Saturday, 14th December 2024

ಸಾಯಲಿಕ್ಕೂ ಇಲ್ಲಿ ಕಾಯಬೇಕು ..!

ಅಲೆಮಾರಿಯ ಡೈರಿ

mehandale100@gmail.com

ಮರಣ ಎಂಬುವುದು ನಮ್ಮ ಕೈಯ್ಯಲ್ಲಿ ಇಲ್ಲದಿದ್ದರೂ, ಇಂಥ ನಾನು ಸಾಯಬೇಕು ಎಂದು ನಿರ್ಧಾರ ಖಂಡಿತಾ ಮಾಡಬಹುದು. ಅ ಗೋಣು ಚೆಲ್ಲುತ್ತೇವೆಯೋ ಇಲ್ಲವೋ ಅದತ್ಲಾಗಿರಲಿ. ಆದರೆ ಖಂಡಿತಕ್ಕೂ ಮರಣಕ್ಕೂ ಅದರ ಜಾಗಕ್ಕೂ ಅವಿನಾಭಾವ ಸಂಬಂಧ ಕಲ್ಪಿಸಿ ಸಾವಿಗೂ ಒಂದು
ಅಪರ ಪುಣ್ಯದ ಸ್ಥಾನ ಕಲ್ಪಿಸಿದ್ದೇ ಆದರೆ, ಅದರ ಶ್ರೇಯ ಸಲ್ಲಬೇಕಾದದ್ದು ಕಾಲಾತೀತ ನಂಬುಗೆಯನ್ನು ಗಟ್ಟಿಗೊಳಿಸಿದ ಮತ್ತು ಅದಕ್ಕಾಗೇ ಉಸುರು ನೀಗಲು ದಂಡೋಪಾದಿಯಲ್ಲಿ ಜನ ವಲಸೆಯಂತೆ ನಡೆಯುತ್ತಿದ್ದುದೂ ಇತಿಹಾಸದ ಭಾಗವಾಗಲು ಕಾರಣ ಕಾಶ್ಯಾಂ ಮರಣ ಮುಕ್ತಿ.

ಎಂದರೆ ಕಾಶಿ ಎನ್ನುವ ವಿಶ್ವನಾಥನ ಸನ್ನಿಽಯಲಿ ಮರಣ ಹೊಂದಿದರೆ ಮುಕ್ತಿ ಸಿಗುತ್ತದೆನ್ನುವ ಹಿಂದೂ ಧರ್ಮದ ನಂಬುಗೆ ಮತ್ತು ವಿಶ್ವಾಸ. ಹಾಗಂತ ಕಾಶಿಯಲ್ಲಿ ಹೋಗಿ ಎಲ್ಲಿ ಬೇಕಾದರೂ ಯಾವಾಗ ಬೇಕಾದರೂ ಸಾವು ಸಾಧ್ಯವಾದೀತಾ..? ಅದೇನು ನಮ್ಮ ಕೈಯ್ಯಲ್ಲಿದೆಯಾ..? ಅಷ್ಟಕ್ಕೂ ಮನುಷ್ಯನ ಆಯಸ್ಸು ಗಟ್ಟಿ ಇದ್ದರೆ ನೂರಾರು ವರ್ಷ ಏನು ಮಾಡಿದರೂ ಸಾಯದ ಗಟ್ಟಿಪಿಂಡ ಎಂದೆನ್ನಿಸಿಕೊಂಡ ಅನಾಹುತಕಾರಿ ಇಸಮುಗಳು ನಾವು ವಾಪಸು ಬದುಕುವುದರಲ್ಲಿ.

ಹಾಗೆ ಬದುಕಿದ ಮೇಲೂ ಯಾಕಾದರೂ ಬದುಕಿದನಪ್ಪಾ ಎನ್ನುವಂತೆಯೂ ಬದುಕಬಲ್ಲರು ನಮ್ಮಲ್ಲಿ. ಹಾಗಾಗಿ ಸಾಯುವುದಂತೂ ಸುಲಭ ಸಾಧ್ಯವಿಲ್ಲದ ಮತ್ತು ಬೇಕೆಂದಾಗ ಲಭ್ಯವಿಲ್ಲದ ಆನ್‌ಲೈನ್‌ನ್ನಲ್ಲಿ ಬುಕ್ ಮಾಡಿಬಿಡಲಾ ಎನ್ನುವ ಲೆಕ್ಕಕ್ಕೆ ಸಿಗದ ಅಂಶವನ್ನು ಕನಿಷ್ಟ ಕಾಯುವಿಕೆಯ ಮೂಲಕವಾದರೂ ಬರಮಾಡಿಕೊಳ್ಳುವ ಅವಕಾಶ ಕಲ್ಪಿಸಿಕೊಳ್ಳೋಣ ಎಂದೆನ್ನಿಸಿದಾಗ ಹುಟ್ಟಿz ಮುಕ್ತಿ ಧಾಮ ಎಂಬ ಕಾನ್ಸೆಪ್ಟು.

