ಚರ್ಚಾ ವೇದಿಕೆ
ರಮಾನಂದ ಶರ್ಮಾ
‘ನಮ್ಮದು ಶಿಸ್ತಿನ ಪಕ್ಷ, ವರಿಷ್ಠರೇ ಎಲ್ಲವನ್ನೂ ನಿಭಾಯಿಸುತ್ತಾರೆ. ಅವರಿಗೆ ಸಮಸ್ಯೆಗಳ ಬಗ್ಗೆ ಅರಿವಿದೆ’ ಎಂದು ಹೇಳುತ್ತಿದ್ದ ಬಿಜೆಪಿಯವ ರಲ್ಲೇ ಅಯೋಮಯ ಸ್ಥಿತಿ ರೂಪುಗೊಂಡಿದೆ. ಟಿಕೆಟ್ ತಪ್ಪಿಸಿಕೊಂಡ ಕೆಲವರಿಂದ ಹೊಮ್ಮಿರುವ ಹತಾಶೆ, ಪಕ್ಷದ ‘ಪ್ರಭಾವಿ’ಗಳನ್ನು ತಿವಿಯುವ ಆಕ್ರೋಶದ ನುಡಿಗಳು ಇದಕ್ಕೆ ಸಾಕ್ಷಿ. ಬಿಜೆಪಿಯ ಇತಿಹಾಸದಲ್ಲಿ ಇಂಥ ಬೆಳವಣಿಗೆ ಬಹುಶಃ ಇದೇ ಮೊದಲ ಬಾರಿ ಏನೋ?
‘ಬೆಳಗಾದರೆ ಅಳಿಯನ ಮೋರೆ ಕಾಣುತ್ತದೆ’ ಎನ್ನುವುದು ಹಳೆಯ ಗಾದೆಮಾತು. ಈ ಮಾತು ಇವತ್ತಿನ ರಾಜಕೀಯ ಪರಿಸರದಲ್ಲಿ ಸಮರ್ಥವಾಗಿಯೇ ಅನಾವರಣಗೊಳ್ಳುತ್ತಿದೆ ಎನ್ನಬೇಕು! ಕಾರಣ, ಇದುವರೆಗೂ ಕೇಳಿಬರುತ್ತಿದ್ದ ತತ್ವ, ಸಿದ್ಧಾಂತ, ಆದರ್ಶ, ನಿಷ್ಠೆ, ಸಂಸ್ಕಾರ ಮತ್ತು ಬದ್ಧತೆಗಳು ಒಂದೊಂ ದಾಗಿ ಪೊರೆ ಬಿಚ್ಚಿಕೊಂಡು ನಗ್ನವಾಗುತ್ತಿವೆ. ಕೆಲವೊಂದು ರಾಜಕಾರಣಿಗಳ ಮತ್ತು ರಾಜಕೀಯ ಪಕ್ಷಗಳ ನಿಜಬಣ್ಣ ಬಯಲಾಗುತ್ತಿದೆ. ಈವರೆಗೆ ಗುಪ್ತವಾಗಿದ್ದ ಸತ್ಯ ಹೊರಬರುತ್ತಿದೆ.
