Friday, 20th September 2024

ವಿವೇಕಾನಂದರ ದೇಸಿ ಶಿಕ್ಷಣ ಇಂದಿನ ಅಗತ್ಯ

ಅರಿವು 

ಡಾ.ಆರ್‌.ನಾಗರಾಜು

ವಿಕಾಸವೇ ಜೀವನ ಸಂಕೋಚವೇ ಮರಣ ತನ್ನ ಸ್ವಂತ ಸುಖವನ್ನು ನೋಡಿಕೊಳ್ಳುತ್ತಾ ಯಾರು ಸ್ವಾರ್ಥ ಪರರಾಗಿ, ಸೋಮಾರಿಗಳಾಗಿ ಕಾಲ ಕಳೆಯು ತ್ತಿರುವವರೊ ಅವರಿಗೆ ನರಕದಲ್ಲಿಯೂ ಸ್ಥಳವಿಲ್ಲ. ಹಾಗೆಯೇ ಪಾವಿತ್ರ್ಯ, ಸಹನೆ, ಸತತ ಪ್ರಯತ್ನ ,ಇವುಗಳು ಜಯ ಗಳಿಸುವುದಕ್ಕೆ ಅತ್ಯಾವಶ್ಯಕವಾಗಿ ಬೇಕಾಗುವ ಗುಣಗಳು. ಇವೆಲ್ಲಕ್ಕಿಂತ ಮುಖ್ಯವಾಗಿ ಪ್ರೀತಿ ಇರಬೇಕು. ಇಂತಹ ಮಾತುಗಳನ್ನು ನಾವು ಕೇಳಿದಾಗ ಇವುಗಳು ಯಾರ ಮಾತುಗಳು ಎಂಬುದು ನಮಗೆ ತಟ್ಟನೆ ನೆನಪಿಗೆ ಬರುತ್ತವೆ. ಅವರು ನಮ್ಮ ದೇಶ ಕಂಡ ಶ್ರೇಷ್ಠ ಚಿಂತಕ, ಸಾತ್ವಿಕ, ಪರಿವ್ರಾಜಕ, ಸನ್ಯಾಸಿ, ಸ್ವಾಮಿ ವಿವೇಕಾನಂದರು.

೧೨/೧/೧೮೬೩ ರಿಂದ ೦೪/೦೭/೧೯೦೨ ರವರೆಗೆ ಬಾಳಿ ಬದುಕಿದವರು ದೇಶದ ಜನರಿಗೆ ರಾಷ್ಟ್ರ ಜಾಗೃತಿ, ಶ್ರದ್ಧೆ, ಭಕ್ತಿ, ಯುವಕರ ಭವಿಷ್ಯ, ಶಿಕ್ಷಣ, ಸಮಾಜ, ಧರ್ಮ, ನೀತಿ, ಜನ ಸೇವೆ, ದೇಶ ಸೇವೆ, ಈಶ ಸೇವೆ, ಮತ್ತಿತರ ವಿಚಾರಗಳ ಬಗ್ಗೆ ಪ್ರಚೋದಕ ನುಡಿಗಳನ್ನು ಇವರು ಹೇಳಿರುವುದನ್ನು ನಾವು
ಅವರ ಜೀವನ ಚರಿತ್ರೆಯನ್ನು ಓದುವಾಗ ಕಾಣುತ್ತೇವೆ. ಅದರಲ್ಲೂ ಅವರ ಶೈಕ್ಷಣಿಕ ಚಿಂತನೆ ಶ್ರೇಷ್ಠ ಮಟ್ಟದಲ್ಲಿ ನಿಂತು ಇಂದಿನ ಶಿಕ್ಷಣ ವ್ಯವಸ್ಥೆಗೆ ದಾರಿ ದೀಪವಾಗಿದೆ.

