Saturday, 14th December 2024

ದೈಹಿಕ ಶಿಕ್ಷಣ ಶಿಕ್ಷಕರ ನೇಮಕಕ್ಕೆ ಮೀನಾಮೇಷ ಎಣಿಸುವುದೇಕೆ?

ಅಭಿಪ್ರಾಯ

ಬಸವರಾಜ ಎನ್. ಬೋದೂರು, ಕೊಪ್ಪಳ

ತರಬೇತಿ ಮತ್ತು ಮಾರ್ಗದರ್ಶನ ನೀಡುವ ಶಾಲೆಗೊಬ್ಬ ದೈಹಿಕ ಶಿಕ್ಷಣ ಶಿಕ್ಷಕರಿದ್ದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಯೊಂದು ಕ್ರೀಡೆಯಲ್ಲಿಯೂ ಜಯಬೇರಿ ಭಾರಿಸಿ ಭಾರತದ ಪತಾಕೆಯನ್ನು ವಿಶ್ವದೆತ್ತರದಲ್ಲಿ ಹಾರಾಡಿಸಬಲ್ಲ

ರಾಜ್ಯದಲ್ಲಿ ಸುಮಾರು 23 ಸಾವಿರ ಕಿರಿಯ ಪ್ರಾಾಥಮಿಕ ಹಾಗೂ 21 ಸಾವಿರ ಹಿರಿಯ ಪ್ರಾಾಥಮಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಮಕ್ಕಳ ಸರ್ವತೋಮುಖ ಅಭಿವೃದ್ಧಿಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಅವರು ಸಕ್ರಿಿಯವಾಗಿ ಭಾಗವಹಿಸುವುದು ಅಗತ್ಯ. ಆದರೆ, ಸುಮಾರು 44 ಸಾವಿರ ಸರಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಕರು ಇಲ್ಲ. ಆದರೆ ಸರಕಾರ ರಾಜ್ಯದಲ್ಲಿ ಕೇವಲ 5,500 ದೈಹಿಕ ಶಿಕ್ಷಕರ ಕೊರತೆ ಇದೆ ಎಂದು ಹೇಳುತ್ತಿಿದೆ. ಕಾರಣ 2005 ರ ಹಿಂದೆ ಗರಿಷ್ಠ 200 ವಿದ್ಯಾಾರ್ಥಿಗಳಿರುವ ಶಾಲೆಗಳಿಗೊಬ್ಬ ದೈಹಿಕ ಶಿಕ್ಷಕ ಇರಬೇಕೆಂಬ ನಿಯಮವನ್ನು ಮಾತ್ರ ಲೆಕ್ಕ ಹಿಡಿದಿದೆ. ಆದರೆ, 2007ರಲ್ಲಿ ಡಾ.ಎಲ್.ಆರ್.ವೈಧ್ಯನಾಥನ್ ಅವರ ವರದಿ ಪ್ರಕಾರ, 6-10 ನೇ ತರಗತಿಯ ವರೆಗೆ ದೈಹಿಕ ಶಿಕ್ಷಣವನ್ನು ಹಿರಿಯ ಪ್ರಾಾಥಮಿಕ ಶಾಲೆಯಲ್ಲಿ ಕಡ್ಡಾಾಯವಾಗಿ ಬೋಧಿಸಬೇಕು ಮತ್ತು ಪ್ರತಿಯೊಂದು ಶಾಲೆಯಲ್ಲಿ ದೈಹಿಕ ಶಿಕ್ಷಣದ ಶಿಕ್ಷಕರು ಇರಲೇಬೇಕೆಂದು ಅವರು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಅದರಂತೆ ಈಗ 6 ರಿಂದ 10ನೇ ತರಗತಿಯವರೆಗೆ ದೈಹಿಕ ಶಿಕ್ಷಣದ ಪಠ್ಯಕ್ರಮವಿದೆ. ಆದರೆ, ದೈಹಿಕ ಶಿಕ್ಷಕರಿಲ್ಲ. ಅವರ ವರದಿಯನ್ನು ಇದುವರೆಗೆ ಎಥಾವತ್ತಾಾಗಿ ಜಾರಿ ಮಾಡಲಾಗಿಲ್ಲ. ಕೊನೆಪಕ್ಷ 200 ವಿದ್ಯಾಾರ್ಥಿಗಳಿರುವ ಶಾಲೆಗಳಲ್ಲೂ ಕೂಡ ದೈಹಿಕ ಶಿಕ್ಷಕರ ನೇಮಕ ಮಾಡಿಕೊಂಡಿಲ್ಲ.

