ಹಿಂದಿರುಗಿ ನೋಡಿದಾಗ
ಡಾ.ನಾ.ಸೋಮೇಶ್ವರ
ವೈದ್ಯರಿಗೊಂದು ನೀತಿ ಸಂಹಿತೆಯನ್ನು ರೂಪಿಸಬೇಕು ಎನ್ನುವ ಅಭಿಪ್ರಾಯವು ಹಲವು ಕಾಲಘಟ್ಟಗಳಲ್ಲಿದ್ದ ಹಲವು ಸಮಾಜಗಳಲ್ಲಿ ಮೂಡಿತು. ಇಂತಹ ಸಮಾಜ ಗಳಲ್ಲಿ ಭಾರತೀಯ ಸಮಾಜ, ಚೀನೀಯರ ಸಮಾಜ ಹಾಗೂ ಪ್ರಾಚೀನ ಗ್ರೀಕ್ ಸಮಾಜಗಳು ಮುಖ್ಯವಾದವು.
ಮನುಷ್ಯನ ದೇಹ ಮತ್ತು ಮನಸ್ಸುಗಳು ರಚನೆ ಹಾಗೂ ಕಾರ್ಯವು ಅದ್ಭುತವಾದದ್ದು. ರೋಗಜನನದ ಕಾರಣ ಮತ್ತು ರೋಗ ನಿವಾರಣಾ ತಂತ್ರಗಳು ‘ಪವಾಡ ಸದೃಶ’. ಹಾಗಾಗಿ ಶ್ರೀಸಾಮಾನ್ಯರು ವೈದ್ಯರನ್ನು ಭೂಮಿಯ ಮೇಲೆ ನಡೆದಾಡುವ ದೇವರು ಎಂದು ಗೌರವಿಸುವುದುಂಟು.
ಇಂತಹ ದೇವರನ್ನು ಒಂದು ನೀತಿ ಸಂಹಿತೆಯ ಚೌಕಟ್ಟಿನಲ್ಲಿ ಬಂಧಿಸಬೇಕು ಎನ್ನುವ ವಿಚಾರವು ಆಶ್ಚರ್ಯವನ್ನು ಉಂಟು ಮಾಡುತ್ತದೆ. ಏಕೆಂದರೆ ವೈದ್ಯನು ಹುಟ್ಟು- ಸಾವನ್ನು ನಿರ್ಣಯಿಸಬಲ್ಲ. ಬೇಡದ ಗರ್ಭವನ್ನು ತೆಗೆಯ ಬಲ್ಲ. ವೈಯುಕ್ತಿಕ ದ್ವೇಷದಿಂದ ಇಲ್ಲವೇ ರಾಜಕೀಯವಾಗಿ ಪ್ರೇರೇಪಿತನಾಗಿ ತೀವ್ರ ವಿಷ ಅಥವ ನಿಧಾನ ವಿಷವನ್ನು ಪ್ರಯೋಗಿಸಿ ಒಬ್ಬರನ್ನು ಕೊಲ್ಲಬಲ್ಲ. ರೋಗಿಗಳಿಗೆ ಚಿಕಿತ್ಸೆಯನ್ನು ನೀಡಲು ಅವರ ಮನೆಗೆ ಹೋಗು ವುದು ಅಪರೂಪವೇನಲ್ಲ. ಹಾಗೆ ಹೋಗು ವಾಗ ಆ ಮನೆಯ ಅನೇಕ ರಹಸ್ಯಗಳು, ರೋಗಿಯ ವೈಯುಕ್ತಿಕ ಹಾಗೂ ಖಾಸಗಿ ಮಾತಿಗಳು ವೈದ್ಯರ ಗಮನಕ್ಕೆ ಬರುತ್ತವೆ. ಇವನ್ನು ವೈದ್ಯರು ದುರುಪಯೋಗ ಪಡಿಸಿಕೊಳ್ಳ ಬಹುದು.
