ವೀಕೆಂಡ್ ವಿತ್ ಮೋಹನ್
camohanbn@gmail.com
ಅಣ್ಣಾ ಹಜಾರೆಯವರ ಭ್ರಷ್ಟಾಚಾರದ ವಿರುದ್ಧದ ಆಂದೋಲನದಲ್ಲಿ ಮುನ್ನೆಲೆಗೆ ಬಂದ ಕೇಜ್ರಿವಾಲ್ ಪಕ್ಷದ, ಭ್ರಷ್ಟ ನೇತಾರರ ಪಟ್ಟಿ ದೊಡ್ಡದಾ ಗಿದೆ. ಕೇಜ್ರಿವಾಲ್ ಸರಕಾರದಲ್ಲಿ ಅರೋಗ್ಯ ಸಚಿವನಾಗಿದ್ದ ಸತ್ಯೇಂದ್ರ ಜೈನ್ ಮನೆಯಲ್ಲಿ ಕೋಟ್ಯಂತರ ರುಪಾಯಿ ನಗದು ಸಿಕ್ಕಿತು.
ಕಾಂಗ್ರೆಸ್ ಅವಧಿಯಲ್ಲಿ ನಡೆದ ಹಗರಣಗಳ ವಿರುದ್ಧ ‘ಅಣ್ಣಾ ಹಜಾರೆ’ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ಸತ್ಯಾಗ್ರಹದ ವೇದಿಕೆಯ ಮುಂಭಾಗ ದಲ್ಲಿ ಒಣಕಲು ಕಡ್ಡಿಯ ದೇಹವೊಂದು ಕುಳಿತಿತ್ತು. ತಾನೊಬ್ಬ ನಿವೃತ್ತ ಆದಾಯ ತೆರಿಗೆ ಅಧಿಕಾರಿ ಯಾಗಿದ್ದು ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆಯವರು ನಡೆಸುತ್ತಿರುವ ಆಂದೋಲನದ ಪರವಾಗಿ ಕುಳಿತಿರುವೆ ನೆಂದು ಹೇಳಿಕೊಂಡಿತು. ನಂತರ ‘ಆಮ್ ಆದ್ಮಿ ಪಕ್ಷ’ವೆಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿದ ಅದೇ ವ್ಯಕ್ತಿಯ ಹೆಸರು ಅರವಿಂದ್ ಕೇಜ್ರಿವಾಲ್. ಅಣ್ಣಾ ಹಜಾರೆ ಹೋರಾಟವನ್ನು ಹೈಜಾಕ್ ಮಾಡಿದ ಕೇಜ್ರಿವಾಲ್ ಥೇಟ್ ಕಮ್ಯು ನಿಸ್ಟರ ಮಾದರಿ ರಾಜಕಾರಣ ಮಾಡಿಕೊಂಡು ಬರುತ್ತಿzರೆ.
ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ಸುಮಾರು 30 ವರ್ಷ ಅಧಿಕಾರ ಅನುಭವಿಸಿದ್ದ ಕಮ್ಯುನಿಸ್ಟರು, ರಾಜ್ಯದ ಖಜಾನೆಯನ್ನು ಬರಿದುಗೊಳಿಸಿ ಬಂಗಾಳವನ್ನು ಅಧೋಗತಿಗೆ ತಳ್ಳಿದ್ದರು. ಸಾಲ ಮಾಡಿ ತುಪ್ಪ ತಿನ್ನಿಸುವ ಕಲೆ ಇವರಿಗೆ ಕರಗತವಾದದ್ದು. ಪರಿಣಾಮ ಬಂಗಾಳದಲ್ಲಿ ಸಂಪತ್ತನ್ನು ಸೃಷ್ಟಿ ಮಾಡುವ ಬಂಡವಾಳ ಹರಿದು ಬರಲೇ ಇಲ್ಲ. ನೂತನ ಕಂಪನಿಗಳು ಬಂಗಾಳಕ್ಕೆ ಬರಲು ಹೆದರಿದವು. ಇಂದಿಗೂ ಕೋಲ್ಕತಾ ನಗರದ ಸಾರ್ವಜನಿಕ ಸಾರಿಗೆಯಲ್ಲಿ ಓಡಾಡುವಾಗ ಮೂಗು ಮುಚ್ಚಿಕೊಳ್ಳುವ ಪರಿಸ್ಥಿತಿಯಿದೆ.
