Saturday, 14th December 2024

ಇಂಪಾಸಿಬಲ್ ಪದವನ್ನು ಮನಸ್ಸಿನೊಳಗೆ ಬಿಟ್ಟುಕೊಳ್ಬೇಡಿ

ರಿಚರ್ಡ್ ಬ್ರಾಾನ್ಸನ್ ಕನಸುಗಳನ್ನು ಬೆನ್ನತ್ತಿ ಹೋದವನು. ಒಂದೊಂದೇ ಕನಸನ್ನು ಹಿಡಿದು ಮಾತಾಡಿಸಿ, ಅದನ್ನು ಒಲಿಸಿಕೊಂಡು ಸಾಕಾರ ಮಾಡಿದವನು. ಹೊಸ ಹೊಸ ಸವಾಲುಗಳಿಗೆ ಮುಖಾಮುಖಿಯಾದವನು. ಅಸಾಧ್ಯವೆನಿಸುವುದೆಲ್ಲವನ್ನೂ ಸಾಧ್ಯ ಮಾಡಿ ತೋರಿಸಿದವನು. ಅಂದುಕೊಂಡಿದ್ದೆಲ್ಲವನ್ನೂ ಮಾಡಿದ ಬಳಿಕ ಇನ್ನು ಸುಮ್ಮನಿರಬೇಕಲ್ಲ ಎಂದು ಚಡಪಡಿಸಿ ತನಗೆ ತಾನೇ ಹೊಸ ಸವಾಲುಗಳನ್ನು ಎಳೆದುಕೊಂಡು ಅವುಗಳನ್ನು ಈಡೇರಿಸಲು ಎದೆಯೊಡ್ಡುತ್ತಿಿರುವ ಪರಮ ಹುಂಬ, ಮಹಾಸಾಹಸಿ. ಹಣ ಮಾಡುವುದನ್ನೇ ಕಾಯಕ ಮಾಡಿಕೊಳ್ಳದೇ, ಜೀವನವನ್ನು ಇಡಿಯಾಗಿ ಅನುಭವಿಸುವ ಅದಮ್ಯ ಉತ್ಸಾಾಹಿ.

ನನಗೆ ಅವನೊಬ್ಬ ಉದ್ಯಮಿ, ಶ್ರೀಮಂತನಷ್ಟೇ ಆಗಿದ್ದರೆ ಖಂಡಿತವಾಗಿಯೂ ಇಷ್ಟವಾಗುತ್ತಿಿರಲಿಲ್ಲ. ಶ್ರೀಮಂತ ಎಂಬ ಕಾರಣಕ್ಕೆೆ ನೀವು ಅಶೋಕ ಖೇಣಿ, ಮಿತ್ತಲ್, ಅಂಬಾನಿಯನ್ನು ಇಷ್ಟಪಡಲು ಸಾಧ್ಯವೇ ಇಲ್ಲ. ಇದೇ ಕಾರಣವಾಗಿದ್ದರೆ ನಮ್ಮೂರಿನ ಗಿರವಿ ಅಂಗಡಿ ಮಾಲೀಕರು, ಸೇಠುಗಳು, ರಿಯಲ್ ಎಸ್ಟೇಟು ದಂಧೆಕೋರರನ್ನೆೆಲ್ಲ ಇಷ್ಟಪಡಬೇಕಾಗುತ್ತಿಿತ್ತು. ಇನ್ನೂ ಒಂದು ಲಕ್ಷ ಕೋಟಿ ರೂಪಾಯಿ ಅವರ ಅಕೌಂಟ್‌ಗೆ ಜಮಾ ಆದರೂ ಮುಖೇಶ್ ಅಂಬಾನಿ ಶಾರ್ಕ್‌ಗಳ ಜತೆ ಈಜಲು ಸಮುದ್ರಕ್ಕಿಿಳಿಯುವುದಿಲ್ಲ. ಹಾಟ್ ಏರ್ ಬಲೂನ್ನಲ್ಲಿ ಕುಳಿತು ವಿಶ್ವಪ್ರದಕ್ಷಿಣೆಗೆ ಅಣಿಯಾಗುವುದಿಲ್ಲ. ಐವತ್ತು ಸಾವಿರ ಅಡಿ ಎತ್ತರಕ್ಕೆೆ ಹೋಗಿ ಅಲ್ಲಿಂದ ಜಿಗಿಯುವುದಿಲ್ಲ. ಮಂಗಳ ಯಾತ್ರೆೆಗೆ ಬಾಹ್ಯಾಾಕಾಶ ನೌಕೆಯನ್ನು ಸಿದ್ಧಪಡಿಸುವುದಿಲ್ಲ.

