ತನ್ನಿಮಿತ್ತ
ಡಾ.ಸುಧಾಕರ ಹೊಸಳ್ಳಿ
ಆ ದಿವಸ ಡಿಸೆಂಬರ್ 9, 1946 ಬ್ರಿಟಿಷರಿಂದ ಭಾರತಕ್ಕೆ ಸ್ವಾತಂತ್ರ್ಯ ಲಭಿಸುವ ಮೊದಲೇ, ಭಾರತವು ಸಂವಿಧಾನ ರಚನೆ ಮಾಡಿಕೊಳ್ಳುವ ಸಲುವಾಗಿ ಬ್ರಿಟಿಷರ ನಿರ್ದೇಶನದ ಮೇರೆಗೆ ರಚಿಸಲ್ಪಟ್ಟ ಸಂವಿಧಾನ ರಚನಾ ಸಭೆ ಕಾರ್ಯಾರಂಭ ಮಾಡಿತು.
ಬಹುಮತ ಹೊಂದಿದ್ದ ಕಾಂಗ್ರೆಸ್ ಪಕ್ಷದ ನಾಯಕ ನೆಹರು ಅವರು ಭಾರತ ಸಂವಿಧಾನದ ಮಾದರಿ ಹೇಗಿರ ಬೇಕೆಂಬ ಗಣರಾಜ್ಯ ನಿರ್ಣಯವನ್ನು ಮಂಡಿಸುವ ಮುಖೇನ, ಇಂದಿಗೆ ಸರಿಯಾಗಿ ಎಪ್ಪತ್ತೈದು ವರ್ಷಗಳ ಹಿಂದೆ( ಡಿಸೆಂಬರ್ 13,1946) ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ತತ್ವದಡಿ ಪ್ರಜೆಗಳಿ ಗೊಂದು ಪ್ರಜಾ ಪ್ರಭುತ್ವ ಮಾದರಿಯ ಸಂವಿಧಾನ ರಚಿಸಬೇಕೆಂಬ ಅಂಬೇಡ್ಕರರ ಸಂಕಲ್ಪವನ್ನು ನೇರವಾಗಿ ತಿರಸ್ಕರಿಸ ಲಾಯಿತು.
ಕಾಂಗ್ರೆಸ್ ಪಕ್ಷ ತನಗೆ ಬಹುಮತ ಇದ್ದ ಕಾರಣಕ್ಕಾಗಿ (299 ಸದಸ್ಯರಲ್ಲಿ 208 ಸದಸ್ಯರು ಕಾಂಗ್ರೆಸ್ಸಿನಿಂದ ಆಯ್ಕೆಯಾಗಿದ್ದರು) ಸಂವಿಧಾನದ ಮಾದರಿಯನ್ನು ನಿರ್ಧರಿಸುವ ಹಕ್ಕನ್ನು ಅಂಬೇಡ್ಕರ್‌ರಿಂದ ಕಸಿದುಕೊಂಡಿತು. ಈ ವಿಷಯ ಸಮಾಜದ ಯಾವ ಸ್ಥರಕ್ಕೂ ತಲುಪಲೇ ಇಲ್ಲ. 1947 ಆಗಸ್ಟ್ 29ಕ್ಕೆ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ಅಂಬೇಡ್ಕರ್ ಅವರ ಆಯ್ಕೆಯಾಗುವವರೆಗೂ 263 ದಿವಸಗಳ ಕಾಲ ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಸಾಮಾನ್ಯ ಸದಸ್ಯ ರಾಗಿರುವಂತೆ ನೋಡಿಕೊಂಡಿತ್ತು ಎಂಬುದು ವಾಸ್ತವದ ಸಂಗತಿ.
ನೆಹರು ಅವರು, ಸಭೆಯಲ್ಲಿಯೇ ಈ ಸಂವಿಧಾನ ರಚನಾ ಸಭೆಯ ಜನನದಲ್ಲಿ ಬ್ರಿಟಿಷರ ಕೈವಾಡವಿದೆ, ಬ್ರಿಟಿಷ್ ಸಂಸತ್ತು ವಿಽಸುವ ಯಾವುದೇ ನಿರ್ಬಂಧ ಮತ್ತು ನಿಯಮಗಳ ಹೊರತಾಗಿ ಸಂವಿಧಾನದಲ್ಲಿ ಏನೂ ಇರುವುದಿಲ್ಲ ಎಂದು ಘೋಷಿಸುವ ಮೂಲಕ ಅಭಾರತೀಯವಾದ, ದಾಸ್ಯ ಮುಂದುವರಿಕೆಯ ಸಂವಿಧಾನ ರಚನೆಯ ಒಲವು ತೋರಿದರು. ಆ ಮೂಲಕ ಸ್ವಾತಂತ್ರೋತ್ತರ ಭಾರತದಲ್ಲೂ ಬ್ರಿಟಿಷರ ಹಸ್ತಕ್ಷೇಪ ಒಳಗೊಳ್ಳುವ ಸಂವಿಧಾನ ರಚನೆಯಾಗಲಿದೆ ಎಂಬ ಸಂದೇಶ ವನ್ನೂ ನೀಡಿದರು.
