Tuesday, 10th December 2024

ದಂಡಾನಾ.. ಸುರಕ್ಷತೆನಾ..?

ಲಕ್ಷ್ಮೀಕಾಂತ್ ಎಲ್.ವಿ, ತುಮಕೂರು ವಿಶ್ವವಿದ್ಯಾನಿಲಯ

ಸಂಚಾರಿ ನಿಯಮಗಳ ಉಲ್ಲಂಘನೆಯಿಂದ ಅಪಘಾತಗಳು ಹೆಚ್ಚುತ್ತಿದ್ದು, ಅಮಾಯಕರೇ ಹೆಚ್ಚು ಜೀವ ಕಳೆದುಕೊಳ್ಳುತ್ತಿದ್ದಾರೆ. ದೇಶಾದ್ಯಂತ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆೆಲೆಯಲ್ಲಿ, ಮೋಟಾರ್ ವಾಹನ ಕಾಯಿದೆಗೆ ಕೆಲವು ತಿದ್ದುಪಡಿ ತರಲಾಗಿದ್ದು, ಈ ಹಿಂದಿನ ದಂಡದ ಮೊತ್ತಗಳನ್ನು ದುಪ್ಪಟ್ಟು ಮಾಡಲಾಗಿದ್ದು, ಸಂಚಾರಿ ನಿಯಮಗಳನ್ನು ಉಲ್ಲಂಸಿ ವಾಹನ ಚಾಲನೆ ಮಾಡುವ ಪ್ರವೃತ್ತಿಯನ್ನು ತಡೆಯಲು ಸಂಚಾರಿ ನಿಯಮಗಳನ್ನು ತಿದ್ದುಪಡಿ ಮಾಡಲಾಗಿದೆ. ಹೊಸ ದಂಡ ಶುಲ್ಕಗಳನ್ನು ನಿಗದಿಪಡಿಸಿರುವುದು ಎಲ್ಲರಿಗೂ ತಿಳಿದಿದೆ. ಅದಕ್ಕೆೆ ಪೂರಕವಾಗಿ ವಾದ-ವಿವಾದಗಳು ನಡೆದು ರಾಜ್ಯದಲ್ಲಿ ದಂಡ ಶುಲ್ಕದ ಪ್ರಮಾಣವನ್ನು ಇಳಿಕೆ ಮಾಡಿರುವುದು ವಾಸ್ತವ. ಸಂಚಾರ ಸುರಕ್ಷತೆಯ ದೃಷ್ಟಿಿಯಲ್ಲಿ ದಂಡ ಪರಿಷ್ಕರಿಸಿದೆ.

ಸಂಚಾರಿ ನಿಯಮಗಳನ್ನು ಪರಿಷ್ಕರಿಸಿ ಹೊಸ ದಂಡ ಶುಲ್ಕಗಳನ್ನು ವಸೂಲಿ ಮಾಡುವ ಅಧಿಕಾರಿಗಳು ಸರಕಾರದ ಆದೇಶಾನುಸಾರ ಕರ್ತವ್ಯ ನಿರ್ವಹಿಸುತ್ತಿಿದ್ದಾಾರೆ. ಪ್ರತಿನಿತ್ಯ ಮಾಧ್ಯಮಗಳಲ್ಲಿ ಕಂಡುಬಂದಂತೆ ಅಲ್ಲಿ ಇಷ್ಟು ದಂಡ ಸಂಗ್ರಹವಾಯಿತು, ಇಲ್ಲಿ ಇಷ್ಟು ಸಂಗ್ರಹವಾಗಿದೆ ಎಂದೆಲ್ಲ ನೋಡುತ್ತಿಿದ್ದೇೇವೆ. ಆದರೆ ಸುರಕ್ಷತೆ ವಿಚಾರದಲ್ಲಿ ಎಷ್ಟು ಕೆಲಸ ಮಾಡಿದ್ದಾಾರೆ? ಈ ಬಗ್ಗೆೆ ದಾಖಲೆಗಳು ಇಲ್ಲ. ಉದಾಹರಣೆಗೆ ಹೆಲ್ಮೆೆಟ್ ಇಲ್ಲದ ಪ್ರಯಾಣಿಕರಿಂದ ದಂಡ ಪಡೆದು, ಅವನನ್ನು ಬಿಟ್ಟು ಬಿಡುತ್ತಾಾರೆ, ಕುಡಿದು ವಾಹನ ಚಾಲನೆ ಮಾಡಿದವರಿಂದ ಹೊಸ ನಿಯಮದನ್ವಯ ಹೆಚ್ಚಿಿನ ಮೊತ್ತದ ದಂಡ ಪಡೆದು ಬಿಟ್ಟು ಬಿಡುತ್ತಾಾರೆ. ದಂಡ ಕಟ್ಟಿಿದ ನಂತರ ಯಾವ ಅನಾಹುತವೂ ಸಂಭವಿಸುವುದಿಲ್ಲ.