ಕೋಟಿಗೆ ಕೋಟಿ ಸೇರುತ್ತಾಾ ಹೋದಂತೆಲ್ಲ ಅಂಬಾನಿಯಂಥವರು ಮನೆಯಲ್ಲಿದ್ದು ಅದನ್ನು ಕಾಪಾಡಿಕೊಳ್ಳುವುದು ಹೇಗೆ ಎಂದು ಯೋಚಿಸುತ್ತಾಾ ದೇಹವನ್ನು ಗುಡಾಣ ಮಾಡಿಕೊಳ್ಳುತ್ತಾಾರೆಯೇ ಶಿವಾಯ್, ಬ್ರಾಾನ್ಸನ್ನಂಥ ಸಾಹಸಕ್ಕೆೆ ಅಣಿಯಾಗುವುದಿಲ್ಲ. ಬ್ರಾಾನ್ಸನ್ ಇಷ್ಟವಾಗುವುದು ಆ ಕಾರಣಕ್ಕೆೆ. ಓದುಗರೇನಾದರೂ ಅವನನ್ನು ಮೆಚ್ಚಿಿದರೂ ಅದೇ ಕಾರಣಕ್ಕೆೆ. ಜತೆಗೆ ಅವನ ವಿಚಾರಗಳು. ನನಗೆ ರಿಚರ್ಡ್ ಬ್ರಾಾನ್ಸನ್ನಂತೆ ಅಥವಾ ಅವನಿಗಿಂತ ಒಂದು ಹಿಡಿ ಜಾಸ್ತಿಿಯಾಗಿ ಕಂಡವನು ದುಬೈ ರೂಲರ್ ಮಹಮ್ಮದ್ ಬಿನ್ ರಶೀದ್ ಅಲ್ ಮಕ್ತೌೌಮ್. ಬ್ರಾಾನ್ಸನ್ನಂತೆ ಮಕ್ತೌೌಮ್ ಮುಂದೆ ಸಹ ಸಾಧನೆಯ ಸಾಗರವಿದೆ. ಮಾಯಾನಗರಿ ದುಬೈಗಿಂತ ದೊಡ್ಡ ಸಾಧನೆ ಬೇಕಾ? ಮರುಭೂಮಿಯನ್ನು ಮರುಳು ಮಾಡುವ ಭೂಮಿಯನ್ನಾಾಗಿ ಪರಿವರ್ತಿಸುವ ಹಿಂದಿನ ಶ್ರಮ, ಶ್ರದ್ಧೆೆ, ಯೋಚನೆ, ಚಿಂತನೆ, ಕತೃತ್ವ ದ ಶಕ್ತಿಿಯಿದೆಯೆಲ್ಲ. ಅದಕ್ಕೆೆ ಎಂಥವರಾದರೂ ಬೆರಗಾಗಲೇಬೇಕು, ತಲೆದೂಗಲೇಬೇಕು.

ದುಬೈ ನಗರವನ್ನು ನೋಡಿದಾಗೆಲ್ಲ ಅದನ್ನು ರೂಪಿಸಿದ ವ್ಯಕ್ತಿಿಯ ಆಲೋಚನೆಗಳು, ಕನಸುಗಳು ಹೇಗಿದ್ದಿರಬಹುದು, ಯಾವ ಮಹಾನ್ ಶಕ್ತಿಿ ಈ ನಗರದ ಬೀಜ ಬಿತ್ತಿಿರಬಹುದು ಎಂಬ ವಿಸ್ಮಯವುಂಟಾಗುತ್ತಿಿತ್ತು. ಮಕ್ತೌೌಮ್ ಎಂಬ ಕನಸುಗಾರನ ವಿಚಾರ, ಧ್ಯೇಯ, ಸಿದ್ಧಾಾಂತಗಳನ್ನು ಓದುತ್ತಾಾ ಹೋದಂತೆಲ್ಲಾಾ ನಾನುಅವರಲ್ಲಿ ಮತ್ತೊೊಬ್ಬ ಬ್ರಾಾನ್ಸನ್ನನ್ನು ಕಾಣಲಾರಂಭಿಸಿದೆ. ರೋಮ್ ನಗರವನ್ನು ರಾತ್ರಿಿ-ಬೆಳಗಾಗುವುದರೊಳಗೆ ಕಟ್ಟಿಿಲ್ಲವಂತೆ. ಆದರೆ ರೋಮ್ ನಗರ ಈ ಸ್ಥಿಿತಿಗೆ ಬರಲು ತೆಗೆದುಕೊಂಡಿರುವ ಅವಧಿಯನ್ನು ಹೋಲಿಸಿದರೆ, ದುಬೈ ನಗರವನ್ನು ರಾತ್ರಿಿ-ಬೆಳಗಾಗುವುದರೊಳಗೆ ಕಟ್ಟಿಿದ್ದಾರೆಂದು ಹೇಳಬಹುದು. ಇಡೀ ಜಗತ್ತೇ ತಲೆದೂಗುವ ರೀತಿಯಲ್ಲಿ ತಲೆಯೆತ್ತಿಿ ನಿಲ್ಲುವಂತೆ ಮಾಡಿದ ಈ ನಗರದ ಕನಸಿನ ಮೊಟ್ಟೆೆಗೆ ಕಾವು ಕೊಟ್ಟು ಮರಿ ಮಾಡಿ, ಅದನ್ನು ಈ ಸ್ಥಿಿತಿಗೆ ತರುವ ತನಕ ಹೆಣಗಿದ ಮನಸ್ಸು ಹೇಗೆ ಕೆಲಸ ಮಾಡಿರಬಹುದು ಎಂಬುದು ಎಂಥವರಿಗಾದರೂ ಅಚ್ಚರಿಯೇ. ಮಕ್ತೌೌಮ್ ಇಷ್ಟವಾಗುವುದು ಈ ಕಾರಣಕ್ಕೆೆ.

ಈ ವರ್ಷದ ಆರಂಭದಲ್ಲಿ ಮಕ್ತೌೌಮ್ ಅವರು ಸರಕಾರಿ ಅಧಿಕಾರಿಗಳ ಶೃಂಗ ಸಭೆಯನ್ನು ಏರ್ಪಡಿಸಿದ್ದರು. ಅಲ್ಲಿ ಅವರು ಮಾಡಿದ ಭಾಷಣದ ಸಿಡಿಯನ್ನು ಮಕ್ತೌೌಮ್ ಅವರ ಆಪ್ತರೊಬ್ಬರು ನನಗೆ ಕಳಿಸಿಕೊಟ್ಟಿಿದ್ದರು. ಸುಮಾರು ಮುಕ್ಕಾಾಲು ಗಂಟೆ ಅವಧಿಯ ಅವರ ಭಾಷಣವನ್ನು ಇತ್ತೀಚೆಗೆ ಕೇಳುತ್ತಿಿದ್ದೆ, ನೋಡುತ್ತಿಿದ್ದೆ. ಪ್ರಪ್ರಥಮವಾಗಿ ಸರಕಾರಿ ಸಿಬ್ಬಂದಿ, ಅಧಿಕಾರಿಗಳನ್ನು ಕರೆದು ಅವರಿಗಾಗಿ ಶೃಂಗಸಭೆ ಏರ್ಪಡಿಸುವುದು, ಅವರಿಂದ ಅಪೇಕ್ಷೆಗಳೇನು, ನಿರೀಕ್ಷೆಗಳೇನು ಎಂದು ಬಯಸುವುದು, ಅವರ ಸಮಸ್ಯೆೆಗಳಿಗೆ ಕಿವಿಯಾಗುವುದು, ಅವರನ್ನು ಹುರಿದುಂಬಿಸುವುದಿದೆಯಲ್ಲ, ಅದೇ ಒಂದು ಅದ್ಭುತ!