ರೋಗಿಯ ಮನೆಗೆ ಬಂದು ಹೋಗುವ ಕಾರಣ, ಆ ಮನೆಯ ಜನರೊಡನೆ ವಿಶೇಷ ಪರಿಚಯವು ಬೆಳೆಯುವುದು ಸಹಜ. ವೈದ್ಯರು ಆ ಮನೆಯ ಹೆಣ್ಣು ಮಕ್ಕಳೊ ಡನೆ ಅನಗತ್ಯ ಸಲಿಗೆಯನ್ನು ಬೆಳೆಸಿಕೊಳ್ಳಬಹುದು. ವೈದ್ಯರ ಚಿಕಿತ್ಸೆಯು ಫಲಪ್ರದವಾದರೆ ಎಲ್ಲರಿಗೂ ಸಂತೋಷ. ಅಕಸ್ಮಾತ್ ಚಿಕಿತ್ಸೆಯು ವಿಫಲ ವಾದರೆ ಅಥವಾ ರೋಗಿಯು ಮರಣಿಸಿದರೆ, ಎಲ್ಲರಿಗೂ ದುಃಖ. ಕೋಪ ಬರುತ್ತದೆ. ರೋಷ ಉಕ್ಕೇರುತ್ತದೆ. ಆ ಕ್ಷಣದಲ್ಲಿ ವೈದ್ಯರ ಮೇಲೆ ಆಕ್ರಮಣವನ್ನು ಮಾಡಿದರೆ, ಅದರಲ್ಲಿ ಅತಿಶಯವೇನೂ ಇಲ್ಲ. ವೈದ್ಯಕೀಯವು ಒಂದು ಅನಿಶ್ಚಿತ ಜ್ಞಾನ.
ವೈದ್ಯಕೀಯದಲ್ಲಿ ಯಾವಾಗಲೂ 2+2=4 ಆಗುವುದಿಲ್ಲ. ಸಾವು ಏಕೆ ಸಂಭಸಿತು ಎನ್ನುವುದಕ್ಕೆ ನಿಖರಕಾರಣವನ್ನು ನೀಡಲು ಕಷ್ಟ. ಒಂದೊಂದು ಪ್ರಕರಣದಲ್ಲೂ ಸಾವಿಗೆ ಕಾರಣವು ಭಿನ್ನವಾಗಿರಬಹುದು. ವೈದ್ಯನ ಬೇಜವಾಬ್ದಾರಿ ತನದಿಂದ ಸಾವು ಸಂಭಸಿದೆ ಎನ್ನುವುದನ್ನು ಮತ್ತೊಬ್ಬ ತಜ್ಞ ವೈದ್ಯನು ಮಾತ್ರ ಖಚಿತವಾಗಿ ಹೇಳಬಲ್ಲ. ವೈದ್ಯನು ಸಹ ಮನುಷ್ಯನೆ! ಕೆಲವು ವೈದ್ಯರಾದರೂ, ತಮ್ಮ ವೈದ್ಯಕೀಯ ವೃತ್ತಿಯ ಘನತೆಗೆತಕ್ಕ ಹಾಗೆ ನಡೆದು ಕೊಳ್ಳದಿರಬಹುದು. ಈ ಹಿನ್ನೆಲೆಯಲ್ಲಿ ವೈದ್ಯರಿಗೊಂದು ನೀತಿ ಸಂಹಿತೆಯನ್ನು ರೂಪಿಸಬೇಕು ಎನ್ನುವ ಅಭಿಪ್ರಾಯವು ಹಲವು ಕಾಲಘಟ್ಟಗಳಲ್ಲಿದ್ದ ಹಲವು ಸಮಾಜಗಳಲ್ಲಿ ಮೂಡಿತು. ಇಂತಹ
ಸಮಾಜಗಳಲ್ಲಿ ಭಾರತೀಯ ಸಮಾಜ, ಚೀನೀಯರ ಸಮಾಜ ಹಾಗೂ ಪ್ರಾಚೀನ ಗ್ರೀಕ್ ಸಮಾಜಗಳು ಮುಖ್ಯವಾದವು.
