Monday, 16th September 2024

ಅಭಿವೃದ್ದಿ ಸಾಮೂಹಿಕ ಆಂದೋಲನವಾದಾಗ…

ಪ್ರಗತಿ ಪಥ

ಜಿ.ಕಿಶನ್ ರೆಡ್ಡಿ

ಈ ದೇಶವನ್ನು ಪ್ರಾಚೀನ ಸಾಂಸ್ಕೃತಿಕ ಪರಂಪರೆಯ ಅಡಿಪಾಯದ ಮೇಲೆ ನಿರ್ಮಿಸಲಾಗಿದೆ. ವೇದಕಾಲದಲ್ಲಿ ನಮಗೆ ಹೇಳಿಕೊಟ್ಟ ಮಂತ್ರದಂತೆ, ನಾವು ಒಟ್ಟಿಗೆ ನಡೆಯುತ್ತೇವೆ, ಒಟ್ಟಿಗೆ ಚಲಿಸುತ್ತೇವೆ ಮತ್ತು ಆಲೋಚಿಸುತ್ತೇವೆ. ನಾವು ಒಟ್ಟಾಗಿ ನಿರ್ಧರಿಸುತ್ತೇವೆ ಮತ್ತು ಈ ದೇಶವನ್ನು ಮುನ್ನಡೆಸುತ್ತೇವೆ’- ಪ್ರಧಾನಿ ನರೇಂದ್ರ ಮೋದಿ. ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ೨೦೧೪ರಲ್ಲಿ ಕೆಂಪುಕೋಟೆಯ ಮೇಲೆ ನಿಂತು, ನವಭಾರತವನ್ನು ಕಟ್ಟುವ ತಮ್ಮ ದೂರದೃಷ್ಟಿಯನ್ನು ನಿರರ್ಗಳವಾಗಿ ಮಂಡಿಸಿದರು.

ಇದರನ್ವಯ ಅಭಿವೃದ್ಧಿಯು ಕೇವಲ ಕಾರ್ಯಸೂಚಿಯಲ್ಲ, ಅದು ಪ್ರತಿಯೊಬ್ಬ ಭಾರತೀಯನ ಗುರಿಯಾಗಿದೆ. ಭವಿಷ್ಯದಲ್ಲಿ ಜನರ ಸಹಭಾಗಿತ್ವವು ನಮ್ಮ ಪ್ರಬಲ ಅಸವಾಗುವ ಬಗ್ಗೆ ಸುಳಿವು ನೀಡಿದ ಅವರು, ಭಾರತವು ‘ವಿಶ್ವಗುರು’ ಎಂಬ ಮಹತ್ತರ ಸಿಂಹಾಸನದಲ್ಲಿ ಆಸೀನಗೊಳ್ಳಬೇಕೆಂಬ ಮಹದಾಸೆ ಯನ್ನು ಪ್ರತಿಪಾದಿಸಿದರು. ಮೋದಿಯವರು ಅದೇ ವರ್ಷ ನಮ್ಮ ಕ್ಯಾಲೆಂಡರ್ ನಲ್ಲಿ ಮಹತ್ವದ ದಿನವೊಂದನ್ನು ಪಡಿಮೂಡಿಸಿದರು. ಅದು
ಅಕ್ಟೋಬರ್ ೩೧ರಂದು ‘ರಾಷ್ಟ್ರೀಯ ಏಕತಾ ದಿವಸ್’ ಅನ್ನು ಆಚರಿಸುವ ಕುರಿತಾದುದು.