ನಮ್ಮ ಯಾವ ಮುಖ್ಯಮಂತ್ರಿಿ ಸರಕಾರಿ ನೌಕರರನ್ನು ಭೇಟಿ ಮಾಡಿ, ಅವರಿಂದ ಏನು ನಿರೀಕ್ಷಿಸುತ್ತೇನೆ ಎಂದು ಕೇಳಿದ್ದಾರೆ? ಅವರಿಗೆ ಪ್ರೇರಣಾದಾಯಕ ಮಾತುಗಳನ್ನು ಹೇಳಿ ಹುರಿದುಂಬಿಸಿದ್ದಾರೆ? ಆ ಸರಕಾರಿ ಶೃಂಗಸಭೆಯಲ್ಲಿ ಸಾಮಾನ್ಯ ಸಿಬ್ಬಂದಿಯೊಬ್ಬ ಎದ್ದುನಿಂತು, ನೀವು ನಮ್ಮಿಿಂದ ಏನನ್ನು ನಿರೀಕ್ಷಿಸುತ್ತೀರಿ? ನಿಮ್ಮ ಹಕೀಕತ್ತೇನು?’ ಎಂದು ಪ್ರಶ್ನಿಿಸಿದ.
ಅದಕ್ಕೆೆ ಮಕ್ತೌೌಮ್ ಹೇಳಿದರು-ನೀವು ದುಬೈ ರಾಯಭಾರಿಗಳು. ನಿಮ್ಮ ಯೋಗದಾನವಿಲ್ಲದೇ ಈ ಸುಂದರ, ವೈಭವದ ನಗರವನ್ನು ಈ ಮಟ್ಟಕ್ಕೆೆ ಬೆಳೆಸಲು ಸಾಧ್ಯವಾಗುತ್ತಿಿರಲಿಲ್ಲ. ನೀವು ಅಭಿವೃದ್ಧಿಿಯ ಚಾಲಕರು. ನೀವು ನಮ್ಮ ಬಂಡವಾಳ. ನಾವು ಜನರಿಗೆ ನೀಡುವ ಸೇವೆಯನ್ನು ಅವರಿಗೆ ತಲುಪಿಸುವುವರೇ ನೀವು. ದುಬೈ ನಗರ ಡಿಟ್ಟ್ಝ ್ಚ್ಝ ಆಗಿದೆ. ನಮ್ಮ ಸರಕಾರಿ ನೌಕರರ ಕೆಲಸದ ಮೌಲ್ಯವೂ ಡಿಟ್ಟ್ಝ ್ಚ್ಝ ಆಗಿದೆ ಎಂದರ್ಥ.’

’ನಮಗೆ ಬೇಕಾಗಿರುವವರು ಉತ್ಕೃಷ್ಟ, ಪರಿಪೂರ್ಣ ಕೆಲಸಗಾರರು, ಕೈಗೆತ್ತಿಿಕೊಂಡ ಕೆಲಸದಲ್ಲಿ ಶ್ರೇಷ್ಠತೆ ಮೆರೆಯುವವರು. ಅ ಜ್ಟಛಿಠಿ ಜಿಜಿಟ್ಞ ್ಚ್ಞ ಟ್ಞ್ಝ ಚಿಛಿ ್ಚಜಿಛಿಛಿ ಚಿ ಜ್ಟಛಿಠಿ ಠಿಛಿಞ. ಹಿಂದಿನ ವರ್ಷವೊಂದೇ ನಮ್ಮ 55 ಸಾವಿರ ಸರಕಾರಿ ಸಿಬ್ಬಂದಿ ತರಬೇತಿಗಾಗಿ ಹದಿಮೂರು ಲಕ್ಷ ಗಂಟೆಗಳ ಬಂಡವಾಳ ಹೂಡಿದ್ದೇವೆ. ನೀವೇ ನಮಗೆ ್ಚಜಿಠ್ಝಿ (ಬಂಡವಾಳ). ನೀವು ಜೀವನದಲ್ಲಿ ಮುಂದೆ ಬನ್ನಿಿ. ದುಬೈ ತನ್ನಿಿಂದ ತಾನೆ ಮುಂದೆ ಬರುತ್ತದೆ. ನೀವು ಕೊಡುವ ಸಾಮರ್ಥ್ಯ ಹೊಂದಿದರೆ ಮಾತ್ರ ದೇಶ ಉದ್ಧಾಾರವಾಗುತ್ತದೆ.’ ಅಂದು ಮಕ್ತೌೌಮ್ ಹೇಳಿದ ಕೆಲವು ವಿಚಾರಗಳನ್ನು ನಿಮಗೆ ಕೇಳಿಸಬೇಕು. ಒಂದು ದೇಶವನ್ನು ಮುನ್ನಡೆಸುವವರು ಹೇಗೆ ಯೋಚಿಸುತ್ತಿಿದ್ದಾರೆಂಬುದು ಗೊತ್ತಾಾದೀತು.