ಇವರದ್ದೇ ದಾರಿಯಲ್ಲಿ ಸಾಗುತ್ತಿರುವ ಅರವಿಂದ್ ಕೇಜ್ರಿವಾಲ್, ದೆಹಲಿ ಖಜಾನೆ ಬರಿದು ಮಾಡಿದ್ದಾಯಿತು. ಈಗ ಪಂಜಾಬಿನ ಸರಣಿ. ದೆಹಲಿಯ ಬಹುತೇಕ ಮತದಾರರು ವಲಸಿಗರು. ಪಂಜಾಬ, ಹರಿಯಾಣ, ಉತ್ತರ ಪ್ರದೇಶ, ಬಿಹಾರ್, ರಾಜಸ್ಥಾನ್ ರಾಜ್ಯಗಳಿಂದ ಕೆಲಸ ಅರಸಿಕೊಂಡು ಬಂದು ಜೀವನ ಕಟ್ಟಿಕೊಳ್ಳುತ್ತಿರುವವರು. ಸಾಮಾನ್ಯವಾಗಿ ವಲಸಿಗರಿಗೆ ತಮ್ಮ ನಿತ್ಯ ಜೀವನಕ್ಕೆ ಬೇಕಿರುವ ಸವಲತ್ತುಗಳನ್ನು ಉಚಿತವಾಗಿ ನೀಡುವ ಪಕ್ಷಕ್ಕೆ ಮತ ಹಾಕುತ್ತಾರೆ.
ದೆಹಲಿಯಲ್ಲಿ ಸರಕಾರ ನಡೆಸುವುದು ಹಾಗೂ ಬೆಂಗಳೂರಿನ ಮಹಾನಗರ ಪಾಲಿಕೆ ನಡೆಸುವುದು ಎರಡೂ ಒಂದೇ.
ದೆಹಲಿಯ ಸರಕಾರ ರೈತರ ಸಮಸ್ಯೆಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ. ಹಳ್ಳಿಗಳ ಅಭಿವೃದ್ಧಿ, ನೀರಾವರಿ ಸಮಸ್ಯೆಗಳ ಪರಿಹಾರ ಅವರಿಗೆ ಬೇಕಿಲ್ಲ. ಕಳೆದ ವರ್ಷದ ದೆಹಲಿಯ ಆಯವ್ಯಯದಲ್ಲಿ ಕೇಜ್ರಿವಾಲ್ ಸರಕಾರ ಹೆಚ್ಚುವರಿ ಆದಾಯ ತೋರಿಸಿದ್ದಾಗಿ ಜನರ ಕಣ್ಣಿಗೆ ಮಂಕು ಬೂದಿ ಎರಚುವ ಕೆಲಸ ಮಾಡಿತ್ತು.