ಗ್ರೀಕ್ ಸಮಾಜದಲ್ಲಿ ರೂಪುಗೊಂಡ ಪ್ರೋಕ್ರೇಟಿಕ್ ಪ್ರತಿಜ್ಞೆ (ಪ್ರೋಕ್ರೇಟಿಕ್ ಓತ್) ಪ್ರಖ್ಯಾತವಾಗಿದೆ. ಅದರ ಪರಿಷ್ಕೃತ ರೂಪವನ್ನು ಇಂದಿಗೂ ಆಧುನಿಕ ವೈದ್ಯಕೀಯ ಪದವೀಧರರು ಪರಿಪಾಲಿಸುತ್ತಿರುವುದನ್ನು ನಾವು ನೋಡಬಹುದು. ಆ ಬಗ್ಗೆ ಒಂದು ಅವಲೋಕನ. ಪ್ರೋಕ್ರೇಟ್ಸ್ (ಕ್ರಿ.ಪೂ.460-ಕ್ರಿ.ಪೂ.370) ಓರ್ವ ಪ್ರಾಚೀನ ಗ್ರೀಕ್ ವೈದ್ಯ.ಈತನನ್ನು ‘ಪಾಶ್ಚಾತ್ಯ ವೈದ್ಯಕೀಯದ ಪಿತಾಮಹ’ಎಂದು ಕರೆಯುವುದುಂಟು. ಪ್ರೋಕ್ರೇಟ್ಸ್ ಬರೆದ ಎನ್ನಲಾದ ಸುಮಾರು 60 ರಚನೆಗಳನ್ನು ಸಮಷ್ಠಿಯಾಗಿ ‘ಪ್ರೋಕ್ರೇಟ್ಸ್ ಕಲೆಕ್ಷನ್ ಅಥವಾ ಪ್ರೋಕ್ರಾಟಿಕ್ ಕಾರ್ಪಸ್ ’ಎಂದು ಕರೆಯುವುದುಂಟು. ವಾಸ್ತವದಲ್ಲಿ ಇವನ್ನು ಸ್ವಯಂ ಪ್ರೋಕ್ರೇಟ್ಸ್ ಬರೆಯಲಿಲ್ಲ. ಕ್ರಿ.ಶ.420-ಕ್ರಿ.ಶ.370ರ ನಡುವೆ, ಆತನ ಹಲವು ಶಿಷ್ಯರು ಹಾಗೂ ಅನುಯಾಯಿಗಳು ಅವನ ಅಭಿಮತವನ್ನು ವಿವಿಧ ಗ್ರಂಥಗಳಲ್ಲಿ ದಾಖಲಿಸಿದರು.
ಪ್ರೋಕ್ರೇಟ್ಸ್ ಪ್ರತಿಜ್ಞೆಯಲ್ಲಿರುವ ಎಲ್ಲ ವಿಽಗಳನ್ನು ಸ್ವಯಂ ಪ್ರೋಕ್ರೇಟ್ಸ್ ಬರೆದ ಎನ್ನಲು ಕಷ್ಟ. ಅವು ಹಲವರಿಂದ ಪರಿಷ್ಕಾರಗೊಂಡಿದೆ. ಈ ಪರಿಷ್ಕಾರವು ಎಷ್ಟರ ಮಟ್ಟಿಗೆ ನಡೆದಿದೆ ಎಂದರೆ ಮೂಲವನ್ನು ಒಮ್ಮೆ ನೋಡಬೇಕಾಗುತ್ತದೆ. ಮೂಲ ಪ್ರೋಕ್ರೇಟ್ಸ್ ಪ್ರತಿeಯ ಭಾವಾರ್ಥವನ್ನು ಈ ಕೆಳಕಂಡಂತೆ ಸಂಗ್ರಹಿಸಬಹುದು.
ನಾನು ನನ್ನ ಸಾಮರ್ಥ್ಯ ಮತ್ತು ತಿಳಿವಳಿಕೆಗೆ ಅನುಗುಣವಾಗಿ, ಅಪೋಲೊ, ಆಸ್ಕ್ಲೆಪಿಯಸ್, ಹೈಜಿಯ, ಪನೇಶಿಯ ಮತ್ತು ಎಲ್ಲ ದೇವರು ಹಾಗೂ ದೇವತೆಗಳನ್ನು
ಸಾಕ್ಷಿಯೆಂದು ಪರಿಗಣಿಸಿ ಈ ಪ್ರತಿಜ್ಞೆಯನ್ನು ಹಾಗೂ ಒಪ್ಪಂದವನ್ನು ಕೈಗೊಳ್ಳುತ್ತಿದ್ದೇನೆ.