* ಸರಕಾರಿ ನೌಕರರಾದ ನೀವು ಕಾರಕೂನರಲ್ಲ, ಹೇಳಿದ್ದಷ್ಟನ್ನೇ ಮಾಡಿ ಹೋಗುವ ಗುಮಾಸ್ತರಲ್ಲ. ನೀವು ನಿಮಗೆ ಒಪ್ಪಿಿಸಿದ ರಂಗದಲ್ಲಿ ಲೀಡರ್ ಎಂದು ಭಾವಿಸಿ ್ಟ್ಠಛಿ ್ಝಛಿಛ್ಟಿಿಜಿ ಜಿ ್ಞಟಠಿ ಜ್ಞಿಿ ಟ್ಞಛಿ’ ಡಿ ಟ್ಛ ಠಿಜ್ಞಿಿಜ್ಞಿಿಜ. ನಿಜವಾದ ನಾಯಕನಾದವನು ತನ್ನ ಹುದ್ದೆ, ಸ್ಥಾಾನಮಾನದಿಂದ ಅಧಿಕಾರವನ್ನು ಪಡೆಯುವುದಿಲ್ಲ. ಆದರೆ ತನ್ನ ಜ್ಞಾನ, ವಿವೇಕ, ಜನರ ಪ್ರೀತಿ, ವೈಯಕ್ತಿಿಕ ವರ್ಚಸ್ಸು, ಶಿಕ್ಷಣ, ಅರ್ಹತೆಯಿಂದ ಅದನ್ನು ಪಡೆಯುತ್ತಾಾನೆ. ಸರಕಾರಿ ನೌಕರರೇ, ನೀವೆಲ್ಲ ನಾಯಕರು. ಆದ್ದರಿಂದ ನಿಮ್ಮೆೆಲ್ಲರಿಗೂ ನಿರೀಕ್ಷೆಗಳನ್ನು ಮುಟ್ಟುವ ಸಾಮರ್ಥ್ಯವಿದೆ.

* ಸರಕಾರಿ ನೌಕರಿಯನ್ನು ನೌಕರಿ ಎಂದು ಭಾವಿಸಿದರೆ, ನೀವು ಚಾಕರಿ ಮಾಡಿ ಎದ್ದು ಹೋಗುತ್ತೀರಿ. ಅದನ್ನು ಮಾಡಲು ನೀವೇ ಬೇಕು ಎಂದಿಲ್ಲ. ಯಾರು ಬೇಕಾದರೂ ಮಾಡುತ್ತಾಾರೆ. ಆದರೆ ನೀವು ನೌಕರರಲ್ಲ. ನಾಯಕರು. ಅಂದರೆ ನೀವು ಚಾಕರಿ ಮಾಡುತ್ತಿಿಲ್ಲ. ನಿಮ್ಮ ಸಾಮರ್ಥ್ಯ, ಜಾಣ್ಮೆೆ, ಕೌಶಲವನ್ನು ಪ್ರದರ್ಶಿಸಲು ಸಿಕ್ಕಿಿದ ಅಪೂರ್ವ ಅವಕಾಶ ಎಂದು ಭಾವಿಸಿ. ಅಲ್ಲದೇ ನಿಮ್ಮ ದೇಶದ ಇತಿಹಾಸವನ್ನು ನಿರ್ಮಿಸಲು ನಿಮಗೆ ಪ್ರಾಾಪ್ತವಾದ ಅದ್ಭುತ ಅವಕಾಶ ಎಂದು ಭಾವಿಸಿ. ಈ ಗುಂಗಿನಲ್ಲಿ ಕೆಲಸ ಮಾಡಿ.

* ಚಾಕರಿ ಮಾಡುವವರು ಬಿಕಾರಿಗಳು. ಅದಕ್ಕೆೆ ಯಾವ ಪರಿಣತಿಯೂ ಬೇಡ. ನೀವೊಬ್ಬ ಸುಂದರ ಪೇಂಟಿಂಗ್ ಬಿಡಿಸುವ ಕ್ಯಾಾನ್ವಾಾಸ್ ಮುಂದಿರುವ ಕಲಾವಿದ ಎಂದು ತಿಳಿಯಿರಿ. ನಿಮ್ಮನ್ನು ಇದಕ್ಕಿಿಂತ ಕಡಿಮೆ ಎಂದು ನಾನಂತೂ ತಿಳಿದಿಲ್ಲ.

* ದೈನಂದಿನ ಕೆಲಸ -ಕಾರ್ಯಗಳ ನಡುವೆ ನಿಮ್ಮ ಸಾಮರ್ಥ್ಯವನ್ನು ಸತತ ಹೆಚ್ಚಿಿಸಿಕೊಳ್ಳಿಿ. ನೀವು ಹೆಚ್ಚು ಹೆಚ್ಚು ಜ್ಞಾನವನ್ನು ಸಂಪಾದಿಸಿಕೊಳ್ಳಿಿ. ನಿಮ್ಮ ನೋಟವನ್ನು ವಿಸ್ತರಿಸಿಕೊಳ್ಳಿಿ. ಪರಿಶ್ರಮ, ಸಂಯಮ, ಸಮಚಿತ್ತ ಸದಾ ನಿಮ್ಮನ್ನು ಮುನ್ನಡೆಸುವ ವಾಹಕಗಳಾಗಲಿ.

* ನಮ್ಮ ದೇಶದ ವಿಷಯದಲ್ಲಿ ಪ್ರಥಮ ಸ್ಥಾಾನದ ಹೊರತಾಗಿ ನಮಗೆ ಮತ್ಯಾಾವ ಸ್ಥಾಾನ ಸಿಕ್ಕರೂ ನಾವು ಸಂತೃಪ್ತರಾಗುವುದು ಬೇಡ. ಸದಾ ಉತ್ಕೃಷ್ಟತೆಗಾಗಿ ಚಡಪಡಿಸೋಣ. ನಿಮ್ಮ ಪ್ರತಿ ಪ್ರಯತ್ನ, ಕೆಲಸ ದೇಶವನ್ನು ನಂಬರ್ ಒನ್ ಮಾಡುವ ದಿಕ್ಕಿಿನಲ್ಲಿ ಪೂರಕವಾಗಿರಲಿ.