ಟಿಕೆಟ್ ಹಂಚಿಕೆಯ ಪ್ರಕ್ರಿಯೆಯಲ್ಲಿ ಅದು ತಮ್ಮ ಕೈತಪ್ಪುವ ಸುಳಿವು ಕಾಣುತ್ತಿದ್ದಂತೆ ಕೆಲವರಿಂದ ಅಪಸ್ವರಗಳು, ಅಡ್ಡರಾಗಗಳು ಕ್ಷೀಣ ದನಿಯಲ್ಲಿ ಹೊಮ್ಮಿದ್ದನ್ನು ಜನರು ಈಗಾಗಲೇ ಕಂಡಿದ್ದಾರೆ. ಈ ಪ್ರಕ್ರಿಯೆ ಸಂಪನ್ನಗೊಂಡು, ಹೊಂದಾಣಿಕೆ ಮತ್ತು ರಾಜಿ ಸಂಧಾನದ ಬಾಗಿಲುಗಳು ಮುಚ್ಚಿದ ನಂತರ, ಘಟಸೋಟಗಳು, ಪಕ್ಷಾಂತರಗಳು, ನಿಷ್ಠೆಯ ಬದಲಾವಣೆಗಳು ಮತ್ತು ಆಕ್ರೋಶಗಳ ಮೆರವಣಿಗೆಯನ್ನೂ ಜನರು ಕಾಣಬಹುದು. ಇದರಲ್ಲಿ
ಅಚ್ಚರಿಪಡುವಂಥದ್ದೇನೂ ಇಲ್ಲ; ನಮ್ಮ ದೇಶದ ಚುನಾವಣಾ ಇತಿಹಾಸದ ಪುಟಗಳನ್ನೊಮ್ಮೆ ತೆರೆದು ನೋಡಿದರೆ, ಇಂಥ ಸಾಕಷ್ಟು ದೃಷ್ಟಾಂತಗಳು ಸಿಗುತ್ತವೆ.
‘ನಮ್ಮದು ಶಿಸ್ತಿನ ಪಕ್ಷ, ವರಿಷ್ಠರೇ ಎಲ್ಲವನ್ನೂ ನಿಭಾಯಿಸುತ್ತಾರೆ. ಅವರಿಗೆ ಸಮಸ್ಯೆಗಳ ಮತ್ತು ಟಿಕೆಟ್ ಆಕಾಂಕ್ಷಿಗಳ ಬಗ್ಗೆ ಅರಿವಿದೆ’ ಎಂದು ಹೇಳುತ್ತಿದ್ದ ಬಿಜೆಪಿಯಲ್ಲೇ ಎಲ್ಲವೂ ಅಯೋಮಯವಾಗಿದೆ. ಅಭ್ಯರ್ಥಿಗಳ ಪಟ್ಟಿ ಪ್ರಕಟವಾದ ನಂತರ, ಟಿಕೆಟ್ ತಪ್ಪಿಸಿಕೊಂಡ ಕೆಲವರಿಂದ ಹೊಮ್ಮಿರುವ ಹತಾಶೆ,
ಪಕ್ಷದ ‘ಪ್ರಭಾವಿ’ಗಳನ್ನು ತಿವಿಯುವ ಆಕ್ರೋಶದ ನುಡಿಗಳು ಇದಕ್ಕೆ ಸಾಕ್ಷಿ. ಬಿಜೆಪಿಯ ಇತಿಹಾಸದಲ್ಲಿ ಇಂಥ ಬೆಳವಣಿಗೆ ಬಹುಶಃ ಇದೇ ಮೊದಲ ಬಾರಿ ಏನೋ? ವರಿಷ್ಠರು ನೀಡಿದ್ದನ್ನು ಕಿಂಚಿತ್ತೂ ಪ್ರಶ್ನಿಸದೆ ಒಪ್ಪಿ, ಅದನ್ನು ಕಾರ್ಯಗತಗೊಳಿಸುವ ಪರಿಪಾಠವನ್ನು ಉಳಿಸಿ ಬೆಳೆಸಿಕೊಂಡಿದ್ದ ಈ ಪಕ್ಷದಲ್ಲಿನ ಇಂಥ ಬೆಳವಣಿಗೆಯು ರಾಜಕೀಯ ವಿಶ್ಲೇಷಕರನ್ನು ದಂಗುಬಡಿಸಿದೆ. ಈ ಮಧ್ಯೆ ವರಿಷ್ಠರು ಪ್ರತ್ಯೇಕವಾಗಿ ಮಾಡಿಸಿಕೊಂಡ ಸಮೀಕ್ಷೆ, ರಾಜ್ಯಘಟಕಗಳು ಸಿದ್ಧಪಡಿಸಿವೆ ಮತ್ತು ಸ್ವತಂತ್ರ ಸಂಸ್ಥೆಗಳು ಮಾಡಿವೆ ಎನ್ನಲಾದ ಸಮೀಕ್ಷೆಗಳ ವರದಿಗಳು ಅಲ್ಲಲ್ಲಿ ಸೋರಿಕೆಯಾಗುತ್ತಿದ್ದು, ಇವುಗಳ ಮೇಲಾಟದಲ್ಲಿ ಹಲವು ಟಿಕೆಟ್ ಆಕಾಂಕ್ಷಿಗಳ ರಕ್ತದೊತ್ತಡ ಏರಿಳಿಯುತ್ತಿದೆ.
