Sunday, 10th November 2024

ದೇಸೀ ಭಾಷೆ ನಾಶಮಾಡಬಲ್ಲ ಸಾಮ್ರಾಜ್ಯಶಾಹಿ ಭಾಷೆ

ದಾಸ್ ಕ್ಯಾಪಿಟಲ್

ಟಿ.ದೇವಿದಾಸ್

dascapital1205@gmail.com

ಕನ್ನಡವನ್ನು ಪ್ರೀತಿಸಬೇಕು ಅಂದರೆ ಅನ್ಯಭಾಷೆಯನ್ನು ದ್ವೇಷಿಸುವುದು ಅಂತ ಅರ್ಥವಲ್ಲ. ಒಂದು ಸಾಂಸ್ಕೃತಿಕ ಅನುಭವ. ಅದು ಕರ್ತೃ ಕರ್ಮ ಕ್ರಿಯೆಯಲ್ಲ- ಬಿ.ವಿ.ಕಾರಂತ. ಭಾಷೆ ನಾಶವಾದರೆ ಸಂಸ್ಕೃತಿಯೂ ನಾಶವಾದಂತೆ. ಸಂಸ್ಕೃತಿಯ ಉಳಿವು ಭಾಷೆಯಿಂದ ಸಾಧ್ಯ.

ಭಾರತದಂಥ ದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ ಮಾತೃಭಾಷಾ ಮಾಧ್ಯಮದ ಕಲಿಕೆಯೇ ಪರಿಣಾಮಕಾರಿಯಾದುದೆಂದು ಭಾಷಾಶಾಸಜ್ಞರ ನಿಲುವಾಗಿದೆ.
ಭಾಷೆಯೆಂದರೆ ಬುದ್ಧಿ-ಭಾವಗಳ ವಿದ್ಯುದಾಲಿಂಗನ. ಬುದ್ಧಿಯ ಅಲಗಿನ ಸ್ಪರ್ಶವಿಲ್ಲದೆ ಭಾವ ಕೀವಾಗುತ್ತದೆ. ಭಾವದ ಸಂಪರ್ಕವಿಲ್ಲದೆ ಬುದ್ಧಿ ರಾಕ್ಷಸವಾಗುತ್ತದೆ-ಅನಂತಮೂರ್ತಿ.

ಬುದ್ಧಿ ಮತ್ತು ಭಾವದ ವಿಕಾಸ ತಾಯ್ನುಡಿ ಬೋಧನೆಯಲ್ಲಿ ಆಗುವುದರಿಂದ, ಸಂವಹನ ಸಂಪರ್ಕಗಳು ಸಾತತ್ಯತೆಯನ್ನುಳಿಸಿಕೊಂಡು ಸಮೂಹದೊಂದಿಗೆ ತಾದಾತ್ಮ್ಯವನ್ನು ಬೆಳೆಸುತ್ತದೆಂಬುದು ಭಾಷಾ ತಜ್ಞರ ಅಭಿಪ್ರಾಯ. ನಮ್ಮ ಮಕ್ಕಳು ನಮ್ಮವರಾಗಿಯೇ ಇರಬೇಕು. ಇಂಗ್ಲಿಷಿನ ಪ್ರಭಾವದಿಂದ, ಅದನ್ನೇ ಅನಿವಾರ್ಯ ಗೊಳಿಸಿಕೊಂಡಿದ್ದರಿಂದ ಯಾವ ಭಾಷೆಯಲ್ಲೂ ಪ್ರಭುತ್ವವನ್ನು ಪಡೆಯದ ಒಂದು ಜನಾಂಗವೇ ಬೆಳೆಯುತ್ತಿದೆ. ಮಾತೃಭಾಷೆಯಲ್ಲಿ ಚಿಂತಿಸುವ ಹಾಗೇ ತನ್ನೊಳಗೆ ಅರಗಿಸಿಕೊಳ್ಳುವ ಶಕ್ತಿಯಿಂದ ನಮ್ಮ ಹಿರಿಯರನೇಕ ವಿದ್ವಾಂಸರು, ಬರಹಗಾರರು, ಚಿಂತಕರೂ ಆಂಗ್ಲಭಾಷೆಯಲ್ಲಿ ಪ್ರಭುತ್ವವನ್ನು ಗಳಿಸಿರುವುದು.

