Wednesday, 11th December 2024

ಕಾಂಗ್ರೆಸ್ ಚಿತ್ತ ಹಿಂದೂಮುಕ್ತ ಕಾಂಗ್ರೆಸ್ ನತ್ತ !

ಹಂಪಿ ಎಕ್ಸ್’ಪ್ರೆಸ್

1336hampiexpress1509@gmail.com

ಹಿಂದೆ ಸೋಮಾರಿಯೊಬ್ಬ ಊರಿನ ಸಿನಿಮಾ ಟೆಂಟಿನಲ್ಲಿ ಮಾರ್ನಿಂಗ್ ಷೋ ಮಲಯಾಳಂ ಸಿನಿಮಾ ನೋಡಿಕೊಂಡು
ಬಂದು ತನ್ನಂಥ ಪುಂಡರನ್ನು ಕೂರಿಸಿಕೊಂಡು ‘ಸೆಕ್ಸ್’ ಬಗ್ಗೆ ಉಪನ್ಯಾಸ ನೀಡಿದಂತಿತ್ತು ಈ ಸತೀಶ್ ಜಾರಕಿಹೊಳಿಯವರ ಭಾಷಣ!

‘ಹಿಂದೂ’ ಪದವನ್ನು ಅದ್ಯಾವ್ಯಾವ ‘ಪುಂಗವರು’ ಹೇಗೆಲ್ಲ ಅರ್ಥೈಸಿಕೊಂಡಿ ದ್ದಾರೋ ಅದೆಲ್ಲ ಅವರ ಕರ್ಮ. ಆದರೆ, ಸರ್ವೋಚ್ಚ ನ್ಯಾಯಾಲಯವು ‘ಹಿಂದುತ್ವ’ವನ್ನು ಕುರಿತು ‘”Hinduism is not a religion, it is actually a way of life’ ಎಂದು ವ್ಯಾಖ್ಯಾನಿಸಿದೆ. ಅಂದರೆ, ಹಿಂದುತ್ವ ಎಂಬುದು ಒಂದು ನಿರ್ದಿಷ್ಟ ಜನಾಂಗವನ್ನು ಸೂಚಿಸುವ ಪದವಲ್ಲ; ಅದೊಂದು ಜೀವನ ಪದ್ಧತಿ ಅಥವಾ ಜೀವನಶೈಲಿ.

ಹಾಗಾದರೆ ‘ಹಿಂದೂ’ ಅಂದರೆ ಏನು? ಇಸ್ಲಾಂ ಮತ್ತು ಕ್ರೈಸ್ತಧರ್ಮಗಳ ಹುಟ್ಟಿನ ಕಾಲಮಾನವನ್ನು ಆ ಧರ್ಮದ ಪಂಡಿತರು ದಾಖಲಿಸಿದ್ದಾರೆ. ಆದರೆ ಹಿಂದೂ ಧರ್ಮ ಯಾವಾಗ ಹುಟ್ಟಿತು ಎಂಬ ಪ್ರಶ್ನೆಗೆ ಸ್ಪಷ್ಟವಾದ ಉತ್ತರವೇ ಇಲ್ಲ. ಏಕೆಂದರೆ ಅದು ಕಾಲಾತೀತ. ಅರಬ್ಬಿ ಸಮುದ್ರದಲ್ಲಿ ನಿಂತವನು ‘ಇದು ನನ್ನ ಸಮುದ್ರ’ ಎಂದು ಹೆಮ್ಮೆಪಡುತ್ತಾನೆ. ಪ್ರಾವಿಡೆನ್ಷಿಯಲ್ಸ್ ದಡದಲ್ಲಿ ನಿಂತವನು ‘ನನ್ನ ಗ್ರೇಸ್ ಬೇ ಬೀಚ್ ಶ್ರೇಷ್ಠ’ ಎನ್ನುತ್ತಾನೆ.

ಆಸ್ಟ್ರೇಲಿಯಾದಲ್ಲಿ ನಿಂತವನು ‘ಟರ್ಕೊಯೀಸ್ ಬೀಚ್ ನನ್ನ ಹೆಮ್ಮೆ’ ಎನ್ನುತ್ತಾನೆ. ಹಾಗೆಯೇ ಬ್ರೆಜಿಲ್, ಇಟಲಿ, ಅರುಬಾ, ಕ್ಯೂಬಾ ದೇಶಗಳ ಕಡಲತೀರದಲ್ಲಿ ನಿಂತವರು ಅದು ತಂತಮ್ಮ ದೇಶದ ಸಮುದ್ರ ಎಂದು ಹೆಮ್ಮೆಪಡುತ್ತಾರೆ. ಅಂದರೆ ಅಂಥ ಒಟ್ಟಾರೆ ಸಮುದ್ರದ ಅಗಾಧತೆಯೇ ‘ಹಿಂದುತ್ವ’ ಅರ್ಥಾತ್ ‘ಸನಾತನ ಧರ್ಮ’ (ಸನಾತನ = ಪುರಾತನ ಅಥವಾ ಅತ್ಯಂತ
ಹಳೆಯ).

ಅಸಲಿಗೆ ನಮ್ಮಲ್ಲಿ ಈ ‘ಧರ್ಮ’ ಎಂಬ ಪದಕ್ಕೆ ‘ಮತ-ಕೋಮು-ಸಮುದಾಯ’ ಎಂಬ ಅರ್ಥವೇ ಇಲ್ಲ. ಶ್ರೀಕೃಷ್ಣ ಪರಮಾತ್ಮ
‘ಧರ್ಮೋ ರಕ್ಷತಿ ರಕ್ಷಿತಃ’ ಎಂದು ಸಾರಿದ್ದರಲ್ಲಿ ‘ಧರ್ಮ’ ಎಂಬುದು ಒಂದು ವ್ಯಕ್ತಿತ್ವ. ಅಂದರೆ ‘ಸತ್ಯ, ಪ್ರಾಮಾಣಿಕತೆ, ನ್ಯಾಯ ಬದ್ಧತೆ, ಸುಸಂಸ್ಕೃತಿ’ ಎಂಬ ಆಚಾರ-ವಿಚಾರವನ್ನು ಅದು ಪ್ರತಿನಿಧಿಸುತ್ತದೆ. ಅಂಥ ಧರ್ಮನಡೆಯನ್ನು ಕಾಪಾಡಿ ಕೊಂಡರೆ ಭಗವಂತ ನಮ್ಮನ್ನು ಕ್ಷಿಸುತ್ತಾನೆ ಎಂಬುದು ಇದರ ನೇರ ಅರ್ಥ. ಹೀಗಾಗಿ, ಸನಾತನ ಪರಂಪರೆ ಅಸ್ತಿತ್ವದಲ್ಲಿದ್ದಾಗ ಇಸ್ಲಾಂ, ಕ್ರೈಸ್ತ ಇನ್ನಿತರ ಯಾವುದೇ ಧರ್ಮಗಳ ಅಸ್ತಿತ್ವವೇ ಇಲ್ಲದಿದ್ದಾಗ ‘ಹಿಂದೂಧರ್ಮ’ ಎಂಬ ಪದವೇ ಅಸ್ತಿತ್ವದಲ್ಲಿರಲಿಲ್ಲ. ಉದಾಹರಣೆಗೆ, ಇರುವ ಮಗ ಒಬ್ಬನೇ ಆಗಿರುವಾಗ ಆತನಿಗೆ ಮತ್ತೊಬ್ಬರಿಂದ ಅಣ್ಣ, ತಮ್ಮ ಎಂಬ ರೂಢನಾಮದ ಪದವೇ ಅನ್ವಯಿಸದಂತೆ.