ಇದು ಸಾಲದೆಂಬಂತೆ, ಕೆಲವು ಸುದ್ದಿ ವಾಹಿನಿಗಳು ಮತ್ತು ರಾಜಕೀಯ ವಿಶ್ಲೇಷಕರು ತಮ್ಮದೇ ಶೈಲಿಯಲ್ಲಿ ಹಾಕುತ್ತಿರುವ ಒಗ್ಗರಣೆಗಳು ಕೆಲವರಿಗೆ ಮನರಂಜನೆ ಒದಗಿಸಿದರೆ, ಇನ್ನು ಕೆಲವರಿಗೆ ಷಾಕ್ ನೀಡುತ್ತಿವೆ. ಕಾರಣ, ಅಭ್ಯರ್ಥಿಗಳ ಆಯ್ಕೆ ಈ ಮಟ್ಟಕ್ಕೆ ಗೊಂದಲಕಾರಿಯಾಗಿರುತ್ತದೆ ಮತ್ತು
ಗಜಪ್ರಸವದಂತೆ ಇರುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ಮುನ್ನೆಲೆಗೆ ಬರುವ ತಿಂಗಳುಗಳ ಮೊದಲೇ, ‘ಈ ಬಾರಿ ಟಿಕೆಟ್ ಆಕಾಂಕ್ಷಿಗಳ ವಯಸ್ಸು, ಆರೋಗ್ಯ, ಸಾಧನೆ, ಸುದೀರ್ಘ ಸದಸ್ಯತ್ವವನ್ನು ಆಧರಿಸಿ ಮತ್ತು ಸಂಬಂಧಪಟ್ಟ ಮತದಾರರ ಅಭಿಪ್ರಾಯದ ಮೇರೆಗೆ ಸುಮಾರು ೧೨ ಹಾಲಿ ಸಂಸದರಿಗೆ ಕೊಕ್ ಸಿಗುವ ಸಂಭವವಿದೆ’ ಎಂಬ ವದಂತಿಗಳು ಹರಿದಾಡುತ್ತಿದ್ದವು.
ಇತ್ತೀಚಿನ ಬೆಳವಣಿಗೆ ಯನ್ನು ನೋಡಿದರೆ, ಈ ವದಂತಿಗಳು ವಾಸ್ತವದ ಅಡಿಗಲ್ಲಿನ ಮೇಲೆ ನಿಂತಿದ್ದವು ಎಂಬುದು ಅರಿವಾಗುತ್ತದೆ. ಕೆಲವರು ಸ್ಪರ್ಧೆ ಯಿಂದ ಹಿಂದೆ ಸರಿಯಬಹುದು ಎನ್ನುವ ಊಹಾಪೋಹಗಳೂ ನಿಜವಾಗುತ್ತಿವೆ. ೨೦೧೪ರಿಂದ ಆವರಿಸಿರುವ ಮೋದಿ ಅಲೆಯು ಆಗೊಮ್ಮೆ ಈಗೊಮ್ಮೆ ಸ್ವಲ್ಪ ಏರುಪೇರು ಕಂಡಿದ್ದರೂ, ಅದು ಅಬಾಽತವಾಗಿರುವುದು ಸೂರ್ಯ-ಚಂದ್ರರಷ್ಟೇ ಸತ್ಯ. ಅಯೋಧ್ಯೆಯಲ್ಲಿ ಶ್ರೀರಾಮಮಂದಿರದ ಲೋಕಾರ್ಪಣೆ ಯಾದ ನಂತರ, ಮೋದಿ ಮತ್ತು ಬಿಜೆಪಿಯ ಜನಪ್ರಿಯತೆಯ ಗ್ರಾಫ್ ಸಾಕಷ್ಟು ಏರಿದ್ದು, ಈಗ ಪೌರತ್ವ ತಿದ್ದುಪಡಿ ಕಾಯ್ದೆಯ ಅನುಷ್ಠಾನದ ನಂತರ ಅದರ ಭರವಸೆ ಇಮ್ಮಡಿಸಿದೆ. ಹಾಗೆಯೇ, ಮೋದಿಗೆ ಪರ್ಯಾಯವಾಗಬಹುದೇನೋ ಎಂಬ ಆಸಕ್ತಿ ಕೆರಳಿಸಿದ್ದ ವಿಪಕ್ಷಗಳ ‘ಇಂಡಿಯ’ ಒಕ್ಕೂಟ ದಿನದಿಂದ ದಿನಕ್ಕೆ ಕುಸಿಯುತ್ತ ‘ಸಿಂಗಲ್ ಡಿಜಿಟ್’ನತ್ತ ಸಾಗಿದೆ.
ಮೋದಿ ಅಲೆಯಲ್ಲಿ ಸುಲಭವಾಗಿ ತೇಲಿಕೊಂಡು ಸಂಸತ್ ಭವನ ಸೇರಬಹುದು ಎಂಬ ಗ್ರಹಿಕೆ ಬಿಜೆಪಿಯವರಲ್ಲಿ ದಟ್ಟವಾಗಿರುವುದರಿಂದ, ನೂಕು ನುಗ್ಗಲು ಸಾಮಾನ್ಯ. ಆದರೆ ಶಿಸ್ತಿನ ಪಕ್ಷದಲ್ಲಿ ತಲೆದೋರಿರುವ ಅಶಿಸ್ತು ಸಣ್ಣ ಮಟ್ಟಿಗಿನ ಆತಂಕ ಅಥವಾ ಗೊಂದಲವನ್ನು ಹುಟ್ಟಿಸುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಒಂದೆರಡು ಉದಾಹರಣೆ ನೀಡುವುದಾದರೆ, ಮೈಸೂರಿನಲ್ಲಿ ಹಾಲಿ ಸಂಸದ ಪ್ರತಾಪ್ ಸಿಂಹರನ್ನು ಪಕ್ಕಕ್ಕೆ ಸರಿಸಿ ರಾಜವಂಶಜ ಯದುವೀರರಿಗೆ ಟಿಕೆಟ್ ನೀಡಿರುವು ದರಿಂದ, ಸಿಂಹರ ಅಭಿಮಾನಿಗಳು ಮತ್ತು ಕಾರ್ಯಕರ್ತರ ವಲಯದಲ್ಲಿ ಒಂದು ಮಟ್ಟದ ಗೊಂದಲ, ಅಸಮಾಧಾನ ಮತ್ತು ಆಕ್ರೋಶ ಕಾಣಬರುತ್ತಿದೆ. ಪಕ್ಷ ಘೋಷಿಸಿರುವ ಅಭ್ಯರ್ಥಿಯ ಪರವಾಗಿ ತಾವು ಕೆಲಸ ಮಾಡುವುದಾಗಿ ಈ ವಲಯ ಹೇಳಿಕೊಂಡಿದೆ ಯಾದರೂ, ಮೈಸೂರು ಕ್ಷೇತ್ರದ ಅಭ್ಯರ್ಥಿಯ ವಿಷಯದಲ್ಲಿ ಬಿಜೆಪಿ ಎಡವಿತೇ ಎಂಬ ಅಭಿಪ್ರಾಯ ಬಹುತೇಕರಲ್ಲಿ ಮೂಡಿರುವುದು ಖರೆ.