ನಿಜಾಂಶವೆಂದರೆ ದೆಹಲಿಯ ಪೊಲೀಸ್ ಇಲಾಖೆ ನೇರವಾಗಿ ಕೇಂದ್ರ ಗೃಹ ಸಚಿವಾಲಯದಡಿಯಲ್ಲಿರುವುದರಿಂದ ಇಲಾಖೆಯ
ಸಂಪೂರ್ಣ ಖರ್ಚನ್ನು ಕೇಂದ್ರ ಸರಕಾರವೇ ನೋಡಿ ಕೊಳ್ಳುತ್ತದೆ. 2022ರ ಕೇಂದ್ರ ಆಯವ್ಯಯದಲ್ಲಿ ಸುಮಾರು 10355 ಕೋಟಿ ರು.ಗಳಷ್ಟು ಹಣವನ್ನು ನಿರ್ಮಲಾ ಸೀತಾರಾಮನ್ ದೆಹಲಿ ಪೊಲೀಸ್ ಇಲಾಖೆಗಾಗಿಯೇ ಮೀಸಲಿಟ್ಟಿದ್ದರು. ಇದರ ಜತೆಗೆ ದೆಹಲಿಯಲ್ಲಿನ ನಿವೃತ್ತ ಸರಕಾರಿ ನೌಕರರ ವೇತನಗಳ ಸಂಪೂರ್ಣ ಜವಾಬ್ದಾರಿ ಕೇಂದ್ರ ಸರಕಾರದ್ದು. ಹೀಗೆ ಪ್ರತೀ ವರ್ಷ ಈ ಮಟ್ಟದ ಹಣ ಉಳಿತಾಯವಾದರೂ, ಕೇಜ್ರಿವಾಲ್ ಸರಕಾರ ಸಾಲ ಮಾಡಿ ತನ್ನ ಆಯವ್ಯಯದಲ್ಲಿ ಹೆಚ್ಚುವರಿ ಹಣ ವನ್ನು ತೋರಿಸಿದ್ದಾರೆ.
ಎಲ್ಲಾ ನಾಲ್ಕು ಸರಕಾರಿ ಶಾಲೆಗಳನ್ನು ಉನ್ನತ ದರ್ಜೆಗೇರಿಸಿ, ಹಲವು ಶಾಲೆಗಳನ್ನು ಶೆಡ್ಡುಗಳಲ್ಲಿ ನಡೆಸಿ, ದೆಹಲಿಯ ಶಿಕ್ಷಣ ವ್ಯವಸ್ಥೆಯನ್ನೇ ಬದಲಾವಣೆ ಮಾಡಿದ್ದೇವೆಂದು ಹೇಳಿಕೊಂಡು ತಿರುಗುವ ಕೇಜ್ರಿವಾಲ್, ಬೋರ್ಡ್ ಪರೀಕ್ಷೆಗಳಲ್ಲಿ ದೆಹಲಿಯ ಶಾಲೆಗಳ ಕಳಪೆ ಫಲಿತಾಂಶದ ಬಗ್ಗೆ ತುಟಿ ಬಿಚ್ಚುವುದಿಲ್ಲ. ತನ್ನ ಸರಕಾರದ ಅವಧಿಯಲ್ಲಿ ನಿರ್ಮಿಸಿರುವ ಆಸ್ಪತ್ರೆಗಳ ಬಗ್ಗೆ ಉದ್ದುದ್ದದ ಸುಳ್ಳು ಹೇಳುವ ಕೇಜ್ರಿವಾಲ್, ಕೋವಿಡ್ ಅನ್ನು ನಿಭಾಯಿಸದ ರಾಜ್ಯಗಳ ಪಟ್ಟಿಯಲ್ಲಿ ದೆಹಲಿಯೂ ಒಂದೆಂಬುದನ್ನು ಜನತೆಗೆ ತಿಳಿಸಬೇಕು.
2019ರಲ್ಲಿ ದೇಶದ ಅತೀ ಹೆಚ್ಚು ಅಪಘಾತವಾಗುವ ರಾಜ್ಯಗಳ ಪೈಕಿಯಲ್ಲಿ ದೆಹಲಿ ನಂಬರ್ ಒನ್ ಸ್ಥಾನದಲ್ಲಿತ್ತು. ಅಧಿಕಾರಕ್ಕೆ ಬಂದು ಹತ್ತು ವರ್ಷ ಕಳೆದರೂ ದೆಹಲಿಯ ವಾಯು ಮಾಲಿನ್ಯ ಸಮಸ್ಯೆಯನ್ನು ಬಗೆಹರಿಸಲಿ ಕ್ಕಾಗಲಿಲ್ಲ. ಪಕ್ಕದ ಪಂಜಾಬಿನಲ್ಲಿ ತನ್ನದೇ ಸರಕಾರ ಇದ್ದರೂ, ಅಲ್ಲಿನ ರೈತರು ಬೆಳೆಗಳನ್ನು ಸುಡುವುದೇ ದೆಹಲಿಯಲ್ಲಿನ ಮಾಲಿನ್ಯಕ್ಕೆ ಮುಖ್ಯಕಾರಣವೆಂದು ತಿಳಿದಿದ್ದರೂ, ಅವರ ಮೇಲೆ ನಿಯಂತ್ರಣ ಹೇರಲು ಸಾಧ್ಯವಾಗುತ್ತಿಲ್ಲ. ತಾನು ಅಧಿಕಾರಕ್ಕೆ ಬಂದರೆ ಯಮುನಾ ನದಿಯನ್ನು ಸಂಪೂರ್ಣ ಸ್ವಚ್ಛಗೊಳಿಸುವುದಾಗಿ ಘೋಷಿಸಿದ್ದ ಕೇಜ್ರಿವಾಲ್, ಹತ್ತು ವರ್ಷವಾದರೂ ಕಿಂಚಿತ್ತು ಸ್ವಚ್ಛತೆಯನ್ನೂ ಮಾಡಿಲ್ಲ.
