Friday, 13th December 2024

ಭಾರತಕ್ಕೆ ಮಾತ್ರವಲ್ಲ, ಜಗತ್ತಿಗೇ ತಲೆನೋವಾಗುತ್ತಿದೆ ಚೀನಾ

ಅಭಿವ್ಯಕ್ತಿ

ಗಣೇಶ್‌ ಭಟ್‌ ವಾರಣಾಸಿ

ವಾಜಪೇಯಿ ಸರಕಾರದ ಕಾಲದಲ್ಲಿ ರಕ್ಷಣಾ ಮಂತ್ರಿಯಾಗಿದ್ದ ಜಾರ್ಜ್ ಫೆರ್ನಾಂಡೀಸ್ ಅವರು ಚೀನಾ ಭಾರತದ ನಂ ವನ್ ಶತ್ರು ಎಂದು ಹೇಳಿದ್ದಾಗ ಎಲ್ಲರೂ ಒಮ್ಮೆ ಹುಬ್ಬೇರಿಸಿದ್ದರು. ಆದರೆ ಚೀನಾ ದೇಶವು ಜಾರ್ಜ್ ಫೆರ್ನಾಂಡೀಸ್ ಅವರ ಹೇಳಿಕೆ ನಿಜ
ಎಂಬುದನ್ನು ಕಾಲಕಾಲಕ್ಕೆ ಸಾಬೀತುಪಡಿಸುತ್ತಲೇ ಬಂದಿದೆ.

ನೆಹರೂ ಕಾಲದಲ್ಲಿ ಪಂಚಶೀಲ ಒಪ್ಪಂದಕ್ಕೆ ಸಹಿ ಹಾಕಿ, ಹಿಂದೀ ಚೀನೀ ಬಾಯಿ ಎಂದು ಘೋಷಿಸಿ ನಂತರ ಭಾರತದ ಮೇಲೆ ಆಕ್ರಮಣ ನಡೆಸಿ ಭಾರತದ 40 ಸಾವಿರ ಚದರ ಕಿಲೋಮೀಟರ್ ವಿಸ್ತೀರ್ಣದ ಭೂಭಾಗವನ್ನು ಕಸಿದುಕೊಂಡದ್ದು, ಪಾಕಿಸ್ತಾನವನ್ನು ಭಾರತದ ಎದುರು ಸದಾ ಎತ್ತಿಕಟ್ಟುತ್ತಿರುವುದು, ಭಾರತದ ನೆರೆಕರೆಯ ದೇಶಗಳನ್ನು ಭಾರತದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ನಿಲ್ಲುವಂತೆ ಮಾಡುತ್ತಿರುವುದು, ಭಾರತದ ವಿರುದ್ಧ ವ್ಯೂಹವನ್ನು ರಚಿಸುವುದು, ವಿಶ್ವಸಂಸ್ಥೆಯಲ್ಲಿ ಭಾರತದ ಪರವಾಗಿ ತೆಗೆದುಕೊಳ್ಳುವ ನಿರ್ಣಯಗಳ ವಿರುದ್ಧ ತನ್ನ ವೀಟೋ ಪವರ್ ಅನ್ನು ಉಪಯೋಗಿಸಿ ತಡೆ ಒಡ್ಡುತ್ತಿರುವುದು, ದೋಕ್ಲಾಂ, ಗಾಲ್ವಾನ್, ಅರುಣಾಚಲಪ್ರದೇಶದ ಗಡಿಗಳಲ್ಲಿ ಕಾಲ್ಕೆರೆದು ಜಗಳಕ್ಕೆ ಬಂದಿರುವುದು… ಹೀಗೆ ಚೀನಾ ದೇಶವು ಭಾರತಕ್ಕೆ ಕೊಡುತ್ತಿರುವ ತೊಂದರೆಗಳಿಗೆ ಲೆಕ್ಕವೇ ಇಲ್ಲ.

ಆದರೆ ಚೀನಾವಿಂದು ಭಾರತಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೇ ತಲೆನೋವಾಗಿ ಪರಿಣಮಿಸುತ್ತಿದೆ. ಚೀನಾದ ಹ್ಯಾಕರ್‌ಗಳು ಜಗತ್ತಿನ ಎಲ್ಲ ದೇಶಗಳ ಆರ್ಥಿಕ ಹಾಗೂ ಮಿಲಿಟರಿ ಭದ್ರತೆಗೆ ದೊಡ್ಡ ಸವಾಲಾಗಿದ್ದಾರೆ. ಜಾಗತಿಕವಾಗಿ ನಡೆಯುತ್ತಿರುವ ಸೈಬರ್ ಅಟ್ಯಾಕ್
ಗಳಲ್ಲಿ ಶೇ.30 ಆಕ್ರಮಣಗಳ ಮೂಲ ಚೀನಾ ದೇಶ ಆಗಿದೆ ಎಂದು ಬ್ರಿಟಿಷ್ ಬ್ಯಾಂಕರ್ಸ್ ಅಸೋಸಿಯೇಶನ್ ಹೇಳಿದೆ. ಚೀನಾದ ಸರಕಾರವೇ ಈ ಸೈಬರ್ ಆಕ್ರಮಣಗಳ ಹಿಂದಿದೆ ಎಂದು ವರದಿ ಹೇಳಿದೆ.

