Wednesday, 18th September 2024

ಹೊಸಕಾಲದ ಭೂಗತ ಜಗತ್ತು ಸೈಬರ್‌ ಕ್ರೈಮ್ !

ಗಂಟಾಘೋಷ

ಗುರುರಾಜ್ ಗಂಟಿಹೊಳೆ

ಕಾಸೆಯ ಘಟನೆಯೆಂದೇ ಪ್ರಸಿದ್ಧವಾದ ರಷ್ಯನ್ ಹ್ಯಾಕಿಂಗ್ ಗುಂಪು REvil ಮತ್ತು Kaseya Ransomware ನೆಟ್ವರ್ಕ್ ದಾಳಿಯನ್ನು ಜುಲೈ- ೨೦೨೧ ರಲ್ಲಿ ವಿಶ್ವವ್ಯಾಪಿ ಗ್ರಾಹಕರ ಮೇಲೆ ದಾಳಿ ನಡೆಸಿತು. ಆನಂತರ, ಇದನ್ನು ಸರಿ(ಡಿಕ್ರಿ) ಮಾಡಿಕೊಡಲು ೭೦ ಮಿಲಿಯನ್ ಡಾಲರ್ ಬೇಡಿಕೆಯಿಟ್ಟಿತು. ಇದು ಎಷ್ಟು ಭೀಕರವಾದ ಸೈಬರ್ ದಾಳಿಯಾಗಿತ್ತೆಂದರೆ, ಅಮೆರಿಕ ಸರಕಾರವು ರೆವಿಲ್ ಸದಸ್ಯರ ಸುಳಿವು ನೀಡಿದವರಿಗೆ ೧೦ ಮಿಲಿಯನ್ ಡಾಲರ್ ಬಹುಮಾನ ಘೋಷಿಸಿತು. ಈ ದಾಳಿಯ ರೂವಾರಿ ೨೨ ವರ್ಷದ ಯಾರೋಸ್ಲಾವ್ ವಸಿನ್ಸ್ಕಿ ಎಂಬಾತನಾಗಿದ್ದ.

Stuxnet ಎನ್ನುವ ವೈರಸ್, SCADA (ಮೇಲ್ವಿಚಾರಣಾ ನಿಯಂತ್ರಣ ಮತ್ತು ಡೇಟಾ ಸ್ವಾಧೀನ) ವ್ಯವಸ್ಥೆಗಳನ್ನು ಗುರಿಯಾಗಿಸುವ, ಕಂಪ್ಯೂಟರ್ ವರ್ಮ್ ಆಗಿ ಪರಿವರ್ತನೆಗೊಂಡು ಇರಾನ್‌ನ ಪರಮಾಣು ಶಕ್ತಿ ಕಾರ್ಯಕ್ರಮದ ವಿನಾಶಕ್ಕೆ ಹಾನಿಯನ್ನುಂಟು ಮಾಡುವ ಉದ್ದೇಶದಿಂದ USB ಡ್ರೈವ್
ಗಳ ಮೂಲಕ ಮೈಕ್ರೋಸಾಫ್ಟ್ ವಿಂಡೋಸ್ ಆಪರೇಟಿಂಗ್ ಸಿಸ್ಟಮ್‌ಗಳ ಮೇಲೆ ೨೦೧೦ ರಲ್ಲಿ ಭೀಕರ ದಾಳಿ ಮಾಡಿತ್ತು. ಇದರಂತೆ, ಮ್ಯಾರಿಯಟ್
ಹೋಟೆಲ್ಸ್ (೫೦೦ ಮಿಲಿಯನ್ ಬೃಹತ್ ಡೇಟಾ ದುರ್ಬಳಕೆ)ಗ್ರಾಹಕರ ಅಪರಾಧವಾಗಿರಬಹುದು, ರಾಕ್ಯು(ಆಟದ ಕ್ಷೇತ್ರದಲ್ಲಿನ ಸಾರ್ವಕಾಲಿಕ ಅತಿ ದೊಡ್ಡ ಡೇಟಾ ಉಲ್ಲಂಘನೆ ಆರೋಪ) ಡೇಟಾ ಉಲ್ಲಂಘನೆ ಅಪರಾಧವಾಗಿರಬಹುದು, ಇವುಗಳೆಲ್ಲ ಆಯಾ ಕಾಲಕ್ಕೆ ಸೈಬರ್ ಅಪರಾಧಗಳ ವಿವಿಧ ಹಂತಗಳ ಮುಖಗಳನ್ನು ಜಗತ್ತಿಗೆ ಅನಾವರಣ ಮಾಡುತ್ತಿವೆ ಮತ್ತು ಈ ಮೂಲಕ, ಇದನ್ನು ತಡೆಯುವಂತಹ ತಂತ್ರeನಕ್ಕೆ ನೇರವಾಗಿ ಸವಾಲು ಹಾಕು ತ್ತಿವೆ ಎನ್ನಬಹುದು.