ನಾವು ಬಾಲ್ಯದಲ್ಲೇ ಓದಿಕೊಂಡಿರುವಂತೆ, ಸಿಂಧೂ ನದೀಮೂಲ ನಾಗರಿಕತೆಯವರಾದ ನಮ್ಮನ್ನು ಪಾಶ್ಚಿಮಾತ್ಯರು, ಪರ್ಷಿಯನ್ನರು ಸಿಂಧಿಗಳೆಂದು ಕರೆದರು. ಅದು ಮುಂದೆ ಉಚ್ಚಾರಣೆಯಲ್ಲಿ ‘ಸ’ಕಾರವು ‘ಹ’ಕಾರವಾಗಿ ಬದಲಾಗಿ, ‘ಸಿಂಧೂ’ ಪದವು ‘ಹಿಂದೂ’ ಪದವಾಗಿ ಆಡುಭಾಷೆಯಲ್ಲಿ ಬಳಕೆಯಾಯಿತು. ಉದಾಹರಣೆಗೆ ತಮಿಳರು ಈಗಲೂ ‘ಮಹಾಭಾರತ’,
‘ಮಹೇಶ’ ಮೊದಲಾದ ಪದಗಳಲ್ಲಿನ ‘ಹ’ಕಾರವನ್ನು ‘ಗ’ಕಾರವಾಗಿಸಿ ‘ಮಗಾಭಾರತ’, ‘ಮಗೇಶ’ ಎಂದು ಉಚ್ಚರಿಸುವು ದಿಲ್ಲವೇ, ಹಾಗೆ.

ಹೀಗೆ ‘ಸನಾತನ ಭಾರತೀಯರನ್ನು’ ಅವರ ಮೂಲಸ್ಥಳದ ಹೆಸರಿನೊಂದಿಗೆ ಹಿಂದೂಗಳು ಎಂದು ಪರ್ಷಿಯನ್ ಇರಾನಿಯರು ಗುರುತಿಸಲಾರಂಭಿಸಿದರು. ಹಳ್ಳಿಗಳಲ್ಲಿ ದೊಡ್ಡಗುಡಿ ಬೀದಿಯವರು, ಮೇಲಿನ ಬೀದಿಯವರು, ಕೆರೆ, ಬಾವಿ, ಕೇರಿ ಬೀದಿ
ಯವರು, ಕುರುಬರಹಳ್ಳಿ, ತಿಗಳರಪಾಳ್ಯ, ಕೋಣನಕುಂಟೆ, ಮಡಿವಾಳ, ಮಂಗನಹಳ್ಳಿ, ಕುಂಬಾರಕುಂಟೆ ಎಂದೆಲ್ಲ ಅಲ್ಲಿನ ವಿಶೇಷತೆ, ನಡವಳಿ, ಆಚರಣೆಯ ಆಧಾರದ ಮೇಲೆ ಗುರುತಿಸುವಂತೆ, ಸಿಂಧೂ ನದೀತೀರದ ಸನಾತನರನ್ನು ಗುರುತಿಸಲು
ನಿರ್ದಿಷ್ಟ ಪದಗಳಿಲ್ಲದೆ ‘ಹಿಂದೂ’ಗಳೆಂದು ಕರೆದವರು ಭಾರತೀಯರಲ್ಲದ ವಿದೇಶಿಗರೇ ಹೊರತು, ‘ಹಿಂದೂ’ ಪದವನ್ನು ಸನಾತನಿಗಳು ಸೃಷ್ಟಿಸಲಿಲ್ಲ.

ಮುಂದೆ ೮ನೇ ಶತಮಾನದ ತರುವಾಯ ಭಾರತೀಯರೂ ತಮ್ಮನ್ನು ‘ಹಿಂದೂ’ ಎಂದೇ ಹೇಳಿಕೊಳ್ಳಲಾರಂಭಿಸಿದರು. ವಿಜಯನಗರ ಸಾಮ್ರಾಜ್ಯದ ಸ್ಥಾಪಕರಲ್ಲಿ ಒಬ್ಬನಾದ ಬುಕ್ಕರಾಯನಿಗೆ ‘ಹಿಂದೂರಾಯ ಸುರತ್ರಾಣ’ (ಹಿಂದೂಗಳನ್ನು
ರಕ್ಷಿಸುವ ಅರಸ) ಬಿರುದನ್ನು ಅಂದಿನ ವಿದ್ವಾಂಸರು ನೀಡಿದ್ದು, ಮುಂದೆ ಶ್ರೀಕೃಷ್ಣದೇವರಾಯನೂ ಇದೇ ಬಿರುದನ್ನು ಅಲಂಕರಿಸಿದ.

