ಪ್ರಸ್ತುತ
ಎಸ್.ಜಿ.ಹೆಗಡೆ
ಲಂಕಾ ಆರ್ಥಿಕವಾಗಿ ದಿವಾಳಿಯಾಗಿದ್ದು ಮತ್ತು ನಮ್ಮ ನೆರೆಯ ದೇಶಗಳು ಸಮಸ್ಯೆಯ ಸುಳಿಯಲ್ಲಿರುವುದು ನಮಗೇನೂ ಒಳ್ಳೆಯ ಮಾತಲ್ಲ. ರಷ್ಯಾ ಯುಕ್ರೇನ್ ಯುದ್ಧದ ಅಂತ್ಯವಿನ್ನೂ ಗೋಚರಿಸುತ್ತಿಲ್ಲ. ಕೋವಿಡ್ ಬಾಧೆಯು ಹಲವು ತಳಿಯ ರೂಪ ಧರಿಸಿ ಇನ್ನೂ ಬಾಧಿಸುತ್ತಿದೆ. ಇವೆಲ್ಲ ಸಂದಿಗ್ಧದಲ್ಲಿ ನಮ್ಮ ದೇಶ ಈಜಾಡಬೇಕಿದೆ.
ದೇಶವೊಂದು ಆರ್ಥಿಕವಾಗಿ ದಿವಾಳಿ ಯಾದಾಗ ಏನೆಲ್ಲ ಘಟನೆಗಳು ನಡೆಯಬಹುದೋ ಅವೆಲ್ಲವೂ ಶ್ರೀಲಂಕಾದಲ್ಲಿ ನಡೆದಿದೆ. ಜನರ ಸಹನೆಯ ಕಟ್ಟೆ ಒಡೆದಿದೆ. ಆಕ್ರೋ ಶ ತಾರಕಕ್ಕೇ ರಿದೆ. ಸಹಸ್ರಾರು ಸಂಖ್ಯೆ ಯಲ್ಲಿ ದಂಗೆ ಎದ್ದಜನರು ರಾಷ್ಟ್ರದ ಅಧ್ಯಕ್ಷ ಗೊಟ ಬಯ ರಾಜಪಕ್ಷ ನಿವಾಸಕ್ಕೆ ಮುತ್ತಿಗೆ ಹಾಕಿದರು.
ಅಧ್ಯಕ್ಷರ ಮನೆಯೊಳಗೆ ನುಗ್ಗಿ ದಾಂಧಲೆ ನಡೆಯಿತು. ಅಧ್ಯಕ್ಷರು ಆಗಲೇ ಅಲ್ಲಿಂದ ಪರಾರಿಯಾಗಿ ಸಾಮಾನು ಸಹಿತ ಎಲ್ಲಾ ಹೊರಟು ಹೋಗಿದ್ದರಿಂದ ಹಯಿಂದ ಬಚಾವ್ ಆದರು. ನಡುವೆ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ರಾಜೀನಾಮೆ ನೀಡಿ ಸರಕಾರ ಕುಸಿದು ಬಿತ್ತು. ದೇಶ ಅರಾಜಕತೆಯಲ್ಲಿ ಕುಸಿಯಿತು. ಈ ಸಂಗತಿಗಳಿಗೆ ಕಾರಣ ವಾದ ಆರ್ಥಿಕ ಮುಗ್ಗಟ್ಟಿನಿಂದ ದೇಶವು ಕೆಲವು ತಿಂಗಳುಗಳಿಂದ ಸೊರಗಿ ಹೋಗಿತ್ತು. ಹತ್ತರಲ್ಲಿ ಮೂರು ಕುಟುಂಬಗಳಿಗೆ ಆರ್ಥಿಕ ಅಭದ್ರತೆ ಕಾಡಿದರೆ ಐದರಲ್ಲಿ ಮೂರು ಮನೆಗಳು ಸರಿಯಾದ ಊಟ ಸಿಗದ ಸ್ಥಿತಿ ತಲುಪಿತ್ತು.