ಈ ಕಲೆಯಲ್ಲಿ ತೊಡಗುವ ನಾನು ನನ್ನ ಅಧ್ಯಾಪಕರನ್ನು ನನ್ನ ಹೆತ್ತವರಂತೆ ಪರಿಗಣಿಸುವೆ; ನನ್ನ ಬದುಕಿನಲ್ಲಿ ಅವರನ್ನು ಸಹಭಾಗಿಯನ್ನಾಗಿ ಸ್ವೀಕರಿಸುವೆ; ಅವರಿಗೆ ಅಗತ್ಯವಿದ್ದಾಗ ನನ್ನ ಹಣವನ್ನು ಹಂಚಿಕೊಳ್ಳುವೆ; ಅವರ ಕುಟುಂಬವನ್ನು ನನ್ನ ಕುಟುಂಬದಂತೆ, ಅವರ ಮಕ್ಕಳನ್ನು ಸ್ವಂತ ಸೋದರರಂತೆ ಭಾವಿಸುವೆ; ಅವರು(ಅಧ್ಯಾಪಕರ ಮಕ್ಕಳು) ಈ ಕಲೆಯನ್ನು ಕರಗತ ಮಾಡಿಕೊಳ್ಳಲು ಬಯಸಿದರೆ, ಯಾವುದೇ ರೀತಿಯ ಶುಲ್ಕವನ್ನು ಅಥವಾ ಒಪ್ಪಂದವನ್ನು ಮಾಡಿಕೊಳ್ಳದೆ ಕಲಿಸುವೆ; ನನ್ನ ಮಕ್ಕಳಿಗೆ, ನನ್ನ ಗುರುಗಳ ಮಕ್ಕಳಿಗೆ ಹಾಗೂ ನನ್ನ ಹಾಗೆ ಈ ಪ್ರತಿಜ್ಞೆಯನ್ನು ಸ್ವೀಕರಿಸಿದ ವಿದ್ಯಾರ್ಥಿಗಳಿಗೆ ಈ ಕಲೆಯನ್ನು ಹೇಳಿಕೊಡುವೆ; ಇತರೆ ಯಾರಿಗೂ ಹೇಳುವುದಿಲ್ಲ.
ನನ್ನ ತಿಳಿವಳಿಕೆ ಹಾಗೂ ಸಾಮರ್ಥ್ಯಕ್ಕೆ ಅನುಗುಣವಾಗಿ, ರೋಗಿಗೆ ಹಿತವಾಗುವಂತಹ ಆಹಾರ ಪಥ್ಯವನ್ನು ವಿಧಿಸುವೆ; ಅವರಿಗೆ ನಾನು ಅಪಾಯವನ್ನು ಉಂಟು ಮಾಡುವುದಿಲ್ಲ, ಅನ್ಯಾಯವನ್ನು ಮಾಡುವುದಿಲ್ಲ. ವಿಷಪ್ರಾಶನವನ್ನು ಮಾಡಿಸುವಂತೆ ಯಾರಾದರೂ ಒತ್ತಡ ಹಾಕಿದರೂ, ನಾನು ವಿಷವನ್ನು ನೀಡುವುದಿಲ್ಲ ಹಾಗೂ ಅಂತಹ ಮಾರ್ಗೋಪಾಯಗಳನ್ನು ಸೂಚಿಸುವುದಿಲ್ಲ; ಹಾಗೆಯೇ ಗರ್ಭಸ್ರಾವವಾಗಲೆಂದು ಮಳೆಯರಿಗೆ ಪೆಸ್ಸರಿ (ಔಷಧ) ಯನ್ನು ನೀಡುವುದಿಲ್ಲ; ನಾನು ನನ್ನ ಬದುಕು ಮತ್ತು ನನ್ನ ಕಲೆಯನ್ನು ಪರಿಶುದ್ಧವಾಗಿ ಇಟ್ಟುಕೊಳ್ಳುತ್ತೇನೆ.
ಮೂತ್ರಪಿಂಡ ಕಲ್ಲುಗಳ ನೋನಿಂದ ನರಳುವವರ ಮೇಲೆ ಶಸ್ತ್ರಪ್ರಯೋಗವನ್ನು ಮಾಡುವುದಿಲ್ಲ; ಬದಲಿಗೆ ಆ ಕುಶಲತೆಯನ್ನು ಬಲ್ಲವರ ಬಳಿ ಕಳಿಹಿಸುವೆ.
