ ಆರನೂರು ಮಿಲಿಯನ್ ಆತ್ಮಗಳು ಸನ್ಮಾರ್ಗಕ್ಕಾಗಿ ಕಾಯುತ್ತಿವೆ. ಸುಳ್ಳು ದೇವರುಗಳ, ಅಪವಿತ್ರ ಆಚರಣೆಗಳ
ಸಂಕೋಲೆಯಲ್ಲಿ ಸಿಲುಕಿ ಆ ಆತ್ಮಗಳು ವಿಲವಿಲ ಒದ್ದಾಡುತ್ತಿವೆ. ಅವರು ತಮ್ಮ ಮಕ್ಕಳನ್ನೇ ಬಲಿ ಕೊಡುತ್ತಿದ್ದಾರೆ. ತಮ್ಮ ಹೆಂಡಿರನ್ನು ಜೀವಂತ
ಸುಡುತ್ತಾರೆ. ಸೈತಾನನ ಪ್ರಭಾವಕ್ಕೊಳಗಾಗಿ ಮಣ್ಣು, ಕಲ್ಲು, ಮರಗಳಿಂದ ಮಾಡಿದ ದೇವರುಗಳನ್ನು ಪೂಜಿಸುತ್ತಾರೆ. ಮುಕ್ತಿ ದೊರಕೀತೆಂದು ಪುರಿ
ಜಗನ್ನಾಥನ ರಥದ ಚಕ್ರದಡಿ ಬಿದ್ದು ಸಾಯುತ್ತಾರೆ.

ಅದಕ್ಕಾಗಿ ಪುರಿ ಜಗನ್ನಾಥ ರಥಯಾತ್ರೆಯನ್ನು ನಿಷೇಧ ಮಾಡಬೇಕು. ದೇವರ ಹೆಸರಿನಲ್ಲಿ ಅಶ್ಲೀಲ ನೃತ್ಯಗಳನ್ನು ಮಾಡುತ್ತಾರೆ. ಪ್ರಚೋದಕವಾಗಿ
ಹಾಡುತ್ತಾರೆ. ಸೈತಾನನ ಪ್ರಭಾವದಿಂದಾಗಿ ಅವರಲ್ಲಿ ಒಂದಿಷ್ಟೂ ನೈತಿಕತೆ ಉಳಿದಿಲ್ಲ. ಕರ್ತವ್ಯ ಮತ್ತು ನೀತಿಗಳ ಬಗ್ಗೆ ಅರಿವೇ ಅವರಲ್ಲಿಲ್ಲ. ಎಲ್ಲರೂ ಕಳ್ಳರು ಮತ್ತು ಸುಳ್ಳರು, ಅಲ್ಲಿನ ಹೆಂಗಸರೆಲ್ಲ ವ್ಯಭಿಚಾರಿಗಳು, ಯಾರಲ್ಲೂ ನಿಯತ್ತಿಲ್ಲ. ಭಾರತವೆಂದರೆ ಹೃದಯ ಹೀನರ ಸಾಮ್ರಾಜ್ಯ, ಭಾರತೀಯರೆಲ್ಲ ಹೇಡಿಗಳು, ಅವರೆಲ್ಲ ನಿಜವಾದ ಧರ್ಮಮಾರ್ಗದ ಅಭಾವ ದಿಂದಾಗಿ ಮಾಟ, ಮಂತ್ರ, ಮೂಢನಂಬಿಕೆಗಳ ವಿಷವರ್ತುಲದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.