ಯಮುನಾ ನದಿಯಲ್ಲಿ ಒಮ್ಮೆ ಮುಳುಗಿ ಎದ್ದರೆ ಚರ್ಮ ರೋಗಗಳ ಅವಾಹನೆಯಾಗುವುದು ಪಕ್ಕಾ. ದೆಹಲಿ ಕೈಗಾರಿಕೆಗಳಿಂದ ಹರಿದು ಬರುವ ಅಪಾಯಕಾರಿ ರಾಸಾಯನಿಕಗಳು ಯಮುನಾ ನದಿಯಲ್ಲಿ ‘ನೊರೆ ಬೆಟ್ಟ’ಗಳನ್ನೇ ಸೃಷ್ಟಿಸುತ್ತವೆ. ಇನ್ನು ಸುಮಾರು 380000 ಕೋಟಿ ರು.ಮೊತ್ತ ದಾಟಿರುವ ಪಂಜಾಬಿನ ಸಾಲವನ್ನು ಮತ್ತಷ್ಟು ಹೆಚ್ಚಿಸುವತ್ತ ಕೇಜ್ರಿ ಸರಕಾರ
ದಾಪುಗಾಲಿಟ್ಟಿದೆ. ಅಲ್ಲಿಯೂ ಉಚಿತ ಯೋಜನೆಗಳ ಭರವಸೆಯ ಮಹಾಪೂರವನ್ನೇ ನೀಡಿದ ಕೇಜ್ರಿ ಪಕ್ಷ, ಅಧಿಕಾರಕ್ಕೆ ಬಂದ ಮೇಲೆ ಸರಕಾರಿ ನೌಕರರಿಗೆ ಸರಿಯಾದ ಸಮಯದಲ್ಲಿ ಸಂಬಳ ಕೊಡಲು ಪರದಾಡುತ್ತಿದೆ.
ಪಂಜಾಬಿನ ರೈತರಿಗೆ ಸರಿಯಾದ ಸಮಯದಲ್ಲಿ ಪರಿಹಾರ ನೀಡಲು ಪರದಾಡುತ್ತಿರುವ ರಾಜ್ಯ ಸರಕಾರದ ವಿರುದ್ಧ, ಅಲ್ಲಿನ ವಕೀಲರು ನ್ಯಾಯಾಲಯದಲ್ಲಿ ದಾವೆ ಹೂಡಲು ತಯಾರಾಗಿzರೆ. ಇಲ್ಲಸಲ್ಲದ ಭರವಸೆಗಳನ್ನು ನೀಡಿ ಮತದಾರರನ್ನು ಖರೀದಿ ಮಾಡಿ, ನಂತರ ಖಾಲಿಯಾದ ತಿಜೋರಿಯಿಂದ ಭರವಸೆಗಳನ್ನು ಈಡೇರಿಸಲಾಗದೆ ಪ್ರತಿನಿತ್ಯ ಅಲ್ಲಿನ ಸರಕಾರ
ಹೆಣಗಾಡುತ್ತಿದೆ.