ಚೀನಾದ ಹ್ಯಾಕರ್‌ಗಳು ಶತ್ರು ದೇಶದ ಬ್ಯಾಂಕಿಂಗ್ ವ್ಯವಸ್ಥೆ, ಆರ್ಥಿಕ ವ್ಯವಸ್ಥೆ ಹಾಗೂ ಮಿಲಿಟರಿ ವ್ಯವಸ್ಥೆಯ ಮೇಲೆ ದಾಳಿ ಮಾಡಿ ಮಾಹಿತಿಗಳಿಗೆ ಕನ್ನ ಹಾಕುತ್ತಾರೆ. ಅಮೆರಿಕಾದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್ಬಿಐ) ಸಂಸ್ಥೆಯು ಪ್ರಕಟಿಸಿರುವ ಮೋಸ್ಟ್ ವಾಂಟೆಡ್ ಸೈಬರ್ ಅಪರಾಧಿಗಳ ಪಟ್ಟಿಯಲ್ಲಿ 18 ಅಪರಾಧಿಗಳು ಮಂದಿ ಚೀನೀಯರೇ!

2014ರಲ್ಲಿ ಅಮೆರಿಕಾವು 5 ಮಂದಿ ಚೀನಾ ಹ್ಯಾಕರ್‌ಗಳು ಹ್ಯಾಕಿಂಗ್ ಮೂಲಕ ಅಮೆರಿಕದ ಆರ್ಥಿಕ ಗೂಢಚಾರಿಕೆ ನಡೆಸಿರುವು ದಾಗಿ ದೋಷಾರೋಪ ಮಾಡಿತ್ತು. ಆ ಐವರೂ ಚೀನಾದ ಸೇನೆ ಪೀಪಲ್ಸ ಲಿಬರಲ್ ಆರ್ಮಿ (ಪಿಎಲ್‌ಎ)ಯ ಅಧಿಕಾರಿಗಳು ಎಂಬುದು ಪತ್ತೆಯಾಗಿತ್ತು. ಚೀನಾದಿಂದ ಅತೀ ಹೆಚ್ಚು ಸೈಬರ್ ಆಟ್ಯಾಕ್‌ಗೆ ಒಳಗಾದ ದೇಶ ಅಮೆರಿಕಾ. ನಂತರದ ಸ್ಥಾನದಲ್ಲಿ ದಕ್ಷಿಣ ಕೋರಿಯಾ, ಜರ್ಮನಿ, ಜಪಾನ್‌ಗಳಿವೆ.

ಚೀನಾದ ಹ್ಯಾಕರ್‌ಗಳಿಂದ 6ನೇ ಅತೀ ಹೆಚ್ಚು ದಾಳಿಗೊಳಗಾದ ದೇಶ ಭಾರತ. 2020ರ ಅಕ್ಟೋಬರ್ 12ರಂದು ಮುಂಬೈ ಮಹಾನಗರದಲ್ಲಿ ವಿದ್ಯುತ್ ಗ್ರಿಡ್ ವ್ಯವಸ್ಥೆಯು ಸಂಪೂರ್ಣವಾಗಿ ಕುಸಿದು ಮಹಾನಗರವು ಅಂಧಕಾರದಲ್ಲಿ ಮುಳುಗು ವಂತಾಗಿತ್ತು. ಇದರ ಹಿಂದೆ ಚೀನಾದ ರೆಡ್ ಇಕೋ ಎನ್ನುವ ಸೈಬರ್ ಹ್ಯಾಕರ್ ತಂಡದ ಕೈವಾಡವಿದೆ ಎಂದು ಅಮೆರಿಕಾದ ನ್ಯೂಯಾರ್ಕ್ ಟೈಂಸ್ ವರದಿ ಮಾಡಿದೆ.

