ಭಾಸ್ಕರಾಯಣ
ಎಂ.ಕೆ.ಭಾಸ್ಕರ ರಾವ್
ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಸದನಗಳ ಮುಖ್ಯಸ್ಥರಾದವರು ಆಗೀಗ ಶಿಷ್ಟಾಚಾರವನ್ನು ಕಾಲಕಸದಂತೆ ಕಂಡ ನಿದರ್ಶನಗಳಿವೆ. ಉತ್ತರ ಭಾರತದ ಕೆಲವು
ರಾಜ್ಯಗಳಲ್ಲಿ ಇಂಥ ಉಲ್ಲಂಘನೆ ನಿತ್ಯರೂಢಿಯಾಗಿರುವುದೂ ದಿಟವೇ. ಶಿಷ್ಟಾಚಾರ, ಸದನದ ಮುಖ್ಯಸ್ಥರಿಗೆ ಮಾತ್ರವೇ ಅನ್ವಯವಾಗುವ ನಿಯಮವೇನಲ್ಲ.
೧ ಶಿಷ್ಟಾಚಾರ ಎನ್ನುವುದು ಸರಕಾರ ಇಲ್ಲವೇ ಸಂಸದೀಯ ವ್ಯವಸ್ಥೆಯ ಒಳಗೆ ಇರುವವರು ಕಡ್ಡಾಯವಾಗಿ ಪಾಲಿಸಲೇಬೇಕಾದ ಒಂದು ನಡವಳಿಕೆ. ಹಾಗಂತ ಇದು ಕಾಯ್ದೆಯೇ ನಲ್ಲ. ‘ಪ್ರೊಟೊಕಾಲ್’ ಎಂದು ಕರೆಯ ಲ್ಪಡುವ ಇದು ಸಂಸದೀಯ ವ್ಯವಸ್ಥೆ ಹುಟ್ಟುಹಾಕಿರುವ ಒಂದು ಸತ್ಸಂಪ್ರದಾಯ. ರಾಜ್ಯಮಟ್ಟದಲ್ಲಿ ಶಾಸನ
ಸಭೆ, ರಾಷ್ಟ್ರ ಮಟ್ಟದಲ್ಲಿ ಸಂಸತ್ತು. ಶಿಷ್ಟಾಚಾರ ಉಲ್ಲಂಘಿಸುವ ಅಧಿಕಾರಿಗಳನ್ನು ಕರೆದು ಎಚ್ಚರಿಸಿ ಕಿವಿ ಹಿಂಡುವ ಪರಮಾಽಕಾರ ಸಂಸದೀಯ ವ್ಯವಸ್ಥೆಯಲ್ಲಿದೆ. ಶಿಷ್ಟಾಚಾರ ಉಲ್ಲಂಘಿಸಿದ ಸಂದರ್ಭಗಳಲ್ಲಿ ಸಂಸತ್/ಶಾಸನ ಸಭೆಯ ಸದಸ್ಯರಾದವರು ಸಭಾಧ್ಯಕ್ಷ (ಸ್ಪೀಕರ್) ಇಲ್ಲವೇ ಸಭಾಪತಿಗೆ (ಚೇರ್ ಮನ್) ದೂರು ಸಲ್ಲಿಸುವುದು ವಾಡಿಕೆ.
ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎನ್ನುವುದು ಮನವರಿಕೆಯಾದಲ್ಲಿ ಅದಕ್ಕೆ ಕಾರಣರಾದವರನ್ನು ‘ದಂಡಿಸುವ’ ಅಧಿಕಾರ ಸದನಗಳ ಮುಖ್ಯಸ್ಥರಿಗೆ ಇರುತ್ತದೆ. ಅವರು ಅದನ್ನು ನಿಯಮಪ್ರಕಾರ ಮಾಡಬೇಕಾಗುತ್ತದೆ. ೨ ಈ ನೀತಿ ನಿಯಮ ಸ್ವತಃ ಸದನದ ಮುಖ್ಯಸ್ಥರಿಗೂ ಅನ್ವಯಿಸುತ್ತದೆ. ಮೊದಲನೆಯದಾಗಿ ವಿಧಾನಸಭೆ ಸ್ಪೀಕರ್ ಇಲ್ಲವೇ ವಿಧಾನ ಪರಿಷತ್‌ನ ಚೇರ‍್ಮನ್ ಆದವರು ಇಲ್ಲವೇ ಲೋಕಸಭೆ ಯಲ್ಲಿ ಸ್ಪೀಕರ್ ಆದವರು ಆ ಹುದ್ದೆಗೆ ಆಯ್ಕೆಯಾದ ಮರುಕ್ಷಣದಲ್ಲೇ ತಾವು ಆಯ್ಕೆಯಾಗಿ ಬಂದ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಡುವ ಉತ್ತಮ ಸಂಪ್ರದಾಯ ನಮ್ಮ ದೇಶದಲ್ಲಿದೆ. ರಾಜ್ಯ ಸಭೆಗೆ ಸ್ವತಃ ಉಪ ರಾಷ್ಟ್ರಪತಿಯೇ ಚೇರ‍್ಮನ್ ಆಗಿರುವುದರಿಂದ ಮತ್ತು ಅವರು ಉಪ ರಾಷ್ಟ್ರಪತಿಯಾಗುವುದರೊಂದಿಗೆ ಪಕ್ಷ ಸಂಬಂಧ ‘ಕಡಿದುಕೊಳ್ಳುವುದರಿಂದ’ ಹೊಸದಾಗಿ ರಾಜೀನಾಮೆ ಕೊಡುವ ಪ್ರಸಂಗ ಉದ್ಭವಿಸುವುದಿಲ್ಲ.
ಲೋಕಸಭೆ/ರಾಜ್ಯಸಭೆಯಲ್ಲಿ, ವಿಧಾನ ಸಭೆ/ಪರಿಷತ್‌ನಲ್ಲಿ ಉಪಾಧ್ಯಕ್ಷರಾಗುವವರು ಈ ನಿಯಮ ಪಾಲಿಸಬೇಕಿಲ್ಲ. ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿ ಅಧ್ಯಕ್ಷ ಇಲ್ಲವೇ ಸಭಾಪತಿಯಾಗುವವರು ತಮ್ಮ ಪೂರ್ವಾಶ್ರಮ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಈ ಶಿಷ್ಟಾಚಾರ ಬೇಲಿ ಹಾಕಿದೆ. ಇಂತಿಪ್ಪ ವ್ಯವಸ್ಥೆಯಲ್ಲಿ ವಿಧಾನಸಭೆ ಸ್ಪೀಕರ್ ಆದವರೇ ತಮ್ಮ ಪೂರ್ವಾಶ್ರಮದ ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ಅದನ್ನು ಏನೆಂದು ವರ್ಣಿಸಬೇಕು. ಜನಸಾಮಾನ್ಯರನ್ನು ಕೇಳಿದರೆ ‘ಬೇಲಿಯೇ ಎದ್ದು ಹೊಲಮೇಯ್ದಂತೆ’ ಎಂದು ಗಾದೆ ಮಾತಿನಲ್ಲಿ ವ್ಯಾಖ್ಯಾನಿಸಿಯಾರು. ೩ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಸದನಗಳ ಮುಖ್ಯಸ್ಥರಾದವರು ಆಗೀಗ ಶಿಷ್ಟಾಚಾರ ವನ್ನು ಕಾಲಕಸದಂತೆ ಕಂಡ ನಿದರ್ಶನಗಳಿವೆ.
ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಇಂಥ ಉಲ್ಲಂಘನೆ ನಿತ್ಯರೂಢಿ ಎಂಬಂತಾಗಿರುವುದೂ ದಿಟವೇ. ಶಿಷ್ಟಾಚಾರ, ಸದನದ ಮುಖ್ಯಸ್ಥರಿಗೆ ಮಾತ್ರವೇ ಅನ್ವಯವಾಗುವ ನಿಯಮವೇನಲ್ಲ. ಮುಖ್ಯಮಂತ್ರಿ ಮತ್ತು ಮಂತ್ರಿಗಳು ಕೂಡಾ ಇದನ್ನು ಪಾಲಿಸುವುದು ನಿಯಮ ಪ್ರಕಾರ ಕಡ್ಡಾಯ. ತಮ್ಮ ಅಧಿಕೃತ ಪ್ರವಾಸ ಕಾಲದಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ನಡೆಯುವ ಅಽಕೃತ ಕಾರ್ಯಕ್ರಮಗಳ ಮೊದಲ ಮಾಹಿತಿ ಸ್ಥಳೀಯ ಶಾಸಕರಿಗೆ ಹೋಗಬೇಕಾಗುತ್ತದೆ. ಆಮಂತ್ರಣ ಪತ್ರದಲ್ಲಿ ಅವರ ಹೆಸರು ಕಾರ್ಯ ಕ್ರಮದ ಅಧ್ಯಕ್ಷರಾಗಿ ಮುದ್ರಣವಾಗಬೇಕಾಗುತ್ತದೆ.