ಇಂತಹ ಅದೆಷ್ಟೋ ಘಟನೆಗಳು ಬಹಿರಂಗಗೊಳ್ಳದಿರಬಹುದು, ಆದರೆ ಪ್ರಸ್ತುತ ದಿನಗಳಲ್ಲಿ ಈ ಸೈಬರ್ ಅಪರಾಧಗಳ ವ್ಯಾಪ್ತಿ, ಅಗಾಧತೆ ಮತ್ತು ಈ ಮೂಲಕ ಸೈಬರ್ ಅಪರಾಧಿಗಳು ಗಳಿಕೆ ಸಾಮಾನ್ಯರ ಊಹೆಗೂ ಮೀರಿದ್ದು. ಅಂತೆಯೇ, ವಿಶ್ವವ್ಯಾಪಿಯಾಗಿರುವ ಈ ಸೈಬರ್ ಕ್ರೈಮ, ನಮ್ಮ ನಿಮ್ಮ ನಡುವೆ, ಸುತ್ತಮುತ್ತ ಸದ್ದಿಲ್ಲದೇ ನಡೆದಿರುವ ಮತ್ತು ನಡೆದುಬಿಡಬಹುದಾದ ಸಾಧ್ಯತೆಗಳು ಹೆಚ್ಚು. ಹಾಗಾಗಿ, ಈ ತೆರನಾದ ಅಪರಾಧಗಳನ್ನು ಮೂರು ಮುಖ್ಯ ವಿಭಾಗಗಳಾಗಿ ವರ್ಗೀಕರಿಸಬಹುದಾಗಿದ್ದು, ಅವುಗಳಾವುವೆಂದರೆ,

-ಸರಕಾರದ ವಿರುದ್ಧ ಮಾಡಲಾದ ಸೈಬರ್ ಅಪರಾಧಗಳು: (ಸೈಬರ್ ಭಯೋತ್ಪಾದನೆ)

-ವ್ಯಕ್ತಿಗಳ ವಿರುದ್ಧ ಮಾಡಲಾಗುವ ಸೈಬರ್ ಅಪರಾಧಗಳು: (ಅಶ್ಲೀಲ ಚಿತ್ರ ಪ್ರದರ್ಶನ, ಸೈಬರ್ ಸ್ಟಾಲ್ಕಿಂಗ್, ಸೈಬರ್ ಮಾನಹಾನಿ)
-ಸ್ವತ್ತುಗಳ ವಿರುದ್ಧ ಮಾಡಲಾಗುವ ಅಪರಾಧಗಳು: (ಆನ್ಲೈನ್ ಜೂಜು, ಬೌದ್ಧಿಕ ಸ್ವತ್ತಿನಹಕ್ಕು ಅತಿಕ್ರಮ, ಕ್ರೆಡಿಟ್ ಕಾರ್ಡ್ ವಂಚನೆ) ಇತ್ಯಾದಿ.
-ಸೈಬರ್ ಅಪರಾಧ ಎಂಬುದನ್ನು ಗಮನಿಸಿದಾಗ, ಕಂಪ್ಯೂಟರ್ ಉದ್ಯಮ ಮತ್ತು ನೆಟ್ವರ್ಕ್‌ಗಳಲ್ಲಿ ಇತ್ತೀಚಿನ ವಿಕಾಸದ ನಂತರ ಸೈಬರ್ ಕ್ರೈಮ ಎಂಬ
ಪದವನ್ನು ಪರಿಚಯಿಸಲಾಯಿತು.