ಒಂದು ಭಾಷೆಯಲ್ಲಿ ನಾವು ಪಡೆಯುವ ಸಾಮಾನ್ಯ ಅರ್ಹತೆಯು ಅನ್ಯಭಾಷೆಯನ್ನು ಕಲಿಸಲು ಪ್ರೇರಕ ವಾಗುತ್ತದೆ. ಯಾಕೆಂದರೆ ತಾನು ನೋಡುವ ಪದಾರ್ಥ ಗಳನ್ನು, ಗ್ರಹಿಸುವ ಗಂಧವನ್ನು, ರುಚಿಯನ್ನು, ಧ್ವನಿಗಳನ್ನು, ಒಳ್ಳೆಯ, ಕೆಟ್ಟ ಬಣ್ಣಗಳನ್ನು ಮಗುವು ತನ್ನ ತಾಯ್ನುಡಿಯ ಮೂಲಕವೇ ಹೆಸರಿಸಲು ಕಲಿಯುತ್ತ ದೆನ್ನುತ್ತಾನೆ ಸ್ಯಾಡ್ಲರ್. ಇಂಗ್ಲಿಷಿನಲ್ಲಿ ಮಾತಾಡುವಾಗಲೂ ಮನಸ್ಸು ಮಾತೃಭಾಷೆಗೆ ತರ್ಜುಮೆ ಮಾಡು ತ್ತಿರುತ್ತದೆ. ಭಾಷೆ ಮೂರ್ಖವಾದರೆ ಚಿಂತನವೂ ಮೂರ್ಖ ವಾಗುತ್ತದೆ. ಚಿಂತನ ಮೂರ್ಖವಾದರೆ ಭಾಷೆ ಹೆಳವಾಗುತ್ತದೆ ಎನ್ನುತ್ತಾನೆ ಜಾರ್ಜ್ ಆರ್ವೆಲ. ಒಂದು ಸಾಂಸ್ಕೃತಿಕ ಅನುಭವ. ಅದು ಕರ್ತೃ ಕರ್ಮ ಕ್ರಿಯೆಯಲ್ಲ- ಬಿ.ವಿ.ಕಾರಂತ. ಭಾಷೆ ನಾಶವಾದರೆ ಸಂಸ್ಕೃತಿಯೂ ನಾಶವಾದಂತೆ.

ಸಂಸ್ಕೃತಿಯ ಉಳಿವು ಭಾಷೆಯಿಂದ ಸಾಧ್ಯ. ಯಾವುದೇ ಶಿಕ್ಷಣದ ಅಂತಿಮ ಗುರಿ ಮನುಷ್ಯನನ್ನು ಸುಸಂಸ್ಕೃತಗೊಳಿಸುವುದು; ಮಾನವೀಯಗೊಳಿಸುವುದು. ನೆಲದ ಜೀವಸತ್ವವನ್ನು ದಕ್ಕಿಸಿಕೊಳ್ಳಲು ಮಾತೃಭಾಷಾ ಮಾಧ್ಯಮದ ಕಲಿಕೆಯೇ ಉತ್ತಮ. ಸಮಕಾಲಿನ ಜಗತ್ತಿನೊಂದಿಗೆ ಸ್ಪರ್ಧಿಸಲು ಇಂಗ್ಲಿಷ್ ಬೇಕೇ ಬೇಕು. ನಾವು ಯಾರೂ ನಡುಗುಡ್ಡೆಗಳಲ್ಲ. ಸುತ್ತಲೂ ಸಾಂಸ್ಕೃತಿಕವಾದ ಆವರಣವಿದೆ. ಸಂತೋಷ, ದುಃಖ, ಹತಾಶೆ, ನೋವು-ನಲಿವು, ನಿತ್ಯದ ಮಾತು-ಹರಟೆಗಳಿಗೆ
ಜೀವಂತಿಕೆ ಬರುವುದು ತಾಯ್ನುಡಿಯಿಂದ. ಇದು ಇಂಗ್ಲಿಷಿನಿಂದ ಸಾಧ್ಯವಿಲ್ಲ.

