ಸಿ.ಜಿ.ವೆಂಕಟೇಶ್ವರ
ಮೊನ್ನೆ ಒಬ್ಬರು ಪೋಷಕರು ಪೋನ್ ಮಾಡಿ ‘ಸಾರ್, ನನ್ನ ಮಗ ಯಾವಾಗಲೂ ಮೊಬೈಲ್ ಫೋನ್ ನೋಡ್ತಾನೆ ಅವನಿಗೆ ಸ್ವಲ್ಪ ಬುದ್ಧಿ ಹೇಳಿ’ ಎಂದರು. ಅವರ ಮಗನ ಮಾತಾಡಿಸಿದಾಗ ತಿಳಿದದ್ದು, ಆತ ಪಾಠಕ್ಕೆ ಸಂಬಂಧಿಸಿದಂತೆ ಗೂಗಲ್ನಲ್ಲಿ ಹುಡುಕು ತ್ತಿದ್ದನಷ್ಟೆ. ಅವನಿಗೆ ಗೂಗಲ್ ನೋಡಲೇ ಬೇಡ ಎಂದು ಹೇಳುವ ಸ್ಥಿತಿಯಲ್ಲಿ ಇಂದು ನಾವಿಲ್ಲ. ಗೂಗಲ್ ನಮ್ಮ ಜೀವನದ ಅವಿಭಾಜ್ಯ ಅಂಗವೇನೋ ಎಂಬ ಭಾವನೆ ಬಂದು ಬಿಟ್ಟಿದೆ. ಆ ಹುಡುಗನಿಗೆ ಗೂಗಲ್ ಬಳಕೆ ಕಡಿಮೆ ಮಾಡಿ ಪುಸ್ತಕ, ಪತ್ರಿಕೆ ಗಳಲ್ಲಿ ವಿಷಯ ಸಂಗ್ರಹಿಸಲು ಸಲಹೆ ನೀಡಿ ಪೋನ್ ಕಟ್ ಮಾಡಿದೆ.
ದರ ಬೆನ್ನಲ್ಲೇ ಜಗತ್ತಿನಲ್ಲಿ ಇಂದು ಬಹುಚರ್ಚೆಯ ಚಾಟ್ ಜಿಪಿಟಿ ನೆನಪಾಯಿತು. ಗೂಗಲ್ಗೆ ಟಕ್ಕರ್ ನೀಡುವ ಈ ಕೃತಕ ಬುದ್ಧಿ ಮತ್ತೆಯ ತಾಣವು ನಾವು ಕೇಳಿದ ಮಾಹಿತಿ ಯನ್ನು ನೇರವಾಗಿ ನೀಡುತ್ತದೆ. ಒಮ್ಮೆ ವೆಬ್ ಸೈಟ್ಗೆ ಹೋಗಿ ನೋಂದಾಯಿಸಿ ದರೆ ನಿಮಗೆ ಬೇಕಾದ ಮಾಹಿತಿಯನ್ನು ಕೇಳಲು ಟೈಪ್ ಮಾಡಿದರೆ ಅದು ಉತ್ತರ ಬರೆಯುತ್ತ ಸಾಗುತ್ತದೆ.
