Wednesday, 11th December 2024

ಕೋವಿಡ್ ಹೊಡೆತದಿಂದ ಚೇತರಿಕೆಯತ್ತ ವೈಮಾನಿಕ ಕ್ಷೇತ್ರ

ಪ್ರಚಲಿತ

ಪ್ರಕಾಶ್ ಎಂ.ಎಸ್‌

ಆಕಾಶದಲ್ಲಿ ಸ್ವೇಚೆವಾಗಿ ಹಾರಾಡುವ ಹಕ್ಕಿಗಳನ್ನು ನೋಡಿ ಮಾನವನಿಗೆ ತಾನು ಸಹ ಹೀಗೆ ಹಾರಬೇಕೆನ್ನುವ ಹಂಬಲ, ಆಕಾಂಕ್ಷೆ ಮೂಡಿತಂತೆ. ಇದರಿಂದ ಹಾರಾಡುವ ಯಂತ್ರ ಅಂದರೆ ವಿಮಾನದ ಅಭಿವೃದ್ದಿ, ಸಾಧನೆ ಸಾಧ್ಯವಾಯಿತು. ರಾಮಾಯಣ ಕಾಲದಲ್ಲಿ ಪುಷ್ಪಕ ವಿಮಾನವೆಂಬ ಹಾರಾಡುವ ಯಂತ್ರ ಅಸ್ತಿತ್ವದಲ್ಲಿತ್ತು ಎಂದು ನಾವೆಲ್ಲ ಓದಿದ್ದೇವೆ, ಕೇಳಿದ್ದೇವೆ, ಈಗಲೂ ಕೆಲವು ಸಂಸ್ಕೃತ ಪಂಡಿತರ ಮತ್ತು ವಿಜ್ಞಾನಿಗಳ ಸಹಯೋಗದ ಗುಂಪುಗಳು ಭಾರಾದ್ವಾಜರ ವಿಮಾನ
ಶಾಸವನ್ನಾದರಿಸಿ ಪುಷ್ಪಕ ವಿಮಾನವನ್ನು ರಚಿಸಲು ಪ್ರಯತ್ನಪಡುತ್ತಿವೆ ಎಂದು ಕೇಳಿದ್ದೇನೆ.

ವಿಮಾನಗಳು ನಮ್ಮ ಜೀವನ ಶೈಲಿಯ ಮೇಲೆ ತೀವ್ರ ಪರಿಣಾಮ ಬೀರಿವೆ. ದೇಶಗಳ ನಡುವೆ ಪ್ರಯಾಣದ ಸಮಯವನ್ನು ಕಡಿಮೆ ಮಾಡಿವೆ, ಸುಖಕರವಾಗಿ ಮಾಡಿವೆ. 1900 ರ ಆಸುಪಾಸಿನಲ್ಲಿ, ಭಾರತ ಮತ್ತು ಇಂಗ್ಲೆಂಡಿನ ನಡುವೆ ಪ್ರಯಾಣದ ಸಮಯ 3-4
ತಿಂಗಳು ಆಗಿತ್ತು, ಈಗ ವಿಮಾನ ಈ ಪ್ರಯಾಣ ಸಮಯವನ್ನು 9 ಗಂಟೆಗಳಿಗೆ ಇಳಿಸಿದೆ. ಈಗ ಪ್ರಪಂಚದ ಅತಿ ದೊಡ್ಡ ವಿಮಾನ ಸರಕು ಸಾಗಣಿಕೆಗೆ ಬಳಸುವ ವಿಮಾನ ಉಕ್ರೇನ್ ಮತ್ತು ಸೋವಿಯತ್ ಸಹಯೋಗದಲ್ಲಿ ತಯಾರಾದ ಆಂಟೊನೋವ್ An-225 ಆಗಿದೆ.

ಈ ವಿಮಾನದ ತೂಕ 285 ಟನ್‌ಗಳಗಿದ್ದು, 355 ಟನ್ ತೂಕದ ಸರಕುಗಳನ್ನು ಹೊರ ಬಲ್ಲ, ಅಂದರೆ 640 ಟನ್ ಗರಿಷ್ಟ ತೂಕದ ಹಾರುವ ಯಂತ್ರ ಈ ವಿಮಾನವಾಗಿದೆ. ತಂತ್ರಜ್ಞಾನ ಇಂತ ಬೃಹತ್ ತೂಕದ ಸಮೂಹ ಆಕಾಶದಲ್ಲಿ ಹಾರಾಡುವ ಅಧ್ಬುತವನ್ನು ಸಾದಿಸಿದೆ, ಮೆಕಾನಿಕಲ, ಎಲೆಕ್ಟ್ರಿಕಲ, ಎಲೆಕ್ಟ್ರಾನಿಕ್ಸ್, ಏರೋನಾಟಿಕಲ್, ಗಣಕಯಂತ್ರ, ರೇಡಿಯೋ ಸಂವಹನ ಮತ್ತು ಇನ್ನು ಹಲವಾರು ಹಲಾವಾರು ಯಂತ್ರಶಾಸಗಳ ಸಹಯೋಗದಿಂದ ಇಂತಹ ಸಾಧನೆ ಸಾಧ್ಯವಾಗಿದೆ.

ವಿಮಾನಗಳು ಪ್ರಯಾಣಿಕರನ್ನು, ಸರಕುಗಳನ್ನು ಸಾಗಿಸುವ ಕಾರ್ಯಗಳಿಗಷ್ಟೆ ಸೀಮಿತವಾಗಿಲ್ಲ, ದೇಶಗಳ ರಕ್ಷಣಾ ಕಾರ್ಯಗಳಲ್ಲಿ ಗಮನಾರ್ಹವಾಗಿ ಪಾಲುಗೊಂಡಿವೆ, ಅಗತ್ಯವೆನಿಸಿವೆ. ದೇಶವೊಂದರ ರಕ್ಷಣಾ ಸಾಮರ್ಥ್ಯದ ಆಳತೆ ಆ ದೇಶದಲ್ಲಿ ಎಷ್ಟು ಸಂಖ್ಯೆಯ, ಯಾವ ರೀತಿಯ ಯುದ್ದ ವಿಮಾನಗಳಿವೆ ಎಂಬುದನ್ನು ಬಲವಾಗಿ ಅವಲಂಬಿಸಿದೆ. ಭಾರತೀಯ ವಾಯುಪಡೆಗೆ
ಇತ್ತೀಚೆಗೆ ಸೇರ್ಪಡೆಯಾದ Rafale ಯುದ್ಧವಿಮಾನ ಗಳು ಭಾರತೀಯ ವಾಯುಪಡೆಗೆ ಭೀಮ ಬಲವನ್ನು ನೀಡಿ, ಅಕ್ಕ ಪಕ್ಕದ ದೇಶಗಳನ್ನು ನಿಯಂತ್ರಣದಲ್ಲಿರಿಸಿವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.