ಅಷ್ಟಕ್ಕೂ, ಸೈಬರ್ ಅಪರಾಧಿಗಳು ಯಾರು ಎಂದು ಅವಲೋಕಿಸಿದಾಗ, ದುರುದ್ದೇಶಪೂರಿತ ಕೃತ್ಯಗಳು, ಕಾನೂನುಬಾಹಿರ ಚಟುವಟಿಕೆಗಳನ್ನು ಮಾಡಲು ತಂತ್ರeನದಲ್ಲಿ ತಮ್ಮ ಕೌಶಲ್ಯಗಳನ್ನು ಬಳಸುವ ಏಕ ವ್ಯಕ್ತಿ, ಹಲವು ವ್ಯಕ್ತಿಗಳು ಅಥವಾ ಅನೇಕ ತಂಡಗಳಾಗಿ ತೊಡಗಿರುವವರನ್ನು Cyber Criminals ಎಂದು ಪರಿಗಣಿಸಲಾಗುತ್ತದೆ. ಸೈಬರ್ ಅಪರಾಧಿಗಳು, ಹೆಚ್ಚಾಗಿ ತಮ್ಮ ಕಾನೂನುಬಾಹಿರ ಸೇವೆಗಳನ್ನು ಅಥವಾ ಉತ್ಪನ್ನಗಳನ್ನು ಒದಗಿಸಲು ಡಾರ್ಕ್ ವೆಬ್ ಎಂಬಂತಹ ತಾಣಗಳಲ್ಲಿ ವ್ಯಾಪಕವಾಗಿರುತ್ತಾರೆ.

ಹಾಗೆಂದ ಮಾತ್ರಕ್ಕೆ ಪ್ರತಿಯೊಬ್ಬ ಹ್ಯಾಕರ್ ಸೈಬರ್ ಕ್ರಿಮಿನಲ್ ಅಲ್ಲ, ಏಕೆಂದರೆ ಹ್ಯಾಕಿಂಗ್ ಅನ್ನು ಅಪರಾಧ ಎಂದು ಪರಿಗಣಿಸಲಾಗುವುದಿಲ್ಲ. ಏಕೆಂದರೆ ಇದನ್ನು ವರದಿ ಮಾಡಲು ಮತ್ತು ದೋಷಗಳನ್ನು ಬಹಿರಂಗಪಡಿಸಲು ಕೂಡ ಬಳಸಲಾಗುತ್ತದೆ. ಇದನ್ನು ವೈಟ್ ಹ್ಯಾಟ್ ಹ್ಯಾಕರ್ ಎಂದು ಕರೆಯಲಾಗುತ್ತದೆ. ಹ್ಯಾಕಿಂಗ್‌ನಿಂದ ಯಾವುದೇ ಹಾನಿಕಾರಕ ಚಟುವಟಿಕೆಗಳನ್ನು ನಡೆಸುವ ಉದ್ದೇಶವನ್ನು ಹೊಂದಿರುವುದನ್ನು ಸೈಬರ್ ಕ್ರೈಮ್ ಎಂದು ಪರಿಗಣಿಸಲಾಗುತ್ತದೆ ಮತ್ತು ಇದನ್ನು ಬ್ಲ್ಯಾಕ್ ಹ್ಯಾಟ್‌ಹ್ಯಾಕರ್ ಎಂದು ಕರೆಯಲಾಗುತ್ತದೆ. ಇದಕ್ಕೆ ಸಂಬಂಧಿಸಿದ ಕೆಲ ಅಪರಾಧಗಳನ್ನು ಗಮನಿಸಿದರೆ, ಬ್ಲ್ಯಾಕ್ ಹ್ಯಾಟ್ ಹ್ಯಾಕರ್ಸ್, ಸೈಬರ್ ಸ್ಟಾಕರ್ಸ್, ಸೈಬರ್ ಭಯೋತ್ಪಾದಕರು, ವಂಚಕರು ಇದರಡಿಯಲ್ಲಿ ಬರುತ್ತಾರೆ.