ಒಟ್ಟಾರೆ ಹೇಳುವುದಾದರೆ ಭಾರತೀಯರೆಲ್ಲ ಗುಣಹೀನ ಬದುಕು ನಡೆಸುತ್ತಿರುವ ಧೂರ್ತರು. ಇಂತಹ ಅನಾಗರಿಕ ಜನರಿಗೆ ಸತ್ಯದರ್ಶನ ಮಾಡಿಸುವುದು
ನಮ್ಮ ಕರ್ತವ್ಯ ಮತ್ತು ಜವಾಬ್ದಾರಿ. ಭಾರತೀಯ ರೆಲ್ಲರಿಗೆ ಸತ್ಯದ ಮಾರ್ಗ ತೋರುವ ಮೂಲಕ ಆ ಜನರ ಎಲ್ಲ ದೋಷಗಳನ್ನು ಬುಡಸಮೇತ ಹೋಗಲಾಡಿಸಬೇಕು. ಜೀವನದಲ್ಲಿ ಉನ್ನತಿ, ಸನ್ಮಾರ್ಗ ಸಿಗಬೇಕೆಂದರೆ ಅವರೆಲ್ಲ ಕ್ರೈಸ್ತರಾಗಿ ಮತಾಂತರಗೊಳ್ಳಬೇಕು. ಅದಕ್ಕಾಗಿ ಅನಾಗರಿಕರಿಂದ ಕೂಡಿದ ಹಿಂದುಸ್ಥಾನಕ್ಕೆ ಧರ್ಮಪ್ರಚಾರಕ ಪಾದ್ರಿಗಳನ್ನು ಕಳಿಸಲು ಅನುಮತಿ ಕೊಡಿ! ಎಂಬ ನಿರ್ಣಯ ಮಂಡಿಸಿ ವೆಲ್ಬ್ ಫೋರ್ಸ್ ತಮ್ಮ ಭಾಷಣ ಮುಗಿಸುತ್ತಾರೆ.

ಇದು 1813ರ ಜೂನ್ 22ರ ಹೌಸ್ ಆಫ್ ಕಾಮನ್ಸ್ (ಬ್ರಿಟಿಷ್ ಸಂಸತ್ತಿನ ಸಾಮಾನ್ಯ ಸಭೆ)ನ ನಡಾವಳಿಯಲ್ಲಿ ದಾಖಲಾ ಗಿದೆ. ಇದು ಹೊರಗಿನವರು ನಮ್ಮನ್ನು ಅಂದು ನೋಡಿದ ರೀತಿ. ನಮ್ಮ ದೇಶ ಅಂದು ಬ್ರಿಟಿಷರ ಕೈಯಲ್ಲಿ ಇತ್ತು, ಇಂದು ನಮ್ಮ ಕೈಯಲ್ಲಿ ಇದೆ!

ನಮ್ಮದು ಪುಣ್ಯಾತ್ಮರು ಜನಿಸಿದ ನಾಡು, ನಮ್ಮದು ಜಗತ್ತಿಗೆ ಶಾಂತಿ ಪಾಠ ಹೇಳಿದ ನಾಡು. ನಮ್ಮದು ಮಾನವರೆಲ್ಲ ಒಂದು ಎಂದು ಹೇಳುವ ಸಂಸ್ಕೃತಿ. ಈ ನಾಡು ವಿತ್ರ ನಾಡು, ಇಲ್ಲಿನ ಸಂಸ್ಕೃತಿಯನ್ನು ಕಾಪಾಡಿ ಕೊಂಡು ಹೋಗಬೇಕಾದ ಜವಾಬ್ದಾರಿ ಬಹುಸಂಖ್ಯಾತ ರಾಜಕಾರಣಿಗಳ ಮೇಲಿದೆ. ವೆಲ್ಬ್ -ರ್ಸ್ ಬ್ರಿಟಿಷ್ ಸಂಸತ್ತಿಗೆ ಕಟ್ಟಿಕೊಟ್ಟ ಭಾರತದ ಕಲ್ಪನೆ ಸತ್ಯಕ್ಕೆ ದೂರ. ಜಗತ್ತಿನ ಮೂಲೆಮೂಲೆಗಳಿಂದ ಬಂದ ದೇಶಿ ಪ್ರವಾಸಿಗರು ನಮ್ಮ ದೇಶದ ಸಂಸ್ಕೃತಿ ಯನ್ನು ಹಾಡಿ ಹೊಗಳಿ ದ್ದಾರೆ. ಭಾರತವನ್ನಾಳಿದ ಬ್ರಿಟಿಷ್ ಅಧಿಕಾರಿಗಳಿಂದ ಹಿಡಿದು ಭಾರತದ ಮೇಲೆ ದಾಳಿ ಮಾಡಿದ ಬಹುತೇಕರು ನಮ್ಮ ಸಂಸ್ಕೃತಿ ಯನ್ನು ಗೌರವಿಸಿ ಇದು ‘ಶ್ರೇಷ್ಠ ಸಂಸ್ಕೃತಿ’ ಎಂದು ಬಿರುದು ಕೊಟ್ಟಿದ್ದಾರೆ.