ಕಾರಣ ತಾನಾಗಿ ಬೇಕಾದಾಗ ಸಾವು ಬರುತ್ತದೋ ಇಲ್ಲವೋ, ಅಂದುಕೊಂಡ ಉತ್ತರಾಯಣ ಕಾಲದ ಸಾವು ಎಲ್ಲರಿಗೂ ಲಭ್ಯ ಇಲ್ಲದಿದ್ದರೂ ಇನ್ನೇನು ನಾನೂ ಸಾಯಬಹುದು, ಬದುಕಿ ಮಾಡುವುದಾದರೂ ಏನಿದೆ ಎಂದೆನ್ನಿಸಿದಾಗಲಾಗಲಿ ಅಥವಾ ಇನ್ನೇನು ದೇಹ ಮುದ್ದೆಯಾಗಿ, ಬದುಕು ಮುಗಿದು
ಹೋಗಲಿದೆ ದಿನ ಗಳೆಣಿಸುವ ಕಾಲ ಎನ್ನುವ ಸ್ಥಿತಿ ಬಂದಾಗಲಾಗಲಿ, ಅಹಾ ಸಾವಿಗೆ ಕೊನೆಯ ದಿನಗಳು ಎನ್ನುತ್ತಾರಲ್ಲ ಆಗ ಅಟ್ಲೀ ಇಂಥಲ್ಲೇ ಸಾಯೋಣ ಎನ್ನಿಸಿದರೆ ಅದಕ್ಕೂ ಒಂದು ಜಾಗಬೇಕಲ್ಲ. ಆಗ ಭಾರತೀಯ ಸನಾತನತೆಯ ಮನಸ್ಥಿತಿಗೆ ಹೊಳೆದಿದ್ದೇ ಕಾಶಿ- ವಾರಣಾಸಿ ಮತ್ತು
ಅದಕೊಂದು ಚೆಂದದ ಹೆಸರು ಮುಕ್ತಿಧಾಮ.

ಇದೆಲ್ಲ ಸುಮ್ಮನೆ ಆದ ವಿಷಯವಲ್ಲ. ಮೊದಮೊದಲಿಗೆ ಕಾಶಿಯಲ್ಲಿ ಸಾಯಲೆಂದೇ ಬರುತ್ತಿದ್ದವರಿಗೆಲ್ಲ ಸುಲಭ ಸಾವು ಸಿಗುತ್ತಿರಲಿಲ್ಲ ಎನ್ನುವುದು ಒಂದೆಡೆಯಾದರೆ, ರೋಗರುಜಿನ ಜಡ್ಡೂ ಜಾಪತ್ರೆಗಳಿಂದ ಸಾಯುಲು ಬಯಸಿ ಕಾಶಿ ಸೇರುತ್ತಿದ್ದವರೂ ನೂರಾರು ಜನರು. ಹಾಗೆ ಬಂದವರಿಗೆಲ್ಲ ಸಾವು ಬಂದ ತಕ್ಷಣವೇನೂ ಸಿಗುತ್ತಿರಲಿಲ್ಲವಲ್ಲ. ಅದರಲ್ಲೂ ರೋಗ ವ್ರಣ ಇತ್ಯಾದಿ ಬಾಧೆಗಳಿಗೆ ಪಕ್ಕಾಗಿ ಬರುತ್ತಿದ್ದವರೂ ಹೇಗಾದರೂ ಸತ್ತರೇ ಸಾಕು ಎನ್ನುವವರೇ ಅಧಿಕವಾಗಿದ್ದ ಕಾಲ ಅದು. ಹಾಗಾಗಿ ಕಾಶಿಯ ಸಾಯಬೇಕು ಎಂದ ಕೂಡಲೇ ಅವರನ್ನು ತಂದು ಬಿಟ್ಟು ಹೋಗುತ್ತಿದ್ದವರಿಗೂ
ಕಡಿಮೆ ಇರಲಿಲ್ಲ.