* ಕೆಲವರು ನನ್ನ ಮುಂದೆ ಬಂದು ಈ ಕೆಲಸ ಮಾಡಲು ಸಾಧ್ಯವಿಲ್ಲ’ ಅಂತಾರೆ. ನಾನು ಹಿಂದೆ ಮುಂದೆ ನೋಡದೇ ಸಾಧ್ಯವಿದೆ, ಸಾಧ್ಯವಿದೆ’ ಎಂದು ಹೇಳುತ್ತೇನೆ. ಕಾರಣ ಅಸಾಧ್ಯವಾದುದು ಯಾವುದೂ ಇಲ್ಲ ಎಂಬುದು ನನಗೆ ಒಂದಲ್ಲ, ಹತ್ತಲ್ಲ, ನೂರಾರು ಸಲ ಮನವರಿಕೆಯಾಗಿದೆ. ಹೀಗಾಗಿ ಯಾರೇ ಬಂದು ಆಗೊಲ್ಲ’ ಅಂದ್ರೆೆ ಆಗುತ್ತದೆ’ ಅಂತೇನೆ. ಸಾಧ್ಯ ಮಾಡಿ ತೋರಿಸುತ್ತೇನೆ. ಹೀಗಾಗಿ ಯಾರೂ ನನ್ನ ಬಳಿ ಬಂದು ಇಂಪಾಸಿಬಲ್’ ಎಂಬ ಪದ ಬಳಸುವುದಿಲ್ಲ. ಐಠಿ’ ಟಜಿಚ್ಝಿಿಛಿ ಚ್ಠಿಿಠಿ’ ಅಂತಾರೆ. ಆ್ಠಠಿ ಯಾಕೆ? ಐಠಿ’ ಟಜಿಚ್ಝಿಿಛಿ’ ಎಂದಷ್ಟೇ ಹೇಳಿ ಎಂದು ಹೇಳುತ್ತೇನೆ. ಈ ಮಾತನ್ನು ನಾನು ತುಸು ಧಾರ್ಷ್ಟ್ಯದಿಂದಲೇ ಹೇಳುತ್ತಿಿದ್ದೇನೆ. ಜಗತ್ತಿಿನಲ್ಲಿಯೇ ಎತ್ತರದ ಕಟ್ಟಡ ಕಟ್ಟಬೇಕೆಂದು ಹೇಳಿದಾಗ ಸಾಧ್ಯವಿಲ್ಲ ಅಂದರು. ನಾವು ದಾಖಲೆ ಅವಧಿಯಲ್ಲಿ ಬುರ್ಜ್ ಖಲೀಫಾ ಕಟ್ಟಿಿದೆವು. ಇದನ್ನು ಕಟ್ಟುವ ಮೊದಲು ಎಲ್ಲರೂ’ಅದು ಸಾಧ್ಯವಾಗದ ಮಾತು’ ಎಂದೇ ಹೇಳಿದ್ದರು. ಹಾಗೆ ಹೇಳಿದವರು ಈಗ ಎಲ್ಲಿ ಇದ್ದಾರೋ ಗೊತ್ತಿಿಲ್ಲ.
* ನನ್ನ ಮನೆಯ ಹಜಾರದಲ್ಲಿ ಗ್ರಿಿಫಿನ್ ಎಂಬ ಕಾಲ್ಪನಿಕ ಪಕ್ಷಿಯ ಪೇಂಟಿಂಗ್ ಅನ್ನು ತಗುಲಿ ಹಾಕಿಕೊಂಡಿದ್ದೇನೆ. ಗ್ರೀಕ್ ಪುರಾಣದಲ್ಲಿ ಈ ಪಕ್ಷಿಯ ಪ್ರಸ್ತಾಾಪವಿದೆ. ಹದ್ದಿನ ಮುಖದ ಸಿಂಹದ ದೇಹದ ಈ ಪಕ್ಷಿ ನಮಗೆ ಅಸಾಧ್ಯವಾದುದನ್ನು ಸಾಧ್ಯಮಾಡುವುದಕ್ಕೆೆ ನಿರಂತರ ಪ್ರೇರಣೆ ನೀಡುತ್ತದೆ. ಈ ಪಕ್ಷಿಯ ವೈಶಿಷ್ಟ್ಯವೇನೆಂದರೆ, ಇದು ಸದಾ ಆಗಸದಲ್ಲಿ ಹಾರುತ್ತಾಾ ಇರುತ್ತದೆ. ನೆಲದ ಮೇಲಾಗಲಿ, ಮರದ ಮೇಲಾಗಲಿ ಕುಳಿತುಕೊಳ್ಳುವುದಿಲ್ಲ. ಎಷ್ಟೇ ಹಾರಿದರೂ ಅದಕ್ಕೆೆ ಸುಸ್ತಾಾಗುವುದಿಲ್ಲ. ಹಾರುವಾಗಲೇ ಆಕಾಶದಲ್ಲಿ ಮೊಟ್ಟೆೆಯಿಟ್ಟು, ಅಲ್ಲಿಯೇ ಕಾವು ಕೊಟ್ಟು ಮರಿಗಳನ್ನು ಹಾಕುತ್ತದೆ. ಮರಿಗಳು ಹುಟ್ಟಿಿದ ತಕ್ಷಣವೇ ಹಾರಲಾರಂಭಿಸುತ್ತವೆ. ನಿಜ ಹೇಳಿ. ಇದು ಸಾಧ್ಯವಾ? ಸಾಧ್ಯವಿಲ್ಲ ತಾನೆ. ಆದರೆ ಇದು ಕಲ್ಪನೆಯಲ್ಲಾದರೂ ಸಾಧ್ಯವಾಗಿದೆಯಲ್ಲ. ಗ್ರಿಿಫಿನ್ ಪಕ್ಷಿ ನಿಜವಾಗಿಯೂ ಇದ್ದಿರಬಹುದು ಎಂದೆನಿಸುತ್ತದೆ. ನಮ್ಮ ಕಲ್ಪನೆಯನ್ನು ನಿಜಗೊಳಿಸಲು, ಇಂಪಾಸಿಬಲ್ಲನ್ನೂ ಪಾಸಿಬಲ್ ಮಾಡಲು ಈ ಪಕ್ಷಿ ಸೃಷ್ಟಿಿಯಾಗಲಿ ಎಂದು ನಾನು ಯಾವತ್ತೂ ಅಂದುಕೊಳ್ಳುತ್ತೇನೆ.