ಬದುಕು ಅನುಭವಿಸುವ ಹೈರಾಣಗಳಿಂದ ಹೊರಬರಬೇಕಾದರೆ ತಾಯ್ನುಡಿಯ ಸಂಸ್ಕಾರ-ಸಂಸ್ಕೃತಿ ಗಟ್ಟಿಯಾಗಿರಬೇಕು. ಮಾತೃಭಾಷೆಯ ಸಂಸ್ಕೃತಿಯಿಂದ ವಂಚಿತರಾಗಿ ಬದುಕನ್ನು ಸಹಜವಾಗಿ ಅನುಭವಿಸಲಸಾಧ್ಯ! ಇಂಗ್ಲಿಷಿನಿಂದ ಹುಟ್ಟಿದ ಆಧುನಿಕತೆಯಿಂದ ಪಾರಾಗಿ ಸ್ವಚ್ಛಂದವಾಗಿ ಬದುಕುತ್ತಾ ಸದಾಚೈತನ್ಯ ರಾಗಿದ್ದೇ ತಮ್ಮ ಕನಸುಗಳನ್ನು ರಿಯಲೈಸ್ ಮಾಡಿಕೊಳ್ಳುವ ಶಕ್ತಿಯನ್ನು ಹೊಂದಿದವರು ಹಳ್ಳಿಯ ಜನರು.

ಆಂಗ್ಲಮಾಧ್ಯಮದಲ್ಲಿ ಕಲಿಕೆ ನಡೆಯುವುದಕ್ಕೂ, ಇಂಗ್ಲಿಷನ್ನು ಭಾಷೆಯಾಗಿ ಕಲಿಸುವುದಕ್ಕೂ ವ್ಯತ್ಯಾಸವಿದೆ. ಮಾಧ್ಯಮದ ಪ್ರಶ್ನೆಯೇ ವಿದ್ಯಾಲಯವೊಂದರ
ಘನತೆಯನ್ನು ಅಳೆಯಲು ಮಾನದಂಡವಾಗಿರುವ ಈ ಕಾಲಘಟ್ಟದಲ್ಲಿ ಖಾಸಗಿ ಶಾಲೆಗಳಿಗೆ ಲಂಗುಲಗಾಮಿಲ್ಲದೆ ಪರವಾನಗಿ ಕೊಟ್ಟು ಈಗ ಸರಕಾರಿ ಶಾಲೆಯಲ್ಲಿ ಹಾಜರಾತಿ ಕಡಿಮೆಯಾಗಿದೆಯೆಂದು, ಆಂಗ್ಲಮಾಧ್ಯಮದಲ್ಲಿ ಶಿಕ್ಷಣವನ್ನು ನೀಡುವುದಕ್ಕೆ ಸರಕಾವರವೇ ಮುಂದಾಗಿರುವುದು ದುರಂತವೇ ಸರಿ. ಶಿಕ್ಷಣ ಕ್ಷೇತ್ರವನ್ನು ಲಾಭದ ಉದ್ಯಮವಾಗಿ ಕಾಣದ ದಿನಗಳಲ್ಲಿ ಹುಟ್ಟಿಕೊಂಡ ಶಾಲೆಗಳು ಈಗಲೂ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿವೆ.