ಆದರೆ ಸಂವಿಧಾನ ರಚನಾ ಸಭೆ ಬ್ರಿಟಿಷರ ನೆರಳಿನಲ್ಲಿಯೇ ರಚನೆಯಾಗಿದ್ದರೂ, ಆ ಸದನದೊಳಗೆ ನಿಂತು ಈ ಸಂವಿಧಾನ ರಚನಾ ಸಭೆಯ ತನ್ನ ಕಾರ್ಯ ಪ್ರಾರಂಭ ಮಾಡುವ ಮೊದಲೇ ಬ್ರಿಟಿಷ್ ಸಂಸತ್ತು ನಿರ್ದೇಶಿಸುವ ಎಲ್ಲಾ ಅಂಶಗಳನ್ನು ತಿರಸ್ಕರಿಸುವ ನಿರ್ಧಾರ ಮಾಡಿದೆ. ಈಗ ರಚಿಸಲ್ಪಡುವ ಸಂವಿಧಾನದ ಒಳಗಡೆ ಬ್ರಿಟಿಷ್ ಸಂಸತ್ತು ನಿರ್ದೇಶಿಸುವ ಯಾವುದೇ ಅಂಶಗಳನ್ನು ಸೇರ್ಪಡೆ ಮಾಡಲು ನನ್ನನ್ನೂ ಸೇರಿದಂತೆ ಇಲ್ಲಿರುವ ಯಾವುದೇ ಸದಸ್ಯ ಅವಕಾಶ ನೀಡುವುದಿಲ್ಲ ಎಂದು ಅಂಬೇಡ್ಕರರು ಗುಡುಗಿದರು.
ಸಂವಿಧಾನ ರಚನಾ ಸಭೆಯು ಬ್ರಿಟಿಷರಿಂದಲೇ ರಚನೆಗೊಂಡಿzಗಿಯೂ, ಈ ಸಂವಿಧಾನ ರಚನಾ ಸಭೆಗೆ ಬ್ರಿಟಿಷ್ ಸಂಸತ್ತಿನ ಯಾವುದೇ ನಿರ್ದೇಶನಗಳನ್ನು ತಿರಸ್ಕರಿಸುವ ಎಲ್ಲಾ ಹಕ್ಕು ಇದೆಯೆಂದು ಡಾ. ಶಾಮ್ ಪ್ರಸಾದ್ ಮುಖರ್ಜಿ ಅವರು ಘಂಟಾಘೋಷವಾಗಿ ಸಾರುತ್ತಾರೆ. ನೆಹರು ಮತ್ತು ಕಾಂಗ್ರೆಸ್ ಪಕ್ಷದ ಅದೆಷ್ಟೇ ಪ್ರಯತ್ನದ ಹೊರತಾಗಿಯೂ, ದಾಸ್ಯದ ಸಂವಿಧಾನ ರಚನೆಗೆ ಇವರು ಅವಕಾಶ ಕೊಡುವುದಿಲ್ಲ. ಈ ನೆಲದ ಸಂಸ್ಕೃತಿಯನ್ನು ಒಳಗೊಂಡ ಸಂವಿಧಾನ ರಚನೆಯ ನಿಟ್ಟಿನಲ್ಲಿ, ಇಬ್ಬರ ನಡುವೆ ಶೇಕಡ ನೂರರಷ್ಟು ಸಾಮ್ಯತೆ ಇರುವುದು ಭಾರತೀಯರ ಹೆಮ್ಮೆ.