* ದುಬೈಯಂಥ ಉರಿಬಿಸಿಲ ನಾಡಿನಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಿಪಡಿಸಲು ಸಾಧ್ಯವೇ ಇಲ್ಲ ಎಂದು ಎಲ್ಲರೂ ಹೇಳುತ್ತಿಿದ್ದರು. ಒಂದು ವೇಳೆ ಸಾಧ್ಯವಾಗುವಂತಿದ್ದರೆ, ಬೇರೆ ಅರಬ್ ದೇಶಗಳು ಈ ಅವಕಾಶವನ್ನು ತಪ್ಪಿಿಸಿಕೊಳ್ಳುತ್ತಿಿರಲಿಲ್ಲ ಎಂದು ಅನೇಕರು ನನ್ನ ಬಳಿ ಹೇಳುತ್ತಿಿದ್ದರು. ಅವರ ದೃಷ್ಟಿಿಯಲ್ಲಿ ದುಬೈ ಪ್ರವಾಸಿ ತಾಣವಾಗಲು ಸಾಧ್ಯವೇ ಇಲ್ಲ. ಆದರೆ ಪ್ರತಿ ವರ್ಷ ದುಬೈಗೆ ಒಂದು ಕೋಟಿ ಜನ ಬರುತ್ತಿಿದ್ದಾರೆ.

* ಸಮುದ್ರದ ಮೇಲೆ ಕಟ್ಟಡ, ಬಡಾವಣೆ ನಿರ್ಮಿಸುವುದು ಸಾಧ್ಯವಾ? ನಾವು ಪಾಮ್ ಐಲ್ಯಾಾಂಡ್ ಯೋಜನೆಯನ್ನು ಕೈಗೆತ್ತಿಿಕೊಂಡಾಗ ಎಲ್ಲರೂ ನಮ್ಮ ಉತ್ಸಾಾಹಕ್ಕೆೆ ತಣ್ಣೀರೆರಚಿದರು. ಜಗತ್ತಿಿನಲ್ಲಿ ಎಲ್ಲೂ ಈ ಯೋಜನೆ ಯಶಸ್ವಿಿಯಾಗಿಲ್ಲ ಎಂದರು. ಅದಕ್ಕೆೆ ನಾನು ಹೇಳಿದೆ-ಜಗತ್ತಿಿನಲ್ಲಿ ಯಾರೂ ಇಂಥ ಯೋಜನೆ ಕೈಗೆತ್ತಿಿಕೊಳ್ಳಲು ಧೈರ್ಯ ಮಾಡಿಲ್ಲ’. ನಾವು ಧೈರ್ಯ ಮಾಡಿದೆವು. ಇಂದು ವಿಶ್ವದಲ್ಲಿಯೇ ಅತಿ ಭವ್ಯ ಮಾನವ ನಿರ್ಮಿತ ದ್ವೀಪವನ್ನು ನಿರ್ಮಿಸಿದ್ದೇವೆ. ಸಾವಿರಾರು ಕಟ್ಟಡಗಳನ್ನು ಕಟ್ಟಿಿದ್ದೇವೆ. ಲಕ್ಷಾಂತರ ಜನ ಅಲ್ಲಿ ವಾಸಿಸುತ್ತಿಿದ್ದಾರೆ.

* ಈ ಎಲ್ಲ ಘಟನೆಗಳಿಂದ ನನಗೆ ಒಂದು ಸಂಗತಿ ಸ್ಪಷ್ಟವಾಗಿದೆ. ಅಸಾಧ್ಯವೆಂಬುದು ಯಾವುದೂ ಇಲ್ಲ. ಸರಕಾರಿ ಸಿಬ್ಬಂದಿಯಾಗಿ, ಸರಕಾರಿ ನಾಯಕ’ರಾಗಿ ನಿಮ್ಮ ಮನಸ್ಸಿಿನಲ್ಲಿ ಇಂಪಾಸಿಬಲ್ ಎಂಬ ಪದವನ್ನು ನಿಮ್ಮ ಮನಸ್ಸಿಿನೊಳಗೆ ಬಿಟ್ಟುಕೊಳ್ಳಬೇಡಿ. ಆ ಒಂದು ಶಬ್ದ ನಿಮ್ಮನ್ನು ಕುಬ್ಜರನ್ನಾಾಗಿ, ದುರ್ಬಲರನ್ನಾಾಗಿ ಮಾಡುತ್ತದೆ. ಅದಕ್ಕೂ ಮುಖ್ಯವಾಗಿ ದುರ್ಬಲ ಹಾಗೂ ಸಬಲ ಎಂಬುದೂ ಇಲ್ಲ. ಒಂದು ಕಾರ್ಯವನ್ನು ಕೈಗೆತ್ತಿಿಕೊಳ್ಳಲು ಮನಸ್ಸಿಿದೆಯಾ ಅಥವಾ ಇಲ್ಲವಾ ಎಂಬುದಷ್ಟೇ ಪರಿಗಣಿತವಾಗುತ್ತದೆ.

* ನಾವು ಯೋಚಿಸುವ, ಗ್ರಹಿಸುವ ಕೆಲಸ ಮಾಡುವ ವಿಧಾನ ಕ್ಷಿಪ್ರ ಬದಲಾಗುತ್ತಿಿದೆ. ಅದೇ ರೀತಿ ಸರಕಾರದ ಕಲ್ಪನೆಯೂ ಬದಲಾಗುತ್ತಿಿದೆ. ಬೆಳಗ್ಗೆೆ ಹತ್ತರಿಂದ ಸಾಯಂಕಾಲ ಆರರ ತನಕ ಕೆಲಸ ಮಾಡುವುದಷ್ಟೇ ಸರಕಾರ ಅಲ್ಲ. ಖಾಸಗಿ ವಲಯ ವರ್ಷವಿಡೀ 24 /7 ಗಂಟೆ ಕೆಲಸ ಮಾಡುವುದಾದರೆ, ಸರಕಾರಿ ವಲಯವೇಕೆ ನಿರಾಳವಾಗಿರಬೇಕು? ನಮ್ಮ ಸರಕಾರ ನಮ್ಮ ಏರ್‌ಲೈನ್ ರೀತಿ, ದಿನದ ಇಪ್ಪತ್ನಾಾಲ್ಕು ಗಂಟೆ ಕೆಲಸ ಮಾಡಬೇಕು.