ಸಾಮ್ರಾಜ್ಯಷಾಹೀ ಭಾಷೆಯಾದ ಇಂಗ್ಲಿಷ್‌ನಲ್ಲಿ ಕಲಿತರೆ ಯಾವುದೇ ಭಾರತೀಯ ಭಾಷೆಗಳ ಬಗ್ಗೆ ಮಕ್ಕಳಲ್ಲಿ ಆಸಕ್ತಿಯಿರುವುದಿಲ್ಲ. ಕಾಂಗ್ರೆಸ್ ಗಿಡದಂತೆ ಪ್ರಾಂತೀಯ ಅಥವಾ ಪ್ರಾದೇಶಿಕ ಭಾಷೆಗಳನ್ನು ನಾಶಮಾಡಬಲ್ಲ ಶಕ್ತಿ ಇಂಗ್ಲಿಷಿಗಿದೆಯೆಂದು ಅನಂತಮೂರ್ತಿ ಹೇಳುತ್ತಾರೆ. ಕನ್ನಡ ಮನೆಯ ಭಾಷೆಯಾಗಿರುವ ಮಕ್ಕಳಿಗೆ ಇಂಗ್ಲಿಷಿನ ಹುಚ್ಚು ಅಷ್ಟಾಗಿರುವುದಿಲ್ಲ. ಕನ್ನಡವನ್ನೂ ಇಂಗ್ಲಿಷನ್ನೂ ಕಲಿಯದೇ -ಲು ಮಾಡಬಾರದೆಂಬ ಶಿಕ್ಷಣನೀತಿಯ ಲಾಭ ಪಡೆದವರು ಬಟ್ಲರ್ ಇಂಗ್ಲಿಷಿನ ಪ್ರಭುಗಳಾಗುತ್ತಿzರೆ. ಇಂಗ್ಲಿಷ್ ತರುವ ಭಾಗ್ಯ, ದೌಲತ್ತು, ಪ್ರತಿಷ್ಠೆಯನ್ನು ಕನ್ನಡವಾಗಲಿ ಇತರ ಭಾರತೀಯ ಭಾಷೆಗಳಾಗಲಿ ತರುವುದಿಲ್ಲವೆಂಬ ಭ್ರಮೆಯಲ್ಲಿ ಉಳಿದ ಭಾಷೆಗಳು ನಿರ್ಲಕ್ಷ್ಯವಾಗುತ್ತಿವೆ. ಇದಕ್ಕೆ ಕಾರಣ ಇಂಗ್ಲಿಷೊಂದೇ ಕಲಿತರೆ ಸಾಕೆಂಬ ಧೋರಣೆ.

ಯಾವ ಭಾರತೀಯ ಭಾಷೆಯೂ ಇನ್ನೊಂದು ಭಾರತೀಯ ಭಾಷೆಯನ್ನು ಕೊಲ್ಲುವುದಿಲ್ಲ. ಮಾತೃಭಾಷೆಯೊಂದಿಗೆ ಇತರ ಭಾಷೆಯನ್ನೂ ಕಲಿಯಬಹುದು. ಅಧಿಕ ಸಂಬಳ ತರುವ ಭಾಷೆಯಾಗಿ ಇಂಗ್ಲಿಷನ್ನು ಅಪ್ಪಿಕೊಂಡಾಗಲೇ ನಮ್ಮತನವನ್ನೂ ಮರೆಸುವ ಹಿಪೊಕ್ರಸಿಯೊಂದು ನಮ್ಮನ್ನು ಅಡರಿಕೊಂಡಿತು. ನಿತ್ಯ ಜೀವನ ದಲ್ಲೂ ಇಂಗ್ಲಿಷಿನ ಭೂತಾವೇಶವಾಯಿತು. ಕನ್ನಡದ ಸಾಂಸ್ಕೃತಿಕ ಮಹತ್ವದ ಅರಿವನ್ನು ಮೂಡಿಸಲು ಇಂಗ್ಲಿಷಿನ ಜೊತೆಯಲ್ಲಿ ಸಾಂಸ್ಕೃತಿಕ ಭಾಷೆಯ
ಪರಿeನವನ್ನು ಪ್ರತಿಭಾಷೆಯೂ ಮೂಡಿಸಬೇಕು. ವ್ಯಕ್ತಿತ್ವದ ಭಾಗವಾಗಿರುವ ಮಾತೃಭಾಷೆ ಬದುಕನ್ನು ಸಂಸ್ಕರಿಸುತ್ತದೆಂದೂ ಎಲ್ಲ ಶಿಕ್ಷಣ ಆಯೋಗಗಳು ಜಾಗತಿಕ ಶಿಕ್ಷಣವೆತ್ತರು ಮಾತೃಭಾಷಾ ಮಾಧ್ಯಮದ ಕಲಿಕೆಯನ್ನೇ ಸಮರ್ಥಿಸಿದಗದ್ದಾರೆ.