ವಿಮಾನ ಅಭಿವೃದ್ದಿ, ಉತ್ಪಾದನೆ, ನಿರ್ವಹಣೆಯ ನಾಗರಿಕ (ಪ್ರಯಾಣಿಕರನ್ನು, ಸರಕುಗಳನ್ನು ಸಾಗಿಸುವ) ಚಟುವಟಿಕೆಗಳನ್ನು ಏರೋಸ್ಪೇಸ್ ವಲಯ ಎಂದು, ರಕ್ಷಣಾ ವಲಯಕ್ಕೆ ಸಂಭಂದಿಸಿದ ಚಟುವಟಿಕೆಗಳನ್ನು ಡಿಫೆನ್ಸ್ ವಲಯ ಎಂದು ಗುರುತಿಸಲಾ ಗಿದೆ, ಈ ಎರಡು ವಲಯಗಳು ತಂತ್ರಜ್ಞಾನ, ಪ್ರಾಮುಖ್ಯತೆ, ಮಾರುಕಟ್ಟೆಯ ಗಾತ್ರ ಮುಂತಾದ ಅಂಶಗಳನ್ನು ಸಮೀಪ ಅಥವ ಒಂದೇ ರೀತಿಯಲ್ಲಿ ಹೊಂದಿವೆ, ಕೈಗಾರಿಕಾ ವಿಶ್ಲೇಷಕರು ಈ ಎರಡು ಕ್ಷೇತ್ರಗಳ ಬೆಳವಣಿಗೆಗಳು, ಸಮಸ್ಯೆಗಳು, ಪ್ರವೃತ್ತಿಗಳನ್ನು ಸಮಾನಾಂತರವಾಗಿ ಅಧ್ಯಯನ ಮಾಡುತ್ತಾರೆ.

ವಿಮಾನ ಉತ್ಪಾದನಾ ಘಟಕಕ್ಕೆ ಬೃಹದಾಕಾರವಾದ ಮೂಲಸೌಕರ್ಯವು ಬೇಕಾಗುತ್ತದೆ, ಮೂಲಸೌಕರ್ಯದಲ್ಲಿನ ಹೂಡಿಕೆ ಯನ್ನು ಆರ್ಥಿಕವಾಗಿ ಲಾಭದಾಯಕ ವಾಗಿಸಲು ತಯಾರಕರು ಏರೋಸ್ಪೇಸ್ ಮತ್ತು ಡಿಫೆನ್ಸ್ ಎರಡೂ ಕ್ಷೇತ್ರಗಳ ವಹಿವಾಟಿ ನಲ್ಲಿ ಕಾರ್ಯನಿರ್ವಹಿಸುತ್ತಾರೆ. ಅಮೆರಿಕದ ವಾಷಿಂಗ್ಟನ್ ಸ್ಟೇಟ್‌ನ ಸಿಯಾಟಲ್ ಬಳಿಯ ಎವೆರೆಟ್‌ನಲ್ಲಿ ಬೋಯಿಂಗ್ ಕಂಪನಿಯ ವಿಶ್ವದ ಅತಿದೊಡ್ಡ ಉತ್ಪಾದನೆ ಸೌಲಭ್ಯವಿದೆ, ಇದರಲ್ಲಿ ಅವರದೇ ಖಾಸಗಿ ರನ್‌ವೇ, ಬೃಹತ್ ಇಂಧನ ಸಂಗ್ರಹ ಟ್ಯಾಂಕ್‌ಗಳು, ಜಂಬೋ ಜೆಟ್ಟಿನಂತಹ ದೊಡ್ಡ ವಿಮಾನ ಜೋಡಣೆಗೆ ಅನುವು ಮಾಡಿಕೊಡುವ ಬೃಹತ್ ಹ್ಯಾಂಗರ್ ಗಳೊಂದಿಗೆ ಇದು ಸುಮಾರು 100 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ.

ಬೋಯಿಂಗ್ ಕಂಪನಿ ವಿಶ್ವದ ಅತಿದೊಡ್ಡ ಏರೋಸ್ಪೇಸ್ ಕಂಪನಿ, ವಾಣಿಜ್ಯ ಜೆಟ್‌ಲೈನರ್ ಗಳು, ಯುದ್ಧ ವಿಮಾನಗಳು, ಬಾಹ್ಯಾಕಾಶ ಮತ್ತು ಭದ್ರತಾ ವ್ಯವಸ್ಥೆಗಳ ತಯಾರಕರು, ಈ ಕಂಪನಿ ಹೊಸ ತಂತ್ರಜ್ಙಾನದ ಅಭಿವೃದ್ದಿಗೆ, ಆಳವಡಿಕೆಗೆ ಸಾಕಷ್ಟು
ಒತ್ತು, ಪ್ರಾಮುಖ್ಯತೆ ನೀಡುತ್ತಿರುವ ಕಂಪನಿಯಾಗಿದೆ. ಜಾಗತಿಕ ಅ ಈ ಉದ್ಯಮದ ಆದಾಯವು 2020ರ ಕಠಿಣ ವರ್ಷದ ನಂತರ 2021 ರಲ್ಲಿ ಚೇತರಿಸಿಕೊಳ್ಳಲು ಪ್ರಾರಂಭವಾಗುವ ನಿರೀಕ್ಷೆಯಿದೆ. ಆದರೆ ಈ ಚೇತರಿಕೆ ವಾಣಿಜ್ಯ ಏರೋಸ್ಪೇಸ್ ಮತ್ತು ರಕ್ಷಣಾ ಎಂಬ ಎರಡು ಪ್ರಮುಖ ಕ್ಷೇತ್ರಗಳಲ್ಲಿ ಅಸಮವಾಗಿರುತ್ತದೆ.