ಹಿಂದೂಗಳ ಮಧ್ಯದಲ್ಲಿರುವ ಮುಸಲ್ಮಾನರನ್ನು ‘ಸಾಬಣ್ಣ’, ‘ಸಾಬರು’ ಎಂದು ಕರೆಯಲಾಗುತ್ತದೆಯಲ್ಲವೇ? ಆದರೆ ‘ತುರ್ಕ’ ಎಂದರೆ ಮುಸಲ್ಮಾನರು ಸಿಟ್ಟಾಗುತ್ತಾರೆ. ಆಂಗ್ಲರು, ಡಚ್ಚರು ಎಂದು ಆ ದೇಶದವರನ್ನು ಗುರುತಿಸುವಂತೆ ‘ತುರ್ಕರು’
ಎಂಬುದು ‘ತುರ್ಕಿಸ್ತಾನ್’ ಪ್ರದೇಶದವರನ್ನು ಗುರುತಿಸುವ ಪದ ಎಂಬುದಾಗಿ ಗ್ರಹಿಸುವುದಿಲ್ಲ. ಈ ಪದವನ್ನು ಇಲ್ಲಿನ ಮುಸಲ್ಮಾನರಿಗೆ ಬಳಸಿದರೆ ಸಿಟ್ಟಾಗುವುದಕ್ಕೆ ಕಾರಣ, ಅವರಲ್ಲಿರುವ ‘ನಾವೂ ಭಾರತೀಯರು’ ಎಂಬ ಹೆಮ್ಮೆಯೋ ಅಥವಾ
ಇಸ್ಲಾಂ ದಾಳಿಕೋರರ ಪ್ರಾಣಬೆದರಿಕೆಗೆ ಮತಾಂತರಗೊಂಡ ಹಿಂದೂಗಳಿಗೆ ಈ ಪದದಲ್ಲಿ ಸಂಬೋಧಿಸಿದಾಗ ಉಂಟಾಗುವ ಮುಂಜುಗರವೋ ಎಂಬುದು ಬೇರೆ ವಿಚಾರ.

ಕನ್ನಡಲ್ಲಂತೂ ‘ತುರು’ ಎಂದರೆ ‘ಹಸು’ ಎಂಬ ಅರ್ಥವಿದ್ದು, ಪುರಂದರ ದಾಸರು ‘ತುರುಕರು ಕರೆದರೆ ಉಣಬಹುದಣ್ಣ…’ ಎಂಬ ಕೀರ್ತನೆಯನ್ನು ರಚಿಸಿದ್ದಾರೆ. ಇನ್ನು ‘ಕನ್ನಡ’ ಪದವನ್ನು ಉಚ್ಚರಿಸಲಾಗದ ಆಂಗ್ಲರು ‘ಕೆನರಾ’ ಎಂದು ತೊದಲಿಸಿದ್ದನ್ನೇ ಇಂದು ನಾವು ಗುಲಾಮಗಿರಿಯಿಂದ ಉಳಿಸಿಕೊಂಡು ಬಂದಿದ್ದೇವೆ.

ಇನ್ನಷ್ಟು ವಿಸ್ತಾರವಾಗಿ ಹೇಳಬೇಕೆಂದರೆ, ಇಸ್ಲಾಂನಲ್ಲಿ ಅಲ್ಲಾಹುವಿನ ಮೇಲೆ ನಂಬಿಕೆ ಇರಿಸದ ‘ಮುಸ್ಲಿಮೇತರ’ರನ್ನು ‘ಕಾಫಿರ್’ ಎಂದು ಕರೆಯಲಾಗುತ್ತದೆ. ಇಂಥ ಕಾಫಿರರು ಜೀವಿಸಲು ಅನರ್ಹರು ಎಂಬ ನಂಬಿಕೆಯಿದೆ. ಹಾಗಿದ್ದರಿಂದಲೇ ಟಿಪ್ಪು ತನ್ನ ಕತ್ತಿಯ ಮೇಲೆ ಉರ್ದು ಭಾಷೆಯಲ್ಲಿ ‘ಕಾಫಿರರನ್ನು ಕೊಲ್ಲಿ’ (My victorious sabre is lightning for the
destruction of the unbelievers. Haidar, the Lord of the Faith, is victorious for my adva ntage. And moreover, he destroyed the wicked race who were unbelievers) ಎಂದು
ಬರೆಸಿರುವುದು ಚರ್ಚಾರ್ಹ.