ನಾನು ಯಾವುದೇ ಮನೆಯನ್ನು ಪ್ರವೇಶಿಸಿದಾಗ, ಅಲ್ಲಿರುವ ರೋಗಿಗಳಿಗೆ ಚಿಕಿತ್ಸೆಯನ್ನು ಮಾತ್ರ ನೀಡುವೆ; ಪ್ರಜ್ಞಾಪೂರ್ವಕವಾಗಿ ಯಾವುದೇ ಅಪಾಯ ಅಥವಾ
ಅನ್ಯಾಯವನ್ನು ಮಾಡುವುದಿಲ್ಲ; ಅದರಲ್ಲಿಯೂ ಪುರುಷ ಮತ್ತು ಸ್ತ್ರೀಯರ ಶರೀರವನ್ನು, ಅವರು ಮುಕ್ತರಾಗಿರಲಿ ಅಥವಾ ದಾಸ್ಯದಲ್ಲಿರಲಿ, ದುರುಪಯೋಗ ಪಡಿಸಿ ಕೊಳ್ಳುವುದಿಲ್ಲ. ನನ್ನ ವೃತ್ತಿಯಲ್ಲಿ ನಾನು ನೋಡಬಹುದಾದ ಅಥವಾ ಕೇಳಬಹುದಾದ ಅಥವಾ ನನ್ನ ವೃತ್ತಿಯಿಂದ ಹೊರಗಿನ ಮಾತುಕತೆಯಲ್ಲಿ ನಾನು ತಿಳಿಯ ಬಹುದಾದ ವಿಚಾರಗಳನ್ನು ಯಾರೊಡನೆಯೂ ಹಂಚಿಕೊಳ್ಳುವುದಿಲ್ಲ; ಅವನ್ನು ದೈವರಹಸ್ಯಗಳಂತೆ ಕಾಪಾಡಿಕೊಳ್ಳುವೆ.
ನಾನು ಈ ವಿಧಿಗಳಿಗೆ ಭಂಗ ಬರದಂತೆ ಕ್ರಮ ಬದ್ಧವಾಗಿ ಪಾಲಿಸಿದ್ದೇ ಆದಲ್ಲಿ, ನನ್ನ ಕಲೆಯ ಬಗ್ಗೆ ಈ ಸಮಾಜದಲ್ಲಿ ಹಾಗೂ ನನ್ನ ಜೀವನದಲ್ಲಿ ಒಳ್ಳೆಯ ಹೆಸರು ಬರಲಿ. ಈ ವಿಧಿಗಳಿಗೆ ಭಂಗವನ್ನು ಉಂಟು ಮಾಡಿದರೆ, ಇದಕ್ಕೆ ವಿರುದ್ಧವಾದ ಪರಿಣಾಮವಾಗಲಿ. ಪ್ರೋಕ್ರೇಟ್ಸ್ ರಚಿಸಿದ ಎನ್ನಲಾದ ಈ ಮೂಲ ಪ್ರತಿeಯು ಇಂದು ಬಹುಪಾಲು ಬದಲಾಗಿದೆ. ಈಗ ಯಾರೂ ಗ್ರೀಕ್ ದೇವಾನುದೇವತೆಗಳನ್ನು ಸ್ಮರಿಸುವುದಿಲ್ಲ. ವೈದ್ಯಕೀಯ ಶಿಕ್ಷಣವನ್ನು ನೀಡುವ ಅಧ್ಯಾಪಕರನ್ನು ಹೆತ್ತವರಂತೆ ಕಾಣುವುದಿಲ್ಲ. ವೈದ್ಯರು ತಾವು ದುಡಿದ ಹಣವನ್ನು ತಮ್ಮ ಅಧ್ಯಾಪಕರೊಂದಿಗೆ ಹಂಚಿಕೊಳ್ಳುವ ಅಥವಾ ಕಷ್ಟ ಕಾಲದಲ್ಲಿ ಅವರಿಗೆ ನೆರವಾಗುವ ಪದ್ಧತಿಯು ಬಹುಶಃ ಗ್ರೀಕರ ಕಾಲಕ್ಕೆ ಮುಗಿದು ಹೋಯಿತೆನಿಸುತ್ತದೆ. ವೈದ್ಯಕೀಯ ಶಿಕ್ಷಣವನ್ನು ನೀಡಿದ ಅಧ್ಯಾಪಕರ ಮಕ್ಕಳು, ವೈದ್ಯರಾಗಲು ಬಯಸಿದರೆ, ಅವರು ವೈದ್ಯಕೀಯ ವಿದ್ಯಾಲಯವನ್ನು ಸೇರಬೇಕಾಗುತ್ತದೆ.