ವಾಣಿಜ್ಯ ಏರೋಸ್ಪೇಸ್: ಕರೋನಾ ಸಾಂಕ್ರಾಮಿಕ ವಾಣಿಜ್ಯ ಏರೋಸ್ಪೇಸ್ ವಲಯದ ಮೇಲೆ ತೀವ್ರ ಪರಿಣಾಮ ಬೀರಿ ಪ್ರಯಾಣಿಕರ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗಲು ಕಾರಣವಾಗಿದೆ, ಇದರ ಅಡ್ಡ ಪರಿಣಾಮವೇನೆಂದರೇ ವಿಮಾನಗಳ ಬೇಡಿಕೆಯಲ್ಲಿ ಭಾರಿ ಕಡಿತ, ವಿಮಾನ ಉತ್ಪಾದಕರಿಗೆ ನಷ್ಟ, ಅನಿಶ್ಚಿತತೆ. ವಾಣಿಜ್ಯ ಏರೋಸ್ಪೇಸ್ ವಲಯವು ನಿಧಾನವಾಗಿ
ಚೇತರಿಸಿಕೊಳ್ಳುವ ನಿರೀಕ್ಷೆಯಿದೆ, ಪ್ರಯಾಣದ ಬೇಡಿಕೆಯು 2024 ರ ವೇಳೆಗೆ ಪೂರ್ವ-ಕೋವಿಡ್ -19 ಮಟ್ಟಕ್ಕೆ ಮರಳುವ ನಿರೀಕ್ಷೆಯಿದೆ.

ಕ್ರಾಮಿಕವು ಪ್ರಯಾಣಿಕರಲ್ಲಿ ಕೆಲವು ನಡವಳಿಕೆಯ ಬದಲಾವಣೆಗಳಿಗೆ ಕಾರಣವಾಗಿದೆ, ಅಲ್ಪಾವಧಿಯ ಮತ್ತು ದೇಶೀಯ ಪ್ರಯಾಣದ ಮೇಲೆ ಪ್ರಯಾಣಿಕರ ಹೆಚ್ಚಿನ ಗಮನ, ಒಲವು ಮೂಡಿಸಿ, ಅಂತರ ರಾಷ್ಟ್ರೀಯ ಪ್ರಯಾಣಗಳು ಅತಿ ಕಡಿಮೆಯಾಗಲು
ಕಾರಣವಾಗಿದೆ.

2021ರಲ್ಲಿ, ಜಾಗತಿಕ ವಾಣಿಜ್ಯ ವಿಮಾನಗಳ ಮಾರಾಟ ಸುಮಾರು 900 ವಿಮಾನಗಳು ಎಂದು ಅಂದಾಜಿಸಲಾಗಿದೆ, 2018 ರಲ್ಲಿ ಈ ವಿಮಾನಗಳ ಮಾರಾಟ ಗರಿಷ್ಠ ಮಟ್ಟವನ್ನು ತಲುಪಿತ್ತು, ಆ ಮಾರಾಟದ ಮಟ್ಟಕ್ಕೆ ಹೋಲಿಸಿದರೆ 2021ರ ಮಾರಾಟವು ಶೇ.56 ಮಟ್ಟದಲ್ಲಿ ಇರಲಿದೆ. 2021 ರಲ್ಲಿ ಹೊಸ ವಿಮಾನಗಳ ಖರೀದಿ ಆದೇಶಗಳು ((POs-Purchase orders) ಸೀಮಿತವಾದ ಮಟ್ಟದಲ್ಲಿರುವ ಸಾಧ್ಯತೆ ಇರುವುದರಿಂದ ಮತ್ತು ವಿಮಾನಯಾನ ಸಂಸ್ಥೆಗಳು ಈಗಾಗಲೆ ದೃಢಿಕರೀಸಿದ ಖರೀದಿ ಆದೇಶ ಗಳನ್ನು ರದ್ದುಗೊಳಿಸುವ ಪ್ರವೃತ್ತಿ ಮುಂದುವರಿಯುವುದರಿಂದ, ತಯಾರಕರಿಗೆ ವಿಮಾನ ದೃಢಿಕರೀಸಿದ ಖರೀದಿ ಆದೇಶಗಳ (backlog) ಸಂಖ್ಯೆ ಮತ್ತಷ್ಟು ಕುಸಿಯಬಹುದು.

ರಕ್ಷಣಾ ವಲಯ (Defense): ಹೆಚ್ಚಿನ ದೇಶಗಳು ರಕ್ಷಣಾ ಬಜೆಟ್ ಅನ್ನು ಗಮನಾರ್ಹವಾಗಿ ಕಡಿಮೆ ಮಾಡದ ಕಾರಣ, ರಕ್ಷಣಾ ವಲಯ 2021ರಲ್ಲಿ ಸ್ಥಿರವಾಗಿ ಉಳಿಯುವ ನಿರೀಕ್ಷೆಯಿದೆ. ಆದಾಗ್ಯೂ, ಜಾಗತಿಕ ಪೂರೈಕೆ ಸರಪಳಿಯ (Global SCM) ಅಡೆ
ತಡೆಗಳು, ಗೊಂದಲಗಳು, ರಕ್ಷಣಾ ವಿಮಾನಗಳ ಮತ್ತು ಇತರೆ ರಕ್ಷಣಾ ಉಪಕರಣಗಳಲ್ಲಿ ಸಣ್ಣ ವೆಚ್ಚ ಹೆಚ್ಚಳ ಮತ್ತು 2021 ರ ಪೂರೈಕೆಯ ವೇಳಾಪಟ್ಟಿ ವಿಳಂಬವನ್ನು ಎದುರಿಸಬೇಕಾಗುತ್ತದೆ.

ಹೆಚ್ಚುವರಿಯಾಗಿ, ಮುಂಬರುವ ವರ್ಷದಲ್ಲಿ ಈ ವಲಯದ ಕಾರ್ಯಾಚರಣೆಯ ಕಾರ್ಯಕ್ಷಮತೆಯೂ ವ್ಯಾಪಾರ ನೀತಿಗಳು, ನಿರ್ಬಂಧಗಳಿಂದ, US ರಕ್ಷಣಾ ಕ್ಷೇತ್ರ ತಯಾರಕರ ಮತ್ತು ಅವರ ಪೂರೈಕೆದಾರರ ಮೇಲೆ ಚೀನಾದ ಸಂಭಾವ್ಯ ನಿರ್ಬಂಧಗಳಿಂದ ಪ್ರಭಾವಿತ ವಾಗಿರುತ್ತದೆ.