ಅಣ್ಣಾ ಹಜಾರೆಯವರ ಭ್ರಷ್ಟಾಚಾರದ ವಿರುದ್ಧದ ಆಂದೋಲನದಲ್ಲಿ ಮುನ್ನೆಲೆಗೆ ಬಂದ ಕೇಜ್ರಿವಾಲ್ ಪಕ್ಷದ, ಭ್ರಷ್ಟ ನೇತಾರರ ಪಟ್ಟಿ ದೊಡ್ಡದಾಗಿದೆ. ಕೇಜ್ರಿವಾಲ್ ಸರಕಾರದಲ್ಲಿ ಅರೋಗ್ಯ ಸಚಿವನಾಗಿದ್ದ ಸತ್ಯೇಂದ್ರ ಜೈನ್ ಮನೆಯಲ್ಲಿ ಕೋಟ್ಯಂತರ ರುಪಾಯಿ ನಗದು ಸಿಕ್ಕಿತ್ತು. ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ಈತ, ಜೈಲಿನ ಐಷಾರಾಮಿ ಜೀವನಕ್ಕೆ 10 ಕೋಟಿ ಹಣ ನೀಡಲು ಸಿದ್ಧನಿದ್ದನೆಂಬ ಮತ್ತೊಂದು ಆಘಾತಕಾರಿ ಅಂಶ ಕಳೆದ ವಾರ ಬೆಳಕಿಗೆ ಬಂದಿದೆ.
ಮುಸಲ್ಮಾನರನ್ನು ಎತ್ತಿಕಟ್ಟಿ ನೂರಾರು ಕೋಟಿಯ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಗೆ ಕಾರಣವಾಗಿದ್ದ, ದೆಹಲಿಯ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಡೆದ ಹಿಂಸಾಚಾರದ ಮಾಸ್ಟರ್ ಮೈಂಡ್ ಕೇಜ್ರಿವಾಲ್ ಪಕ್ಷದ ಕಾರ್ಪೊರೇಟರ್ ತಾಹಿರ್ ಹುಸೇನ್, ನೊಯಿಡಾದಲ್ಲಿ ನಡೆದ ಮತ್ತೊಂದು ದೊಡ್ಡ ಹಿಂಸಾಚಾರದ ಮಾಸ್ಟರ್ ಮೈಂಡ್, ಕಾರ್ಪೊರೇಟರ್ ನಿಶಾ ಸಿಂಗ್‌ಗೆ ನ್ಯಾಯಾಲಯ ಏಳು ವರ್ಷ ಕಾರಾಗೃಹ ಶಿಕ್ಷೆಯನ್ನು ವಿಧಿಸಿದೆ.
ಕೇಜ್ರಿವಾಲ್ ಸರಕಾರದ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ದೊಡ್ಡ ಲಿಕ್ಕರ್ ಹಗರಣದಲ್ಲಿ ಸಿಕ್ಕಿಹಾಕಿಕೊಂಡಿzರೆ.
ಇನ್ನು ಪಂಜಾಬಿನ ಆಪ್ ಶಾಸಕರ ಭ್ರಷ್ಟಾಚಾರದ ಪಟ್ಟಿ ಸಣ್ಣದೇನಲ್ಲ. ಪಂಜಾಬಿನ ವೈದ್ಯಕೀಯ ಸಚಿವ ವಿಜಯ್ ಸಿಂಗ್‌ರನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಲಂಚ ಪಡೆಯುವಾಗಲೇ ಬಂಧಿಸಿದ್ದಾರೆ. ಅತ್ತ ಪಟಿಯಾಲ ಶಾಸಕ ಬಲಬೀರ್ ಸಿಂಗ್‌ಗೆ ಸ್ಥಳೀಯ ನ್ಯಾಯಾಲಯ, ಕೌಟುಂಬಿಕ ಹಯ ಪ್ರಕರಣದಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಅರ್ಧಕ್ಕೂ ಹೆಚ್ಚಿನ ಆಪ್ ಶಾಸಕರ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ.