2020ರ ನವೆಂಬರ್ ತಿಂಗಳಲ್ಲಿ ಮಹಾರಾಷ್ಟ್ರ ಸರಕಾರದ ಸೈಬರ್ ವಿಭಾಗವು ನಡೆಸಿದ ತನಿಖೆಯಲ್ಲಿ ಮಹಾರಾಷ್ಟ್ರದ ಪಡ್ಘಾದಲ್ಲಿರುವ ವಿದ್ಯುತ್ ಹಂಚಿಕೆ ನಡೆಸುವ ಲೋಡ್ ಡಿಸ್ಪ್ಯಾಚ್ ಸೆಂಟರ್‌ನ ಕಂಪ್ಯೂಟರ್‌ಗಳಲ್ಲಿ ಮಾಲ್ವೇರ್ (ಕಂಪ್ಯೂಟರ್‌ ಗಳನ್ನು ಬ್ಲಾಕ್ ಮಾಡಬಲ್ಲ, ಮಾಹಿತಿಗಳನ್ನು ಕದಿಯಬಲ್ಲ ದುರುದ್ದೇಶಪೂರಿತ ತಂತ್ರಾಂಶಗಳು)ಗಳು ಕಂಡು ಬಂದಿದ್ದವು. ಇದೇ ರೀತಿ ಇತ್ತೀಚೆಗೆ ಚೀನಾ ಮೂಲದ ಹ್ಯಾಕರ್‌ಗಳು ತೆಲಂಗಾಣದ ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ಕೆಡಿಸಲು ಪ್ರಯತ್ನಿಸಿವೆ
ಎಂದು ಪತ್ರಿಕೆಗಳು ವರದಿ ಮಾಡಿವೆ.

ಚೀನಾದ ರೆಡ್ ಇಕೋ ತೆಲಂಗಾಣದ ವಿದ್ಯುತ್ ಸಂಸ್ಥೆಗಳಾದ ತೆಲಂಗಾಣ ಸ್ಟೇಟ್ ಟ್ರಾನ್ಸ್ಕೋ ಹಾಗೂ ತೆಲಂಗಾಣ ಸ್ಟೇಟ್ ಜೆಂಕೋ ಸಂಸ್ಥೆಗಳ ಕಂಪ್ಯೂಟರ್‌ಗಳ ಮೇಲೆ ದಾಳಿ ಮಾಡಿದೆ. ತೆಲಂಗಾಣದ ಕನಿಷ್ಠ 40 ವಿದ್ಯುತ್ ಸಬ್ ಸ್ಟೇಷನ್ ಗಳನ್ನಾದರೂ ನಿಷ್ಕ್ರಿಯಗೊಳಿಸುವ ಉದ್ದೇಶ ಚೀನಾ ಹ್ಯಾಕರ್‌ಗಳಿಗೆ ಇತ್ತು. ಆದರೆ ತೆಲಂಗಾಣದ ಸೈಬರ್ ಭದ್ರತಾ ತಂಡದ ಸಮಯೋಚಿತ ಕಾರ್ಯಾಚರಣೆಯ ಫಲವಾಗಿ ಚೀನಾದ ಹ್ಯಾಕಿಂಗ್ ಪ್ರಯತ್ನ ವಿಫಲವಾಗಿದೆ.

ಇವಲ್ಲದೆ ದೆಹಲಿಯ ವಿದ್ಯುತ್ ಇಲಾಖೆಯ ಲೋಡ್ ಡಿಸ್ಪ್ಯಾಚ್ ಸೆಂಟರ್, ಈಶಾನ್ಯ ರಾಜ್ಯಗಳ ವಿದ್ಯುತ್ ಇಲಾಖೆಯ ನಾರ್ತ್ ಈಸ್ಟ್ ಲೋಡ್ ಡಿಸ್ಪ್ಯಾಚ್ ಸೆಂಟರ್, ಪಶ್ಚಿಮ ಬಂಗಾಲದ ಈಸ್ಟ್ ಲೋಡ್ ಡಿಸ್ಪ್ಯಾಚ್ ಸೆಂಟರ್, ತಮಿಳುನಾಡಿನ ವಿ ಒ ಚಿದಂಬರ್ನಾರ್ ಬಂದರು, ಕರ್ನಾಟಕದ ರಾಯಚೂರಿನಲ್ಲಿರುವ ಸದರ್ನ್ ರೀಜನ್ ಲೋಡ್ ಡಿಸ್ಪ್ಯಾಚ್ ಸೆಂಟರ್‌ಗಳ ಮೇಲೂ ಚೀನಾದ ರೆಡ್ ಇಕೋ ಹ್ಯಾಕರ್‌ಗಳು ಆಕ್ರಮಣ ಮಾಡುವ ಪ್ರಯತ್ನ ಮಾಡಿzರೆ ಎಂದು ತಿಳಿದುಬಂದಿದೆ.