ನಮ್ಮಲ್ಲಿ ಅದೆಷ್ಟೋ ಸಾಕುನಾಯಿಗಳಿಗೆ ‘ಪಾಕಿ’ ಎಂದೂ, ಟಾಯ್ಲೆಟ್ ಗಳಿಗೆ ‘ಪಾಕಿಸ್ತಾನ’ ಎಂದೂ ಕರೆದು ಅವುಗಳ ಯೋಗ್ಯತೆಯನ್ನು ಸೂಚಿಸುವುದಿಲ್ಲವೇ, ಹಾಗೆಯೇ ‘ಅನಾದಿ ಸನಾತನ ಪರಂಪರೆ’ಯನ್ನು ನಾಶಮಾಡಲು ಯತ್ನಿಸಿದ ಇಸ್ಲಾಂ ದಾಳಿಕೋರರು, ಬ್ರಿಟಿಷರು ಅದು ಸಾಧ್ಯವಾಗದೆ ಹೋದಾಗ ಸನಾತನಿಗಳಾದ ಹಿಂದೂಗಳನ್ನು ನಿಂದಿಸುವ ಅಥವಾ ಶಪಿಸುವ ಉದ್ದೇಶದಿಂದ ‘ಹಿಂದೂ’ ಪದಕ್ಕೆ ಕೆಟ್ಟ ಅರ್ಥವನ್ನು ಸೃಷ್ಟಿಸಿ ವಿಕೃತ ಸಮಾಧಾನ ಅನುಭವಿಸಿದರು.

ಇಂಥ ಅನರ್ಥಕಾರಿ ಡಿಕ್ಷ್ ನರಿಗಳನ್ನು ಓದಿಯೇ ಸತೀಶ್ ಜಾರಕಿಹೊಳಿಯವರು ‘ಹಿಂದೂ ಪದ ಅಶ್ಲೀಲ, ಕೆಟ್ಟ ಅರ್ಥ
ಪಡೆದಿದೆ’ ಎಂದು ಪುಂಗಿರುವುದು. ಇಲ್ಲಿ ಸತೀಶ್ ಜಾರಕಿಹೊಳಿ ಈ ಮಟ್ಟದ ‘ಅಶ್ಲೀಲ’ ಮಾತುಗಳನ್ನು ಆಡಿರುವುದನ್ನು
ಮಾತ್ರ ಗಮನಿಸಲಾಗುತ್ತಿದೆ. ಆದರೆ ಅಂದು ಅದೇ ವೇದಿಕೆಯಲ್ಲಿ ಅದ್ಯಾರೋ ‘ಕಾವಿಹರುಕ’ನೊಬ್ಬ ಭಯಾನಕ ‘ಅಶ್ಲೀಲ’
ಭಾಷಣ ಮಾಡಿದ್ದ, ಸಪ್ತನದಿಗಳ ದೇವಿಯರನ್ನು, ತಾಳಿಕಟ್ಟುವಾಗ ಮತ್ತು ಸಪ್ತಪದಿ ತುಳಿಯುವಾಗ ಹೇಳುವ ಮಂತ್ರಗಳನ್ನು ಮನಸೋಇಚ್ಛೆ ‘ಅಶ್ಲೀಲವಾಗಿ’ ಅವಹೇಳನ ಮಾಡಿದ್ದ.