ಗರ್ಭಪಾತವು ಇಂದು ಕಾನೂನು ಬದ್ಧವಾಗಿದೆ. ವೈದ್ಯರು ಶಸ್ತ್ರಚಿಕಿತ್ಸೆಗಳನ್ನು ಮಾಡಬಹುದಾಗಿದೆ. ಆದರೆ ವೈದ್ಯಕೀಯ ಜ್ಞಾನವನ್ನು ದುರುಪಯೋಗ ಪಡಿಸಿ ಕೊಳ್ಳುವ ಇಲ್ಲವೇ ರೋಗಿಗಳು ಖಾಸಗಿ ವಿಷಯಗಳನ್ನು ಬಹಿರಂಗಪಡಿಸುವ ಅಥವಾ ರೋಗಿಗಳನ್ನು ಲೈಂಗಿಕವಾಗಿ ದುರುಪಯೋಗ ಪಡಿಸಿಕೊಳ್ಳುವ ಬಗ್ಗೆ ಅಂದು ಇದ್ದಂತಹ ನೀತಿ ಇಂದೂ ಇದೆ. ಈ ಹಿನ್ನೆಲೆಯಲ್ಲಿ ಪ್ರೋಕ್ರೇಟ್ಸ್‌ನ ಮೂಲ ಆಶಯವನ್ನು ಮನಸ್ಸಿನಲ್ಲಿ ಇಟ್ಟುಕೊಂಡು, ಪ್ರತಿಯೊಂದು ದೇಶವು ತನ್ನದೇ
ವೈದ್ಯರ ಪ್ರತಿeಯನ್ನು ರೂಪಿಸಿವೆ. ಆದರೆ ಎಲ್ಲ ನಮೂನೆಯ ಪ್ರತಿಜ್ಞೆಗಳಲ್ಲಿ ಪ್ರೋಕ್ರೇಟ್ಸ್‌ನ ಆಶಯಗಳು ಇದ್ದೇ ಇರುತ್ತವೆ.
ಭಾರತೀಯ ವೈದ್ಯಕೀಯ ಮಂಡಳಿಯು ಪ್ರೋಕ್ರೇಟ್ಸ್ ಪ್ರತಿಜ್ಞೆಯನ್ನು ನೀತಿ ಸಂಹಿತೆ (ಕೋಡ್ ಆಫ್ ಎಥಿಕ್ಸ್) ಎನ್ನುವ ಹೆಸರಿನಲ್ಲಿ ಸ್ವೀಕರಿಸಿದೆ. (ಭಾರತೀಯ ವೈದ್ಯಕೀಯ ಮಂಡಳಿಯ ಅಧಿನಿಯಮ, 1956) ಎಂ.ಬಿ.ಬಿ.ಎಸ್ ಪದಯನ್ನು ಪಡೆದ ಪ್ರತಿಯೊಬ್ಬರು, ತಮ್ಮ ವೃತ್ತಿಯನ್ನು ಆರಂಭಿಸುವ ಮೊದಲು, ತಮ್ಮ ವಿವರಗಳನ್ನು ಮಂಡಳಿಗೆ ನೀಡಿ, ಅಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ನೋಂದಾವಣೆಯನ್ನು ನೀಡುವ ಸಮಯದಲ್ಲಿ ಅವರು ವೈದ್ಯಕೀಯ ನೀತಿ ಸಂಹಿತೆಯನ್ನು ಪರಿಪಾಲಿಸುವುದಾಗ ಪ್ರತಿಜ್ಞೆಯನ್ನು ಸ್ವೀಕರಿಸಬೇಕಾಗುತ್ತದೆ. 6 ಏಪ್ರಿಲ್, 2002 ರಂದು ವಿಸ್ತೃತ ವೈದ್ಯಕೀಯ ನೀತಿ ಸಂತೆಯನ್ನು ಪ್ರಕಟಿಸಿದೆ. ಆಧುನಿಕ ವೈದ್ಯಕೀಯದಲ್ಲಿ ಪದವಿಯನ್ನು ಪಡೆದು, ವೃತ್ತಿ ನಿರತನಾಗಿರುವ ಪ್ರತಿಯೊಬ್ಬ ವೈದ್ಯನು ಈ ನೀತಿ ಸಂತೆಗೆ ಬದ್ಧನಾಗಿರಬೇಕಾಗುತ್ತದೆ.