ಇತ್ತೀಚಿನ ತಿಂಗಳುಗಳಲ್ಲಿ ವಿಮಾನ ತಯಾರಕರು ರಕ್ಷಣಾ ವಲಯದಲ್ಲಿ ವಾಣಿಜ್ಯ ವಲಯಕ್ಕಿಂತ ಹೆಚ್ಚಿನ ಖರೀದಿ ಆದೇಶಗಳು, ಉತ್ತಮ ಕೆಲಸದ ಹೊರೆಯನ್ನು ನೋಡುತ್ತಿರುವುದರಿಂದ ತಮ್ಮ ಸಿಬ್ಬಂದಿ ವರ್ಗವನ್ನು ವಾಣಿಜ್ಯ ವ್ಯವಹಾರದಿಂದ ರಕ್ಷಣಾ ವ್ಯವಹಾರಕ್ಕೆ ವರ್ಗಾಯಿಸುವ ಪ್ರಕ್ರಿಯೆಗಳಲ್ಲಿ ತೊಡಗಿದ್ದಾರೆ.

ದೀರ್ಘಕಾಲೀನ ಬೆಳವಣಿಗೆಯನ್ನು ಹೆಚ್ಚಿಸಲು ಉದಯೋನ್ಮುಖ ತಂತ್ರಜ್ಞಾನಗಳು: ಈ ಉದ್ಯಮವು ಸಾಂಕ್ರಾಮಿಕ ರೋಗದಿಂದ ಪ್ರಭಾವಿತವಾಗಿದ್ದರೆ, 2021 ರಲ್ಲಿ ಮುಂದುವರಿದ ತಾಂತ್ರಿಕ ಅಭಿವೃದ್ಧಿಗಳು ಉದ್ಯಮ ಬೆಳವಣಿಗೆಯನ್ನು ಹೆಚ್ಚಿಸಲು ಮತ್ತು ಉದ್ಯಮದ ಆಕಾರವನ್ನು ರೂಪಿಸಲು ಸಹಾಯವಾಗಲಿವೆ.

ಬೆಳವಣಿಗೆಯಲ್ಲಿ ಧನಾತ್ಮಕವಾಗಿ ಪರಿಣಾಮ ಬೀರುವ ಕೆಲವು ತಂತ್ರಜ್ಞಾನಗಳು ಹೀಗಿವೆ:

ವಿದ್ಯುತ್ ಚಾಲನೆ ತಂತ್ರಜ್ಞಾನ (Electric propulsion): ಕೆಲವು ಪ್ರಾರಂಭಿಕ-ಉದ್ಯಮಗಳು (start&up) ಸೇರಿದಂತೆ ಹಲವಾರು ಕಂಪನಿಗಳು ಎಲೆಕ್ಟ್ರಿಕ್ ಪ್ರೊಪಲ್ಷನ್ ಸಿಸ್ಟಮ್‌ಗಳನ್ನು ಅಭಿವೃದ್ಧಿಪಡಿಸುತ್ತಿವೆ. ಇದು ಇಂಗಾಲದ ಹೊರಸೂಸು ವಿಕೆಯ ಮಟ್ಟವನ್ನು ಕಡಿಮೆ ಮಾಡಲಿದೆ., ವಿಮಾನ ಹಾರಾಟದ ಶಬ್ದ ಮಟ್ಟವನ್ನು ಗಮನಾರ್ಹವಾಗಿ ಕಡಿಮೆಗೊಳಿಸಲಿದೆ ಮತ್ತು ಹಾರಾಟ ವೆಚ್ಚವನ್ನು ಕಡಿತಗೊಳಿಸಲಿದೆ. 2021 ರಲ್ಲಿ, ಹೈಬ್ರಿಡ್ ಅಥವಾ ಎಲೆಕ್ಟ್ರಿಕ್ ಪ್ರೊಪಲ್ಷನ್ ಎಂಜಿನ್ ಬಳಸುವ ಪ್ರಾಯೋಗಿಕ ವಿಮಾನಗಳನ್ನು ನಾವು ನೋಡಬಹುದು.

ಹೈಡ್ರೋಜನ್-ಚಾಲಿತ ವಿಮಾನ (Hydrogenpowered aircraft): ಪ್ರಪಂಚದಾದ್ಯಂತ ಅನೇಕ ತಯಾರಕರು ವಿಮಾನ ದಲ್ಲಿ ವಿದ್ಯುತ್ ಮೂಲವಾಗಿ ಹೈಡ್ರೋಜನ್ ಇಂಧನವನ್ನು ಬಳಸುವ ತಂತ್ರವನ್ನು ಅಭಿವೃದ್ದಿ ಪಡಿಸುವ ಪ್ರಯತ್ನದಲ್ಲಿದ್ದಾರೆ. ಇದು ಇಂಧನ -ದಕ್ಷತೆ ಮತ್ತು ಪರಿಸರ ಸ್ನೇಹಕ್ಕೆ ಕಾರಣವಾಗ ಬಹುದು. Airbus SE PÜ. ಶೂನ್ಯ-ಹೊಗೆಸೂಸುವ ವಿಮಾನದ ಅಭಿವೃದ್ಧಿಯನ್ನು ಇತ್ತೀಚೆಗೆ ಘೋಷಿಸಿತು, ಅದು ಹೈಡ್ರೋಜನ್ ಅನ್ನು ಶಕ್ತಿಯ ಮೂಲವಾಗಿ ಬಳಸುತ್ತದೆ ಮತ್ತು ಮುಂಬರುವ ದಶಕಗಳಲ್ಲಿ ಪ್ರಯಾಣಕ್ಕೆ ಲಭ್ಯವಾಗಬಹುದು.