ಶಿಕ್ಷಣ ಎಲ್ಲಾ ಸಮಸ್ಯೆಗಳಿಗೂ ದಿವ್ಯ ಔಷಧ ಸಮಾಜದ ಎಲ್ಲಾ ವರ್ಗದವರಿಗೂ ಶಿಕ್ಷಣ ತಲುಪಿ ಜನರು ತಮ್ಮ ಪರಿಸ್ಥಿತಿಯನ್ನು ತಾವೇ ಅರ್ಥ ಮಾಡಿ ಕೊಳ್ಳುವಂತಹ ಸ್ಥಿತಿ ಉಂಟಾಗಬೇಕು. ಆಗ ಅವರು ತಮ್ಮ ಸಮಸ್ಯೆಗಳಿಗೆ ತಾವೇ ಪರಿಹಾರವನ್ನೂ ಕಂಡುಕೊಳ್ಳುತ್ತಾರೆ. ಎಂಬ ನಿಲುವು ವ್ಯಕ್ತಪಡಿಸುತ್ತಾ ವಿಷಯಗಳನ್ನು ಅವರ ತಲೆಗೆ ತುರುಕದೆ ಮನಸ್ಸಿಗೆ ಶೈಕ್ಷಣಿಕ ತರಬೇತಿ ನೀಡುವ ಲಕ್ಷಾಂತರ ಶಿಕ್ಷಕರ ಸೇವೆ ಭಾರತಕ್ಕೆ ಅವಶ್ಯಕವಾಗಿದೆ. ಇಂತಹ ಶಿಕ್ಷಕರು ನೀಡುವ ಶಿಕ್ಷಣ ಸಮಾಜದ ಎ ಸಮಸ್ಯೆಗಳಿಗೂ ದಿವ್ಯ ಔಷಧವಾಗಿ ಕೆಲಸ ಮಾಡುತ್ತದೆ.

ದೇಹದ ಆರೋಗ್ಯ ಕೆಟ್ಟಾಗ ಔಷಧಿಯನ್ನು ತೆಗೆದುಕೊಂಡು ಮತ್ತೆ ಆರೋಗ್ಯವನ್ನು ಪಡೆಯುವಂತೆ ಸಮಾಜದ ಆರೋಗ್ಯ ಕೆಡದಂತೆ ಇರುವುದಕ್ಕೆ ಶಿಕ್ಷಣವೆಂಬ ಔಷಧಿ ಅವಶ್ಯಕ ಹಾಗೆಯೇ ಶಿಕ್ಷಣವು ಸಮಾಜದ ಕೆಲವೇ ವರ್ಗಗಳಿಗೆ ಸೀಮಿತವಾಗಿದ್ದರೆ ಅದು ಒಟ್ಟು ಸಮಾಜಕ್ಕೆ ವಿಷ ಪ್ರಾಯವಾಗುತ್ತದೆ.
ಶಿಕ್ಷಣವನ್ನು ಪಡೆದ ಕೆಲವೇ ವರ್ಗದವರಿಂದ ಇತರೆ ವರ್ಗ ದವರ ಶೋಷಣೆಯಾಗುತ್ತದೆ. ಇದರಿಂದ ಒಟ್ಟು ಸಮಾಜಕ್ಕೆ ಅಪಾರ ಹಾನಿಯಾಗುತ್ತದೆ. ಆದುದರಿಂದ ದೇಶದ ಎಲ್ಲಾ ಜನರಿಗೂ ಶಿಕ್ಷಣ ತಲುಪಬೇಕು ಎಂದು ವಿವೇಕಾನಂದರು ಒತ್ತಿ ಹೇಳಿರುವುದನ್ನು ನಾವು ಕಾಣಬಹುದು.