ಇದು ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲರ ಉದಾತ್ತ ಪರಂಪರೆಗೆ ನೀಡುವ ಗೌರವವಾಗಿದೆಯಾದರೂ, ಇದು ಕೇವಲ ದಿನಾಂಕಕ್ಕಿಂತಲೂ ಹೆಚ್ಚಿನದನ್ನು ಸೂಚಿಸುತ್ತದೆ. ಪಟೇಲರು ಕಲ್ಪಿಸಿಕೊಂಡ ಏಕತೆ ಮತ್ತು ಏಕೀಕರಣದ ಮೂಲ ತತ್ತ್ವವನ್ನು ಪುನರುಜ್ಜೀವನ ಗೊಳಿಸ ಬೇಕಾದ ಗಂಭೀರ ಬದ್ಧತೆಯನ್ನೂ ಅದು ಸಾಕಾರಗೊಳಿಸಿತು ಎನ್ನಬೇಕು. ಇದೊಂದು ಭರವಸೆಯಾಗಿದ್ದು, ಅವರ ಹೆಜ್ಜೆಗಳನ್ನು ಅನುಸರಿಸುವ
ಸಂಕಲ್ಪ, ಒಗ್ಗಟ್ಟು ಮತ್ತು ಸಾಮೂಹಿಕ ಪ್ರಯತ್ನಗಳ ಕಾಲಾತೀತ ಮೌಲ್ಯಗಳಲ್ಲಿ ಮುನ್ನಡೆಯುತ್ತಿದೆ.

ರಾಷ್ಟ್ರೀಯ ಏಕತಾ ದಿನವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ, ಏಕತೆಯ ನಿರಂತರ ತತ್ತ್ವಗಳು ಮತ್ತು ಸಹಭಾಗಿತ್ವದ ಪ್ರಬಲ ಶಕ್ತಿಯಿಂದ ಪ್ರಕಾಶಿಸಲ್ಪಟ್ಟ ಹಾದಿಯಲ್ಲಿ ಭಾರತವು ಕೈಗೊಂಡಿರುವ ಗಮನಾರ್ಹ ಯಾನವನ್ನು ಮರುವಿಮರ್ಶಿಸಬೇಕಾಗಿದೆ. ಪ್ರಧಾನಿ ಮೋದಿಯವರ ಜನಕೇಂದ್ರಿತ ಆಡಳಿತ ನೀತಿಯಡಿ ಭಾರತವು ಜಾಗತಿಕ ಸರದಾರನಾಗಿ ಪರಿವರ್ತನೆಗೊಂಡಿದೆ. ಆರ್ಥಿಕತೆಯ ವಿಷಯದಲ್ಲಿ ದುರ್ಬಲ ಸ್ಥಾನದಲ್ಲಿದ್ದ ಭಾರತ ವಿಶ್ವದ ೫ ಅಗ್ರ ಆರ್ಥಿಕತೆಗಳಲ್ಲಿ ಒಂದೆನಿಸಿಕೊಂಡಿದೆ. ೨೦೨೩ರಲ್ಲಿ ೩.೭೫ ಟ್ರಿಲಿಯನ್ ಡಾಲರ್ ಮೌಲ್ಯದ ಜಿಡಿಪಿಯೊಂದಿಗೆ ನಮ್ಮ ರಾಷ್ಟ್ರವು, ಹಂತಹಂತವಾಗಿ ಚೇತರಿಸಿಕೊಳ್ಳುತ್ತಾ ಪ್ರಕಾಶಮಾನವಾಗಿ ಹೊಳೆಯುತ್ತಿದೆ.

ಗೌರವಾನ್ವಿತ ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ವಾರ್ಷಿಕ ಹಣಕಾಸು ಬಜೆಟ್, ಕೇವಲ ಹಣಕಾಸಿನ ನೀಲಿನಕ್ಷೆಯಿಂದ ಕ್ರಿಯಾತ್ಮಕ ನೀತಿ ದಾಖಲೆಯಾಗಿ ರೂಪಾಂತರಗೊಂಡಿದ್ದು, ಇದು ಜನರ ಆಕಾಂಕ್ಷೆಗಳಿಗೆ ಆಧಾರವಾಗಿದೆ ಎಂಬುದು ಕುತೂಹಲಕರ ಸಂಗತಿ. ತನ್ನ ಹಣಕಾಸಿನ ನಿರ್ಧಾ
ರಗಳಿಗೆ ಸರಕಾರವನ್ನು ಹೊಣೆಗಾರನನ್ನಾಗಿ ಮಾಡಲು ಈ ಜನಪರ ಬಜೆಟ್ ನಾಗರಿಕರನ್ನು ಸಶಕ್ತಗೊಳಿಸಿದೆ. ಪ್ರಗತಿಯನ್ನು ಮೇಲ್ವಿಚಾರಣೆ ಮಾಡು ವಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಈ ಬಜೆಟ್, ಸಂಪನ್ಮೂಲದ ಸಮರ್ಥ ಬಳಕೆಯನ್ನು ಖಚಿತಪಡಿಸುತ್ತದೆ. ವಿವಿಧ ಉಪಕ್ರಮಗಳ ಮೂಲಕ ರಾಷ್ಟ್ರೀಯ ಹೆಮ್ಮೆ ಮತ್ತು ಘನತೆಗಳು ಹೆಚ್ಚಾಗಿವೆ.