ಆಡಳಿತ ಪಕ್ಷದ ಸದಸ್ಯರಲ್ಲ ಎಂದು ಕುತ್ಸಿತ ಮನಸ್ಸು ತೋರಲು ಅಲ್ಲಿ ಎಡೆಯೇ ಇರುವುದಿಲ್ಲ. ಅಂಥ ಉಲ್ಲಂಘನೆ ಆದ ಸಂದರ್ಭದಲ್ಲಿ ಶಾಸಕರು, ಸ್ಪೀಕರ್
ಅಥವಾ ಚೇರ್ಮನ್‌ಗೆ ದೂರು ಸಲ್ಲಿಸುವುದು ವಾಡಿಕೆ. ನಿಯಮ ಪಾಲನೆಯಲ್ಲಿ ಆದ ಲೋಪಕ್ಕೆ ಸಿಎಂ ಇಲ್ಲವೇ ‘ಆರೋಪಿ’ ಸಚಿವರು ವಿಷಾದ ಸೂಚಿಸುವುದು ಸಾಮಾನ್ಯ. ಹೊಸದಾಗಿ ನಿಯಮ ಉಲ್ಲಂಘನೆ ಆಗುವವರೆಗೆ ಕಥೆ ಅಲ್ಪವಿರಾಮದಲ್ಲಿ ನಿಲ್ಲುತ್ತದೆ. ೪ ಹೀಗೆ ಸದಸ್ಯರ ಹಕ್ಕು ಬಾಧ್ಯತೆ ಕಾಪಾಡಿ ಆಯಾ ಕ್ಷೇತ್ರಗಳಲ್ಲಿ ಸ್ಥಳೀಯ ಪ್ರತಿನಿಧಿಗಳ ಗೌರವ ಮರ್ಯಾದೆ ಕಾಪಾಡುವ ಜವಾಬ್ದಾರಿಯುಳ್ಳ ಸ್ಪೀಕರ್ ಆದವರೇ ಸ್ವತಃ ಶಿಷ್ಟಾಚಾರ ಮುರಿದು ಬೇಲಿ ಹಾರುವ ಕೆಲಸಕ್ಕೆ ಮುಂದಾದರೆ? ಕರ್ನಾಟಕ ಶಾಸನ ಸಭೆಗೆ ದೇಶದಲ್ಲೇ ಮಾದರಿ ಯಾದುದೆಂಬ ಖ್ಯಾತಿ ಇದೆ.
ಮೈಸೂರು ಪ್ರಾಂತ್ಯ ಅಲ್ಲಿಂದ ಮೈಸೂರು ರಾಜ್ಯ ನಂತರದಲ್ಲಿ ಕರ್ನಾಟಕ ವನ್ನು ಕಂಡಿರುವ ಶಾಸನ ಸಭೆಯನ್ನು ಇಡೀ ದೇಶ ನೋಡುತ್ತಿರುವುದು ಅದು ನಡೆಸಿಕೊಂಡು ಬಂದಿರುವ ರೀತಿ-ರಿವಾಜುಗಳಿಗಾಗಿ. ಸಣ್ಣ ಪುಟ್ಟ ಲೋಪ ಎಲ್ಲೆಡೆ ಇರುವಂತೆ ನಮ್ಮಲ್ಲೂ ಇದೆ. ಇಷ್ಟಾಗಿಯೂ ನಮ್ಮ ಶಾಸನಸಭೆ ಉನ್ನತ ಸ್ಥಿತಿಯಲ್ಲೇ ಕಾರ್ಯನಿರ್ವಹಿಸುತ್ತಿದೆ. ಹೀಗೆ ಕಾರ್ಯ ನಿರ್ವಹಿಸುತ್ತಿರುವುದರ ಹಿಂದೆ ಸದನ ಮುಖ್ಯಸ್ಥರ ಪಾತ್ರ ದೊಡ್ಡದಿದೆ. ಈ ಹಿನ್ನೆಲೆಯಲ್ಲಿ ನೋಡಿದಾಗ
ವಿಧಾನಸಭೆಯ ಹಾಲಿ ಸ್ಪೀಕರ್ ಯು.ಟಿ. ಖಾದರ್ ಅವರು ಶಿಷ್ಟಾಚಾರದ ಮಹತ್ವ ಮರೆತವರಂತೆ ತಮ್ಮ ಪೂರ್ವಾಶ್ರಮದ ಕಾಂಗ್ರೆಸ್ ಪಾರ್ಟಿ ಏರ್ಪಡಿಸಿದ್ದ
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಹಲವರ ಹುಬ್ಬೇರಿಸಿರುವ ಬೆಳವಣಿಗೆ.