ಅಲ್ಲದೆ, ಕೆಲವು ಪ್ರಾರಂಭಿಕ- ಉದ್ಯಮಗಳು ಮೂಲಮಾದರಿಗಳನ್ನು ಮಂಬರುವ ದಿನಗಳಲ್ಲಿ ಪ್ರದರ್ಶಿಸಬಹುದು, ಪರೀಕ್ಷಾ ಹಾರಾಟಗಳನ್ನು ನಡೆಸಬಹುದು ಮತ್ತು ಇವುಗಳ ಪ್ರಾಯೋಗಿಕ ಕಾರ್ಯಾಚರಣೆಯನ್ನು ಪ್ರಾರಂಭಿಸ ಬಹುದು. ಈ ಹೊಸ ವಿಧಾನಗಳನ್ನು ಪರಿಚಯಿಸಲು ಸರಕು ಸೇವೆಗಳು (Cargo services) ಅತಿ ಸೂಕ್ತವಾದ ಕ್ಷೇತ್ರವಾಗಿದೆ. ಶಬ್ದದ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಪ್ರಯಾಣಿಸಬಲ್ಲ ವಿಮಾನವನ್ನು ಹೈಪರ್‌ಸಾನಿP ವಿಮಾನ ಎಂದು ಹೇಳಲಾಗುತ್ತದೆ. ಧ್ವನಿಯ ವೇಗ ಗಂಟೆಗೆ 1225 ಕಿ.ಮೀ., ಮತ್ತು ಹೈಪರ್‌ಸಾನಿಕ್ ವಿಮಾನಗಳ ವಿಶಿಷ್ಟ ವೇಗವು ಗಂಟೆಗೆ 4800 ಕಿ.ಮೀ.ಗಿಂತ ಹೆಚ್ಚಾಗಿದೆ.

ರಕ್ಷಣಾ ಕ್ಷೇತ್ರಗಳು 2000ರ ದಶಕದಿಂದ ಹೈಪರ್‌ಸಾನಿಕ್ ಶಸಾಸಗಳ ಅಭಿವೃದ್ಧಿಯನ್ನು ಸಕ್ರಿಯವಾಗಿ ಅನುಸರಿಸುತ್ತಿವೆ ಮತ್ತು ಕ್ಷೇತ್ರಗಳ ಇತ್ತೀಚಿನ ಗಮನವು ಹೈಪರ್ ಸಾನಿಕ್ ಗ್ಲೈಡ್ ವಾಹನಗಳು ಮತ್ತು ಕ್ರೂಸ್ ಕ್ಷಿಪಣಿಗಳ ಮೇಲೆ ಕೇಂದ್ರೀಕೃತವಾಗಿದೆ. 2021ರಲ್ಲಿ, ಹೈಪರ್ ಸಾನಿಕ್ ಗ್ಲೈಡ್ ವಾಹನದ ಹಾರಾಟ ಪರೀಕ್ಷೆಗಳ ಸಾಧ್ಯತೆ ಹೆಚ್ಚಾಗಿದೆ ಮತ್ತು ಇದು ಅ ಈ ವ್ಯವಹಾರದ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ.

ಇಂದಿನ ವಾಣಿಜ್ಯ ವಿಮಾನಗಳ ಹಾರಾಟದ ಗರಿಷ್ಠ ಎತ್ತರ  45000 ಅಡಿ (3.7 ಕಿ.ಮೀ), ಮಿಲಿಟರಿ ವಿಮಾನ ಗಳದ್ದು 90000 ಅಡಿ (27.4 ಕಿ.ಮೀ), ಕೆಲವು ವರ್ಷಗಳ ಹಿಂದೆ ಸೇವೆಯಿಂದ ಹಿಂಪಡೆದ ಕಾನ್ಕಾರ್ಡ್ ವಿಮಾನದ್ದು 60000 ಅಡಿ  (18.2 ಕಿ.ಮೀ)  ಆಗಿತ್ತು. ಹೈಪರ್‌ಸಾನಿಕ್ ವಿಮಾನಗಳು 95000 ಅಡಿ (28.9ಕಿ.ಮೀ) ಎತ್ತರದಲ್ಲಿ ಹಾರಾಟ ನಡೆಸುವ ನಿರೀಕ್ಷೆಯಿದೆ ಮತ್ತು ಸುಮಾರು 2 ಗಂಟೆಗಳಲ್ಲಿ ಯುರೋಪ್ ಮತ್ತು ಅಮೆರಿಕದ ನಡುವಿನ ಅಟ್ಲಾಂಟಿಕ್ ಸಾಗರವನ್ನು ದಾಟಲಿದೆ. ಈ ವಿಮಾನಗಳು ಸ್ಕ್ರಾಮ್ ಜೆಟ್ (Scramjet) ಎಂಜಿನ್‌ಗಳು ಎಂಬ ಹೊಸ ತಳಿ ಎಂಜಿನ್‌ಗಳಿಂದ ಚಾಲನೆ ಪಡೆಯಲಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (VSSC) 2005 ರಲ್ಲಿ ಸ್ಕ್ರಾಮ್ ಜೆಟ್ ಎಂಜಿನ್ ನನ್ನು ವಿನ್ಯಾಸಗೊಳಿಸಿತು ಮತ್ತು ಪರೀಕ್ಷಿಸಿತು, ಮತ್ತು ಅಡ್ವಾನ್ಸ್ ಟೆಕ್ನಾಲಜಿ ವೆಹಿಕಲ್ (ATV-D02) ನಲ್ಲಿ ಈ ಎಂಜಿನ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಿತು.