‘ಸ್ವಚ್ಛ ಭಾರತ’ ಅಭಿಯಾನದಲ್ಲಿ ಸುಮಾರು ೧೨ ಕೋಟಿ ಶೌಚಾಲಯಗಳನ್ನು ನಿರ್ಮಿಸಿ, ಬಯಲುಶೌಚವನ್ನು ನಿರ್ಮೂಲನೆ ಮಾಡಲಾಗಿದೆ. ‘ಬೇಟಿ ಬಚಾವೊ, ಬೇಟಿ ಪಢಾವೊ’ ಉಪಕ್ರಮವು ತಮ್ಮ ಹಕ್ಕುಗಳನ್ನು ಗೆಲ್ಲುವಲ್ಲಿ ಹೆಣ್ಣು ಮಕ್ಕಳಿಗೆ ನೆರವಾಗಿದ್ದರೆ, ‘ಗಿವ್ ಇಟ್ ಅಪ್’ ಆಂದೋಲನದಿಂದಾಗಿ ಒಂದು ಕೋಟಿಗೂ ಹೆಚ್ಚು ಕುಟುಂಬ ಗಳು ಸ್ವಯಂಪ್ರೇರಣೆಯಿಂದ ಎಲ್‌ಪಿಜಿ ಸಬ್ಸಿಡಿಗಳನ್ನು ಕಡಿಮೆಗೊಳಿಸಿವೆ. ಇದು ಜನರ ಸಹಭಾಗಿತ್ವ ಮತ್ತು ರಾಷ್ಟ್ರೀಯ ಏಕತೆಯ ನಿಟ್ಟಿನಲ್ಲಿನ ಉಜ್ವಲ ಉದಾಹರಣೆಗಳಾಗಿವೆ.

‘ಮೇಕ್ ಇನ್ ಇಂಡಿಯಾ’ ಮತ್ತು ‘ಲೋಕಲ್ ಫಾರ್ ವೋಕಲ್’ ಉಪಕ್ರಮಗಳು ನಮ್ಮ ಭಾರತೀಯತೆಯನ್ನು ಪುನರುಜ್ಜೀವನಗೊಳಿಸಿದವು. ಇವು ರಾಷ್ಟ್ರವ್ಯಾಪಿಯಾಗಿ ಜನರು ಭಾಗವಹಿಸುವಂಥ ಆಂದೋಲನವನ್ನು ಹುಟ್ಟುಹಾಕಿದವು. ನಾವು ನಮ್ಮ ವಿವಿಧ ಸ್ತರದ ಉದ್ಯಮಗಳನ್ನು ಅಂದರೆ ‘ಎಂಎಸ್‌ಎಂಇ’ಗಳನ್ನು ಬೆಂಬಲಿಸಿದ್ದೇವೆ, ಅವನ್ನು ಚಾಂಪಿಯನ್ ಆಗಿ ಮಾಡಿದ್ದೇವೆ, ತನ್ಮೂಲಕ ಉದ್ಯಮ ಶೀಲತೆಗೆ ಪ್ರೇರೇಪಿಸಿದ್ದೇವೆ. ಭಾರತದ ಅನನ್ಯ ಕೌಶಲಗಳು ಮತ್ತು ಹೇರಳವಾಗಿರುವ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸುತ್ತಿದ್ದೇವೆ.

