Wednesday, 11th December 2024

ಭೂಕಂಪಕ್ಕೆ ನಾವೆಷ್ಟು ತಯಾರಾಗಿದ್ದೇವೆ ?

ಸಂಗತ

ವಿಜಯ್‌ ದರಡಾ

ಟರ್ಕಿಯಲ್ಲಿ ಸಂಭವಿಸಿದ ಭೂಕಂಪ ಭಯಾನಕವಾದದ್ದು. ರೆಕ್ಟರ್ ಮಾಪಕದಲ್ಲಿ ೭.೮ ಪ್ರಮಾಣದ ನಡುಕದೊಂದಿಗೆ ಸಹಸ್ರಾರು ಕಟ್ಟಡಗಳು
ಧರಾಶಾಯಿಯಾಗಿ ಬಿದ್ದ ದೃಶ್ಯಗಳು ಹೃದಯವಿದ್ರಾವಕವಾಗಿವೆ. ಇಂತಹ ಅನಿರೀಕ್ಷಿತ ನೈಸರ್ಗಿಕ ವಿಕೋಪ ಗಳನ್ನು ತಡೆದುಕೊಳ್ಳುವಲ್ಲಿ ನಾವೆಷ್ಟರ ಮಟ್ಟಿಗೆ ಸಿದ್ಧರಾಗಿದ್ದೇವೆ ಎಂಬುದು ಈಗ ಉದ್ಭವವಾಗುತ್ತಿರುವ ಪ್ರಶ್ನೆ. ಭಾರತದ ೫೯% ಭೂಭಾಗ ಕೂಡ ಭೂಕಂಪಕ್ಕೆ ಒಳಗಾಗುವ ಸಾಧ್ಯತೆ ಇರುವ
ಪ್ರದೇಶ ಎಂಬುದು ಸಂಶೋಧನೆಗಳಿಅದ ರುಜುವಾತಾಗಿದೆ.

ಭಾರತಕ್ಕೂ ಕೂಡ ಭೂಕಂಪದ ಅಪಾಯ ಇದ್ದೇ ಇದೆ. ಗಮನಿಸಿ, ಟರ್ಕಿಯಲ್ಲಿ ಒಂದು ಚದರ ಕಿಲೋಮೀಟರಿಗೆ ಇರುವ ಜನಸಂಖ್ಯೆ ೧೧೦ ಮಾತ್ರ. ಆದರೆ ಭಾರತದ ವಿಚಾರಕ್ಕೆ ಬರುವುದಾದರೆ ಅದು ೪೩೦. ಮುಂಬೈ ನಗರದದರೆ ಒಂದು ಚದರ ಕಿಲೋಮೀಟರಿನಲ್ಲಿ ೨೫ ಸಾವಿರ ಜನ ವಾಸವಿದ್ದಾರೆ. ಒಂದೊಮ್ಮೆ ರೆಕ್ಟರ್ ಮಾಪಕದಲ್ಲಿ ೮ರ ಪ್ರಮಾಣದ ಭೂಕಂಪವೇನಾದರೂ ಇಲ್ಲಿ ಸಂಭವಿಸಿದರೆ ಪರಿಸ್ಥಿತಿ ಏನಾದೀತು? ಊಹಿಸುವುದು ಕೂಡ ಸಾಧ್ಯ ವಿಲ್ಲ. ಮಹಾರಾಷ್ಟದ ಲಾತೂರ್, ಗುಜರಾತಿನ ಭುಜ್ ಮತ್ತು ಜಬಲ್ಪುರಗಳಲ್ಲಿ ಸಂಭವಿಸಿದ ಭೂಕಂಪನದ ಪರಿಣಾಮಗಳನ್ನು ನಾನು ಖುದ್ದು ಕಂಡಿದ್ದೇನೆ. ನಾನು ಮತ್ತು ನನ್ನ ಸೋದರ ರಾಜೇಂದ್ರ, ಆ ಸಂದರ್ಭದಲ್ಲಿ ಲೋಕಮತ್ ತಂಡದೊಂದಿಗೆ ಬಾಧಿತ ಪ್ರದೇಶಕ್ಕೆ ತೆರಳಿ ನಮ್ಮ ಕೈಲಾದ ಸಹಾಯ ಮಾಡಿ ಬಂದಿದ್ದೆವು.