ಚೀನಾದ ಹ್ಯಾಕರ್‌ಗಳು ಭಾರತದಲ್ಲಿ ಕೋವಿಡ್- 19ಗೆ ವ್ಯಾಕ್ಸಿನ್ ಗಳನ್ನು ಕಂಡುಹಿಡಿದಿರುವ ಭಾರತ್ ಬಯೋಟೆಕ್ ಹಾಗೂ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕಂಪನಿಗಳ ಮೇಲೂ ಸೈಬರ್ ಗೂಡಾಚಾರಿಕೆಯನ್ನು ಮಾಡಲು ಪ್ರಯತ್ನಿಸಿzರೆ. ಚೀನಾದ ಹ್ಯಾಕಿಂಗ್ ತಂಡವಾದ ಎಪಿಟಿ 10 ಎನ್ನುವ ತಂಡವು ಈ ಎರಡು ಸಂಸ್ಥೆಗಳ ಪೂರೈಕೆಯ ವೆಬ್ಸೆ ಟ್‌ಗಳ ಮೇಲೆ
ಆಕ್ರಮಣವನ್ನು ಮಾಡಿದೆ.

ಚೀನಾವು ತನ್ನ ದೇಶದ ಜತೆಗೆ ಗಡಿಗಳನ್ನು ಹಂಚಿಕೊಂಡಿರುವ ಬಹುತೇಕ ದೇಶಗಳ ಜತೆಗೆ ಗಡಿ ಸಂಘರ್ಷವನ್ನು ಹೊಂದಿದೆ. ಏಷ್ಯಾ ಖಂಡದ ವಿವಿಧ ದೇಶಗಳ ಜತೆಗೆ 17 ಭಾಗಗಳಲ್ಲಿ ಭೂಮಿ ಹಾಗೂ ಸಮುದ್ರದ ಒಡೆತನದ ವಿಷಯದಲ್ಲಿ ತಕರಾರನ್ನು
ಮಾಡುತ್ತಿದೆ. ಚೀನಾ ಸ್ವಭಾವತಃ ವಿಸ್ತರಣಾವಾದಿ ದೇಶ. ಅದು ಸದಾ ತನ್ನ ಅಕ್ಕಪಕ್ಕದ ದೇಶಗಳ ಭೂಮಿಯನ್ನು ಒಳಗೆ ಹಾಕಿಕೊಳ್ಳಲು ಹೊಂಚು ಹಾಕುತ್ತಿರುತ್ತದೆ.

ಭಾರತದ ಜತೆಗಲ್ಲದೆ ತೈವಾನ್, ಫಿಲಿಪೈನ್ಸ್, ಇಂಡೋನೇಷ್ಯಾ, ಮಲೇಷ್ಯಾ, ವಿಯಟ್ನಾಂ, ಜಪಾನ್, ದಕ್ಷಿಣ ಕೋರಿಯಾ,
ಸಿಂಗಾಪುರ್, ಬ್ರೂನೈ, ಭೂತಾನ್, ಲಾವೋಸ್, ಮೊಂಗೋಲಿಯಾ, ಮ್ಯಾನ್ಮಾರ್ ಮೊದಲಾದ ದೇಶಗಳೊಡನೆ ಗಡಿ ತಕರಾರನ್ನು ಹೊಂದಿದೆ ಚೀನಾ. ಇಡೀ ತೈವಾನ್ ತನ್ನದೆಂದು ಚೀನಾ ಹೇಳಿಕೊಳ್ಳುತ್ತಿದೆ, ಅದಲ್ಲದೆ ಮಾಕ್ಸ್ ಲೆಸ್ ಫೀಲ್ಡ್ ತೀರ, ಪಾರ್ಸೆಲ್
ದ್ವೀಪ, ಸ್ಪ್ರಾಟ್ಲಿ ದ್ವೀಪ ಹಾಗೂ ದಕ್ಷಿಣ ಚೀನಾ ಸಮುದ್ರದ ಒಡೆತನದ ವಿಚಾರವಾಗಿ ಚೀನಾ ತೈವಾನ್ ಜತೆಗೆ ಸಂಘರ್ಷವನ್ನು ನಡೆಸುತ್ತಿದೆ.

ವಿಯೆಟ್ನಾಂನ ದೊಡ್ಡ ಭಾಗವು ತನಗೆ ಸೇರಬೇಕೆಂದು ಚೀನಾ ಹೇಳುತ್ತಿದೆ. ಸೆಂಕಾಕು ದ್ವೀಪ  ಗೂ ರುಕ್ಯು ದ್ವೀಪದ ಒಡೆತನದ ವಿಚಾರವಾಗಿ ಜಪಾನ್ ಜತೆಗೂ ಚೀನಾ ತಗಾದೆ ಎತ್ತುತ್ತಿದೆ. ದಕ್ಷಿಣ ಚೀನಾ ಸಮುದ್ರದ ಮೇಲೆ ತನಗೆ ಮಾತ್ರ ಹಕ್ಕು ಇರುವುದೆಂದು ಚೀನಾ ಪ್ರತಿಪಾದಿಸುತ್ತಿರುವುದು ಈ ಭಾಗದ ಎಲ್ಲಾ ದೇಶಗಳಿಗೂ ಚೀನಾದ ಮೇಲೆ ಅಸಮಾಧಾನವನ್ನು ಮೂಡಿಸಿದೆ. ಚೀನಾದ ದಕ್ಷಿಣ ಚೀನಾ ಸಮುದ್ರದ ಒಡೆತನದ ಪ್ರತಿಪಾದನೆಯನ್ನು ಸಿಂಗಾಪುರವೂ ವಿರೋಧಿಸಿದೆ.