ಒಂದು ಕಾಲಕ್ಕೆ ಆಮದುರಾಷ್ಟ್ರ ಎನಿಸಿ ಕೊಂಡಿದ್ದ ಭಾರತವು ಈ ತತ್ತ್ವದ ಅನುಸರಣೆಯಿಂದಾಗಿ ಜಾಗತಿಕ ಮೊಬೈಲ್ ಫೋನ್ ಉತ್ಪಾದನೆಯ ಪ್ರಮುಖ
ಗಮ್ಯತಾಣವಾಗಿ ಮರುರೂಪುಗೊಳ್ಳುವಂತಾಗಿದೆ. ೨೦೧೪ರ ವರ್ಷದಿಂದ ತಯಾರಿಕೆ ಮತ್ತು ಉತ್ಪಾದನಾ ವಲಯದ ಚಟುವಟಿಕೆಗಳಲ್ಲಿ ಶೇ.೩೦೦ರಷ್ಟು ಏರಿಕೆಯಾಗಿದೆ. ಭಾರತವು ಪ್ರಸ್ತುತ ೩ನೇ ಅತಿದೊಡ್ಡ ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆ ಹೊಂದಿದ್ದು ಪೇಟೆಂಟ್‌ಗಳ ಸಂಖ್ಯೆ ಹೆಚ್ಚಾಗಿದೆ. ೨೦೨೨-೨೩ರ
ಹಣಕಾಸು ವರ್ಷದಲ್ಲಿ ದಾಖಲೆಯ ಪ್ರಮಾಣದಲ್ಲಿ ಸರಕು-ಸಾಮಗ್ರಿಗಳನ್ನು ಬೇರೆ ದೇಶಗಳಿಗೆ ರಫ್ತು ಮಾಡಿ ೪೪೮ ಶತಕೋಟಿ ಡಾಲರ್‌ನಷ್ಟು ವಹಿ ವಾಟು ನಡೆಸಲಾಗಿದೆ.

ಡಿಜಿಟಲ್ ಇಂಡಿಯಾ ಪ್ರತಿನಿಧಿಸುವ ಡಿಜಿಟಲ್ ಕ್ರಾಂತಿ ಮತ್ತು ನಗದು ಆರ್ಥಿಕತೆಯು, ಡಿಜಿಟಲ್ ಪಾವತಿಗಳ ವ್ಯಾಪಕ ಸ್ವೀಕಾರವನ್ನು ಉತ್ತೇಜಿಸುವ ಸಾಮಾನ್ಯ ನಾಗರಿಕರ ಸಹಭಾಗಿತ್ವವನ್ನು ಒತ್ತಿಹೇಳುತ್ತದೆ. ವಿಶ್ವದ ಅತಿದೊಡ್ಡ ಡಿಜಿಟಲ್ ಮಾರುಕಟ್ಟೆಗಳಲ್ಲಿ ಭಾರತದ ಹಣಕಾಸು ತಂತ್ರಜ್ಞಾನದ ಅಳವಡಿಕೆ ದರವು ಶೇ.೮೭ರಷ್ಟಿದ್ದು, ಇದು ಶೇ.೬೪ರಷ್ಟಿರುವ ವಿಶ್ವದ ಸರಾಸರಿಯನ್ನು ದಾಟಿ ಹೊಸ ದಾಖಲೆಯನ್ನು ಸೃಷ್ಟಿಸಿದೆ. ೨೦೧೪ರಿಂದ ಆರಂಭವಾಗಿರುವ ಭ್ರಷ್ಟಾಚಾರ-ವಿರೋಧಿ ಹೋರಾಟವು ರಾಷ್ಟ್ರವ್ಯಾಪಿ ಆಂದೋಲನವಾಗಿ ಹೊರಹೊಮ್ಮಿದೆ. ಜೆಎಎಂ (ಜನಧನ್, ಆಧಾರ್ ಮತ್ತು ಮೊಬೈಲ್ ಫೋನ್‌ಗಳು) ಮೂಲಕ ೨೦೧೫ ರಿಂದ ೨೦೨೨ರವರೆಗೆ ೨.೭೩ ಲಕ್ಷ ಕೋಟಿ ರುಪಾಯಿ ಹಣವನ್ನು ಮರುಪಾವತಿಸಲಾಗಿದೆ.