ಇಂತಿಂಥ ಪ್ರದೇಶದಲ್ಲಿ ಭೂಕಂಪನ ಸಂಭವಿಸಬಹುದು ಎಂದು ಗುರುತಿಸಲ್ಪಟ್ಟಲ್ಲಿ ಮಾತ್ರ ಭೂಕಂಪವಾಗುತ್ತದೆ ಎಂಬುದನ್ನು ಮುಂದಾಗಿ ಹೇಳುವುದು ಸಾಧ್ಯವಿಲ್ಲದ ಮಾತು. ಅಂಕಿಅಂಶಗಳ ಪ್ರಕಾರ ಕಳೆದ ೧೫ ವರ್ಷಗಳಲ್ಲಿ, ನಮ್ಮ ದೇಶದಲ್ಲಿ ಕನಿಷ್ಠ ೧೦ ಕಡೆಗಳಲ್ಲಿ ಭೂಕಂಪವನ್ನು ಎದುರಿಸಿದೆ ಮತ್ತು ಸಹಸ್ರಾರು ಮಂದಿ ಜೀವ ಕಳೆದು ಕೊಂಡಿದ್ದಾರೆ. ವಿಜ್ಞಾನಿಗಳ ಪ್ರಕಾರ ಹಿಮಾಲಯ ಪ್ರಾಂತ್ಯವು ಭೂಕಂಪದ ಕೇಂದ್ರಬಿಂದು ವಾಗಿದ್ದು, ಅಲ್ಲಿ ತೀವ್ರತರ ಪ್ರಮಾಣದ ಕಂಪನ ಯಾವಾಗ ಬೇಕಾದರೂ ಸಂಭವಿಸಬಹುದು.

ಕಡಿಮೆ ಪ್ರಮಾಣದ ಭೂಕಂಪನಗಳು ನಮ್ಮ ದೇಶದಲ್ಲಿ ಆಗಿಂದಾಗ್ಯೆ ಸಂಭವಿಸುತ್ತಲೇ ಇರುತ್ತವೆ. ೧೮೯೭ರಲ್ಲಿ ೮.೭ ಪ್ರಮಾಣದ ಭೂಕಂಪ ಶಿಂಗ್‌ನಲ್ಲಿ
ಸಂಭವಿಸಿತ್ತು. ೧೯೦೫ರಲ್ಲಿ ಕಾಂಗ್ರಾದಲ್ಲಿ ೮ರ ಪ್ರಮಾಣದ ಭೂಕಂಪವಾಗಿದ್ದರೆ, ೧೯೩೪ ರಲ್ಲಿ ಬಿಹಾರದಲ್ಲಿ ೮.೩ ಪ್ರಮಾಣದ ಭೂಕಂಪನ ಮತ್ತು ೧೯೫೦ರಲ್ಲಿ ಅಸ್ಸಾಮಿನಲ್ಲಿ ೮.೬ ಪ್ರಮಾಣದ ಭೂಕಂಪ ಆಗಿತ್ತು. ವಿeನಿಗಳು ಹೇಳುವ ಪ್ರಕಾರ ಭಯಾನಕವಾದ ಭೂಕಂಪ ಹಿಮಾಲಯನ್
ಪ್ರಾಂತ್ಯ ದಲ್ಲಿ ಯಾವಾಗ ಬೇಕಾದರೂ ಸಂಭವಿಸಬಹುದು.