ಇನ್ನು, ಹಾವೇರಿಯಲ್ಲಿ ತಮ್ಮ ಮಗನಿಗೆ ಟಿಕೆಟ್ ನಿರೀಕ್ಷಿಸಿದ್ದ ಬಿಜೆಪಿಯ ಹಿರಿಯ ನಾಯಕ ಈಶ್ವರಪ್ಪನವರು, ಅದು ನೇರವೇರದಿರುವ ಕಾರಣ ಸಹಜ ವಾಗಿಯೇ ‘ಗರಂ’ ಆಗಿದ್ದಾರೆ. ಜತೆಗೆ ಶಿವಮೊಗ್ಗ ಕ್ಷೇತ್ರದಲ್ಲಿ ಅವರು ‘ಬಂಡಾಯದ ಬಾವುಟ’ ಹಾರಿಸುವ ಸಾಧ್ಯತೆಯೂ ಕಾಣುತ್ತಿದೆ. ಹಾಗೆಯೇ ದಾವಣಗೆರೆಯಲ್ಲಿ ರೇಣುಕಾಚಾರ್ಯರ ಕನಸು ಭಗ್ನವಾಗಿದ್ದು, ಅವರ ಮುಂದಿನ ನಡೆಯನ್ನು ಕುತೂಹಲದಿಂದ ನೋಡುವಂತಾಗಿದೆ. ಹೇಳುತ್ತ ಹೋದರೆ ಇಂಥ ಸಾಕಷ್ಟು ಉದಾಹರಣೆಗಳು ಸಿಕ್ಕಾವು. ಪಕ್ಷದ ಟಿಕೆಟ್ ಗಿಟ್ಟಿಸುವಲ್ಲಿ ವಿ-ಲರಾದ ಆಕಾಂಕ್ಷಿಗಳು, ‘ಯಾರೇ ನಮ್ಮ ಪಕ್ಷದ ಅಭ್ಯರ್ಥಿ ಯಾಗಲಿ, ಅವರ ಪರವಾಗಿ ನಾವು ಕೆಲಸ ಮಾಡುತ್ತೇವೆ ಹಾಗೂ ಮೋದಿಯವರು ಇನ್ನೊಮ್ಮೆ ದೇಶದ ಪ್ರಧಾನಿಯಾಗುವುದನ್ನು ನೋಡುತ್ತೇವೆ’ ಎಂಬ ಹೇಳಿಕೆ ನೀಡಿ ತೇಪೆ ಹಚ್ಚುವುದು ವಾಡಿಕೆಯಾಗಿದೆ.
ಆದರೆ, ಹೀಗೆ ಅವಕಾಶ ಕಳೆದುಕೊಂಡವರು ತಮ್ಮ ಹೇಳಿಕೆಗೆ ಬದ್ಧರಾಗಿ ಉಳಿಯುತ್ತಾರೆಯೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ! ಒಂದೊಮ್ಮೆ ಅವರು ನೋವು ನುಂಗಿಕೊಂಡು ಸುಮ್ಮನಿರಲು ಬಯಸಿದರೂ, ಅವರ ಹಿಂಬಾಲಕರು ಹಾಗೆ ಸುಮ್ಮನೆ ಕೂರಲು ಬಿಡುತ್ತಾರೆಯೇ? ಪರಿಣಾಮವಾಗಿ, ಟಿಕೆಟ್ ಮಿಸ್ ಮಾಡಿಕೊಂಡವರಲ್ಲಿ ಕೆಲವರು ಸ್ವತಂತ್ರರಾಗಿ ಅಖಾಡಕ್ಕಿಳಿಯಬಹುದು ಅಥವಾ ಎದುರಾಳಿ ಪಕ್ಷವನ್ನು ಸೇರಿಕೊಂಡು ಸ್ಪರ್ಧಿಸಬಹುದು (ಅಥವಾ ಗುಪ್ತವಾಗಿ ಅವರೊಂದಿಗೆ ಕೈಜೋಡಿಸಬಹುದು!). ಮತ್ತೆ ಕೆಲವೊಂದು ನಿಷ್ಠಾವಂತರು ವರಿಷ್ಠರ ಆಣತಿಯಂತೆ ಪಕ್ಷಕ್ಕಾಗಿ ದುಡಿಯಲು ಸಂಕಲ್ಪಿಸಿ ‘ಅಚ್ಛೇ ದಿನ್’ಗಾಗಿ ಕಾಯಬಹುದು ಎಂಬ ಸಾಧ್ಯತೆಗಳನ್ನೂ ತಳ್ಳಿಹಾಕಲಾಗದು. ಆದರೆ ಅಸಮಾಧಾನದ ಹೊಗೆಯಂತೂ ಆಡುತ್ತಿರುತ್ತದೆ!