2005 ರಿಂದ ಇಲ್ಲಿಯವರೆಗೆ ಸುಮಾರು 15 ವರ್ಷಗಳಿಂದಲೂ ದೈಹಿಕ ಶಿಕ್ಷಣ ಶಿಕ್ಷಕರ ನೇಮಕವಾಗಿಲ್ಲ. 15 ವರ್ಷಗಳ ಕಾಲ ಆಡಳಿತ ನಡೆಸಿದ ಎಲ್ಲಾ ಸರಕಾರಗಳು ತೀವ್ರ ನಿರ್ಲಕ್ಷ್ಯ ವಹಿಸಿದ ಪರಿಣಾಮ ‘ಡಿಪಿಇಡಿ’ ಮುಗಿಸಿದ 1.17 ಲಕ್ಷ ಪದವಿಧರರು ಬೀದಿಗೆ ಬಿಳುವ ಪರಿಸ್ಥಿಿತಿ ನಿರ್ಮಾಣವಾಗಿದೆ. ಇಂದಿಲ್ಲ ನಾಳೆ ತಮಗೆ ಸರಕಾರಿ ಹುದ್ದೆ ಸಿಗಬಹುದೆಂದು 15 ವರ್ಷಗಳಿಂದಲೂ ಜಾತಕ ಪಕ್ಷಿಯಂತೆ ಕಾಯುತ್ತಿಿದ್ದಾರೆ. ಆದರೆ, ಸರಕಾರಗಳು ಅರ್ಜಿ ಆಹ್ವಾಾನಿಸಿಲ್ಲ. ರೆಗ್ಯುಲರ್ ಶಿಕ್ಷಕರ ನೇಮಕಕ್ಕೆೆ ಹೆಚ್ವಿಿನ ಆಧ್ಯತೆ ನೀಡಿ, ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳನ್ನು ನಿರ್ಲಕ್ಷಿಸುತ್ತ ಬಂದಿದೆ. ಪ್ರಾಾಥಮಿಕ ಮತ್ತು ಪ್ರೌೌಢ ಶಿಕ್ಷಣ ಇಲಾಖೆ ಮತ್ತು ಹಣಕಾಸು ಇಲಾಖೆಗಳ ನಡುವಣ ಹಗ್ಗ-ಜಗ್ಗಾಾಟದಿಂದಾಗಿ ಪ್ರಾಾಥಮಿಕ ಶಾಲಾ ದೈಹಿಕ ಶಿಕ್ಷಕರ ನೇಮಕ ಕಗ್ಗಂಟಾಗಿದೆ. ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಗೆ ಶಿಕ್ಷಣ ಇಲಾಖೆ ಕಳುಹಿಸುತ್ತಿಿರುವ ಪ್ರಸ್ತಾಾವನೆಯನ್ನು ಹಣಕಾಸು ಇಲಾಖೆ ತಿರಸ್ಕರಿಸುತ್ತಾಾ ಬರುತ್ತಿಿದೆ. ಇದರ ಪರಿಣಾಮದಿಂದ ಈಗಾಗಲೇ ಸುಮಾರು 20 ಸಾವಿರದಷ್ಟು ‘ಡಿಪಿಇಡಿ’ ಪದವಿಧರರ ನೇಮಕಾತಿ ವಯೋಮಿತಿ ಮೀರಿ ಹೋಗಿದೆ. ಉಳಿದ ಅಭ್ಯರ್ಥಿಗಳು ನಮಗೂ ನೇಮಕಾತಿ ವಯೋಮಿತಿ ಮೀರುತ್ತಾಾ ಬಂತು ಪರಿಸ್ಥಿಿತಿ ಹೀಗೆ ಮುಂದುವರೆದರೆ ನಮ್ಮ ಮುಂದಿನ ಭವಿಷ್ಯದ ಗತಿ ಏನು? ಎಂಬ ಆತಂಕದಲ್ಲಿಯೇ ದಿನ ದೂಡುತ್ತಿದ್ದಾರೆ.