* ನಮ್ಮ ಸರಕಾರ ಹೇಗಿರಬೇಕೆಂದರೆ, ಸಾರ್ವಜನಿಕರು ಖಾಸಗಿ ರಂಗಕ್ಕಿಿಂತ ಸರಕಾದ ಸೇವೆಯೇ ಉತ್ತಮವಾಗಿದೆ ಎಂದು ಪ್ರಶಂಸಿಸಬೇಕು. ಸರಕಾರಿ ಕಚೇರಿಗೆ ಬರುವ ಸಾರ್ವಜನಿಕರನ್ನು, ಪಂಚತಾರಾ ಹೋಟೆಲ್‌ಗೆ ಬರುವ ಅತಿಥಿಗಳಂತೆ ಸ್ವಾಾಗತಿಸಲು, ಸೇವೆ ಮಾಡಲು ಏಕೆ ಸಾಧ್ಯವಿಲ್ಲ? ನಾವೂ ಅಂಥ ಸೇವೆಯನ್ನು ನೀಡಬಹುದಲ್ಲ? ಬ್ಯಾಾಂಕ್‌ಗಳು ಚೆಕ್‌ಗಳನ್ನು ಕ್ಲಿಿಯರ್ ಮಾಡುವ ರೀತಿಯಲ್ಲಿ ನಮ್ಮ ಸರಕಾರಗಳು ಫೈಲ್‌ಗಳನ್ನು ಕ್ಲಿಿಯರ್ ಮಾಡುವಂತಾಗಬೇಕು.

* ಇಂದು ಇಡೀ ಜಗತ್ತಿಿನ ಕಣ್ಣು ದುಬೈ ಮೇಲಿದೆ. ದುಬೈ ಗೆ ಬಂದವರೆಲ್ಲ ಇಲ್ಲಿನ ದೇಶವನ್ನು ನೋಡಿ ಬೆರಗಾಗುತ್ತಾಾರೆ. ಅಷ್ಟೇ ಇಲ್ಲ ಇಲ್ಲಿಂದ ಪ್ರೇರಣೆ ಪಡೆದು ಹೋಗುತ್ತಾಾರೆ. ಎಲ್ಲ ದೇಶಗಳ ಮುಖ್ಯಸ್ಥರು ಬಂದಾಗ ನಮ್ಮ ದೇಶವೂ ಹೀಗೆ ಇರಬೇಕೆಂದು ಮನಸ್ಸಿಿನೊಳಗೆ ಅಂದುಕೊಳ್ಳುತ್ತಾಾರೆ. ಅನೇಕರು ನನ್ನ ಮುಂದೆಯೇ ಹೇಳಿದ್ದುಂಟು. ಅಂದರೆ ಅವರಿಗೆ ಸಾಧ್ಯವಾಗದ್ದು ನಮಗೆ ಸಾಧ್ಯವಾಗಿದೆ. ಈ ಕಾರಣಗಳಿಂದ ಎಲ್ಲರೂ ನಿಮ್ಮನ್ನು ಬೇರೆ ರೀತಿಯಿಂದ ನೋಡುತ್ತಾಾರೆ. ನಿಮ್ಮಿಿಂದ ಹೆಚ್ಚಿಿನದಾದುದನ್ನು ನಿರೀಕ್ಷಿಸುತ್ತಾಾರೆ. ಹೀಗಾಗಿ ನಿಮ್ಮ ಕಡೆ ಅಭಿಮಾನದಿಂದ ನೋಡಿದವರಿಗೆ ಯಾವತ್ತೂ ನಿರಾಸೆ ಮಾಡಬೇಡಿ. ನೀವು ಒಬ್ಬ ಇ್ಞಜಛಿ ಅಜಛ್ಞಿಿಠಿ ಎಂಬುದನ್ನು ತೋರಿಸಿ ಕೊಡಿ. ನಿಮ್ಮ ಒಂದು ನಡೆ ನಮ್ಮ ದೇಶದ ಬಗೆಗಿನ ಅಭಿಪ್ರಾಾಯವನ್ನೇ ಬದಲಿಸಬಹುದು.

* ನೀವು ಕಚೇರಿಯಲ್ಲಿ ಇದ್ದಾಗ ಮಾತ್ರ ಸರಕಾರಿ ನೌಕರರಲ್ಲ. ನೀವು ಯಾವತ್ತೂ, ಅಂದರೆ ಕಚೇರಿಯಲ್ಲಿ ಇಲ್ಲದಿದ್ದಾಗಲೂ ನೌಕರರೇ. ದುಬೈ ಯಲ್ಲಿ ಕಾಣುವ ಒಂದು ಲೋಪ ಅದು ನಮ್ಮ ಸಾಂಕ ಲೋಪ. ಅಂತ ಲೋಪವನ್ನು ನಾವು ಸಹಿಸಿಕೊಳ್ಳಬಾರದು. ಎಲ್ಲಾ ಸರಿ ಇದ್ದು ಯಾವುದೋ ಒಂದು ಸರಿ ಇಲ್ಲದಿದ್ದರೆ, ವ್ಯವಸ್ಥೆೆ ಪರಿಪೂರ್ಣವಾಗಿಲ್ಲ ಎಂದರ್ಥ. ಈ ನಿಟ್ಟಿಿನಲ್ಲಿ ನಾವೆಲ್ಲರೂ ಜವಾಬ್ದಾಾರರು.