‘ಚೋರಗುರು ಚಂಡಾಳಶಿಷ್ಯ’ ಎಂಬಂತೆ ಇಂಥ ಹೊಲಸು ಭಾಷಣ ಮಾಡಿದವರ ಅಜ್ಞಾನ ಹೇಗಿತ್ತೆಂದರೆ, ಹಿಂದೆ ಸೋಮಾರಿ ಯೊಬ್ಬ ಊರಿನ ಸಿನಿಮಾ ಟೆಂಟಿನಲ್ಲಿ ಮಾರ್ನಿಂಗ್ ಷೋ ಮಲಯಾಳಂ ಸಿನಿಮಾ ನೋಡಿಕೊಂಡು ಬಂದು ತನ್ನಂಥ ಪುಂಡರನ್ನು ಕೂರಿಸಿಕೊಂಡು ‘ಸೆಕ್ಸ್’ ಬಗ್ಗೆ ಉಪನ್ಯಾಸ ನೀಡಿದಂತಿತ್ತು. ಈ ಸತೀಶ್ ಜಾರಕಿಹೊಳಿಯಂಥವರು ಇತ್ತೀಚೆಗೆ
ಹೆಚ್ಚಾಗುತ್ತಿದ್ದಾರೆ. ಬೀದಿಯಲ್ಲಿ ಸಾಗುವ ತಿರುಕನೊಬ್ಬ ಮನೆಯೊಂದರ ಮುಂದೆ ನಿಂತು ‘ಈ ಮನೆಯಲ್ಲಿರುವ ಹೆಣ್ಣುಮಗಳು ವೇಶ್ಯೆ’ ಎಂದು ಹೇಳಿದ ಕೂಡಲೆ, ಅದರ ಕುರಿತು ಚರ್ಚೆಗಳಾಗಲಿ, ಸಂಶೋಧನೆಯಾಗಲಿ ಎನ್ನುವ ವಿಕೃತ ಮನಸ್ಥಿತಿ ಯವರೂ ಹುಟ್ಟಿಕೊಳ್ಳುತ್ತಿದ್ದಾರೆ.

ಸತೀಶ್ ಜಾರಕಿಹೊಳಿ ಅರ್ಥಾತ್ ಕಾಂಗ್ರೆಸ್ ನವರು, ತೀರಾ ಶತಮಾನಗಳ ಇತಿಹಾಸವಿರುವ ಮತಾಂಧ ಟಿಪ್ಪು ಮತ್ತು ದೇಶಪ್ರೇಮಿ ವೀರ ಸಾವರ್ಕರ್ ಕುರಿತಾದ ಸತ್ಯ ಇತಿಹಾಸವನ್ನು ಒಪ್ಪಿಕೊಳ್ಳದೆ ಇರುವವರು, ಯಾವುದೋ ಕಿತ್ತುಹೋದ ಡಿಕ್ಷ್‌ನರಿಯನ್ನೋ ವಿಕಿಪಿಡಿಯಾವನ್ನೋ ಓದಿ ಯುಗಗಳ ಇತಿಹಾಸವಿರುವ ‘ಹಿಂದುತ್ವ’ ಕುರಿತಾಗಿ ಭಾಷಣ ಬಡಿಯುತ್ತಾರೆ.
ಇವರ ಮನಸ್ಥಿತಿಯನ್ನು ಗಮನಿಸಿ, ಹಿಂದೂಗಳ ಅಸ್ತಿತ್ವದ ಪ್ರಶ್ನೆಗಳಾದ ಗೋಹತ್ಯೆ, ಮತಾಂತರ, ಲವ್‌ಜಿಹಾದ್, ಮಕ್ಕಳಿಗೆ ಭಗವದ್ಗೀತೆ-ಧ್ಯಾನ- ಯೋಗ, ದೇವಾಲಯಗಳ ಸ್ವಾತಂತ್ರ್ಯ ಇಂಥ ವಿಚಾರಗಳನ್ನು ವಿರೋಧಿಸುತ್ತಾರೆ.

ಇವರಿಗೆ ಮುಸಲ್ಮಾನ ಸಂಪ್ರದಾಯದ ಟಿಪ್ಪು ಟೋಪಿ, ಖಡ್ಗ ಸಹನೀಯ; ಆದರೆ ತಿಲಕ, ಕೇಸರಿಪೇಟ ಕಂಡರೆ ಭಯ. ಇವರು ಆರೆಸ್ಸೆಸ್ ಅನ್ನು ತಾಲಿಬಾನಿಗಳಿಗೆ, ಭಗವದ್ಗೀತೆಯನ್ನು ಜಿಹಾದಿಗೆ ಹೋಲಿಸುತ್ತಾರೆ. ಸಿಕ್ಕಿಬೀಳುವ ಭಯೋತ್ಪಾದಕರನ್ನು ಖಂಡಿಸುವುದಿಲ್ಲ, ದೇಶಪ್ರೇಮಿಗಳನ್ನು ಕೋಮುವಾದಿಗಳು ಎನ್ನುತ್ತಾರೆ. ದೇಶವನ್ನು ‘ಟುಕಡೆ ಟುಕಡೆ’ ಮಾಡುತ್ತೇನೆನ್ನುವ ದೇಶದ್ರೋಹಿಗಳನ್ನು, ಭಾರತ ಮಾತೆಯನ್ನು ಹೊಲಸು ಎನ್ನುವ ನೀಚರನ್ನು ಅಪ್ಪಿಕೊಳ್ಳುತ್ತಾರೆ.