ಭಾರತವು ದಕ್ಷಿಣ ಚೀನಾ ಸಮುದ್ರದಲ್ಲಿ ವಿಯಟ್ನಾಂ ವ್ಯಾಪ್ತಿಯ ಪ್ರದೇಶದಲ್ಲಿ ತೈಲ ಶೋಧನೆಯನ್ನು ನಡೆಸುತ್ತಿರುವುದನ್ನು ಚೀನಾ ವಿರೋಧಿಸಿದೆ. ಆದರೆ ಚೀನಾದ ವಿರೋಧಕ್ಕೆ ಸೊಪ್ಪು ಹಾಕದ ಭಾರತ ತನ್ನ ತೈಲ ಶೋಧನಾ ಕೆಲಸವನ್ನು ಮುಂದುವ ರಿಸಿದೆ. ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ(ಸಿಪಿಸಿ) ಸುಮಾರು 20 ಲಕ್ಷ ಸದಸ್ಯರು ಇಂದು ಜಗತ್ತಿನ ವಿವಿಧ ಕಂಪನಿಗಳಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ ಎಂದು ದಿ ಆಸ್ಟ್ರೇಲಿಯನ್ ಪತ್ರಿಕೆ ವರದಿ ಮಾಡಿದೆ.

ವಿವಿಧ ದೇಶಗಳ ರಕ್ಷಣಾ ಸಾಮಗ್ರಿಗಳ ಉತ್ಪಾದನಾ ಕಂಪನಿಗಳು, ಯುನಿವರ್ಸಿಟಿಗಳು ಹಾಗೂ ಸರಕಾರಿ ಸಂಸ್ಥೆಗಳಲ್ಲೂ ಈ ಚೀನಾ ಏಜೆಂಟರುಗಳು ಉದ್ಯೋಗಿ ಗಳಾಗಿ ಸೇರಿಕೊಂಡಿzರೆ. ಪ್ರಸಿದ್ಧ ವಿಮಾನ ತಯಾರಿಕಾ ಸಂಸ್ಥೆ ಬೋಯಿಂಗ್, ವಾಹನ ತಯಾರಿಕಾ ಸಂಸ್ಥೆ ವೋಕ್ಸ್ ವ್ಯಾಗನ್, ಕರೋನಾ ವಿರುದ್ಧ ವ್ಯಾಕ್ಸಿನ್ ತಯಾರು ಮಾಡುತ್ತಿರುವ ಆಸ್ಟ್ರಾಜೆನೆಕಾ,-ಸರ್,
ಜಾಗತಿಕ ಬ್ಯಾಂಕಿಂಗ್ ಸಂಸ್ಥೆಗಳಾದ ಎಚ್‌ಎಸ್‌ಬಿಸಿ, ಎಎನ್‌ಝೆಡ್ ಮೊದಲಾದ ಸಂಸ್ಥೆಗಳಲ್ಲೂ ಇವರು ಸೇರಿಕೊಂಡಿzರೆ. ವಿವಿಧ ದೇಶಗಳ ರಾಯಭಾರಿ ಕಚೇರಿಗಳಿಗೂ ಇವರು ಉದ್ಯೋಗಿಗಳಾಗಿ ನುಸುಳಿಕೊಂಡಿದ್ದಾರೆ.

ಆಯಕಟ್ಟಿನ ಸ್ಥಳಗಳಲ್ಲಿರುವ ಈ ಸಿಪಿಸಿ ಸದಸ್ಯರು ಗೂಢಚಾರಿಕೆ ನಡೆಸಿ ತಂತ್ರಜ್ಞಾನ ಹಾಗೂ ವಿದೇಶಾಂಗ ವ್ಯವಹಾರಗಳ ಮಾಹಿತಿಗಳನ್ನು ಚೀನಾಗೆ ರವಾನೆ ಮಾಡುತ್ತಿದ್ದಾರೆ. ಚೀನಾದ ಕಮ್ಯುನಿಸ್ಟ್ ಸರಕಾರಕ್ಕೆ ನೈತಿಕತೆ ಎಂಬುದೇ ಇಲ್ಲ. ಬೇರೆ ದೇಶ
ಗಳಿಂದ ಕzದರೂ ತಂತ್ರಜ್ಞಾನವನ್ನು ತನ್ನದಾಗಿಸಿಕೊಳ್ಳಲು ಅದಕ್ಕೆ ಯಾವುದೇ ರೀತಿಯ ನಾಚಿಕೆಯಿಲ್ಲ. ಚೀನಾಗೆ ನೆರೆಯ ರಾಷ್ಟ್ರಗಳ ಆಂತರಿಕ ವ್ಯವಹಾರಗಳಲ್ಲಿ ನೇರವಾಗಿ ಮೂಗು ತೂರಿಸುವ ಚಟವಿದೆ.