ಶಿಕ್ಷಣವೆಂದರೆ ತಮ್ಮೊಳಗೆ ಆಗಲೇ ಇರುವ ಪರಿಪೂರ್ಣತೆಯ ಅಭಿವ್ಯಕ್ತಿ ಎಂದು ಅವರು ಶಿಕ್ಷಣದ ನಿರ್ವಚನ ನೀಡುತ್ತಾರೆ. ನಮ್ಮನ್ನು ಪರಿಪೂರ್ಣ ವ್ಯಕ್ತಿ ಯನ್ನಾಗಿ ಮಾಡುವುದು ಶಿಕ್ಷಣದ ಗುರಿ. ನೈತಿಕವಾಗಿ, ವೈಚಾರಿಕವಾಗಿ, ಪರಿಪೂರ್ಣವಾಗಿ, ಆಲೋಚನೆ ಮಾಡಿ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಚಿಂತನೆ ಗೊಳಪಡಿಸಿ ಪೂರ್ಣ ಪರಿಪೂರ್ಣ ವ್ಯಕ್ತಿತ್ವದ ವಿಕಾಸವನ್ನು ಸಾಧಿಸುವ ಗುರಿಯನ್ನು ಶಿಕ್ಷಣ ನೀಡಬೇಕು. ‘ಶಿಕ್ಷಣ ನಮ್ಮ ತಲೆಗೆ ತುಂಬಿದ ವಿಷಯಗಳ ಮೊತ್ತವಲ್ಲ’ ನಾವು ಪಡೆದ ಶಿಕ್ಷಣದ eನವನ್ನು ಸರಿಯಾಗಿ ಅರಗಿಸಿಕೊಳ್ಳಲು ನಾವು ವಿಚಾರವಂತರಾಗಬೇಕು. ಮನಸ್ಸಿಗೆ ಜ್ಞಾನದ ಆಹಾರವನ್ನು ಮತ್ತು ವೈಚಾರಿಕ ವ್ಯಾಯಾಮವನ್ನು ನೀಡುವುದು ಸಹ ಶಿಕ್ಷಣವಾಗುತ್ತದೆ. ವಿಚಾರ ಸ್ವಾತಂತ್ರ್ಯವನ್ನು ನೀಡುವುದು. ಸುಶಿಕ್ಷಿತ, ಸುಶೀಲ, ಸಮಾಜದ ನಿರ್ಮಾಣ ವನ್ನು ಮಾಡುವ ಮೂಲಭೂತ ಧ್ಯೇಯವನ್ನು ಶಿಕ್ಷಣ ನೀಡಿದಾಗ ಮೌಲ್ಯಗಳು ವಿಕಾಸವಾಗುತ್ತವೆ. ಮೌಲ್ಯಗಳು ವಿಕಾಸವಾದಂತೆ ಉನ್ನತ ಮೌಲ್ಯಗಳು ನಮ್ಮದಾಗುವುವು.

ಶಿಕ್ಷಣದ ಮಹತ್ವ -ಶಿಕ್ಷಣವೆಂದರೆ ಮೊದಲೇ ಮನುಷ್ಯನಲ್ಲಿ ಇರುವ ಪರಿಪೂರ್ಣತೆಯನ್ನು ಪ್ರಕಾಶ ಪಡಿಸುವುದು, ಎಂದು ಹೇಳಿದ ವಿವೇಕಾನಂದರು ವಿದ್ಯಾಭ್ಯಾಸವೂ ಪುಸ್ತಕ ಪಾಂಡಿತ್ಯವೇ? ಅಥವಾ ಹಲವು ವಿಧದ ಜ್ಞಾನಾರ್ಜನೆಯೇ? ಎಂದು ಪ್ರಶ್ನೆ ಮಾಡುತ್ತಾ ಯಾವ ತರಬೇತಿಯ ಮೂಲಕ ಇಚ್ಛಾಶಕ್ತಿಯ ಪ್ರವಾಹ ಮತ್ತು ಅಭಿವ್ಯಕ್ತಿಗಳು ನಿಯಂತ್ರಣ ಕ್ಕೊಳಗಾಗಿ ಫಲಕಾರಿಯಾಗುವ ವಾತಾವರಣದ ಪರಿಸ್ಥಿತಿಯೇ, ವಿದ್ಯಾಭ್ಯಾಸ ಎಂದು ಉತ್ತರ ಕೊಡುತ್ತಾರೆ. ಮುಂದುವರೆದು ನನ್ನ ದೃಷ್ಟಿಯಲ್ಲಿ ವಿದ್ಯಾಭ್ಯಾಸದ ಸಾರವೇ ಮನಸ್ಸಿನ ಏಕಾಗ್ರತೆ ಬರಿಯ ವಿಷಯ ಸಂಗ್ರಹವಲ್ಲ. ನಾವು ಪುನಃ ವಿದ್ಯಾಭ್ಯಾಸವನ್ನು ಪ್ರಾರಂಭಿಸಬೇಕಾದರೆ ಈ ನಿಟ್ಟಿನಲ್ಲಿ ನನಗೇನಾದರೂ ಸ್ವಲ್ಪ ಸ್ವಾತಂತ್ರ್ಯವಿದ್ದರೆ ನಾನು ವಿಷಯಗಳನ್ನು ಕಲಿತು ಕೊಳ್ಳುವುದಿಲ್ಲ.