ಹಾಗೆ ಬಂದವರಿಗೆಲ್ಲ ಗಂಗೆಯ ದಡದ ಕಟ್ಟೆಗಳು, ಘಾಟ್‌ನ ಮೆಟ್ಟಿಲುಗಳು ಮತ್ತು ಇತರೆ ಆಶ್ರಯದ ಸ್ಥಳಗಳೇ ಸಾವಿನ ಬಾಗಿಲು ಕಾಯುವ ತಾಣಗಳಾಗಿದ್ದವು, ಜನ ಅಲ್ಲ ಬಿದ್ದು ಒದ್ದಾಡಿ, ಸ್ರಾವಕ್ಕೀಡಾಗಿ ಸಾಯುತ್ತಿದ್ದುದು ಸರ್ವೇ ಸಾಮಾನ್ಯವಾಗಿತ್ತು.

ಅಕ್ಷರಶ: ಬೀದಿ ಹೆಣದಂತೆ ಗಂಗೆಯ ದಡದಲ್ಲಿ ಸಾಯುತ್ತಿದ್ದರೆ, ಯಾರೋ ದಾನಿಗಳು ನೀಡಿದ ಕಟ್ಟಿಗೆಯ ಕಾರಣ ದಹನ ನಡೆದುಹೋಗುತ್ತಿತ್ತು. ಹೆಚ್ಚಿನ ಹೆಣಗಳು ಬೇಯುವ ಮೊದಲೇ ಅಥವಾ ಕೇಳುವವರಿಲ್ಲದೆ ಗಂಗೆ ಪಾಲಾಗುತ್ತಿದ್ದುದು ಇದ್ದೇ ಇತ್ತಲ್ಲ. ಒಟ್ಟಾರೆ ಪರಿಸ್ಥಿತಿ ಗಂಭೀರವಿತ್ತು. ಹಾಗೆ ತೀರ ದಾರುಣ ಸಾವುಗಳನ್ನು, ಅವುಗಳ ಚರಮ ಸೀಮೆಯಾದ ಘಾಟಗಳಲ್ಲಿನ ದೃಶ್ಯ ನೋಡಿದ ಖ್ಯಾತ ಉದ್ಯಮಿ ಬಿರ್ಲಾ ಇದಕ್ಕಾಗೇ, ಸಾಯುವವರ ಆಶ್ರಯಕ್ಕೆಂದು ಗಂಗಾಭವನ ಕಟ್ಟಿಸಿ ಸಾಯುವವರ ಕೊನೆಯ ದಿನಗಳ ನೆಮ್ಮದಿಗೆ ಜಾಗ ಒದಗಿಸಿದವರರಲ್ಲಿ ಮೊದಲಿಗರು. ಅವರ ಕಾರಣದಿಂದ ಕಾಶಿಯ ಮತ್ತೊಂದು ತುದಿಯ ಘಾಟ್ ನಲ್ಲಿ ಗಂಗಾಭವನ ಎನ್ನುವ ಆಶ್ರಯ ತಾಣ ಸಾಯುವವರಿಗಾಗೇ ತಲೆ ಎತ್ತಿ ಸಾವಿರಾರು ಜನರ ಆತ್ಮ ಅಲ್ಲಿ
ನೆಮ್ಮದಿಯಿಂದ ಅಸು ನೀಗಿದವಾದರೂ, ಗಂಗಾಭವನದಲ್ಲಿ ಸಾಯಲು ಒಂದು ಪ್ರೊಸಿಜರೂ ಎಂದು ಇರಲೇ ಇಲ್ಲ.