ಇತರ ತಾಂತ್ರಿಕ ಪ್ರಗತಿಗಳು: ಡಿಜಿಟಲ್ ಇನ್ನೋವೇಶನ್ ಗಳು, ಆಡಿಟಿವ್ ಮ್ಯಾನ್ಯೂಫ್ಯಾಕ್ಚರಿಂಗ್, ಮೆಷಿನ್ ಲರ್ನಿಂಗ್, ಅಡ್ವಾನ್ಸ್ಡ್ ಅನಾಲಿಟಿಕ್ಸ್, ಸ್ಮಾರ್ಟ್ ಆಟೊ ಮೇಷನ್ ಈ ವಲಯದ ತಂತ್ರಜ್ಞಾನದ ಮುಖ್ಯ ಚಾಲನಾ ಶಕ್ತಿಗಳಾಗಿವೆ. 3 ಡಿ ವಿನ್ಯಾಸ ದತ್ತಾಂಶವನ್ನು ಅನುಸರಿಸಿ ವಸ್ತು ಕಣಗಳನ್ನು ಮೇಲೆ ಮೇಲೆ ಪೇರಿಸಿ ವಸ್ತುವಿನ ಪದರಗಳ ಮೂಲಕ ಘಟಕಗಳನ್ನು
ನಿರ್ಮಿಸುವ ತಂತ್ರವನ್ನು ಸಂಯೋಜಕ ಉತ್ಪಾದನೆ (Additive Manufacturing or 3D printing) ಎಂದು ಕರೆಯುತ್ತಾರೆ. ಈ ತಂತ್ರವನ್ನು ವಿಮಾನ ಎಂಜಿನ್‌ನ ಸಂಕೀರ್ಣ (complex) ಭಾಗಗಳನ್ನು, ವಿಮಾನ ರೆಕ್ಕೆ ಘಟಕಗಳನ್ನು ತಯಾರಿಸಲು ಬಳಸ ಲಾಗುತ್ತದೆ.

ಮುಂಬರುವ ದಿನಗಳಲ್ಲಿ ಅನಾಲಿಟಿಕ್ಸ್ ಅಪ್ಲಿಕೇಶನ್ ತಂತ್ರಜ್ಞಾನವನ್ನು ಮಿಮಾನ ಕ್ಷೇತ್ರದಲ್ಲಿ ಹೇರಳವಾಗಿ ಬಳಸುವ ಸಾದ್ಕ್ಯತೆಯಿದೆ. ಈ ದಿಟ್ಟಿನಲ್ಲಿ ವಿಮಾನಯಾನ ಕಂಪೆನಿಯೊಂದರ ಉತ್ಪನ್ನ ಈ ರೀತಿಯಿರಲಿದೆ, ವಿಮಾನದ ವಿವಿಧ ವ್ಯವಸ್ಥೆ ಗಳಿಂದ ನೈಜ- ಸಮಯದ ಡೇಟಾವನ್ನು ಸಂಗ್ರಹಿಸಿ, ಎಂಜಿನ್ ನಲ್ಲಿನ ದೋಷಗಳನ್ನು ಗುರುತಿಸಲು ಅದನ್ನು ಬಳಸಿ,
ದೋಷಗಳು ಬಾರದಂತೆ ತಡೆಗಟ್ಟುವ ನಿರ್ವಹಣೆಯನ್ನು ಮಾಡಲು ಈ ಉತ್ಪನ್ನ ಸಹಾಯ ಮಾಡಲಿದೆ.

ರಕ್ಷಣಾ ಒಪ್ಪಂದಗಳ ಪ್ರವೃತ್ತಿ: ಮೊದಲೇ ಹೇಳಿದಂತೆ ರಕ್ಷಣಾ ಕ್ಷೇತ್ರವು 2021ರಲ್ಲಿ ಸ್ಥಿರವಾಗಿ ಉಳಿಯುವ ನಿರೀಕ್ಷೆಯಿದೆ, ಏಕೆಂದರೆ ಹೆಚ್ಚಿನ ದೇಶಗಳು ರಕ್ಷಣಾ ಬಜೆಟ್‌ಗಳನ್ನು ಗಮನಾರ್ಹವಾಗಿ ಕಡಿಮೆ ಮಾಡಿಲ್ಲ. ಯುಎನ್ (UN) ನಿರಂತರವಾಗಿ ಜಾಗತಿಕ ಶಾಂತಿಯನ್ನು ಅನುಸರಿಸುತ್ತಿದ್ದರೂ ಸಹ, ಜಾಗತಿಕ ಉದ್ವಿಗ್ನ ತೆಯು ಗಣನೀಯ ಮಟ್ಟದಲ್ಲಿ ಮುಂದುವರೆದಿದೆ,
ಇದರ ಪರಿಣಾಮವಾಗಿ ಪೀಡಿತ ರಾಷ್ಟ್ರಗಳು ತಮ್ಮ ರಕ್ಷಣಾ ಸಾಮರ್ಥ್ಯಗಳನ್ನು ಸುಧಾರಿಸಲು ಯೋಜಿಸುತ್ತಿವೆ.

ದೇಶಗಳ ಗಡಿ ವಿವಾದಗಳು, ಕಡಲ ವಿವಾದಗಳು, ಹೈಬ್ರಿಡ್ ಯುದ್ಧ, ಕಡಲ್ಗಳ್ಳತನ, ಸೈಬರ್ ದಾಳಿ ಇತ್ಯಾದಿಗಳನ್ನು ಎದುರಿಸುತ್ತಿವೆ, ಭಯೋತ್ಪಾದನೆ ಇವುಗಳೊಂದಿಗೆ ಕೂಡಿ ಗೊಂದಲ ಹೆಚ್ಚಾಗುತ್ತಲಿದೆ, ಮತ್ತು ಕೆಲವು ಸಂದರ್ಭಗಳಲ್ಲಿ ಇದು
ಮುಖ್ಯ ಕಾಳಜಿಯಾಗಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ US ಮತ್ತು ಮಿತ್ರ ರಾಷ್ಟ್ರಗಳು ಹೆಚ್ಚು ಆಕ್ರಮಣಕಾರಿ ಗುಪ್ತಚರ, ಕಣ್ಗಾವಲು ಮತ್ತು ಜಂಟಿ ಗಸ್ತು ತಿರುಗುವ ನಿರೀಕ್ಷೆಯಿದೆ. ಕ್ರೈಮಿಯಾವನ್ನು ರಷ್ಯಾ ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ರಷ್ಯಾ ಮತ್ತು
ಉಕ್ರೇನ್ ಗಳ ನಡುವೆ ಭಿನ್ನಾಭಿಪ್ರಾಯ ಮುಂದುವರಿಯಲಿದೆ.

