ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಮನುಷ್ಯನ ಅತಿಯಾಸೆಗೆ ಬಲಿಯಾಗುವ ಜೀವಿಗಳು

ಮಾರ್ಗರೇಟ್ ವಿಜ್ಞಾನಿಯೇನೂ ಅಲ್ಲ; ಆದರೆ ಅವಳಿಗೆ ಸಂವಹನದ ಕಲೆಯ ಮೇಲೆ ಅಪಾರ ಆಸಕ್ತಿ ಇತ್ತು. ಮನುಷ್ಯರು ಒಂದು ದಿನ ಪ್ರಾಣಿಗಳೊಂದಿಗೆ ನಿಜವಾಗಿ ಮಾತನಾಡ ಬಹುದು ಎಂಬ ಕಲ್ಪನೆಯೇ ಅವಳನ್ನು ಆಕರ್ಷಿಸಿತ್ತು. ತಿಂಗಳುಗಳ ಕಾಲ, ಅವಳು ಆ ಕನಸಿನ ಮುಳುಗಿದ್ದಳು.

ಮನುಷ್ಯನ ಅತಿಯಾಸೆಗೆ ಬಲಿಯಾಗುವ ಜೀವಿಗಳು

-

ಒಂದೊಳ್ಳೆ ಮಾತು

1963ರಲ್ಲಿ, ನಾಸಾ (NASA) ಇತಿಹಾಸದಲ್ಲಿಯೇ ಅತ್ಯಂತ ವಿಚಿತ್ರವಾದ ಪ್ರಯೋಗಗಳಲ್ಲಿ ಒಂದನ್ನು ನಿಶ್ಶಬ್ದವಾಗಿ ಕಾರ್ಯಾಚರಣೆಗೆ ತಂದಿತು. ಈ ಪ್ರಯೋಗ ಡಾಲ್ಫಿನ್‌ಗಳಿಗೆ ಮಾನವ ಮಾತುಗಳನ್ನು ಅರ್ಥಮಾಡಿಸಲು ಪ್ರಯತ್ನ ಮಾಡುವುದು. ಈ ಯೋಜನೆ ಸೇಂಟ್ ಥಾಮಸ್ ದ್ವೀಪದಲ್ಲಿರುವ ನೀರಿನಿಂದ ತುಂಬಿದ ಪ್ರಯೋಗಾಲಯದಲ್ಲಿ ನಡೆಯಿತು, ಅಲ್ಲಿ ಮಾರ್ಗರೇಟ್ ಹೋ ಲವಟ್ ಎಂಬ ಯುವ ಸಂಶೋಧಕಿ ಹಗಲು-ರಾತ್ರಿ ಪೀಟರ್, ಪ್ಯಾಮೆಲಾ, ಮತ್ತು ಸಿಸಿ ಎನ್ನುವ ಮೂರು ಡಾಲ್ಫಿನ್‌ ಗಳೊಂದಿಗೆ ವಾಸಿಸಲು ಸ್ವಯಂಪ್ರೇರಣೆಯಿಂದ ಈ ಪ್ರಯೋಗಕ್ಕೆ ಮೊದಲಾದಳು.

ಮಾರ್ಗರೇಟ್ ವಿಜ್ಞಾನಿಯೇನೂ ಅಲ್ಲ; ಆದರೆ ಅವಳಿಗೆ ಸಂವಹನದ ಕಲೆಯ ಮೇಲೆ ಅಪಾರ ಆಸಕ್ತಿ ಇತ್ತು. ಮನುಷ್ಯರು ಒಂದು ದಿನ ಪ್ರಾಣಿಗಳೊಂದಿಗೆ ನಿಜವಾಗಿ ಮಾತನಾಡ ಬಹುದು ಎಂಬ ಕಲ್ಪನೆಯೇ ಅವಳನ್ನು ಆಕರ್ಷಿಸಿತ್ತು. ತಿಂಗಳುಗಳ ಕಾಲ, ಅವಳು ಆ ಕನಸಿನ ಮುಳುಗಿದ್ದಳು.