ಒಟ್ರಾಶಿ ಸಾಯಲು ಬಂದವರನ್ನು ಅಲ್ಲಿ ಇಳಿಸಿ, ಇಲ್ಲ ಬಿಟ್ಟು ಹೋಗುವ ಅಭ್ಯಾಸಕ್ಕೆ ಪಕ್ಕಾಗಿದ್ದರೆ, ಬಿದ್ದ ಬಿದ್ದ ಹೆಣಗಳಿಗೆ ಕೇಳುವವರ ಇರಲಿಲ್ಲ. ಹೀಗಾಗಿ ಅವರ ಸಾಮಾಜಿಕ ಕಾಳಜಿಯ ಕಾರ್ಯ ಗಂಗೆಯ ನೀರಿಗೆ ಬಿತ್ತು. ಮತ್ತೆ ಹೆಣಗಳು ಬಿದ್ದ ಬಿದ್ದು ನೀರು ಪಾಲಾಗತೊಡಗಿದವಲ್ಲ. ಅದರಲ್ಲೂ ಸರಿಯಾದ ನಿರ್ವಹಣೆ ದಕ್ಕದೆ ಮತ್ತು ಸ್ಥಳೀಯ ಅನಾದರತೆಯಿಂದ ಅದು ಯೋಜಿಸಿದಂತೆ ಧನಾತ್ಮಕ ಪ್ರಗತಿ ಕಾಣಲಿಲ್ಲ. ಆದರೆ ಸುಮಾರು ೧೯೫೭ ರಲ್ಲಿ ಹೀಗೆ ಸಾಯಲೆಂದೇ ಇಚ್ಚಿಸಿದ್ದ ತಮ್ಮ ತಾಯಿಯನ್ನು ಕರೆದುಕೊಂಡು ಬಂದ ಉದ್ಯಮಿಯೊಬ್ಬರಿಗೆ (ದಾಲ್ಮಿಯಾ) ಎದುರಾಗಿದ್ದು ಅಘಾತ.

ಕಾರಣ ಹಣ ಇದ್ದರೂ ನೆಲೆ ನೀಡಲೊಲ್ಲದ ಕಾಶಿಯ ಬಗ್ಗೆ ತೀವ್ರ ಬೇಸರವಾಗಿ ಘಾಟ್‌ವೊಂದರಲ್ಲಿ ತಾಯಿಯ ಅಂತಿಮ ಇಚ್ಛೆ ಪೂರೈಸುವಂತಾಯಿತು. ಯಾವ ಹೋಟೆಲು, ಛತ್ರ, ಗುಡಿ ಗುಂಡಾರ ಎಲ್ಲಿಯೂ ಕೂರಿಸಿಕೊಳ್ಳುವವರಿಲ್ಲದೆ ಹೈರಾಣಾಗಿ ಹೋದರು. ಯಾರದ್ದೇ ಮನ ಬಾಡಿಗೆ ಹಿಡಿದು ಕೆಲಸ
ಪೂರೈಸಿಕೊಂಡರಂತೆ. ಆಗ ಏನಿದ್ದರೂ ನೆಮ್ಮದಿಯ ಸಾವಿಗೊಂದು ಜಾಗವಿಲ್ಲವೇ ಎನ್ನಿಸಿದಾಗ, ಇನ್ನು ಮುಂದೆ ಮುಕ್ತಿಗಾಗಿ ಬರುವವರಿಗೆ, ಉಳಿದವರಿಗೆ ಇಂಥಾ ಪರಿಸ್ಥಿತಿ ಬರದಿರಲಿ ಎಂದು ಮರು ವರ್ಷವೇ ಸಾಯುವವರಿಗಾಗೇ ಒಂದು ಸ್ಥಳ ಒದಗಿಸಲು ಕೈಂಕರ್ಯಕ್ಕೆ ಇಳಿದ ಪರಿಣಾಮ ಈಗಾಗಲೇ ಸುಮಾರು ೨೩,೬೦೦ ಚಿಲ್ರೆ ಜನರಿಗೆ ಮುಕ್ತಿ ಒದಗಿಸಿರುವ ಮುಕ್ತಿಧಾಮ ಅರ್ಥಾತ್ ಸಾಯುವವರಿಗಾಗಿ ಕಾಯುವ ಮನೆ
ಹುಟ್ಟಿಕೊಂಡು ಬೆಳೆದು ನಿಂತಿದೆ.