ಚಾಟ್ ಜಿಪಿಟಿ ನವೆಂಬರ್ ೨೦೨೨ರಲ್ಲಿ ಓಪನ್ ಎಐನಿಂದ ಪ್ರಾರಂಭಿಸಲಾದ ಚಾಟ್ಬಾಟ್ ಆಗಿದೆ. ಇದು ಓಪನ್ಎಐನ ಕುಟುಂಬದ ದೊಡ್ಡ ಭಾಷಾ ಮಾದರಿಗಳ ಮೇಲೆ ನಿರ್ಮಿಸ ಲ್ಪಟ್ಟಿದೆ. ಮೇಲ್ವಿಚಾರಣೆಯ ಮತ್ತು ಬಲವರ್ಧನೆಯ ಕಲಿಕೆಯ ತಂತ್ರಗಳೆರಡರ ಜತೆಗೆ ಉತ್ತಮವಾಗಿ ಟ್ಯೂನ್ ಮಾಡಲಾಗಿದೆ. ಚಾಟ್ಜಿಪಿಟಿ ಅನ್ನು ನವೆಂಬರ್ ೩೦ ೨೦೨೨ರಂದು ಮೂಲ ಮಾದರಿಯಾಗಿ ಪ್ರಾರಂಭಿಸ ಲಾಯಿತು. ಅಂದರೆ ಅದಕ್ಕೆ ಕೇವಲ ಮೂರು ತಿಂಗಳ ಪ್ರಾಯ! ಅಷ್ಟರಲ್ಲೇ ಅದರ ಕಾರ್ಯ ವಿಧಾನದಿಂದ ಜಗತ್ತಿನಲ್ಲಿ ಮನೆ ಮಾತಾಗಿದೆ. ಎಲ್ಲರ ಮನ ಗೆದ್ದು ಗೂಗಲ್ನಂತಹ ದೈತ್ಯ ಕಂಪನಿಯೇ ಚಿಂತಿಸುವಂತೆ ಮಾಡಿದೆ.
ನಮಗೆ ಬೇಕಾದ ಮಾಹಿತಿಯನ್ನು ಕೇವಲ ಕರ್ಸರ್ ಬ್ಲಿಂಕ್ ಮಾಡುತ್ತಲೇ ನೀಡುವ ಈ ಚಾಟ್ ಬಾಟ್ ಮೊದಲೇ ಫೀಡ್ ಮಾಡಿದ ಮಾಹಿತಿಯನ್ನು ನಮಗೆ ಸಂಸ್ಕರಿಸಿ ಕೊಡುತ್ತದೆ. ಇದು ಕೆಲವೊಮ್ಮೆ ನಿಖರತೆಯ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಬರವಣಿಗೆಯ ವಿಷಯದಲ್ಲಿ ಸದ್ಯಕ್ಕೆ ಪರೀಕ್ಷೆಯಲ್ಲಿ ಅಚ್ಚುಕಟ್ಟಾಗಿ ಪುಟ ತುಂಬಿಸುವ ಚಾಲಾಕಿಗಳ ಹಂತದಲ್ಲಿದೆ ಈ Chat GPT, ಆದರೆ, ಪುಟ ತುಂಬಿಸಿರುವುದರಲ್ಲಿ ಸತ್ವವೇನಾದರೂ ಇದೆಯೇ ಎಂದು ಹುಡುಕಿದರೆ ಸಂಪೂರ್ಣವಾಗಿ ಹೌದು ಎಂದು ಹೇಳಲಾಗುವುದಿಲ್ಲ.
ಇದು ಚಾಟ್ ಜಿಪಿಟಿಯ ಮಿತಿಯೂ ಹೌದು ಎಂದರೆ ತಪ್ಪಾಗಲಾರದು. ಇದು ನೂರಾರು ಪದಗಳನ್ನು ಚಕಚಕನೆ ಬರೆದು ಕೊಡಬಹುದು. ಆದರೆ, ಸತ್ವದ ವಿಚಾರದಲ್ಲಿ ಚಾಟ್ GPT ವಿಶ್ವಾಸ ಗಳಿಸಿಕೊಳ್ಳುವುದು ಅಷ್ಟು ಸುಲಭವಿಲ್ಲ. ಇದು ಹೇಗೆ ಕಾರ್ಯನಿರ್ವಹಣೆ ಮಾಡುತ್ತದೆ ಎಂದು ಪರೀಕ್ಷೆ ಮಾಡಲು ನಾನು ಬೋಧನೆ ಮಾಡುವ ಸಮಾಜ ವಿಜ್ಞಾನ ವಿಷಯದ ಸುಭಾಷ್ ಚಂದ್ರ ಬೋಸ್ ಬಗ್ಗೆ ಕೇಳಿದಾಗ ಈ ಜಿಪಿಟಿ ತನ್ನ ಕರ್ಸರ್ ಬ್ಲಿಂಕ್ ಬ್ಲಿಂಕಿಸಿ ಶೇಕಡಾ ಐವತ್ತು ಸರಿ ಉತ್ತರ ನೀಡಿತು.