ಈಗಾಗಲೇ ನಾವು ಭೂಕಂಪನದ ಪರಿಣಾಮಗಳನ್ನು ದೇಶದ ಹಲವೆಡೆಗಳಲ್ಲಿ ಕಂಡಿದ್ದೇವೆ. ೧೯೯೩ರಲ್ಲಿ ಸಂಭವಿಸಿದ ಲಾತೂರ್ ಭೂಕಂಪ ವಿಜ್ಞಾನಿ ಗಳ ಊಹೆಗೂ ಮೀರಿದ ಸಂಗತಿಯಾಗಿದ್ದು. ಆಗ ೨೦೦೦೦ ಜನರು ಸಾವಿಗೀಡಾದರು. ಗುಜರಾತಿನ ಭುಜ್‌ನಲ್ಲಿ ೭.೭ ಪರಿಪ್ರಮಾಣದ ಭೂಕಂಪನ ೨೦೦೧ರಲ್ಲಿ ಸಂಭವಿಸಿತ್ತು, ನಂತರ ಕಾಶ್ಮೀರದಲ್ಲಿ ೭.೬ ಪರಿಪ್ರಮಾಣದ ಭೂಕಂಪನ ೨೦೦೫ರಲ್ಲಿ ಸಂಭವಿಸಿತ್ತು. ತದನಂತರದಲ್ಲಿ ಗುಜರಾತ್, ಮಹಾರಾಷ್ಟ, ಉತ್ತರಾಖಂಡ ಮತ್ತು ಈಶಾನ್ಯ ರಾಜ್ಯಗಳಲ್ಲಿ ಆಗಿಂದಾಗ್ಯೆ ಭೂಮಿ ನಡುಗುತ್ತಲೇ ಇದೆ.

ಒಂದೊಮ್ಮೆ ಭಾರೀ ಪ್ರಮಾಣದ ಭೂಕಂಪನ ದೆಹಲಿ, ಮುಂಬಯಿ, ಚೆನ್ನೈ, ಕೋಲ್ಕತಾದಂತಹ ಮಹಾನಗರಗಳಲ್ಲಿ ಸಂಭವಿಸಿದರೆ ಪರಿಸ್ಥಿತಿ ಏನಾದೀತು ಎಂಬುದನ್ನು ಊಹಿಸಿ. ಈ ಎಲ್ಲ ನಗರಗಳಲ್ಲಿ ಜನಸಾಂದ್ರತೆ ದೊಡ್ಡ ಪ್ರಮಾಣದಲ್ಲಿದೆ. ಬಹುಮಹಡಿ ಕಟ್ಟಡಗಳು ಜನವಸತಿಗೆ ಹೆಚ್ಚು ಸೂಕ್ತ
ಎಂಬುದು ಹೌದೇ ಆದರೂ ಈ ಕಟ್ಟಡಗಳೆಲ್ಲವೂ ಭೂಕಂಪನ ತಡೆಯುವ ಕ್ಷಮತೆ ಹೊಂದಿವೆಯೇ? ಎಂಬುದು ಇಲ್ಲಿರುವ ಪ್ರಶ್ನೆ. ಜಪಾನಿನಲ್ಲಿ ಪ್ರತಿ ಮನೆಯೂ ಭೂಕಂಪ ತಡೆದುಕೊಳ್ಳುವ ಕ್ಷಮತೆ ಇರುವಂತೆ ನಿರ್ಮಿತವಾಗಬೇಕೆಂಬುದು ಅಲ್ಲಿನ ಸರಕಾರದ ನಿಯಮ. ಸಿದ್ಧತೆಯೊಂದಿಗೆ ಎಲ್ಲವನ್ನೂ ತಡೆದುಕೊಳ್ಳುವ ಕ್ಷಮತೆಯೂ ಅವರಿಗಿದೆ.