ಕನಿಷ್ಠ ಪ್ರೌಢಶಾಲಾ ಹಂತದವರೆಗಾದರೂ ಮಾತೃಭಾಷಾ ಮಾಧ್ಯಮದ ಕಲಿಕೆ ಆಗಬೇಕೆಂಬುದು ಅವರ ಒಮ್ಮತದ ಅಭಿಪ್ರಾಯ. ಒಬ್ಬ ವ್ಯಕ್ತಿಯ ಯೋಗ್ಯತೆ ಯನ್ನು ಮನೆತನ, ವಂಶ, ಜಾತಿ, ಇತ್ಯಾದಿ ಕಾರಣಗಳಿಂದ ಅಳೆಯುತ್ತವೆಯೇ ವಿನಾ ಆತನ ವರ್ಚಿಸ್ಸಿನಿಂದಲ್ಲ. ಪ್ರಜಾಪ್ರಭುತ್ವವು ವೈಯಕ್ತಿಕವಾದ ವರ್ಚಸ್ಸನ್ನು ಬಯಸುತ್ತದೆಯೇ ವಿನಾ ಗುಲಾಮಗಿರಿಯನ್ನಲ್ಲ. ಆದರೆ ನಾವಿನ್ನೂ ಪ್ರಜಾಪ್ರಭುತ್ವಕ್ಕೆ ಒಡ್ಡಿಕೊಂಡಿಲ್ಲ. ನಮ್ಮ ಮಕ್ಕಳಲ್ಲಿ ಜ್ಞಾನಕ್ಕಿಂತ ಮುಖ್ಯವಾಗಿ ಇಂಗ್ಲಿಷಿನ ಪ್ರಭುತ್ವವನ್ನು ಬೆಳೆಸುವುದು ನಮ್ಮಲ್ಲಿರುವ ಬ್ರಿಟಿಷ್ ದಾಸ್ಯತನವಾಗಿದೆ. ಶಿಕ್ಷಣ ವ್ಯವಸೆಯೇ ಇಂಥ ದೊಡ್ಡ ಗುಲಾಮಗಿರಿಗೆ ಸಿಲುಕಿಕೊಂಡಿರುವಾಗ
ಮಕ್ಕಳಾದರೂ ಏನು ಮಾಡಿಯಾರು? ಮಾತೃಭಾಷೆಯ ಕಲಿತ ನಮ್ಮ ಹಿರಿಯರು ಆಂಗ್ಲ ಮಾಧ್ಯಮದ ಕಲಿಕೆಗೆ ಒತ್ತಡ ತರುತ್ತಿರುವುದು ಸೋಜಿಗವಾದರೂ ಸತ್ಯ. ಇಂಗ್ಲಿಷಿನಲ್ಲಿ ಫೇಲಾದವ ತನ್ನ ಮಕ್ಕಳಿಗೂ ಅದೇ ಗತಿ ಬರಬಾರದೆಂದು ಯೋಚಿಸಿ ಹೆಚ್ಚು ಹಣಪಡೆವ ಉದ್ಯೋಗಕ್ಕಾಗಿ ಆಂಗ್ಲಮಾಧ್ಯಮದ ಶಾಲೆಗೆ ಸೇರಿಸುತ್ತಾನೆ.

ತನಗೆ ಅರ್ಥವಾಗದ ಭಾಷೆಯಲ್ಲಿ ತನ್ನ ಮಕ್ಕಳು ಮಾತಾಡುವುದನ್ನು ಕಂಡು ಖುಷಿ ಪಡುವ ತಂದೆಗೆ ಸಂಸ್ಕೃತಿಯ ಅಳಿವಿನರಿವು ಅಷ್ಟು ಬೇಗ ಅರ್ಥ ವಾಗುವುದಿಲ್ಲ! ಕಂಪನಿ ಸರಕಾರದಲ್ಲಿ ದುಡಿಯುತ್ತಿದ್ದ ಭಾರತೀಯರು ಸ್ವಾತಂತ್ರ್ಯ ಹೋರಾಟಗಾರರನ್ನು ಬ್ರಿಟಿಷ್ ಅಽಕಾರಿಗಳಿಗೆ ಹಿಡಿದು ಕೊಡುತ್ತಿದ್ದರು. ಅದಕ್ಕವರಿಗೆ ಬಹುಮಾನ, ಪ್ರಶಸ್ತಿಗಳು ಸಲ್ಲುತ್ತಿದ್ದವು. ಈಗಲೂ ನಾವು ಅದೇ ಮನಸ್ಥಿತಿಯಲ್ಲಿದ್ದೇವೆ ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ. ಇಂಗ್ಲಿಷನ್ನು ಕಲಿತರೆ ವಿದೇಶಕ್ಕೆ ಹಾರಬಹುದೆಂಬ ಆಸೆಯನ್ನು ಮಕ್ಕಳಲ್ಲಿ ಹುಟ್ಟಿಸುವ ಮಟ್ಟಿಗೆ ಇಂಗ್ಲಿಷ್ ನಮ್ಮನ್ನು ನುಂಗಿಬಿಟ್ಟಿದೆ.