ನಕಲಿ ಫಲಾನುಭವಿಗಳನ್ನು ಬಹಿರಂಗಪಡಿಸಲಾಗಿದೆ ಮತ್ತು ವಿತರಣಾ ವ್ಯವಸ್ಥೆಯಲ್ಲಿನ ಸೋರಿಕೆಯನ್ನು ತಡೆಗಟ್ಟಲಾಗಿದೆ. ೨೦೧೪ರ ವರ್ಷಕ್ಕೂ ಮೊ
ದಲು ಇವು ವಿಪರೀತವಾಗಿದ್ದವು ಎಂಬುದು ಗಮನಾರ್ಹ. ಕೋವಿಡ್ ಸಾಂಕ್ರಾಮಿಕದ ನಡುವೆಯೂ ಭಾರತದ ಒಗ್ಗಟ್ಟು ಮತ್ತು ಜನರ ಸಹಭಾಗಿತ್ವ ಮತ್ತೊಮ್ಮೆ ಪ್ರಜ್ವಲಿಸಿದವು ಎನ್ನಬೇಕು. ಪ್ರಧಾನಿ ಮೋದಿಯವರ ದೂರದೃಷ್ಟಿಯ ಕಾರಣದಿಂದಾಗಿ, ರಾಷ್ಟ್ರವು ಒಂದಿಷ್ಟು ಮುಂಜಾಗ್ರತಾ ಕ್ರಮಗಳನ್ಜು ತ್ವರಿತವಾಗಿ ಜಾರಿಗೆ ತರಲು ಸಾಧ್ಯವಾಯಿತು. ಅಖಾಡಕ್ಕಿಳಿದ ಕೋವಿಡ್ ಯೋಧರು ಸರಕಾರದೊಂದಿಗೆ ಕೈಜೋಡಿಸಿ, ಅವ್ಯವಸ್ಥೆಗಳನ್ನು ಸರಿಪಡಿಸಿ ಸರಿದಾರಿಗೆ ತಂದರು. ತರುವಾಯದಲ್ಲಿ, ಲಸಿಕೆಯ ಕ್ಷಿಪ್ರ ಉತ್ಪಾದನೆಯು ಸಶಕ್ತ ಭಾರತವನ್ನು ವಿಶ್ವಕ್ಕೆ ಪ್ರದರ್ಶಿಸಿತು.

ತನ್ನನ್ನು ತಾನು ರಕ್ಷಿಸಿಕೊಂಡಿದ್ದರ ಜತೆಗೆ ಭಾರತವು ಒಂದಿಡೀ ಜಗತ್ತಿಗೆ ಏಕಕಾಲದಲ್ಲಿ ಬೆಂಬಲ ನೀಡಿತು. ಭಾರತದ ಜಿ-೨೦ ಅಧ್ಯಕ್ಷತೆಗೆ ಗಣನೀಯ ಸಂಖ್ಯೆಯ ನಾಗರಿಕರಿಂದ ಬೆಂಬಲ ಸಿಕ್ಕಿತು. ಹಾಗೆ ನೋಡಿದರೆ ಇದು ನಿಜಾರ್ಥದಲ್ಲಿ ರಾಷ್ಟ್ರೀಯ ಏಕತೆಯನ್ನು ಪ್ರದರ್ಶಿಸಿತು ಎನ್ನಬೇಕು. ಜಾಗತಿಕವಾಗಿ ಭಾರತಕ್ಕೆ ದಕ್ಕಿರುವ ಸ್ಥಾನಮಾನ ಮತ್ತು ‘ವಸುಧೈವ ಕುಟುಂಬಕಂ’ ಪರಿಕಲ್ಪನೆ ಇವು, ಜಾಗತಿಕ ಆಡಳಿತವನ್ನು ಮರುರೂಪಿಸುವ ದಿಕ್ಸೂಚಿಗಳು ಎಂಬುದನ್ನು ಈ ಶೃಂಗಸಭೆಯು ದೃಢಪಡಿಸಿತು. ಜಿ-೨೦ ಶೃಂಗಸಭೆ ಯಲ್ಲಿನ ಜನರ ಸಹಭಾಗಿತ್ವ ಮತ್ತು ಜನಕೇಂದ್ರಿತ ನಾಯಕತ್ವವನ್ನು ಇದು ಖಾತ್ರಿ ಪಡಿಸಿತು.