ಹಾಗೆ ದಾಲ್ಮಿಯಾ ಆರಂಭಿಸಿದ ಈ ಮನೆಯಲ್ಲಿ ಬರುಬರುತ್ತಾ ಜನ ಮತ್ತು ಸೇವೆ ಎರಡೂ ಹೆಚ್ಚಾದವು. ಜನರು ನೆಮ್ಮದಿಯಾಗಿ ಸಾಯಲೂ
ಜಾಗ ಇಲ್ವಲ್ಲ ಎನ್ನುವ ಮಾತೇ ಇಲ್ಲದಂತೆ ಇಲ್ಲಿ ಬಂದುಳಿದು ಜನ ಸಾಯತೊಡಗಿದರು. ಕ್ರಮೇಣ ಹೀಗೂ ವ್ಯವಸ್ಥೆ ಇದೆ ಎನ್ನುತ್ತಿದ್ದಂತೆ ಇದರ ಅನುಕೂಲ ಪಡೆಯುವವರ ಜೊತೆಗೆ ಸೇವೆ ನೀಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಸುಮಾರು ಹತ್ತು ಸಾವಿರ ಜನರ ಉಸಿರು ನಿಲ್ಲುವ ವೇಳೆಗೆ ಇದರ ಖ್ಯಾತಿ ವಿದೇಶಕ್ಕ ಹಬ್ಬಿ ಸಾಯಲೆಂದೇ ಇರುವ ಮನೆ ಎಂದು ವಿದೇಶ ಪ್ರವಾಸಿಗರು ಇಣುಕಿ ನೋಡುವ ಫೋಟೋ ಸೆಶನ್ ಮಾಡುವ
ಉಮೇದಿಯೂ ಆರಂಭವಾಯಿತು.

ನಾನು ಅಸ್ಸಿ ಘಾಟ್‌ನಲ್ಲಿ ಆಗೀಗ ತಂಗಿzಗೆಲ್ಲ ನನಗಿದು ತೀವ್ರ ಅಸಕ್ತಿ ಹುಟ್ಟಿಸುತ್ತಿದ್ದ ಜಾಗವಾಗಿತ್ತು. ಅದಕ್ಕಾಗಿ ಮರೆಯದೇ ಸಂಜೆಯ ಸಮೋಸ ಚಾಟ್‌ನ ರಸ್ತೆಗೆ ಹೊರಡುವ ಅರ್ಧ ಗಂಟೆ ಮೊದಲು ಇಲ್ಲಿಗೆ ತಲುಪಿ ಒಳಗೆಲ್ಲ ತಿರುಗಾಡುತ್ತಾ, ಜನರ ಜೊತೆಗೆ ಮಾತುಕತೆಗೆ ಯತ್ನಿಸುತ್ತಿದ್ದೆ. ಹಲವರಿಗೆ ಚರ್ಚೆ ಮತ್ತು ಮಾತೇ ಮುಖ್ಯವಾಗಿ ಬೇಕೆನ್ನುವುದು ಗೊತ್ತಾಗಿ, ಅವಕಾಶ ಇzಗೆಲ್ಲ ಈ ಮುಕ್ತಿ ಧಾಮದಲ್ಲಿ ಕೊತೆದ್ದು ಬಂದಿದ್ದೇನೆ. (ಹೆಚ್ಚಿನಂಶ ನಮ್ಮಲ್ಲಿ ಜನರಿಗೆ ಬೇರೇನೂ ಬೇಕಿಲ್ಲದಿದ್ದರೂ ಅವರ ಬಾಯಿಗೊಂದು ಕಿವಿ ಬೇಕಿರುತ್ತದೆ. ಇದು ಬದುಕಿದ್ದಾಗಿನ ಸತ್ಯ. ಆದರನ್ನು ನಾವು ಪೂರೈಸುವುದಿಲ್ಲ.) ವಾರದ ಅವಧಿಯಲ್ಲಿ ಕಣ್ಣೆದುರೇ ಇದ್ದವರು ಶವವಾಗಿ ಹೋಗುವುದನ್ನೂ, ಅವರ ಮನೆಗಳವರು ನೋವಿತ್ತೋ ಇಲ್ಲವೋ ಕೊನೆಯಾಸೆ ಪೂರೈಸಿ ಎಲ್ಲ ಪೊರೆದು ಎದ್ದು ಹೋಗುವ ನೆಮ್ಮದಿಯ ಭಾವವನ್ನೂ ಓದಿದ್ದೇನೆ.