೫ ಜುಲೈ ೧೭-೧೮ರಂದು ಬೆಂಗಳೂರಿನಲ್ಲಿ ಐ.ಎನ್.ಡಿ.ಐ.ಎ (ಡಾಟೆಡ್ ಇಂಡಿಯಾ) ಸಭೆ ನಡೆಯಿತು. ಕಾಂಗ್ರೆಸ್ ಆಶ್ರಯದಲ್ಲಿನಡೆದ ಪಕ್ಕಾ ರಾಜಕೀಯ ಅಜೆಂಡಾದ ಈ ಸಭೆ ಯಲ್ಲಿ ಕಾಂಗ್ರೆಸ್‌ನ ೨೫-೨೬ ಮಿತ್ರಪಕ್ಷಗಳೂ ಭಾಗವಹಿಸಿದ್ದವು. ೧೭ರ ರಾತ್ರಿ ಸಮಾವೇಶ ನಡೆದ ಪಂಚತಾರಾ ಹೋಟೆಲಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಹ್ವಾನಿತ ಗಣ್ಯರಿಗೆ ಔತಣಕೂಟ ಏರ್ಪಡಿಸಿದ್ದರು. ಆಹ್ವಾನದ ಮೇರೆಗೆ ಹೋಗಬೇಕಾದವರು ಹೋದರು, ಇಂಥ ಸಂದರ್ಭಗಳಲ್ಲಿ
ಶಿಷ್ಟಾಚಾರ ಉಲ್ಲಂಘನೆಯಾಗುವ ಪ್ರಸಂಗ ಎದುರಾಗುತ್ತದೆ. ನಮ್ಮ ಸ್ಪೀಕರ್ ಯು.ಟಿ. ಖಾದರ್ ಸಾಹೇಬರು ಸ್ಪೀಕರ್ ಸ್ಥಾನಕ್ಕೆ ಶಿಷ್ಟಾಚಾರ ವಿಧಿಸುವ
ಮಾಡು/ಮಾಡಬೇಡ (ಡೂಸ್ ಅಂಡ್ ಡೋಂಟ್ಸ್) ನಿಯಮ ಮರೆತವರಂತೆ ಔತಣ ಕೂಟದಲ್ಲಿ ಪಾಲ್ಗೊಂಡು ಶಿಷ್ಟಾಚಾರವನ್ನು ಅಣಕದ ಹಂತಕ್ಕೆ ಒಯ್ದರೆಂಬ ಮಾತು ವಿಧಾನ ಮಂಡಲದ ಮೊಗಸಾಲೆಯಲ್ಲಿ ಚರ್ಚೆಯಾಗುತ್ತಿದೆ.
ಸಭಾಧ್ಯಕ್ಷರಿಂದಾಗಿರುವ ಶಿಷ್ಟಾಚಾರ ಉಲ್ಲಂಘನೆಯನ್ನು ವಿಧಾನಸಭೆ ಅಧಿವೇಶನ ಸಮಯದಲ್ಲಿ ಪ್ರಸ್ತಾಪಿಸಿದ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರರ ಮಾತಿಗೆ ಪ್ರತಿಕ್ರಿಯಿಸಿದ ಸ್ಪೀಕರ್ ಖಾದರ್, ‘ಅವರು ಊಟಕ್ಕೆ ಕರೆದರು ಹೋಗಿದ್ದೆ, ನೀವು ಕರೆದರೂ ಬರುತ್ತೇನೆ’ ಎಂದು ಸಾರಿಸುವ ನಿಲುವು ತೆಗೆದುಕೊಂಡರು. ಸ್ಪೀಕರ್
ಆದವರೇ ಶಿಷ್ಟಾಚಾರ ಉಲ್ಲಂಸಿದರೆ ಶಾಸಕರಿಗೆ ಭಷ್ಯದಲ್ಲಿ ಆಗಬಹುದಾದ ಅನ್ಯಾಯಕ್ಕೆ ಸೂಕ್ತ ಪರಿಹಾರ ಸಿಗುತ್ತದೆಂಬುದಕ್ಕೆ ಇರುವ ಭರವಸೆ ಯಾದರೂ ಏನು? ಇದು ಯಾರೂ ಯೋಚಿಸಬೇಕಾದ ಸಂಗತಿ. ಖಾದರ್ ಈ ವಿಚಾರವನ್ನು ಹಗುರವಾಗಿ ತೆಗೆದುಕೊಂಡಿದ್ದಾರೆ ಎನ್ನುವುದು ಅವರ ಉತ್ತರದಲ್ಲೇ ಸ್ಪಷ್ಟ.