2005 ರ ಹಿಂದೆ ನೇಮಕವಾಗಿದ್ದ 10 ಸಾವಿರ ದೈಹಿಕ ಶಿಕ್ಷಕರಲ್ಲಿ ಈಗಾಗಲೆ ಸುಮಾರು 7 ಸಾವಿರ ಶಿಕ್ಷಕರು ನಿವೃತ್ತಿ ಯಾಗಿದ್ದಾರೆ. ಕಲ್ಯಾಾಣ ಕರ್ನಾಟಕ ಭಾಗದಲ್ಲಷ್ಟೆೆ 7 ಸಾವಿರ ದೈಹಿಕ ಶಿಕ್ಷಕರ ಕೊರತೆ ಇದೆ. ಇಷ್ಟೆೆಲ್ಲ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದ್ದರೂ ಕೂಡ ಸರಕಾರಗಳು ಈ ವರೆಗೆ ಬರೀ ಭರವಸೆ ನೀಡುತ್ತಲೇ ಬಂದಿವೆಯೇ ಹೊರತು ನೇಮಕಾತಿಗೆ ಮಾತ್ರ ಕೈ ಹಾಕಿಲ್ಲ. ಇದರಿಂದ ವಿದ್ಯಾಾರ್ಥಿಗಳು ಕ್ರೀಡೆಗಳಲ್ಲಿ ಮುಕ್ತವಾಗಿ ಬೆರೆಯುವ, ನಾಯಕತ್ವ ಗುಣ ಬೆಳಸಿಕೊಳ್ಳುವ ವಾತವರಣವೇ ಮಾಸಿ ಹೋಗಿದೆ.

ಖಾಲಿ ಇರುವ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಒತ್ತಾಾಯಿಸಿ, ಪದವಿಧರರು ಹಾಗೂ ರಾಜ್ಯದ ನಾನಾ ಸಂಘಟನೆಗಳು ಸರಕಾರಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಆದರೆ ಸರಕಾರ ಮಾತ್ರ ಜಾಣ ಕುರುಡು ಮತ್ತು ಕಿವುಡುತನ ಪ್ರದರ್ಶಿಸುತ್ತಿಿರುವುದರಿಂದ ರೊಚ್ಚಿಿಗೆದ್ದ ಪದವಿಧರರು ದೈಹಿಕ ಶಿಕ್ಷಕರ ಅವಶ್ಯ ಇಲ್ಲವೆಂದಾದರೆ ಡಿಪಿಇಡಿ, ಸಿಪಿಇಡಿ, ಹಾಗೂ ಎಂಪಿಇಡಿ ಪದವಿಯ ಕಾಲೇಜುಗಳನ್ನು ಸರಕಾರ ಯಾವ ಪುರುಷಾರ್ಥಕ್ಕೆ ತೆರೆದಿದೆ? ನಿರೂದ್ಯೋೋಗಿಗಳನ್ನು ಸೃಷ್ಟಿಿ ಮಾಡಲು ಈ ಕಾಲೇಜುಗಳಿವೆಯೇ? ಈ ಕೋರ್ಸ್‌ಗಳಿಂದ ಉಪಯೋಗವಿಲ್ಲ ಎಂದಾದಮೇಲೆ ಇವುಗಳನ್ನು ಇನ್ನು ಮುಂದುವರಿ ಯಾತಕ್ಕೆೆ? ಎಂದು ಸರಕಾರದ ವಿರುದ್ಧ ಆಕ್ರೋೋಶ ವ್ಯಕ್ತಪಡಿಸುತ್ತಿದ್ದಾರೆ.