ಲಕ್ಷ ಮನೆಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಕಾಡಿತು. ಪೆಟ್ರೋಲ್ ಮತ್ತು ಡೀಸೆಲ್ ದರವು ಲೀಟರಿಗೆ ಐದುನೂರು ರು. ದಾಟಿತ್ತು. ಹಣದುಬ್ಬರವು ಪ್ರತಿ ಶತ ಐವತ್ತಕ್ಕೂ ಹೆಚ್ಚಾಗಿ ಆಹಾರದ ಬೆಲೆ ಗಗನಕ್ಕೇರಿತ್ತು. ಇಂತಹ ದುರ್ಬರ ಸಂದರ್ಭದಲ್ಲಿ ಜನರು ದಂಗೆ ಎದ್ದು ಸರಕಾರದ ವಿರುದ್ಧ ಸೆಟೆದು ನಿಲ್ಲದೆ ಬೇರೆ ದಾರಿ ಏನಿದೆ? ವಿಪರೀತ ಆರ್ಥಿಕ ತೊಂದರೆಯಿಂದ ಸೊರಗಿದ ಸಮಾಜಕ್ಕೆ ಭವಿಷ್ಯದ ಬೆಳಕು ಕಾಣ ಸಿಗುವುದಿಲ್ಲ.
ದೇಶವೇ ದಿವಾಳಿಯಾದ ಸನ್ನಿವೇ ಶದಲ್ಲಿ ಸಮಾಜದ ಯಾವ ಪ್ರತಿಕ್ರಿಯೆಯೂ ಉತ್ಪ್ರೇಕ್ಷೆ ಅನ್ನಿಸುವುದಿಲ್ಲ. ನೆರೆಯ ದ್ವೀಪ ರಾಷ್ಟ್ರವು ಸಾಲಗೇಡಿಯಾದ ಕಾರಣಗಳನ್ನು ಸಂಕ್ಷಿಪ್ತದಲ್ಲಿ ನೋಡೋಣ. ಶ್ರೀಲಂಕಾದ ಮುಖ್ಯ ಉತ್ಪನ್ನವು ಪ್ರವಾಸಿಗರ
ಆದಾಯದ ಮೇಲೆ ಅವಲಂಬಿಸಿದೆ. 4.4 ಬಿಲಿಯನ್ ಡಾಲರ್ (35000 ರುಪಾಯಿಯಷ್ಟು) ಆದಾಯವು ಪ್ರವಾಸೋದ್ಯಮದಿಂದ ಬರುತ್ತಿದ್ದುದು ಕರೋನಾ ಪೀಡೆಯ ಕಾಲದಲ್ಲಿ ಬತ್ತಿ ಹೋಯಿತು.
ದೇಶದ ಶೇ.5.4 ದೇಶೀಯ ಉತ್ಪನ್ನ ದರ ಕುಸಿದು 0.8ಕ್ಕೆ ಮುಟ್ಟಿತು. ಪ್ರವಾಸೋದ್ಯಮದಲ್ಲಿ ತೊಡಗಿದ್ದ ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಜನರಿಗೆ ಕೆಲಸ ಇಲ್ಲವಾಯಿತು. ಕೋವಿಡ್ ಬಾಧೆ ಹಿಡಿತಕ್ಕೆ ಬಂದಾಗ ಆಗಲೇ ಸಮಸ್ಯೆ ಗಂಭೀರವಾಗಿ ರಾಜಕೀಯ ವಿಪ್ಲವ ಶುರುವಾದ್ದರಿಂದ ಪ್ರವಾಸಿಗರ ಆಗಮನ ನಂತರ ಶುರುವಾಗಲೇ ಇಲ್ಲ. ಇದು ಮುಖ್ಯ ಕಾರಣವಾಗಿರುವಾಗ ಇನ್ನೂ ಅನೇಕ ಹಣಕಾಸು ಅಸಮರ್ಥ ನಿರ್ವಹಣೆ ಮತ್ತು ಅವ್ಯವಹಾರದ ಕಾರಣಗಳೂ ಇದ್ದೇ ಇವೆ. ರಸಗೊಬ್ಬರ ಆಯಾತದ ನಿಷೇಧ ದಿಂದ ದೇಶದ ಮುಖ್ಯ ಕೃಷಿ ಉತ್ಪನ್ನಗಳಾದ ಚಹಾ, ಕರಿಮೆಣಸಿನ ಮೇಲೆ ಭಾರಿ ಹೊಡೆತ ಬಿತ್ತು.