೬ ಎರಡು ಬಾರಿ ಸ್ಪೀಕರ್ ಆಗಿರುವ ಶ್ರೀನಿವಾಸಪುರ ಕ್ಷೇತ್ರದ ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಅವರ ಸಲಹೆ ಸೂಚನೆಯನ್ನು ಖಾದರ್ ಪಡೆಯಬೇಕಿತ್ತೆನಿ ಸುತ್ತದೆ. ಇಲ್ಲಿ ಪ್ರಸ್ತಾಪಿಸಿರುವುದು ೧೯೯೪ರ ಘಟನೆ. ಜನತಾದಳ ಅಽಕಾರಕ್ಕೆ ಬಂದು ಎಚ್.ಡಿ. ದೇವೇಗೌಡರು ಮುಖ್ಯಮಂತ್ರಿಯಾದರು. ಆಗ ಸ್ಪೀಕರ್ ಆದವರು ರಮೇಶ್ ಕುಮಾರ್. ಗೌಡರು ಪ್ರಧಾನಿಯಾಗಿ ದೆಹಲಿಗೆ ಹೋದಾಗ ಜೆ.ಎಚ್. ಪಟೇಲರು ಮುಖ್ಯಮಂತ್ರಿಯಾದರು. ರಮೇಶ್ ಕುಮಾರ್ ಸ್ಪೀಕರ್ ಹುದ್ದೆಯಲ್ಲಿ ಮುಂದುವರಿದರು.
ಶಾಸನಸಭೆ ಅಽವೇಶನ ಸೇರುವುದಕ್ಕೆ ಮೊದಲು ಶಿಷ್ಟಾಚಾರದಂತೆ ಮುಖ್ಯಮಂತ್ರಿ, ಸೌಜನ್ಯದ ಭೇಟಿಗೆಂದು ಸ್ಪೀಕರ್ ಭೇಟಿಗೆ ಅವರ ಅಧಿಕೃತ ನಿವಾಸಕ್ಕೆ ತೆರಳಿದರು. ಮಾತುಕತೆ ಮುಗಿದ ಬಳಿಕ ಪಟೇಲರು ತಮ್ಮ ಕಾರನ್ನೇರಲು ಪೋರ್ಟಿಕೋಗೆ ಬಂದರು. ಅವರನ್ನು ಹಿಂಬಾಲಿಸಿ ಬಂದ ಸ್ಪೀಕರ್ ಅವರು ‘ಪಟೇಲರೇ ನೀವು ಮತ್ತೆ ಇಲ್ಲಿಗೆ ಬಂದಾಗ ನಿಮ್ಮನ್ನು ಬರಮಾಡಿಕೊಳ್ಳಲು ಇಲ್ಲವೇ ಬೀಳ್ಕೊಡಲು ನಾನು ಬರುವುದಿಲ್ಲ, ನೀವು ಅನ್ಯಥಾ ಭಾವಿಸ ಬಾರದು’ ಎಂದವರು ಅದಕ್ಕೆ ಶಿಷ್ಟಾಚಾರ ನಿಯಮ ಹಾಕಿರುವ ನಿರ್ಬಂಧ ವಿವರಿಸಿದರು. ಪಟೇಲರಿಗೆ ಇದು ಗೊತ್ತಿಲ್ಲದ್ದೇನೂ ಆಗಿರಲಿಲ್ಲ, ನಕ್ಕು ಕೈಕುಲುಕಿ ನಿರ್ಗಮಿಸಿದರು.