ನಾನು ಮೊದಲು ಮನಸ್ಸನ್ನು ಹೇಗೆ ಏಕಾಗ್ರ ಗೊಳಿಸುವುದು ಮತ್ತು ಅದನ್ನು ಹೇಗೆ ಹಿಂದಕ್ಕೆ ಸೆಳೆಯುವುದು ಎಂಬುದನ್ನು ಕಲಿತುಕೊಂಡು ಆನಂತರ
ಒಂದು ಸರಿಯಾದ ಉಪಕರಣದಿಂದ ನನ್ನ ಇಚ್ಛೆ ಪ್ರಕಾರ ವಿಷಯಗಳನ್ನು ಸಂಗ್ರಹಿಸುತ್ತೇನೆ ಎಂದು ಶಿಕ್ಷಣದ ಮಹತ್ವವನ್ನು ತಿಳಿಸುತ್ತಾರೆ. ವಿದ್ಯಾ ಭ್ಯಾಸವು ನಮ್ಮ ತಲೆಗೆ ತುಂಬಲ್ಪಟ್ಟ ಮಾಹಿತಿಗಳ ಮೊತ್ತವಲ್ಲ. ಅದು ಅಲ್ಲಿ ಜೀರ್ಣವಾಗದೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಎಂಬ ಅರ್ಥವನ್ನು ನೀಡುತ್ತದೆ. ಇದರಿಂದ ಜೀವನವನ್ನು ನಿರ್ಮಾಣ ಮಾಡುವಂತಹ ಮನುಷ್ಯನನ್ನು ಪುರುಷ ಸಿಂಹರನ್ನಾಗಿ ಮಾಡುವಂತಹ ಶೀಲ ಸಂಪತ್ತಿಗೆ ಸಹಾಯ ಮಾಡುವಂತಹ ವಿಚಾರಗಳನ್ನು ನಾವು ಅರಗಿಸಿಕೊಂಡು ಅದನ್ನು ಜೀವನದ ಶೀಲದಲ್ಲಿ, ಅನುಷ್ಠಾನಕ್ಕೆ ತಂದರೆ ಇದರಿಂದ ಸಾರ್ಥಕತೆ ದೊರೆಯುತ್ತದೆ.

ಯಾವ ಬಗೆಯ ಶಿಕ್ಷಣದಿಂದ ಶೀಲ ರೂಪುಗೊಳ್ಳುವುದು ಮನಸ್ಥಿತಿ ರೂಪುಗೊಳ್ಳುವುದು. ಬುದ್ಧಿ ವಿಕಾಸ ಗೊಳ್ಳುವುದು. ಹಾಗೂ ಯಾವುದರಿಂದ ತಮ್ಮ ಸ್ವಂತ ಕಾಲ ಮೇಲೆ ತಾವು ನಿಂತು ಕೊಳ್ಳಬಹುದೊ ಅಂತಹ ಶಿಕ್ಷಣ ಇಂದು ನಮಗೆ ಅವಶ್ಯಕವಾಗಿದೆ. ಯಾವ ಶಿಕ್ಷಣ ಜನಸಾಮಾನ್ಯರನ್ನು ಜೀವನ ಸಂಗ್ರಾಮಕ್ಕೆ ಸಮರ್ಥರನ್ನಾಗಿ ಮಾಡುವುದಕ್ಕೆ ಆಗುವುದಿಲ್ಲವೊ,  ವುದು ಮನುಷ್ಯನಿಗೆ ಚಾರಿತ್ರ್ಯ ಬಲ, ಬುದ್ಧಿಬಲ, ಮನೋಬಲ, ಸಿಂಹ ಸಾಹಸಿಕತೆ, ಇವುಗಳನ್ನು ಒದಗಿಸುವುದಿಲ್ಲವೋ ಅದು ಶಿಕ್ಷಣ ಎಂಬ ಹೆಸರಿಗೆ ಯೋಗ್ಯವಾಗುವುದಿಲ್ಲ.