ಎಕರೆಗೆ ಮೂವತ್ತು ಚೀಲ ಅಕ್ಕಿಯ ಬೆಳೆ ಕಡಿಮೆಯಾಗಿ 2.5 ಚೀಲಕ್ಕೆ ಇಳಿಯಿತು. ಅಕ್ಕಿ ಮತ್ತಿತರ ಧವಸ-ಧಾನ್ಯಗಳನ್ನು
ಆಮದು ಮಾಡಿಕೊಳ್ಳುವ ಸ್ಥಿತಿಯಿಂದ ಭಾರೀ ಬೆಲೆ ಏರಿಕೆಯಾಗಿ ಆಹಾರದ ಸಮಸ್ಯೆಯ ಹಾಹಾಕಾರ ಎದ್ದಿತು. ಸಾಲದ ಪ್ರಮಾಣವು ನಾಲ್ಕು ಲಕ್ಷ ಕೋಟಿಗೂ ಮೀರಿದ್ದು, ವಿದೇಶಿ ಮೀಸಲು ಶೇ.70ರಷ್ಟು ಕರಗಿ ಹೋಗಿದ್ದು, ಇಂಧನ ಆಯಾತಕ್ಕೆ ಬೇ ಕಾದ ಹಣ ವಿಲ್ಲದೆ ಇಂಧನದ ಬೆಲೆ ಮುಗಿಲು ಮುಟ್ಟಿದ್ದು, ಡಾಲರ್ ಎದುರು ಲಂಕಾ ಹಣ ಶೇ.80ರಷ್ಟು ಪತನವಾಗಿ ಹೋಗಿದ್ದು, ಅವೆಲ್ಲ ಆರ್ಥಿಕ ಅದಃಪತನದ ಮುಖ್ಯ ಕಾರಣಗಳಾಗಿವೆ.
ಜತೆಗೆ ಆರ್ಥಿಕ ನೆರವಿನ ನೆಪದಲ್ಲಿ ಲಂಕಾದ ದೊಡ್ಡ ಬಂದರು ಹಂಬಂತೋಟವನ್ನು ಚೀನಾ ಗಿರುವಿಟ್ಟುಕೊಂಡು ಇಂತಹ
ಸಂಕಷ್ಟದಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಸಾಲ ಮನ್ನಾ ಮಾಡುತ್ತಿಲ್ಲ ಎನ್ನಲಾಗಿದೆ. ಅವೆಲ್ಲವುಗಳ ಜತೆ ಹಣ ನಿರ್ವಹಣೆ ಯಲ್ಲಿನ ಮೇಲ್ಮಟ್ಟದ ಅವ್ಯವಹಾರಗಳೂ ದುರ್ದೈವಕ್ಕೆ ಕಾರಣವಾಗಿದೆ. ಲಂಕಾ ದಿವಾಳಿಯಾದ ಬಗೆಯನ್ನು ಸೂಕ್ಷ್ಮವಾಗಿ ನೋಡಿ ದಾಗ ಒಂದು ದೇಶ ಅಥವಾ ಪ್ರಾಂತವು ಹೇಗೆ ಇಂತಹ ಹೊಂಡದಲ್ಲಿ ಬೀಳಬಹುದೆಂದು ತಿಳಿಯುತ್ತದೆ.
ಇದನ್ನು ಅರ್ಥ ಮಾಡಿಕೊಳ್ಳಲು ಅಸಾಮಾನ್ಯ eನವೇನೂ ಬೇಕಿಲ್ಲ. ಜನಸಾಮಾನ್ಯನಿಗೂ ಬದುಕಿನ ಆರ್ಥಿಕ ನಿರ್ವಹಣೆಯ
ಸಾಮಾನ್ಯ ಜ್ಞಾನ ಇದ್ದೇ ಇದೆ. ಇಲ್ಲಿ ಮುಖ್ಯವಾದ ವಿಷಯವೆಂದರೆ ಆದಾಯಕ್ಕಿಂತ ಖರ್ಚಿನ ಮಟ್ಟದಲ್ಲಿ ಏರಿಕೆ, ಆದಾಯ ಬತ್ತಿ ಹೋಗಬಹುದಾದ ವಿಚಾರಗಳಲ್ಲಿ ಪೂರ್ವಗಾಮಿಯಾದ ತಯಾರಿ ಇಲ್ಲದಿರುವುದು, ಗೊತ್ತು ಗುರಿಯಿಲ್ಲದ ದುರ್ವೆಚ್ಚ ಮಾಡು ವಿಕೆ, ಕೆಟ್ಟ ಸಮಯವನ್ನು ಸಮರ್ಥವಾಗಿ ನಿರ್ವಹಿಸುವಷ್ಟು ಹಣವನ್ನು ಉಳಿಸಿಟ್ಟುಕೊಳ್ಳದಿರುವುದು, ಸಾಲದಿಂದ ಬಂದ ಹಣವನ್ನು ರಚನಾತ್ಮಕ ಮತ್ತು ಪ್ರಗತಿಪರ ಕೆಲಸದಲ್ಲಿ ತೊಡಗಿಸದಿರುವುದು, ಅನವಶ್ಯಕ ಸಾಲದ ಶೂಲದಲ್ಲಿ ಸಿಕ್ಕಿ ಬೀಳುವುದು ಅವೆಲ್ಲ ಸಾಮಾನ್ಯ ಮೂಲ ವಿಚಾರಗಳು.