ಮೂರು ಡಾಲ್ಫಿನ್ ಗಳಲ್ಲಿ ಪೀಟರ್ ಅತ್ಯಂತ ಕಿರಿಯದಾಗಿದ್ದು, ಕುತೂಹಲದಿಂದ ಆಟವಾ ಡುವ ಸ್ವಭಾವ ಅದರದಾಗಿತ್ತು ಮತ್ತು ಇತರ ಡಾಲ್ಫಿನ್‌ಗಳಿಗಿಂತ ಹೆಚ್ಚು ಭಾವನಾತ್ಮಕ ವಾಗಿ ಮಾರ್ಗರೇಟ್‌ಗೆ ಅಂಟಿಕೊಂಡಿತ್ತು. ಇಬ್ಬರೂ ಗಂಟೆಗಟ್ಟಲೆ ಒಟ್ಟಿಗೆ ಕಾಲ ಕಳೆಯು ತ್ತಿದ್ದರು- ಧ್ವನಿಗಳನ್ನು ಪುನರಾವರ್ತಿಸುತ್ತಾ, ಅರ್ಥದ ಹೊಸ ರೀತಿ ಹುಟ್ಟು ಹಾಕುತ್ತಾ. ನಿಧಾನವಾಗಿ, ಶಬ್ದಗಳಿಗಿಂತಲೂ ಆಳವಾದ ಒಂದು ಬಂಧ ಪೀಟರ್ ಮತ್ತು ಸಹಾಯಕಿ ಮಾರ್ಗರೇಟ್ ನಡುವೆ ಬೆಳೆಯಿತು.

ಇದನ್ನೂ ಓದಿ: Roopa Gururaj Column: ದುಡುಕಿ ಜನ್ಮ ಹಾಳು ಮಾಡಿಕೊಂಡ ಜಯ-ವಿಜಯರು

ಇದು ಒಂದು ರೀತಿ ಭಾಷೆಯಾಚೆಯ ಸಂಪರ್ಕ. ಆಶ್ಚರ್ಯವೆನಿಸುವಂತೆ ನಾಸಾ ಒಮ್ಮೆ ಇದ್ದಕ್ಕಿದ್ದಂತೆ ಹಣಕಾಸು ವ್ಯವಸ್ಥೆಯನ್ನು ಸ್ಥಗಿತಗೊಳಿಸಿತು. ಪ್ರಯೋಗವನ್ನು ತಕ್ಷಣವೇ ನಿಲ್ಲಿಸಲಾಯಿತು. ಡಾಲ್ಫಿನ್‌ಗಳನ್ನು ಬೇರ್ಪಡಿಸಲಾಯಿತು. ಪೀಟರ್ ಅನ್ನು ನೂರಾರು ಮೈಲು ದೂರದ ಸಣ್ಣ ಕೇಂದ್ರಕ್ಕೆ ಕಳುಹಿಸಲಾಯಿತು.

ಸಹಾಯಕಿ ಮಾರ್ಗರೇಟ್‌ಗೆ ವಿದಾಯ ಹೇಳುವ ಅವಕಾಶವೂ ಸಿಗಲಿಲ್ಲ. ಕೆಲವು ದಿನಗಳ ನಂತರ ಬಂದ ಸುದ್ದಿ ಅವಳ ಹೃದಯನ್ನೇ ಒಡೆದು ಬಿಟ್ಟಿತು. ಡಾಲ್ಫಿನ್ ಪೀಟರ್ ಉಸಿರಾಟ ನಿಲ್ಲಿಸಿ ಸಾವನ್ನಪ್ಪಿತ್ತು. ಅದಕ್ಕೆ ಯಾವ ಕಾಯಿಲೆಯೂ ಇರಲಿಲ್ಲ, ಯಾವ ಗಾಯವೂ ಇರಲಿಲ್ಲ. ಡಾಲ್ಫಿನ್ ಗಳು ತಮ್ಮ ಉಸಿರಾಟವನ್ನು ನಿಯಂತ್ರಿಸಬಲ್ಲವು; ಬದುಕುವ ಇಚ್ಛೆ ಕಳೆದುಕೊಂಡಾಗ, ಅವು ಸುಮ್ಮನೆ ಉಸಿರಾಡುವುದನ್ನು ನಿಲ್ಲಿಸುವ ಶಕ್ತಿಯನ್ನು ಹೊಂದಿವೆ.

ಡಾಲ್ಫಿನ್ ಪೀಟರ್ ತನ್ನ ಒಬ್ಬಳೇ ಸ್ನೇಹಿತೆಯನ್ನು ಕಳೆದುಕೊಂಡಿದ್ದ ಮತ್ತು ಅದರೊಂದಿ ಗೆ, ಬದುಕುವ ಇಚ್ಛೆಯನ್ನೂ ಕಳೆದುಕೊಂಡಿದ್ದ. ಪ್ರಯೋಗಾಲಯವನ್ನು ನಿರ್ವಹಿಸಿದ್ದ ವಿಜ್ಞಾನಿ ನಂತರ ಹೇಳಿದರಂತೆ- ಅಗಲಿಕೆಯನ್ನು ಆ ಡಾಲ್ಫಿನ್ ಸಹಿಸಲಾಗಲಿಲ್ಲ, ಮುಗ್ಧ ಪ್ರಾಣಿಗೆ ಅದು ಪ್ರೀತಿಯಾಗಿತ್ತು, ಅದು ಇಲ್ಲವಾದಾಗ ಅದರ ಜಗತ್ತೂ ಮುಗಿಯಿತು.