2007 ರಿಂದ ಇಲ್ಲಿತನಕ ಇತರ ವಿಷಯಗಳ ಶಿಕ್ಷಕರ ನೇಮಕವಾಗಿದೆ. ಆದರೆ, ದೈಹಿಕ ಶಿಕ್ಷಕರ ನೇಮಕ ಪ್ರಕ್ರಿಿಯೆ ನಡೆದಿಲ್ಲ. ಕಾರಣ, ಶಿಕ್ಷಣ ಇಲಾಖೆ ಶಿಕ್ಷಕರ ಭರ್ತಿ ಸಂದರ್ಭದಲ್ಲಿ ದೈಹಿಕ ಶಿಕ್ಷಕರ ಹುದ್ದೆಯನ್ನು ಖಾಲಿ ಎಂದು ಪರಿಗಣಿಸುತ್ತಿಿಲ್ಲ. ಪ್ರೌೌಢ ಶಾಲೆಗಳಿಗೆ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಗಳಾಗಿವೆ. ಇಲ್ಲಿ ದೈಹಿಕ ಶಿಕ್ಷಕರ ಅಭಾವ ಅಷ್ಟೊೊಂದಿಲ್ಲ. ಪ್ರಾಾಥಮಿಕ ಶಾಲೆಗಳನ್ನು ಮಾತ್ರ ನಿರ್ಲಕ್ಷಿಸಲಾಗಿದೆ. 2007ರಲ್ಲಿ ದೈಹಿಕ ಶಿಕ್ಷಣವನ್ನು ಕಡ್ಡಾಾಯ ಬೊಧನಾ ಶಿಕ್ಷಣವನ್ನಾಾಗಿ ಘೋಷಿಸಿ ಅಧಿಸೂಚನೆ ಹೊರಡಿಸಲಾಗಿದೆ. 2012ರಲ್ಲಿ ಮಕ್ಕಳಲ್ಲಿ ಕ್ರೀಡಾ ಚಟುವಟಿಕೆ ಉತ್ತೇಜಿಸಬೇಕೆಂಬ ನಿಟ್ಟಿಿನಲ್ಲಿ 6 ಭಾಷೆಗಳಲ್ಲಿ ದೈಹಿಕ ಶಿಕ್ಷಣದ ಪಠ್ಯೆೆ ಪುಸ್ತಕ ಸಿದ್ಧಪಡಿಸಿ ವಿತರಿಸಲಾಗಿದೆ. ಆದರೆ, ಇದಕ್ಕೆೆ ಪೂರಕವಾಗಿ ದೈಹಿಕ ಶಿಕ್ಷಣದ ಶಿಕ್ಷಕರು ಇಲ್ಲದೆ ಇರುವುದರಿಂದ ಇದು ಪಠ್ಯಕ್ಕೆೆ ಮಾತ್ರ ಸೀಮಿತವಾಗಿದೆ.

ಹಿಂದೆ ಕಾಂಗ್ರೆೆಸ್ ಸರಕಾರ ಇದ್ದಾಗ 700 ದೈಹಿಕ ಶಿಕ್ಷಕರ ನೇಮಕಕ್ಕೆೆ ಮುಂದಾಗಿತ್ತು. ಹಣಕಾಸು ಇಲಾಖೆ ಅನುಮೊದನೆ ನೀಡಿದೆ ಎಂದು ಆಗಿನ ಶಿಕ್ಷಣ ಸಚಿವ ತನ್ವಿಿರ್ ಸೇಠ್ ಹೇಳಿದ್ದರು. ಇನ್ನೇನು ನೇಮಕಾತಿ ಅಧಿಸೂಚನೆ ಹೊರಬಿಳಲಿದೆ ಎನ್ನುವಾಗಲೇ ಚುನಾವಣೆ ಬಂದುದರಿಂದ ನೇಮಕ ಪ್ರಕ್ರಿಿಯೆ ಸ್ಥಗಿತಗೊಂಡಿತು. ನಂತರ ಬಂದ ಮೈತ್ರಿ ಸರಕಾರ ಈ ಕುರಿತು ಬರೀ ಬರವಸೆ ನೀಡಿ ಕೈ ತೊಳೆದು ಕೊಂಡಿತು. ಈಗಿನ ಬಿಜೆಪಿ ಸರಕಾರದಲ್ಲಿ ಶಿಕ್ಷಣ ಸಚಿವರಾಗಿರುವ ಸುರೇಶ ಕುಮಾರ ಅವರು ‘ಕಾಲಕಾಲಕ್ಕೆೆ ಶಿಕ್ಷಕರ ನೇಮಕಾತಿಗೆ ನೀತಿ ರೂಪಿಸಿ, ಅದರಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಯನ್ನೂ ಪರಿಗಣಿಸುತ್ತೇವೆ. ಪಿಟ್ ಇಂಡಿಯಾ ಕಾರ್ಯಕ್ರಮದ ಅನುಷ್ಠಾಾನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಮಹತ್ವದ್ದು’ ಎಂದು ಹೇಳಿರುವುದರಿಂದ ಆಕಾಂಕ್ಷಿಗಳಲ್ಲಿ ಸ್ವಲ್ಪ ಆಶಾಭಾವನೆ ಮೂಡಿದೆ.