ಬಹಿರಂಗವಾಗಿ ‘ಖಲಿಸ್ತಾನಿ’ ಪ್ರತ್ಯೇಕತಾವಾದಿಗಳಿಗೆ ಪಕ್ಷ ಬೆಂಬಲ ನೀಡಿದೆ. ಕಮ್ಯುನಿಸ್ಟರು ಇದೇ ಮಾದರಿಯಲ್ಲಿ ದೇಶ ವಿರೋಽ ಸಂಘಟನೆಗಳನ್ನು ಪೋಷಿಸಿದ್ದರು. ನಕ್ಸಲರನ್ನು ಪೋಷಿಸಿ ಹಲವು ರಾಜ್ಯಗಳ ಭದ್ರತೆಗೆ ಸಂಚಕಾರ ತಂದಿದ್ದರು. ತಮ್ಮದು ಬಡವರ ಪಕ್ಷವೆಂದು ಹೇಳುವ ಆಪ್ ಪಂಜಾಬಿನ ರಾಜ್ಯಸಭಾ ಸದಸ್ಯರ ಆಸ್ತಿಯ ಮೊತ್ತದ ಬಗ್ಗೆ ತಿಳಿಯಲೇ ಬೇಕು. ಖ್ಯಾತ ಕ್ರಿಕೆಟಿಗ ಹರ್ಭಜನ್ ಸಿಂಗ್ ಸುಮಾರು 60 ಕೋಟಿ ರು.ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ.
ಅಶೋಕ್ ಮಿತ್ತಲ ಸುಮಾರು 800 ಕೋಟಿಯ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ಮತ್ತೊಬ್ಬ ಸದಸ್ಯ ಸಂಜೀವ್ ಅರೋರಾ ಸುಮಾರು 433 ಕೋಟಿ ರು. ಮೊತ್ತದ ಆಸ್ತಿ ಘೋಷಿಸಿಕೊಂಡಿದ್ದಾರೆ. ತಾನು ಮಾಡುವ ಸಣ್ಣ ಕೆಲಸವನ್ನು ದೊಡ್ಡದಾಗಿ ಬಿಂಬಿಸಲು ಕೇಜ್ರಿವಾಲ್ ಪಕ್ಷ, ಜಾಹೀರಾತಿಗೆ ನೀಡುವ ಹಣ ನಿರೀಕ್ಷೆಗೆ ಮೀರಿದ್ದು. ಆಮ್ ಆದ್ಮಿ ಪಕ್ಷದ ಜಾಹೀರಾತಿನ ಖರ್ಚು ಶೇ.4800 ಪಟ್ಟು ಹೆಚ್ಚಾಗಿದೆ.
ದೆಹಲಿಯ ಒಟ್ಟಾರೆ ಜನಸಂಖ್ಯೆ ಮೂರೂ ಕೋಟಿ ಇಪ್ಪತ್ತೊಂದು ಲಕ್ಷದಷ್ಟಿದೆ. ಅಲ್ಲಿನ ಜಾಹೀರಾತಿಗೆ ಕೇಜ್ರಿವಾಲ್ ಪಕ್ಷ 2021-22 ರಲ್ಲಿ ವ್ಯಯಿಸಿರುವ ಹಣ ಸುಮಾರು 489 ಕೋಟಿ ರುಪಾಯಿ. ಅತ್ತ ಕಡೆ ಭಾರತದ ಜನಸಂಖ್ಯೆ 140 ಕೋಟಿ ಮುಟ್ಟಿದ್ದರೂ ಕೇಂದ್ರ ಸರಕಾರ ಜಾಹೀರಾತಿಗೆ ವ್ಯಯಿಸುತ್ತಿರುವ ಹಣ 280 ಕೋಟಿ ಮಾತ್ರ.