ಈ ವಿಚಾರಗಳನ್ನೇ ಒಂದು ಪ್ರಾಂತದ ಅಥವಾ ರಾಷ್ಟ್ರ ಮಟ್ಟಕ್ಕೆ ಹಿಗ್ಗಿಸಿ ನೋಡಿದಾಗ ನಿರ್ವಹಣೆಯ ಮಟ್ಟವು ಬೃಹದಾಕಾರ ಪಡೆಯುತ್ತದೆ. ಅಂತಹ ಬೃಹದಾಕಾರದ ಆರ್ಥಿಕ ನಿರ್ವಹಣೆಗೆ ಅಸಾಮಾನ್ಯ ಆರ್ಥಿಕ ಜ್ಞಾನ ಬೇಕೇ ಬೇಕು. ಜತೆಗೆ ಕಟ್ಟು ನಿಟ್ಟಿನ
ಉಸ್ತುವಾರಿ ಬೇಕು. ದೂರಗಾಮಿ ಯೋಜನೆಗಳನ್ನು ಹೆಣೆಯುವ ತಂತ್ರಗಾರಿಕೆ ಅವಶ್ಯ. ಹಣ ಪಡೆಯುವಿಕೆ ಮತ್ತು ಹೂಡುವಿಕೆ ಯಲ್ಲಿ ನೈಪುಣ್ಯ ಅಗತ್ಯ.
ಯಾವ ವಿಚಾರಗಳಿಂದ ಕೆಟ್ಟ ಪರಿಸ್ಥಿತಿ ಬರಬಹುದೆಂಬುದರ ಬಗ್ಗೆ ಪೂರ್ವಗಾಮೀ ಕಲ್ಪನೆಗಳು ಮತ್ತು ಅವನ್ನು ಮೆಟ್ಟಿ ನಿಲ್ಲುವ ಶಕ್ತಿಯ ಸ್ಪಷ್ಟತೆಯಿರಬೇಕು. ಬೃಹದಾಕಾರದ ವ್ಯವಸ್ಥೆಯ ಹಣ ಸಂತುಲನವನ್ನು ನಿರ್ವಹಿಸುವುದು ಒಂದು ಕ್ಲಿಷ್ಟ ವಿಚಾರ ವಾದರೂ ಅಲ್ಪ ಸಮಯದಲ್ಲಿ ವ್ಯವಸ್ಥೆಯೇ ಕುಸಿದು ಹೋಗುವುದು ಒಂದು ಗಂಭೀರ ಸಂಗತಿ. ಗಂಭೀರ ಮಟ್ಟದಲ್ಲಿ ಆರ್ಥಿಕತೆ ಕುಸಿಯುವಾಗ ಹಂತ ಹಂತದ ವೈಫಲ್ಯವಿದ್ದೇ ಇರುತ್ತದೆ.
ಅಂತ ವೈಫಲ್ಯವನ್ನು ಸರಿಯಾದ ಸಮಯದಲ್ಲಿ ನಿರ್ವಹಣೆ ಮಾಡದಿದ್ದ ದೋಷಕ್ಕೆ ಸೂತ್ರದಾರರಲ್ಲದೆ ಹೊಣೆ ಯಾರು ?