ಪ್ರಪಂಚವು ನಿರಂತರವಾಗಿ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತಿದೆ. ಆದ್ದರಿಂದ ಈಗ, ತಂತ್ರಜ್ಞಾನದ ಮೇಲೆ ದೊಡ್ಡ ಅವಲಂಬನೆಯನ್ನು
ಹೊಂದಿದೆ. ಹೆಚ್ಚಿನ ಸ್ಮಾರ್ಟ್ ಸಾಧನಗಳು ಇಂಟರ್ನೆಟ್ ಸಂಪರ್ಕಕ್ಕೆ ಒಳಗೊಂಡಿರುವುದರಿಂದ ಪ್ರಯೋಜನಗಳಿದ್ದಷ್ಟೂ ಅಪಾಯಗಳೂ ಇವೆ
ಎಂಬುದನ್ನು ನಾವೆಲ್ಲ ಗಮನಿಸಬೇಕಾಗಿದೆ. ಜೊತೆಗೆ, ಪ್ರಸ್ತುತ ಅಪಾಯಗಳಲ್ಲಿ ಸೈಬರ್ ಅಪರಾಧಗಳ ಸಂಖ್ಯೆಯಲ್ಲಿ ದೊಡ್ಡ ಏರಿಕೆಯಾಗಿದೆ, ಈ ವಿಧದ ಅಪರಾಧಗಳನ್ನು ಸಮರ್ಪಕವಾಗಿ ತಡೆಯಲು, ನಿರ್ವಹಿಸಲು ಮತ್ತು ಸೂಕ್ತ ಸಹಾಯ ಮಾಡಲು ಸಾಕಷ್ಟು ಭದ್ರತಾ ಕ್ರಮಗಳು ಮತ್ತು ತಂತ್ರಜ್ಞಾನ ಗಳನ್ನು ರೂಪಿಸದಿರುವುದು ಸಹ ಒಂದು ಪ್ರಮುಖ ಹಿನ್ನಡೆ ಎನ್ನಬಹುದು.

ಅಪರಾಧ ತಡೆಗೆ ಇರುವ ದುರ್ಬಲ ಸಾಧನಗಳು, ವೈಯಕ್ತಿಕ ಪ್ರೇರಣೆ, ಆರ್ಥಿಕ ಪ್ರೇರಣೆ ಮತ್ತು ಸೈಬರ್ ಅಪರಾಧಗಳ ಎರಡು ಮುಖ್ಯ ವಿಧಗಳಾದ ಟಾರ್ಗೆಟಿಂಗ್ ಕಂಪ್ಯೂಟರ್ (ಕಂಪ್ಯೂಟರ್ ಸಾಧನಗಳಿಗೆ ಹಾನಿಯನ್ನುಂಟುಮಾಡುವ ಎಲ್ಲಾ ಸಂಭಾವ್ಯ ಮಾರ್ಗಗಳನ್ನು ಒಳಗೊಂಡಿರುತ್ತದೆ ಉದಾಹರಣೆಗೆ ಮಾಲ್ವೇರ್ ಅಥವಾ ಸೇವಾ ದಾಳಿಯ ನಿರಾಕರಣೆ) ಮತ್ತು ಯೂಸಿಂಗ್ ಕಂಪ್ಯೂಟರ್ (ಇಂತಹ ಅಪರಾಧಗಳಿಗೆ ಎಲ್ಲಾ ರೀತಿಯ ತಂತ್ರಜ್ಞಾನ ಹೊಂದಿರುವ ಕಂಪ್ಯೂಟರ್‌ಗಳ ಬಳಕೆ ಮಾಡುವುದು). ಸೈಬರ್ ಅಪರಾಧಗಳನ್ನು ಸಾಮಾನ್ಯವಾಗಿ ನಾಲ್ಕು ವರ್ಗಗಳಾಗಿ ವಿಂಗಡಿಸಿದ್ದು,
೧. ವೈಯಕ್ತಿಕ ಸೈಬರ್ ಅಪರಾಧಗಳು: ಈ ಪ್ರಕಾರವು ವ್ಯಕ್ತಿಗಳನ್ನು ಗುರಿಯಾಗಿಸುತ್ತದೆ. ಇದು ಫಿಶಿಂಗ್, ವಂಚನೆ, ಸ್ಪ್ಯಾಮ, ಸೈಬರ್ ಸ್ಟಾಕಿಂಗ್
ಮತ್ತು ಹೆಚ್ಚಿನದನ್ನು ಒಳಗೊಂಡಿದೆ.