ಒಂದು ವೇಳೆ ಹೆಲ್ಮೆೆಟ್ ಇಲ್ಲದ ಪ್ರಯಾಣಿಕ ದಂಡ ಕಟ್ಟಿಿ ಅಲ್ಲಿಂದ ಮುಂದೆ ಹೋಗುವಾಗ ಅನಿರೀಕ್ಷಿತವಾಗಿ ಅಪಘಾತವಾಗಿ ಅನಾಹುತ ಸಂಭವಿಸಿದಲ್ಲಿ ಈ ನಿಯಮದ ಹಿಂದಿನ ಉದ್ದೇಶ ಈಡೇರುತ್ತದೆಯೆ? ದಂಡ ಕಟ್ಟಿಿದ್ದರೂ ಸುರಕ್ಷತೆಯಿಲ್ಲದೆ ಅನಾಹುತವಾದರೆ ಏನು ಮಾಡಬೇಕು? ಇದೇ ರೀತಿ ಬೇರೆ ಬೇರೆ ನಿಯಮಗಳಲ್ಲಿಯೂ ಸುರಕ್ಷತೆಯ ಬಗ್ಗೆೆ ಅರಿವು ಮೂಡಿಸುವ ಪ್ರಯತ್ನವೂ ಇಲ್ಲಿ ಮಾಡಬೇಕಿದೆ. ಹಾಗಾದಲ್ಲಿ ಮಾತ್ರ ಹೊಸ ಸಂಚಾರಿ ನಿಯಮಗಳು ಯಶಸ್ವಿಿಯಾಗುತ್ತವೆ.

ಯಾವುದೇ ವ್ಯಕ್ತಿಿ ದ್ವಿಿಚಕ್ರ ವಾಹನದಲ್ಲಿ ಹೆಲ್ಮೆೆಟ್ ಇಲ್ಲದೆ ಪ್ರಯಾಣ ಮಾಡುತ್ತಿಿದ್ದರೆ, ತಕ್ಷಣ ಅವನಿಗೆ ದಂಡ ವಿಧಿಸುವ ಬದಲಿಗೆ ಸ್ಥಳದಲ್ಲಿಯೇ ಹೆಲ್ಮೆೆಟ್ ನೀಡಿ ಅದಕ್ಕೆೆ ಹಣ ಪಡೆದು ಮುಂದೆ ಹೋಗಲು ಬಿಡಬೇಕು. ಕುಡಿದು ವಾಹನ ಚಾಲನೆ ಮಾಡುತ್ತಿಿದ್ದರೆ, ದಂಡ ವಿಧಿಸಿ. ಆದರೆ, ಆ ವ್ಯಕ್ತಿಿಯನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲು ಕ್ರಮ ಕೈಗೊಳ್ಳಬೇಕು. ವಾಹನದ ಇನ್ಶೂರೆನ್‌ಸ್‌ ಇಲ್ಲದಿದ್ದರೆ ಸ್ಥಳದಲ್ಲಿಯೇ ಅದನ್ನು ವಿತರಣೆ ಮಾಡಿ, ಹಣ ಪಡೆಯುವ ವ್ಯವಸ್ಥೆೆ ಜಾರಿಯಾಗಬೇಕು. ಮಾಲಿನ್ಯ ಪರೀಕ್ಷೆಯನ್ನೂ ಸಹ ಸ್ಥಳದಲ್ಲಿಯೇ ಪರೀಕ್ಷಿಸಿ ಪ್ರಮಾಣಪತ್ರ ನೀಡುವ ವ್ಯವಸ್ಥೆೆಯನ್ನು ಜಾರಿಗೊಳಿಸುವುದು ಹಾಗೆಯೇ ಚಾಲನಾ ಪರವಾನಗಿ ಇಲ್ಲದ ಸವಾರರಿಗೆ ಸ್ಥಳದಲ್ಲಿಯೇ ಪರೀಕ್ಷೆ ನಡೆಸಿ ಚಾಲನಾ ಪರವಾನಗಿ ವಿತರಿಸುವ ಕಾರ್ಯಕ್ರಮ ಹಮ್ಮಿಿಕೊಳ್ಳಲಿ.