ತಾವು ಹಿಂದುತ್ವ ವಿರೋಧಿಗಳು ಎಂದು ನೇರವಾಗಿ ಹೇಳಿಕೊಳ್ಳುತ್ತಾರೆ. ತಮ್ಮ ಕ್ಷೇತ್ರದಲ್ಲಿ ಮಿಷನರಿಗಳ ಮತಾಂತರ ಕೃತ್ಯಕ್ಕೆ ಹೋಲ್‌ಸೇಲ್ ಆಗಿ ಅವಕಾಶ ನೀಡುವುದಲ್ಲದೆ, ಅವರಿಗಾಗಿ ಏಸು ಪ್ರತಿಮೆಯನ್ನು ಸ್ಥಾಪಿಸಲೂ ಮುಂದಾಗುತ್ತಾರೆ. ಒಟ್ಟಾರೆ, ಜಾತಿಗಳ ಆಧಾರದಲ್ಲಿ ಹಿಂದೂಧರ್ಮವನ್ನೇ ಒಡೆಯಲೆತ್ನಿಸುತ್ತಿದ್ದಾರೆ.

ಸಿಎಎ, ಎನ್‌ಆರ್‌ಸಿ, ೩೭೦ನೇ ವಿಧಿರದ್ದು, ಸಮಾನ ನಾಗರಿಕ ಸಂಹಿತೆ, ಜನಸಂಖ್ಯೆ ನಿಯಂತ್ರಣ, ರೊಹಿಂಗ್ಯಾಗಳ ನಿಯಂತ್ರಣ, ಅಗ್ನಿವೀರ್‌ನಂಥ ದೇಶದ ಭದ್ರತೆಯ ಯೋಜನೆಗಳನ್ನು ವಿರೋಧಿಸುತ್ತಾರೆ. ಸಂವಿಧಾನ, ನ್ಯಾಯಾಲಯದ ಆದೇಶದ ವಿರುದ್ಧ ಪ್ರತಿಭಟಿಸುವವರಿಗೆ ‘ಅದು ಅವರ ಹಕ್ಕು’ ಎನ್ನುತ್ತಾರೆ. ಆದಿತ್ಯನಾಥರಂಥ ಯೋಗಿಗೇ ಚಪ್ಪಲಿಯಲ್ಲಿ ಹೊಡೆಯ ಬೇಕೆನ್ನುತ್ತಾರೆ. ಇಂಥವರು ‘ಕಾಶ್ಮೀರಿ ಫೈಲ್ಸ್’, ‘ಕಾಂತಾರ’, ‘ಗಂಧದಗುಡಿ’ಯಂಥ ಚಿತ್ರಗಳನ್ನು ನೋಡುವುದಿಲ್ಲ. ಹಿಂದುತ್ವ-ವಿರೋಧಿ ಸಂತಾನಿಗಳ ಚಿತ್ರಗಳನ್ನು ನೋಡಿ ಮೆಚ್ಚುತ್ತಾರೆ.