ಜೀವನದಲ್ಲಿ ಮನುಷ್ಯ ತನ್ನ ಕಾಲಿನ ಮೇಲೆ ತಾನು ನಿಂತುಕೊಳ್ಳುವ ಸಾಮರ್ಥ್ಯವನ್ನು ಯಾವುದು ನೀಡುವುದೋ, ಅದೇ ನಿಜವಾದ ಶಿಕ್ಷಣವಾಗುತ್ತದೆ, ಶಿಕ್ಷಣವು ಮನುಷ್ಯನನ್ನು ಸ್ವಾವಲಂಬಿಯನ್ನಾಗಿ ಮಾಡಬೇಕು. ಅವರು ತನ್ನ ಕಾಲ ಮೇಲೆ ತಾನು ನಿಲ್ಲುವಂತಾಗಲು ಸಹಾಯ ಮಾಡಬೇಕು. ಈಗ ವೈಚಾರಿಕ ಪರೀಧಿ ಬಹಳ ವಿಸ್ತಾರವಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ವ್ಯಕ್ತಿಯು ಹಲವು ಪ್ರಭಾವಗಳಿಗೆ ಒಳಗಾಗುತ್ತಿರುತ್ತಾನೆ. ನಮಗೆ ಭಾವನಾತ್ಮಕ ಸ್ವಾತಂತ್ರ್ಯವನ್ನು ನೀಡಬೇಕು. ಮತ್ತು ವೃತ್ತಿಯಲ್ಲಿ ಸೇವಾ ಮನೋಭಾವವನ್ನು ಬೆಳೆಸಬೇಕು. ವಿದ್ಯಾರ್ಥಿಗಳಲ್ಲಿ ಸ್ವದೇಶ ಅನುಭವ ರಾಷ್ಟ್ರಪ್ರೇಮ ಮತ್ತು ಸ್ವಾಭಿಮಾನವನ್ನು ಜಾಗೃತಗೊಳಿಸುವ ಶಿಕ್ಷಣ ನಮ್ಮ ದೇಶಕ್ಕೆ ಬೇಕಾಗಿದೆ.