೨. ಸಂಸ್ಥೆ ಸೈಬರ್ ಅಪರಾಧಗಳು: ಇಲ್ಲಿ ಪ್ರಮುಖ ಗುರಿ ಸಂಸ್ಥೆಗಳು. ಸಾಮಾನ್ಯವಾಗಿ, ಮಾಲ್ವೇರ್ ದಾಳಿಗಳು ಮತ್ತು ಸೇವಾ ದಾಳಿಯ ನಿರಾಕರಣೆ ಸೇರಿದಂತೆ ಅಪರಾಽಗಳ ತಂಡಗಳಿಂದ ಈ ರೀತಿಯ ಅಪರಾಧವನ್ನು ಮಾಡಲಾಗುತ್ತದೆ.

೩. ಆಸ್ತಿ ಸೈಬರ್ ಅಪರಾಧಗಳು: ಈ ಪ್ರಕಾರವು ಕ್ರೆಡಿಟ್ ಕಾರ್ಡ್‌ಗಳು ಅಥವಾ ಬೌದ್ಧಿಕ ಆಸ್ತಿ ಹಕ್ಕುಗಳಂತಹ ಆಸ್ತಿಯನ್ನು ಗುರಿಯಾಗಿಸುತ್ತದೆ.
೪. ಸಮಾಜ ಸೈಬರ್ ಅಪರಾಧಗಳು: ಸೈಬರ್ -ಭಯೋತ್ಪಾದನೆಯನ್ನು ಒಳಗೊಂಡಿರುವುದರಿಂದ ಇದು ಸೈಬರ್ ಅಪರಾಧದ ಅತ್ಯಂತ ಅಪಾಯಕಾರಿ
ರೂಪವಾಗಿದೆ.

ಇದರೊಂದಿಗೆ, ಸಾಮಾನ್ಯ ಸೈಬರ್ ಅಪರಾಧಗಳೂ ಸಹ ಇರುವುದನ್ನು ನಾವು ಗಮನಿಸಬಹುದಾಗಿದೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ; ಫಿಶಿಂಗ್
ಮತ್ತು ಹಗರಣ, ಗುರುತಿನ ಕಳ್ಳತನ, Ransomware ಅಟ್ಯಾಕ್, ಕಂಪ್ಯೂಟರ್ ನೆಟ್ವರ್ಕ್ ಹ್ಯಾಕಿಂಗ್, ಇಂಟರ್ನೆಟ್ ವಂಚನೆಗಳ ಜೊತೆಗೆ ಸೈಬರ್ ಬೆದರಿಸು ವಿಕೆ, ಸೈಬರ್ ಸ್ಟಾಕಿಂಗ್, ಸಾ-ವೇರ್ ಪೈರಸಿ, ಸಾಮಾಜಿಕ ಮಾಧ್ಯಮ ವಂಚನೆಗಳು ಸೇರಿವೆ. ಬಹುದೊಡ್ಡಮಟ್ಟದಲ್ಲಿ ಆನ್ಲೈನ್ ಡ್ರಗ್ ಟ್ರಾಫಿಕಿಂಗ್, ಕೊಕೇನ್, ಹೆರಾಯಿನ್ ಅಥವಾ ಗಾಂಜಾದಂತಹ ಕಾನೂನು ಬಾಹಿರ ಡ್ರಗ್ಸ್ ಅನ್ನು ಸಾಮಾನ್ಯವಾಗಿ ಆನ್‌ಲೈನ್‌ಲ್ಲಿ ಮಾರಾಟ ಮಾಡಲಾಗುವಂತಹ ಡಾರ್ಕ್ ವೆಬಗಳೂ ಸಹ ವಿಶ್ವವ್ಯಾಪಿಯಾಗಿ ಚಾಲನೆಯಲ್ಲಿರುವುದನ್ನು ಮಾಧ್ಯಮಗಳು ಆಗಾಗ ವರದಿ ಮಾಡಿವೆ.