ಇದರ ಕಂಟೆಂಟ್ ಅನ್ನು ಕಣ್ಣು ಮುಚ್ಚಿಕೊಂಡು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ‘ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್‘
(NLP) ಇನ್ನೂ ಅ ಹಂತ ತಲುಪಿಲ್ಲ.
ಮನುಷ್ಯ ಭಾಷೆಯನ್ನು ಯಂತ್ರಗಳಿಗೆ ಸಹಜವಾಗಿ ಅರ್ಥ ಮಾಡಿಸುವ ಪ್ರಕ್ರಿಯೆ ಈ NLP. ಧ್ವನಿ ಅಥವಾ ಬರಹದ ಮೂಲಕ
ನೀಡುವ ಕಮಾಂಡ್ ಅನ್ನು ಯಂತ್ರಗಳು ಮನುಷ್ಯರಂತೆಯೇ ಅರ್ಥ ಮಾಡಿಕೊಳ್ಳಲು ಈ ಪ್ರಕ್ರಿಯೆ ನೆರವಾಗುತ್ತದೆ. ಚಾಟ್
GPT ಯಲ್ಲಿ ಇದರ ಮುಂದುವರಿದ ತಂತ್ರಜ್ಞಾನ ಬಳಕೆಯಾಗುತ್ತಿದೆ. ಇದೇ ಕಾರಣಕ್ಕೆ ನಾವು ಕೊಡುವ ಕಮಾಂಡ್ ಅನ್ನು ಅದು
ಕ್ಷಣಮಾತ್ರದ ಬರೆದು ಮುಗಿಸುತ್ತದೆ. ಯಾವುದೇ ಭಾಷೆಯಿಂದ ಇನ್ಯಾವುದೇ ಭಾಷೆಗೆ ಬರಹವನ್ನು ಭಾಷಾಂತರಿಸುವ, ಧ್ವನಿಯ ಮೂಲಕ ನೀಡುವ ಕಮಾಂಡ್ಗಳಿಗೆ ಪ್ರತಿಕ್ರಿಯಿಸುವ ಹಾಗೂ ಬರಹವನ್ನು ಸಂಸ್ಕರಿಸಿ ಸಂಕ್ಷಿಪ್ತಗೊಳಿಸುವ AI ನ ಕೆಲಸವನ್ನು NLP ಸುಲಭವಾಗಿಸುತ್ತದೆ. ಮಾಹಿತಿ ಸಂಗ್ರಹ ಮತ್ತು ಬರಹದ ಸಂಸ್ಕರಣೆ ಎರಡೂ ಕೆಲಸಗಳು ಚಾಟ್ GPT ಯ ಮೂಲಕ ಅಗುತ್ತಿರುವುದರಿಂದ ಇದರ ಕೆಲಸ ಅಚ್ಚರಿಯ ಹಾಗೆ ಕಾಣುತ್ತಿದೆಯಷ್ಟೆ.