ಶಿಕ್ಷಕರಾದವರು ಉತ್ತಮ ಮತ್ತು ಶ್ರೇಷ್ಠ ಮತ್ತು ಮಹಾನ್ ಶಿಕ್ಷಕರಾಗಬೇಕು ಉತ್ತಮ ಶಿಕ್ಷಕ eನವನ್ನು ನೀಡುತ್ತಾನೆ ವಿದ್ಯಾರ್ಥಿಗಳಲ್ಲಿ eನದ ಹಂಬಲವನ್ನು ಕೆರಳಿಸುತ್ತಾನೆ. ಸಾಮಾನ್ಯ ಶಿಕ್ಷಕ ತಣ್ಣನೆಯ ಕಬ್ಬಿಣವನ್ನು ಪಡೆಯುತ್ತಿರುತ್ತಾನೆ. ಬಿಸಿಯಾದ ಕಬ್ಬಿಣವನ್ನು ಬಡಿದು ಅದಕ್ಕೆ ಯಾವುದೇ ರೂಪ
ಕೊಡಬಹುದು ಹಾಗೆಯೇ ವಿದ್ಯಾರ್ಥಿಗಳು ಜ್ಞಾನದ ಹಂಬಲದಿಂದ ಕಾದಿರುವ ಕಬ್ಬಿಣಗಳೆ ಆಗಿರುತ್ತಾರೆ. ಇನ್ನು ಮಹಾನ್ ಶಿಕ್ಷಕ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ನೋಡಿಕೊಂಡು ಅವರು ಮುಂದೆ ಜೀವನದಲ್ಲಿ ಸಾಧಿಸ ಬೇಕಾದಂತಹ ಸಾಧನೆಗಳ ಪಟ್ಟಿಯನ್ನು ತನ್ನ ಮುಂದಿನ ಪ್ರತಿನಿಽಯನ್ನಾಗಿ
ವಿದ್ಯಾರ್ಥಿಗಳನ್ನು ರೂಪಿಸುವಂತಹ ಮನಸ್ಥಿತಿ ಅವನಿಗೆ ಗೊತ್ತು ಎಂದು ವಿವೇಕಾನಂದರು ನಾಲ್ಕು ಬಗೆಯ ಶಿಕ್ಷಕರನ್ನು ವಿಮರ್ಶೆ ಮಾಡುತ್ತಾರೆ.
ಅನೇಕ ಮೂಲಗಳಿಂದ ವಿಷಯಗಳನ್ನು ಸಂಗ್ರಹಿಸಿ ವಿದ್ಯಾರ್ಥಿಗಳಿಗೆ ಬೋಧಿಸುವವರು. ತಾನು ಬೋಧಿಸುವುದನ್ನು ವಿದ್ಯಾರ್ಥಿಗಳು ಅನುಸರಿವಂತೆ ಮತ್ತು ಆಚರಿಸುವಂತೆ ಮಾಡು ವವರು ಮತ್ತು ತಾನೂ ಸಹ ಅವುಗಳನ್ನು ಆಚರಿಸುವವರು ಆದ ಶಿಕ್ಷಕರನ್ನು ಆಚಾರ್ಯ ಎನ್ನಲಾಗುತ್ತದೆ. ಎಂದು ಈ ಶ್ಲೋಕ ತಿಳಿಸುತ್ತದೆ.

ಶ್ರೇಷ್ಠ ಹಾಗೂ ಮಹಾನ್ ಶಿಕ್ಷಕರು ಮಾತ್ರ ಆಚಾರ್ಯ ಎನಿಸಿಕೊಳ್ಳುತ್ತಾರೆ. ಇವರು ಯಾಂತ್ರಿಕವಾಗಿ ಮಾತನಾಡುವುದಿಲ್ಲ. .ಅವರಲ್ಲಿ ಜ್ಞಾನದ  ಬಲವಿರುತ್ತದೆ ಅವರು ಅನೇಕ ಗ್ರಂಥಗಳನ್ನು ಅಧ್ಯಯನ ಮಾಡಿ ಅದರಿಂದ ಪಡೆದ ತನ್ನ eನವನ್ನು ಆಧುನೀಕರಿಸುವ ಹೊಸ ಹೊಸ ವಿಷಯಗಳು, ಕ ಥೆಗಳು ಮತ್ತು ಪ್ರಸಂಗಗಳ ಮೂಲಕ ತಮ್ಮ ಪಾಠವನ್ನು ರಸವತ್ತಾಗಿ ಮಾಡುತ್ತಾರೆ. ಅಷ್ಟೇ ಅಲ್ಲದೆ ತಾನು ಬೋಧಿಸು ವುದನ್ನು ವಿದ್ಯಾರ್ಥಿಗಳು ಆಚರಣೆಗೆ ತರುವಂತೆ ಮಾಡುತ್ತಾರೆ. ಇದು ಆಚಾರ್ಯರ ಕಾರ್ಯವೈಖರಿ ಯಾಗಿದೆ. ಶಿಕ್ಷಕರು ವಿeನವನ್ನು ಬೋಧನೆ ಮಾಡುತ್ತಿದ್ದರೆ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಕೆರಳಿಸುವಂತಿರ ಬೇಕು. ಇಂದು ವಿeನವನ್ನು ಓದಿಯೂ ಮೂಢನಂಬಿಕೆಗಳಿಗೆ ದಾಸರಾಗುತ್ತಿರುವುದು ಶೋಚನೀಯ ಸಂಗತಿ.

(ಲೇಖಕರು: ಸಾಹಿತಿಗಳು ಮತ್ತು ಸಂಸ್ಕೃತಿ ಚಿಂತಕರು)