ನೀತಿ ಸಂಹಿತೆ
೧.ನಾನು ನನ್ನ ಬದುಕನ್ನು ಮಾನವಕುಲದ ಸೇವೆಗಾಗಿ ಮೀಸಲಿಡುವೆನು ಎಂದು ಘೋಸುತ್ತಿದ್ದೇನೆ.
೨.ನನಗೆ ಜೀವ ಬೆದರಿಕೆಯಿದ್ದಾಗಲೂ, ನನ್ನ ವೈದ್ಯಕೀಯ ಜ್ಞಾನವನ್ನು ಮಾನವೀಯತೆಯ ನಿಯಮಗಳಿಗೆ ವಿರುದ್ಧವಾಗಿ ಬಳಸಲಾರೆ.
೩.ಗರ್ಭಕಟ್ಟಿದ ಸಮಯದಿಂದಲೂ ನಾನು ಮನುಷ್ಯನ ಜೀವವನ್ನು ಗೌರವಿಸುತ್ತೇನೆ.
೪.ರೋಗಿಯ ಧರ್ಮ, ರಾಷ್ಟ್ರೀಯತೆ, ಜನಾಂಗ, ಪಕ್ಷ, ರಾಜಕೀಯ ಪಕ್ಷಗಳ ಸಾಮಾಜಿಕ ನಿಲುವುಗಳು ನನ್ನ ಕರ್ತವ್ಯ ಮತ್ತು ನನ್ನ ರೋಗಿಯ ನಡುವೆ ಅಡ್ಡಬಾರದಂತೆ ನೋಡಿಕೊಳ್ಳುತ್ತೇನೆ.
೫.ನಾನು ನನ್ನ ವೃತ್ತಿಯನ್ನು ಘನತೆ ಮತ್ತು ಆತ್ಮಸಾಕ್ಷಿಯೊಡನೆ ಪರಿಪಾಲಿಸುತ್ತೇನೆ.
೬.ನನ್ನ ರೋಗಿಗಳ ಆರೋಗ್ಯವು ನನ್ನ ಆದ್ಯತೆಯಾಗಿರುತ್ತದೆ.
೭.ರೋಗಿಯ ನನ್ನೊಡನೆ ಹಂಚಿಕೊಂಡಿರುವ ಗುಟ್ಟುಗಳನ್ನು ಕಾಪಾಡುತ್ತೇನೆ.
೮.ನಾನು ನನ್ನ ಗುರುಗಳಿಗೆ ಸಲ್ಲಬೇಕಾದ ಗೌರವ ಮತ್ತು ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
೯.ನನ್ನ ಸಾಮರ್ಥ್ಯದ ಎಲ್ಲ ಮಿತಿಯಲ್ಲಿ ವೈದ್ಯಕೀಯ ವೃತ್ತಿಯ ಉದಾತ್ತ ಸಂಪ್ರದಾಯಗಳನ್ನು ಹಾಗೂ ಗೌರವವನ್ನು ಕಾಪಾಡುತ್ತೇನೆ.
೧೦.ನಾನು ನನ್ನ ಸಹೋದ್ಯೋಗಿಗಳನ್ನು ಗೌರವ ಹಾಗೂ ಘನತೆಯಿಂದ ನಡೆಸಿಕೊಳ್ಳುತ್ತೇನೆ.
೧೧.ನಾನು ಭಾರತೀಯ ವೈದ್ಯಕೀಯ ಮಂಡಳಿ (ವೃತ್ತಿಪರ ನಡವಳಿಕೆ, ಶಿಷ್ಟಾಚಾರ ಮತ್ತು ನೀತಿ) ನಿಯಮಗಳು, 2002 ರಲ್ಲಿರುವ ಪ್ರಸ್ತಾಪವಾಗಿರುವ ಎಲ್ಲ ವೈದ್ಯಕೀಯ ನೀತಿ ಸಂಹಿತೆಗೆ ಬದ್ಧನಾಗಿರುತ್ತೇನೆ.
೧೨.ನಾನು ಮುಕ್ತವಾಗಿ ಹಾಗೂ ಗಂಭೀರವಾಗಿ, ನನ್ನ ಘನತೆಯ ಮೇಲೆ, ಈ ಎಲ್ಲ ಭರವಸೆಗಳನ್ನು ನೀಡುತ್ತಿದ್ದೇನೆ.