ಬಲಿಷ್ಠ ಕೇಂದ್ರ ಸರ್ಕಾರದ ರಚನೆ, ಗುಂಪು ಗೂಡಿಸುವ ನಿರ್ಣಯ, ಅರೆ ಸಂಯುಕ್ತ ವ್ಯವಸ್ಥೆಯ ಅಂಗೀಕಾರ,ಜಾತ್ಯತೀತತೆ ಸೇರ್ಪಡೆಗೆ ಕಠಿಣ ವಿರೋಧ, 370ನೇ ವಿಧಿಯ ಸೇರ್ಪಡೆಗೆ ವಿರೋಧ, ಗೋ ಹತ್ಯೆ ನಿಷೇಧ, ಮೀಸಲು ಸೇರ್ಪಡೆ, ರೆಸಿಡರಿ ಅಧಿಕಾರಗಳ ಕೇಂದ್ರಕ್ಕೆ ನೀಡಿಕೆ, ನ್ಯಾಯಿಕ ಸ್ವಾತಂತ್ರ್ಯಕ್ಕೆ ಮನ್ನಣೆ, ಅಧಿಕಾರ ವಿಕೇಂದ್ರೀಕರಣ, ರಾಜ್ಯಪಾಲರ ನೇಮಕ ಕೇಂದ್ರದ ಜವಾಬ್ದಾರಿ, ಐತಿಹಾಸಿಕ ಸ್ಮಾರಕಗಳ ರಕ್ಷಣೆ, ವಿಶೇಷ ಸಂದರ್ಭಗಳಲ್ಲಿ ರಾಜ್ಯ ಪಟ್ಟಿಯ ಮೇಲೆ ಕೇಂದ್ರ ಕಾನೂನು ಮಾಡುವ ಅವಕಾಶ, ಸ್ವತಂತ್ರ ಚುನಾವಣಾ ಆಯೋಗ ಮುಂತಾದ ಅನೇಕಾನೇಕ ವಿಷಯಗಳಲ್ಲಿ ಅಂಬೇಡ್ಕರರು- ಮುಖರ್ಜಿಯವರು ಒಂದೇ ನಿಲುವನ್ನು ಹೊಂದ್ದಿದ್ದರು.
ಆ ಮೂಲಕ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾದ ತಿದ್ದುಪಡಿ ಅಥವಾ ವಿಷಯ ಸೇರ್ಪಡೆಗೆ ಕಾಂಗ್ರೆಸ್‌ನಿಂದ ಮಾಡಲ್ಪಡುವ ಎಲ್ಲ ಪ್ರಯತ್ನಗಳನ್ನು ತಮ್ಮ ಘನೀಭೂತ ವಿಷಯ ಮಂಡನೆಯ ಮುಖಾಂತರ ನಿರಂತರವಾಗಿ ತಡೆಯುತ್ತಲೇ ಬಂದರು. ಸ್ವತಹ ಅಂಬೇಡ್ಕರವರು ಸದನದೊಳಗೆ ಮುಖರ್ಜಿಯವರನ್ನು ನನ್ನ ಸ್ನೇಹಿತರಾದ ಮುಖರ್ಜಿಯವರು ಎಂದೇ ಸಂಬೋಽಸುತ್ತಿದ್ದದ್ದು, ಅವರಿಬ್ಬರ ನಡುವಿನ ಸ್ನೇಹ ಮತ್ತು ಸಧರ್ಮದ ಗುರಿ ಸಾದರಪಡಿಸುತ್ತದೆ.
ರಾಷ್ಟ್ರದ ಗಂತವ್ಯವನ್ನು ಗುರುತು ಮಾಡುವಾಗ, ವ್ಯಕ್ತಿಯ, ಪಕ್ಷಗಳ ಗಂತವ್ಯವನ್ನು ಪರಿಗಣಿಸಲೇ ಬಾರದು, ಎಲ್ಲದಕ್ಕೂ ರಾಷ್ಟ್ರವನ್ನೇ ಆದ್ಯವಾಗಿ ಪರಿಗಣಿಸಬೇಕು ಎಂದು ಅಂಬೇಡ್ಕರರು ಎದೆಯುಬ್ಬಿಸಿ ಹೇಳಿದರೆ, ಈ ನೆಲದ ಸಂಸ್ಕೃತಿ ಮತ್ತು ಆಚರಣೆಗೆ ವಿರುದ್ಧವಾದ ಯಾವ ಅಂಶಗಳು ಕೂಡ ಸಂವಿಧಾನದ ಭಾಗವಾಗಲೇ ಬಾರದು ಎಂದು ಮುಖರ್ಜಿಯವರು ಸದನದ ಗಮನ ಸೆಳೆಯುತ್ತಿದ್ದರು. ಇಂದು ನಾವು ಹೊಂದಿರುವ ಭಾರತೀಯವಾದ ಸಂವಿಧಾನದ ಶ್ರೇಯಸ್ಸನ್ನು, ಮರು ಅವಲೋಕಿಸಿಕೊಳ್ಳಲು ಪ್ರತಿಯೊಬ್ಬ ರಾಷ್ಟ್ರೀಯ ಭಾರತೀಯ ನಿಗೂ ಅತೀವ ಶ್ರೇಷ್ಠವೆನಿಸುತ್ತದೆ.