ಹೀಗೆ ಬಿಜೆಪಿಯದ್ದು ’mಟಚ್ಝಿಛಿಞ ಟ್ಛ mಛ್ಞಿಠಿqs’ ಆಗಿದ್ದರೆ, ಕಾಂಗ್ರೆಸ್ ಪಕ್ಷದ್ದು ’mಟಚ್ಝಿಛಿಞ ಟ್ಛ ಛಿಞmಠಿqs’ ಎನ್ನುವಂಥ ಪರಿಸ್ಥಿತಿ. ಇಂಥ ಲೇವಡಿಗೆ ಕಾರಣ, ‘ರಾಜ್ಯ ಕಾಂಗ್ರೆಸ್ ಸರಕಾರದ ಕನಿಷ್ಠ ೧೦ ಮಂತ್ರಿಗಳಾದರೂ ಈ ಬಾರಿಯ ಲೋಕಸಭಾ ಚುನಾವಣಾ ಕಣಕ್ಕೆ ಧುಮುಕಬೇಕು’ ಎಂಬ ಹೈಕ ಮಾಂಡಿನ ಕಟ್ಟಪ್ಪಣೆಯನ್ನು ಯಾರೊಬ್ಬರೂ ಕಿವಿಗೆ ಹಾಕಿಕೊಂಡಂತಿಲ್ಲ. ಈ ಪೈಕಿ ಒಬ್ಬರಂತೂ, ಇದರ ಸಹವಾಸ ನನಗೂ ಬೇಡ, ನನ್ನ ಪರಿವಾರಕ್ಕೂ ಬೇಡ ಎಂದು ಹೇಳಿಬಿಟ್ಟಿದ್ದಾರಂತೆ! ರಾಜಕೀಯ ವಿಶ್ಲೇಷಕರು ಈ ಚಿತ್ತಸ್ಥಿತಿಯನ್ನು ಅ ಚಿಜ್ಟಿb ಜ್ಞಿ eZb ಜಿo ಡಿಟ್ಟಠಿe ಠಿಡಿಟ ಜ್ಞಿ ಚ್ಠಿoe ಎಂಬ ಗ್ರಹಿಕೆಗೆ ಹೋಲಿಸಿದ್ದಾರೆ.
ಅದು ಸಹಜವೇ. ಸಂಸದರ ಸ್ಥಾನಕ್ಕಾಗಿ ಆಸೆ ಪಟ್ಟು, ಈಗಾಗಲೇ ದಕ್ಕಿರುವ ಮಂತ್ರಿ ಪದವಿಯನ್ನು ಯಾರಾದರೂ ಕೈಬಿಡುವುದುಂಟೇ? ಅಕಸ್ಮಾತ್ ಸಂಸದರಾಗಿ ಆಯ್ಕೆಯಾಗದಿದ್ದರೆ, ತಾವು ಹೀಗೆ ಬಿಟ್ಟುಕೊಟ್ಟ ಮಂತ್ರಿಗಿರಿ ಮರಳಿ ಸಿಗುತ್ತದೆ ಎಂಬ ‘ಗ್ಯಾರಂಟಿ’(!) ಇಲ್ಲದಿರುವಾಗ ಅವರು ಇಂಥ ರಿಸ್ಕ್ ಅನ್ನು ತೆಗೆದುಕೊಳ್ಳುವುದುಂಟೇ? ರಾಜ್ಯ ಕಾಂಗ್ರೆಸಿಗರಲ್ಲಿ ಹಲವರು ರಾಜಕಾರಣದಲ್ಲಿ ಸಾಕಷ್ಟು ಮಣ್ಣು ಹೊತ್ತವರೇ ಆಗಿರುವುದರಿಂದ, ಚುನಾವಣಾ ಫಲಿತಾಂಶದ ದೃಷ್ಟಿಯಲ್ಲಿನ ‘ಗೋಡೆಯ ಮೇಲಿನ ಬರಹವನ್ನು’ ಈಗಾಗಲೇ ಓದಿಕೊಂಡಿರಲಿಕ್ಕೂ ಸಾಕು!