ಆರ್ಥಿಕ ವ್ಯಾಧಿಯಿಂದ ಲಂಕಾ ಹಸೆ ಹಿಡಿದಿದೆ. ಪೀಡೆಯು ಜಗತ್ತಿನ ಇತರ ಅನೇಕ ಭಾಗಗಳಿಗೆ ಪಸರಿಸಿದೆ. ನಮ್ಮ ನೆರೆಯ ರಾಷ್ಟ್ರ ಗಳಾದ ಪಾಕಿಸ್ತಾನ್, ನೇಪಾಳ, ಅಫ್ಘಾನಿಸ್ತಾನ್ ಅಲ್ಲದೆ ವೆನೆಜುವೆಲಾ, ಸುಡಾನ್, ರಷ್ಯಾ, ಮಧ್ಯ ಪೂರ್ವ ದೇಶಗಳಾದ ಸಿರಿಯಾ, ಯೆಮನ್, ಇರಾಕ್, ಲಿಬಿಯಾ ಮುಂತಾದ ದೇಶಗಳಲ್ಲಿ ಪಸರಿಸಿದೆ. ಮಾನವ ಹಕ್ಕು ಕಾವಲು ವರದಿಯೊಂದರ ಪ್ರಕಾರ ಇದೇ ವರ್ಷ ದಲ್ಲಿ ೫೫ ಪ್ರತಿಶತ ಅಫ್ಗಾನ್ ಜನತೆಯು ಆಹಾರದ ಅಭದ್ರತೆ ಎದುರಿಸುವ ಸಾಧ್ಯತೆಯಿದೆ.
ವೆನೆಜುವೆಲಾದಲ್ಲಿ ವಿದ್ಯುತ್ ಮತ್ತು ಇಂಧನ, ಸ್ವಚ್ಛ ನೀರಿನ ಕೊರತೆ ಭುಗಿಲೆದ್ದಿದೆ. ರಷ್ಯಾ ಮತ್ತು ಯುಕ್ರೇನ್ ಯುದ್ಧದಿಂದ ಇವೆರಡೇ ದೇಶಗಳೇ ಅಲ್ಲದೆ ಇಂಧನ, ಧಾನ್ಯ, ಪೊಟಾಷ್ ಅವಲಂಬಿತ ದೇಶಗಳ ಹಣಕಾಸು ವ್ಯವಸ್ಥೆ ಸೊರಗಿದೆ. ನಮ್ಮ ನೆರೆಯ
ಬಹುತೇಕ ರಾಷ್ಟ್ರಗಳು ಸಾಲದ ಹೊರೆ ಹೊತ್ತು ನಿಂತಿವೆ. ಇನ್ನೂ ಸಾಲ ಪಡೆಯಲು ಪರದಾಡುತ್ತಿವೆ.
ಅಮೆರಿಕದ ಅರ್ಥ ವ್ಯವಸ್ಥೆ ಕೂಡ ಈ ವರ್ಷ ನಿಧಾನ ಗತಿಯಲ್ಲಿ ಸ್ವಲ್ಪ ಕಾಲ ಸಾಗಿ ನಂತರ ಚೇತರಿಸಿಕೊಳ್ಳುವುದಾಗಿ ಇಂಟರ್ ನ್ಯಾಷನಲ್ ಮಾನಿಟರಿ ಫಂಡ್ ನೀಡುವ ಸಂಸ್ಥೆಯ ಹೇಳಿಕೆಯಿದೆ. ನಮ್ಮ ನೆರೆಯ ಮತ್ತು ಜಾಗತಿಕ ಆರ್ಥಿಕ ಮುಗ್ಗಟ್ಟಿನ ನಡುವೆ ನಾವೆತ್ತ ಸಾಗಿದ್ದೇವೆ ಎಂಬುದನ್ನು ಗಮನಿಸಬೇಕು. ಆರ್ಥಿಕ ಅಂಕಿ ಸಂಖ್ಯೆಗಳ ಪ್ರಕಾರ ಪ್ರಖರ ಕೋವಿಡ್ ಬಾಧೆಯಿಂದ ಹೊರ ಬಂದ ನಂತರ ನಮ್ಮ ವ್ಯವಸ್ಥೆಯು ಮೊದಲಿನ ಆರ್ಥಿಕ ಮಟ್ಟವನ್ನು ತಲುಪಿದ್ದಲ್ಲದೇ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಂಡಿದೆ ಎಂದು ತಿಳಿದಿದೆ.
ಇಂಟರ್‌ನ್ಯಾಷನಲ್ ಎಕನಾಮಿಕ್ ರೆಸಿಲಿಯೆನ್ಸ್(ಐಉ)ವರದಿಯಂತೆ ಕೋವಿಡ್ ಉತ್ತರದಲ್ಲಿ ಭಾರತದ ಸ್ಥಾನವು ಸುಧಾರಿಸಿದೆ.