ಪ್ರಾಥಮಿಕ ಶಾಲೆಗಳ ವಿದ್ಯಾಾರ್ಥಿಗಳಿಗೆ ಬಿಸಿಯೂಟ, ಹಾಲು, ಶೂ, ಪಠ್ಯಪುಸ್ತಕ, ಬ್ಯಾಗ್, ಸ್ಕಾಾಲರ್ ಶಿಪ್ ಏನೆಲ್ಲ ಸೌಲಭ್ಯಗಳಿವೆ. ಆದರೆ, ಮುಖ್ಯವಾಗಿ ವಿದ್ಯಾಾರ್ಥಿಗಳು ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗಿರಲು ದೈಹಿಕ ಶಿಕ್ಷಣ ಮಾತ್ರ ಸಿಗುತ್ತಿಿಲ್ಲ. ಮನುಷ್ಯ ದೈಹಿಕವಾಗಿ ಸದೃಢವಾಗಬೇಕಾದರೆ ಅವನಿಗೆ ಪ್ರಾಾಥಮಿಕ ಹಂತದಲ್ಲಿಯೇ ದೈಹಿಕ ಶಿಕ್ಷಣ ನೀಡಿದರೆ ಮಾತ್ರ ಅದು ಸಾಧ್ಯವಾಗುತ್ತದೆ. ಮನುಷ್ಯನಿಗೆ ದೇಹವೇ ಶ್ರೇಷ್ಠ, ದೇಹವಿಲ್ಲದ ಮನುಷ್ಯನನ್ನು ಕಲ್ಪಿಿಸಲು ಅಸಾಧ್ಯ. ಈ ದೇಹದೊಳಗೆ ಮನಸ್ಸು, ಬುದ್ದಿ, ಭಾವನೆಗಳು ಅಡಕವಾಗಿವೆ. ಇವುಗಳು ದೇಹದ ಮೂಲಕ ತಮ್ಮ ಕಾರ್ಯ ಚಟುವಟಿಕೆಯನ್ನು ನಿರ್ವಹಿಸುವುದರಿಂದಲೇ ಮಹಾಕವಿ ಕಾಳಿದಾಸನು ‘ಶರೀರ ಮಾಧಖಲು ಧರ್ಮಂ ಸಾದನಂ’ ಎಂದಿದ್ದಾರೆ.