ಆಂಗ್ಲಮಾಧ್ಯಮದ ಶಿಕ್ಷಣದ ವಿನ್ಯಾಸಗಳು ಕೇವಲ ವಿದ್ಯಾವಂತರನ್ನು ಮಾತ್ರ ಸೃಷ್ಟಿಸುತ್ತದೆಯೇ ಹೊರತು ಪ್ರತಿಭಾವಂತ ರನ್ನಲ್ಲ. ಇಂಗ್ಲಿಷಿನ ಜ್ಞಾನನಿಧಿಯನ್ನು
ಕನ್ನಡದ ಕಣ್ಣಿನಲ್ಲಿ ಓದುವುದರಿಂದ ದ್ವಿಭಾಷೆಯಲ್ಲೂ ಪರಿಣಿತಿಯನ್ನು ಗಳಿಸಬಹುದು. ಆಂಗ್ಲಮಾಧ್ಯಮದಿಂದ ವಸ್ತುನಿಷ್ಠ ವಿಚಾರಗಳು ವಿನಿಮಯವಾಗುವುದೇ ಹೊರತು ಜೀವನಿಷ್ಠಮೌಲ್ಯಗಳಲ್ಲ. ಬೌದ್ಧಿಕ ವಿಸ್ತಾರವನ್ನು, ಭಾವನಾತ್ಮಕ ಸಂಬಂಧವನ್ನು ಗಟ್ಟಿಗೊಳಿಸಲಾರದು. ಹೊರಗಿನ ಶುದ್ಧ ಹವೆಯನ್ನು ಪಡೆದು ಸಸ್ಯಗಳು ಆಕಾಶಮುಖಿಯಾಗಿ ಬೆಳೆಯುತ್ತದೆ, ಬೆಳೆಯಬೇಕು. ಚಿಂತನೆಗಳು ಹುಟ್ಟುವುದು ಮಾತೃಭಾಷೆಯಲ್ಲೆ. ಇದು ಪ್ರತಿಭಾಷೆಯ ಮೂಲಭೂತವಾದ ಬದ್ಧತೆ, ಅನಿವಾರ್ಯತೆ. ಕನ್ನಡಕ್ಕೆ ಸದ್ಯ ಒದಗಬೇಕಾದುದು ಇಂಥ ಅನಿವಾರ್ಯತೆ ಮತ್ತು ಬದ್ಧತೆ. ಕನ್ನಡದ ಆರ್ಷೇಯ eನಸಂಪತ್ತು ಉಳಿದಿರುವುದು ಇಂಥ
ಅನಿವಾರ್ಯತೆ ಮತ್ತು ಬದ್ಧತೆಯಿಂದ.

ಮಾತೃಭಾಷೆ ಶಿಕ್ಷಣದ ತಳಹದಿಯಿಲ್ಲದೆ ಇಂಗ್ಲಿಷನ್ನು ಇಂಗ್ಲಿಷಿನಲ್ಲಿ ಓದಲು ಸಾಧ್ಯವಾಗುವುದಾದರೂ ಸ್ವಂತಿಕೆಯ ಕಲ್ಪನೆಗೆ ಹೊರತಾಗಿಬಿಡುವ ಸಂಭವವೇ ಹೆಚ್ಚು. ಆಗ ಬೋಧನೆ ಯಾಂತ್ರಿಕವೂ, ಕಲಿಕೆ ಅಪೂರ್ಣವೂ, ಹಿಂಸೆಯೂ ಆಗಿ ಬಿಡುತ್ತದೆ. ಮಕ್ಕಳನ್ನು ನಿಯಂತ್ರಿಸಬೇಕೆಂಬ ಬಲವಂತದಲ್ಲಿ ಶಿಕ್ಷಕರು ಕೊನೆಗೂ ಮೊರೆ ಹೋಗುವುದು ಕನ್ನಡಕ್ಕೆ!