ಆಸಕ್ತಿಕರ ಎಂದರೆ ಇದು ಸಂಪೂರ್ಣ ಉಚಿತ ಮತ್ತು ಕೇವಲ ವಿದ್ಯುತ್ ದೀಪದ ಇತರೆ ಖರ್ಚಿಗಾಗಿ ನಾಮಿನಲ್ ಎನ್ನುವಂತೆ ಸಣ್ಣ ಮೊತ್ತ ಭರಿಸಿದರೆ ಸಾಕು. ನೋಡಿ, ಸಾವು ಎಷ್ಟು ಸೋವಿ ಎನ್ನಿಸುವುದೇ ಇಂಥಾ ಸಂದರ್ಭದಲ್ಲಿ. ಕಾರಣ ಆರಂಭದಲ್ಲಿ ಅವಕಾಶ ಇಪ್ಪತ್ತು ಜನರಿಗೇ ಮಾತ್ರ ಇದ್ದರೆ, ಅಗತ್ಯ ಬಿದ್ದರೆ ನಿರ್ವಾಹಕರು ಹೇಗೋ ಹೆಚ್ಚಿನ ಜನರನ್ನೂ ಭರಿಸುತ್ತಾರೆ. ಆದರೆ ಸಾಯಲು ಎರಡೇ ವಾರಗಳ ಕಾಲಮಿತಿ ಇಲ್ಲಿ. ಅಂದರೆ ಬಂದು ಸೇರಿದ ಎರಡು ವಾರದೊಳಗೆ ಪ್ರಾಣ ಬಿಡಬೇಕು. ಇಲ್ಲದಿದ್ದರೆ ವಾಪಸ್ಸು ಮನೆಗೆ, ಗಂಟು, ಗದಡಿ ಎತ್ತಿಕೊಂಡು ಪೆವೆಲಿಯನ್‌ಗೆ ಮರಳಬೇಕು. ಅಕಸ್ಮಾತ್ ಇನ್ನೊಂದೆರಡು ಮೂರು ದಿನ ಇದ್ದರೆ ಮುಕ್ತಿ ಸಿಕ್ಕೀತು ಎಂದು ಮ್ಯಾನೇಜರು ತಮ್ಮ ಅನುಭವದ ಮೇಲೆ ಇರಲಿ ಬಿಡಿ ನೋಡೊಣ ಎನ್ನುತ್ತಾರೆ. ಅವರ ಅನುಭವ ಕೆಲಸಕ್ಕೆ ಬಂದಿರುತ್ತೆ.

ಹೆಚ್ಚಿನಂಶ ಆ ಗ್ರೇಸ್ ಪಿರಿಯಡ್ ಕಾಲಾವಧಿಯಲ್ಲಿ ಮುಕ್ತಿ ಸಿಗುತ್ತದೆ. ಇಲ್ಲದಿದ್ದರೆ ವಾಪಸ್ಸು ಪಕ್ಕಾ. ಹಾಗೆ ಅವರೊಂದಿಗೆ ಇರುವವರಿಗೂ ಜಾಗ ಒದಗಿಸುತ್ತಾರಲ್ಲದೆ ಊಟ ಉಪಚಾರ ಕಟ್ಟು ನಿಟ್ಟು. ಎಲ್ಲ ಆಯಾ ಅಹಾರ ಅಭ್ಯಾಸದ ಜೊತೆಗೆ ತಾವು ತಾವೇ ಅಡಿಗೆ ಮಾಡಿಕೊಳ್ಳುವುದು,
ಶುದ್ಧ ಶಾಖಾಹಾರಿ ಇರಲೇಬೇಕೆನ್ನುವುದರ ಜೊತೆಗೆ ಪ್ರತೀ ಸಾವಿನಾಪೇಕ್ಷಾರ್ಥಿಗೆ ಮರೆಯದೇ ಭಜನೆ, ಪ್ರಸಾದ, ತೀರ್ಥ ಇತ್ಯಾದಿ ಸಮಯಕ್ಕೆ ಸರಿಯಾಗಿ ಪೂರೈಸಿ ಸಂಪೂರ್ಣ ಧಾರ್ಮಿಕ ಮತ್ತು ಆಧ್ಯಾತ್ಮಿಕ ವಾತಾವರಣವನ್ನು ಸಮಯಾನುಕೂಲ ಒದಗಿಸುವ ನಿಟ್ಟಿನಲ್ಲಿ ನಿರ್ವಹಣೆ ಅಚ್ಚುಕಟ್ಟು.