೨೦೧೧ರಲ್ಲಿ ಭೂಕಂಪಕ್ಕಿಂತಲೂ ಭೀಕರವಾದ ತ್ಸುನಾಮಿ ಎದುರಾದಾಗ ಮಾತ್ರ ಅವರು ತತ್ತರಿಸಿದ್ದರು. ಸಾಮಾನ್ಯವಾಗಿ ಭೂಕಂಪನದಿಂದ ಜಪಾನಿ ನಲ್ಲಿ ಅಷ್ಟೊಂದು ಹಾನಿ ಸಂಭವಿಸುವುದಿಲ್ಲ. ಜಪಾನ್ ಮಾತ್ರವಲ್ಲ ಗಗನಚುಂಬಿ ಕಟ್ಟಡಗಳನ್ನು ಹೊಂದಿರುವ ಅಮೆರಿಕ, ದುಬೈ ಮತ್ತು ಐರೋಪ್ಯ ರಾಷ್ಟಗಳಲ್ಲಿಯೂ ಅಪಾಯವಾಗುವುದು ಕಡಿಮೆ. ಕಟ್ಟಡ ನಿರ್ಮಾಣದಲ್ಲಿ ಅಂತಹ ತಂತ್ರಜ್ಞಾನವನ್ನು ಅವರು ಅಳವಡಿಸಿಕೊಂಡಿದ್ದಾರೆ
ಮತ್ತು ಭೂಕಂಪನದ ತೀವ್ರತೆಯನ್ನೂ ಎದುರಿಸುವುದು ಅವರಿಗೆ ಸಾಧ್ಯವಾಗಿದೆ.

ಭೂಕಂಪಶಾಸ್ತದ ರಾಷ್ಟ್ರೀಯ ಕೇಂದ್ರದ ಅಧಿಕಾರಿಗಳ ಪ್ರಕಾರ ನಮ್ಮ ದೇಶದ ನಗರಗಳಲ್ಲಿ ನಿರ್ಮಿತವಾದ ಬಹುಮಹಡಿ ಕಟ್ಟಡಗಳು ರೆಕ್ಟರ್ ಮಾಪಕದ ೭ಕ್ಕಿಂತ ಹೆಚ್ಚಿನ ತೀವ್ರತೆಯ ಭೂಕಂಪವನ್ನು ತಡೆದುಕೊಳ್ಳುವ ಕ್ಷಮತೆ ಹೊಂದಿಲ್ಲ. ನಮ್ಮ ದೇಶದಲ್ಲಿ ಆ ಕುರಿತಾದ ಕಟ್ಟುನಿಟ್ಟಿನ ನಿಯಮಗಳು ನಿರ್ಮಾಣ ಕ್ಷೇತ್ರದಲ್ಲಿ ಇಲ್ಲ. ನಮ್ಮ ದೇಶದಲ್ಲಿ ನಿರ್ಮಾಣ ಹಂತದ ಕಟ್ಟಡಗಳು ಕುಸಿದುಬೀಳುತ್ತವೆ, ಸೇತುವೆಗಳು ಕುಸಿಯುತ್ತವೆ. ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಯಾವುದೇ ಕಾನೂನೂ ನಮ್ಮಲ್ಲಿಲ್ಲ. ಪೌರಾಡಳಿತ ಸಂಸ್ಥೆಯ ಅಧಿಕಾರಿಗಳು, ಪ್ರತಿಮನೆಯ ನಿರ್ಮಾಣ ಹಂತದಲ್ಲಿ ಆಗಿಂದಾಗ್ಯೆ ಹೋಗಿ ಪರಿಶೀಲನೆ ಮಾಡುವ ಮತ್ತು ಕಟ್ಟಡ ನಿರ್ಮಾಣ ಸದೃಢವಾಗಿ ಆಗುತ್ತಿದೆಯೇ ಇಲ್ಲವೇ ಎಂಬುದನ್ನು ಪರಾಮರ್ಶೆ ಮಾಡುವ ಉಪಕ್ರಮವನ್ನು ಜಾರಿಗೆ ತರಬೇಕು.