ಇದೇ ವಿಚಾರವನ್ನು ನಾವು ಸ್ಥಳೀಯವಾಗಿ ಗಮನಹರಿಸಿದಾಗ, ಹೆಚ್ಚು ಜನಪ್ರಿಯವಾಗಿ ಬೆಳೆಯುತ್ತಿರುವ ಸಾಮಾನ್ಯ ಸೈಬರ್ ಕ್ರೈಮ್‌ಗಳಲ್ಲಿ ವಂಚನೆಯೂ ಒಂದಾಗಿದ್ದು, ಅರ್ಜಿದಾರರಿಂದ ಹಣಕಾಸಿನ ಲಾಭ ಪಡೆಯುವ ಉದ್ದೇಶದಿಂದ ಮತ್ತು ಅವರ ವೈಯಕ್ತಿಕ ಡೇಟಾವನ್ನು ಬಳಸಿಕೊಳ್ಳುವ ಉದ್ದೇಶದಿಂದ ನಕಲಿ ಕಂಪನಿಗಳು ಬಿಡುಗಡೆ ಮಾಡುವ ನಕಲಿ ಉದ್ಯೋಗಾವಕಾಶಗಳಂತಹ ಅಪರಾಧಗಳು ಆನ್‌ಲೈನ್ ನೇಮಕಾತಿ ವಂಚನೆಗೆ ಸೇರಿದ್ದಾಗಿವೆ.

ಪ್ರತಿವರ್ಷ ಡೇಟಾ ಉಲ್ಲಂಘನೆಗಳ ಜೊತೆಗೆ ಇತರೆ ಜಾಗತಿಕ ಸೈಬರ್ ಬೆದರಿಕೆಯು ತ್ವರಿತಗತಿಯಲ್ಲಿ ಹೆಚ್ಚುತ್ತಲೇ ಇದೆ. ರಿ ಬೇ ಸೆಕ್ಯುರಿಟಿ ವರದಿ ಪ್ರಕಾರ, ೨೦೧೯ರ ಮೊದಲರ್ಧ ವರ್ಷದಲ್ಲಿ ೮ ಶತಕೋಟಿ ದಾಖಲೆಗಳಷ್ಟು ಡೇಟಾ ಉಲ್ಲಂಘನೆಗಳಾಗಿವೆ ಎಂದು ಬಹಿರಂಗಪಡಿಸಿದೆ. ಈ ಅಂಕಿ ಅಂಶವು ೨೦೧೮ರ ಕೊನೆಯರ್ಧದ ಅವಽಯಲ್ಲಿ ಬಹಿರಂಗಪಡಿಸಿದ ದಾಖಲೆಗಳ ಸಂಖ್ಯೆಗಿಂತ ೧೧೨%ರಷ್ಟು ಹೆಚ್ಚಾಗಿರುವುದು ಅತ್ಯಂತ ಆತಂಕಕಾರಿಯಾಗಿದೆ.
ಸೈಬರ್ ಬೆದರಿಕೆಯ ಪ್ರಮಾಣ ಹೆಚ್ಚುತ್ತಲೇ ಇರುವುದರಿಂದ, ಸೈಬರ್ ಸೆಕ್ಯುರಿಟಿ ಪರಿಹಾರಗಳ ಮೇಲಿನ ಜಾಗತಿಕ ಖರ್ಚು ಸ್ವಾಭಾವಿಕವಾಗಿ ಹೆಚ್ಚುತ್ತಿದೆ.
೨೦೨೩ರಲ್ಲಿ ಸೈಬರ್ ಸುರಕ್ಷತೆಯ ವೆಚ್ಚವು ೧೮೮ ಶತಕೋಟಿ ಡಾಲರ್ ತಲುಪಿದೆ. ಮತ್ತು ೨೦೨೬ರ ವೇಳೆಗೆ ಜಾಗತಿಕವಾಗಿ ೩೦೦ ಶತಕೋಟಿ ಡಾಲರ್ ಮೀರುತ್ತದೆ ಎಂದು ಸೈಬರ್ ತಜ್ಞರು ಭವಿಷ್ಯ ನುಡಿದಿದ್ದಾರೆ.