ಸುಮಾರು ನಾಲ್ಕು ದಶಕಗಳಿಂದ ಇದನ್ನೆಲ್ಲ ನಿರ್ವಹಿಸುತ್ತಿರುವ ಇಲ್ಲಿನ ಮ್ಯಾನೇಜರ್ ಭೈರವನಾಥ್ ದತ್‌ಗೆ ಇದೆಲ್ಲ ಮಾಮೂಲು. ಆದರೆ ಮೊದಲಿನಿಂದಲೂ ಪಾಲಿಸಿಕೊಂಡು ಬಂದ ಕೆಲವು ನಿಯಮಾವಳಿಗಳನ್ನು ಯಾವ ಕಾರಣಕ್ಕೂ ಸಡಿಲಿಸಿಲ್ಲ. ಜೊತೆಗೆ ಮುಕ್ತಿಗಾಗೇ ಬಂದ ಮೇಲೆ ಇನ್ನುಳಿದ ಆಸೆಗಳ ಮೋಹ ಆವಗಾಹನೆ ಇರಬಾರದೆನ್ನುವ ನಿಟ್ಟಿನಲ್ಲಿ ಅದೆಲ್ಲ ಸಹಜ ಎನ್ನಿಸುತ್ತದೆ ಕೂಡಾ. ಏಕಕಾಲಕ್ಕೆ ಅರವತ್ತು ಜನರನ್ನು ಮುಕ್ತಿ ಮಾರ್ಗಕ್ಕೆ ಒಯ್ಯಲು ಹೇಗಾದರೂ ಸ್ಥಳಾವಕಾಶ ಒದಗಿಸುವ ಈ ಮುಕ್ತಿಧಾಮಕ್ಕೆ ಹೆಚ್ಚಿನ ಕಾಯಕಲ್ಪ ಬೇಕಿದೆ.

ಕಾರಣ ಹಳೆಯ ಶೈಲಿಯ ಕಟ್ಟಡ, ಪಾರಂಪರಿಕ ಒಳಕೋಣೆಗಳ ವಿನ್ಯಾಸದ ಕಾರಣ ಜೊತೆಗೆ ಇರುವವರಿಗೆ ಸಹಜ ಅನಾನುಕೂಲತೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಮುಕ್ತಿ ಧಾಮಕ್ಕೆ ಬರುವವರೆಲ್ಲ ಹೆಚ್ಚಿನ ದಡ್ಡು ವೆಚ್ಚದ ಬಗ್ಗೆ ತಲೆ ಕೆಡಿಸಿಕೊಳ್ಳದೆ ವ್ಯವಸ್ಥೆ ಬೇಕು ಎನ್ನುವುದು ಮಾಮೂಲಿಯಾಗಿದೆ. ಆದರೆ ರಿನಾವೇಶನ್ ಮಾತ್ರ ಇನ್ನೂ ಸೂಕ್ತವಾಗಿ ಕೈಗೂಡಿಲ್ಲ. ಇಷ್ಟೆಲ್ಲ ವರ್ಷ ಸಹಸ್ರಾರು ಸಾವುಗಳು ಕಣ್ಣ ಮುಂದೆ ಮತ್ತು
ಎದುರಾ ಎದುರೇ ನೋಡುವಾಗಲೇ ನಡೆದಿದ್ದರೂ, ನಿಮಗ್ಯಾವತ್ತಾದರೂ ಸಾವು ಹೀಗೆಯೇ ಸಂಭವಿಸಿದೆ ಎಂದು ಎನ್ನಿಸಿದೆಯೇ ಎಂದು ಕೇಳಿದರೆ, ಉಹೂಂ.. ಅದರ ಅವಗಾಹನೆ ಉಹೂಂ.. ಮುಕ್ತಿ ಸಿಗುತ್ತದೆನ್ನುವುದು ಹೌದಾದ ಯಾವ ಕ್ಷಣದಲ್ಲಿ ಉಸುರು ನಿಂತಿದೆ ಎಂಬ ನಿಸರ್ಗದ ಗುಟ್ಟು ಹತ್ತಾರು ಸಾವಿರ ಸಾವು ನೋಡಿದರೂ ಸಣ್ಣ ಸುಳಿವೂ ಸಿಕ್ಕಿಲ್ಲ.

ಅದಕ್ಕೆ ಅಲ್ಲವೇ ಸಾವು ಎನ್ನುವುದು.. ಅಲೆಮಾರಿ ಎಂದರೆ ಮೇಲೆ ಸಾವಿನ ಮನೆಯಾದರೇನು ಸೂತಕದ ಮನೆಯಾದರೇನು ಕೂತೆದ್ದು ಬರದಿದ್ದರೆ ಅದ್ಯಾಕಾದೇನು..?

 
Read E-Paper click here