‘ರಾಷ್ಟ್ರೀಯ ಏಕತಾ ದಿನ’ ಎಂಬುದು ಕೇವಲ ಸ್ಮರಣಾರ್ಥದ ಆಚರಣಾ ಪರಿಪಾಠವಲ್ಲ, ಇದು ಜನರನ್ನು ಸಶಕ್ತಗೊಳಿಸುವ ಆಳವಾದ ತತ್ತ್ವಶಾಸ್ತ್ರ ವಾಗಿದೆ. ಭಾರತ ಮಾತೆಯ ವಿಶಾಲವಾದ ಭೌಗೋಳಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಚೌಕಟ್ಟಿನ ಭವ್ಯವಾದ ಏಕೀಕರಣ ಇದಾಗಿದ್ದು, ಸರ್ದಾರ್ ಪಟೇಲರ ದೃಷ್ಟಿಕೋನಕ್ಕೆ ಹೋಲುವ ಪ್ರಜಾ ಪ್ರಭುತ್ವ ಇಲ್ಲಿ ಕಾರ್ಯರೂಪದಲ್ಲಿದೆ. ಪ್ರತಿಯೊಂದು ದನಿಯನ್ನೂ ಆಡಳಿತದಲ್ಲಿ ಸಂಯೋಜಿಸುವ ಪ್ರಧಾನಿ ಮೋದಿಯವರ ಕರೆ ಈ ಮನೋಭಾವವನ್ನು ಪ್ರತಿಬಿಂಬಿ ಸುತ್ತಿದೆ. ವೈವಿಧ್ಯಮಯ ರಾಷ್ಟ್ರವನ್ನು ಒಂದುಗೂಡಿಸುವ ಈ ರಾಷ್ಟ್ರೀಯ ಹೆಮ್ಮೆಯು, ಸರ್ದಾರ್ ಪಟೇಲರ ಅಖಂಡ ಭಾರತದ ಕನಸನ್ನು ಪ್ರತಿನಿಧಿಸುತ್ತಿದೆ, ಅದುವೇ ಭಾರತ!

ಇಲ್ಲಿ ಪ್ರತಿಯೊಬ್ಬ ನಾಗರಿಕನ ಭಾಗವಹಿಸುವಿಕೆಯು ನಮ್ಮ ಭವಿಷ್ಯವನ್ನು ರೂಪಿಸುತ್ತದೆ ಹಾಗೂ ಒಳಗೊಳ್ಳುವಿಕೆ, ವೈವಿಧ್ಯ ಮತ್ತು ಸಾಮೂಹಿಕ ಶಕ್ತಿಯನ್ನು ಪೋಷಿಸುತ್ತದೆ. ರಾಷ್ಟ್ರೀಯ ಏಕತಾ ದಿನವಾದ ಇಂದು, ಪ್ರಧಾನಿ ಮೋದಿಯವರ ನೇತೃತ್ವದಲ್ಲಿ, ಪ್ರಜಾಪ್ರಭುತ್ವದ ಮೂಲಾಧಾರವಾಗಿರುವ ಸಬಲೀಕರಣದ ಅರ್ಹತೆಯನ್ನು ಮೀರಿದ ಸಿದ್ಧಾಂತಕ್ಕೆ ನಮ್ಮನ್ನು ನಾವು ಮತ್ತೆ ಸಮರ್ಪಿಸಿಕೊಳ್ಳೋಣ, ಅಮೃತ ಕಾಲದ ಭರವಸೆಯ ಯುಗಕ್ಕೆ ನಮ್ಮನ್ನು ಮುನ್ನಡೆಸೋಣ.

(ಲೇಖಕರು ಕೇಂದ್ರದ ಈಶಾನ್ಯ ರಾಜ್ಯಗಳ ಅಭಿವೃದ್ಧಿ,
ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಖಾತೆ ಸಚಿವರು)

Leave a Reply

Your email address will not be published. Required fields are marked *