ಅಮೆರಿಕದಲ್ಲಿ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಟ್ಯಾಂಡ‌ರ್ಡ್ಸ್ ಅಂಡ್ ಟೆಕ್ನಾಲಜಿ (NIST) ಸೈಬರ್-ಸೆಕ್ಯುರಿಟಿ ಫ್ರೇಮ್ವರ್ಕ್ ರಚಿಸಿದ್ದು, ದುರುದ್ದೇಶ ಪೂರಿತ ಪ್ರಕರಣಗಳನ್ನು ಎದುರಿಸಲು ಈ ಸಂಸ್ಥೆಯು ಸಹಾ ಯಮಾಡುತ್ತದೆ. ಇನ್ನು, ಈ ವಿಚಾರದಲ್ಲಿ ಭಾರತವು ಕೈಗೊಂಡಿರುವ ಉಪಕ್ರಮಗಳ ಕುರಿತು ಅವಲೋಕಿಸಿದಾಗ, ಮಾಹಿತಿ ತಂತ್ರeನ ಕಾಯಿದೆ (೨೦೦೦) ಯನ್ನು ಸ್ಥಾಪಿಸಿದ್ದು, ಇದು ಹ್ಯಾಕಿಂಗ್, ಡೇಟಾ ಕಳ್ಳತನ, ಸೈಬರ್ ಭಯೋತ್ಪಾದನೆಯಂತಹ ಅಪರಾಧಗಳಿಗೆ ದಂಡವನ್ನು ಮತ್ತು ಕಾನೂನು ಕ್ರಮ ಜರುಗಿಸಲು ಅಧಿಕಾರವನ್ನು ನೀಡುತ್ತದೆ. ಈ ಕಾಯಿದೆಯು ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (CERT-In)) ಸೇರಿದಂತೆ ವಿವಿಧ ಏಜೆನ್ಸಿಗಳಿಗೆ ಅಧಿಕಾರ ನೀಡುತ್ತದೆ.

ರಾಷ್ಟ್ರೀಯ ಸೈಬರ್ ಭದ್ರತಾ ನೀತಿ-೨೦೧೩ ಕಾನೂನು, ಡೇಟಾ ಸಂರಕ್ಷಣಾ ಮಸೂದೆ-೨೦೧೯ ನಂತಹ ಸಶಕ್ತ ನಿಯಮಗಳು ಭಾರತದಲ್ಲಿ ಸೈಬರ್
ಅಪರಾಧ ತಡೆಗೆ ಕಾರ್ಯಪ್ರವರ್ತವಾಗಿವೆ ಎನ್ನಬಹುದು. ಇವುಗಳ ಜೊತೆಗೆ, ಭಾರತೀಯ ರಿಸರ್ವ್ ಬ್ಯಾಂಕ್, ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆ-
ಇಂಡಿಯಾ, ವಿದ್ಯುತ್ ಮಾರ್ಗಸೂಚಿಗಳ ಸಚಿವಾಲಯ ಮತ್ತು ರೈಲ್ವೆ ಸಂಪರ್ಕಜಾಲ ಸೇರಿದಂತೆ ದೇಶದ ಪ್ರಮುಖ ಸ್ವಾಯತ್ತ ಸಂಸ್ಥೆ ಮತ್ತು ಇಲಾಖೆಗಳು ಕೂಡ ತಮ್ಮದೇ ಆದ ಮಾರ್ಗಸೂಚಿಗಳನ್ನು ತಮ್ಮ ಬಳಕೆದಾರರಿಗೆ ನೀಡಿವೆ.

ಈ ಎಲ್ಲ ಅಪಸವ್ಯಗಳ ನಡುವೆ, ಸೈಬರ್ ಅಪರಾಧಗಳನ್ನು ತಡೆಯುವುದು ಹೇಗೆಂದು ಇಂದು ಬಹುತೇಕ ಕಂಪನಿಗಳು ತಮ್ಮ ಮಾರ್ಗದರ್ಶೀ
ತಂತ್ರಾಂಶಗಳನ್ನು ಮತ್ತು ಇದಕ್ಕೆ ಸಂಬಂಧಿಸಿದ ಕೋರ್ಸ್‌ಗಳನ್ನು ನೀಡುವ ಮೂಲಕ ಹಣದ ಜೊತೆಗೆ ಹೆಸರನ್ನೂ ಮಾಡುತ್ತಿವೆ. ಇವುಗಳ ಜೊತೆಗೆ, ಕೆಲ
ಗ್ರಾಹಕ ಸ್ನೇಹಿ ಕಂಪನಿಗಳು ಉತ್ತಮ ಮಾಲ್ ವೇರ್, ಪ್ರೊಟೆಕ್ಟೆಡ್ ಸಾ ವೇರ್‌ಗಳನ್ನು ಕೂಡ ಬಿಡುಗಡೆ ಮಾಡುತ್ತಿವೆ. ಇಂತಹ ಸಂದರ್ಭಗಳಲ್ಲಿ, ಸೈಬರ್
ಅಪರಾಧಗಳ ಅಪಾಯದಿಂದ ರಕ್ಷಿಸಿಕೊಳ್ಳಲು, ಉತ್ತಮ ಆಂಟಿವೈರಸ್ ಮತ್ತು ಫೇರ್‌ವಾಲ್ ಗಳಂತಹ ನವೀಕೃತ ಭದ್ರತಾ ಸಾಫ್ಟ್ ವೇರ್ ಬಳಸುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು.