ಇಂತಹ  ಭಾರತೀಯ ಸಂಸ್ಕೃತಿ ಸಾವಿರಾರು ವರ್ಷಗಳವರೆಗೆ ಇರಬೇಕು. ಅದೇ ಕಾರಣಕ್ಕಾಗಿ ಮತಾಂತರ ನಿಷೇಧ ಕಾನೂನು ತಕ್ಷಣವೇ ಜಾರಿಗೆ ಬರಬೇಕು.
ಸಂವಿಧಾನದ ಪ್ರಕಾರ ಮತಾಂತರ ಮಾಡುವುದು ಕಾನೂನಿಗೆ ವಿರುದ್ಧ. ಸಂಧಾನದ ವಿಧೀ 25, ಉಪವಿಧಿ ೧ರಲ್ಲಿ ಉಲ್ಲೇಖಿಸಿರುವ ‘ಪ್ರೋಪಗೇಟ್’ ಪದದ ಅರ್ಥ ಪ್ರಸಾರ ಮಾಡು ಎನ್ನುವುದೇ ಹೊರತು ಕನ್ವರ್ಟ್ ಮಾಡು, ಮತಾಂತರಿಸು ಎನ್ನುವುದಲ್ಲ. ಇದನ್ನು ಒಡಿಶಾ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿವೆ. ಒಡಿಶಾದಲ್ಲಿ ಸಾಮೂಹಿಕವಾಗಿ ಮತ್ತು ಆಕ್ಷೇಪಾರ್ಹ ರೀತಿಯಲ್ಲಿ ಕ್ರೈಸ್ತ ಮಿಷನರಿಗಳು ಮತಾಂತರ ಚಟುವಟಿಕೆಯಲ್ಲಿ ತೊಡಗಿದ್ದಾಗ ಅಲ್ಲಿನ ಸರ್ಕಾರ ‘ಧಾರ್ಮಿಕ ಸ್ವಾತಂತ್ರ್ಯ ರಕ್ಷಣಾ ಕಾಯಿದೆ’ ಯನ್ನು ಜಾರಿಗೊಳಿಸಿತು. ಅದನ್ನು ಪ್ರಶ್ನಿಸಿ ಮಿಷನರಿಗಳು ನ್ಯಾಯಾಲಯದ ಮೆಟ್ಟಿಲು ಹತ್ತಿದವು. ಆಗ  ಡಿಶಾ ಹೈಕೋರ್ಟ್ ಮೇಲಿನಂತೆ ವ್ಯಾಖ್ಯಾನ ಮಾಡಿ, ಮಿಷನರಿಗಳ ವಾದ ಹುರುಳಿಲ್ಲದ್ದೆಂದು ತಳ್ಳಿ ಹಾಕಿತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಹೋದಾಗ ಜಸ್ಟಿಸ್ ಎ.ಎನ್. ರೇ ಅವರೂ ಹೈಕೋರ್ಟ್ ತೀರ್ಪನ್ನೇ ಎತ್ತಿ ಹಿಡಿದರು.

ಒಡಿಶಾ ಸರ್ಕಾರ ತಂದ ಧಾರ್ಮಿಕ ಸ್ವಾತಂತ್ರ್ಯ ರಕ್ಷಣಾ ಕಾಯಿದೆ ಸಂವಿಧಾನಬದ್ಧವಾಗಿದೆ. ಸಂವಿಧಾನ ದೇಶದ ಪ್ರತಿಯೊಬ್ಬ ಪ್ರಜೆಗೂ ‘ಅಂತಃ
ಸಾಕ್ಷಿಯ ಸ್ವಾತಂತ್ರ’ ದ ಭರವಸೆ ನೀಡಿದೆ. ಮತಾಂತರ ಮೂಲಭೂತ ಹಕ್ಕು ಎಂದು ಯಾರೂ ಭಾವಿಸುವ ಹಾಗಿಲ್ಲ ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ.