ಕ್ರೀಡಾ ಕ್ಷೇತ್ರಕ್ಕೆೆ ಹೆಚ್ಚಿಿನ ಆಧ್ಯತೆ ನೀಡಲಾಗುವುದೆಂದು ರಾಜ್ಯ, ಕೇಂದ್ರದ ಮಂತ್ರಿಗಳು ಹೇಳುತ್ತಲೇ ಇದ್ದಾರೆ. ಅದಕ್ಕಾಾಗಿ ಪ್ರತಿವರ್ಷ ಕೋಟ್ಯಂತರ ರುಪಾಯಿ ಅನುದಾನ ಮೀಸಲಿಡಲಾಗುತ್ತಿದೆ. ಈ ಅನುದಾನ ದೈಹಿಕ ಶಿಕ್ಷಕರಿಲ್ಲದೆ ಸದ್ಭಳಕೆಯಾಗುತ್ತಿಿಲ್ಲ. ಆದರೂ ಕೋಟ್ಯಂತರ ರು. ಖರ್ಚು ಮಾಡುತ್ತಲೇ ಇದ್ದಾರೆ. ಆದರೆ, ಆ ಕ್ಷೇತ್ರಕ್ಕೆೆ ತಳಪಾಯ ಹಾಕಲು ದೈಹಿಕ ಶಿಕ್ಷಕರ ನೇಮಕಕ್ಕೆ ಮಾತ್ರ ಹಿಂದೇಟು ಹಾಕುತ್ತಿದ್ದಾರೆ. 2016ರ ಒಲಂಪಿಕ್ ನಂತರ ಕೇಂದ್ರ ಕ್ರೀಡಾ ಸಚಿವರು, ಪ್ರಾಾಥಮಿಕ ಶಿಕ್ಷಣ ಹಂತದಲ್ಲೇ ಕ್ರೀಡೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಹೇಳಿದ್ದರು. ಇದು ಬರೀ ಬಾಯಿ ಮಾತಾಗಿಯೇ ಉಳಿಯಿತು. ಕ್ರೀಡಾ ಕ್ಷೇತ್ರಕ್ಕೆ ಕೇವಲ ಮೂಲ ಸೌಕರ್ಯ ಒದಗಿಸಿದರೆ, ಅಭಿವೃದ್ಧಿ ಆಗಲಾರದು. ಸರಕಾರದ ಸೌಲಭ್ಯ ಸಮರ್ಪಕ ಬಳಕೆ ಆಗಬೇಕೆಂದರೆ, ಮೊದಲು ದೈಹಿಕ ಶಿಕ್ಷಕರ ನೇಮಕ ಆಗಬೇಕು, ಇದರಿಂದ ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಕ್ರೀಡೆ ಬಗ್ಗೆೆ ಅಭಿರುಚಿ ಹೆಚ್ಚಿ ಮುಂದೆ ಸಾಧನೆಗೆ ಭದ್ರ ಬುನಾದಿ ಹಾಕಿದಂತಾಗುತ್ತದೆ.

ಕೆಲವು ಸರಕಾರಿ ಶಾಲೆಗಳಲ್ಲಿ ಆಟದ ಮೈದಾನಗಳಿವೆ ಅಲ್ಲಿ ದೈಹಿಕ ಶಿಕ್ಷಕರಿಲ್ಲ, ಶಿಕ್ಷಕರಿದ್ದ ಶಾಲೆಗಳಲ್ಲಿ ಆಟದ ಮೈದಾನ ಇಲ್ಲ. ಗ್ರಾಾಮೀಣ ಪ್ರದೇಶಗಳ ಸುಮಾರು 39 ಸಾವಿರ ಶಾಲೆಗಳಲ್ಲಿ ಮೈದಾನದ ಕೊರತೆ ಇದೆ. ಇದರಿಂದ ಆಟದಲ್ಲಿ ಮಕ್ಕಳ ಆಸಕ್ತಿಿ ಕುಂದಿದೆ, ಶಿಕ್ಷಕರಿಲ್ಲದೆ ಕ್ರೀಡಾ ಚಟುವಟಿಕೆಗಳು ಕುಂಟಿತಗೊಂಡಿದೆ. ಕ್ರೀಡಾ ಪ್ರತಿಭೆಗಳು ಎಲೆಮರೆಕಾಯಿಯಂತಾಗಿ ಅಲ್ಲಿಯೇ ಕಮರಿ ಹೋಗುವಂತಾಗಿದೆ.