ಇತ್ತೀಚೆಗೆ ಚೀನಾ ನೇಪಾಳದ ಆಡಳಿತದ ಮೇಲೆ ಸಂಪೂರ್ಣ ಹಿಡಿತವನ್ನು ಸಾಧಿಸುವ ಪ್ರಯತ್ನವನ್ನು ಮಾಡಿತ್ತು. ಚೀನಾವು ನೇಪಾಳದಲ್ಲಿ ನೇಮಕಾತಿ ಮಾಡಿರುವ ರಾಯಭಾರಿ ಹ್ಯೂ ಯಾಂಕಿಗೆ ನೇಪಾಳದ ರಾಜಕೀಯ ವ್ಯವಹಾರಗಳ ಮೇಲೆ ನೇರ ನಿಯಂತ್ರಣ ಇದೆ. ಸುಂದರಿಯಾದ ಹ್ಯೂ ಯಾಂಕಿ ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ ಓಲಿಯನ್ನು ತನ್ನ ಮೋಹದ ಬಲೆಗೆ (ಹನಿ ಟ್ರ್ಯಾಪಿಂಗ್) ಕೆಡವಿಕೊಂಡು ಬೇಕಾದಂತೆ ಆಡಿಸಿಕೊಳ್ಳುತ್ತಿದ್ದಾಳೆ ಎನ್ನುತ್ತಿವೆ ಪತ್ರಿಕಾ ವರದಿಗಳು.

ಭಾರತದ ಭೂ ಭಾಭಾಗವನ್ನು ಸೇರಿಸಿ ಹೊಸದಾದ ಮ್ಯಾಪ್ ಅನ್ನು ಮಾಡಿ ನೇಪಾಳದ ಸಂಸತ್ತಿನಲ್ಲಿ ಹೊಸ ಮ್ಯಾಪ್ ಅಂಗೀಕಾರ ವಾಗುವಂತೆ ಮಾಡಿದುದೂ ಈಕೆಯೇ. ಚೀನಾದ ಕುಮ್ಮಕ್ಕಿನ ಕಾರಣದಿಂದ ನೇಪಾಳವು ಭಾರತ ವಿರೋಧೀ ನಿಲುವುಗಳನ್ನು ವ್ಯಕ್ತಪಡಿಸುತ್ತಿದೆ. ಇತ್ತೀಚೆಗೆ ಮ್ಯಾನ್ಮಾರಿ ನಲ್ಲಿ ಸೈನಿಕ ದಂಗೆ ನಡೆದು ಅಲ್ಲಿ ಆಂಗ್ ಚಸಾನ್ ಸೂಕಿ ನೇತೃತ್ವದ ಸರಕಾರವು ಅಮಾನತುಗೊಂಡು ಅಲ್ಲಿ ಮಿಲಿಟರಿಯು ಆಡಳಿತ ಜಾರಿಯಾಗುವಂತೆ ಮಾಡಿದ್ದು ಚೀನಾವೇ.

ವಿಶ್ವ ಸಂಸ್ಥೆಯು ಮ್ಯಾನ್ಮಾರಿನ ಮಿಲಿಟರಿ ಆಡಳಿತವನ್ನು ಖಂಡಿಸುವ ನಿರ್ಣಯವನ್ನು ಮಾಡಿದಾಗ ಚೀನಾವು ತನ್ನ ವೀಟೋ ಪವರ್ ಅನ್ನು ಬಳಸಿ ಆ ನಿರ್ಣಯವನ್ನು  ತಡೆ ಹಿಡಿದುದು ಮ್ಯಾನ್ಮಾರಿನ ಮಿಲಿಟರಿ ದಂಗೆಯಲ್ಲಿ ಚೀನಾ ವಹಿಸಿದ ಪಾತ್ರದ ಕುರಿತು ಸ್ಪಷ್ಟ ಚಿತ್ರಣವನ್ನು ನೀಡುತ್ತದೆ. 2013ರಿಂದ 2018 ರವರೆಗೆ ಅಬ್ದುಯಾಮೀನ್ ಮಾಲ್ಡೀವ್ಸ್‌ನ ಅಧ್ಯಕ್ಷರಾಗಿದ್ದ ಅವಧಿ ಯಲ್ಲಿ ಆತ ಚೀನಾದ ಕೈಗೊಂಬೆಯಂತೆ ವರ್ತಿಸುತ್ತಿದ್ದು ಭಾರತ ಹಾಗೂ ಅಮೆರಿಕಾ ವಿರೋಧಿ ನಿಲುವುಗಳನ್ನು
ವ್ಯಕ್ತಪಡಿಸುತ್ತಿದ್ದರು. ಆದರೆ ನಂತರ ಅಧ್ಯಕ್ಷರಾಗಿ ಬಂದ ಮೊಹಮ್ಮದ ನಶೀದ್ ಮಾತ್ರ ಭಾರತದ ಜತೆಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದಾರೆ.