೭ಪಿ.ವಿ. ನರಸಿಂಹ ರಾವ್ ಪ್ರಧಾನಿಯಾಗಿದ್ದ ಸಮಯ. ಆಗ ಶಿವರಾಜ ಪಾಟೀಲರು ಲೋಕಸಭೆ ಸ್ಪೀಕರ್. ಪ್ರಧಾನಿ ನಿವಾಸದಲ್ಲಿ ನಡೆದ ಔತಣ ಕೂಟದಲ್ಲಿ ಪಾಲ್ಗೊಂಡ ಶಿವರಾಜ ಪಾಟೀಲರು, ಇದೀಗ ನಮ್ಮ ಸ್ಪೀಕರ್ ಸಮರ್ಥಿಸಿ ಕೊಂಡ ರೀತಿಯಲ್ಲೇ ತಮ್ಮ ಭಾಗವಹಿಸುವಿಕೆಯನ್ನು ಸಮರ್ಥಿಸಿಕೊಂಡಿದ್ದರು. ‘ಪ್ರಧಾನಿಯವರ ಮನೆ ಯಲ್ಲಿ ನಡೆದುದು ರಾಜಕೀಯ ಸಭೆ ಆಗಿರಲಿಲ್ಲ’ ಎಂದು ಹೇಳಿಕೊಂಡಿದ್ದರು. ಅಂದಿನ ಸಭೆಗೆ ಆಮಂತ್ರಿತರಾಗಿದ್ದವರು ಮತ್ತು ಭಾಗವಹಿ ಸಿದ್ದವರು ಆಡಳಿತ ಪಕ್ಷ ಮತ್ತು ಮಿತ್ರಪಕ್ಷಗಳ ಮುಖಂಡರೇ ಆಗಿದ್ದರು! ಶಿವರಾಜ ಪಾಟೀಲರು ಹೇಳಿದಂತೆ ರಾಜಕೀಯೇತರ ಉದ್ದೇಶದ ಸಭೆ ಅದಾಗಿರಲಿಲ್ಲ.
ನಮ್ಮ ಸ್ಪೀಕರ್ ಖಾದರ್ ಅವರು, ರಮೇಶ್ ಕುಮಾರ್ ಮಾದರಿ ಬದಿಗೆ ತಳ್ಳಿ, ಶಿವರಾಜ ಪಾಟೀಲ್ ಮಾದರಿ ಆಯ್ಕೆ ಮಾಡಿಕೊಂಡರು. ೮ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದ ಭಾಗ ವಾಗಿ ಏರ್ಪಾಡಾಗಿದ್ದ ಸಿದ್ದರಾಮಯ್ಯ ನವರ ಔತಣ ಕೂಟಕ್ಕೆ ಆಮಂತ್ರಣ ಬಂದಾಗ ಖಾದರ್ ಅವರು ಸೌಜನ್ಯದಿಂದಲೇ ಅದನ್ನು ನಿರಾಕರಿಸಿ ದೂರವೇ ಉಳಿದಿದ್ದರೆ ಅವರ ಗೌರವವೂ ಅವರು ಅಲಂಕರಿಸಿರುವ ಸ್ಥಾನದ ಮಹತ್ವವೂ ಹೆಚ್ಚುತ್ತಿತ್ತು. ಅವರೇನೂ ಎಳಸು ರಾಜಕಾರಣಿಯಲ್ಲ, ನಾಲ್ಕನೇ ಬಾರಿಗೆ ಆಯ್ಕೆ ಆಗಿರುವ ವರು. ಈ ಹಿಂದಿನ ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕರಾಗಿ, ಅದಕ್ಕೂ ಪೂರ್ವದಲ್ಲಿ ಸಂಪುಟ ದರ್ಜೆ ಸಚಿವರಾಗಿ ಕೆಲಸ ನಿರ್ವಹಿಸಿದ ಅವರು ಪಕ್ಕಾ ಅನುಭವಸ್ಥ ರಾಜಕಾರಣಿ.
ಸ್ಪೀಕರ್ ಇಲ್ಲವೇ ಚೇರ್ಮನ್ ಹುದ್ದೆಗೆ ಬರುವವರಿಗೆ ಶಿಷ್ಟಾಚಾರದ ಟಿಪ್ಪಣಿಯನ್ನು ಅಧಿಕಾರಿಗಳು ಒದಗಿಸಿ ಬಯಸಿದರೆ ಮಾರ್ಗದರ್ಶನವನ್ನೂ ಮಾಡುತ್ತಾರೆ.