ಪರಮಾಣು ಶಸಾಗಾರ ಮತ್ತು ರಾಕೆಟ್ ಲಾಂಚರ್ ಗಳೊಂದಿಗೆ ಉತ್ತರ ಕೊರಿಯಾದ ಬೆದರಿಕೆ ನೆರೆಹೊರೆಯವರಿಗೆ ಮುಂದುವರಿ ಯಲಿದೆ. ಸಿರಿಯಾ, ಇರಾಕ್, ಅ-ನಿಸ್ತಾನದಲ್ಲಿ ಘರ್ಷಣೆಗಳು ಮತ್ತು ಭಯೋತ್ಪಾ ದಕ ದಾಳಿಗಳು ಮುಂದುವರಿಯ ಲಿವೆ, ಇದು ಯುರೋಪ್, ಆಫ್ರಿಕಾಕ್ಕೆ ಹೆಚ್ಚು ತೀವ್ರವಾಗಿ ಹರಡಬಹುದು ಮತ್ತು ಹೊಸ ಪ್ರದೇಶಗಳಿಗೆ ಹರಡುವ ಸಾಧ್ಯತೆಯಿದೆ. ಜಗತ್ತಿನಾದ್ಯಂತದ ದೇಶಗಳು ಭಯೋತ್ಪಾದನೆ ವಿರುದ್ಧದ ಯುದ್ಧದಲ್ಲಿ ತೊಡಗಿರುವಾಗ, ಅವರ ರಕ್ಷಣಾ ಬಜೆಟ್‌ಗಳು ಸಶಸ ನೆಲದ ವಾಹನಗಳು, ನೆಲದ ದಾಳಿ ಸಾಮಗ್ರಿ ಗಳು, ಲಘು ವಾಯು ಬೆಂಬಲ ವಿಮಾನಗಳು, ಗುಪ್ತಚರ ಸಂಗ್ರಹಣೆ ಉತ್ಪನ್ನಗಳು, ಕಣ್ಗಾವಲು, ಎಲೆಕ್ಟ್ರಾನಿಕ್ ಸಂವೇದಕಗಳು, ಸೈಬರ್ ರಕ್ಷಣೆಗಳು, ಕಡಲ ಮುಂತಾದ ರಕ್ಷಣಾ ಉತ್ಪನ್ನಗಳ ಬೇಡಿಕೆಯ ತೀವ್ರ ಏರಿಕೆ ಯಾಗುವುದು. ಮುಂಬರುವ ವರ್ಷಗಳಲ್ಲಿ ಗಸ್ತು ಹಡಗುಗಳು ಹೆಚ್ಚಾಗಲಿವೆ ಮತ್ತು ರಕ್ಷಣಾ ತಯಾರಕರು ಈ ಉತ್ಪನ್ನ ಕ್ಷೇತ್ರ ಗಳಲ್ಲಿ ಒಪ್ಪಂದ ಗಳನ್ನು ನಿರೀಕ್ಷಿಸಬಹುದು.

ರಕ್ಷಣಾ ವಲಯದ ನಿರೀಕ್ಷೆಗಳು: ಭಾರತವು 2020ರಲ್ಲಿ ರಕ್ಷಣಾ ವಲಯಕ್ಕೆ 71 ಬಿಲಿಯನ್ ಯುಎಸ್ ಡಾಲರ್ ಖರ್ಚು ಮಾಡುವ ಮೂಲಕ ಖರ್ಚು ಮಾಡುವ ದೇಶಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಸಾಗಿದೆ ಮತ್ತು 2021ರ ವೇಳೆಗೆ ಅದು 75 ಬಿಲಿಯನ್ ಯುಎಸ್ ಡಾಲರ್‌ಗಳನ್ನು ತಲುಪುವ ನಿರೀಕ್ಷೆಯಿದೆ.

ಖರ್ಚು ಮಾಡುವವರ ಪಟ್ಟಿಯಲ್ಲಿ ಮೊದಲನೆಯದು US ಖರ್ಚು USD ೭೩೧ ಬಿಲಿಯನ್, ಎರಡನೆಯದು ಚೀನಾ USD 261 ಬಿಲಿಯನ್. ಚೀನಾ ಮತ್ತು ಪಾಕಿಸ್ತಾನದಿಂದ ಸಂಭವನೀಯ ಬೆದರಿಕೆಗಳನ್ನು ಎದುರಿಸಲು ಭಾರತವು ತನ್ನ ರಕ್ಷಣಾ ಸಾಮರ್ಥ್ಯ ಗಳನ್ನು ಬಲಪಡಿಸುತ್ತಲೇ ಇರುತ್ತದೆ.

ಪ್ರಸ್ತುತ ಭಾರತೀಯ ಪ್ರಧಾನಿ ಮೋದಿಯವರ ಸಮಯೋಚಿತ ಕಾರ್ಯಗತ ಗೊಳಿಸುವಿಕೆ, ಸುಧಾರಿತ ನೀತಿ ನಿಯಮಗಳು ತಾಂತ್ರಿಕ ಪ್ರಗತಿಗೆ ಕಾರಣವಾಗಲಿದ್ದು, ವಿದೇಶಿ ಉದ್ಯಮಗಾರರ ಪ್ರವೇಶಕ್ಕೆ ಹೆಚ್ಚಿನ ಅವಕಾಶಗಳಿವೆ. ನಿಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿರುವಂತೆ ಇತ್ತೀಚಿನ ದಿನಗಳಲ್ಲಿ, ಭಾರತವು ಮಾಡಿರುವ ಅತ್ಯಂತ ಸಂವೇದನಾಶೀಲ ಮತ್ತು ಕಾರ್ಯ ತಂತ್ರದ ಒಪ್ಪಂದ ವೆಂದರೆ EURO 7.87 ಬಿಲಿಯನ್‌ಗಳ, 36 ರಫೆಲ್ ಫೈಟರ್ ಜೆಟ್‌ಗಳನ್ನು ಖರೀದಿಸಲು ಫ್ರೆಂಚ್ ಸರ್ಕಾರದೊಂದಿಗೆ ನೇರ ಒಪ್ಪಂದ (ಒಪ್ಪಂದ ಹಣದ ಸಿಂಹಪಾಲು ನುಂಗುವ ದಳ್ಳಾಳಿ ಗಳಿಲ್ಲದೆ).