ಇದೆಲ್ಲ ಗುಣಲಕ್ಷಣಗಳು ಏನನ್ನು ಸೂಚಿಸುತ್ತವೆ ಹೇಳಿ? ಯಾವ ದಿಕ್ಕಿನಿಂದ ನೋಡಿದರೂ ಕಾಂಗ್ರೆಸ್ ಹಿಂದೂಗಳ ಪರವಾಗಿಲ್ಲ. ಇದನ್ನು ಹಿಂದೂಗಳು ಅರ್ಥೈಸಿಕೊಳ್ಳಬೇಕು. ಇಂಥ ‘ಹಿಂದೂಮುಕ್ತ ಕಾಂಗ್ರೆಸ್’ ಅಜೆಂಡಾಗಳೇ ಇಂದು ‘ಕಾಂಗ್ರೆಸ್ ಮುಕ್ತ ಭಾರತ’ ಅಭಿಯಾನಕ್ಕೆ ಸಕತ್ತಾಗಿ ದಾರಿಮಾಡಿಕೊಡುತ್ತಿವೆ. ನೆನಪಿರಲಿ, ಪ್ರಪಂಚದ ಯಾವುದೇ ಮೂಲೆ
ಯಲ್ಲಿ ಉತ್ಖನನವಾದರೂ ಸಿಗುವುದು ದೈವಮೂರ್ತಿಗಳು, ಗುಡಿ-ಮಂಟಪಗಳ ಅವಶೇಷಗಳೇ ಹೊರತು, ಅಂದಿನ ನಾಗರಿಕರ ಕುರುಹುಗಳಲ್ಲ.

ಹಂಪಿಯಲ್ಲೇ ನೋಡಿ, ಈಗಲೂ ಅಲ್ಲಿ ದೈವಾಂಶಗಳು ದೊರಕುತ್ತಿವೆಯೇ ಹೊರತು, ಅಂದಿನ ಪ್ರಜೆಗಳ ಮನೆಗಳ ಅವಶೇಷ ಗಳಲ್ಲ. ಕಾರಣವಿಷ್ಟೇ, ಅಂದಿನವರು ತಮ್ಮ ನಂಬಿಕೆ, ಅಸ್ತಿತ್ವ, ಸ್ವಾಭಿಮಾನದ ದ್ಯೋತಕಗಳಾದ ದೇವರು, ಗುಡಿ-ಗೋಪುರ ಗಳನ್ನು ಅತ್ಯದ್ಭುತವಾಗಿ ಕಲ್ಲಿನಲ್ಲಿ ಕೆತ್ತಿ ನಿಲ್ಲಿಸಿದರೂ, ಮಣ್ಣು-ಕಟ್ಟಿಗೆಗಳನ್ನು ಬಳಸಿ ತಮ್ಮ ಮನೆಗಳನ್ನು ಕಟ್ಟಿಕೊಳ್ಳುತ್ತಿದ್ದರು. ಆಧುನಿಕ ಭಾರತದಲ್ಲಿ ಸಂವಿಧಾನ, ಕಾನೂನು, ನಿಯಮಗಳಂತೆ ಯಾವುದೇ ಪಕ್ಷದ ಶಾಸಕಾಂಗವು ಪ್ರಗತಿಗೆ, ಅಭಿವೃದ್ಧಿಗೆ ಮುಂದಾಗಲೇಬೇಕು. ಆದರೆ ಈ ಮಣ್ಣಿಗೆ ಅದರದ್ದೇ ಆದ ಜೀವಸತ್ವವಿದೆ, ಅಸ್ಮಿತೆಯಿದೆ, ಆತ್ಮವಿದೆ.

ಅವನ್ನು ಯಾವ ಪ್ರಜ್ಞಾವಂತ ಹಿಂದುವೂ ಬಿಟ್ಟುಕೊಡಲಾರ. ಮೊನ್ನೆ ಸತೀಶ್ ಜಾರಕಿಹೊಳಿಯವರ ಅಜ್ಞಾನದ ಮಾತಿಗೆ ಜನ
ತಿರುಗಿಬಿದ್ದು ಪ್ರತಿಭಟಿಸಿದ್ದು ಅದ್ಭುತವಾಗಿತ್ತು! ಏಕೆಂದರೆ, ಎಲ್ಲದಕ್ಕೂ ಒಂದು ಮಿತಿ ಇರುತ್ತದೆ. ಹಿಂದೂಗಳು ಎಚ್ಚೆತ್ತುಕೊಂಡಿ ರುವುದಕ್ಕೆ ಇದು ಸಾಕ್ಷಿ.