ಭೂಕಂಪನಕ್ಕೆ ಒಳಗಾಗುವ ಭೀತಿ ಇರುವ ಪ್ರದೇಶಗಳಲ್ಲಿ ಬಹುಮಹಡಿ ಕಟ್ಟಡಗಳನ್ನು ನಿಯಮಬಾಹಿರವಾಗಿ, ಸೂಕ್ತ ಎಚ್ಚರಿಕಾ ಕ್ರಮ ಪಾಲಿಸದೇ ನಿರ್ಮಿಸಲು ಅವಕಾಶ ಕೊಡುವುದಾದರೂ ಹೇಗೆ? ಭೂಕಂಪ ತಡೆಯಬಲ್ಲ ಕಟ್ಟಡ ನಿರ್ಮಿಸಲು ೧೦-೧೫% ಖರ್ಚು ಜಾಸ್ತಿ ಬೀಳಬಹುದು. ಭೂಕಂಪಗಳನ್ನು ತಡೆಯುವ ಶಕ್ತಿ ಮಾನವನಿಗಿಲ್ಲ, ಆದರೆ ಪ್ರಯತ್ನಪೂರ್ವಕವಾಗಿ ಅದನ್ನು ನಾವು ಅಳವಡಿಸಿಕೊಳ್ಳಬಹುದಲ್ಲ. ದೇಶಾದ್ಯಂತ ಕಟ್ಟಡ ನಿರ್ಮಾಣದ ಭದ್ರತೆಯ ಕುರಿತಾಗಿ ಕಟ್ಟುನಿಟ್ಟಿನ ನಿಯಮಾವಳಿ ಜಾರಿಗೆ ಬರಬೇಕು. ನಗರಗಳಲ್ಲಿನ ಕಟ್ಟಡಗಳು ಭೂಕಂಪ ತಡೆಯುವ ಕ್ಷಮತೆ ಹೊಂದಿವೆ ಎಂಬುದನ್ನಾದರೂ ಖಾತ್ರಿ ಪಡಿಸಿಕೊಳ್ಳಬೇಕು. ಭೂಕಂಪಗಳ ಕುರಿತಾಗಿ ಜನರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವುದು ಕೂಡ ಅಗತ್ಯವಿದೆ.

ನಮ್ಮಲ್ಲಿ ರಾಷ್ಟಿಥಯ ವಿಪತ್ತು ನಿರ್ವಹಣಾ ಪಡೆ ಇದೆ. ಅದನ್ನು ಇನ್ನಷ್ಟು ಬಬಲಪಡಿಸಬೇಕಿದೆ. ಯುವಕರನ್ನು ಎನ್‌ಡಿಆರ್‌ಎಫ್ಗೆ ಸೇರಿಸಿ ನೈಸರ್ಗಿಕ
ವಿಕೋಪಗಳ ಸಂದರ್ಭದಲ್ಲಿ ಹೇಗೆ ಮುನ್ನೆಚ್ಚರಿಕೆ ವಹಿಸ ಬೇಕಿದೆ ಎಂಬುದಕ್ಕೆ ಸಜ್ಜುಮಾಡಬೇಕು. ಶಾಲಾ ಪಠ್ಯಕ್ರಮದಲ್ಲೂ ಭೂಕಂಪದ ಕುರಿತಾದ ವಿವರಗಳನ್ನು ಅಳವಡಿಸುವ ಅಗತ್ಯವೂ ಇದೆ. ವಿಪತ್ತು ಎದುರಾದ ಸಂದರ್ಭದಲ್ಲಿ ಹೇಗೆ ಎದುರಿಸುವುದು ಎಂಬುದು ಇದರಿಂದ ವೇದ್ಯವಾಗುತ್ತದೆ.
ಜತೆಗೆ ನಮ್ಮ ವೈದ್ಯಕೀಯ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸುವುದು ತುಂಬಾ ಅಗತ್ಯವಿದೆ. ನಾವು ದೃಢಮನಸ್ಕರಾಗಿದ್ದರೆ ಯಾವುದೂ ಕಷ್ಟವಲ್ಲ. ಇಲ್ಲಿ ನಾನು ಒಡಿಶಾದ ಮುಖ್ಯಮಂತ್ರಿ ನವೀನ ಪಟ್ನಾಯಕರ ಹೆಸರನ್ನು ಉಖಿಸಬಯಸುತ್ತೇನೆ.