ಹೀಗಾಗಿ, ಗಾಳಿ ಬೀಸುವ ದಿಕ್ಕನ್ನು ಚೆನ್ನಾಗಿ ಅರಿತಿರುವ ಅವರು ಇಂಥ ನಿಲುವನ್ನು ತಳೆದಿರಬೇಕು ಎಂಬ ಅಭಿಪ್ರಾಯದಲ್ಲಿ ಅರ್ಥವಿಲ್ಲದಿಲ್ಲ. ಚುನಾ ವಣಾ ಫಲಿತಾಂಶದ ಸಮೀಕ್ಷೆಯನ್ನು ಕರಾರುವಾಕ್ಕಾಗಿ ನಡೆಸುವ ಸಂಸ್ಥೆಯೊಂದರ ವರದಿ ಅವರನ್ನು ಎಚ್ಚರಿಸಿರಬೇಕು ಎನ್ನುವ ಮಾತು ಕೇಳಿಬರು ತ್ತಿದೆ. ಹಾಗೆಯೇ ರಾಷ್ಟ್ರೀಯ ಸುದ್ದಿವಾಹಿನಿಗಳಲ್ಲಿ ಬಿತ್ತರಗೊಳ್ಳುತ್ತಿರುವ ಇಂಥ ಅನೇಕ ಸಮೀಕ್ಷೆಗಳೂ ಅವರನ್ನು ಜಾಗೃತರನ್ನಾಗಿ ಮಾಡಿರಬೇಕು ಎನ್ನಲಾಗುತ್ತಿದೆ. ಹೀಗಾಗಿ ಕಾಂಗ್ರೆಸ್ ಪಾಳಯದಲ್ಲಿ ಟಿಕೆಟ್‌ಗಾಗಿ ಪ್ರಯತ್ನಗಳು ನಡೆಯುತ್ತಿದ್ದರೂ, ಅದು ಬಿಜೆಪಿಗೆ ಹೋಲಿಸುವಷ್ಟು ತೀವ್ರ ಪ್ರಮಾಣ ದಲ್ಲಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಅವುಗಳದ್ದೇ ಆದ ತಳಮಳ ಮತ್ತು ಅಯೋಮಯ ಸ್ಥಿತಿಗಳು ಕಾಣುತ್ತಿವೆ. ಉಭಯ ಪಕ್ಷಗಳಲ್ಲಿನ ಒಬ್ಬೊಬ್ಬರೇ ರಾಜಕಾರಣಿಗಳ ಬಣ್ಣ ಬಯಲಾಗುತ್ತಿದೆ ಹಾಗೂ ಅವರ ಪಕ್ಷ ನಿಷ್ಠೆ, ತತ್ವ-ಸಿದ್ಧಾಂತಗಳ ಆಳ ಮತ್ತು ಅಗಲಗಳು ಜನರ ಮುಂದೆ ಅನಾವರಣಗೊಳ್ಳುತ್ತಿದೆ ಎಂಬುದಂತೂ ದಿಟ.
(ಲೇಖಕರು ಅರ್ಥಿಕ ಮತ್ತು ರಾಜಕೀಯ ವಿಶ್ಲೇಷಕರು)