ಒಡಿಶಾ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ತೀರ್ಪಿನ ಅವಲೋಕನಕ್ಕೂ ಪೂರ್ವದಲ್ಲಿ ಜಸ್ಟಿಸ್ ಡಾ.ಭವಾನಿ ಶಂಕರ ನಿಯೋಗಿ ನೇತೃತ್ವದ ಐವರು
ಸದಸ್ಯರ ತನಿಖಾ ಆಯೋಗ 1966ರಲ್ಲಿ ನೀಡಿದ ವರದಿಯನ್ನೂ ಗಮನಿಸಬೇಕು. ಮಧ್ಯಪ್ರದೇಶದ ಆದಿವಾಸಿಗಳನ್ನು ಕ್ರೈಸ್ತ ಮಿಷನರಿಗಳು ದೊಡ್ಡ
ಪ್ರಮಾಣದಲ್ಲಿ ಮತಾಂತರ ಮಾಡುತ್ತಿದ್ದಾರೆಂಬ ಕೂಗು ಕೇಳಿಬಂದಾಗ ಅಲ್ಲಿನ ಸರ್ಕಾರ ನಿಯೋಗಿ ಕಮಿಷನ್ ನೇಮಕ ಮಾಡಿತು. ಆಯೋಗ ಮಧ್ಯ
ಪ್ರದೇಶದ ಹದಿನಾಲ್ಕು ಜಿಲ್ಲೆಗಳ ಎಪ್ಪತ್ತೇಳಕ್ಕೂ ಹೆಚ್ಚು ಸ್ಥಳಗಳಿಗೆ ಭೇಟಿ ನೀಡಿತು. ಮುನ್ನೂರ ಎಪ್ಪತ್ತೈದು ಸಂಸ್ಥೆಗಳ ಆಂತರಿಕ ವರದಿಗಳನ್ನು ಪರಿಶೀಲಿಸಿತು.

ಏಳುನೂರಾ ಎಪ್ಪತ್ತಕ್ಕೂ ಹೆಚ್ಚು ಹಳ್ಳಿಗಳಿಂದ ಹನ್ನೊಂದು ಸಾವಿರದ ಮುನ್ನೂರಕ್ಕೂ ಹೆಚ್ಚು ಜನರಿಂದ ಸಂಗ್ರಹಿಸಿದ ಮಾಹಿತಿ ಆಧರಿಸಿ ತನ್ನ ವರದಿ
ನೀಡಿತು. ಅದು ಏನೆಂದರೆ- ಶಿಕ್ಷಣ, ವೈದ್ಯಕೀಯ ಸೇವೆ ಮತ್ತು ಉದ್ಯೋಗದ ಆಮಿಷ ಒಡ್ಡಿ ಮುಗ್ಧ ಮತ್ತು ಅಮಾಯಕರನ್ನು ಮತಾಂತರಿಸಲಾಗಿದೆ.
ಮತಾಂತರ ಚಟುವಟಿಕೆಗೆ ದೊಡ್ಡ ಪ್ರಮಾಣದಲ್ಲಿ ವಿದೇಶಿ ಹಣಕಾಸು ನೆರವು ಹರಿದು ಬರುತ್ತಿದೆ!

ಮಿಷನರಿಗಳು ವಿದೇಶಿ ಸಂಸ್ಥೆಗಳಿಂದ ನಿಯಂತ್ರಿಸಲ್ಪಡುತ್ತಿದ್ದಾರೆ. ಜಾತಿ, ಧರ್ಮ, ಮತ, ಪಂಥದವರನ್ನು ಸಮಾನವಾಗಿ ಕಾಣಬೇಕೆನ್ನುವ ಜಾತ್ಯತೀತ
ವಾದದಲ್ಲಿ ಮಿಷನರಿಗಳಿಗೆ ನಂಬಿಕೆಯಿಲ್ಲ. ಮತಾಂತರದ ವಿಷಯದಲ್ಲಿ ಸಂವಿಧಾನದ ಆಶಯವನ್ನೂ ಮೀರುವ ಅಧಿಕಾರ, ಹಕ್ಕನ್ನು ಅವರು ಬಯಸು ತ್ತಿದ್ದಾರೆ. ಭಾರತದಲ್ಲಿ ಪ್ರತ್ಯೇಕತಾ ಚಳವಳಿಗಳನ್ನು ಮಿಷನರಿಗಳು ಬೆಂಬಲಿಸುತ್ತಿದ್ದಾರೆ. ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ತೇಜೋವಧೆ ಮಾಡಲಾಗುತ್ತಿದೆ. ಬಂಡಾಯ, ಹಿಂಸೆ ಮತ್ತಿತರ ಚಟುವಟಿಕೆಗೆ ಪ್ರೋತ್ಸಾಹಿಸುವುದು ಕಂಡುಬಂದಿದೆ.