ಚೀನಾವು ವಿವಿಧ ದೇಶಗಳಿಗೆ ಸಾಲವನ್ನು ಕೊಟ್ಟು ಅವುಗಳನ್ನು ತನ್ನ ಸಾಲದ ಬಲೆಯಲ್ಲಿ ಕೆಡವಿದೆ. ಉದಾಹರಣೆಗೆ ಶ್ರೀಲಂಕಾದ ಹಂಬಂತೋಟದ ಬಂದರನ್ನು ನಿರ್ಮಿಸಿದ ಚೀನಾ, ಶ್ರೀಲಂಕಾಗೆ ಬಂದರು ನಿರ್ಮಾಣದ ಸಾಲವನ್ನು ಮರುಪಾವತಿಸಲು
ಸಾಧ್ಯ ವಾಗದಾಗ ಹಂಬಂತೋಟ್ ಬಂದರನ್ನು 99 ವರ್ಷಗಳ ಕಾಲದ ಅವಽಗೆ ಗುತ್ತಿಗೆ ತೆಗೆದುಕೊಂಡಿದೆ. ಮಾಲ್ಡೀವ್ಸ್, ಇಂಡೋನೇಷ್ಯಾ ಹಾಗೂ ಹಲವಾರು ಆಫ್ರಿಕಾದ ದೇಶಗಳೂ ಚೀನಾದ ಸಾಲದ ಬಲೆಗೆ ಬಿದ್ದಿವೆ.

ಸಾಲದ ಬಲೆಗೆ ಬಿದ್ದ ದೇಶಗಳ ಖನಿಜ, ಲೋಹದ ಅದಿರು ಮೊದಲಾದ ಪ್ರಾಕೃತಿಕ ಸಂಪನ್ಮೂಲಗಳನ್ನು ತನ್ನ ಕೈವಶ ಮಾಡಿ ಕೊಳ್ಳುವುದು ಚೀನಾದ ತಂತ್ರಗಾರಿಕೆ. ಚೀನಾವು ತನ್ನ ಬಗ್ಗೆ ಅಂತಾರಾಷ್ಟ್ರೀಯಯವಾಗಿ ಋಣಾತ್ಮಕ ವರದಿಗಳು ಪ್ರಕಟವಾಗ ದಂತೆ ತಡೆಗಟ್ಟಲು ವಾರ್ಷಿಕವಾಗಿ 10 ಶತಕೋಟಿ ಡಾಲರ್‌ಗಳನ್ನು ವ್ಯಯಿಸುತ್ತಿದೆ. ಅಂತಾರಾಷ್ಟ್ರೀಯ ಮಾಧ್ಯಮ  ಗಳಲ್ಲಿ ಚೀನಾ ತನ್ನ ಬಗ್ಗೆ ಸಾಕಷ್ಟು ಜಾಹೀರಾತುಗಳನ್ನು ಪ್ರಕಟಿಸುತ್ತದೆ. ಕಳೆದ ವರ್ಷ ಭಾರತದ ದ ಹಿಂದೂ ಪತ್ರಿಕೆಯಲ್ಲೂ ಚೀನಾ ದೇಶದ ಬಗ್ಗೆ ಎರಡು ಪುಟಗಳಷ್ಟು ಜಾಹೀರಾತು ಪ್ರಕಟವಾಗಿತ್ತು.

ಸರ್ವಾಧಿಕಾರಿ ಆಡಳಿತದ ಚೀನಾಗೆ ಪ್ರಜಾಪ್ರಭುತ್ವ ರಾಷ್ಟ್ರಗಳ ಬಗ್ಗೆ ಏನೇನೂ ಒಲವಿಲ್ಲ. ಚೀನಾಗೆ ಪುಂಡ ದೇಶಗಳಾದ ಉತ್ತರ ಕೋರಿಯಾ, ಟರ್ಕಿ, ಪಾಕಿಸ್ತಾನ, ಇರಾನ್ ಮೊದಲಾದ ದೇಶಗಳೊಡನೆಯೇ ಹೆಚ್ಚು ಸಖತನ. ತನ್ನ ಜೀವಿತಾವಧಿಯವರೆಗೆ ಚೀನಾದ ಅಧ್ಯಕ್ಷನಾಗಿ ಮುಂದುವರಿಯುವ ಅವಕಾಶವನ್ನು ಸೃಷ್ಟಿಸಿ ಕೊಂಡಿರುವ ಜಿನ್ ಪಿಂಗ್ ಇತ್ತೀಚೆಗಿನ ದಿನಗಳಲ್ಲಿ
ಉತ್ತರ ಕೋರಿಯಾದ ಸರ್ವಾಧಿಕಾರಿ ಕಿಮ್ ಜೋಂಗ್ ಅನ್ ರೀತಿ ವರ್ತಿಸುತ್ತಿದ್ದಾರೆ. ತನಗೆ ಸರಿಬರದವರನ್ನೆ ಜೈಲಿಗಟ್ಟುವ ಜಿನ್ ಪಿಂಗ್ ಚೀನಾದ ಬಹುದೊಡ್ಡ ಉದ್ಯಮಿ, ಅಲಿಬಾಬಾದ ಸ್ಥಾಪಕ ಜ್ಯಾಕ್ ಮಾ ನನ್ನು ಕೂಡ ಜೈಲಿಗೆ ಕಳುಹಿಸಿದ್ದಾರೆ!