ಬಿಎಂಟಿಸಿ ನೌಕರರ ಪ್ರತಿಭಟನೆ ಯನ್ನು ಹಿಂಪಡೆಯುವುದಕ್ಕೆ 35 ಕೋಟಿ ರು. ಬೇಡಿಕೆಯಿಟ್ಟಿದ್ದ ಡೋಂಗಿ ರೈತನಾಯಕ ಕೋಡಿಹಳ್ಳಿ ಚಂದ್ರಶೇಖರ್ ಕರ್ನಾಟಕದಲ್ಲಿ ಆಪ್ ಸೇರ್ಪಡೆಯಾಗಿದ್ದ. ಭಾಸ್ಕರ್ ರಾವ್ ಆಪ್ ಸೇರಿದ ಮೇಲೆ ಮಾತು ಮಾತಿಗೂ ಬುಟ್ಟಿಯಿಂದ ಹಾವು ಬಿಡುತ್ತೇನೆಂದು ಪುಂಗಿ ಬಿಡುವುದರಲ್ಲಿಯೇ ನಿರತರಾಗಿದ್ದಾರೆ. ಮಾಧ್ಯಮಗಳಲ್ಲಿ ಕಾಂಗ್ರೆಸ್ ಪಕ್ಷದ ಸುಳ್ಳುಗಳಿಂದಲೇ ಸೌದ ಕಟ್ಟುತ್ತಿದ್ದ ಬ್ರಿಜೇಶ್ ಕಾಳಪ್ಪನನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ.
ದೇಶಪ್ರೇಮ, ಭಾರತದ ಸಾರ್ವಭೌಮತ್ವ, ಹಿಂದೂ ಧರ್ಮದ ಆಚರಣೆಗಳ ವಿಚಾರದಲ್ಲಿ ಇಂದಿಗೂ ಸ್ಪಷ್ಟತೆ ನೀಡದ ಪಕ್ಷ ಆಮ್ ಆದ್ಮಿ ಪಕ್ಷ. ದೆಹಲಿಯಲ್ಲಿ ಪಟಾಕಿ ಬಳಕೆಗೆ ನಿಷೇಧ ಹೇರುವ ಕೇಜ್ರಿವಾಲ್, ಪಂಜಾಬಿನಲ್ಲಿ ನಿಷೇಧ ಹೇರುವುದಿಲ್ಲ. ಹಿಂದುಗಳನ್ನು ಓಲೈಸುವ ಸಲುವಾಗಿ ರಾತ್ರೋರಾತ್ರಿ ನೋಟುಗಳ ಮೇಲೆ ಲಕ್ಷಿ ಚಿತ್ರಗಳನ್ನು ಮುದ್ರಿಸಬೇಕೆಂಬ ಚುನಾವಣಾ ಗಿಮಿಕ್ ಹೇಳಿಕೆ ಬರುತ್ತದೆ. ಆದರೆ ರಾಮಮಂದಿರದ ವಿಚಾರವಾಗಿ ಹೆಚ್ಚು ಮಾತನಾಡಲಿಲ್ಲ. ಮುಸಲ್ಮಾನರ ಓಲೈಕೆಯ ಪರವಾಗಿ ನಿಲ್ಲಲು, ಹಿಜಾಬ್ ವಿಚಾರವಾಗಿ ಬಂದಂತಹ ನ್ಯಾಯಾಲಯದ ತೀರ್ಪುಗಳ ಬಗ್ಗೆ ತುಟಿ ಬಿಚ್ಚುವುದಿಲ್ಲ.
ದೇಶ, ಭಾಷೆ, ಅಸ್ಮಿತೆ, ಇತಿಹಾಸ, ಧರ್ಮದ ವಿಚಾರವಾಗಿ ಎಲ್ಲಿಯೂ ಧ್ವನಿಯೆತ್ತದ ಕೇಜ್ರಿವಾಲ್ ಪಕ್ಷ ಕಮ್ಯುನಿಸ್ಟರ
ಮತ್ತೊಂದು ಅವತಾರವಷ್ಟೇ, ಇಬ್ಬರ ಕಥೆ ಒಂದೇ ಆದರೆ ನಾಯಕ ಮತ್ತು ಸಮಯ ಮಾತ್ರ ಬೇರೆಯಷ್ಟೆ.