ಇದು ಇಲ್ಲಿನ ಪ್ರಜಾಪ್ರಭುತ್ವ ಮತ್ತು ಶಾಂತಿ ಸಹಬಾಳ್ವೆಗೆ ಅಪಾಯಕಾರಿ. ಆದ್ದರಿಂದ ಮತಾಂತರ ತಡೆಗಟ್ಟುವ ಶಾಸನ ರೂಪಿಸಬೇಕು. ಇದು ವರದಿಯ
ಸಾರಾಂಶ. ನೀವೇ ಹೇಳಿ ಈ ವರದಿಯ ವಿಚಾರಗಳನ್ನು ಜನರಿಗೆ ಯಾರು ತಲುಪಿಸಬೇಕು? ಸಹಬಾಳ್ವೆಯನ್ನು ಸ್ಥಾಪಿಸಲು ಮತಾಂತರ ನಿಷೇಧ ಕಾನೂನು ಜಾರಿಗೆ ಬರಬೇಕಲ್ಲವೇ? ಮಿಷನರಿಗಳು ಯುವಕರನ್ನು ಬ್ರೈನ್‌ವಾಷ್ ಮಾಡುವುದಷ್ಟೇ ಅಲ್ಲದೆ ಹಲವರನ್ನು ಕ್ರೈಸ್ತ ಧರ್ಮಕ್ಕೆ ತಂದರೆ ನೀನು ನಿಜವಾದ ಕ್ರೈಸ್ತ ಎಂದು ತಲೆಗೆ ತುಂಬುತ್ತಿದ್ದಾರೆ!. ಹೀಗೆ ಬ್ರೈನ್‌ವಾಷ್ ಆದ ಯುವಕರು ಹಳ್ಳಿ ಮತ್ತು ಬುಡಕಟ್ಟು ಪ್ರದೇಶಗಳಿಗೆ  ಹೋಗಿ ಕ್ರೈಸ್ತ ಧರ್ಮ ಬೆಳೆಸು ತ್ತಿದ್ದಾರೆ. ಅದನ್ನು ಹಿಂದೂ ಸಂಘಟನೆಗಳು ವಿರೋಧಿಸಿದರೆ ಅವರಿಗೆ ಕೋಮುವಾದಿ ಪಟ್ಟ ಕಟ್ಟುತ್ತಾರೆ. ದೊಡ್ಡ ದೊಡ್ಡ ಮಠಗಳನ್ನು ಕಟ್ಟಿರುವ ಸ್ವಾಮೀಜಿಗಳು ಹಿಂದೂಗಳ ಬೆಂಬಲಕ್ಕೆ ನಿಲ್ಲುತ್ತಿಲ್ಲ. ಅವರು ತಮ್ಮ ಜಾತಿಗೆ ಬೆಂಬಲ ನೀಡುತ್ತಿದ್ದಾರೆ.

ಮಿಷನರಿಗಳು ಸೇವೆಯನ್ನು ತಾವೇ ಗುತ್ತಿಗೆ ಪಡೆದವರಂತೆ ವರ್ತಿಸುತ್ತಿವೆ. ಹಿಂದೂ ಗಳಲ್ಲಿಯೂ ಅನೇಕ ವ್ಯಕ್ತಿಗಳು ತಮ್ಮ ಸಂಪೂರ್ಣ ಜೀವನವನ್ನು ಸೇವೆಗಾಗಿ ಮುಡಪಾಗಿಟ್ಟಿದ್ದಾರೆ. ಅವರನ್ನು ನಾವು ಸ್ಮರಿಸಬೇಕಾಗಿದೆ. ಡಾ. ಸುದರ್ಶನ್ ಅವರ ಗಿರಿಜನ ಕಲ್ಯಾಣ ಕೇಂದ್ರ, ರಾಮಕೃಷ್ಣ ಮಿಷನ್, ವಿವೇಕಾನಂದ ಸೇವಾ ಕೇಂದ್ರ, ಆರ್ಟ್ ಆಫ್ ಲಿಂವಿಗ್‌ನ ರವಿಶಂಕರ್ ಗುರೂಜಿ, ಸದ್ಗುರು ಜಗ್ಗಿ ವಾಸುದೇವ ಅವರ ಈಶಾ ಪೌಂಡೇಶನ್, ಧರ್ಮಸ್ಥಳ ಮಂಜುನಾಥೇಶ್ವರ ಸಂಸ್ಥೆ, ಸಿದ್ದಗಂಗಾ ಶ್ರೀಗಳು ಮಾಡಿರುವ ಸಾಧನೆ ಸಾಕಷ್ಟಿದೆ.