-ಉತ್ತಮ ಭದ್ರತಾ ಸೆಟ್ಟಿಂಗ್‌ಗಳನ್ನು ಅಳವಡಿಸಬೇಕು.
-ವಿಶ್ವಾಸಾರ್ಹವಲ್ಲದ ವೆಬ್ಸೈಟ್‌ಗಳನ್ನು ಬ್ರೌಸ್ ಮಾಡದಿರುವುದು ಉತ್ತಮ.
-ಬಲವಾದ ದೃಢೀಕರಣ ವಿಧಾನಗಳನ್ನು ಬಳಸಿ ಮತ್ತು ಪಾಸ್‌ವಾರ್ಡ್‌ಗಳನ್ನು ಬಲವಾಗಿ ಇರಿಸಿ.

-ಆನ್‌ಲೈನ್‌ನಲ್ಲಿ, ನಿಮ್ಮ ಸಾಮಾಜಿಕ ಖಾತೆಗಳಲ್ಲಿ ಸೂಕ್ಷ್ಮ ಮತ್ತು ವಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ.
-ಇಂಟರ್ನೆಟ್ ಬಳಕೆಯ ಅಪಾಯಗಳ ಬಗ್ಗೆ ನಿಮ್ಮ ಮಕ್ಕಳಿಗೆ ಶಿಕ್ಷಣ ನೀಡಿ ಮತ್ತು ಅವರ ಚಟುವಟಿಕೆಗಳನ್ನು ಆಗಾಗ ಮೇಲ್ವಿಚಾರಣೆ
ಮಾಡುವುದು ಉತ್ತಮ.
-ಸೈಬರ್ ಅಪರಾಧಗಳಿಗೆ ಬಲಿಯಾದಾಗ ತಕ್ಷಣ ಪೊಲೀಸರನ್ನು ಸಂಪರ್ಕಿಸಲು ಮರೆಯದಿರಿ.

-ಅಪರಿಚಿತ ಫೈಲ್‌ಗಳನ್ನು ಡೌನ್ಲೋಡ್ ಮಾಡುವಾಗ, ಅಟ್ಯಾಚ್ಡ್ ಇಮೇಲ್ ವೀಕ್ಷಿಸುವಾಗ ಜಾಗರೂಕರಾಗಿದ್ದರೆ ನೀವು ಸೈಬರ್ ಅಪರಾಧ
ವಲಯಗಳಿಂದ ದೂರವಿದ್ದೀರಿ ಎಂದರ್ಥ!

ಇದಲ್ಲದೆ, ಹೆಚ್ಚು ದೃಢವಾದ ಸೈಬರ್ ಸೆಕ್ಯುರಿಟಿ ವ್ಯವಸ್ಥೆಯನ್ನು ರಚಿಸಲು, ನೀತಿ ನಿರೂಪಕರು ಸೈಬರ್ ವಿಮೆಯನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿ ಸಬೇಕು. ಸೈಬರ್ ವಿಮೆಯನ್ನು ಹೆಚ್ಚು ಸುಲಭವಾಗಿ ಮತ್ತು ಕೈಗೆಟುಕುವಂತೆ ಮಾಡುವ ಮೂಲಕ, ಸೈಬರ್ ಅಟ್ಯಾಕ್‌ಗಳಿಂದ ಆರ್ಥಿಕ ಕುಸಿತವನ್ನು ನಿರ್ವಹಿಸಲು ಸಾಧ್ಯವಾದರೆ, ವ್ಯಾಪಾರಗಳು ಮತ್ತು ಇದಕ್ಕೆ ಸಂಬಂಧಿತ ವ್ಯಕ್ತಿಗಳು ಉತ್ತಮವಾಗಿ ನಿಭಾಯಿಸಬಲ್ಲರು.

Leave a Reply

Your email address will not be published. Required fields are marked *