2019ರಲ್ಲಿ ಆರನೇ ಸ್ಥಾನದಲ್ಲಿ ಇದ್ದ ಭಾರತವು 2022ರಲ್ಲಿ ಎರಡನೇ ಸ್ಥಾನಕ್ಕೇರಿದೆ. IMF ಭಾರತದ ದೇಶೀಯ ಉತ್ಪನ್ನವನ್ನು 8.2 ಪ್ರತಿಶತದ ಅಂದಾಜು ನೀಡಿದೆ. ಹಣದುಬ್ಬರವು 6.8 ಪ್ರತಿಶತ ಪಡೆದು ಅಸಾಮಾನ್ಯ ಮಟ್ಟ ಏರಿಲ್ಲ. ರಷ್ಯಾ ಮತ್ತು ಯುಕ್ರೇನ್ ಯುದ್ಧದಲ್ಲಿ ಭಾರತವು ಹಣದುಬ್ಬರ ಹೆಚ್ಚುವಂತಹ ಯಾವುದೇ ನೀತಿಯಲ್ಲಿ ಭಾಗಿಯಾಗದೇ ಜಾಣ್ಮೆಯಿಂದ ಸಾಗಿದ್ದರಿಂದ ಯುದ್ಧದ ಬೇಗೆ ಆರ್ಥಿಕತೆಯ ಮೇಲೆ ತಗಲಲಿಲ್ಲ.
ಹೀಗಾಗಿ ನಮ್ಮ ಸ್ಥಿತಿಯು ಅಷ್ಟೊಂದು ಆತಂಕಕಾರಿಯಾಗಿಲ್ಲ ಎನ್ನಲಾಗಿದೆ. ಅವೆಲ್ಲ ನಮ್ಮ ಸ್ಥಿತಿಯಲ್ಲಿನ ಧನಾತ್ಮಕ ವಿಚಾರ ಗಳು. ಋಣಾತ್ಮಕ ವಿಚಾರಗಳೂ ಸಾಕಷ್ಟಿವೆ. ಜಾಗತಿಕವಾಗಿ ಭಾರೀ ಪ್ರಮಾಣದ ತೈಲ ಬಳಕೆ ನಮ್ಮದಿದ್ದು ಮೂರನೇ ಕ್ರಮಾಂಕ ದಲ್ಲಿದೆ. ಹೀಗಾಗಿ ತೈಲದ ವಿಚಾರದಲ್ಲಿ ಅವಲಂಬನೆಯಿದೆ. ತೈಲದ ಕೊ ರತೆಯು ಹಣದುಬ್ಬರದ ಸೋಟಕ್ಕೆ ಕಾರಣ
ವಾಗಬಹುದು. ಈ ಕುರಿತು ಸರಕಾರದ ಹೆಚ್ಚು ಗಮನ ನೀಡಿ ಮುಂದಿನ ಐದು ವರ್ಷಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಪೂರ್ತಿಯಾಗಿ ಗ್ಯಾಸ್ ಅಥವಾ ಬ್ಯಾಟರಿ ಚಾಲಿತ ವಾಹನಗಳಾಗಿ ಪರಿವರ್ತಿಸುವ ಕ್ರಮ ತೆಗೆದುಕೊಂಡಿದೆ. ತೈಲದ ಬಳಕೆ ಕಡಿಮೆಯಾದಸ್ಟೂ ನಮ್ಮ ಆರ್ಥಿಕತೆ ಉತ್ತಮವಾಗುತ್ತದೆ.
ನಮ್ಮಲ್ಲಿ ಮತಗಳಿಕೆಯ ರಾಜಕೀಯದಿಂದಾಗಿ ಬಹಳಷ್ಟು ಜನಪ್ರಿಯ ಸ್ಕೀಮ್ ನೀಡಲಾಗಿದೆ. ಅವನ್ನು ನೀಡುವಲ್ಲಿ ಹಣ
ವ್ಯಯವಾಗುತ್ತದೆ. ಸಬ್ಸಿಡಿಯ ಭಾರವೂ ಇದೆ. ಇನ್ನೂ ಕೃಷಿ ಉತ್ಪನ್ನದ ಸಮಸ್ಯೆಯು ಒಂದಲ್ಲ ಒಂದು ರೀತಿಯಿಂದ ಇದ್ದೇ ಇದೆ. ಕೃಷಿ ಆಧಾರಿತ ಆರ್ಥಿಕತೆಯಲ್ಲಿ ಮಹತ್ತರ ಸುಧಾರಣೆ ನಿರಂತರವಾಗಿ ಮುನ್ನಡೆಯಬೇಕಿದೆ. ಜನಸಂಖ್ಯೆಯ ಸೋಟವನ್ನು ತಡೆಯುವುದೂ ಅನಿವಾರ್ಯವಾಗುತ್ತದೆ. ಈ ಕುರಿತು ಸಿವಿಲ್ ಕೋಡ್ ಅವಶ್ಯಕತೆ ಇದೆ. ಅನೇಕ ಮಹತ್ವದ ವಿಚಾರಗಳು ಸರಕಾರದ ಪಟ್ಟಿಯಲ್ಲಿದ್ದು ಎಲ್ಲವನ್ನೂ ಸಮಯ ಮೀರುವುದರೊಳಗೆ ಸಾಧಿಸಬೇಕಿದೆ.