ಕುಟುಂಬ-ರಾಜಕಾರಣ ರದ್ದತಿಗಾಗಿ ಅಂಬೇಡ್ಕರರು ಎಸ್ಟಿ ಫೆಡರೇಶನ್, ರಿಪಬ್ಲಿಕನ್ ಆಫ್ ಇಂಡಿಯಾ ಪಾರ್ಟಿ ಗಳನ್ನು ಸ್ಥಾಪಿಸಿದರೆ: ರಾಷ್ಟ್ರಪರ ಸರ್ಕಾರ ರಚನೆಗೆ ತನ್ನನ್ನು ಒಡ್ಡಿಕೊಳ್ಳುವ ಜನಸಂಘವನ್ನು ಸ್ಥಾಪನೆ ಮಾಡಿದ್ದು ಡಾ.ಮುಖರ್ಜಿಯವರ ಶ್ರದ್ಧೆ. ಅಖಂಡ ಭಾರತದ ಕಲ್ಪನೆಗೆ ಮುಖರ್ಜಿ ಅವರು ಕರೆ ನೀಡಿದರೆ: ಐಕ್ಯ ಭಾರತದ ಸಂಕಲ್ಪವನ್ನು ಅಂಬೇಡ್ಕರರು ಪ್ರತಿಪಾದಿಸಿದ್ದು ವಿಶೇಷ ಮತ್ತು ಸಾಮ್ಯ.
370ನೇ ವಿಧಿಯ ರದ್ಧತಿಯ ಕರೆ ಮುಖರ್ಜಿಯವರ ಹೆಗ್ಗಳಿಕೆಯೆಂದರೆ, 370ನೆ ವಿಧಿಗೆ ಮೂರನೇ ಉಪವಿಧಿ ಸೇರ್ಪಡೆ ಮಾಡುವ ಮುಖಾಂತರ ಇಂದು 370 ನೇ ವಿಧಿ ರದ್ದಾಗಲು ಕಾರಣೀಭೂತವಾದ ಹೆಗ್ಗಳಿಕೆ ಅಂಬೇಡ್ಕರರದ್ದು. ಸಮಾಜವಾದದ ಅನುಷ್ಠಾನಕ್ಕೆ ಪರಸ್ಪರ ಪೂರಕವಾಗಿ ಮತ್ತು ವಿರುದ್ಧ ದಿಕ್ಕಿನಲ್ಲಿಯೂ
ನಿಂತದ್ದು ಅವರಲ್ಲಿನ ಬದ್ಧತೆ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಇದ್ದ ಕಾಳಜಿಯನ್ನು ದೃಡಪಡಿಸುತ್ತದೆ.
ಒಟ್ಟಾರೆ ಶ್ರೇಷ್ಠ ಕಾನೂನು ಪಂಡಿತರಾದ, ಜಗತ್ತಿನ ವಿವಿಧ ಸಂವಿಧಾನಗಳ ವಿಶ್ಲೇಷಕರು, ವಿಮರ್ಶಕರೂ ಆದ ಅಂಬೇಡ್ಕರ್ ಅವರನ್ನು ಸಂವಿಧಾನದ ಮಾ ದರಿ ರೂಪಿಸುವ ಕಾರ್ಯದಲ್ಲಿ ಕಾನೂನಿನ ಬಗ್ಗೆ ವಿಶೇಷ ಅರಿವಿಲ್ಲದ ನೆಹರು ರವರ ಅಡಿಯಲ್ಲಿ ನಿಂತು ಅವಕಾಶ ವಂಚಿತವಾಗುವಂತೆ ಮಾಡಿದ ಬಹುಮತದ ಕಾಂಗ್ರೆಸ್ ಪಕ್ಷದ ನಡಾವಳಿ ಅಪಾಯಕಾರಿ ಪ್ರಕ್ರಿಯೆಯೇ ಆಗಿತ್ತು. ಆದಾಗ್ಯೂ ಅಂಬೇಡ್ಕರರ ಶ್ಯಾಮ ಪ್ರಸಾದರ ಜೀವನ, ಆದರ್ಶಗಳು ಯುವಕರಿಗೆ ರಾಷ್ಟ್ರದ ನೆಲೆಗಟ್ಟು ಮತ್ತು ಗುರಿಯ ದಿಕ್ಸೂಚಿಯೇ ಸರಿ.
(ಆಧಾರ ಭಾರತ ಸಂವಿಧಾನ ರಚನಾ ಸಭೆಯ ಚರ್ಚೆಗಳು
ಸಂಪುಟ-೧ ಪುಟ ಸಂಖ್ಯೆ ೮೦ ೮೧ ೮೨,೧೫೧)