ಶಿಕ್ಷಣ ತಜ್ಞರ ಆತಂಕವೇನು… ಕರೋನಾ ಪೂರ್ವ ಹಾಗೂ ಕರೋನೋತ್ತರ ಅವಧಿಯಲ್ಲಿ ರಾಷ್ಟ್ರೀಯ ಸರ್ವೇಗಳು ಹೊರ ಹಾಕಿದ ಮಾಹಿತಿಯ ಆಧಾರದ ಮೇಲೆ ದೇಶದ ಬಹುತೇಕ ಮಕ್ಕಳು ಓದು ಬರಹ ಮತ್ತು ಲೆಕ್ಕಾಚಾರ (F L N) ದಲ್ಲಿ ಹಿಂದುಳಿ ದಿದೆ. ಇಂತಹ ವಿದ್ಯಾರ್ಥಿಗಳು ಶಿಕ್ಷಕರು ನೀಡಿದ ಭಾಷೆಗೆ ಸಂಬಂಧಿಸಿದ ಗೃಹಪಾಠಗಳನ್ನು ಮಾಡಿಕೊಡಲು ಜಿಪಿಟಿ ಮೊರೆ ಹೋದರೆ ಅದು ಕ್ಷಣಗಳಲ್ಲಿ ಮಾಡಿಕೊಡುತ್ತದೆ. ಲೆಕ್ಕಗಳನ್ನು ಹಂತ ಹಂತವಾಗಿ ಮಾಡಿ ತೋರಿಸುತ್ತದೆ ಅದನ್ನು ನಕಲು ಮಾಡಿ ಶಾಲೆಗೆ ತಂದರೆ ಶಿಕ್ಷಕರು ಅದನ್ನು ನೋಡಿ ಮಗು F L N ಸಾಧಿಸಿದೆ ಎಂಬ ತೀರ್ಮಾನಕ್ಕೆ ಬರಬಹುದು.
ನಮ್ಮ ದೇಶದಲ್ಲಿ ಇದು ಈಗೀಗ ಚರ್ಚೆಯ ವಿಷಯವಾಗಿದೆ ಆದರೆ ಅಮೆರಿಕದ ಕೆಲ ವಿಶ್ವವಿದ್ಯಾಲಯಗಳು ಚಾಟ್ ಜಿ ಪಿ ಟಿ
ಯನ್ನು ನಿಷೇಧಿಸಿವೆ. ಭಾರತದ ಕೆಲ ಕಾಲೇಜುಗಳು ಸಹ ಇದೇ ಹಾದಿ ತುಳಿದಿವೆ. ಚಾಟ್ ಜಿಪಿಟಿ ಹಾವಳಿ ನಿಯಂತ್ರಣ ಮಾಡಲು
ಕಾಲೇಜುಗಳಲ್ಲಿ ಗೃಹಪಾಠ ನೀಡದೇ ತಾವೇ ಹಾಳೆಗಳನ್ನು ನೀಡಿ ಉತ್ತರ ಬರೆಸಲು ಚಿಂತನೆ ಮಾಡುತ್ತಿದ್ದಾರೆ.
ಮೌಲ್ಯಮಾಪನ ಪ್ರಕ್ರಿಯೆಯು ಮೇಲೂ ಇದು ದುಷ್ಪರಿಣಾಮ ಬೀರುವ ಆತಂಕವಿದೆ. ಈಗಾಗಲೇ ಎಷ್ಟೇ ಬಿಗಿ ಮಾಡಿದರೂ ಶಾಲಾ ಕಾಲೇಜುಗಳಿಂದ ಹಿಡಿದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಕಲು ಹಾವಳಿ ಪಿಡುಗಾಗಿ ಪರಿಣಮಿಸಿ ಅದು ಭ್ರಷ್ಟಾಚಾರಕ್ಕೆ ದಾರಿಯಾಗಿ ಶಿಕ್ಷಣ ವ್ಯವಸ್ಥೆ ಮತ್ತು ಆಡಳಿತ ವ್ಯವಸ್ಥೆಗೆ ತಲೆನೋವಾಗಿ ಪರಿಣಮಿಸಿದೆ. ಈ ಜಿ ಪಿ ಟಿ ನಕಲು ಮಾಡಲು ವಿದ್ಯಾರ್ಥಿ ಗಳಿಗೆ ಉಚಿತವಾಗಿ ಸಿಕ್ಕಿ ಕೋತಿ ಕೈಯಲ್ಲಿ ಸಿಕ್ಕ ಗುಲಗಂಜಿಯಾಗುವುದೇನೋ ಎಂಬ ಅತಂಕ ಮೂಡುತ್ತದೆ.
Read E-Paper click here