* ಪ್ರತಿದಿನ ನಾನು ಬಂದು ನಿಮ್ಮನ್ನು ಹುರಿದುಂಬಿಸಬೇಕು, ಪ್ರೇರಣೆ ನೀಡಬೇಕು ಎಂದು ಭಾವಿಸಬೇಡಿ. ನಿಮ್ಮನ್ನು ಹುರಿದುಂಬಿಸುವವರು ನೀವೇ ಎಂಬುದು ಗೊತ್ತಿಿರಲಿ. ನಿಮ್ಮ ಕೆಲಸ, ನಡತೆ ನೋಡಿ ಬೇರೆಯವರು ಪ್ರೇರಣೆ ಪಡೆಯುತ್ತಾಾರೆ. ಹೀಗಾಗಿ ನಮಗೆ ನಾವೇ ಪ್ರೇರಣೆ ಕೊಡುತ್ತಾಾ, ಪಡೆಯುತ್ತಾಾ ಇರಬೇಕು. ಆಗಲೇ ನಮ್ಮ ಸುತ್ತಲಿನ ವಾತಾವರಣ ಕ್ರಿಿಯಾಶೀಲವಾಗಿರುತ್ತದೆ.
* ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವವರೆಲ್ಲ ಇಂಟರ್‌ರ್ನೆಟ್ ಸಂಪರ್ಕ ಹೊಂದಿರುತ್ತಾಾರೆ. ಸದಾ ಸ್ಮಾಾರ್ಟ್ ಫೋನ್, ಬ್ಲ್ಯಾಾಕ್‌ಬೆರಿ ಫೋನ್‌ಗಳ ಮೂಲಕ ಸದಾ ಆಫೀಸಿನೊಂದಿಗೆ ್ಚಟ್ಞ್ಞಛ್ಚಿಿಠಿ ಆಗಿರುತ್ತಾಾರೆ. ಆಫೀಸಿನಲ್ಲಿಯೇ ಇರಬೇಕೆಂದಿಲ್ಲ. ಮನೆಯಿಂದ ಸಹ ಕೆಲಸ ಮಾಡುತ್ತಾಾರೆ. ಸರಕಾರಿ ನಾಯಕ’ರೂ ಹೀಗೆ ಆಫೀಸಿನಲ್ಲಿ ಇಲ್ಲದಿದ್ದರೂ ್ಚಟ್ಞ್ಞಛ್ಚಿಿಠಿ ಆಗಿರಬೇಕು. ಖಾಸಗಿಯವರಿಗೆ ಇದು ಸಾಧ್ಯವಾಗುವುದಾದರೆ, ಸರಕಾರದಲ್ಲಿರುವವರಿಗೆ ಯಾಕೆ ಸಾಧ್ಯವಾಗಬಾರದು?

* ಖಾಸಗಿ ರಂಗದಲ್ಲಿ ಅರ್ಹತೆ, ಶ್ರಮವೇ ಕೆಲಸದಲ್ಲಿ ಮುಂದುವರೆಯುವುದಕ್ಕೆೆ ಅಳತೆಗೋಲು. ಈ ನಿಯಮ ಸರಕಾರಿ ಸಿಬ್ಬಂದಿಗೂ ಅನ್ವಯವಾಗುವಂತಾಗಬೇಕು. ಆಫೀಸು ಸಮಯ ಮುಗಿದ ನಂತರವೂ ಸರಕಾರ ಸಕ್ರಿಿಯವಾಗಿರಬೇಕು. ಸರಕಾರಿ ಕಚೇರಿಯಲ್ಲಿ ಇಂಟರ್ನೆಟ್ ಸಂಪರ್ಕ, ವೈಫೈ ಕಡ್ಡಾಾಯವಾಗಬೇಕು. ಇದರಿಂದ ಸರಕಾರ ಕ್ಷಿಪ್ರ ಗತಿಯಲ್ಲಿ ಕೆಲಸ ಮಾಡಲು ಅನುಕೂಲವಾಗುತ್ತದೆ.

* ಒಂದು ದೇಶ ಶೀಘ್ರ ಪ್ರಗತಿ ಹೊಂದಿದೆಯೆಂದರೆ, ಅಲ್ಲಿನ ಸರಕಾರ, ಆಡಳಿತ ಯಂತ್ರ ಕ್ರಿಿಯಾಶೀಲವಾಗಿದೆ ಎಂದರ್ಥ. ನಮ್ಮ ದೇಶ ವಿಶ್ವದಲ್ಲಿ ನಂಬರ್ ಒನ್ ಸ್ಥಾಾನವನ್ನು ಹೊಂದಬೇಕೆಂದು ನಾವೆಲ್ಲ ಬಯಸುವುದಾದರೆ, ಈ ಹೊಸ ಬದಲಾವಣೆಗೆ ನಮ್ಮನ್ನು ಒಡ್ಡಿಿಕೊಳ್ಳಬೇಕು. ದೇಶ ಮುಂದುವರಿದರೆ, ಪ್ರಗತಿಯಾದರೆ ಅದರ ಲಾಭ ನಮಗೇ ದಕ್ಕುತ್ತದೆ.

ಈ ಸ್ಪರ್ಧಾತ್ಮಕ ಜಗತ್ತಿಿನಲ್ಲಿ ಎಲ್ಲ ದೇಶಗಳಿಗೂ ಸಮ ಅವಕಾಶಗಳಿವೆ. ಯಾರು ಬೇಕಾದರೂ ನಂಬರ್ ಒನ್ ಸ್ಥಾಾನಕ್ಕೆೆ ಬರಬಹುದು. ನಮಗಿರುವ ಅವಕಾಶವನ್ನು ಬೇರೆಯವರಿಗೆ ಬಿಟ್ಟುಕೊಡುವುದು ಮೂರ್ಖತನ. ಮಕ್ತೌೌಮ್ ಭಾಷಣ ಕೇಳಿದ ನಂತರ, ಇಂಥದ್ದೊಂದು ಮಾತನ್ನು ನಮ್ಮ ಪ್ರಧಾನಿ, ಮುಖ್ಯಮಂತ್ರಿಿಯವರು ಸರಕಾರಿ ಸಿಬ್ಬಂದಿಯನ್ನು ಕುಳ್ಳಿಿರಿಸಿಕೊಂಡು ಹೇಳಬಾರದಿತ್ತಾಾ ಎಂದೆನಿಸಿತು.