ಇವರು ಸೇವೆ ಮಾಡುವಾಗ ಯಾರನ್ನೂ ಮತಾಂತರ ಮಾಡಿಲ್ಲ. ಸೇವೆ ಮಾಡಲಿ ಮತಾಂತರ ಮಾಡಬಾರದು, ಅಂದಾಗ ಮಾತ್ರ ಈ ದೇಶ ಜಾತ್ಯತೀತ
ದೇಶವಾಗಿ ಉಳಿಯುತ್ತದೆ. ಇಲ್ಲದೇ ಹೋದರೆ ಈ ದೇಶ ಜಾತ್ಯತೀತ ದೇಶವಾಗಿ ಉಳಿಯುವುದಿಲ್ಲ. ಒಟ್ಟಿನಲ್ಲಿ ಎಲ್ಲಾ ಹಿಂದೂಗಳು ಜಾಗೃತರಾಗಬೇಕಿದೆ. ಪುರಾತನ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಹೋರಾಟ ಮಾಡಬೇಕಿದೆ. ಭಾರತೀಯತೆಯನ್ನು ಜಾಗೃತಗೊಳಿಸಬೇಕಿದೆ. ಎಲ್ಲರಿಗೂ ಅಗತ್ಯವಾಗಿ
ಶ್ರೇಷ್ಠ ಮಟ್ಟದ ಶಿಕ್ಷಣ ಬೇಕು. ಪ್ರತಿ ಊರಿನಲ್ಲೂ ಎಲ್ಲ ದೇವಾಲಯಗಳ ಕಮಿಟಿಯವರು ಒಂದೆಡೆ ಸೇರಿ ತಿಂಗಳಿಗೊಮ್ಮೆ ಹಿಂದೂ ಧರ್ಮಕ್ಕೆ ಎದುರಾ ಗುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕು.

ಪ್ರತಿ ದೇವಾಲಯಗಳ ಟ್ರಸ್ಟಿಗಳಲ್ಲಿ ಕೆಳಹಂತದವರನ್ನು ನೇಮಕ ಮಾಡಿಕೊಳ್ಳಬೇಕು. ಸಾಮಾಜಿಕವಾಗಿ ಹಿಂದುಳಿದ ವರಿಗೆ ಮತಾಂತರದ ಬಗ್ಗೆ ತಿಳಿ ಹೇಳಬೇಕು. ಹಿಂದೂ ಸ್ವಾಮೀಜಿಗಳು ತಮ್ಮ ತಮ್ಮಲ್ಲೆ ಹೊಡೆದಾಡುವುದನ್ನು ಬಿಟ್ಟು ಒಗ್ಗಟ್ಟಾಗಿ ಕೆಳಹಂತದಲ್ಲಿರುವವರನ್ನು ಮುನ್ನೆಲೆಗೆ ತರಬೇಕು. ಕೆಲವು ಫೇಕ್ ಸ್ವಾಮೀಜಿಗಳು ಇದ್ದಾರೆ; ಅವರು ಹಿಂದೂ ಧರ್ಮದ ವಿರುದ್ಧವೇ ಮಾತಾಡುತ್ತಾರೆ. ಅಂತಹವರ ವಿರುದ್ಧ ಹಿಂದೂಗಳೆಲ್ಲ ರೂ ಸೇರಿ ಹೋರಾಡಬೇಕು.