ಕೆಲವರು ಟಿಪ್ಪಣಿ ಯನ್ನು ಗಂಭೀರವಾಗಿ ಓದಿ ಅರ್ಥ ಮಾಡಿಕೊಂಡು ಅದರಂತೆ ನಡೆಯುತ್ತಾರೆ. ಕೆಲವರು ನಿರ್ಲಕ್ಷಿಸು ತ್ತಾರೆ. ಮತ್ತೆ ಕೆಲವರು ಓದುವುದೇ ಇಲ್ಲ! ಖಾದರ್ ಅವರು ಶಿಷ್ಟಾಚಾರದ ವಿಚಾರದಲ್ಲಿ ದಿವ್ಯನಿರ್ಲಕ್ಷ್ಯ ಮೆರೆದರೆ? ‘ಅವರು ಊಟಕ್ಕೆ ಕರೆದರು ಹೋಗಿದ್ದೆ, ನೀವು ಕರೆದರೂ ಬರುತ್ತೇನೆ’ ಎಂದು ಸದನದ ಒಳಗೇ ಮಾಡಿರುವ ಅವರ ಹೇಳಿಕೆಯಂಥ ಸಾಂದರ್ಭಿಕ ಸಾಕ್ಷ್ಯಗಳು ಈ ಪ್ರಶ್ನೆಯನ್ನು ಪುಷ್ಟೀಕರಿಸುತ್ತವೆ.
೯ ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ಮಿತ್ರ ಪಕ್ಷಗಳ ಒಕ್ಕೂಟಕ್ಕೆ ಆಮಂತ್ರಿತರಾದ ರಾಜಕಾರಣಿಗಳನ್ನು ಬರಮಾಡಿಕೊಳ್ಳುವ ಕೆಲಸಕ್ಕೆ ರಾಜ್ಯದ ಮೂವತ್ತು ಐಎಎಸ್ ಅಧಿಕಾರಿಗಳನ್ನು ಹಚ್ಚಿ ಶಿಷ್ಟಾಚಾರ ಉಲ್ಲಂಘಿಸಿದ ಆರೋಪ ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್ ಸರಕಾರದ ಮೇಲಿದೆ. ಹಿರಿಯ ಅಧಿಕಾರಿಗಳನ್ನು ಚಪ್ರಾಸಿಗಳಂತೆ ನಡೆಸಿಕೊಳ್ಳಲಾಯಿತೆಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿ ಕಾರಿದ್ದಾರೆ. ಸಿಎಂ ಮತ್ತು ಡಿಸಿಎಂ ತಮ್ಮ ನಡವಳಿಕೆಯನ್ನು ಸಮರ್ಥಿಸಿಕೊಂಡಿರುವುದನ್ನು ಗಮನಿಸಿದರೆ ಖಾದರ್ ಉಲ್ಲಂಘಿಸಿರುವ ಶಿಷ್ಟಾಚಾರ ನಿಯಮ ಏನೇನೂ ಅಲ್ಲವೇನೋ ಎಂದು ಭಾವಿಸುವಂತೆ ಮಾಡಿದೆ. ಶಿಷ್ಟಾಚಾರ ನಿಯಮ ಜಾರಿಗೆ ಬಂದುದು ಕರ್ನಾಟಕ ಶಾಸನ ಸಭೆಯ ಉಭಯ ಸದನಗಳು ರೂಪಿಸಿರುವ ನೀತಿಯ ಭಾಗವಾಗಿ. ಶಿಷ್ಟಾಚಾರ ನಿಯಮ
ರೂಪಿಸಿದ ಹಂತದಲ್ಲಿ ಶಾಸಕರಾಗಿದ್ದವರಲ್ಲಿ ಎಷ್ಟು ಜನ ನಮ್ಮ ನಡುವೆ ಭೌತಿಕವಾಗಿ ಇದ್ದಾರೋ ಇಲ್ಲವೋ ಗೊತ್ತಿಲ್ಲ. ಹೊಸದಾಗಿ ಬರುವವರು ನಿಯಮಗಳನ್ನು ಚಾಚೂ ತಪ್ಪದಂತೆ ಪಾಲಿಸುತ್ತಾರೆಂಬ ಆ ಪೂರ್ವಸೂರಿಗಳ ಕನಸು ಮೂರಾ ಬಟ್ಟೆಯಾಗಿರುವುದು ಕರ್ನಾಟಕದ ಸದ್ಯದ ಸ್ಥಿತಿ.