ಬಹಳ ವರ್ಷಗಳ ನಂತರ ಮಾರ್ಗರೇಟ್ ಆ ಘಟನೆಯ ಬಗ್ಗೆ ನಿಧಾನವಾಗಿ ಮಾತನಾಡಿ ದ್ದಳು. ಈ ದುರಂತ ನಡೆದದ್ದು ನಂಬಿಕೆ ದ್ರೋಹದಿಂದ. ನಾವು ಪ್ರಕೃತಿಯ ಮಿತಿಯನ್ನು ಮೀರಿ ಹೋದಾಗ ಆಗುವ ಇಂಥ ದುರಂತಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಮಾನವ ಮತ್ತು ಪ್ರಾಣಿ ಸಂವಹನದ ಕನಸಿನಿಂದ ಆರಂಭವಾದ ಆ ಯೋಜನೆ, ಕೊನೆಗೆ ಒಂಟಿತನ, ಖಿನ್ನತೆ ಮತ್ತು ಪ್ರಾಣಿಗಳ ಭಾವನಾತ್ಮಕ ಆಳದ ಕುರಿತು ಒಂದು ಕಠಿಣ ಪಾಠವಾಗಿ ಮುಗಿಯಿತು.

2014ರ ‘ದಿ ಗಾರ್ಡಿಯನ್’, ‘ಬಿಬಿಸಿ ಡಾಕ್ಯುಮೆಂಟರಿಯಲ್ಲಿ, ‘ದ ಗರ್ಲ್ ಹೂ ಟಾಕ್ಡ್ ಟು ಡಾಲ್ಫಿನ್ಸ್ 2014’ ಸರಣಿಯಲ್ಲಿ ಈ ಘಟನೆ ದಾಖಲಾಗಿದೆ. ನಿಜವೇ ಅಲ್ಲವೇ? ವಿಜ್ಞಾನ ಸಹಾನುಭೂತಿಯನ್ನು ಮರೆತಾಗ ನಡೆಯುವ ಇಂಥ ದುರಂತಗಳು ಅದೆಷ್ಟೋ ಬಯಲಿಗೆ ಬರುವುದೇ ಇಲ್ಲ.

ಜ್ಞಾನ ಪಡೆಯುವ ಬೆಲೆ, ಎಂದಿಗೂ ಮತ್ತೊಬ್ಬ ಜೀವಿಯನ್ನು ನೋಯಿಸುವುದಲ್ಲ. ನಾವೆಲ್ಲರೂ ಇಂದು ಮುಂದುವರಿದ ದೇಶಗಳ ಪ್ರಜೆಗಳಾಗಿದ್ದೇವೆ. ಆದರೆ ನಾವು ನೆನಪಿಟ್ಟು ಕೊಳ್ಳಬೇಕಾದ ವಿಚಾರ- ದಯೆಗಿಂತ ಮಿಗಿಲಾದ ಮನುಷ್ಯತ್ವ ಮತ್ಯಾವುದೂ ಇಲ್ಲ. ಪ್ರಾಣಿ ಗಳ ವಿಚಾರವಾಗಲಿ ಮನುಷ್ಯರ ವಿಚಾರವಾಗಲಿ ನಮ್ಮ ಸಾಧನೆಯನ್ನು ಬಿಂಬಿಸಲು ಒಂದು ಜೀವಿಗೂ ನೋವುಂಟಾಗುವುದಿದ್ದರೆ ಆ ಸಾಧನೆಯ ಮೌಲ್ಯ ಶೂನ್ಯ.

ಇಂದಿಗೂ ನಾವು ಕಲಿಯಬೇಕಾಗಿರುವ ಪಾಠ ಮಾನವೀಯತೆಯದ್ದು, ಮನುಷ್ಯತ್ವದ್ದು. ಇದಿಲ್ಲದಿದ್ದರೆ ನಾವು ಭೂಮಿಯಲ್ಲಿ ಬದುಕಲು ಅನರ್ಹರು.