ಮೀಡಿಯಾ ಗಳನ್ನು ಎದುರಿಸಲು, ಧರ್ಮ ವಿಚಾರಗಳನ್ನು ಸೂಕ್ತ ವಾಗಿ ಮಂಡಿಸಲು ಸೂಕ್ತವ್ಯಕ್ತಿಗಳಿಗೆ ತರಬೇತಿ ನೀಡ ಬೇಕು ಜತೆಗೆ ಪ್ರೋತ್ಸಾಹ ನೀಡಬೇಕು. ಎಲ್ಲ ಸಮಸ್ಯೆ ಗಳಿಗೆ ಹಿಂದುತ್ವದಲ್ಲಿ ಉತ್ತರವಿದೆ. ಹೀಗಾಗಿ ಬೇರೆ ಧರ್ಮ ಗಳು ನಮ್ಮ ಸಂಸ್ಕೃತಿಯ ಮೇಲೆ ಪ್ರಹಾರ ಮಾಡುತ್ತಿವೆ. ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಎಲ್ಲಿಯವರೆಗೆ ನಾವು ಪ್ರಯತ್ನಿಸುತ್ತೇವೆ ಅಲ್ಲಿಯ ವರೆಗೆ ಮಾತ್ರ ಭಾರತ ಭಾರತವಾಗಿ ಉಳಿಯುತ್ತದೆ ಮತ್ತು
ಜಾತ್ಯತೀತ ರಾಷ್ಟ್ರವಾಗಿ ಮುಂದುವರಿಯುತ್ತದೆ.

ಮತಾಂತರ ನಿಷೇಧ ಕಾನೂನು ಜಾರಿಗೆ ಬರಲಿಲ್ಲ ವೆಂದರೆ, ಮುಂದೊಂದು ದಿನ ಬಹುಸಂಖ್ಯಾತರು ತಮ್ಮ ಅಸ್ಥಿತ್ವ ಕಳೆದುಕೊಳ್ಳುವ ಅಪಾಯ ಇದೆ. ಲ್ಲವೂ ಸಂವಿಧಾನ ಆಧಾರಿತವಾಗಿ ಚರ್ಚೆ ಮಾಡಿ ದರೂ ನಮ್ಮ ಸಂವಿಧಾನದಲ್ಲಿ ಕಲ್ಪಿಸಿದ ಕೆಲ ವೊಂದು ಅವಧಿ ಋಶಗಳಿಂದ ಈ ದೇಶ ಮುಂದೊಂದು ದಿನ ಏಕದೇವತಾ ಆರಾಧಕರ ಕೈಯಲ್ಲಿ ಹೋಗ ಬಹುದು. ಈ ಚಿಂತೆ ನನ್ನನ್ನು ಸದಾ ಕಾಡುತ್ತಿದೆ. ಏಕದೇವತಾ ಆರಾಧಕರು ಈ ದೇಶದಲ್ಲಿ ಬಹು ಸಂಖ್ಯಾತರಾದರೆ ಇಂದು ಅಧಿಕ ಸಂಖ್ಯೆಯಲ್ಲಿರುವ ಹಿಂದೂಗಳು ಅಲ್ಪ ಸಂಖ್ಯಾತರಾಗುತ್ತಾರೆ. ಅಲ್ಪ ಸಂಖ್ಯಾತರು ಮುಂದೊಂದು ದಿನ ಬಹುಸಂಖ್ಯಾತ ರಾದರೆ ಈ ದೇಶ ಜಾತ್ಯತೀತ ದೇಶವಾಗಿ ಉಳಿಯು ವುದಿಲ್ಲ.

ಜಗತ್ತಿನಲ್ಲಿ ಎಲ್ಲೆಲ್ಲಿ ಮುಸ್ಲಿಂ ಸಮುದಾಯ ಬಹುಸಂಖ್ಯಾತ ರಾಗಿದ್ದಾರೋ ಆ ದೇಶಗಳು ಬಹುತೇಕ ಇಸ್ಲಾಮಿಕ್ ದೇಶಗಳಾಗಿ ಪರಿವರ್ತನೆ ಹೊಂದಿವೆ. ಕ್ರಿಶ್ಚಿಯನ್ನರು ಅಧಿಕವಾಗಿರುವ ದೇಶಗ ಳಲ್ಲಿಯೂ ಹಿಂದೂಗಳಿಗೆ ಅಪಾಯವಿದೆ. ಹಿಂದೂಗಳಿಗೆ ಉಳಿದಿರುವುದು ಒಂದೇ ದೇಶ, ಅದು ನನ್ನ ಭಾರತ. ಈ ನನ್ನ ಭಾರತ ಸಾವಿರಾರು ವರ್ಷಗಳವರೆಗೆ ಜಾತ್ಯತೀತ ರಾಷ್ಟ್ರವಾಗಿ ಉಳಿಯಬೇಕು, ಅದಕ್ಕಾಗಿ ಮತಾಂತರ ನಿಷೇಧ ಕಾನೂನು ಜಾರಿಗೆ ಬರಬೇಕು!

(ಮುಗಿಯಿತು)