ಮುಂದಿನ ಪ್ರಮುಖ ಒಪ್ಪಂದವೆಂದರೆ ಭಾರತವು US ನಿರ್ಮಿಸಿದ F೧೫ ಫೈಟರ್ ಜೆಟ್‌ಗಳನ್ನು ಖರೀದಿಸುವುದು, F೧೫ ತಯಾರಕರಾದ ಬೋಯಿಂಗ್ ಗೆ US ಸರ್ಕಾರ ಇತ್ತೀಚಿಗೆ ಈ ಫೈಟರ್ ಜೆಟ್‌ಗಳನ್ನು ಭಾರತೀಯ ವಾಯುಪಡೆಗೆ ನೀಡಲು ಪರವಾನಗಿ ನೀಡಿದ್ದಾರೆ.

ನಾಗರಿಕ ವಿಮಾನಯಾನ ಕ್ಷೇತ್ರದ ನಿರೀಕ್ಷೆಗಳು: ಈ ವಲಯದ ಮೇಲೆ ಸಾಂಕ್ರಾಮಿಕ ರೋಗ 2020ರಲ್ಲಿ ಬಹಳ ಕೆಟ್ಟ ಪರಿಣಾಮ ಬೀರಿದೆ. ಒಂದು ಅಂದಾಜಿನ ಪ್ರಕಾರ ಒಟ್ಟಾರೆ 2699 ಮಿಲಿಯನ್ ಪ್ರಯಾಣಿಕರು ತಮ್ಮ ಪ್ರಯಾಣಗಳನ್ನು ಕಡಿತ ಗೊಳಿಸಿದ್ದಾರೆ. ಇದರ ಪರಿಣಾಮವಾಗಿ ಸುಮಾರು USD 370 ಬಿಲಿಯನ್ ಉದ್ಯಮಕ್ಕೆ ನಷ್ಟವಾಗಿದೆ. ಪ್ರಯಾಣಿಕರ ಸಂಚಾರ ದಟ್ಟಣೆ 2024ಕ್ಕಿಂತ ಮೊದಲು ಸಾಂಕ್ರಾಮಿಕ ಬರುವ ಮೊದಲು ಇದ್ದ ಮಟ್ಟಕ್ಕೆ ಹಿಂತಿರುಗುವುದಿಲ್ಲ. ಇದು ವಿಮಾನ ತಯಾರಕ ರಿಗೆ ಆದೇಶ ಪುಸ್ತಕದ ಮತ್ತು ವಿತರಣೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ.

ವಾಣಿಜ್ಯ ಏರೋಸ್ಪೇಸ್ ವಲಯದಲ್ಲಿ ಭಾರತವು ತೀರ್ವ ಬೆಳವಣಿಗೆಯನ್ನು ತೋರ್ಪಡಿಸುತ್ತಿರುವ ದೇಶ ಎಂದು ಗುರುತಿಸ ಲ್ಪಟ್ಟಿದೆ, ಮತ್ತು 2026ರ ಹೊತ್ತಿಗೆ ಭಾರತವು ಮೂರನೇ ಅತಿದೊಡ್ಡ ವಾಯುಯಾನ ಮಾರುಕಟ್ಟೆಯಾಗಲಿದೆ. ಕರೋನಾ ವಿರುದ್ಧದ ಪರಿಣಾಮಕಾರಿ ಲಸಿಕೆ ಪ್ರಯಾಣಿಕರ ಸಂಚಾರ ದಟ್ಟಣೆಯಲ್ಲಿ ಅಲ್ಪಾವಧಿಯ ಬೆಳವಣಿಗೆಗೆ ಕಾರಣವಾಗಬಹುದು, ಆದಾಗ್ಯೂ, ಇದು ಲಾಭದಾಯಕವಾದ ವ್ಯಾಪಾರ ಸಂಭಂದಪಟ್ಟ ಪ್ರಯಾಣಕ್ಕೆ ಆಗುತ್ತಿರುವ ಹಾನಿಯನ್ನು ಸರಿದೂಗಿಸುವ ಸಾದ್ಯತೆ ಬಹಳ ಕಡಿಮೆ, ವ್ಯಾಪಾರ ಸಂಭಂದಪಟ್ಟ ಪ್ರಯಾಣ ವಲಯ ಚೇತರಿಸಿಕೊಳ್ಳಲು ಎರಡು ಮೂರು ವರ್ಷಗಳು ತೆಗೆದುಕೊಳ್ಳಬಹುದು.

ವರ್ಚುಯಲ್ ಸಭೆಗಳು ದೀರ್ಘಕಾಲದವರೆಗೆ ವೈಯಕ್ತಿಕ ಸಭೆಗಳ ಬದಲು ಮುಂದುವರೆಯುವ ನಿರೀಕ್ಷೆಯಿದೆ. ಮೊದಲೇ ಹೇಳಿದಂತೆ, ಸಾಂಕ್ರಾಮಿಕವು ಪ್ರಯಾಣಿಕ ರಲ್ಲಿ ಕೆಲವು ನಡವಳಿಕೆಯ ಬದಲಾವಣೆಗಳಿಗೆ ಕಾರಣ ವಾಗಿದೆ. 2020ರ
ಅಕ್ಟೋಬರ್‌ನಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಶೇ.81 ಗ್ರಾಹಕರು ಮುಂದಿನ ಮೂರು ತಿಂಗಳಲ್ಲಿ ರಜೆಯ ವಿರಾಮಕ್ಕಾಗಿ ದೇಶೀಯ ವಿಮಾನ ಪ್ರಯಾಣವನ್ನು ಕೈಗೊಳ್ಳುವ ಸಾಧ್ಯತೆ ಇಲ್ಲ ಎಂದು ಹೇಳಿದ್ದಾರೆ, ಮತ್ತು ಶೇ.85 ಜನರು ಆ ಅವಧಿಯಲ್ಲಿ
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಯಾಣ ನಡೆಸುವ ಸಾಧ್ಯತೆ ಇಲ್ಲ ಎಂದು ಹೇಳಿದ್ದಾರೆ. ಗ್ರಾಹಕರ ನಡವಳಿಕೆಯಲ್ಲಿನ ಈ ಬದಲಾವಣೆಗಳು ಸಣ್ಣ ವಿಮಾನಗಳಿಗೆ ಹೆಚ್ಚು ಬೇಡಿಕೆ ಉಂಟಾಗಬಹುದು, ಇದು ಮಧ್ಯಮ ಅವಧಿಯಲ್ಲಿ ಚೇತರಿಕೆಯ ಹಾದಿಗೆ
ಕಾರಣವಾಗಬಹುದು.