ಚಂಡಮಾರುತ ಸಂಭವಿಸಿದ ನಂತರ ಅದನ್ನು ಹೇಗೆ ಎದುರಿಸುವುದು ಎಂಬುದರ ಕುರಿತಾಗಿ ಅವರು ಸಾಕಷ್ಟು ಸಿದ್ಧತೆಗಳನ್ನು ಮಾಡುವಲ್ಲಿ
ಸಫಲರಾಗಿದ್ದಾರೆ. ಇಂತಹದೇ ಪ್ರಯೋಗ ದೇಶವ್ಯಾಪಿ ಆಗಬೇಕಿದೆ. ನಾವು ಪ್ರಕೃತಿ ಹಾಳುಗೆಡಹುವುದನ್ನು ಮೊದಲು ನಿಲ್ಲಿಸಬೇಕು. ಪ್ರಕೃತಿಯ ಬಗ್ಗೆ ನಮಗೆ ಪ್ರೀತಿ ಇಲ್ಲವೆಂದಾದರೆ ನಾವೆಲ್ಲ ಹರಪ್ಪ ಮೊಹೆಂಜೆದಾರೋ ರೀತಿಯಲ್ಲಿ ಇತಿಹಾಸದ ಪುಟಗಳಡಿ ಹೂತುಹೋಗುತ್ತೇವೆ. ಉತ್ತರಾಖಂಡದಲ್ಲಿ ಮೇಘಸೋಟದಿಂದ ಹಾನಿ ಸಂಭವಿಸಿದಾಗ ಸಂಸದೀಯ ಸಮಿತಿ ರಚನೆಯಾಗಿತ್ತು. ಅದು ವಿಜ್ಞಾನಿಗಳನ್ನು ಮತ್ತು ವಿಪತ್ತು ನಿರ್ವಹಣಾ ತಜ್ಞರನ್ನು
ಕರೆಸಿಕೊಂಡಿತ್ತು. ಆ ಸಂಸದೀಯ ತಂಡದಲ್ಲಿ ನಾನೂ ಒಬ್ಬನಾಗಿದ್ದೆ.

ವಿಜ್ಞಾನಿಗಳು ಹೇಳುವ ಪ್ರಕಾರ ನಡವಳಿಕೆಗಳು ನಡೆಯಲೇ ಇಲ್ಲ. ಸರಕಾರ ಅದನ್ನೆಲ್ಲ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ವಿeನಿಗಳು ಕೊಡುವ ಎಚ್ಚರಿಕೆಗಳನ್ನು ನಾವು ಮೊದಲಾಗಿ ಗಮನಿಸಬೇಕು.

ಮುಗಿಸುವ ಮುನ್ನ: ಟರ್ಕಿಯಲ್ಲಿ ಭೂಕಂಪನ ಘಟಿಸಿದ ನಂತರದಲ್ಲಿ ಭಾರತದ ಪ್ರಧಾನಿ ನರೇಂದ್ರಮೋದಿಯವರ ನೇತೃತ್ವದಲ್ಲಿ ಸಹಾಯಹಸ್ತವನ್ನು ಚಾಚಿ ಸಾಕಷ್ಟು ಪರಿಹಾರಗಳನ್ನು ಒದಗಿಸಲಾಗಿದೆ. ಪ್ರಧಾನಿಯವರ ಈ ಉಪಕ್ರಮ ಶ್ಲಾಘನೆಗೆ ಯೋಗ್ಯ. ನೇಪಾಳದಲ್ಲಿ ಇಂತಹದೇ ವಿಪತ್ತು ಘಟಿಸಿದಾಗಲೂ ಭಾರತ ಸಹಕಾರ ಕೊಟ್ಟಿತ್ತು. ಅದು ಭಾರತದ ಸಂಸ್ಕೃತಿ, ಮಾನವೀಯತೆ ನಮ್ಮ ನೆಲದ ಬಹುಮುಖ್ಯ ಗುಣ.