ಚೀನಾದ ಕುತಂತ್ರಗಳಿಗೆ ಪ್ರತ್ಯುತ್ತರವನ್ನು ಕೊಡುವ ಧೈರ್ಯವನ್ನು ತೋರಿದುದು ಭಾರತವೇ. ಗಾಲ್ವಾನ್ ಸಂಘರ್ಷದಲ್ಲಿ ಚೀನಾದ ಸೈನಿಕರನ್ನು ಹೊಡೆದೋಡಿಸಿ ಚೀನಾ ಮಿಲಿಟರಿಯ ಆತ್ಮಸ್ಥೆ ರ್ಯಕ್ಕೆ ದೊಡ್ಡ ಪೆಟ್ಟನ್ನು ಕೊಟ್ಟು ಚೀನಾದ ಮಿಲಿಟರಿ ಬಲ ಅನ್ನುವುದು ಕೇವಲ ಪೇಪರ್‌ನ ಹುಲಿ ಎಂದು ಭಾರತವು ತೋರಿಸಿ ಕೊಟ್ಟಿದೆ.

ಚೀನಾದ ಹೂಡಿಕೆದಾರ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡುವುದರ ಮೇಲೆ ಭಾರತ ಸರಕಾರವು ನಿರ್ಬಂಧ ಹೇರಿದೆ. ಚೀನಾದ ಟಿಕ್ ಟೋಕ್, ಪಬ್ ಜಿ, ಶೇರ್ ಇಟ್ ಮೊದಲಾದ 267 ಆಪ್ ಗಳನ್ನು ಬ್ಯಾನ್ ಮಾಡಿ ಚೀನಾವನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದೆ ಭಾರತ. ಚೀನಾದ ಮಿಲಿಟರಿ ಪಾರಮ್ಯವನ್ನು ಕೊನೆಗಾಣಿಸಲು
ಭಾರತ, ಅಮೆರಿಕ, ಜಪಾನ್ ಹಾಗೂ ಆಸ್ಟ್ರೇಲಿಯಾಗಳು ಜತೆ ಸೇರಿ ಕ್ವಾಡ್ (ದ ಕ್ವಾಡ್ರಿಲ್ಯಾಟರಲ್ ಸೆಕ್ಯುರಿಟಿ ಡಯಲಾಗ್) ಅನ್ನುವ ಒಕ್ಕೂಟವನ್ನು ರೂಪಿಸಿಕೊಂಡು ಜತೆಯಾಗಿ ನಿಯಮಿತ ಮಿಲಿಟರಿ ಕವಾಯತುಗಳನ್ನು ಮಾಡುತ್ತಿದೆ.

ಕ್ವಾಡ್ ಅನ್ನು ಬಲಪಡಿಸಲು ಸತತ ಮಾತುಕತೆಗಳನ್ನು ನಡೆಸುತ್ತಿವೆ. ಅಮೆರಿಕಾದ ಜೋ ಬೈಡನ್ ಸರಕಾರ ಚೀನಾದ ಕುರಿತು ಮೃದು ನಿಲುವನ್ನು ತಾಳಬಹುದು ಎನ್ನುವ ಭಯವಿತ್ತು. ಆದರೆ ಇತ್ತೀಚೆಗೆ ಜೋ ಬೈಡನ್ ಹಾಗೂ ಜಿನ್ ಪಿಂಗ್ ನಡುವೆ
ಎರಡೂವರೆ ಗಂಟೆಗಳ ಕಾಲ ನಡೆದ ಟೆಲಿಫೋನ್ ಮಾತುಕತೆಯ ಫಲಶ್ರುತಿ ಅಷ್ಟು ಧನಾತ್ಮಕವಾಗಿರಲಿಲ್ಲ ಎನ್ನುವುದು ಭಾರತದ ಪಾಲಿಗೆ ಸಮಾಧಾನದ ಸಂಗತಿ.