ಜಗತ್ತು ಮೊದಲೂ ಅನೇಕ ಬಾರಿ ಆರ್ಥಿಕ ಮುಗ್ಗಟ್ಟನ್ನು ಅನುಭವಿಸಿದೆ. 1929ರಲ್ಲಿ ವಾಲ್ ಸ್ಟ್ರೀಟ್ ಕ್ರ್ಯಾಶ್ ಸಂದರ್ಭ ದಲ್ಲಿ ಬಂದ ಮುಗ್ಗಟ್ಟು ನಿವಾರಣೆಗೆ ಸುಮಾರು ಹತ್ತು ವರ್ಷವೇ ಸಂದಿತು. ನಂತರ ಇನ್ನೂ ಕೆಲವು ಬಾರಿ ಗಂಭೀರ ಸಮಸ್ಯೆ ಇದುರಿಸ ಬೇಕಾಗಿ ಬಂದಿತ್ತು. ೨೦೦೭-೦೮ರಲ್ಲಿ ಅಮೆರಿಕ ಸೇರಿದಂತೆ ಬಹುತೇಕ ರಾಷ್ಟ್ರಗಳು ಆರ್ಥಿಕ ಸಮಸ್ಯೆಗೊಳಗಾಗಿದ್ದವು. ಅವೆಲ್ಲ ನಮ್ಮ ಹಿಂದಿದೆ.
ಲಂಕಾ ಆರ್ಥಿಕವಾಗಿ ದಿವಾಳಿಯಾಗಿದ್ದು ಮತ್ತು ನಮ್ಮ ನೆರೆಯ ದೇಶಗಳು ಸಮಸ್ಯೆಯ ಸುಳಿಯಲ್ಲಿರುವುದು ನಮಗೇನೂ ಒಳ್ಳೆಯ ಮಾತಲ್ಲ. ರಷ್ಯಾ ಯುಕ್ರೇನ್ ಯುದ್ಧದ ಅಂತ್ಯವಿನ್ನೂ ಗೋಚರಿಸುತ್ತಿಲ್ಲ. ಕೋವಿಡ್ ಬಾಧೆಯು ಹಲವು ತಳಿಯ
ರೂಪ ಧರಿಸಿ ಇನ್ನೂ ಬಾಧಿಸುತ್ತಿದೆ. ಇವೆಲ್ಲ ಸಂದಿಗ್ಧದಲ್ಲಿ ನಮ್ಮ ದೇಶ ಈಜಾಡಬೇಕಿದೆ. ಪ್ರಧಾನಿ ಮೋದಿಯವರ ಸರಕಾರವು ಸದ್ಯದ ಹಾಗೂ ದೂರಗಾಮಿ ವಿಚಾರಗಳನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ಪೂರ್ತಿ ಶಕ್ತಿಯಿಂದ ತೊಡಗಿಕೊಂಡಿದೆ.
ಸಾಧ್ಯವಿದ್ದ ಎಲ್ಲ ಕ್ರಮ ಕೈಗೊಳ್ಳುವಲ್ಲಿ ನಿರತವಾಗಿದೆ. ಊರಿಗೆ ಬಂದ ಆರ್ಥಿಕ ವ್ಯಾಧಿ ಮನೆಗೆ ಬರದಂತೆ ಕಟ್ಟು ನಿಟ್ಟಿನ ನಿಗಾ ವಹಿಸುವುದು ಆಡಳಿತದ ಆದ್ಯ ಕರ್ತವ್ಯವಾಗಿದೆ.