ಸಂಚರಿಸುವ ಯಾವುದೇ ವ್ಯಕ್ತಿಿಯು ನಿಯಮಗಳನ್ನು ಪಾಲನೆ ಮಾಡುವುದು ಕಡ್ಡಾಾಯ. ಅದಕ್ಕೆೆ ಪೂರಕವಾಗಿ ಸುರಕ್ಷತೆಯನ್ನೂ ಇಲ್ಲಿ ಮನದಟ್ಟು ಮಾಡುವ ಪ್ರಯತ್ನ ನಡೆಯುತ್ತಿಿದ್ದರೂ ಅನುಷ್ಠಾಾನ ಮಾತ್ರ ಸರಿಯಾಗಿ ಆಗಿಲ್ಲ. ಸಂಚಾರಿ ಪೋಲಿಸ್ ಅಧಿಕಾರಿಗಳ ಜತೆ ವಾಗ್ವಾಾದ ನಡೆಯುವ ಸನ್ನಿಿವೇಶಗಳನ್ನು ನಾವು ಸಾಕಷ್ಟು ನೋಡಬಹುದು. ಇದು ಅವರ ಕೆಲಸ ಮಾಡುತ್ತಿಿದ್ದಾಾರೆ ಅಷ್ಟೆೆ; ಅದಕ್ಕೆೆ ಅನುಗುಣವಾಗಿ ನಾವೂ ಕೂಡ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಿದಲ್ಲಿ ಇಂತಹ ಸನ್ನಿಿವೇಶಗಳು ಉದ್ಭವಿಸುವುದಿಲ್ಲ. ರಸ್ತೆೆ ಸುರಕ್ಷತಾ ನಿಯಮಗಳ ಬಗ್ಗೆೆ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸಲು ಬೇಕಾದಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಶಾಲಾ ಕಾಲೇಜುಗಳಲ್ಲಿ ಸಂಚಾರಿ ನಿಯಮಗಳ ಬಗ್ಗೆೆ ಅರಿವು ಮೂಡಿಸುವಂತಹ ಕ್ರಮ ಶಿಕ್ಷಣ ತರಬೇಕು. ರಸ್ತೆೆ ಸುರಕ್ಷತಾ ಸಪ್ತಾಾಹಗಳನ್ನು ಇನ್ನಷ್ಟು ಹೆಚ್ಚಿಿನದಾಗಿ ನಡೆಸಬೇಕು. ಆಗ ಮಾತ್ರ ಜನರಲ್ಲಿ ಸಂಚಾರಿ ನಿಯಮಗಳ ಬಗ್ಗೆೆ ತಿಳುವಳಿಕೆ ಮೂಡುತ್ತದೆ.