ದೈಹಿಕ ಶಿಕ್ಷಕರಿಲ್ಲದಂತ ಶಾಲೆಗಳಲ್ಲಿ ಆ ಶಾಲೆಯ ಶಿಕ್ಷಕರು ಮಾನವೀಯತೆಯ ದೃಷ್ಟಿಯಿಂದ, ತಮ್ಮ ಸ್ವಂತ ಹಣ ಕೊಟ್ಟು ಖಾಸಗಿ ಶಾಲೆಯ ಶಿಕ್ಷಕರನ್ನೋೋ ಅಥವಾ ಕ್ರೀಡಾಸಕ್ತಿ ಇರುವ ಯುವಕರನ್ನೋ ಕರೆತಂದು ತರಬೇತಿ ಕೊಡಿಸಿ, ಕ್ರೀಡಾ ಸ್ಪರ್ಧೆಯಲ್ಲಿ ತಮ್ಮ ಶಾಲಾ ವಿದ್ಯಾಾರ್ಥಿಗಳು ಪಾಲ್ಗೊೊಳ್ಳಲು ಸಹಾಯ ಮಾಡುತ್ತಿದ್ದಾರೆ. ಎಷ್ಟೋ ಶಾಲೆಗಳಲ್ಲಿ ದೈಹಿಕ ಶಿಕ್ಷಕರಿಲ್ಲದೆಯೇ ನಾನಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಜಯಶಾಲಿಯಾದ ಉದಾಹರಣೆಗಳು ಸಾಕಷ್ಟಿವೆ. ಇಂತಹ ಪರಿಸ್ಥಿತಿಯಲ್ಲಿ ಇವರಿಗೆ ಸರಿಯಾದ ರೀತಿಯಲ್ಲಿ ತರಬೇತಿ ಮತ್ತು ಮಾರ್ಗದರ್ಶನ ನೀಡುವ ಶಾಲೆಗೊಬ್ಬ ದೈಹಿಕ ಶಿಕ್ಷಣ ಶಿಕ್ಷಕರಿದ್ದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಯೊಂದು ಕ್ರೀಡೆಯಲ್ಲಿಯೂ ಜಯಬೇರಿ ಭಾರಿಸಿ ಭಾರತದ ಪತಾಕೆಯನ್ನು ವಿಶ್ವದೆತ್ತರದಲ್ಲಿ ಹಾರಾಡಿಸಬಲ್ಲ. ಲಕ್ಷಾಂತರ ಪ್ರತಿಭೆಗಳು ಹೊರಹೊಮ್ಮುವುದರಲ್ಲಿ ಸಂದೇಹವೇ ಇಲ್ಲ.

ಒಲಂಪಿಕ್‌ಸ್‌, ಕಾಮನ್‌ವೆಲ್‌ತ್‌, ಏಷ್ಯನ್ ಗೇಮ್‌ಸ್‌‌ನಂತಹ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕಗಳ ಬರ ಅನುಭವಿಸಿ ಮುಖಭಂಗ ಅನುಭವಿಸುತ್ತಿರುವುದಕ್ಕೆ ಮುಖ್ಯ ಕಾರಣವೇ ಪ್ರಾಾಥಮಿಕ ಹಂತದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ಎನ್ನಬಹುದು. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ, ಪ್ರಾಾಥಮಿಕ ಶಾಲೆಯಿಂದಲೇ ಮಕ್ಕಳಲ್ಲಿ ಕ್ರೀಡಾಸಕ್ತಿಿ ಮೂಡಿಸಿ, ಭವಿಷ್ಯದ ಕ್ರೀಡಾಪಟುಗಳನ್ನಾಾಗಿ ರೂಪಿಸುವ ತಾಕತ್ತಿರುವುದು ದೈಹಿಕ ಶಿಕ್ಷಣ ಶಿಕ್ಷಕರಿಗೆ ಮಾತ್ರ. ಪ್ರತಿಯೊಂದು ಶಾಲೆಯಲ್ಲಿ ಒಬ್ಬ ದೈಹಿಕ ಶಿಕ್ಷಕರು ಇದ್ದರೆ ಭಾರತ ಕ್ರೀಡಾ ಕ್ಷೇತ್ರದಲ್ಲಿ ಹೊಸ ಕ್ರಾಾಂತಿಯನ್ನೇ ಸೃಷ್ಟಿಸಬಲ್ಲದು. ಈ ನಿಟ್ಟಿನಲ್ಲಿ ಸರಕಾರ ಕೂಡಲೇ ಪ್ರಾಾಥಮಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಕಮಾಡಲು ಮುಂದಾಗಬೇಕಿದೆ.